ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಭಾಗ 3

“ನಾನು ನಿಮ್ಮನ್ನ . . . ಒಟ್ಟುಸೇರಿಸ್ತಿನಿ”—ಶುದ್ಧ ಆರಾಧನೆಯ ಪುನಃಸ್ಥಾಪನೆ ಬಗ್ಗೆ ಕೊಟ್ಟ ಮಾತು

“ನಾನು ನಿಮ್ಮನ್ನ . . . ಒಟ್ಟುಸೇರಿಸ್ತಿನಿ”—ಶುದ್ಧ ಆರಾಧನೆಯ ಪುನಃಸ್ಥಾಪನೆ ಬಗ್ಗೆ ಕೊಟ್ಟ ಮಾತು

ಯೆಹೆಜ್ಕೇಲ 20:41

ಮುಖ್ಯ ವಿಷಯ: ಯೆಹೆಜ್ಕೇಲನ ಭವಿಷ್ಯವಾಣಿಗಳಲ್ಲಿರೋ ಪುನಃಸ್ಥಾಪನೆಯ ಮಾತುಗಳು

ಇಸ್ರಾಯೇಲ್‌ ಚೆಲ್ಲಾಪಿಲ್ಲಿಯಾಗಿತ್ತು. ಧರ್ಮಭ್ರಷ್ಟತೆಯಿಂದಾಗಿ ಅಲ್ಲಿನ ಐಕ್ಯತೆ ಹಾಳಾಗಿತ್ತು. ‘ಮಾಡಿದ್ದುಣ್ಣೋ ಮಾರಾಯ’ ಅನ್ನೋ ಹಾಗೆ ಆ ದೇಶ ತನ್ನ ತಪ್ಪಿನ ಪರಿಣಾಮಗಳನ್ನ ಅನುಭವಿಸಿತ್ತು. ಯಾಕಂದ್ರೆ ಅಲ್ಲಿನ ಜನರು ಶುದ್ಧ ಆರಾಧನೆಯನ್ನ ಅಶುದ್ಧ ಮಾಡಿದ್ರು ಮತ್ತು ದೇವರ ಹೆಸರಿಗೆ ಮಸಿಬಳಿದಿದ್ರು. ಅವ್ರು ಹೀಗೆಲ್ಲಾ ಮಾಡಿದ್ರೂ ಯೆಹೋವನು ನಿರೀಕ್ಷೆ ತುಂಬುವ ಅನೇಕ ಭವಿಷ್ಯವಾಣಿಗಳನ್ನ ತಿಳಿಸುವಂತೆ ಯೆಹೆಜ್ಕೇಲನನ್ನ ಪ್ರೇರಿಸಿದನು. ಮನಮುಟ್ಟುವ ಅಲಂಕಾರಗಳ, ಆಶ್ಚರ್ಯಗೊಳಿಸುವ ದರ್ಶನಗಳ ಮೂಲಕ ಯೆಹೋವನು ಕೈದಿಗಳಾಗಿದ್ದ ಇಸ್ರಾಯೇಲ್ಯರಿಗೆ ಉತ್ತೇಜನ ಕೊಟ್ಟನು. ಇವು ಈಗಿನ ಕಾಲದಲ್ಲೂ ಯಾರು ಶುದ್ಧ ಆರಾಧನೆ ಪುನಃಸ್ಥಾಪನೆ ಆಗಬೇಕು ಅಂತ ಕಾಯುತ್ತಿದ್ದಾರೋ ಅವ್ರಿಗೂ ಪ್ರೋತ್ಸಾಹ ಕೊಡುತ್ತವೆ.

ಈ ಭಾಗದಲ್ಲಿ

ಅಧ್ಯಾಯ 8

“ನಾನು ಒಬ್ಬ ಕುರುಬನನ್ನ ನೇಮಿಸ್ತೀನಿ”

ದೇವರು ಮೆಸ್ಸೀಯನ ಬಗ್ಗೆ ಭವಿಷ್ಯವಾಣಿಯನ್ನ ಬರೆಯೋಕೆ ಯೆಹೆಜ್ಕೇಲನನ್ನ ಪ್ರೇರಿಸಿದನು. ಈ ಮೆಸ್ಸೀಯನು ಶುದ್ಧ ಆರಾಧನೆಯನ್ನ ಶಾಶ್ವತವಾಗಿ ಪುನಃಸ್ಥಾಪಿಸೋ ರಾಜ ಮತ್ತು ದೇವಜನರ ಕುರುಬನಾಗಿರುತ್ತಾನೆ.

ಅಧ್ಯಾಯ 9

“ನಾನು ಅವ್ರಿಗೆ ಒಂದೇ ಮನಸ್ಸನ್ನ ಕೊಡ್ತೀನಿ”

ನಂಬಿಗಸ್ತ ಯೆಹೂದಿ ಕೈದಿಗಳಿಗೆ ಕೊಡಲಾದ ಭವಿಷ್ಯವಾಣಿಗಳು ನಮ್ಮ ಕಾಲದಲ್ಲಿ ಹೇಗೆ ನೆರವೇರಿದವು?

ಅಧ್ಯಾಯ 10

“ನಿಮಗೆ ಜೀವ ಬರುತ್ತೆ”

ಕಣಿವೆ ತುಂಬ ಇರೋ ಒಣಗಿದ ಮೂಳೆಗಳು ಜೀವಂತವಾಗುವ ದರ್ಶನವನ್ನ ಯೆಹೆಜ್ಕೇಲ ನೋಡ್ತಾನೆ. ಇದರ ಅರ್ಥವೇನು?

ಅಧ್ಯಾಯ 11

“ನಾನು ನಿನ್ನನ್ನ . . . ಕಾವಲುಗಾರನಾಗಿ ಇಟ್ಟಿದ್ದೀನಿ”

ಈ ಕಾವಲುಗಾರನ ಪಾತ್ರ ಮತ್ತು ಜವಾಬ್ದಾರಿಗಳೇನು? ಅವನು ಯಾವ ಎಚ್ಚರಿಕೆಯ ಸಂದೇಶವನ್ನ ಸಾರಬೇಕಿತ್ತು?

ಅಧ್ಯಾಯ 12

“ನಾನು ಅವ್ರನ್ನ ಒಂದೇ ಜನಾಂಗವಾಗಿ ಮಾಡ್ತೀನಿ”

ತನ್ನ ಜನರನ್ನ ಒಟ್ಟುಗೂಡಿಸ್ತೇನೆ ಅಂತ ಯೆಹೋವನು ಮಾತು ಕೊಟ್ಟಿದ್ದಾನೆ.

ಅಧ್ಯಾಯ 13

‘ಆಲಯದ ಬಗ್ಗೆ ವರ್ಣಿಸು’

ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ ದೇವಾಲಯದ ಅರ್ಥವೇನಾಗಿತ್ತು?

ಅಧ್ಯಾಯ 14

“ಇದೇ ಆಲಯದ ನಿಯಮ”

ಯೆಹೆಜ್ಕೇಲನ ದೇವಾಲಯದ ದರ್ಶನದಿಂದ ಯೆಹೂದ್ಯ ಕೈದಿಗಳು ಯಾವ ಪಾಠಗಳನ್ನ ಕಲಿತ್ರು? ಈ ದರ್ಶನದಿಂದ ಶುದ್ಧ ಆರಾಧನೆಯ ಬಗ್ಗೆ ನಾವೇನು ಕಲಿಬಹುದು?