ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 11

ನಾವು ಸಮ್ಮೇಳನಗಳನ್ನು ಆಯೋಜಿಸುವ ಉದ್ದೇಶವೇನು?

ನಾವು ಸಮ್ಮೇಳನಗಳನ್ನು ಆಯೋಜಿಸುವ ಉದ್ದೇಶವೇನು?

ಮೆಕ್ಸಿಕೊ

ಜರ್ಮನಿ

ಬೋಟ್ಸವಾನ

ನಿಕರಾಗ್ವ

ಇಟಲಿ

ಈ ಚಿತ್ರಗಳಲ್ಲಿರುವ ಜನರ ಮುಖ ಸಂತೋಷದಿಂದ ಅರಳಿರುವುದನ್ನು ಗಮನಿಸಿದಿರಾ? ಅವರೆಲ್ಲರೂ ಸಮ್ಮೇಳನಕ್ಕೆ ಹಾಜರಾಗಿ ಆನಂದಿಸುತ್ತಿದ್ದಾರೆ. ಪ್ರಾಚೀನ ಕಾಲದ ದೇವಭಕ್ತರು ವರ್ಷಕ್ಕೆ ಮೂರು ಸಲ ಸಮೂಹವಾಗಿ ಕೂಡಿಬರುತ್ತಿದ್ದರು. ಅದು ದೇವರ ಆಜ್ಞೆಯಾಗಿತ್ತು. (ಧರ್ಮೋಪದೇಶಕಾಂಡ 16:16) ಅದೇ ನಮೂನೆಯನ್ನು ನಾವು ಅನುಕರಿಸುತ್ತೇವೆ. ಪ್ರತಿ ವರ್ಷ ನಮಗೆ ಮೂರು ದಿನದ ಪ್ರಾದೇಶಿಕ ಅಧಿವೇಶನ ಮತ್ತು ಒಂದೊಂದು ದಿನದ ಎರಡು ಸಮ್ಮೇಳನಗಳು ಇವೆ. ಅವುಗಳ ಪ್ರಯೋಜನವೇನು?

ನಮ್ಮಲ್ಲಿ ಭಾವೈಕ್ಯ ಹೆಚ್ಚಿ ಸಹೋದರತ್ವ ಬಲಗೊಳ್ಳುತ್ತದೆ. ಪ್ರಾಚೀನ ಕಾಲದ ಇಸ್ರೇಲ್‌ ಜನರು, “ಕೂಡಿದ ಸಭೆಗಳಲ್ಲಿ” ಯೆಹೋವ ದೇವರನ್ನು ಮಹಿಮೆಪಡಿಸುತ್ತಾ ಆನಂದಿಸಿದರು. ನಾವು ಸಮ್ಮೇಳನಗಳಲ್ಲಿ ಒಟ್ಟಾಗಿ ಕೂಡಿ ಯೆಹೋವ ದೇವರನ್ನು ಆರಾಧಿಸಿ ಹರ್ಷಿಸುತ್ತೇವೆ. (ಕೀರ್ತನೆ 26:12; 111:1) ಇಂಥ ಸಮ್ಮೇಳನಗಳಿಗೆ ಬೇರೆ ಬೇರೆ ಊರುಗಳಿಂದ ಕೆಲವೊಮ್ಮೆ ದೂರದ ದೇಶಗಳಿಂದ ಯೆಹೋವನ ಸಾಕ್ಷಿಗಳು ಜೊತೆಸೇರುತ್ತಾರೆ. ಪರಸ್ಪರ ಒಡನಾಟ ಸಾಹಚರ್ಯದಲ್ಲಿ ಆನಂದಿಸಲು ಇದೊಂದು ಸುಸಂದರ್ಭ. ಮಧ್ಯಾಹ್ನ ಊಟದ ವೇಳೆಯಲ್ಲಂತೂ ಸಮ್ಮೇಳನದಲ್ಲಿ ಸ್ನೇಹಮಯ ವಾತಾವರಣವೇ ತುಂಬಿರುತ್ತದೆ. (ಅಪೊಸ್ತಲರ ಕಾರ್ಯಗಳು 2:42) ನಮ್ಮ “ಸಹೋದರರ ಇಡೀ ಬಳಗ” ಪ್ರೀತಿ ಭಾವೈಕ್ಯದಲ್ಲಿ ಒಟ್ಟುಗೂಡಿ ಆನಂದಿಸುತ್ತಿರುವುದನ್ನು ಸಮ್ಮೇಳನಗಳಲ್ಲಿ ಪ್ರತ್ಯಕ್ಷ ಕಾಣುವಿರಿ.—1 ಪೇತ್ರ 2:17.

ಆಧ್ಯಾತ್ಮಿಕ ಜ್ಞಾನ ಹೆಚ್ಚಿಸಿಕೊಳ್ಳಲು ನೆರವಾಗುತ್ತವೆ. ಪ್ರಾಚೀನ ಕಾಲದಲ್ಲಿ, ಸಮೂಹವಾಗಿ ಕೂಡಿಬಂದ ಇಸ್ರೇಲ್‌ ಜನರು ಶಾಸ್ತ್ರವಚನಗಳ ಅರ್ಥವನ್ನು ಗ್ರಹಿಸಿ ಬಹಳ ಪ್ರಯೋಜನ ಪಡೆದರು. (ನೆಹೆಮೀಯ 8:8, 12) ನಮ್ಮ ಸಮ್ಮೇಳನಗಳಲ್ಲಿ ಸಹ ಬೈಬಲ್‌ ಉಪದೇಶ ನೀಡಲಾಗುತ್ತದೆ. ಸಮ್ಮೇಳನದ ಇಡೀ ಕಾರ್ಯಕ್ರಮ ಬೈಬಲಿನ ಒಂದು ವಿಷಯದ ಮೇಲೆ ಹೆಣೆದುಕೊಂಡಿರುತ್ತದೆ. ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗುವ ಕುತೂಹಲಕಾರಿ ಭಾಷಣಗಳು, ಪ್ರಾತ್ಯಕ್ಷಿಕೆಗಳು ದೇವರ ಇಷ್ಟದಂತೆ ನಡೆಯುವುದು ಹೇಗೆಂದು ಕಲಿಸುತ್ತವೆ. ದೇವಭಕ್ತ ಜೀವನವನ್ನು ನಡೆಸುವಾಗ ಎದುರಾಗುವ ಸವಾಲು ಕಷ್ಟಗಳನ್ನು ಜಯಿಸಿ ಬಂದವರ ಸಂದರ್ಶನಗಳಿರುತ್ತೆ. ಅವು ನಮಗೆ ಸ್ಫೂರ್ತಿ ಪ್ರೋತ್ಸಾಹ ನೀಡುತ್ತವೆ. ಪ್ರಾದೇಶಿಕ ಅಧಿವೇಶನದಲ್ಲಿ ಬೈಬಲ್‌ ಕಥೆಯನ್ನು ಆಧರಿಸಿದ ನಾಟಕ ಪ್ರದರ್ಶನ ಇರುತ್ತದೆ. ಅದು ನಮ್ಮ ಬದುಕಿಗೆ ನೆರವಾಗುವ ಪಾಠವನ್ನು ಚೆನ್ನಾಗಿ ಬಿಂಬಿಸುತ್ತದೆ. ಬದುಕನ್ನು ದೇವರ ಸೇವೆಗೆಂದು ಸಮರ್ಪಿಸುವವರ ದೀಕ್ಷಾಸ್ನಾನ ಪ್ರತಿ ಸಮ್ಮೇಳನದ ಒಂದು ವೈಶಿಷ್ಟ್ಯ.

  • ಸಮ್ಮೇಳನಗಳು ಸಂಭ್ರಮ ಸಡಗರದ ಸಮಾರಂಭವಾಗಿವೆ ಏಕೆ?

  • ಸಮ್ಮೇಳನಕ್ಕೆ ಬರುವುದರಿಂದ ನಿಮಗೇನು ಪ್ರಯೋಜನ?