ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಚೌಕ  16ಎ

ಅಪನಂಬಿಗಸ್ತ ಯೆರೂಸಲೇಮ್‌ ಸುಳ್ಳು ಕ್ರೈಸ್ತ ಧರ್ಮಗಳನ್ನ ಸೂಚಿಸುತ್ತಾ?

ಅಪನಂಬಿಗಸ್ತ ಯೆರೂಸಲೇಮ್‌ ಸುಳ್ಳು ಕ್ರೈಸ್ತ ಧರ್ಮಗಳನ್ನ ಸೂಚಿಸುತ್ತಾ?

ಹಿಂದೆ ನಮ್ಮ ಸಾಹಿತ್ಯಗಳಲ್ಲಿ ಧರ್ಮಭ್ರಷ್ಟ ಯೆರೂಸಲೇಮ್‌ ಎಲ್ಲಾ ಸುಳ್ಳು ಕ್ರೈಸ್ತ ಧರ್ಮಗಳನ್ನ ಸೂಚಿಸುತ್ತೆ ಅಂತ ಹೇಳಿದ್ವಿ. ಇವತ್ತಿರೋ ಸುಳ್ಳು ಧರ್ಮಗಳಲ್ಲೂ ಹಿಂದಿನ ಕಾಲದ ಯೆರೂಸಲೇಮಿನಂತೆ ವಿಗ್ರಹಾರಾಧನೆ ಮತ್ತು ಭ್ರಷ್ಟಾಚಾರ ತುಂಬಿ ತುಳುಕ್ತಿದೆ ಅನ್ನೋದು ನಿಜನೇ. ಆದ್ರೆ ಧರ್ಮಭ್ರಷ್ಟ ಯೆರೂಸಲೇಮ್‌ ಸುಳ್ಳು ಕ್ರೈಸ್ತ ಧರ್ಮಗಳನ್ನ ಸೂಚಿಸುತ್ತೆ ಅನ್ನೋದಕ್ಕೆ ಬೈಬಲಿನಲ್ಲಿ ಯಾವುದಾದ್ರೂ ಆಧಾರಗಳಿವೆಯಾ? ಇಲ್ಲ. ಇತ್ತೀಚಿಗೆ ನಾವು, ಯಾವುದೇ ಭವಿಷ್ಯವಾಣಿಗಳಿಗೆ ಸೂಚಕ ಮತ್ತು ಸೂಚಕ ರೂಪ ಇದೆ ಅನ್ನೋದಕ್ಕೆ ಬೈಬಲಿನಲ್ಲಿ ಸ್ಪಷ್ಟ ಆಧಾರ ಇಲ್ಲದಿದ್ರೆ ಅದ್ರ ಬಗ್ಗೆ ಹೇಳೋಕೆ ಹೋಗಲ್ಲ. ಇದನ್ನೇ ನಮ್ಮ ಇತ್ತೀಚಿನ ಪ್ರಕಾಶನಗಳಲ್ಲಿ ಮತ್ತು ಈ ಪುಸ್ತಕದಲ್ಲೂ ನೋಡಬಹುದು.

ಗಮನಿಸಿ: ಒಂದು ಕಾಲದಲ್ಲಿ ಯೆರೂಸಲೇಮ್‌ ಶುದ್ಧ ಆರಾಧನೆಯ ಕೇಂದ್ರವಾಗಿತ್ತು. ನಂತ್ರ ಆ ಪಟ್ಟಣದಲ್ಲಿದ್ದವ್ರು ಧರ್ಮಭ್ರಷ್ಟರಾದ್ರು. ಆದ್ರೆ ಸುಳ್ಳು ಕ್ರೈಸ್ತ ಧರ್ಮಗಳು ಯಾವತ್ತೂ ಶುದ್ಧ ಆರಾಧನೆ ಮಾಡಿಲ್ಲ. ಅದು ಆರಂಭ ಆದಾಗಿಂದ ಅಂದ್ರೆ ಕ್ರಿ.ಶ. 4 ನೇ ಶತಮಾನದಿಂದ ಯಾವಾಗ್ಲೂ ಕಲಿಸಿರೋದು ಬರೀ ಸುಳ್ಳನ್ನೇ.

ಅಷ್ಟೇ ಅಲ್ಲ ಬಾಬೆಲಿನವ್ರು ಯೆರೂಸಲೇಮನ್ನ ನಾಶ ಮಾಡಿದ ನಂತ್ರ ಯೆಹೋವನು ಆ ಪಟ್ಟಣವನ್ನ ಮತ್ತೆ ಆಶೀರ್ವದಿಸಿ, ಪುನಃಸ್ಥಾಪಿಸಿದನು. ಅದು ಹಿಂದಿನಂತೆ ಪುನಃ ಶುದ್ಧ ಆರಾಧನೆಯ ಕೇಂದ್ರವಾಯ್ತು. ಆದ್ರೆ ಸುಳ್ಳು ಕ್ರೈಸ್ತ ಧರ್ಮಗಳು ಯಾವತ್ತೂ ದೇವರ ಆಶೀರ್ವಾದ ಪಡೆಯಲಿಲ್ಲ. ಅವು ಮಹಾಸಂಕಟದಲ್ಲಿ ನಾಶವಾದ ಮೇಲೆ ಯಾವತ್ತೂ ತಲೆಯೆತ್ತಲ್ಲ.

ಇದ್ರಿಂದ ನಾವೇನು ಕಲಿತೇವೆ? ಅಪನಂಬಿಗಸ್ತ ಯೆರೂಸಲೇಮಿನ ವಿಷಯದಲ್ಲಿ ನೆರವೇರಿದ ಬೈಬಲ್‌ ಭವಿಷ್ಯವಾಣಿಗಳ ಬಗ್ಗೆ ನೋಡುವಾಗ ಇದು ಸುಳ್ಳು ಕ್ರೈಸ್ತ ಧರ್ಮಗಳಿಗೂ ಅನ್ವಯಿಸುತ್ತೆ ಅಂತ ಅನಿಸಬಹುದು. ಆದ್ರೆ ಧರ್ಮಭ್ರಷ್ಟ ಯೆರೂಸಲೇಮ್‌ ಸುಳ್ಳು ಕ್ರೈಸ್ತ ಧರ್ಮಗಳನ್ನ ಸೂಚಿಸುತ್ತೆ ಅನ್ನೋದಕ್ಕೆ ಬೈಬಲಿನಲ್ಲಿ ಯಾವುದೇ ಆಧಾರ ಇಲ್ಲ.