ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಅಧ್ಯಾಯ 14

ಪಯನೀಯರರಿಗಾಗಿ ಯಾವೆಲ್ಲ ಶಾಲೆಗಳಿವೆ?

ಪಯನೀಯರರಿಗಾಗಿ ಯಾವೆಲ್ಲ ಶಾಲೆಗಳಿವೆ?

ಅಮೆರಿಕ

ಗಿಲ್ಯಡ್‌ ಶಾಲೆ, ಪ್ಯಾಟರ್ಸನ್‌, ನ್ಯೂಯಾರ್ಕ್‌

ಪನಾಮ

ಅನೇಕ ವರ್ಷಗಳಿಂದಲೂ ದೇವಪ್ರಭುತ್ವಾತ್ಮಕ ಶಿಕ್ಷಣ ಯೆಹೋವನ ಸಾಕ್ಷಿಗಳ ಒಂದು ವೈಶಿಷ್ಟ್ಯತೆಯಾಗಿದೆ. ‘ತಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸಲಿಕ್ಕಾಗಿ’ ಯಾರು ತಮ್ಮನ್ನು ಸುವಾರ್ತೆ ಸಾರುವ ಕೆಲಸದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೋ ಅವರಿಗೆ ವಿಶೇಷ ತರಬೇತಿ ಕೊಡಲಾಗುತ್ತದೆ.—2 ತಿಮೊಥೆಯ 4:5.

ಪಯನೀಯರ್‌ ಸೇವಾ ಶಾಲೆ: ಒಬ್ಬ ಪಯನೀಯರ್‌ ಒಂದು ವರ್ಷದ ಸೇವೆಯನ್ನು ಪೂರ್ತಿಗೊಳಿಸಿದಾಗ ಪಯನೀಯರ್‌ ಸೇವಾ ಶಾಲೆಗೆ ಸೇರ್ಪಡೆಯಾಗುವ ಅವಕಾಶ ದೊರೆಯುತ್ತದೆ. ಅದು ಆರು ದಿನಗಳ ತರಬೇತಿ. ಹತ್ತಿರದ ರಾಜ್ಯಸಭಾಗೃಹದಲ್ಲಿ ನಡೆಯುತ್ತದೆ. ಈ ಶಾಲೆ ಪಯನೀಯರರು ಯೆಹೋವನಿಗೆ ಹೆಚ್ಚು ಆಪ್ತರಾಗಲು, ಸುವಾರ್ತೆ ಸಾರುವ ಬೇರೆ ಬೇರೆ ವಿಧಾನಗಳಲ್ಲಿ ನಿಪುಣರಾಗಲು, ನಂಬಿಗಸ್ತಿಕೆಯಿಂದ ಮಾಡುತ್ತಿರುವ ಸೇವೆಯನ್ನು ಮುಂದುವರಿಸಲು ನೆರವಾಗುತ್ತದೆ.

ರಾಜ್ಯ ಸೌವಾರ್ತಿಕರಿಗಾಗಿ ಶಾಲೆ: ಈ ಶಾಲೆಯ ಅವಧಿ ಎರಡು ತಿಂಗಳು. ಈ ಶಾಲೆಯು, ತಮ್ಮ ಊರನ್ನು ಬಿಟ್ಟು ಅಗತ್ಯವಿರುವಲ್ಲಿ ಹೋಗಿ ಸೇವೆಮಾಡಲು ಸಿದ್ಧರಿರುವ ಅನುಭವಸ್ಥ ಪಯನೀಯರರಿಗೆ ತರಬೇತಿ ಕೊಡುತ್ತದೆ. ಇವರು ಈ ಭೂಮಿಯಲ್ಲಿ ಜೀವಿಸಿದ ಮಹಾ ಸೌವಾರ್ತಿಕನಾದ ಯೇಸು ಕ್ರಿಸ್ತನನ್ನು ಅನುಕರಿಸುತ್ತಾರೆ. “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎನ್ನುವ ಮನೋಭಾವ ಅವರಲ್ಲಿದೆ. (ಯೆಶಾಯ 6:8; ಯೋಹಾನ 7:29) ಊರು ಬಿಟ್ಟು ಹೋಗುವುದು ಸುಲಭವೇನಲ್ಲ. ಸರಳ ಜೀವನ ನಡೆಸಬೇಕಾಗುತ್ತದೆ. ಅಲ್ಲಿನ ಸಂಸ್ಕೃತಿ, ಹವಾಮಾನ, ಊಟ ಎಲ್ಲವೂ ಬೇರೆಯೇ ಆಗಿರಬಹುದು. ಹೊಸ ಭಾಷೆಯನ್ನು ಕಲಿಯಬೇಕಾಗಬಹುದು. ಇದಕ್ಕೆಲ್ಲ ಹೊಂದಿಕೊಳ್ಳಲು ಅವರು ಸಿದ್ಧರಾಗಿರುತ್ತಾರೆ. ಈ ಶಾಲೆಯಿಂದ ಅವಿವಾಹಿತ ಸಹೋದರರು, ಅವಿವಾಹಿತ ಸಹೋದರಿಯರು ಹಾಗೂ ದಂಪತಿಗಳು ತರಬೇತಿ ಪಡೆಯುತ್ತಾರೆ. ವಿದ್ಯಾರ್ಥಿಗಳ ವಯೋಮಿತಿ 23⁠ರಿಂದ 65. ಈ ಶಾಲೆಯು ಅವರಿಗೆ ತಮ್ಮ ನೇಮಕವನ್ನು ನಿರ್ವಹಿಸಲು ಬೇಕಾಗುವ ಗುಣಗಳನ್ನು ಹಾಗೂ ಯೆಹೋವನಿಗೂ ಸಂಘಟನೆಗೂ ಹೆಚ್ಚು ಉಪಯುಕ್ತರಾಗಲಿಕ್ಕಾಗಿ ಬೇಕಾಗುವ ಕೌಶಲಗಳನ್ನು ಬೆಳೆಸಿಕೊಳ್ಳಲು ಸಹಾಯಮಾಡುತ್ತದೆ.

ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌: “ಗಿಲ್ಯಡ್‌” ಹೀಬ್ರು ಭಾಷೆಯ ಪದವಾಗಿದ್ದು “ಸಾಕ್ಷಿಗಾಗಿ ಹಾಕಿರುವ ಕುಪ್ಪೆ” ಎಂಬ ಅರ್ಥ ಅದಕ್ಕಿದೆ. ಇಸವಿ 1943⁠ರಿಂದ ಇಂದಿನವರೆಗೆ ಈ ಶಾಲೆಯ 8,000ಕ್ಕೂ ಹೆಚ್ಚು ಪದವೀಧರರನ್ನು ಮಿಷನರಿಗಳಾಗಿ ಕಳುಹಿಸಲಾಗಿದೆ. “ಭೂಮಿಯ ಕಟ್ಟಕಡೆಯ ವರೆಗೂ” ಸಾಕ್ಷಿ ಕೊಡುವುದರಲ್ಲಿ ಅವರು ಯಶಸ್ಸು ಪಡೆದಿದ್ದಾರೆ. (ಅಪೊಸ್ತಲರ ಕಾರ್ಯಗಳು 13:47) ಉದಾಹರಣೆಗೆ, ಪೆರು ದೇಶಕ್ಕೆ ನಮ್ಮ ಮಿಷನರಿಗಳು ಕಾಲಿಡುವ ಮುನ್ನ ಅಲ್ಲಿ ಒಂದು ಸಭೆ ಕೂಡ ಇರಲಿಲ್ಲ. ಆದರೆ ಈಗ 1,000ಕ್ಕಿಂತ ಹೆಚ್ಚು ಸಭೆಗಳಿವೆ! ನಮ್ಮ ಮಿಷನರಿಗಳು ಜಪಾನಿನಲ್ಲಿ ಸೇವೆ ಆರಂಭಿಸಿದಾಗ ಅಲ್ಲಿದ್ದ ಯೆಹೋವನ ಸಾಕ್ಷಿಗಳು ಹತ್ತಕ್ಕಿಂತಲೂ ಕಡಿಮೆ. ಈಗ ಆ ಸಂಖ್ಯೆ 2 ಲಕ್ಷವನ್ನು ಮೀರಿದೆ. ಗಿಲ್ಯಡ್‌ ಶಾಲೆಯ ಅವಧಿ ಐದು ತಿಂಗಳು. ಇದರಲ್ಲಿ ವಿದ್ಯಾರ್ಥಿಗಳು ದೇವರ ವಾಕ್ಯವಾದ ಬೈಬಲಿನ ಸಮಗ್ರ ಅಧ್ಯಯನ ಮಾಡುತ್ತಾರೆ. ಈ ಶಾಲೆಗೆ ಯಾರನ್ನು ಆಮಂತ್ರಿಸಲಾಗುತ್ತದೆ? ವಿಶೇಷ ಪಯನೀಯರರು, ಮಿಷನರಿಗಳು, ಬ್ರಾಂಚ್‌ ಆಫೀಸಿನಲ್ಲಿ ಸೇವೆ ಮಾಡುವವರು ಹಾಗೂ ಸರ್ಕಿಟ್‌ ಸೇವೆಯಲ್ಲಿರುವವರು. ಲೋಕವ್ಯಾಪಕ ಕೆಲಸವನ್ನು ಹೆಚ್ಚು ಮಾಡಲು ಹಾಗೂ ಸುಗಮವಾಗಿ ನಡೆಸಲು ನೆರವಾಗುವಂತೆ ಈ ಶಾಲೆ ಅವರಿಗೆ ತರಬೇತಿ ನೀಡುತ್ತದೆ.

  • ಪಯನೀಯರ್‌ ಸೇವಾ ಶಾಲೆಯ ಉದ್ದೇಶವೇನು?

  • ‘ರಾಜ್ಯ ಸೌವಾರ್ತಿಕರ ಶಾಲೆ’ ಯಾರಿಗಾಗಿ?