ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಚೌಕ 19ಬಿ

ಒಂದು ತೊರೆ ಪ್ರವಾಹ ಆಗುತ್ತೆ!

ಒಂದು ತೊರೆ ಪ್ರವಾಹ ಆಗುತ್ತೆ!

ಯೆಹೋವನ ಪವಿತ್ರ ಸ್ಥಳದಿಂದ ನೀರು ಹೊರಟು ಸ್ವಲ್ಪ ದೂರದಲ್ಲೇ ಒಂದು ದೊಡ್ಡ ಪ್ರವಾಹ ಆಗುವ ಅದ್ಭುತ ದೃಶ್ಯವನ್ನ ಯೆಹೆಜ್ಕೇಲ ನೋಡಿದ. ಆ ನದಿಯ ಎರಡು ದಡಗಳಲ್ಲಿ ಮರಗಳು ಬೆಳೆಯುತ್ತಾ ಇದ್ವು. ಆ ಮರಗಳು ಹಣ್ಣುಗಳನ್ನ ಕೊಡ್ತಾ ಇದ್ವು, ವಾಸಿಮಾಡೋಕೆ ಸಹಾಯ ಮಾಡುವ ಎಲೆಗಳನ್ನ ಕೊಡ್ತಾ ಇದ್ವು. ಇದರ ಅರ್ಥ ಏನು?

ನದಿ ಆಶೀರ್ವಾದಗಳನ್ನ ಕೊಡುತ್ತೆ

ಹಿಂದಿನ ಕಾಲದಲ್ಲಿ: ಕೈದಿಗಳಾಗಿದ್ದ ಯೆಹೂದ್ಯರು ತಮ್ಮ ದೇಶಕ್ಕೆ ವಾಪಸ್‌ ಬಂದಾಗ ದೇವಾಲಯದಲ್ಲಿ ಶುದ್ಧ ಆರಾಧನೆಯನ್ನ ಪುನಃಸ್ಥಾಪಿಸೋದ್ರಲ್ಲಿ ಕೈ ಜೋಡಿಸಿದರು. ಆಗ ಅವ್ರಿಗೆ ಆಶೀರ್ವಾದಗಳು ಹರಿದು ಬಂದವು.

ಈಗಿನ ಕಾಲದಲ್ಲಿ: 1919 ರಲ್ಲಿ ಶುದ್ಧ ಆರಾಧನೆ ಪುನಃಸ್ಥಾಪಿಸಲಾಯಿತು. ಇದ್ರಿಂದಾಗಿ ಅಂದಿನಿಂದ ಯೆಹೋವ ದೇವರ ನಂಬಿಗಸ್ತ ಸೇವಕರಿಗೆ ಆಧ್ಯಾತ್ಮಿಕ ಆಶೀರ್ವಾದಗಳು ಹೇರಳವಾಗಿ ಹರಿದು ಬರುತ್ತಿವೆ.

ಭವಿಷ್ಯದಲ್ಲಿ: ಹರ್ಮಗೆದ್ದೋನಿನ ನಂತರ ಯೆಹೋವನು ನಮ್ಮನ್ನ ಅನೇಕ ರೀತಿಯಲ್ಲಿ ಆಶೀರ್ವದಿಸ್ತಾನೆ. ಉದಾಹರಣೆಗೆ, ಆತನು ನಮ್ಮನ್ನ ಪರಿಪೂರ್ಣರಾಗೋ ತರ ಮಾಡ್ತಾನೆ ಮತ್ತು ನಮಗೆ ಹೊಸ ಸತ್ಯಗಳನ್ನ ಕಲಿಸ್ತಾನೆ.

ಜೀವಜಲ

ಹಿಂದಿನ ಕಾಲದಲ್ಲಿ: ತನ್ನ ವಿಧೇಯ ಆರಾಧಕರಿಗೆ ಯೆಹೋವನು ಹೇರಳವಾದ ಆಶೀರ್ವಾದಗಳನ್ನ ಕೊಟ್ಟನು. ಅವರ ಸಂಖ್ಯೆ ಹೆಚ್ಚಾದಾಗ ಆಧ್ಯಾತ್ಮಿಕ ಆಹಾರ ಅಂದ್ರೆ, ದೇವರ ಮಾರ್ಗದರ್ಶನ ಕಡಿಮೆಯಾಗಲಿಲ್ಲ, ಇನ್ನೂ ಹೆಚ್ಚಾಯಿತು.

ಈಗಿನ ಕಾಲದಲ್ಲಿ: ಇವತ್ತು ತುಂಬ ಜನ್ರು ಸತ್ಯವನ್ನ ಕಲೀತಾ ಇದ್ದಾರೆ. ಪರದೈಸಿನಂಥ ವಾತಾವರಣದಲ್ಲಿ ಯೆಹೋವನ ಸೇವೆ ಮಾಡಲಿಕ್ಕಾಗಿ ನಮ್ಮ ಜೊತೆ ಸೇರಿಬರ್ತಿದ್ದಾರೆ. ಹೀಗೆ ಅವರು ಹೊಸ ಜೀವನವನ್ನೇ ಪಡೀತಿದ್ದಾರೆ.

ಭವಿಷ್ಯದಲ್ಲಿ: ಹರ್ಮಗೆದ್ದೋನ್‌ ಪಾರಾದವರು ಪರದೈಸಿನಲ್ಲಿ ಮತ್ತೆ ಜೀವ ಪಡ್ಕೊಂಡ ಕೋಟ್ಯಾಂತರ ಜನರ ಜೊತೆ ಸೇರುತ್ತಾರೆ. ಯೆಹೋವನು ಇವರೆಲ್ಲರನ್ನ ಹೇರಳವಾಗಿ ಆಶೀರ್ವದಿಸ್ತಾನೆ.

ಆಹಾರ ಮತ್ತು ಔಷಧಿ ಒದಗಿಸೋ ಮರಗಳು

ಹಿಂದಿನ ಕಾಲದಲ್ಲಿ: ಪುನಃಸ್ಥಾಪಿಸಲಾದ ದೇಶದಲ್ಲಿ ಯೆಹೋವನು ತನ್ನ ಜನರಿಗೆ ತನ್ನ ಬಗ್ಗೆ ಅಮೂಲ್ಯ ಸತ್ಯಗಳನ್ನ ಕಲಿಸಿದನು. ಹೀಗೆ ಜನರು ಆತನಿಗೆ ಇಷ್ಟವಾಗೋ ರೀತಿಯಲ್ಲಿ ಆರಾಧಿಸೋಕೆ ಸಾಧ್ಯವಾಯ್ತು. ಸುಳ್ಳು ಆಚಾರ ವಿಚಾರಗಳಿಂದ ದೂರ ಇರೋಕೂ ಯೆಹೋವನು ಅವರಿಗೆ ಸಹಾಯ ಮಾಡಿದನು.

ಈಗಿನ ಕಾಲದಲ್ಲಿ: ನಮ್ಮ ಕಾಲದಲ್ಲಿ, ಲೋಕ ಆಧ್ಯಾತ್ಮಿಕವಾಗಿ ಕಾಯಿಲೆಯಲ್ಲಿದೆ ಮತ್ತು ಬರಗಾಲದಲ್ಲಿದೆ. ಆದ್ರೆ ಯೆಹೋವನ ಜನರು ಆಧ್ಯಾತ್ಮಿಕವಾಗಿ ತುಂಬ ಆಹಾರ ಪಡಿತಿದ್ದಾರೆ ಮತ್ತು ಅವರು ಆಧ್ಯಾತ್ಮಿಕವಾಗಿ ವಾಸಿಯಾಗ್ತಾ ಇದ್ದಾರೆ.

ಭವಿಷ್ಯದಲ್ಲಿ: ದೇವರ ಮಾತನ್ನ ಕೇಳುವ ವಿಧೇಯ ಮನುಷ್ಯರು ಪರಿಪೂರ್ಣರಾಗಲು ಮತ್ತು ಒಳ್ಳೇ ಆರೋಗ್ಯ ಪಡ್ಕೊಳ್ಳಲು, ಶಾಶ್ವತವಾಗಿ ಜೀವಿಸಲು ಯೇಸು ಕ್ರಿಸ್ತ ಮತ್ತು ಆತನ 1,44,000 ರಾಜರು ಸಹಾಯ ಮಾಡ್ತಾರೆ.