ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ ದೇವರ ಇಷ್ಟವನ್ನು ಮಾಡುವಿರಾ?

ಯೆಹೋವ ದೇವರ ಇಷ್ಟವನ್ನು ಮಾಡುವಿರಾ?

ಈ ಕಿರುಹೊತ್ತಗೆಯನ್ನು ಓದಿದ್ದಕ್ಕಾಗಿ ಕೃತಜ್ಞತೆಗಳು. ಯೆಹೋವನ ಸಾಕ್ಷಿಗಳಾದ ನಮ್ಮ ಬಗ್ಗೆ ಹಾಗೂ ನಮ್ಮ ಸಂಘಟನೆಯ ಕಾರ್ಯವೈಖರಿಯ ಬಗ್ಗೆ ತಿಳಿದುಕೊಳ್ಳಲು ಇದು ಖಂಡಿತ ನಿಮಗೆ ನೆರವಾಗಿರುತ್ತೆ. ಮಾತ್ರವಲ್ಲ ಯೆಹೋವ ದೇವರ ಇಷ್ಟವನ್ನು ಇಂದು ಯಾರು ಮಾಡುತ್ತಿದ್ದಾರೆ ಎಂದು ಕಂಡುಹಿಡಿಯಲು ಇದು ನಿಮಗೆ ಸಹಾಯಮಾಡಿದೆ ಎಂದು ನಂಬುತ್ತೇವೆ. ದೇವರ ಬಗ್ಗೆ ಜ್ಞಾನ ಪಡೆದುಕೊಳ್ಳುವುದನ್ನು ಮುಂದುವರಿಸುವಂತೆ, ಆ ಜ್ಞಾನವನ್ನು ಬಂಧುಮಿತ್ರರೊಂದಿಗೆ ಹಂಚಿಕೊಳ್ಳುವಂತೆ, ನಮ್ಮ ಸಭಾ ಕೂಟಗಳಿಗೆ ಹಾಜರಾಗುವಂತೆ ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. —ಇಬ್ರಿಯ 10:23-25.

ಯೆಹೋವ ದೇವರ ಬಗ್ಗೆ ತಿಳಿದುಕೊಳ್ಳುತ್ತಾ ಹೋದಂತೆ ಆತ ನಿಮ್ಮನ್ನೆಷ್ಟು ಪ್ರೀತಿಸುತ್ತಾನೆ ಎನ್ನುವುದು ನಿಮಗೆ ಅರಿವಾಗುತ್ತದೆ. ಪ್ರತಿಯಾಗಿ ನೀವು ಕೂಡ ಆತನನ್ನು ಪ್ರೀತಿಸಲು ತೊಡಗುವಿರಿ. (1 ಯೋಹಾನ 4:8-10, 19) ಯೆಹೋವ ದೇವರನ್ನು ಪ್ರೀತಿಸುತ್ತೀರೆಂದು ಹೇಗೆ ತೋರಿಸುವಿರಿ? ಆತನು ಇಟ್ಟಿರುವ ನೈತಿಕ ಮಟ್ಟಗಳನ್ನು ಪಾಲಿಸುವುದರ ಒಳಿತೇನು? ದೇವರ ಇಷ್ಟವನ್ನು ಮಾಡಲು ಯಾವುದು ನೆರವಾಗುವುದು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಹಾಯ ಮಾಡುವಂತೆ ನಿಮ್ಮ ಬೈಬಲ್‌ ಟೀಚರನ್ನು ವಿನಂತಿಸಿ. ಖಂಡಿತ ನೀವು, ನಿಮ್ಮ ಪರಿವಾರ “ನಿತ್ಯಜೀವವನ್ನು ದೃಷ್ಟಿಯಲ್ಲಿಟ್ಟವರಾಗಿ, . . . ದೇವರ ಪ್ರೀತಿಯಲ್ಲಿ” ಉಳಿಯುವಿರಿ. —ಯೂದ 21.

ಸತ್ಯ ಮಾರ್ಗದಲ್ಲಿ ಮುಂದುವರಿಯಲು ಈ ಕೆಳಗಿನ ಪುಸ್ತಕವನ್ನು ಅಧ್ಯಯನ ಮಾಡಿ.