ನಾನು ನನ್ನ ದರ್ಜೆ (ಗ್ರೇಡ್)ಗಳನ್ನು ಹೇಗೆ ಉತ್ತಮಗೊಳಿಸಬಲ್ಲೆ?
ಅಧ್ಯಾಯ 18
ನಾನು ನನ್ನ ದರ್ಜೆ (ಗ್ರೇಡ್)ಗಳನ್ನು ಹೇಗೆ ಉತ್ತಮಗೊಳಿಸಬಲ್ಲೆ?
‘ನೀವು ಅತ್ಯಂತ ಹೆಚ್ಚು ಚಿಂತೆಮಾಡುವುದು ಯಾವುದರ ಕುರಿತಾಗಿ?’ ಎಂದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ಅನೇಕರಿಗೆ ಕೇಳಿದಾಗ, “ದರ್ಜೆಗಳು” ಎಂದು 51 ಪ್ರತಿಶತ ವಿದ್ಯಾರ್ಥಿಗಳು ಹೇಳಿದರು!
ಯುವ ಜನರ ನಡುವೆ ವ್ಯಾಕುಲತೆಯ ಪ್ರಧಾನ ಮೂಲವು, ಶಾಲಾ ದರ್ಜೆಗಳಾಗಿವೆ ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. ದರ್ಜೆಗಳು, ಪದವಿಪ್ರಾಪ್ತಿ ಮತ್ತು ಹಿಂದುಳಿಯುವುದರ ನಡುವಿನ ವ್ಯತ್ಯಾಸ, ಒಳ್ಳೇ ಸಂಬಳ ದೊರಕುವ ಕೆಲಸವನ್ನು ಪಡೆದುಕೊಳ್ಳುವುದು ಮತ್ತು ಕನಿಷ್ಠ ಪ್ರಮಾಣದ ವೇತನವನ್ನು ಮಾತ್ರವೇ ಪಡೆದುಕೊಳ್ಳುವುದರ ನಡುವಿನ ವ್ಯತ್ಯಾಸ, ಹೆತ್ತವರ ಹೊಗಳಿಕೆಯನ್ನು ಪಡೆದುಕೊಳ್ಳುವುದು ಮತ್ತು ಅವರ ಕೋಪಕ್ಕೆ ಈಡಾಗುವುದರ ನಡುವಿನ ವ್ಯತ್ಯಾಸವನ್ನು ಅರ್ಥೈಸಬಲ್ಲವು. ದರ್ಜೆಗಳಿಗೆ ಹಾಗೂ ಕಿರುಪರೀಕ್ಷೆಗಳಿಗೆ ಅವುಗಳದ್ದೇ ಆದ ಸ್ಥಾನವಿದೆಯೆಂಬುದು ಒಪ್ಪತಕ್ಕ ವಿಷಯ. ಅಷ್ಟೇಕೆ, ಅನೇಕವೇಳೆ ಯೇಸು ಕ್ರಿಸ್ತನು, ನಿರ್ದಿಷ್ಟ ವಿಷಯಗಳ ಕುರಿತಾದ ತನ್ನ ಶಿಷ್ಯರ ತಿಳುವಳಿಕೆಯನ್ನು ಪರೀಕ್ಷಿಸಿದನು. (ಲೂಕ 9:18) ಮತ್ತು ಶಾಲೆಗಳಲ್ಲಿನ ಪ್ರಮಾಣ ಹಾಗೂ ಅಂದಾಜು (ಇಂಗ್ಲಿಷ್) ಎಂಬ ಪುಸ್ತಕವು ಹೇಳುವಂತೆ: “ಕಿರುಪರೀಕ್ಷೆಯ ಫಲಿತಾಂಶಗಳು, ವಿದ್ಯಾರ್ಥಿಗಳಲ್ಲಿ ಒಬ್ಬೊಬ್ಬರ ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳ ಕ್ಷೇತ್ರಗಳನ್ನು ಪ್ರಕಟಪಡಿಸಬಲ್ಲವು ಮತ್ತು ಭವಿಷ್ಯತ್ತಿನ ಅಧ್ಯಯನಕ್ಕಾಗಿ ಪ್ರಚೋದನಾತ್ಮಕ ಸಾಧನಗಳಾಗಿ ಕಾರ್ಯನಡಿಸಬಲ್ಲವು.” ನಿಮ್ಮ ದರ್ಜೆಗಳು, ನೀವು ಶಾಲೆಯಲ್ಲಿ ಹೇಗೆ ಕಾರ್ಯನಡಿಸುತ್ತಿದ್ದೀರಿ—ಹೆಚ್ಚು ಉತ್ತಮವಾಗಿಯೊ ಹೆಚ್ಚು ಕೆಟ್ಟದ್ದಾಗಿಯೊ—ಎಂಬುದರ ಪರಿಕಲ್ಪನೆಯನ್ನು ನಿಮ್ಮ ಹೆತ್ತವರಿಗೆ ನೀಡಲು ಕಾರ್ಯನಡಿಸಬಲ್ಲವು.
ಸಮತೂಕವನ್ನು ಕಂಡುಕೊಳ್ಳುವುದು
ಆದರೂ, ದರ್ಜೆಗಳ ಕುರಿತಾದ ವಿಪರೀತಾಸಕ್ತಿಯು, ದುರ್ಬಲಗೊಳಿಸುವ ಒತ್ತಡಗಳನ್ನು ಸೃಷ್ಟಿಸಿ, ತೀವ್ರ ಸ್ಪರ್ಧೆಯನ್ನು ಹೊತ್ತಿಸಬಲ್ಲದು. ತರುಣಾವಸ್ಥೆಯ ಕುರಿತಾದ ಒಂದು ಪಠ್ಯಪುಸ್ತಕವು ಗಮನಿಸುವುದೇನಂದರೆ, ಕಾಲೆಜ್‌ಗೆ ಹೋಗುವ ವಿದ್ಯಾರ್ಥಿಗಳು ವಿಶೇಷವಾಗಿ, “ಕಲಿಯುವುದಕ್ಕಿಂತಲೂ ಹೆಚ್ಚಾಗಿ ದರ್ಜೆಗಳು ಮತ್ತು ತರಗತಿ ರ್ಯಾಂಕ್‌ಗಳ ಮೇಲೆ ಒತ್ತುಹಾಕುವ ಸ್ಪರ್ಧಾತ್ಮಕ ಅವ್ಯವಸ್ಥೆಯಲ್ಲಿ ಸಿಕ್ಕಿಕೊಳ್ಳ”ಸಾಧ್ಯವಿದೆ. ಫಲಿತಾಂಶವಾಗಿ, ಡಾ. ವಿಲಿಯಮ್ ಗ್ಲ್ಯಾಸರ್‌ರನ್ನು ಉಲ್ಲೇಖಿಸುವುದಾದರೆ, ವಿದ್ಯಾರ್ಥಿಗಳು “ಶಾಲೆಯ ಕಿರುಪರೀಕ್ಷೆಯಲ್ಲಿ ಯಾವ ವಿಷಯಗಳು ಬರಲಿಕ್ಕಿವೆ ಎಂಬುದನ್ನು ಕೇಳಲು ತೀರ ಆರಂಭದಲ್ಲಿಯೇ ಕಲಿಯುತ್ತಾರೆ ಮತ್ತು . . . ಆ ವಿಷಯವನ್ನು ಮಾತ್ರವೇ ಅಧ್ಯಯನಿಸುತ್ತಾರೆ.”
ಪ್ರಸಂಗಿ 4:4) ಪ್ರಾಪಂಚಿಕ ಐಶ್ವರ್ಯಗಳಿಗಾಗಲಿ ಶೈಕ್ಷಣಿಕ ಗೌರವಕ್ರಿಯೆಗಳಿಗಾಗಲಿ, ತೀವ್ರ ಸ್ಪರ್ಧೆಯು ನಿರರ್ಥಕವಾಗಿದೆ. ದೇವ ಭಯವುಳ್ಳ ಯುವ ಜನರು ಶಾಲೆಯಲ್ಲಿ ಶ್ರದ್ಧಾಪೂರ್ವಕವಾಗಿ ಕಾರ್ಯನಡಿಸುವ ಅಗತ್ಯವನ್ನು ಕಾಣುತ್ತಾರೆ. ಆದರೆ ಜೀವಿತದಲ್ಲಿ ಶಿಕ್ಷಣವನ್ನು ಅತ್ಯಂತ ಪ್ರಮುಖ ವಿಷಯವನ್ನಾಗಿ ಮಾಡುವುದಕ್ಕೆ ಬದಲಾಗಿ, ಅವರು ತಮ್ಮ ಪ್ರಾಪಂಚಿಕ ಅಗತ್ಯಗಳಿಗಾಗಿ ಪರಾಮರಿಕೆ ಮಾಡುವಂತೆ ದೇವರ ಮೇಲೆ ಭರವಸೆಯಿಡುತ್ತಾ, ಆತ್ಮಿಕ ಅಭಿರುಚಿಗಳನ್ನು ಬೆನ್ನಟ್ಟುತ್ತಾರೆ.—ಮತ್ತಾಯ 6:33; 22ನೆಯ ಅಧ್ಯಾಯದಲ್ಲಿ ಜೀವನೋದ್ಯೋಗಗಳನ್ನು ಆರಿಸಿಕೊಳ್ಳುವುದು ಎಂಬ ವಿಷಯವನ್ನು ನೋಡಿರಿ.
ರಾಜ ಸೊಲೊಮೋನನು ಎಚ್ಚರಿಸಿದ್ದು: “ಸಮಸ್ತಪ್ರಯಾಸವನ್ನೂ ಕೈಗೂಡುವ ಸಕಲ ಕಾರ್ಯವನ್ನೂ ನೋಡಿ ಇವು ಪರಸ್ಪರ ಮತ್ಸರಕ್ಕೆ ಆಸ್ಪದವೆಂದು ಗ್ರಹಿಸಿಕೊಂಡೆನು. ಇದೂ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ.” (ಇದಲ್ಲದೆ ಶಿಕ್ಷಣವು, ಕಿರುಪರೀಕ್ಷೆಗಳಲ್ಲಿ ಸಾಧ್ಯವಾದಷ್ಟು ಅತ್ಯಂತ ಹೆಚ್ಚು ಅಂಕಗಳನ್ನು ಗಳಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಅರ್ಥೈಸುತ್ತದೆ. ಇದರ ಅರ್ಥ, ಯಾವುದನ್ನು ಸೊಲೊಮೋನನು “ಯೋಚನಾ ಸಾಮರ್ಥ್ಯ” (NW)—ಕಚ್ಚಾ ಸಮಾಚಾರವನ್ನು ಪಡೆದುಕೊಂಡು, ಅದರಿಂದ ಸುದೃಢವಾದ, ಪ್ರಾಯೋಗಿಕ ನಿರ್ಣಯಗಳನ್ನು ಹೊರಸೆಳೆಯುವ ಕೌಶಲ—ಎಂದು ಕರೆದನೋ ಅದನ್ನು ವಿಕಸಿಸಿಕೊಳ್ಳುವುದಾಗಿದೆ. (ಜ್ಞಾನೋಕ್ತಿ 1:4) ಊಹಿಸಿಕೊಳ್ಳುವುದು, ಕಂಠಪಾಠಮಾಡುವುದು, ಅಥವಾ ಕಾಪಿಮಾಡುವ ಮೂಲಕವಾಗಿಯೂ ಉತ್ತೀರ್ಣ ದರ್ಜೆಗಳನ್ನು ಪಡೆದುಕೊಳ್ಳುವ ಒಬ್ಬ ಯೌವನಸ್ಥನು, ನಿಜವಾಗಿಯೂ ಆಲೋಚಿಸುವ ವಿಧಾನವನ್ನು ಎಂದಿಗೂ ಕಲಿಯುವುದಿಲ್ಲ. ಮತ್ತು ತದನಂತರದ ಸಮಯದಲ್ಲಿ ಒಂದು ಚೆಕ್‌ಪುಸ್ತಕದ ಲೆಕ್ಕಾಚಾರವನ್ನು ಸರಿದೂಗಿಸಲು ನೀವು ಅಶಕ್ತರಾಗಿರುವ ಸ್ಥಿತಿಯಲ್ಲಿ ನಿಮ್ಮನ್ನು ಕಂಡುಕೊಳ್ಳುವುದಾದರೆ, ಗಣಿತದಲ್ಲಿ ಪಡೆದ ಉಚ್ಚ ದರ್ಜೆಯಿಂದ ಒಳಿತೇನು?
ಆದುದರಿಂದ ನೀವು ದರ್ಜೆಗಳನ್ನು, ಅವೇ ಅಂತಿಮವೊ ಎಂಬಂತೆ ಅಲ್ಲ, ಬದಲಾಗಿ ಶಾಲೆಯಲ್ಲಿನ ನಿಮ್ಮ ಪ್ರಗತಿಯನ್ನು ಅಳೆಯುವ ಒಂದು ಸಹಾಯಕರ ಸಾಧನದೋಪಾದಿ ವೀಕ್ಷಿಸುವುದು ಪ್ರಾಮುಖ್ಯವಾಗಿದೆ. ಹಾಗಾದರೆ, ನಿಮ್ಮ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುವಂತಹ ದರ್ಜೆಗಳನ್ನು ನೀವು ಹೇಗೆ ಗಳಿಸಸಾಧ್ಯವಿದೆ?
ಕಲಿಯುವುದಕ್ಕಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳಿರಿ!
ಶಿಕ್ಷಕಿಯಾದ ಲಿಂಡ ನೀಲ್ಸನ್‌ರಿಗನುಸಾರ, ತೀರ ಕಡಿಮೆ ಅಂಕಗಳನ್ನು ಪಡೆದುಕೊಳ್ಳುವ ವಿದ್ಯಾರ್ಥಿಗಳು, “ತಮ್ಮ ನಿಯಂತ್ರಣಕ್ಕೆ ನಿಲುಕದ ಈ ಮೂಲಗಳ ಮೇಲೆ ತಮ್ಮ ನ್ಯೂನ [ಶಾಲಾ] ನಿರ್ವಹಣೆಗಳ ದೂರನ್ನು ಹೊರಿಸುವ ಪ್ರವೃತ್ತಿಯುಳ್ಳವರಾಗಿರುತ್ತಾರೆ: ತರವಲ್ಲದ ಕಿರುಪರೀಕ್ಷಾ ಪ್ರಶ್ನೆಗಳು, ಪೂರ್ವಕಲ್ಪಿತಾಭಿಪ್ರಾಯವಿರುವ ಒಬ್ಬ ಶಿಕ್ಷಕಿ, ದುರದೃಷ್ಟ, ವಿಧಿ, ಹವಾಗುಣ.” ಆದರೂ ಬೈಬಲ್ ಹೇಳುವುದು: “ಸೋಮಾರಿಯು ತನ್ನನ್ನು ಅಪೇಕ್ಷೆಯುಳ್ಳವನನ್ನಾಗಿ ಜ್ಞಾನೋಕ್ತಿ 13:4, NW) ಹೌದು, ಸೋಮಾರಿತನವು ಅನೇಕವೇಳೆ ಕಡಿಮೆ ದರ್ಜೆಗಳನ್ನು ಪಡೆದುಕೊಳ್ಳುವುದಕ್ಕೆ ನಿಜವಾದ ಕಾರಣವಾಗಿದೆ.
ತೋರಿಸಿಕೊಳ್ಳುತ್ತಿದ್ದಾನೆ, ಆದರೆ ಅವನ ಪ್ರಾಣದಲ್ಲೇನೂ ಇಲ್ಲ.” (ಹಾಗಿದ್ದರೂ, ಒಳ್ಳೆಯ ವಿದ್ಯಾರ್ಥಿಗಳು ತಮ್ಮ ಕಲಿಯುವಿಕೆಗಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ’ಟೀನ್ ಪತ್ರಿಕೆಯು ಒಮ್ಮೆ, ಭಾರಿ ಅಂಕಗಳನ್ನು ಗಳಿಸುವ ಕೆಲವು ಪ್ರೌಢ (ಮಾಧ್ಯಮಿಕ) ಶಾಲಾ ವಿದ್ಯಾರ್ಥಿಗಳ ಸಮೀಕ್ಷೆ ನಡೆಸಿತು. ಅವರ ರಹಸ್ಯವೇನು? “ವೈಯಕ್ತಿಕ ಪ್ರಚೋದನೆಯು ನಿಮಗೆ ಮುಂದುವರಿಯಲು ಸಹಾಯ ಮಾಡುತ್ತದೆ” ಎಂದನು ಒಬ್ಬನು. “ನಿಮ್ಮನ್ನು ಒಂದು ಕಾರ್ಯತಖ್ತೆಯಲ್ಲಿರಿಸಿಕೊಳ್ಳುವುದು ಹಾಗೂ ನಿಮ್ಮ ಸಮಯವನ್ನು ವ್ಯವಸ್ಥಾಪಿಸಿಕೊಳ್ಳುವುದು” ಎಂದು ಇನ್ನೊಬ್ಬನು ಹೇಳಿದನು. “ಸ್ವತಃ ನಿಮಗಾಗಿ ನೀವು ಗುರಿಗಳನ್ನಿಡಬೇಕು” ಎಂದು ಮತ್ತೊಬ್ಬನು ಹೇಳಿದನು. ಹೌದು, ನಿಮ್ಮ ದರ್ಜೆಗಳು ಎಷ್ಟು ಒಳ್ಳೆಯವುಗಳಾಗಿವೆ ಎಂಬುದು, ನಿಮ್ಮ ನಿಯಂತ್ರಣಕ್ಕೆ ನಿಲುಕದ ಅಂಶಗಳ ಮೇಲಲ್ಲ, ಬದಲಾಗಿ ನಿಮ್ಮ ಮೇಲೆ ಹೆಚ್ಚಾಗಿ ಅವಲಂಬಿಸಿದೆ—ಶಾಲೆಯಲ್ಲಿ ನೀವು ಎಷ್ಟು ಕಷ್ಟಪಟ್ಟು ಅಭ್ಯಾಸಿಸಲು ಹಾಗೂ ನಿಮ್ಮನ್ನು ತೊಡಗಿಸಿಕೊಳ್ಳಲು ಸಿದ್ಧಮನಸ್ಕರಾಗಿದ್ದೀರಿ ಎಂಬುದರ ಮೇಲೆಯೇ.
‘ಆದರೆ ನಾನು ಅಭ್ಯಾಸ ಮಾಡುತ್ತೇನೆ’
ಕೆಲವು ಯುವ ಜನರು ಹೀಗೆ ಪ್ರತಿಪಾದಿಸಬಹುದು. ತಾವು ಈಗಾಗಲೇ ತುಂಬ ಕಷ್ಟಪಟ್ಟು ಕೆಲಸಮಾಡುತ್ತಿದ್ದೇವಾದರೂ, ಯಾವ ಫಲಿತಾಂಶಗಳೂ ದೊರಕುತ್ತಿಲ್ಲ ಎಂದು ಅವರು ಪ್ರಾಮಾಣಿಕವಾಗಿ ಭಾವಿಸುತ್ತಾರೆ. ಹಾಗಿದ್ದರೂ, ಕೆಲವೊಂದು ವರ್ಷಗಳ ಹಿಂದೆ, ಸ್ಟ್ಯಾನ್‌ಫರ್ಡ್ ವಿಶ್ವವಿದ್ಯಾನಿಲಯ (ಅಮೆರಿಕ)ದಲ್ಲಿನ ಸಂಶೋಧಕರು, ಸುಮಾರು 770 ವಿದ್ಯಾರ್ಥಿಗಳ ಸಮೀಕ್ಷೆ ನಡೆಸಿ, ತಮ್ಮ ಶಾಲಾಕೆಲಸದಲ್ಲಿ ಅವರು ಎಷ್ಟು ಪ್ರಯತ್ನವನ್ನು ಮಾಡುತ್ತಿದ್ದರೆಂದು ಅವರಿಗನಿಸುತ್ತದೆ ಎಂಬುದಾಗಿ ಅವರನ್ನು ಕೇಳಿದರು. ಸಾಕಷ್ಟು ವಿಲಕ್ಷಣವೆಂಬಂತೆ, ಕಡಿಮೆ ದರ್ಜೆಗಳಿರುವ ವಿದ್ಯಾರ್ಥಿಗಳು, ಇತರರು ಕಾರ್ಯನಡಿಸಿದಷ್ಟೇ ಹೆಚ್ಚು ಪರಿಶ್ರಮದಿಂದ ತಾವೂ ಕಾರ್ಯನಡಿಸಿದೆವೆಂದು ಎಣಿಸಿದರು! ಆದರೂ ಅವರ ಅಭ್ಯಾಸ ರೂಢಿಗಳು ಪರೀಕ್ಷಿಸಲ್ಪಟ್ಟಾಗ, ವಾಸ್ತವವಾಗಿ ಅವರು ಅತ್ಯಂತ ಹೆಚ್ಚು ಅಂಕಗಳನ್ನು ಗಳಿಸುವ ತಮ್ಮ ಸಹಪಾಠಿಗಳಿಗಿಂತ ತೀರ ಕಡಿಮೆ ಶಾಲಾಮನೆಕೆಲಸವನ್ನು ಮಾಡಿದ್ದರೆಂಬುದು ಕಂಡುಹಿಡಿಯಲ್ಪಟ್ಟಿತು.
ಪಾಠವೇನು? ನೀವು ಸಹ, ನೀವು ಆಲೋಚಿಸುವಷ್ಟು ಹೆಚ್ಚು ಪರಿಶ್ರಮಪಟ್ಟು ಅಭ್ಯಾಸಮಾಡುತ್ತಿಲ್ಲದಿರಬಹುದು. ಮತ್ತು ಇದರಿಂದಾಗಿ ಕೆಲವು ಬದಲಾವಣೆಗಳನ್ನು ಕ್ರಮಾನುಗತವಾಗಿ ಮಾಡಬೇಕಾಗಿರಬಹುದು. ಜರ್ನಲ್ ಆಫ್ ಎಡ್ಯುಕೇಷನಲ್ ಸೈಕಾಲೊಜಿಯಲ್ಲಿನ ಲೇಖನವೊಂದು ತೋರಿಸಿತೇನಂದರೆ, ಕೇವಲ “ಶಾಲಾಮನೆಕೆಲಸದಲ್ಲಿ ವ್ಯಯಿಸಲ್ಪಡುವ ಸಮಯದಲ್ಲಿ ವೃದ್ಧಿಯನ್ನು” ಮಾಡುವುದೇ, “ಪ್ರೌಢ ಶಾಲೆಯಲ್ಲಿನ ವಿದ್ಯಾರ್ಥಿಯ ದರ್ಜೆಗಳ ಮೇಲೆ ಸಕಾರಾತ್ಮಕವಾದ ಪರಿಣಾಮವನ್ನು ಹೊಂದಿದೆ.” ವಾಸ್ತವದಲ್ಲಿ, “ವಾರವೊಂದಕ್ಕೆ 1ರಿಂದ 3 ತಾಸುಗಳ ಶಾಲಾಮನೆಕೆಲಸವನ್ನು ಮಾಡುವುದರಿಂದ, ಸರಾಸರಿ ಕಡಿಮೆ ಸಾಮರ್ಥ್ಯವಿರುವ ವಿದ್ಯಾರ್ಥಿಯು, ಯಾರು ಶಾಲಾಮನೆಕೆಲಸವನ್ನು ಮಾಡುವುದಿಲ್ಲವೋ ಆ ಸರಾಸರಿ ಸಾಮರ್ಥ್ಯವಿರುವ ವಿದ್ಯಾರ್ಥಿಯೊಂದಿಗೆ ಸಮಪ್ರಮಾಣದ ದರ್ಜೆಗಳನ್ನು ಪಡೆದುಕೊಳ್ಳಬಲ್ಲನು.”
1 ಕೊರಿಂಥ 9:27) ತದ್ರೀತಿಯಲ್ಲಿ ನೀವು ನಿಮ್ಮನ್ನು ಕಟ್ಟುನಿಟ್ಟಿಗೊಳಪಡಿಸಿಕೊಳ್ಳುವ ಕಾರ್ಯನೀತಿಗೆ—ವಿಶೇಷವಾಗಿ ಟಿವಿ ಅಥವಾ ಇತರ ಅಪಕರ್ಷಣೆಗಳು, ಅಭ್ಯಾಸಮಾಡುವುದರಿಂದ ನಿಮ್ಮ ಗಮನವನ್ನು ಸುಲಭವಾಗಿ ಬೇರೆಡೆಗೆ ತಿರುಗಿಸಬಲ್ಲವಾದರೆ—ಒಳಪಡಿಸಿಕೊಳ್ಳಬೇಕಾಗಬಹುದು. “ಶಾಲಾಮನೆಕೆಲಸವು ಮಾಡಲ್ಪಡುವ ತನಕ ಟಿವಿ ಇಲ್ಲ!” ಎಂದು ಹೇಳುವ ಸೂಚನೆಯನ್ನು ಟಿವಿಯ ಮೇಲೆ ಹಾಕುವುದನ್ನೂ ನೀವು ಪ್ರಯತ್ನಿಸಬಹುದು.
ಅಪೊಸ್ತಲ ಪೌಲನು ತನ್ನ ಗುರಿಗಳನ್ನು ತಲಪಲಿಕ್ಕಾಗಿ, ಸಾಂಕೇತಿಕವಾಗಿ ‘ತನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳ’ಬೇಕಾಗಿತ್ತು. (ನಿಮ್ಮ ಅಭ್ಯಾಸದ ಪರಿಸರ
ಅಭ್ಯಾಸಕ್ಕಾಗಿಯೇ ಬದಿಗಿರಿಸಲ್ಪಡುವ ಪ್ರಶಾಂತವಾದ ಸ್ಥಳವು ನಮಗಿರುವುದಾದರೆ, ನಮ್ಮಲ್ಲಿ ಅಧಿಕಾಂಶ ಮಂದಿ ಪ್ರಯೋಜನ ಪಡೆದುಕೊಳ್ಳುವೆವು. ನೀವು ಒಂದೇ ಕೋಣೆಯಲ್ಲಿ ಇರುವುದಾದರೆ ಅಥವಾ ನಿಮ್ಮ ಮನೆಯಲ್ಲಿ ಜಾಗವು ಚಿಕ್ಕದಾಗಿರುವುದಾದರೆ, ಇದ್ದುದರಲ್ಲಿಯೇ ಹೊಂದಿಕೊಂಡುಹೋಗಿ! ಬಹುಶಃ ಅಡಿಗೆಮನೆ ಅಥವಾ ಯಾರಾದರೊಬ್ಬರ ಮಲಗುವಕೋಣೆಯನ್ನು, ಪ್ರತಿದಿನ ಸಾಯಂಕಾಲದಂದು ಒಂದು ತಾಸು ಅಥವಾ ಹೆಚ್ಚಿನ ಸಮಯದ ತನಕ, ನಿಮ್ಮ ಅಭ್ಯಾಸ ಕ್ಷೇತ್ರವಾಗಿ ಮಾಡಿಕೊಳ್ಳಸಾಧ್ಯವಿದೆ. ಅಥವಾ ಕೊನೆಯ ಪ್ರಯತ್ನವಾಗಿ, ಒಂದು ಸಾರ್ವಜನಿಕ ಗ್ರಂಥಾಲಯ ಅಥವಾ ಸ್ನೇಹಿತರೊಬ್ಬರ ಮನೆಯನ್ನು ಉಪಯೋಗಿಸಲು ಪ್ರಯತ್ನಿಸಿರಿ.
ಸಾಧ್ಯವಿರುವಲ್ಲಿ, ನಿಮ್ಮ ಕೆಲಸವನ್ನು ಸುತ್ತಲೂ ಇಟ್ಟುಕೊಳ್ಳಲಿಕ್ಕಾಗಿ, ಬಹಳಷ್ಟು ಜಾಗವಿರುವ ಒಂದು ಡೆಸ್ಕ್ ಅಥವಾ ಮೇಜನ್ನು ಉಪಯೋಗಿಸಿರಿ. ಪೆನ್ಸಿಲ್‌ಗಳು ಹಾಗೂ ಕಾಗದದಂತಹ ವಸ್ತುಗಳನ್ನು ಕೈಗೆಟುಕುವಂತೆ ಇಡಿರಿ, ಇದರಿಂದಾಗಿ ನೀವು ಆಗಿಂದಾಗ್ಗೆ ಎದ್ದೇಳಬೇಕಾಗಿರುವುದಿಲ್ಲ. ಮತ್ತು ಟಿವಿ ಅಥವಾ ರೇಡಿಯೊ ಅನ್ನು ಆನ್ ಮಾಡಿಡುವುದು, ಹಾಗೆಯೇ ಟೆಲಿಫೋನ್ ಕರೆಗಳು ಹಾಗೂ ಭೇಟಿನೀಡುವಿಕೆಗಳು, ಸಾಮಾನ್ಯವಾಗಿ ಗಮನವನ್ನು ಕೇಂದ್ರೀಕರಿಸುವುದರ ವಿರುದ್ಧ ಕಾರ್ಯನಡಿಸುತ್ತವೆ ಎಂದು ಹೇಳಲು ವಿಷಾದಿಸುತ್ತೇವೆ.
ನಿಮಗೆ ಸಾಕಾಗುವಷ್ಟು, ಹೆಚ್ಚು ಝಳಬಡಿಯದ ಬೆಳಕಿನ ಸೌಕರ್ಯವಿದೆ ಎಂಬುದನ್ನೂ ಖಚಿತಪಡಿಸಿಕೊಳ್ಳಿರಿ. ಒಳ್ಳೆಯ ಬೆಳಕಿನ ಸೌಕರ್ಯವು, ಅಭ್ಯಾಸದ ಆಯಾಸವನ್ನು ಕಡಿಮೆಗೊಳಿಸುತ್ತದೆ ಮತ್ತು ನಿಮ್ಮ ಕಣ್ಣುಗಳನ್ನೂ ಸಂರಕ್ಷಿಸುತ್ತದೆ. ಮತ್ತು ಸಾಧ್ಯವಿರುವಲ್ಲಿ, ವಾಯುಸಂಚಾರವನ್ನೂ ಕೋಣೆಯ ಉಷ್ಣತೆಯನ್ನೂ ಪರೀಕ್ಷಿಸಿರಿ. ಒಂದು ಬೆಚ್ಚಗಿನ ಕೋಣೆಗಿಂತಲೂ, ತಣ್ಣನೆಯ ಕೋಣೆಯೊಂದು ಹೆಚ್ಚು ಚೈತನ್ಯದಾಯಕ ಅಭ್ಯಾಸ ಪರಿಸರವನ್ನು ಒದಗಿಸುತ್ತದೆ.
ನೀವು ಅಭ್ಯಾಸಿಸುವ ಮನೋಸ್ಥಿತಿಯಲ್ಲೇ ಇಲ್ಲದಿರುವುದಾದರೆ ಆಗೇನು? ಜೀವಿತವು ನಾವು
ನಮ್ಮ ಮನೋಸ್ಥಿತಿಗಳಲ್ಲಿ ಲೋಲುಪರಾಗುವ ಸುಖವನ್ನು ಅನುಮತಿಸುವುದು ವಿರಳ. ಐಹಿಕ ಉದ್ಯೋಗದ ಸ್ಥಳದಲ್ಲಿ, ನಿಮಗೆ ಕೆಲಸ ಮಾಡುವ ಮನೋಸ್ಥಿತಿ ಇರಲಿ ಅಥವಾ ಇಲ್ಲದಿರಲಿ, ನೀವು ಪ್ರತಿ ದಿನ ಕೆಲಸಮಾಡಲೇಬೇಕು. ಆದುದರಿಂದ ಶಾಲಾಮನೆಕೆಲಸವನ್ನು, ಸ್ವಶಿಸ್ತಿನಲ್ಲಿನ ಒಂದು ಅಭ್ಯಾಸವಾಗಿ, ತದನಂತರದ ಕೆಲಸದ ಅನುಭವಕ್ಕಾಗಿರುವ ಪೂರ್ವಪ್ರಯೋಗವಾಗಿ ದೃಷ್ಟಿಸಿರಿ. ಅದರ ಕುರಿತು ವ್ಯವಹಾರೋಚಿತರಾಗಿರಿ. ಒಬ್ಬ ಶಿಕ್ಷಕನು ಸಲಹೆ ನೀಡಿದ್ದು: “ಸಾಧ್ಯವಿರುವಲ್ಲಿ, ಅಭ್ಯಾಸಿಸುವಿಕೆಯನ್ನು ಪ್ರತಿ ದಿನ ಅದೇ ಸ್ಥಳದಲ್ಲಿ ಮತ್ತು ಅದೇ ಸಮಯದಲ್ಲಿ ಮಾಡಬೇಕು. ಹೀಗೆ, ಕ್ರಮವಾದ ಅಭ್ಯಾಸವು ಒಂದು ಹವ್ಯಾಸವಾಗುತ್ತದೆ, ಮತ್ತು . . . ಅಭ್ಯಾಸಕ್ಕೆ ನಿಮ್ಮ ಪ್ರತಿರೋಧವನ್ನು ಕಡಿಮೆಗೊಳಿಸುತ್ತದೆ.”ನಿಮ್ಮ ಅಭ್ಯಾಸದ ನಿಯತಕ್ರಮ
ಫಿಲಿಪ್ಪಿ 3:16ರಲ್ಲಿ (NW), ಪೌಲನು ಕ್ರೈಸ್ತರಿಗೆ “ಅದೇ ನಿಯತಕ್ರಮದಲ್ಲಿ ಸುವ್ಯವಸ್ಥಿತವಾಗಿ ನಡೆಯುತ್ತಾ ಹೋಗುವಂತೆ” ಉತ್ತೇಜಿಸಿದನು. ಪೌಲನು ಕ್ರೈಸ್ತ ಬದುಕಿನ ನಿಯತಕ್ರಮದ ಕುರಿತು ಮಾತಾಡುತ್ತಿದ್ದನು. ಹಾಗಿದ್ದರೂ, ಒಂದು ನಿಯತಕ್ರಮ, ಅಥವಾ ವಿಷಯಗಳನ್ನು ಮಾಡುವ ನಮೂನೆಯು ಸಹ, ನಿಮ್ಮ ಅಭ್ಯಾಸಿಸುವ ವಿಧಾನಕ್ಕೆ ಸಂಬಂಧಿಸುವಾಗ ಸಹಾಯಕರವಾಗಿದೆ. ದೃಷ್ಟಾಂತಕ್ಕಾಗಿ, ನೀವು ಅಭ್ಯಾಸಿಸಲಿಕ್ಕಿರುವ ವಿಷಯವನ್ನು ವ್ಯವಸ್ಥಾಪಿಸಲು ಪ್ರಯತ್ನಿಸಿರಿ. ಒಂದೇ ರೀತಿಯ ವಿಷಯಗಳನ್ನು (ಎರಡು ವಿದೇಶೀಯ ಭಾಷೆಗಳಂತಹ ವಿಷಯಗಳು), ಒಂದರ ನಂತರ ಒಂದರಂತೆ ಅಭ್ಯಾಸಿಸುವುದನ್ನು ತೊರೆಯಿರಿ. ವಿಷಯಗಳ ನಡುವೆ ಅಲ್ಪಾವಧಿಯ ವಿರಾಮಗಳನ್ನು ತೆಗೆದುಕೊಳ್ಳಲು ಯೋಜಿಸಿರಿ—ವಿಶೇಷವಾಗಿ ನಿಮ್ಮ ಶಾಲಾಮನೆಕೆಲಸದ ಹೊರೆಯು ತುಂಬ ಇರುವುದಾದರೆ.
ನಿಮ್ಮ ನೇಮಕದಲ್ಲಿ ತುಂಬ ವಾಚನವು ಒಳಗೂಡಿರುವುದಾದರೆ, ನೀವು ಈ ಮುಂದಿನ ವಿಧಾನವನ್ನು ಪ್ರಯತ್ನಿಸಬಹುದು. ಮೊದಲಾಗಿ, ನಿಮ್ಮ ವಸ್ತುವಿಷಯವನ್ನು ಪರಿಶೀಲಿಸಿರಿ. ಅದರ ಸಂಪೂರ್ಣ ವೀಕ್ಷಣವನ್ನು ಪಡೆದುಕೊಳ್ಳಲಿಕ್ಕೋಸ್ಕರ, ಉಪಶೀರ್ಷಿಕೆಗಳು, ಚಾರ್ಟ್‌ಗಳು, ಮುಂತಾದವುಗಳನ್ನು ನೋಡಿ, ನೇಮಿತ ವಸ್ತುವಿಷಯದಾದ್ಯಂತ ದೃಷ್ಟಿಹರಿಸಿರಿ. ತದನಂತರ, ಅಧ್ಯಾಯ ತಲೆಬರಹಗಳು ಅಥವಾ ಚರ್ಚೆಯ ವಾಕ್ಯಗಳ ಮೇಲಾಧಾರಿತವಾದ ಪ್ರಶ್ನೆಗಳನ್ನು ರಚಿಸಿರಿ. (ಇದು ನೀವು ಓದುವ ವಿಷಯದ ಮೇಲೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸುವಂತೆ ಮಾಡುತ್ತದೆ.) ಈಗ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ, ಓದಿರಿ. ನೀವು ಪ್ರತಿ ಪ್ಯಾರಗ್ರಾಫ್ ಅಥವಾ ಒಂದು ವಿಭಾಗವನ್ನು ಮುಗಿಸಿದಾಗ, ಪುನಃ ಪಠಿಸಿ, ಅಥವಾ ಪುಸ್ತಕವನ್ನು ನೋಡದೆ, ನೀವು ಏನನ್ನು ಓದಿದಿರೋ ಅದನ್ನು ಜ್ಞಾಪಕಮಾಡಿಕೊಳ್ಳಿ. ಮತ್ತು ನೀವು ಇಡೀ ನೇಮಕವನ್ನು ಮುಗಿಸಿದಾಗ, ಶೀರ್ಷಿಕೆಗಳನ್ನು ಪರಿಶೀಲಿಸಿ, ಪ್ರತಿಯೊಂದು ವಿಭಾಗದ ಕುರಿತಾದ ನಿಮ್ಮ ಜ್ಞಾಪಕವನ್ನು ಪರೀಕ್ಷಿಸುವ ಮೂಲಕ ಪುನರ್ವಿಮರ್ಶಿಸಿರಿ. ವಿದ್ಯಾರ್ಥಿಗಳು ತಾವು ಓದುವ ವಿಷಯದಲ್ಲಿ 80 ಪ್ರತಿಶತದಷ್ಟನ್ನು ಮನಸ್ಸಿನಲ್ಲಿಟ್ಟುಕೊಳ್ಳಲು, ಈ ವಿಧಾನವು ಸಹಾಯ ಮಾಡಿದೆಯೆಂದು ಕೆಲವರು ಪ್ರತಿಪಾದಿಸುತ್ತಾರೆ!
ಒಬ್ಬ ಶಿಕ್ಷಕನು ಮತ್ತೂ ಹೇಳುವುದು: “ಒಂದು ವಿಚಾರವು ಪ್ರತ್ಯೇಕವಾಗಿರುವುದಿಲ್ಲ, ಬದಲಾಗಿ ಯಾವಾಗಲೂ ಇನ್ನೊಂದು ಸಮಾಚಾರಕ್ಕೆ ಸಂಬಂಧಿಸಿರುತ್ತದೆ ಎಂಬುದನ್ನು ವಿದ್ಯಾರ್ಥಿಯು ಗ್ರಹಿಸಿಕೊಳ್ಳುವಂತೆ ಮಾಡುವುದು ಪ್ರಾಮುಖ್ಯ.” ಆದುದರಿಂದ, ನೀವು ಅಭ್ಯಾಸಿಸುವ ವಿಷಯವನ್ನು, ನಿಮಗೆ ಈಗಾಗಲೇ ತಿಳಿದಿರುವ ಹಾಗೂ ಅನುಭವಿಸಿರುವ ವಿಷಯಗಳೊಂದಿಗೆ ಸಂಬಂಧ ಕಲ್ಪಿಸಲು ಪ್ರಯತ್ನಿಸಿರಿ. ನೀವು ಕಲಿಯುತ್ತಿರುವ ವಿಷಯದ ಪ್ರಾಯೋಗಿಕ ಮೌಲ್ಯಕ್ಕಾಗಿ ಹುಡುಕಿರಿ.
ಆಸಕ್ತಿಭರಿತವಾಗಿ, ದೇವ ಭಯವುಳ್ಳ ಯುವ ವ್ಯಕ್ತಿಗೆ ಇಲ್ಲಿ ನಿಜವಾದ ಪ್ರಯೋಜನವಿದೆ. ಏಕೆಂದರೆ ಬೈಬಲ್ ಹೇಳುವುದು: “ಯೆಹೋವನ ಭಯವೇ ತಿಳುವಳಿಕೆಗೆ ಮೂಲವು.” (ಜ್ಞಾನೋಕ್ತಿ 1:7) ಉದಾಹರಣೆಗಾಗಿ, ಭೌತಶಾಸ್ತ್ರದ ನಿಯಮಗಳನ್ನು ಕಲಿಯುವುದು, ಬರಿಯ ದುಡಿಮೆಯಂತೆ ಭಾಸವಾಗಬಹುದು. ಆದರೆ ಸೃಷ್ಟಿಯ ಮೂಲಕ “ಕಣ್ಣಿಗೆ ಕಾಣದಿರುವ” ದೇವರ “ಗುಣಲಕ್ಷಣಗಳು ಸ್ಪಷ್ಟವಾಗಿ ಕಂಡುಬರುತ್ತವೆ” (NW) ಎಂಬುದನ್ನು ತಿಳಿದುಕೊಳ್ಳುವುದು, ನೀವು ಕಲಿಯುವ ವಿಷಯಕ್ಕೆ ಹೆಚ್ಚಿನ ಅರ್ಥವನ್ನು ಕೊಡುತ್ತದೆ. (ರೋಮಾಪುರ 1:20) ತದ್ರೀತಿಯಲ್ಲಿ ಇತಿಹಾಸವು ಅನೇಕವೇಳೆ ಯೆಹೋವನ ಉದ್ದೇಶಗಳ ಕಾರ್ಯಪ್ರವೃತ್ತಿಯನ್ನು ಸಂಕ್ಷೇಪವಾಗಿ ಪ್ರಸ್ತಾಪಿಸುತ್ತದೆ. ಏಳು ಲೋಕ ಶಕ್ತಿಗಳು (ಪ್ರಸ್ತುತ ಇರುವ ಆ್ಯಂಗ್ಲೊ-ಅಮೆರಿಕನ್ ಸಂಯೋಗವನ್ನೂ ಒಳಗೊಂಡು) ಬೈಬಲಿನಲ್ಲಿಯೇ ನೇರವಾಗಿ ಚರ್ಚಿಸಲ್ಪಟ್ಟಿವೆ!—ಪ್ರಕಟನೆ 17:10; ದಾನಿಯೇಲ, 7ನೆಯ ಅಧ್ಯಾಯ.
ನೀವು ಏನನ್ನು ಕಲಿಯುತ್ತೀರೊ ಅದನ್ನು ನಿಮಗೆ ತಿಳಿದಿರುವ ವಿಷಯಕ್ಕೆ ಅಥವಾ ನಿಮ್ಮ ಕ್ರೈಸ್ತ ನಂಬಿಕೆಗೆ ಸಂಬಂಧ ಕಲ್ಪಿಸುವ ಮೂಲಕ, ವಿಚಾರಗಳು ನಿಮಗೆ ಅರ್ಥವನ್ನು ಕೊಡಲಾರಂಭಿಸುತ್ತವೆ, ಜ್ಞಾನವು ತಿಳುವಳಿಕೆಯಾಗಿ ಬೆಳೆಯುತ್ತದೆ. ಮತ್ತು ಸೊಲೊಮೋನನು ಗಮನಿಸಿದಂತೆ, “ವಿವೇಕಿಗೆ ತಿಳುವಳಿಕೆಯು ಸುಲಭವಾಗಿ ದೊರೆಯುವದು.”—ಜ್ಞಾನೋಕ್ತಿ 14:6.
‘ಮುಂದಿನ ವಾರ ಒಂದು ಕಿರುಪರೀಕ್ಷೆ ಇರುವುದು’
ಈ ಮಾತುಗಳು ನಿಮಗೆ ತೀವ್ರ ಭಯವನ್ನು ಉಂಟುಮಾಡುವ ಅಗತ್ಯವಿಲ್ಲ. ಮೊದಲಾಗಿ, ಅದು ಎಂತಹ ರೀತಿಯ ಕಿರುಪರೀಕ್ಷೆ—ಪ್ರಬಂಧದ ಒಂದು ಕಿರುಪರೀಕ್ಷೆಯೊ ಅಥವಾ ಅನೇಕ ಆಯ್ಕೆಯಿರುವ ಒಂದು ಕಿರುಪರೀಕ್ಷೆಯೊ ಎಂಬಂಥ ವಿಷಯಗಳು—ಯಾಗಿರುವುದು ಎಂಬುದನ್ನು, ನಿಮ್ಮ ಅಧ್ಯಾಪಕರ ಹೇಳಿಕೆಗಳಿಂದ ವಿವೇಚಿಸಲು ಪ್ರಯತ್ನಿಸಿರಿ. ಹಾಗೂ, ಕಿರುಪರೀಕ್ಷೆಗೆ ಮುಂಚಿನ ದಿನಗಳಲ್ಲಿ, ಕಿರುಪರೀಕ್ಷೆಯಲ್ಲಿ ಯಾವ ವಿಷಯವು ಬರುವುದೆಂಬುದರ ಕುರಿತು ಕೊಡಲ್ಪಡುವ ಸುಳಿವುಗಳಿಗಾಗಿ ಕಿವಿಗೊಡಿರಿ. (“ಈ ಮುಂದಿನ ಅಂಶವು ತುಂಬ ಪ್ರಾಮುಖ್ಯವಾಗಿದೆ” ಅಥವಾ “ಅದನ್ನು ಜ್ಞಾಪಕದಲ್ಲಿಡಲು ನಿಶ್ಚಿತರಾಗಿರಿ” ಎಂಬ ಹೇಳಿಕೆಗಳು ಪ್ರತಿನಿಧಿರೂಪದ
ಸೂಕ್ಷ್ಮಸೂಚನೆಗಳಾಗಿವೆ ಎಂದು ಸೀನಿಯರ್ ಸ್ಕೊಲ್ಯಾಸ್ಟಿಕ್ ಪತ್ರಿಕೆ ಹೇಳುತ್ತದೆ.) ತದನಂತರ, ನಿಮ್ಮ ನೋಟ್ಸ್‌ಗಳು, ಪಠ್ಯಪುಸ್ತಕಗಳು, ಮತ್ತು ಶಾಲಾಮನೆಕೆಲಸದ ನೇಮಕಗಳನ್ನು ಪುನರ್ವಿಮರ್ಶಿಸಿರಿ.“ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತಮಾಡುವನು” ಎಂಬುದಾಗಿ ಸೊಲೊಮೋನನು ನಮಗೆ ಜ್ಞಾಪಕಹುಟ್ಟಿಸುತ್ತಾನೆ. (ಜ್ಞಾನೋಕ್ತಿ 27:17) ಬಹುಶಃ ಒಬ್ಬ ಸ್ನೇಹಿತನು ಅಥವಾ ನಿಮ್ಮ ಹೆತ್ತವರಲ್ಲಿ ಒಬ್ಬರು, ಒಂದೇ ಸಮನೆ ಪ್ರಶ್ನೆಗಳನ್ನು ಹಾಕಲು ಅಥವಾ ತರಗತಿಯ ವಸ್ತುವಿಷಯವನ್ನು ನೀವು ಪುನಃ ಪಠಿಸಿದಂತೆ ನಿಮಗೆ ಕಿವಿಗೊಡಲು ಸಂತೋಷಪಡುವರು. ಮತ್ತು ತದನಂತರ ಕಿರುಪರೀಕ್ಷೆಯ ಮುಂಚಿನ ರಾತ್ರಿ, ಆರಾಮವಾಗಿದ್ದು, ರಾತ್ರಿ ಚೆನ್ನಾಗಿ ನಿದ್ರಿಸಲು ಪ್ರಯತ್ನಿಸಿರಿ. “ಚಿಂತೆಮಾಡಿಮಾಡಿ ಒಂದು ಮೊಳ ಉದ್ದ ಬೆಳೆಯುವದು ನಿಮ್ಮಲ್ಲಿ ಯಾರಿಂದಾದೀತು?” ಎಂದು ಯೇಸು ಕೇಳಿದನು.—ಮತ್ತಾಯ 6:27.
ಅಪಜಯ
ವಿಶೇಷವಾಗಿ ಒಂದು ಕಿರುಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಬಹಳ ಕಷ್ಟಪಟ್ಟು ಪ್ರಯತ್ನಿಸಿದ ಬಳಿಕವೂ ಅದರಲ್ಲಿ ಅನುತ್ತೀರ್ಣರಾಗುವುದು, ನಿಮ್ಮ ಸ್ವಗೌರವವನ್ನು ಧ್ವಂಸಗೊಳಿಸಬಲ್ಲದು. ಆದರೆ ಶಿಕ್ಷಕ ಮ್ಯಾಕ್ಸ್ ರ್ಯಾಫರ್ಟಿ ನಮಗೆ ಜ್ಞಾಪಕಹುಟ್ಟಿಸುವುದು: “ನಾವು ಬದುಕಿರುವಷ್ಟು ಸಮಯದ ತನಕ, ನಮಗೆ ಏನು ತಿಳಿದಿದೆ, ನಾವು ಎಷ್ಟು ಉತ್ತಮವಾಗಿ ಫಲಿತಾಂಶಗಳನ್ನು ಪಡೆದುಕೊಳ್ಳುತ್ತೇವೆ ಎಂಬುದರ ಆಧಾರದ ಮೇಲೆ ನಮಗೆ ದರ್ಜೆನೀಡಲಾಗುತ್ತದೆ . . . ಜೀವಿತವು ಸಂಪೂರ್ಣವಾಗಿ ವಿನೋದವಾಗಿರಲಿದೆ ಎಂಬ ಆಲೋಚನೆಯನ್ನು ತುಂಬಿ ಮಕ್ಕಳನ್ನು ವಂಚಿಸುವ ಒಂದು ಶಾಲೆಯು ಶಾಲೆಯಾಗಿಲ್ಲ. ಅದು ಒಂದು ಕನಸಿನ ಕಾರ್ಖಾನೆಯಾಗಿದೆ.” ಅನುತ್ತೀರ್ಣರಾಗುವುದು, ನಿಮ್ಮ ತಪ್ಪುಗಳಿಂದ ಪಾಠವನ್ನು ಕಲಿತು, ಪ್ರಗತಿಮಾಡಲು ನಿಮ್ಮನ್ನು ಪ್ರಚೋದಿಸುವುದಾದರೆ, ಕಿರುಪರೀಕ್ಷೆಯೊಂದರಲ್ಲಿ ಅನುತ್ತೀರ್ಣರಾಗುವುದರ ಅಪಮಾನವು ಯೋಗ್ಯವಾದದ್ದಾಗಿದೆ.
ಆದರೆ ತೀರ ಕಳಪೆಯಾದ ಒಂದು ರಿಪೋರ್ಟ್ ಕಾರ್ಡಿನೊಂದಿಗೆ ನಿರುತ್ಸಾಹಗೊಂಡಿರುವ ಹೆತ್ತವರನ್ನು ಎದುರಿಸುವ ಕುರಿತಾಗಿ ಏನು? ಹಾಗೆ ಮಾಡುವುದರ ಭಯವು ಕೆಲವೊಮ್ಮೆ ವಿಶದವಾದ ಕಾಲತಳ್ಳುವ ಸಾಧನೋಪಾಯಗಳಿಗೆ ಜನ್ಮನೀಡಿದೆ. “ನಾನು ನನ್ನ ರಿಪೋರ್ಟ್ ಕಾರ್ಡನ್ನು ಅಡುಗೆಮನೆಯ ಮೇಜಿನ ಮೇಲೆ ಇಟ್ಟು, ಮಹಡಿಯ ಮೇಲೆ ಹೋಗಿ, ಮರುದಿನದ ವರೆಗೆ ಮಲಗಲು ಪ್ರಯತ್ನಿಸುತ್ತಿದ್ದೆ” ಎಂದು ಒಬ್ಬ ಯುವ ವ್ಯಕ್ತಿಯು ಜ್ಞಾಪಿಸಿಕೊಳ್ಳುತ್ತಾನೆ. “ನಾನು
ಏನು ಮಾಡುತ್ತಿದ್ದೆನೆಂದರೆ, ರಿಪೋರ್ಟ್ ಕಾರ್ಡನ್ನು ನನ್ನ ತಾಯಿಗೆ ತೋರಿಸಲಿಕ್ಕಾಗಿ ಕೊನೆಯ ಕ್ಷಣದ ವರೆಗೆ ಕಾದುಕೊಂಡಿರುತ್ತಿದ್ದೆ. ಅವರು ಇನ್ನೇನು ಕೆಲಸಕ್ಕೆ ಹೋಗಬೇಕೆನ್ನುವಾಗ, ಬೆಳಗಿನ ಸಮಯದಲ್ಲಿ ನಾನದನ್ನು ಅವರ ಬಳಿ ತೆಗೆದುಕೊಂಡುಹೋಗಿ, ‘ಇಲ್ಲಿ, ನೀವಿದಕ್ಕೆ ಸಹಿಹಾಕಬೇಕು’ ಎಂದು ಹೇಳುತ್ತಿದ್ದೆ. ಅವರಿಗೆ ನನ್ನೊಂದಿಗೆ ವ್ಯವಹರಿಸಲೂ ಸಮಯವಿರುತ್ತಿರಲಿಲ್ಲ”—ಕಡಿಮೆಪಕ್ಷ ಆ ಕ್ಷಣದಲ್ಲಿ—ಎಂದು ಇನ್ನೊಬ್ಬಳು ಹೇಳುತ್ತಾಳೆ. ಕೆಲವು ಯುವ ಜನರು ತಮ್ಮ ರಿಪೋರ್ಟ್ ಕಾರ್ಡುಗಳ ಮೇಲೆ ಸುಳ್ಳು ದರ್ಜೆಗಳನ್ನು ಸಹ ಸುಳ್ಳಾಗಿ ಸೃಷ್ಟಿಸಿದ್ದಾರೆ!ಆದರೂ, ನೀವು ಶಾಲೆಯಲ್ಲಿ ಹೇಗೆ ಓದುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ನಿಮ್ಮ ಹೆತ್ತವರಿಗಿದೆ. ಸ್ವಾಭಾವಿಕವಾಗಿಯೇ, ನಿಮ್ಮ ದರ್ಜೆಗಳು ನಿಮ್ಮ ಸಾಮರ್ಥ್ಯಗಳನ್ನು ಪ್ರತಿಫಲಿಸುವಂತೆ ಅವರು ನಿರೀಕ್ಷಿಸುತ್ತಾರೆ, ಮತ್ತು ನಿಮ್ಮ ದರ್ಜೆಗಳು ಕೆಳಮಟ್ಟದಲ್ಲಿರುವುದಾದರೆ, ಅದಕ್ಕೆ ತಕ್ಕದ್ದಾದ ಶಿಸ್ತನ್ನು ಪಡೆದುಕೊಳ್ಳುವುದನ್ನು ನೀವು ನಿರೀಕ್ಷಿಸಸಾಧ್ಯವಿದೆ. ಆದುದರಿಂದ ನಿಮ್ಮ ಹೆತ್ತವರೊಂದಿಗೆ ಪ್ರಾಮಾಣಿಕರಾಗಿರಿ. ಮತ್ತು “ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.” (ಜ್ಞಾನೋಕ್ತಿ 1:8) ನಿಮ್ಮಿಂದ ತುಂಬ ಹೆಚ್ಚಾದುದು ಅಪೇಕ್ಷಿಸಲ್ಪಡುತ್ತಿದೆ ಎಂದು ನೀವು ಭಾವಿಸುವುದಾದರೆ, ಅದರ ಕುರಿತಾಗಿ ಅವರೊಂದಿಗೆ ಮಾತಾಡಿರಿ.—2ನೆಯ ಅಧ್ಯಾಯದಲ್ಲಿ “ನನ್ನ ಹೆತ್ತವರಿಗೆ ನಾನು ಹೇಗೆ ಹೇಳಬಲ್ಲೆ?” ಎಂಬ ಶಿರೋನಾಮವಿರುವ ಪುರವಣಿಯನ್ನು ನೋಡಿರಿ.
ದರ್ಜೆಗಳು ಬಹಳ ಪ್ರಾಮುಖ್ಯವಾಗಿರುವಂತೆಯೇ, ಒಬ್ಬ ವ್ಯಕ್ತಿಯೋಪಾದಿ ಅಂತಿಮವಾಗಿ ಅವೇ ನಿಮ್ಮ ಅರ್ಹತೆಯನ್ನು ನಿರ್ಧರಿಸುವುದಿಲ್ಲ. ಆದರೂ, ನೀವು ಶಾಲೆಯಲ್ಲಿರುವ ಸಮಯದ ಸದುಪಯೋಗಮಾಡಿ, ನಿಮ್ಮಿಂದಾದಷ್ಟು ಹೆಚ್ಚು ವಿಷಯವನ್ನು ಕಲಿತುಕೊಳ್ಳಿರಿ. ಸಾಮಾನ್ಯವಾಗಿ ಆ ಪ್ರಯತ್ನವು, ನಿಮ್ಮನ್ನು ಹಾಗೂ ನಿಮ್ಮ ಹೆತ್ತವರನ್ನು ಸಂತೋಷಗೊಳಿಸುವ ಹಾಗೂ ಸಂತೃಪ್ತರನ್ನಾಗಿ ಮಾಡುವ ದರ್ಜೆಗಳಲ್ಲಿ ಪ್ರತಿಫಲಿಸುವುದು.
ಚರ್ಚೆಗಾಗಿ ಪ್ರಶ್ನೆಗಳು
◻ ದರ್ಜೆಗಳು ಯಾವ ಉದ್ದೇಶವನ್ನು ಕಾರ್ಯಗತಮಾಡುತ್ತವೆ, ಮತ್ತು ಅವುಗಳ ಕುರಿತು ಸಮತೂಕದ ನೋಟವಿರುವುದು ಏಕೆ ಪ್ರಾಮುಖ್ಯವಾದದ್ದಾಗಿದೆ?
◻ ಕಲಿಯುವುದಕ್ಕಾಗಿ ನೀವು ವೈಯಕ್ತಿಕ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಏಕೆ ಪ್ರಾಮುಖ್ಯವಾದದ್ದಾಗಿದೆ?
◻ ಶಾಲಾನಂತರದ ಚಟುವಟಿಕೆಗಳನ್ನು ಕೈಕೊಳ್ಳುವುದರ ಕುರಿತು ಪರಿಗಣಿಸಬೇಕಾದ ಕೆಲವು ವಿಷಯಗಳು ಯಾವುವು?
◻ ನೀವು ನಿಮ್ಮ ದರ್ಜೆಗಳನ್ನು ಉತ್ತಮಗೊಳಿಸಸಾಧ್ಯವಿರುವ ಕೆಲವು ಮಾರ್ಗಗಳು ಯಾವುವು?
◻ ನೀವು ಕಿರುಪರೀಕ್ಷೆಗಳಿಗಾಗಿ ಹೇಗೆ ತಯಾರಿಸಬಲ್ಲಿರಿ?
◻ ನೀವು ಅಪಜಯವನ್ನು ಹೇಗೆ ವೀಕ್ಷಿಸಬೇಕು, ಮತ್ತು ಅಂತಹ ಅಪಜಯಗಳು ನಿಮ್ಮ ಹೆತ್ತವರಿಂದ ಮರೆಮಾಚಲ್ಪಡಬೇಕೊ?
[ಪುಟ 141 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಊಹಿಸಿಕೊಳ್ಳುವುದು, ಕಂಠಪಾಠಮಾಡುವುದು, ಅಥವಾ ಕಾಪಿಮಾಡುವ ಮೂಲಕವಾಗಿಯೂ ಉತ್ತೀರ್ಣ ದರ್ಜೆಗಳನ್ನು ಪಡೆದುಕೊಳ್ಳುವ ಒಬ್ಬ ಯೌವನಸ್ಥನು, ನಿಜವಾಗಿಯೂ ಆಲೋಚಿಸುವ ವಿಧಾನವನ್ನು ಎಂದಿಗೂ ಕಲಿಯುವುದಿಲ್ಲ
[ಪುಟ 144,145ರಲ್ಲಿರುವಚೌಕ]
ಶಾಲಾನಂತರದ ಚಟುವಟಿಕೆಗಳ ಕುರಿತಾಗಿ ಏನು?
ಶಾಲಾನಂತರದ ಚಟುವಟಿಕೆಗಳು ತಮಗೆ ಸಾಧನೆಯ ಪರಿಜ್ಞಾನವನ್ನು ಕೊಡುತ್ತವೆಂದು ಅನೇಕ ಯುವ ಜನರು ಕಂಡುಕೊಳ್ಳುತ್ತಾರೆ. “ನಾನು ಇದ್ದಂತಹ ಎಲ್ಲ ಕ್ಲಬ್‌ಗಳಿಗೆ ಹೋಗಿಬಂದೆ” ಎಂದು ಬಾಲ್ಟಿಮೋರ್, ಮೇರಿಲೆಂಡ್ (ಅಮೆರಿಕ)ನ ಒಬ್ಬ ಹುಡುಗನು ಜ್ಞಾಪಿಸಿಕೊಳ್ಳುತ್ತಾನೆ. “ನಾನು ಇಷ್ಟಪಡುವ ವಸ್ತುಗಳೊಂದಿಗೆ ಕೆಲಸಮಾಡುವುದು, ನನಗೆ ಒಳ್ಳೆಯ ಅನಿಸಿಕೆಯನ್ನು ಉಂಟುಮಾಡಿತು. ನಾನು ಕಾರ್‌ಗಳೊಂದಿಗೆ ಕೆಲಸಮಾಡುವುದರಲ್ಲಿ ಆನಂದಿಸುವುದರಿಂದ ನಾನು ಮೋಟಾರು ವಾಹನಗಳಿಗೆ ಸಂಬಂಧಿಸಿದ ಕ್ಲಬ್‌ನಲ್ಲಿದ್ದೆ. ನನಗೆ ಕಂಪ್ಯೂಟರ್‌ಗಳೆಂದರೆ ಇಷ್ಟ, ಆದುದರಿಂದ ನಾನು ಆ ಕ್ಲಬ್‌ಗೂ ಸೇರಿದೆ. ನನಗೆ ಆಡಿಯೊ ಎಂದರೆ ಇಷ್ಟ, ಆದುದರಿಂದ ನಾನು ಆ ಕ್ಲಬ್‌ಗೂ ಸೇರಿದೆ.” ವಿಶೇಷವಾಗಿ ಕಾಲೆಜ್‌ಗೆ ಹೋಗುವ ವಿದ್ಯಾರ್ಥಿಗಳು, ಶಾಲಾನಂತರದ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರಚೋದಿಸಲ್ಪಡುತ್ತಾರೆ.
ಹಾಗಿದ್ದರೂ, ಒಬ್ಬ ಯು.ಎಸ್. ಫೆಡರಲ್ ಸರಕಾರಿ ಅಧಿಕಾರಿಯು—ಈ ಮುಂಚೆ ಅವನು ತಾನೇ ಒಬ್ಬ ಅಧ್ಯಾಪಕನಾಗಿದ್ದನು—ಎಚ್ಚರ! ಪತ್ರಿಕೆಗೆ ಹೇಳಿದ್ದು: “ಬಹುಶಃ ವಿದ್ಯಾರ್ಥಿಗಳು ಶಾಲಾಕೆಲಸದಲ್ಲಿ ವ್ಯಯಿಸುವುದಕ್ಕಿಂತಲೂ ಹೆಚ್ಚಿನ ಸಮಯವನ್ನು ಪಾಠಕ್ರಮಕ್ಕೆ ಹೊರತಾದ ಚಟುವಟಿಕೆಗಳಲ್ಲಿ ವ್ಯಯಿಸುತ್ತಾರೆ; ಇದು ದರ್ಜೆಗಳನ್ನು ಕಾಪಾಡಿಕೊಳ್ಳುವುದನ್ನು ಕಷ್ಟಕರವನ್ನಾಗಿ ಮಾಡುತ್ತದೆ.” ಹೌದು, ಪಾಠಕ್ರಮಕ್ಕೆ ಹೊರತಾದ ಚಟುವಟಿಕೆಗಳ ವಿಷಯಕ್ಕೆ ಬರುವಾಗ, ಸಮತೂಕವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ಶಾಲೆಯ ಸಾಫ್ಟ್‌ಬಾಲ್ ತಂಡದಲ್ಲಿ ಆಟವಾಡುತ್ತಿದ್ದ, ಕ್ಯಾಥಿ ಎಂಬ ಹೆಸರಿನ ಹುಡುಗಿಯು ಹೇಳುವುದು: “ಆಟದ ಅಭ್ಯಾಸದ ನಂತರ, ಬೇರೆ ಯಾವುದೇ ಕೆಲಸವನ್ನು ಮಾಡಲು ನಾನು ತೀರ ಆಯಾಸಗೊಂಡಿದ್ದೆ. ನನ್ನ ಶಾಲಾಕೆಲಸವು ಬಾಧಿಸಲ್ಪಟ್ಟಿತು. ಆದುದರಿಂದ ಈ ವರ್ಷ ನಾನು ಆಟಕ್ಕೆ ಸೇರಲಿಲ್ಲ.”
ಆತ್ಮಿಕ ಅಪಾಯಗಳೂ ಇವೆ. ತನ್ನ ಹದಿ ವರ್ಷಗಳನ್ನು ಹಿಂದಿರುಗಿ ಅವಲೋಕಿಸುತ್ತಾ ಒಬ್ಬ ಕ್ರೈಸ್ತ ಪುರುಷನು ಹೇಳುವುದು: “ನಾನು ಮೂರು ಚಟುವಟಿಕೆಗಳನ್ನು—ಶಾಲಾಕೆಲಸ, ಟ್ರ್ಯಾಕ್ ತಂಡದೊಂದಿಗೆ ಆಟದ ಅಭ್ಯಾಸ, ಮತ್ತು ಆತ್ಮಿಕ ಚಟುವಟಿಕೆಗಳು—ಸರಿಹೊಂದಿಸಸಾಧ್ಯವಿದೆಯೆಂದು ಭಾವಿಸಿದೆ. ಆದರೆ ಯಾವಾಗಲಾದರೂ ಈ ಮೂರು ವಿಷಯಗಳ ಘರ್ಷಣೆಯುಂಟಾದಾಗ, ನನ್ನ ಜೀವಿತದ ಆತ್ಮಿಕ ಅಂಶವನ್ನು ಬಿಟ್ಟುಕೊಡಲಾಗುತ್ತಿತ್ತು.”
ಶಾಲೆಯಲ್ಲಿನ ಎರಡು ಕ್ರೀಡಾ ತಂಡಗಳಲ್ಲಿ ಒಳಗೂಡಿದ್ದ ಯುವ ಥೆಮನ್ ಒಪ್ಪಿಕೊಳ್ಳುವುದು: “[ಆತ್ಮಿಕ ಉಪದೇಶಕ್ಕಾಗಿ] ನನಗೆ [ರಾಜ್ಯ] ಸಭಾಗೃಹದಲ್ಲಿನ ಕೂಟಗಳಿಗೆ ಹಾಜರಾಗಲು ಸಾಧ್ಯವಾಗುತ್ತಿರಲಿಲ್ಲ, ಏಕೆಂದರೆ ಮಂಗಳವಾರ ನಾವು ಊರಿನಲ್ಲಿರುತ್ತಿರಲಿಲ್ಲ, ಗುರುವಾರವೂ ನಾವು ಊರಿನಲ್ಲಿರುತ್ತಿರಲಿಲ್ಲ, ಶನಿವಾರ ಸಹ ನಾವು ಊರಿನಲ್ಲಿರುತ್ತಿರಲಿಲ್ಲ ಮತ್ತು ಮುಂಜಾವದ ಎರಡು ಗಂಟೆಯ ವರೆಗೆ ನಾವು ಹಿಂದಿರುಗುತ್ತಿರಲಿಲ್ಲ.” “ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ,” ಆದರೆ “ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು” ಎಂಬುದನ್ನು ಜ್ಞಾಪಕದಲ್ಲಿಡುವುದು ಅತ್ಯಾವಶ್ಯಕ.—1 ತಿಮೊಥೆಯ 4:8.
ನೈತಿಕ ಅಪಾಯಗಳ ಕುರಿತಾಗಿಯೂ ಯೋಚಿಸಿರಿ. ಒಂದು ಒಳ್ಳೆಯ ನೈತಿಕ ಪ್ರಭಾವವಾಗಿರಸಾಧ್ಯವಿರುವ ಸ್ವಸ್ಥಚಿತ್ತ ಸ್ನೇಹಿತರೊಂದಿಗೆ ನೀವು ಸಹವಾಸಿಸುವಿರೊ? ಸಂಭಾಷಣೆಯ ವಿಷಯವು ಏನಾಗಿರುವುದು? ತಂಡದ ಜೊತೆಗಾರರ ಅಥವಾ ಒಂದು ಕ್ಲಬ್‌ನ ಸದಸ್ಯರ ಪ್ರಭಾವವು, ನಿಮ್ಮ ಮೇಲೆ ಪ್ರತಿಕೂಲವಾದ ಪರಿಣಾಮವನ್ನು ಬೀರಸಾಧ್ಯವಿದೆಯೊ? “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ” ಎಂದು 1 ಕೊರಿಂಥ 15:33 ಹೇಳುತ್ತದೆ.
ಆಸಕ್ತಿಭರಿತವಾಗಿಯೇ, ಯೆಹೋವನ ಸಾಕ್ಷಿಗಳ ಮಧ್ಯೆಯಿರುವ ಅನೇಕ ಯುವ ಜನರು, ತಮ್ಮ ಶಾಲಾನಂತರದ ಸಮಯವನ್ನು, ಕ್ರೀಡೆಗಳಿಗಿಂತಲೂ ಅತ್ಯಧಿಕ ಪ್ರಯೋಜನಕರವಾದ ಯಾವುದೋ ಕೆಲಸವನ್ನು ಮಾಡುವುದರಲ್ಲಿ ಉಪಯೋಗಿಸಿಕೊಳ್ಳುವುದನ್ನು ಆರಿಸಿಕೊಂಡಿದ್ದಾರೆ: ಸೃಷ್ಟಿಕರ್ತನನ್ನು ತಿಳಿದುಕೊಳ್ಳುವಂತೆ ಇತರರಿಗೆ ಸಹಾಯ ಮಾಡುವುದು. ಕೊಲೊಸ್ಸೆ 4:5 ಬುದ್ಧಿ ಹೇಳುವುದು: “ಸಮಯವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿ ಹೊರಗಿನವರ ಮುಂದೆ ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ.”
[ಪುಟ 143 ರಲ್ಲಿರುವ ಚಿತ್ರಗಳು]
ವಿದ್ಯಾರ್ಥಿಗಳು ಅನೇಕವೇಳೆ ಅನುತ್ತೀರ್ಣರಾಗುವ ದರ್ಜೆಗಳೊಂದಿಗೆ . . . ನ್ಯೂನ ಅಭ್ಯಾಸ ರೂಢಿಗಳಿಗಾಗಿ ಶಿಕ್ಷೆ ಅನುಭವಿಸುತ್ತಾರೆ
[ಪುಟ 146 ರಲ್ಲಿರುವ ಚಿತ್ರಗಳು]
ನಿಮ್ಮ ಶಾಲಾಮನೆಕೆಲಸದೊಂದಿಗೆ ಶಾಲಾನಂತರದ ಚಟುವಟಿಕೆಗಳನ್ನು ಸರಿದೂಗಿಸುವುದು ಸುಲಭವಾಗಿರುವುದಿಲ್ಲ
[ಪುಟ 148 ರಲ್ಲಿರುವ ಚಿತ್ರಗಳು]
ತೀರ ಕಳಪೆಯಾದ ಒಂದು ರಿಪೋರ್ಟ್ ಕಾರ್ಡಿನ ವಿಷಯದಲ್ಲಿ ಹೆತ್ತವರು ಕ್ಷೋಭೆಗೊಳ್ಳುವುದು ನಿಶ್ಚಯ. ಆದರೆ ಅವರು ನಿಮ್ಮಿಂದ ತೀರ ಹೆಚ್ಚನ್ನು ಅಪೇಕ್ಷಿಸುತ್ತಿದ್ದಾರೆಂದು ನಿಮಗನಿಸುವಲ್ಲಿ, ಅದರ ಕುರಿತಾಗಿ ಅವರೊಂದಿಗೆ ಮಾತಾಡಿರಿ