ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಚೌಕ  15ಎ

ವೇಶ್ಯೆಯರಾದ ಅಕ್ಕ-ತಂಗಿ

ವೇಶ್ಯೆಯರಾದ ಅಕ್ಕ-ತಂಗಿ

ಯೆಹೆಜ್ಕೇಲ 23 ನೇ ಅಧ್ಯಾಯದಲ್ಲಿ ಯೆಹೋವ ದೇವ್ರು ಅಪನಂಬಿಗಸ್ತರಾದ ಜನ್ರನ್ನ ಕಠಿಣವಾಗಿ ಖಂಡಿಸಿರೋದನ್ನ ನೋಡ್ತೇವೆ. ಈ ಅಧ್ಯಾಯಕ್ಕೂ 16 ನೇ ಅಧ್ಯಾಯಕ್ಕೂ ತುಂಬಾ ಹೋಲಿಕೆಗಳಿವೆ. ಎರಡೂ ಅಧ್ಯಾಯಗಳಲ್ಲಿ ದೇವಜನ್ರನ್ನ ವೇಶ್ಯೆಗೆ ಹೋಲಿಸಲಾಗಿದೆ. ಸಮಾರ್ಯವನ್ನ ಯೆರೂಸಲೇಮಿನ ಅಕ್ಕ ಅಂತ ಕರೆಯಲಾಗಿದೆ. ತಂಗಿ ಹೇಗೆ ಅಕ್ಕನ ದಾರಿ ಹಿಡಿದಳು ಮತ್ತು ಅವಳು ಅಕ್ಕನಿಗಿಂತ ಅನೈತಿಕವಾಗಿ ಕೆಟ್ಟ ಕೃತ್ಯಗಳನ್ನ ಮಾಡಿದಳು ಅಂತ ಈ ಎರಡೂ ಅಧ್ಯಾಯಗಳಲ್ಲಿ ವಿವರಿಸಲಾಗಿದೆ. 23 ನೇ ಅಧ್ಯಾಯದಲ್ಲಿ ಆ ಇಬ್ಬರು ಅಕ್ಕ ತಂಗಿಯರಿಗೆ ಯೆಹೋವನು ಹೆಸ್ರನ್ನ ಕೊಟ್ಟಿದ್ದಾನೆ. ಸಮಾರ್ಯದ ಹೆಸರು ಒಹೊಲ, ಯೆರೂಸಲೇಮಿನ ಹೆಸರು ಒಹೊಲೀಬ. ಸಮಾರ್ಯ ಇಸ್ರಾಯೇಲಿನ ಹತ್ತು ಕುಲಗಳ ರಾಜಧಾನಿಯಾಗಿತ್ತು. ಯೆರೂಸಲೇಮ್‌ ಯೆಹೂದದ ರಾಜಧಾನಿಯಾಗಿತ್ತು. *ಯೆಹೆ. 23:1-4.

ಈ ಎರಡು ಅಧ್ಯಾಯಗಳಲ್ಲಿ ಇನ್ನೂ ಕೆಲವು ಹೋಲಿಕೆಗಳಿವೆ. ಮುಖ್ಯವಾದದ್ದು ಯಾವುದಂದ್ರೆ ಆ ವೇಶ್ಯೆಯರು ಮೊದಲು ಯೆಹೋವನ ಹೆಂಡತಿಯರಾಗಿದ್ದರು. ಆಮೇಲೆ ಅವ್ರು ಯೆಹೋವನಿಗೆ ದ್ರೋಹ ಮಾಡಿದ್ರು. ಆದ್ರೆ ಆ ಅಧ್ಯಾಯಗಳಲ್ಲಿ ನಿರೀಕ್ಷೆ ಬಗ್ಗೆನೂ ಯೆಹೋವನು ಮಾತು ಕೊಟ್ಟಿದ್ದಾನೆ. ಅಧ್ಯಾಯ 23 ರಲ್ಲಿ ತನ್ನ ಜನ್ರನ್ನ ಬಿಡಿಸೋದ್ರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದ್ರೆ ಯೆಹೋವನು, “ನೀನು . . . ಶುರುಮಾಡಿದ ಅಶ್ಲೀಲ ನಡತೆಗೆ ಮತ್ತು ನಿನ್ನ ವೇಶ್ಯಾವಾಟಿಕೆಗೆ ನಾನು ಒಂದು ಅಂತ್ಯ ಹಾಡ್ತೀನಿ” ಅಂತ ಹೇಳಿದ್ದಾನೆ. ಈ ರೀತಿಯ ಮಾತುಗಳನ್ನೇ ಅಧ್ಯಾಯ 16 ರಲ್ಲೂ ನೋಡಬಹುದು.—ಯೆಹೆ. 16:16, 20, 21, 37, 38, 41, 42; 23:4, 11, 22, 23, 27, 37.

ಇವ್ರು ಸುಳ್ಳು ಕ್ರೈಸ್ತ ಪಂಗಡಗಳನ್ನ ಸೂಚಿಸ್ತಾರಾ?

ಹಿಂದೆ ನಮ್ಮ ಸಾಹಿತ್ಯಗಳಲ್ಲಿ ಒಹೊಲ ಮತ್ತು ಒಹೊಲೀಬ ಕ್ರೈಸ್ತ ಧರ್ಮದ ಎರಡು ಪಂಗಡಗಳಾದ ಕ್ಯಾಥೊಲಿಕ್‌ ಮತ್ತು ಪ್ರೊಟೆಸ್ಟೆಂಟ್‌ರನ್ನ ಸೂಚಿಸ್ತಾರೆ ಅಂತ ತಿಳಿಸಲಾಗಿತ್ತು. ಆದ್ರೆ ಈ ವಿಷ್ಯದ ಬಗ್ಗೆ ಪ್ರಾರ್ಥನೆ ಮತ್ತು ಸಂಶೋಧನೆ ಮಾಡಿದಾಗ ಕೆಲವು ಪ್ರಶ್ನೆಗಳು ಎದ್ದವು. ಈ ಪಂಗಡಗಳವ್ರು ಯಾವತ್ತಾದ್ರೂ ಯೆಹೋವನ ಹೆಂಡತಿ ಸ್ಥಾನದಲ್ಲಿ ಇದ್ರಾ? ಆತನು ಯಾವತ್ತಾದ್ರೂ ಅವ್ರ ಜೊತೆ ಒಪ್ಪಂದ ಮಾಡ್ಕೊಂಡಿದ್ದನಾ? ಖಂಡಿತ ಇಲ್ಲ. ದೇವರ ಇಸ್ರಾಯೇಲ್ಯರ ಜೊತೆ ಯೇಸು ಕ್ರಿಸ್ತನು “ಹೊಸ ಒಪ್ಪಂದ” ಮಾಡ್ಕೊಳ್ಳುವಾಗ ಇವ್ರಿನ್ನೂ ಅಸ್ತಿತ್ವಕ್ಕೆ ಬಂದಿರಲಿಲ್ಲ. ಅಷ್ಟೇ ಅಲ್ಲ, ಇವರು ಯಾವತ್ತೂ ದೇವರ ಇಸ್ರಾಯೇಲ್‌ ಅಥವಾ ಅಭಿಷಿಕ್ತ ಕ್ರೈಸ್ತರ ಭಾಗವಾಗಿರಲಿಲ್ಲ. (ಯೆರೆ. 31:31; ಲೂಕ 22:20) ಇವ್ರು, ಅಪೊಸ್ತಲರು ಸತ್ತು ಸ್ವಲ್ಪ ಸಮಯದ ನಂತ್ರ ಅಂದ್ರೆ ಕ್ರಿ.ಶ. 4 ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ್ರು. ಇವ್ರು ಧರ್ಮಭ್ರಷ್ಟ ಪಂಗಡಗಳವ್ರು ಆಗಿದ್ದಾರೆ. ಅದಕ್ಕೆ ಯೇಸು ಹೇಳಿದ ಗೋದಿ ಮತ್ತು ಕಳೆಗಳ ಉದಾಹರಣೆಯಲ್ಲಿ ಇವ್ರು “ಕಳೆಗಳನ್ನ” ಅಂದ್ರೆ ನಕಲಿ ಕ್ರೈಸ್ತರನ್ನ ಸೂಚಿಸ್ತಾರೆ.—ಮತ್ತಾ. 13:24-30.

ಇನ್ನೊಂದು ಕಾರಣ ನೋಡೋಣ: ಧರ್ಮಭ್ರಷ್ಟರಾದ ಯೆರೂಸಲೇಮನ್ನ ಮತ್ತು ಸಮಾರ್ಯವನ್ನ ಪುನಃಸ್ಥಾಪಿಸ್ತೇನೆ ಅಂತ ಯೆಹೋವ ದೇವರು ಆಶ್ವಾಸನೆಯನ್ನು ಕೊಟ್ಟನು. (ಯೆಹೆ. 16:41, 42, 53-55) ಆದ್ರೆ ಸುಳ್ಳು ಕ್ರೈಸ್ತ ಧರ್ಮಕ್ಕೆ ಈ ತರ ಆಶ್ವಾಸನೆಯನ್ನು ಬೈಬಲ್‌ ಕೊಟ್ಟಿದ್ಯಾ? ಇಲ್ಲ. ಮಹಾ ಬಾಬೆಲಿನ ಭಾಗ ಆಗಿರೋ ಎಲ್ಲಾ ಸುಳ್ಳು ಧರ್ಮಗಳ ತರನೇ ಸುಳ್ಳು ಕ್ರೈಸ್ತ ಧರ್ಮಕ್ಕೂ ನಾಶನನೇ ಕಾದಿರೋದು.

ಹಾಗಾಗಿ ಒಹೊಲ ಮತ್ತು ಒಹೊಲೀಬ ಸುಳ್ಳು ಕ್ರೈಸ್ತ ಧರ್ಮವನ್ನ ಸೂಚಿಸ್ತಾ ಇಲ್ಲ ಅಂತ ಗೊತ್ತಾಗುತ್ತೆ. ಆದ್ರೆ ಈ ಅಕ್ಕ-ತಂಗಿಯರಿಂದ ಇನ್ನೊಂದು ಮುಖ್ಯ ಪಾಠವನ್ನ ಕಲಿಬಹುದು. ಏನಂದ್ರೆ ಯಾರು ಯೆಹೋವನ ಸೇವಕರು ಅಂತ ಹೇಳಿಕೊಂಡು ಆತನ ಹೆಸ್ರಿಗೆ ಮಸಿ ಬಳಿಯೋ ಕೆಲ್ಸಗಳನ್ನ ಮಾಡ್ತಾರೋ ಅಂಥವ್ರನ್ನ ಯೆಹೋವನು ತುಂಬಾ ದ್ವೇಷಿಸ್ತಾನೆ. ಈ ವಿಷ್ಯದಲ್ಲಿ ಸುಳ್ಳು ಕ್ರೈಸ್ತ ಧರ್ಮದವ್ರು ದೊಡ್ಡ ತಪ್ಪನ್ನೇ ಮಾಡಿದ್ದಾರೆ. ‘ಬೈಬಲಿನಲ್ಲಿ ತಿಳಿಸಲಾಗಿರೋ ದೇವರ ಸೇವಕರು ನಾವೇ’ ಅಂತ ಅವ್ರು ಹೇಳಿಕೊಳ್ತಾರೆ. ಆದ್ರೆ ಆತನ ಮಟ್ಟಗಳಿಗೆ ವಿರುದ್ಧವಾಗಿ ನಡ್ಕೊಳ್ತಾರೆ. ಅವ್ರು ಯೇಸುವನ್ನ ತಮ್ಮ ನಾಯಕ ಅಂತಾರೆ. ಆದ್ರೆ ಆತನ ಬೋಧನೆ ಪ್ರಕಾರ ನಡ್ಕೊಳ್ಳಲ್ಲ. ಅವ್ರು ಯೇಸುವನ್ನ ತ್ರಯೈಕ್ಯ ದೇವರಲ್ಲಿ ಒಬ್ಬರು ಅಂತನೂ ಹೇಳ್ತಾರೆ. ‘ನೀವು ಲೋಕದ ಜನ್ರ ತರ ಇರಬಾರದು’ ಅಂತ ಯೇಸು ಹೇಳಿರೋ ಮಾತಿನ ವಿರುದ್ಧವಾಗಿನೇ ನಡ್ಕೊತಾರೆ. (ಯೋಹಾ. 15:19) ಅವಳು ಅಂದ್ರೆ ಸುಳ್ಳು ಕ್ರೈಸ್ತ ಧರ್ಮ ನೂರಾರು ವರ್ಷಗಳಿಂದ ವಿಗ್ರಹಾರಾಧನೆ ಮಾಡ್ತಾ ರಾಜಕೀಯ ವಿಷಯಗಳಲ್ಲಿ ತಲೆ ಹಾಕ್ತಿರೋದ್ರಿಂದ ‘ಪ್ರಸಿದ್ಧ ವೇಶ್ಯೆಯ’ ಮುಖ್ಯ ಭಾಗವಾಗಿದ್ದಾಳೆ ಅಂತ ತೋರಿಸಿಕೊಟ್ಟಿದ್ದಾಳೆ. (ಪ್ರಕ. 17:1) ಎಲ್ಲಾ ಸುಳ್ಳು ಧರ್ಮಗಳು ನಾಶವಾಗುವಾಗ ಇವಳೂ ಅವ್ರ ಜೊತೆ ನಾಶ ಆಗ್ತಾಳೆ ಅನ್ನೋದ್ರಲ್ಲಿ ಯಾವುದೇ ಸಂಶಯ ಇಲ್ಲ.

^ ಪ್ಯಾರ. 3 ಈ ಎರಡು ಹೆಸರುಗಳಿಗೆ ವಿಶೇಷ ಅರ್ಥ ಇದೆ. ಒಹೊಲ ಅಂದ್ರೆ “[ಆರಾಧನೆಗಾಗಿರೋ] ಅವಳ ಡೇರೆ” ಅಂತರ್ಥ. ಇಸ್ರಾಯೇಲ್ಯರು ಯೆರೂಸಲೇಮಿನಲ್ಲಿರೋ ಯೆಹೋವನ ಆಲಯಕ್ಕೆ ಹೋಗಿ ಆರಾಧನೆ ಮಾಡೋ ಬದ್ಲಿಗೆ ತಮ್ಮಲ್ಲೇ ಆರಾಧನೆಗಾಗಿ ಸ್ಥಳವನ್ನ ಮಾಡ್ಕೊಂಡಿದ್ರು, ಕಟ್ಟಡವನ್ನು ಕಟ್ಕೊಂಡಿದ್ರು. ಅದಕ್ಕೇ ಅವ್ರಿಗೆ ಈ ಹೆಸ್ರು ಬಂದಿರಬಹುದು. ಒಹೊಲೀಬ ಅಂದ್ರೆ “[ಆರಾಧನೆಗಾಗಿರೋ] ನನ್ನ ಡೇರೆ ಅವಳಲ್ಲಿದೆ” ಅಂತರ್ಥ. ಯೆಹೋವನ ಆರಾಧನೆಗಾಗಿರೋ ಆಲಯ ಯೆರೂಸಲೇಮಿನಲ್ಲೇ ಇದ್ದಿದ್ರಿಂದ ಈ ಹೆಸ್ರು ಬಂದಿರಬಹುದು.