ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಚೌಕ 9ಡಿ

ಬಂಧಿವಾಸ ಮತ್ತು ಪುನಃಸ್ಥಾಪನೆ ಬಗ್ಗೆ ಇರೋ ಭವಿಷ್ಯವಾಣಿಗಳು

ಬಂಧಿವಾಸ ಮತ್ತು ಪುನಃಸ್ಥಾಪನೆ ಬಗ್ಗೆ ಇರೋ ಭವಿಷ್ಯವಾಣಿಗಳು

ಯೆಹೂದ್ಯರು ಬಾಬೆಲಿಗೆ ಬಂಧಿವಾಸಿಗಳಾಗಿ ಹೋಗೋದ್ರ ಬಗ್ಗೆ ಇದ್ದ ಅನೇಕ ಭವಿಷ್ಯವಾಣಿಗಳಿಗೆ ಮಹತ್ತಾದ ರೀತಿಯ ಎರಡನೇ ನೆರವೇರಿಕೆ ಇತ್ತು. ಅದು ಕ್ರೈಸ್ತ ಸಭೆ ಮಹಾ ಬಾಬೆಲಿನ ಬಂಧನಕ್ಕೆ ಹೋದಾಗ ನೆರವೇರಿತು. ಇಂಥ ಕೆಲವು ಭವಿಷ್ಯವಾಣಿಗಳ ಉದಾಹರಣೆಗಳನ್ನ ನೋಡಿ.

1. ಎಚ್ಚರಿಕೆ

2. ಬಂಧಿವಾಸ

3. ಪುನಃಸ್ಥಾಪನೆ

ಮೊದಲ ನೆರವೇರಿಕೆ

ಕ್ರಿ.ಪೂ. 607ಕ್ಕೂ ಮುಂಚೆ—ಯೆಶಾಯ, ಯೆರೆಮೀಯ, ಮತ್ತು ಯೆಹೆಜ್ಕೇಲ ಯೆಹೋವನ ಜನರನ್ನ ಎಚ್ಚರಿಸಿದ್ರೂ ಧರ್ಮಭ್ರಷ್ಟತೆ ರಾರಾಜಿಸಿತು

ಕ್ರಿ.ಪೂ. 607—ಯೆರೂಸಲೇಮ್‌ ನಾಶ ಆಯ್ತು. ದೇವಜನರನ್ನ ಬಾಬೆಲಿಗೆ ಕೈದಿಗಳಾಗಿ ಕರಕೊಂಡು ಹೋಗಲಾಯ್ತು

ಕ್ರಿ.ಪೂ. 537 ರಿಂದ—ನಂಬಿಗಸ್ತ ದೇವಜನರು ಯೆರೂಸಲೇಮಿಗೆ ಬಂದು ದೇವಾಲಯವನ್ನ ಕಟ್ಟಿದ್ರು ಮತ್ತು ಶುದ್ಧ ಆರಾಧನೆಯನ್ನ ಪುನಃ ಶುರು ಮಾಡಿದ್ರು

ಮಹತ್ತಾದ ನೆರವೇರಿಕೆ

ಕ್ರಿ.ಶ. ಒಂದನೇ ಶತಮಾನ—ಯೇಸು, ಪೌಲ ಮತ್ತು ಯೋಹಾನ ಸಭೆಗಳನ್ನ ಎಚ್ಚರಿಸಿದ್ರೂ ಧರ್ಮಭ್ರಷ್ಟತೆ ರಾರಾಜಿಸಿತು

ಕ್ರಿ.ಶ. ಎರಡನೇ ಶತಮಾನದಿಂದ—ನಿಜ ಕ್ರೈಸ್ತರು ಮಹಾ ಬಾಬೆಲಿನ ಕೈದಿಗಳಾದ್ರು

ಕ್ರಿ.ಶ. 1919 ರಿಂದ—ಯೇಸುವಿನ ಆಳ್ವಿಕೆಯಡಿ ನಂಬಿಗಸ್ತ ಅಭಿಷಿಕ್ತರು ಮಹಾ ಬಾಬೆಲಿನ ಬಂಧಿವಾಸದಿಂದ ಬಿಡುಗಡೆಯಾದ್ರು ಮತ್ತು ಶುದ್ಧ ಆರಾಧನೆಯನ್ನು ಪುನಃಸ್ಥಾಪಿಸಿದ್ರು