ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಚೌಕ  19ಎ

ಯೆಹೋವನಿಂದ ಹರಿಯುವ ಆಶೀರ್ವಾದಗಳ ನದಿಗಳು

ಯೆಹೋವನಿಂದ ಹರಿಯುವ ಆಶೀರ್ವಾದಗಳ ನದಿಗಳು

ಬೈಬಲಿನ ಬೇರೆಬೇರೆ ವಚನಗಳಲ್ಲಿ “ನದಿ” ಮತ್ತು “ನೀರು” ಯೆಹೋವನಿಂದ ಬರೋ ಆಶೀರ್ವಾದಗಳನ್ನ ಸೂಚಿಸ್ತವೆ. ಒಟ್ಟಾರೆ ಹೇಳೋದಾದ್ರೆ ಯೆಹೋವ ದೇವರು ನಮ್ಮನ್ನ ಹೇಗೆ ಆಶೀರ್ವದಿಸ್ತಾನೆ ಅನ್ನೋದನ್ನ ಇವು ತಿಳಿಸುತ್ತವೆ. ಅಂಥ ವಚನಗಳ ಬಗ್ಗೆ ಈಗ ನೊಡೋಣ.

ಯೋವೇಲ 3:18 ಈ ಭವಿಷ್ಯವಾಣಿಯಲ್ಲಿ ಯೆಹೋವನ ಆಲಯದಿಂದ ಒಂದು ಬುಗ್ಗೆ ಹರಿದುಬಂದು ‘ಅಕೇಶಿಯ ಮರಗಳಿರೋ ಒಣಗಿಹೋದ ಒಂದು ಕಣಿವೆಗೆ’ ನೀರು ಕೊಡೋದ್ರ ಬಗ್ಗೆ ಇದೆ. ಯೋವೇಲ ಮತ್ತು ಯೆಹೆಜ್ಕೇಲ ಇಬ್ರೂ ಒಂದು ನದಿ ಬರಡಾಗಿರುವ ಜಾಗಕ್ಕೆ ಜೀವ ತುಂಬಿಸೋದನ್ನ ನೋಡಿದ್ರು. ಈ ಎರಡು ಭವಿಷ್ಯವಾಣಿಗಳಲ್ಲೂ ನದಿ ಹುಟ್ಟಿರೋದು ದೇವಾಲಯದಿಂದ.

ಜೆಕರ್ಯ 14:8 ಪ್ರವಾದಿ ಜೆಕರ್ಯನು ಯೆರೂಸಲೇಮ್‌ ಪಟ್ಟಣದಿಂದ “ಜೀವಜಲ” ಹರಿಯೋದನ್ನ ನೋಡಿದನು. ಅದ್ರಲ್ಲಿ ಅರ್ಧ ನೀರು ಪೂರ್ವದ ಸಮುದ್ರಕ್ಕೆ ಅಂದ್ರೆ, ಮೃತಸಮುದ್ರಕ್ಕೆ ಮತ್ತು ಇನ್ನರ್ಧ ನೀರು ಪಶ್ಚಿಮದ ಸಮುದ್ರಕ್ಕೆ ಅಂದ್ರೆ ಮೆಡಿಟರೇನಿಯನ್‌ ಸಮುದ್ರಕ್ಕೆ ಹರಿದು ಹೋಗ್ತಿತ್ತು. ಯೆರೂಸಲೇಮ್‌ “ಮಹಾರಾಜನ ಪಟ್ಟಣ” ಅಂದ್ರೆ ಯೆಹೋವನ ಪಟ್ಟಣವಾಗಿತ್ತು. (ಮತ್ತಾ. 5:35) ಜೆಕರ್ಯನು ಇಲ್ಲಿ ಆ ಪಟ್ಟಣದ ಬಗ್ಗೆ ತಿಳಿಸಿದ್ರಿಂದ, ಮುಂದೆ ಇಡೀ ಭೂಮಿಯ ಮೇಲೆ ಯೆಹೋವ ಆಳ್ವಿಕೆ ಇರುತ್ತೆ ಅನ್ನೋದನ್ನ ಇದು ನಮಗೆ ನೆನಪಿಸುತ್ತೆ. ಈ ಭವಿಷ್ಯವಾಣಿಯಲ್ಲಿ ತಿಳಿಸಲಾದ ನೀರುಗಳಿಂದ, ಪರದೈಸಿನಲ್ಲಿ ನಂಬಿಗಸ್ತರ ಎರಡು ಗುಂಪುಗಳನ್ನ ಯೆಹೋವನು ಆಶೀರ್ವದಿಸ್ತಾನೆ ಅಂತ ಗೊತ್ತಾಗುತ್ತೆ. ಆ ಗುಂಪುಗಳು ಯಾವುವು? ಒಂದು, ಮಹಾಸಂಕಟದಿಂದ ಪಾರಾಗಿ ಬರುವವ್ರು. ಎರಡು, ಆಮೇಲೆ ಮತ್ತೆ ಜೀವಂತವಾಗಿ ಎದ್ದು ಬರುವವ್ರು.

ಪ್ರಕಟನೆ 22:1, 2 ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ ಅದೇ ತರದ ನದಿಯನ್ನ ಅಪೊಸ್ತಲ ಯೋಹಾನನು ಕೂಡ ನೋಡಿದ. ಆದ್ರೆ ಯೋಹಾನನು ನೋಡಿದ ನದಿ ಯೆಹೋವನ ಆಲಯದಿಂದ ಅಲ್ಲ, ಆತನ ಸಿಂಹಾಸನದಿಂದ ಹರಿದು ಬರೋದನ್ನ ನೋಡಿದ. ಹಾಗಾಗಿ ಜೆಕರ್ಯನ ಭವಿಷ್ಯವಾಣಿಯ ಹಾಗೆಯೇ ಈ ದರ್ಶನ ಸಹ ಯೆಹೋವ ದೇವರು ಸಾವಿರ ವರ್ಷದ ಆಳ್ವಿಕೆಯಲ್ಲಿ ಸುರಿಸೋ ಆಶೀರ್ವಾದಗಳನ್ನ ಸೂಚಿಸುತ್ತೆ.

ಯೆಹೋವ ದೇವರ ಆಳ್ವಿಕೆಯಿಂದ ಬರೋ ಆಶೀರ್ವಾದಗಳಿಗೂ ಯೆಹೆಜ್ಕೇಲನ ದರ್ಶನದ ನದಿಯಿಂದ ಬರೋ ಆಶೀರ್ವಾದಗಳಿಗೂ ಸ್ವಲ್ಪನೇ ವ್ಯತ್ಯಾಸ ಇರೋದು. ಒಟ್ಟಿನಲ್ಲಿ ಈ ಎಲ್ಲಾ ಆಶೀರ್ವಾದಗಳು ಯೆಹೋವನಿಂದ ಹರಿದು ಬರುತ್ತವೆ. ಅವು ಆತನ ಎಲ್ಲ ನಂಬಿಗಸ್ತ ಸೇವಕರಿಗೆ ಸಿಗುತ್ತವೆ.

ಕೀರ್ತನೆ 46:4 ಈ ವಚನದಲ್ಲಿ ಎರಡು ವಿಷ್ಯಗಳ ಬಗ್ಗೆ ಅಂದ್ರೆ ಆರಾಧನೆ ಮತ್ತು ಆಳ್ವಿಕೆಯ ಬಗ್ಗೆ ತಿಳಿಸಿರೋದನ್ನ ಗಮನಿಸಿ. ಇಲ್ಲಿ ಒಂದು ನದಿ “ದೇವರ ಪಟ್ಟಣವನ್ನ” ಮತ್ತು “ಸರ್ವೋನ್ನತನ ಮಹಾ ಪವಿತ್ರ ಡೇರೆಯನ್ನ” ಖುಷಿಪಡಿಸುತ್ತೆ ಅಂತ ತಿಳಿಸಲಾಗಿದೆ. ದೇವರ ಪಟ್ಟಣ ಅಂದ್ರೆ ದೇವರ ಸರ್ಕಾರ ಅಥ್ವಾ ಆಳ್ವಿಕೆ. ಪವಿತ್ರ ಡೇರೆ ಅಂದ್ರೆ ಶುದ್ಧ ಆರಾಧನೆ.

ಒಟ್ಟಿನಲ್ಲಿ ಹೇಳೋದಾದ್ರೆ, ಈ ಬೈಬಲ್‌ ವಚನಗಳಿಂದ ಯೆಹೋವನು ತನ್ನ ಎಲ್ಲಾ ನಂಬಿಗಸ್ತ ಸೇವಕರನ್ನ ಎರಡು ರೀತಿಯಲ್ಲಿ ಆಶೀರ್ವದಿಸ್ತಾನೆ ಅಂತ ಗೊತ್ತಾಗುತ್ತೆ. ನಾವು, (1) ಯೆಹೋವ ದೇವರ ಆಳ್ವಿಕೆಯಿಂದ, (2) ಶುದ್ಧ ಆರಾಧನೆಗಾಗಿ ಆತನು ಮಾಡುವ ಏರ್ಪಾಡಿನಿಂದ ಶಾಶ್ವತ ಆಶೀರ್ವಾದಗಳನ್ನ ಪಡಕೊಳ್ಳುತ್ತೇವೆ. ಹಾಗಾಗಿ ನಾವು ಯೆಹೋವ ದೇವರಿಂದ ಮತ್ತು ಯೇಸು ಕ್ರಿಸ್ತನಿಂದ ‘ಜೀವ ಕೊಡೋ ನೀರನ್ನ’ ಪಡ್ಕೊಳ್ಳೋಣ. ಅಂದ್ರೆ ಶಾಶ್ವತ ಜೀವನಕ್ಕಾಗಿ ಅವ್ರು ಮಾಡಿದ ಎಲ್ಲ ಏರ್ಪಾಡುಗಳಿಂದ ಪ್ರಯೋಜನ ಪಡ್ಕೊಳ್ಳೋಣ.—ಯೆರೆ. 2:13; ಯೋಹಾ. 4:10.