ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಚೌಕ 7ಬಿ

ಯೆಹೆಜ್ಕೇಲ ಪುಸ್ತಕದಲ್ಲಿರೋ ಮುಖ್ಯ ಹೇಳಿಕೆಗಳು

ಯೆಹೆಜ್ಕೇಲ ಪುಸ್ತಕದಲ್ಲಿರೋ ಮುಖ್ಯ ಹೇಳಿಕೆಗಳು

“ಮನುಷ್ಯಕುಮಾರನೇ”

90ಕ್ಕಿಂತ ಹೆಚ್ಚು ಸಲ ಇದೆ

ಯೆಹೆಜ್ಕೇಲನನ್ನ “ಮನುಷ್ಯಕುಮಾರನೇ” ಅಂತ 90ಕ್ಕಿಂತ ಹೆಚ್ಚು ಸಲ ಕರೆಯಲಾಯ್ತು. (ಯೆಹೆ. 2:1) ಯೆಹೆಜ್ಕೇಲನಿಗೆ ಅದ್ಭುತ ಅವಕಾಶ ಸಿಕ್ಕಿದ್ರೂ ಅವನು ಸಾಮಾನ್ಯ ಮನುಷ್ಯ ಅನ್ನೋದನ್ನ ಅದು ನೆನಪಿಸ್ತಿತ್ತು. ಸುವಾರ್ತಾ ಪುಸ್ತಕಗಳಲ್ಲಿ ಯೇಸು ಕ್ರಿಸ್ತನನ್ನ ಸುಮಾರು 80 ಸಲ “ಮನುಷ್ಯಕುಮಾರ” ಅಂತ ಕರೆಯಲಾಗಿದೆ. ಈ ಪದ, ಅವನು ಸಂಪೂರ್ಣವಾಗಿ ಮನುಷ್ಯನಾಗಿದ್ದನು, ಮನುಷ್ಯನ ರೂಪ ಧರಿಸಿರೋ ದೇವದೂತನಾಗಿರಲಿಲ್ಲ ಅಂತ ತೋರಿಸಿಕೊಡ್ತಿತ್ತು.—ಮತ್ತಾ. 8:20.

 ‘ಆಗ ನಾನೇ ಯೆಹೋವ ಅಂತ ಗೊತ್ತಾಗುತ್ತೆ’

50ಕ್ಕಿಂತ ಹೆಚ್ಚು ಸಲ ಇದೆ

‘ಆಗ ನಾನೇ ಯೆಹೋವ ಅಂತ ಗೊತ್ತಾಗುತ್ತೆ’ ಅನ್ನೋ ದೇವರ ಮಾತನ್ನ ಯೆಹೆಜ್ಕೇಲನು 50ಕ್ಕಿಂತ ಹೆಚ್ಚು ಸಲ ಬರೆದಿದ್ದಾನೆ. ಶುದ್ಧ ಆರಾಧನೆ ಪಡೆಯೋಕೆ ಯೆಹೋವ ಮಾತ್ರ ಅರ್ಹ ಅನ್ನೋದನ್ನ ಇದು ಸೂಚಿಸುತ್ತೆ.—ಯೆಹೆ. 6:7.

“ವಿಶ್ವದ ರಾಜ ಯೆಹೋವ”

217 ಸಲ ಇದೆ

“ವಿಶ್ವದ ರಾಜ ಯೆಹೋವ” ಅನ್ನೋ ಮಾತು 217 ಸಾರಿ ಕಂಡುಬರುತ್ತೆ. ಹೀಗೆ ಯೆಹೋವ ದೇವರ ಹೆಸರಿಗೆ ತುಂಬ ಪ್ರಾಮುಖ್ಯತೆ ಕೊಡಲಾಗಿದೆ. ಎಲ್ಲಾ ಸೃಷ್ಟಿಗಳು ಯೆಹೋವ ದೇವರ ಅಧೀನದಲ್ಲಿವೆ ಅಂತ ಇದು ತೋರಿಸಿಕೊಡುತ್ತೆ.—ಯೆಹೆ. 2:4.