ಇಡೀ ಭೂಮಿಯಲ್ಲಿ ಶುದ್ಧ ಆರಾಧನೆ!

ಯೆಹೆಜ್ಕೇಲ ಪುಸ್ತಕದಲ್ಲಿ ಶುದ್ಧ ಆರಾಧನೆಯ ಪುನಃಸ್ಥಾಪನೆಯ ಬಗ್ಗೆ ಅನೇಕ ಭವಿಷ್ಯವಾಣಿಗಳಿವೆ. ಆ ಭವಿಷ್ಯವಾಣಿಗಳಿಂದ ನಮಗೇನು ಪ್ರಯೋಜನ ಇದೆ?

ಆಡಳಿತ ಮಂಡಲಿಯಿಂದ ಪತ್ರ

ಈ ಪುಸ್ತಕ ಶುದ್ಧ ಆರಾಧನೆಯನ್ನ ಪಡೆಯೋಕೆ ಅರ್ಹನಾದ ಯೆಹೋವನನ್ನು ಆತನು ಇಷ್ಟಪಡುವ ರೀತಿಲಿ ಆರಾಧಿಸೋಕೆ ನಿಮ್ಮನ್ನ ಪ್ರೋತ್ಸಾಹಿಸಲಿ ಅನ್ನೋದು ನಮ್ಮ ಪ್ರಾರ್ಥನೆ.

ಕೆಲವು ವಿಶೇಷತೆಗಳ ಬಗ್ಗೆ ಇರೋ ವಿವರಣೆ

ಚೌಕಗಳು ಮತ್ತು ಕಾಲಗಣನ ರೇಖೆಗಳು ನಾವು ವಿಷಯಗಳನ್ನ ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಬೇಕಾದ ಹೆಚ್ಚಿನ ಮಾಹಿತಿಯನ್ನ ಕೊಡುತ್ತವೆ.

ಅಧ್ಯಾಯ 1

“ನಿನ್ನ ದೇವರಾಗಿರೋ ಯೆಹೋವನನ್ನೇ ಆರಾಧಿಸಬೇಕು”

ಏದೆನಿನಲ್ಲಿ ದಂಗೆಯನ್ನ ಎಬ್ಬಿಸೋ ಮೂಲಕ ಸೈತಾನ ಯೆಹೋವ ದೇವರ ಆಳುವ ಹಕ್ಕಿನ ಬಗ್ಗೆ ಸವಾಲನ್ನ ಹಾಕಿದನು ಮಾತ್ರವಲ್ಲ ಶುದ್ಧ ಆರಾಧನೆಯನ್ನ ತೆಗೆದುಹಾಕಲು ಪ್ರಯತ್ನಿಸಿದನು.

ಅಧ್ಯಾಯ 2

ಅವರ ಕಾಣಿಕೆಗಳನ್ನ “ದೇವರು ಸ್ವೀಕರಿಸಿದನು”

ಆರಾಧನೆಯಲ್ಲಿರಬೇಕಾದ ನಾಲ್ಕು ಮುಖ್ಯ ವಿಷಯಗಳು ಯಾವುವು ಅಂತ ನಂಬಿಗಸ್ತ ಪುರುಷರ ಮಾದರಿಯಿಂದ ಗೊತ್ತಾಗುತ್ತೆ.

ಅಧ್ಯಾಯ 3

‘ದೇವರು ತೋರಿಸಿದ ದರ್ಶನಗಳನ್ನ ನೋಡಿದೆ’

ಯೆಹೆಜ್ಕೇಲ ಮೊದಲನೇ ದರ್ಶನವನ್ನ ನೋಡಿ ಮೂಕವಿಸ್ಮಿತನಾದ. ಅವನು ನೋಡಿದ ವಿಷಯಗಳ ಬಗ್ಗೆ ತಿಳುಕೊಳ್ಳೋದ್ರಿಂದ ನಮಗೂ ಪ್ರಯೋಜನ ಇದೆ.

ಅಧ್ಯಾಯ 4

‘ನಾಲ್ಕು ಮುಖಗಳಿರೋ ಜೀವಿಗಳು’ ಏನನ್ನ ಸೂಚಿಸುತ್ತವೆ?

ಯೆಹೋವ ದೇವರು ಯೆಹೆಜ್ಕೇಲನಿಗೆ ದರ್ಶನ ತೋರಿಸಿದ್ದರಿಂದ ಕಷ್ಟಕರವಾಗಿರೋ ವಿಷಯವನ್ನ ನಾವು ಸುಲಭವಾಗಿ ಅರ್ಥಮಾಡಿಕೊಳ್ಳೋಕೆ ಆಗಿದೆ.

ಅಧ್ಯಾಯ 5

“ಅವರು ಮಾಡ್ತಿರೋ ಅಸಹ್ಯವಾದ ಕೆಟ್ಟ ಕೆಲಸಗಳನ್ನ ನೋಡು”

ಇಸ್ರಾಯೇಲ್‌ ಜನಾಂಗದ ಆಧ್ಯಾತ್ಮಿಕ ಪತನವನ್ನ ತೋರಿಸೋ ಮನಕಲಕುವ ನಾಲ್ಕು ದೃಶ್ಯಗಳನ್ನ ಯೆಹೆಜ್ಕೇಲನು ನೋಡ್ತಾನೆ.

ಅಧ್ಯಾಯ 6

“ಈಗ ನಿನ್ನ ಅಂತ್ಯ ಬಂದಿದೆ”

ಯೆಹೆಜ್ಕೇಲನ ಭವಿಷ್ಯವಾಣಿಯ ಅಭಿನಯವು ಯೆರೂಸಲೇಮಿನ ಮೇಲೆ ಯೆಹೋವನ ಕೋಪ ಹೊತ್ತಿ ಉರಿಯುತ್ತಿದೆ ಅನ್ನೋದನ್ನ ಸೂಚಿಸಿತು.

ಅಧ್ಯಾಯ 7

ಜನಾಂಗಗಳಿಗೆ “ನಾನೇ ಯೆಹೋವ ಅಂತ ಗೊತ್ತಾಗುತ್ತೆ”

ಯೆಹೋವನ ಹೆಸರನ್ನ ಹಾಳುಮಾಡಿದ ಮತ್ತು ಆತನ ಜನರನ್ನ ಹಿಂಸೆಪಡಿಸಿದ ಅಥವಾ ಭ್ರಷ್ಟಗೊಳಿಸಿದ ಜನಾಂಗಗಳಿಗೆ ತಕ್ಕ ಶಿಕ್ಷೆ ಸಿಕ್ತು. ಆ ಜನಾಂಗಗಳ ಜೊತೆ ಇಸ್ರಾಯೇಲ್ಯರು ವ್ಯವಹರಿಸಿದ ರೀತಿಯಿಂದ ನಾವೇನು ಕಲಿಬಹುದು?

ಅಧ್ಯಾಯ 8

“ನಾನು ಒಬ್ಬ ಕುರುಬನನ್ನ ನೇಮಿಸ್ತೀನಿ”

ದೇವರು ಮೆಸ್ಸೀಯನ ಬಗ್ಗೆ ಭವಿಷ್ಯವಾಣಿಯನ್ನ ಬರೆಯೋಕೆ ಯೆಹೆಜ್ಕೇಲನನ್ನ ಪ್ರೇರಿಸಿದನು. ಈ ಮೆಸ್ಸೀಯನು ಶುದ್ಧ ಆರಾಧನೆಯನ್ನ ಶಾಶ್ವತವಾಗಿ ಪುನಃಸ್ಥಾಪಿಸೋ ರಾಜ ಮತ್ತು ದೇವಜನರ ಕುರುಬನಾಗಿರುತ್ತಾನೆ.

ಅಧ್ಯಾಯ 9

“ನಾನು ಅವ್ರಿಗೆ ಒಂದೇ ಮನಸ್ಸನ್ನ ಕೊಡ್ತೀನಿ”

ನಂಬಿಗಸ್ತ ಯೆಹೂದಿ ಕೈದಿಗಳಿಗೆ ಕೊಡಲಾದ ಭವಿಷ್ಯವಾಣಿಗಳು ನಮ್ಮ ಕಾಲದಲ್ಲಿ ಹೇಗೆ ನೆರವೇರಿದವು?

ಅಧ್ಯಾಯ 10

“ನಿಮಗೆ ಜೀವ ಬರುತ್ತೆ”

ಕಣಿವೆ ತುಂಬ ಇರೋ ಒಣಗಿದ ಮೂಳೆಗಳು ಜೀವಂತವಾಗುವ ದರ್ಶನವನ್ನ ಯೆಹೆಜ್ಕೇಲ ನೋಡ್ತಾನೆ. ಇದರ ಅರ್ಥವೇನು?

ಅಧ್ಯಾಯ 11

“ನಾನು ನಿನ್ನನ್ನ . . . ಕಾವಲುಗಾರನಾಗಿ ಇಟ್ಟಿದ್ದೀನಿ”

ಈ ಕಾವಲುಗಾರನ ಪಾತ್ರ ಮತ್ತು ಜವಾಬ್ದಾರಿಗಳೇನು? ಅವನು ಯಾವ ಎಚ್ಚರಿಕೆಯ ಸಂದೇಶವನ್ನ ಸಾರಬೇಕಿತ್ತು?

ಅಧ್ಯಾಯ 12

“ನಾನು ಅವ್ರನ್ನ ಒಂದೇ ಜನಾಂಗವಾಗಿ ಮಾಡ್ತೀನಿ”

ತನ್ನ ಜನರನ್ನ ಒಟ್ಟುಗೂಡಿಸ್ತೇನೆ ಅಂತ ಯೆಹೋವನು ಮಾತು ಕೊಟ್ಟಿದ್ದಾನೆ.

ಅಧ್ಯಾಯ 13

‘ಆಲಯದ ಬಗ್ಗೆ ವರ್ಣಿಸು’

ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ ದೇವಾಲಯದ ಅರ್ಥವೇನಾಗಿತ್ತು?

ಅಧ್ಯಾಯ 14

“ಇದೇ ಆಲಯದ ನಿಯಮ”

ಯೆಹೆಜ್ಕೇಲನ ದೇವಾಲಯದ ದರ್ಶನದಿಂದ ಯೆಹೂದ್ಯ ಕೈದಿಗಳು ಯಾವ ಪಾಠಗಳನ್ನ ಕಲಿತ್ರು? ಈ ದರ್ಶನದಿಂದ ಶುದ್ಧ ಆರಾಧನೆಯ ಬಗ್ಗೆ ನಾವೇನು ಕಲಿಬಹುದು?

ಅಧ್ಯಾಯ 15

“ನಾನು ನಿನ್ನ ವೇಶ್ಯಾವಾಟಿಕೆಯನ್ನ ನಿಲ್ಲಿಸಿಬಿಡ್ತೀನಿ”

ಯೆಹೆಜ್ಕೇಲ ಮತ್ತು ಪ್ರಕಟನೆ ಪುಸ್ತಕದಲ್ಲಿ ಕೊಡಲಾಗಿರೋ ವೇಶ್ಯೆಯರ ವಿವರಣೆಯಿಂದ ನಾವೇನು ಕಲಿಬಹುದು?

ಅಧ್ಯಾಯ 16

“ಹಣೆ ಮೇಲೆ ಒಂದು ಗುರುತು ಹಾಕು”

ಯೆಹೆಜ್ಕೇಲನ ಕಾಲದಲ್ಲಿ ನಂಬಿಗಸ್ತ ಜನರಿಗೆ ರಕ್ಷಣೆಗಾಗಿ ಗುರುತು ಹಾಕಲಾದ ವಿಧದಿಂದ ನಮಗೊಂದು ಪ್ರಾಮುಖ್ಯ ಪಾಠ ಇದೆ.

ಅಧ್ಯಾಯ 17

“ಗೋಗನೇ, ನಾನು ನಿನಗೆ ವಿರುದ್ಧವಾಗಿದ್ದೀನಿ”

ಮಾಗೋಗಿನ ಗೋಗ ಯಾರು ಮತ್ತು ಅವನು ಆಕ್ರಮಣ ಮಾಡಲಿರೋ ದೇಶ ಯಾವುದು?

ಅಧ್ಯಾಯ 18

“ನನ್ನ ರೋಷಾವೇಶ ಭಗ್ಗಂತ ಉರಿಯುತ್ತೆ”

ಗೋಗನು ಆಕ್ರಮಣ ಮಾಡಿದಾಗ ಯೆಹೋವನು ರೋಷಾವೇಶದಿಂದ ಉರಿಯುತ್ತಾನೆ ಮತ್ತು ತನ್ನ ಜನರ ಪರವಾಗಿ ಹೋರಾಡುತ್ತಾನೆ.

ಅಧ್ಯಾಯ 19

“ತೊರೆ ಎಲ್ಲೆಲ್ಲ ಹರಿಯುತ್ತೋ ಅಲ್ಲೆಲ್ಲ ಜೀವಿಗಳು ವಾಸಿಸುತ್ತೆ”

ದೇವಾಲಯದಿಂದ ಹರಿಯೋ ನದಿಯ ದರ್ಶನ ಹಿಂದಿನ ಕಾಲದಲ್ಲಿ ನೆರವೇರಿತು, ಈಗ ನೆರವೇರ್ತಿದೆ ಮತ್ತು ಮುಂದೆ ನೆರವೇರಲಿದೆ ಅಂತ ಹೇಗೆ ಹೇಳಬಹುದು?

ಅಧ್ಯಾಯ 20

‘ದೇಶವನ್ನ ಆಸ್ತಿಯಾಗಿ ಹಂಚಿಕೊಡು’

ಒಂದು ದರ್ಶನದಲ್ಲಿ ಯೆಹೋವನು ಯೆಹೆಜ್ಕೇಲನಿಗೆ ಮತ್ತು ಅವನ ಜೊತೆ ಕೈದಿಗಳಾಗಿದ್ದವರಿಗೆ ತಾನು ಕೊಡ್ತೀನಿ ಅಂತ ಮಾತು ಕೊಟ್ಟ ದೇಶವನ್ನ ಇಸ್ರಾಯೇಲಿನ ಕುಲಗಳಿಗೆ ಹಂಚಿಕೊಡುವಂತೆ ಹೇಳಿದನು.

ಅಧ್ಯಾಯ 21

“ಆ ಪಟ್ಟಣದ ಹೆಸ್ರು, ‘ಯೆಹೋವ ಅಲ್ಲಿದ್ದಾನೆ’ ಅಂತ ಆಗುತ್ತೆ”

ಪಟ್ಟಣದ ಬಗ್ಗೆ ಮತ್ತು ಅದರ ವಿಶೇಷವಾದ ಹೆಸರಿನ ಬಗ್ಗೆ ಇರೋ ಯೆಹೆಜ್ಕೇಲನ ದರ್ಶನದಿಂದ ನಾವು ಯಾವ ಪಾಠಗಳನ್ನು ಕಲಿಬಹುದು?

ಅಧ್ಯಾಯ 22

“ದೇವರನ್ನ ಆರಾಧಿಸು”

ಯೆಹೋವ ದೇವರನ್ನ ಮಾತ್ರ ಆರಾಧಿಸಬೇಕು ಅನ್ನೋ ನಮ್ಮ ನಿರ್ಧಾರವನ್ನ ಬಲಪಡಿಸುವುದೇ ಈ ಪುಸ್ತಕದ ಉದ್ದೇಶ.

ಹೊಸ ತಿಳುವಳಿಕೆಗಳ ಸಾರಾಂಶ

ಯೆಹೆಜ್ಕೇಲನ ಪುಸ್ತಕದಲ್ಲಿರೋ ಕೆಲವು ಭವಿಷ್ಯವಾಣಿಗಳನ್ನ ಅರ್ಥಮಾಡಿಕೊಂಡಿದ್ರಲ್ಲಿ ಯಾಕೆ ಬದಲಾವಣೆಯಾಗಿದೆ?

ಚೌಕ 1ಎ

ಆರಾಧನೆ ಅಂದ್ರೇನು?

ಆರಾಧನೆ ಅಂದ್ರೇನು? ಅದ್ರ ಬಗ್ಗೆ ಯೆಹೆಜ್ಕೇಲ ಪುಸ್ತಕದಲ್ಲಿ ಯಾವ ವಿವರಣೆಯನ್ನ ಕೊಡಲಾಗಿದೆ? ಶುದ್ಧ ಆರಾಧನೆಯಲ್ಲಿ ಏನೆಲ್ಲಾ ಸೇರಿದೆ?

ಚೌಕ 1ಬಿ

ಯೆಹೆಜ್ಕೇಲ ಪುಸ್ತಕದ ಕಿರುನೋಟ

ಈ ಪುಸ್ತಕವನ್ನು ಕಾಲಾನುಸಾರ ಮತ್ತು ವಿಷಯಗಳಿಗನುಸಾರ ವಿಭಾಗಿಸಲಾಗಿದೆ.

ಚೌಕ 2ಎ

ಯೆಹೆಜ್ಕೇಲನ ಭವಿಷ್ಯವಾಣಿಗಳಲ್ಲಿ ಏನೆಲ್ಲಾ ಇದೆ?

ಈ ಪುಸ್ತಕದಲ್ಲಿ ದರ್ಶನಗಳು, ಉದಾಹರಣೆಗಳು, ಕಥೆಗಳು ಮತ್ತು ಅಭಿನಯಗಳಿವೆ. ಇವೆಲ್ಲಾ ಮುಂದೆ ನೆರವೇರಲಿರೋ ವಿಷಯಗಳ ಬಗ್ಗೆ ದೇವರ ಪ್ರೇರಣೆಯಿಂದ ಹೇಳಿರೋ ಸಂದೇಶಗಳಾಗಿವೆ.

ಚೌಕ 2ಬಿ

ಯೆಹೆಜ್ಕೇಲನ ಜೀವನ ಮತ್ತು ಕಾಲ

ಯೆಹೆಜ್ಕೇಲನ ಕಾಲದಲ್ಲಿ ಬೇರೆ ಪ್ರವಾದಿಗಳೂ ಭವಿಷ್ಯವಾಣಿಗಳನ್ನ ತಿಳಿಸ್ತಿದ್ರು. ಆದ್ರೆ ಅವನ ಜೀವನ ಕಾಲದಲ್ಲಿ ದೇವಜನರ ಇತಿಹಾಸದಲ್ಲೇ ಪ್ರಾಮುಖ್ಯ ಘಟನೆಗಳು ನಡೆದವು.

ಚೌಕ 3ಎ

ಬಾಬೆಲಿಗೆ ಪ್ರಯಾಣ

ಯೆಹೂದಿ ಕೈದಿಗಳು ಯೆಹೂದದಿಂದ ಬಾಬೆಲಿಗೆ ಯಾವ ದಾರಿಯ ಮೂಲಕ ಹೋಗಿರಬಹುದು?

ಚೌಕ 4ಎ

“ಆ ಜೀವಿಗಳನ್ನ ನಾನು ನೋಡ್ತಾ ಇದ್ದಾಗ”

ಯೆಹೆಜ್ಕೇಲ ದರ್ಶನದಲ್ಲಿ ನೋಡಿದ ಜೀವಿಗೂ ಹಿಂದಿನ ಕಾಲದ ಅಶ್ಶೂರ ಮತ್ತು ಬಾಬೆಲಿನಲ್ಲಿ ಇದ್ದ ಬೃಹತ್‌ ಪ್ರತಿಮೆಗೂ ಮಧ್ಯ ಇರುವ ವ್ಯತ್ಯಾಸ ಏನು?

ಚೌಕ  5ಎ

“ಮನುಷ್ಯಕುಮಾರನೇ, ನೋಡಿದ್ಯಾ?”

ಯೆಹೆಜ್ಕೇಲನು ದೇವಾಲಯದಲ್ಲಿ ಮತ್ತು ಅಂಗಳದಲ್ಲಿ ಅಸಹ್ಯವಾದ ನಾಲ್ಕು ಕೆಲಸಗಳನ್ನ ನೋಡ್ತಾನೆ.

ಚೌಕ 6ಎ

“ನಿನ್ನ ಕೂದಲನ್ನ ಗಡ್ಡವನ್ನ ಬೋಳಿಸ್ಕೊ”

ದೇವರ ಮಾರ್ಗದರ್ಶನದಂತೆ ಯೆಹೆಜ್ಕೇಲನು ಯೆರೂಸಲೇಮಿನಲ್ಲಿ ಬಲುಬೇಗನೆ ಏನಾಗಲಿದೆ ಅನ್ನೋದನ್ನ ಅಭಿನಯಿಸಿ ತೋರಿಸಿದನು.

ಚೌಕ  7ಎ

ಯೆರೂಸಲೇಮಿನ ಸುತ್ತಮುತ್ತ ಇದ್ದ ಜನಾಂಗಗಳು

ಯೆಹೂದ ಮತ್ತು ಅದರ ಸುತ್ತಮುತ್ತ ಇದ್ದ ಜನಾಂಗಗಳ ಜೊತೆ ಯಾವಾಗ್ಲೂ ಹೋರಾಟ ಇರ್ತಿತ್ತು

ಚೌಕ 7ಬಿ

ಯೆಹೆಜ್ಕೇಲ ಪುಸ್ತಕದಲ್ಲಿರೋ ಮುಖ್ಯ ಹೇಳಿಕೆಗಳು

ಭವಿಷ್ಯವಾಣಿಗಳಿರೋ ಯೆಹೆಜ್ಕೇಲ ಪುಸ್ತಕದಲ್ಲಿ ಕೆಲವೊಂದು ಹೇಳಿಕೆಗಳನ್ನ ಪದೇ ಪದೇ ಕೊಡಲಾಗಿದೆ.

ಚೌಕ  8ಎ

ಮೆಸ್ಸೀಯನ ಬಗ್ಗೆ ಇರೋ ಭವಿಷ್ಯವಾಣಿ—ದೊಡ್ಡ ದೇವದಾರು ಮರ

ಯೆಹೆಜ್ಕೇಲ 17 ನೇ ಅಧ್ಯಾಯದಲ್ಲಿರೋ ಒಗಟಿನ ಅರ್ಥವೇನು?

ಚೌಕ 8ಬಿ

ಮೆಸ್ಸೀಯನ ಬಗ್ಗೆ ಇರೋ ಮೂರು ಭವಿಷ್ಯವಾಣಿಗಳು

ದೇವ ಜನರನ್ನ ಮುಂದೆ ಆಳಲಿರೋ ರಾಜನ ಮೇಲೆ ನಾವು ಭರವಸೆ ಇಡಬಹುದು ಅಂತ ತೋರಿಸಲಿಕ್ಕಾಗಿ ಯೆಹೆಜ್ಕೇಲನು ಭವಿಷ್ಯವಾಣಿ ತಿಳಿಸಿದನು.

ಚೌಕ 9ಎ

ಯೆಹೋವನು ಕೊಟ್ಟ ಮಾತಿನಂತೆ ನಡೀತಾನೆ—ಹಿಂದಿನ ಕಾಲದಲ್ಲಿ

ಬಿಡುಗಡೆ ಮತ್ತು ಪುನಃಸ್ಥಾಪನೆ ಬಗ್ಗೆ ಐದು ಭವಿಷ್ಯವಾಣಿಗಳನ್ನ ತಿಳಿಸುವಂತೆ ಯೆಹೆಜ್ಕೇಲನನ್ನ ದೇವರು ಪ್ರೇರಿಸುತ್ತಾನೆ.

ಚೌಕ 9ಬಿ

1919 ರಲ್ಲೇ ಯಾಕೆ?

ದೇವಜನರು 1919 ರಲ್ಲಿ ಮಹಾ ಬಾಬೆಲಿನ ಬಂಧಿವಾಸದಿಂದ ಬಿಡುಗಡೆ ಆದ್ರು ಅಂತ ನಾವು ಯಾಕೆ ಹೇಳುತ್ತೇವೆ?

ಚೌಕ 9ಸಿ

ಯೆಹೋವನು ಕೊಟ್ಟ ಮಾತಿನಂತೆ ನಡೀತಾನೆ—ನಮ್ಮ ಕಾಲದಲ್ಲಿ

ದೇವರು ಕೊಟ್ಟ ಕೆಲವು ಮಾತುಗಳು ಹೇಗೆ ಎರಡು ಸಲ ನೆರವೇರಿವೆ?

ಚೌಕ 9ಡಿ

ಬಂಧಿವಾಸ ಮತ್ತು ಪುನಃಸ್ಥಾಪನೆ ಬಗ್ಗೆ ಇರೋ ಭವಿಷ್ಯವಾಣಿಗಳು

ಯೆಹೂದ್ಯರು ಬಾಬೆಲಿಗೆ ಬಂಧಿವಾಸಿಗಳಾಗಿ ಹೋಗೋದ್ರ ಬಗ್ಗೆ ಇದ್ದ ಭವಿಷ್ಯವಾಣಿಗಳಿಗೆ ಮಹತ್ತಾದ ರೀತಿಯ ನೆರವೇರಿಕೆ ಇತ್ತು. ಅದು ಕ್ರೈಸ್ತ ಸಭೆ ಮಹಾ ಬಾಬೆಲಿನ ಬಂಧನಕ್ಕೆ ಹೋದಾಗ ನೆರವೇರಿತು.

ಚೌಕ 9ಇ

“ಎಲ್ಲವನ್ನ ಸರಿಮಾಡೋ ಸಮಯ”

ಯೇಸು ಕ್ರಿಸ್ತನು ರಾಜನಾದಾಗಿಂದ ಸಾವಿರ ವರ್ಷಗಳ ಆಳ್ವಿಕೆಯ ಕೊನೇ ತನಕದ ಸಮಯಾವಧಿ ಬಗ್ಗೆ ಅಪೊಸ್ತಲ ಪೇತ್ರನು ದೇವಪ್ರೇರಣೆಯಿಂದ ಮೊದಲೇ ತಿಳಿಸಿದ್ದನು.

ಚೌಕ 10ಎ

ಹಂತ ಹಂತವಾಗಿ ಪುನಃಸ್ಥಾಪನೆಯಾದ ಶುದ್ಧ ಆರಾಧನೆ

ಯಾವ ಪ್ರಗತಿಯಿಂದಾಗಿ ಈಗಿನ ಕಾಲದಲ್ಲಿ ಸಿಹಿಸುದ್ದಿಯನ್ನ ಸಾರೋಕೆ ಸುಲಭವಾಗಿದೆ?

ಚೌಕ  10ಬಿ

‘ಒಣಗಿದ ಮೂಳೆಗಳು’ ಮತ್ತು ‘ಇಬ್ರು ಸಾಕ್ಷಿಗಳಿಗೆ’ ಯಾವ ಸಂಬಂಧ ಇದೆ?

ಈ ಭವಿಷ್ಯವಾಣಿಗಳು ಈಗಿನ ಕಾಲದಲ್ಲಿ ಹೇಗೆ ನೆರವೇರಿದವು?

ಚೌಕ 10ಸಿ

ನಮ್ಮ ಕಾಲ ಮೇಲೆ ನಿಂತುಕೊಳ್ಳಲು ಸಹಾಯ

ನಮ್ಮ ಜೀವನದಲ್ಲಿ ಬರೋ ಒತ್ತಡ, ಸಮಸ್ಯೆಗಳಿಂದಾಗಿ ಕೆಲವು ಸಲ ನಮ್ಗೆ, ‘ಇನ್ಮುಂದೆ ನನ್ನ ಕೈಲಿ ಆಗಲ್ಲ’ ಅಂತ ಅನಿಸಬಹುದು ಅಂಥ ಸಮಯದಲ್ಲಿ ಪುನಃಸ್ಥಾಪನೆಯ ಬಗ್ಗೆ ಯೆಹೆಜ್ಕೇಲ ನೋಡಿದ ದರ್ಶನದ ಬಗ್ಗೆ ಧ್ಯಾನಿಸೋದಾದ್ರೆ ನಾವು ಬಲ ಪಡ್ಕೊಬಹುದು.

ಚೌಕ 11ಎ

ಕೆಲವು ಒಳ್ಳೇ ಕಾವಲುಗಾರರು

ಅವರು ವಿರೋಧವನ್ನ ಎದುರಿಸಿದ್ರು, ಆದ್ರೂ ಯೆಹೋವನಿಗೆ ನಿಷ್ಠೆಯಿಂದ ಇದ್ದರು ಜೊತೆಗೆ ಎಚ್ಚರಿಕೆಯ ಸಂದೇಶವನ್ನ ಮತ್ತು ಸಿಹಿಸುದ್ದಿಯನ್ನ ಸಾರಿದ್ರು.

ಚೌಕ 12ಎ

ಎರಡು ಕೋಲುಗಳನ್ನ ಒಟ್ಟು ಸೇರಿಸುವುದು

ಈ ಕೋಲುಗಳು ಹಿಂದಿನ ಕಾಲದಲ್ಲಿ ಯಾರನ್ನ ಸೂಚಿಸ್ತಿದ್ವು ಮತ್ತು ಈಗಿನ ಕಾಲದಲ್ಲಿ ಯಾರನ್ನ ಸೂಚಿಸ್ತಿವೆ?

ಚೌಕ 13ಎ

ಎರಡು ಆಲಯಗಳು ಮತ್ತು ಅದರಿಂದ ಕಲಿಯೋ ಪಾಠಗಳು

ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ ಆಲಯಕ್ಕೂ ಅಪೊಸ್ತಲ ಪೌಲನು ವಿವರಿಸಿದ ಆಧ್ಯಾತ್ಮಿಕ ಆಲಯಕ್ಕೂ ಯಾವ ವ್ಯತ್ಯಾಸ ಇದೆ?

ಚೌಕ  14ಎ

ಯೆಹೆಜ್ಕೇಲ ನೋಡಿದ ದೇವಾಲಯದ ದರ್ಶನದಿಂದ ಕಲಿಯೋ ಪಾಠಗಳು

ಯೆಹೆಜ್ಕೇಲ ನೋಡಿದ ದೇವಾಲಯದ ದರ್ಶನದಿಂದ ಕಲಿತ ಯಾವ ಪಾಠಗಳನ್ನ ನಿಮ್ಮ ಆರಾಧನೆಯಲ್ಲಿ ಅನ್ವಯಿಸ್ತೀರಾ?

ಚೌಕ  15ಎ

ವೇಶ್ಯೆಯರಾದ ಅಕ್ಕ-ತಂಗಿ

ಯಾರು ಯೆಹೋವನ ಹೆಸ್ರಿಗೆ ಮಸಿ ಬಳಿಯೋ ಕೆಲ್ಸಗಳನ್ನ ಮಾಡ್ತಾರೋ ಮತ್ತು ಶುದ್ಧ ಆರಾಧನೆಯ ಮಟ್ಟಗಳನ್ನ ಗಾಳಿಗೆ ತೂರುತ್ತಾರೋ ಅಂಥವ್ರ ಬಗ್ಗೆ ಆತನಿಗೆ ಹೇಗನಿಸುತ್ತೆ ಅಂತ ಆತನು ಒಹೊಲ ಮತ್ತು ಒಹೊಲೀಬರ ಬಗ್ಗೆ ಕೊಟ್ಟ ವಿವರಣೆಯಿಂದ ಗೊತ್ತಾಗುತ್ತೆ.

ಚೌಕ  16ಎ

ಅಪನಂಬಿಗಸ್ತ ಯೆರೂಸಲೇಮ್‌ ಸುಳ್ಳು ಕ್ರೈಸ್ತ ಧರ್ಮಗಳನ್ನ ಸೂಚಿಸುತ್ತಾ?

ನಾವು ಅರ್ಥಮಾಡಿಕೊಂಡಿದ್ದರಲ್ಲಿ ಯಾಕೆ ಬದಲಾವಣೆ ಮಾಡಿಕೊಳ್ಳುತ್ತಿದ್ದೇವೆ?

ಚೌಕ 16ಬಿ

ದುಃಖದ ನಿಟ್ಟುಸಿರು ಬಿಡ್ತಾ ನರಳಾಡೋದು, ಗುರುತು ಹಾಕೋದು, ಜಜ್ಜಿ ಹಾಕೋದು—ಯಾವಾಗ ಮತ್ತು ಹೇಗೆ?

ಈ ಲೋಕದ ಅಂತ್ಯವನ್ನ ಧೈರ್ಯದಿಂದ ಎದುರಿಸೋಕೆ ಯೆಹೆಜ್ಕೇಲ 9 ನೇ ಅಧ್ಯಾಯದಲ್ಲಿರೋ ದರ್ಶನ ನಮಗೆ ಸಹಾಯ ಮಾಡುತ್ತೆ.

ಚೌಕ  18ಎ

ಬರಲಿರೋ ಮಹಾ ಯುದ್ಧದ ಬಗ್ಗೆ ಯೆಹೋವನು ಎಚ್ಚರಿಸಿದ್ದಾನೆ

ಯೆಹೋವ ದೇವರನ್ನ ವಿರೋಧಿಸೋ ಎಲ್ಲ ಜನರನ್ನ ಆತನು ನಾಶಮಾಡೋ ಒಂದು ಕೊನೆ ಯುದ್ಧದ ಬಗ್ಗೆ ಬೈಬಲ್‌ ತಿಳಿಸುತ್ತೆ.

ಚೌಕ  19ಎ

ಯೆಹೋವನಿಂದ ಹರಿಯುವ ಆಶೀರ್ವಾದಗಳ ನದಿಗಳು

ಬೈಬಲನ್ನ ಬರೆದವ್ರಲ್ಲಿ ತುಂಬ ಜನ ಯೆಹೋವನ ಆಶೀರ್ವಾದಗಳ ಬಗ್ಗೆ ತಿಳಿಸೋಕೆ ಇದೇ ಹೋಲಿಕೆಯನ್ನ ಬಳಸಿದ್ದಾರೆ.

ಚೌಕ 19ಬಿ

ಒಂದು ತೊರೆ ಪ್ರವಾಹ ಆಗುತ್ತೆ!

ದೇವರ ಪವಿತ್ರ ಸ್ಥಳದಿಂದ ಹರಿಯುವ ತೊರೆ ಏನನ್ನ ಸೂಚಿಸುತ್ತೆ?

ಚೌಕ  20ಎ

ದೇಶವನ್ನ ಹಂಚಿ ಕೊಡಲಾಗುತ್ತೆ

ಜಾಗವನ್ನ ಹಂಚಿಕೊಡೋದ್ರ ಬಗ್ಗೆ ಯೆಹೆಜ್ಕೇಲನು ನೋಡಿದ ದರ್ಶನದಿಂದ ಬಾಬೆಲಿನಲ್ಲಿದ್ದ ಕೈದಿಗಳಿಗೆ ಮಾತ್ರವಲ್ಲ ನಮಗೂ ಪ್ರೋತ್ಸಾಹ ಸಿಗುತ್ತೆ.

ಚೌಕ 21ಎ

‘ಕಾಣಿಕೆಯಾಗಿ ಪ್ರತ್ಯೇಕಿಸಬೇಕಾದ ಭಾಗ’

ದೇವರು ಪ್ರತ್ಯೇಕಿಸಿದ ಪ್ರದೇಶದ 5 ಭಾಗಗಳು ಯಾವುವು? ಅವು ಯಾವ ಉದ್ದೇಶಕ್ಕಾಗಿ ಇದ್ವು?

ಚೌಕ 22ಎ

ಕೊನೇ ಪರೀಕ್ಷೆಯ ಸಮಯದಲ್ಲಿ . . .

ಕೊನೇ ಪರೀಕ್ಷೆಯನ್ನ ಪಾರಾದವರಿಗೆ ಏನು ಸಿಗಲಿದೆ?