ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 6

ಯೆಹೋವನ ಸಾಕ್ಷಿಗಳೇಕೆ ಪರಸ್ಪರ ಸಾಹಚರ್ಯಕ್ಕೆ ಮಹತ್ವ ಕೊಡುತ್ತಾರೆ?

ಯೆಹೋವನ ಸಾಕ್ಷಿಗಳೇಕೆ ಪರಸ್ಪರ ಸಾಹಚರ್ಯಕ್ಕೆ ಮಹತ್ವ ಕೊಡುತ್ತಾರೆ?

ಮಡಗಾಸ್ಕರ್‌

ನಾರ್ವೆ

ಲೆಬನಾನ್‌

ಇಟಲಿ

ಮಳೆಯೇ ಇರಲಿ ಬಿಸಿಲೇ ಇರಲಿ. ಬೆಟ್ಟ ಗುಡ್ಡ ದಾಟಬೇಕಾಗಿರಲಿ ನಾವು ಕ್ರೈಸ್ತ ಕೂಟಗಳಿಗೆ ತಪ್ಪದೇ ಹಾಜರಾಗುತ್ತೇವೆ. ಬದುಕಿನಲ್ಲಿ ಎಷ್ಟೇ ಕಷ್ಟಗಳಿರಲಿ ಇಡೀ ದಿನ ಕೆಲಸ ಮಾಡಿ ಬಳಲಿರಲಿ ನಾವು ಮಾತ್ರ ಸಭೆಗೆ ಹಾಜರ್‌. ಇಷ್ಟೆಲ್ಲ ತೊಡಕುಗಳಿದ್ದರೂ ಯೆಹೋವನ ಸಾಕ್ಷಿಗಳು ಪರಸ್ಪರ ಸಾಹಚರ್ಯವನ್ನು ಇಷ್ಟಪಡುವುದೇಕೆ?

ಒಳಿತಿರುವುದರಿಂದ. ಸಭೆ ಸೇರುವವರು “ಪರಸ್ಪರ ಹಿತಚಿಂತಕರಾಗಿ” ಇರಬೇಕೆಂದು ಪೌಲ ಹೇಳಿದನು. (ಇಬ್ರಿಯ 10:24) ಅವನ ಮಾತಿನ ಅರ್ಥ ಸಭೆಗೆ ಬರುವವರು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳಬೇಕು, ಮುತುವರ್ಜಿ ಕಾಳಜಿ ವಹಿಸಬೇಕು ಎನ್ನುವುದೇ. ನಾವಿಂದು ಎದುರಿಸುತ್ತಿರುವ ಕಷ್ಟಗಳನ್ನು ಸಭೆಯಲ್ಲಿರುವ ಕೆಲವರು ಈಗಾಗಲೇ ಜಯಿಸಿ ಬಂದಿರಬಹುದು. ಅವರೊಂದಿಗೆ ಮಾತಾಡಿ ಅವರ ಅನುಭವವನ್ನು ತಿಳಿದುಕೊಳ್ಳುವುದರಿಂದ ಖಂಡಿತ ನಮಗೆ ಒಳಿತಾಗುತ್ತದೆ. ನಮ್ಮ ಕಷ್ಟಗಳನ್ನು ಜಯಿಸಲು ನೆರವಾಗುತ್ತದೆ.

ನಿಜ ಸ್ನೇಹಿತರು ಸಿಗುವುದರಿಂದ. ಸಭೆಯಾಗಿ ಕೂಡಿಬರುವ ನಾವು ಕೇವಲ ಪರಿಚಯಸ್ಥರಷ್ಟೇ ಅಲ್ಲ. ಅದಕ್ಕಿಂತಲೂ ಹೆಚ್ಚಾದ ಅತ್ಯಾಪ್ತ ಸ್ನೇಹ ಬಾಂಧವ್ಯ ನಮ್ಮಲ್ಲಿದೆ. ವಿನೋದ ವಿಹಾರ ಮುಂತಾದ ಬೇರೆ ಸಂದರ್ಭದಲ್ಲೂ ನಾವು ಒಟ್ಟುಗೂಡುತ್ತೇವೆ. ಇಂಥ ಸಾಹಚರ್ಯ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ನೆರವಾಗಿ ನಮ್ಮ ನಡುವಿನ ಪ್ರೀತಿ ಸಾಮರಸ್ಯವನ್ನು ಬಿಗಿಯಾಗಿಸುತ್ತದೆ. ಈ ನಮ್ಮ ಸ್ನೇಹಿತರಲ್ಲಿ ಯಾರಿಗಾದರೂ ಸಮಸ್ಯೆ ಎದುರಾದಲ್ಲಿ ನಾವು ಹೆಗಲಿಗೆ ಹೆಗಲಾಗಿರುತ್ತೇವೆ. (ಜ್ಞಾನೋಕ್ತಿ 17:17) ಸಭೆಗೆ ಬರುವ ಎಲ್ಲರೊಂದಿಗೆ ನಾವು ಭೇದಭಾವವಿಲ್ಲದೆ ಬೆರೆಯುತ್ತೇವೆ. ಹೀಗೆ ‘ಪರಸ್ಪರ ಹಿತವನ್ನು ಚಿಂತಿಸುವವರು’ ಆಗಿದ್ದೇವೆ.—1 ಕೊರಿಂಥ 12:25, 26.

ದೇವರ ಇಷ್ಟವನ್ನು ಮಾಡುತ್ತಿರುವವರ ಜೊತೆ ನೀವು ಗೆಳೆತನ ಬೆಳೆಸಿಕೊಳ್ಳಬೇಕು ಎನ್ನುವುದೇ ನಮ್ಮಾಶೆ. ಆ ರೀತಿಯ ಜನರನ್ನು ಯೆಹೋವನ ಸಾಕ್ಷಿಗಳ ಸಭೆಯಲ್ಲಿ ಕಾಣಬಹುದು. ನಮ್ಮೊಂದಿಗಿನ ಒಡನಾಟವನ್ನು ತುಂಡರಿಸುವಂಥ ಅನೇಕ ವಿಷಯಗಳು ನಿಮಗೆ ಎದುರಾಗಬಹುದಾದರೂ ನಮ್ಮೊಂದಿಗಿನ ಸ್ನೇಹ ಸಂಪರ್ಕ ಕಡಿದುಹೋಗದಿರಲಿ.

  • ನಾವೇಕೆ ನಮ್ಮ ಸಾಹಚರ್ಯಕ್ಕೆ ಮಹತ್ವ ಕೊಡುತ್ತೇವೆ?

  • ನಮ್ಮ ಸಭೆಗೆ ಯಾವಾಗ ಬರ್ತೀರಾ?