ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಚೌಕ 10ಸಿ

ನಮ್ಮ ಕಾಲ ಮೇಲೆ ನಿಂತುಕೊಳ್ಳಲು ಸಹಾಯ

ನಮ್ಮ ಕಾಲ ಮೇಲೆ ನಿಂತುಕೊಳ್ಳಲು ಸಹಾಯ

ಯೆಹೆಜ್ಕೇಲ 37:1-14 ರಲ್ಲಿರೋ ದರ್ಶನದ ಬಗ್ಗೆ ಧ್ಯಾನಿಸೋದ್ರಿಂದ ನಮ್ಮ ನಂಬಿಕೆ ಇನ್ನೂ ಬಲ ಆಗುತ್ತೆ. ಇದ್ರಿಂದ ಕಲಿಯೋ ಪಾಠವನ್ನ ನಾವು ಜೀವ್ನದಲ್ಲಿ ಅನ್ವಯಿಸಿಕೊಳ್ಳಬಹುದು. ಅದು ಯಾವ ಪಾಠ?

ನಮ್ಮ ಜೀವನದಲ್ಲಿ ಬರೋ ಒತ್ತಡ, ಸಮಸ್ಯೆಗಳಿಂದಾಗಿ ಕೆಲವು ಸಲ ನಮ್ಗೆ, ‘ಇನ್ಮುಂದೆ ನನ್ನ ಕೈಲಿ ಆಗಲ್ಲ’ ಅಂತ ಅನಿಸಬಹುದು. ಅಂಥ ಸಮಯದಲ್ಲಿ ಪುನಃಸ್ಥಾಪನೆಯ ಬಗ್ಗೆ ಯೆಹೆಜ್ಕೇಲ ನೋಡಿದ ದರ್ಶನದ ಬಗ್ಗೆ ಧ್ಯಾನಿಸೋದಾದ್ರೆ ನಮ್ಗೆ ಬಲ ಸಿಗುತ್ತೆ. ಹೇಗೆ? ಸತ್ತ ಮೂಳೆಗಳಿಗೆ ಜೀವ ಕೊಡೋ ಶಕ್ತಿ ಇರೋ ದೇವರಿಗೆ ನಮ್ಮ ಅಡ್ಡಿತಡೆಗಳನ್ನ ಜಯಿಸೋಕೆ ಬೇಕಾದ ಶಕ್ತಿಯನ್ನ ಕೊಡೋಕಾಗಲ್ವಾ? ಯಾರಿಂದನೂ ಸರಿ ಮಾಡೋಕಾಗಲ್ಲ ಅನ್ನೋ ಕಷ್ಟಗಳನ್ನ ಕೂಡ ಎದುರಿಸೋಕೆ ಬೇಕಾದ ಶಕ್ತಿಯನ್ನ ಯೆಹೋವ ದೇವ್ರು ನಮ್ಗೆ ಖಂಡಿತ ಕೊಡ್ತಾನೆ.—ಕೀರ್ತನೆ 18:29 ಓದಿ; ಫಿಲಿ. 4:13.

ಯೆಹೋವನಿಗೆ ಶಕ್ತಿ ಇರೋದಷ್ಟೇ ಅಲ್ಲ, ತನ್ನ ಜನ್ರಿಗೋಸ್ಕರ ಆ ಶಕ್ತಿಯನ್ನ ಉಪಯೋಗಿಸಬೇಕು ಅಂತ ಇಷ್ಟನೂ ಇದೆ. ಯೆಹೆಜ್ಕೇಲನಿಗಿಂತ ನೂರಾರು ವರ್ಷಗಳ ಹಿಂದೆ ಪ್ರವಾದಿ ಮೋಶೆ ಯೆಹೋವನ ಬಗ್ಗೆ ಏನು ಹೇಳಿದ್ನು ಅಂತ ಸ್ವಲ್ಪ ನೆನಪು ಮಾಡ್ಕೊಳ್ಳಿ. “ದೇವರು ಆಗಿನ ಕಾಲದಿಂದಾನೂ ನಿನ್ನ ಆಶ್ರಯ ಆಗಿದ್ದಾನೆ, ಆತನ ಕೈಗಳು ಯಾವಾಗ್ಲೂ ನಿನಗೆ ಆಧಾರವಾಗಿ ಇರುತ್ತೆ” ಅಂತ ಮೋಶೆ ಬರೆದನು. (ಧರ್ಮೋ. 33:27) ಕಷ್ಟದ ಸಮಯದಲ್ಲಿ ನಾವು ದೇವರನ್ನ ಆಶ್ರಯಿಸೋದಾದ್ರೆ ಆತನ ಕೈಗಳು ನಮಗೆ ಆಧಾರವಾಗಿರುತ್ತೆ. ಆತನು ನಿಧಾನವಾಗಿ ನಮ್ಮನ್ನ ಎತ್ತಿ ನಮ್ಮ ಕಾಲುಗಳ ಮೇಲೆ ನಿಂತುಕೊಳ್ಳೋಕೆ ಸಹಾಯ ಮಾಡ್ತಾನೆ.—ಯೆಹೆ. 37:10.