ರೂಪವು ಎಷ್ಟು ಪ್ರಾಮುಖ್ಯ?
ಅಧ್ಯಾಯ 10
ರೂಪವು ಎಷ್ಟು ಪ್ರಾಮುಖ್ಯ?
ನೀವು ತೋರುವ ರೀತಿ ನಿಮಗೆ ಇಷ್ಟವಿಲ್ಲವೆಂದು ನೀವು ಹೇಳುತ್ತೀರೊ? ಒಳ್ಳೇದು, ನಮ್ಮಲ್ಲಿ ಕೆಲವರು ಮಾತ್ರ—ಇರುವಲ್ಲಿ—ನಮ್ಮ ತೋರಿಕೆಯ ವಿಷಯದಲ್ಲಿ ಸಂಪೂರ್ಣವಾಗಿ ತೃಪ್ತರಾಗಿದ್ದೇವೆ. ನೀರಿನ ಕೊಳದಲ್ಲಿ ತನ್ನ ಪ್ರತಿಬಿಂಬವನ್ನು ನೋಡಿ ಮೋಹಿತನಾದ ನಾರ್ಕಿಸಸ್ನಂತಿರದೆ, ನಮ್ಮಲ್ಲಿ ಕೆಲವರು ನಮ್ಮ ಪ್ರತಿಬಿಂಬವನ್ನು ನೋಡುವಾಗ ಬಹುಮಟ್ಟಿಗೆ ಖಿನ್ನರಾಗುತ್ತೇವೆ.
‘ನನ್ನ ಅಂಗಸೌಷ್ಠವ ನನಗೆ ಇಷ್ಟವಿಲ್ಲ,’ ಎಂದು 16 ವರ್ಷ ಪ್ರಾಯದ ಮಾರಿಯಾ ಪ್ರಲಾಪಿಸುತ್ತಾಳೆ. ‘ನಾನು ಅಷ್ಟು ಚೆನ್ನಾಗಿ ಕಾಣುವುದಿಲ್ಲವೆಂದು ನನ್ನೆಣಿಕೆ.’ ಹದಿಮೂರು ವರ್ಷ ಪ್ರಾಯದ ಬಾಬ್ಗೆ ತದ್ರೀತಿಯ ಒಂದು ದೂರು ಇದೆ: ‘ನನಗೆ ನನ್ನ ಕೂದಲು, ಅದು ಇಲ್ಲಿ ಹಿಂದುಗಡೆ ಎದ್ದು ನಿಲ್ಲುವ ರೀತಿ ಇಷ್ಟವಿಲ್ಲ.’ ಇನ್ನೂ ಕೆಟ್ಟದ್ದಾಗಿ, ಒಬ್ಬ ಹದಿವಯಸ್ಕನ ತೋರಿಕೆಯು ಎಷ್ಟು ಬೇಗನೆ ಬದಲಾಗಬಲ್ಲದೆಂದರೆ, ಒಬ್ಬ ಮನಶ್ಶಾಸ್ತ್ರಜ್ಞನಿಗನುಸಾರ, ಯುವ ಜನರಿಗೆ ಅನೇಕವೇಳೆ “ತಮ್ಮ ಸ್ವಂತ ದೇಹಗಳಲ್ಲಿ ತಾವು ಅಪರಿಚಿತರಾಗಿರುವಂತೆ ಅನಿಸುತ್ತದೆ.” ಹೀಗೆ ಅನೇಕರು ತಮ್ಮ ಮುಖ, ಕೂದಲು, ದೇಹಾಕೃತಿ ಮತ್ತು ಮೈಕಟ್ಟಿನ ಕುರಿತಾಗಿ ಪರಿತಪಿಸುತ್ತಾರೆ.
ದೇವರಿಗೆ ತಾನೇ ಸೌಂದರ್ಯದ ಕುರಿತಾಗಿ ಮೆಚ್ಚಿಕೆಯಿದೆ ನಿಶ್ಚಯ. ಪ್ರಸಂಗಿ 3:11 ಹೇಳುವುದು: “ಒಂದೊಂದು ವಸ್ತುವನ್ನು ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ.” ಮತ್ತು ನಿಮ್ಮ ರೂಪವು, ಇತರರು ನಿಮ್ಮನ್ನು ದೃಷ್ಟಿಸುವ ಮತ್ತು ಉಪಚರಿಸುವ ವಿಧದ ಮೇಲೆ ಗಾಢವಾದ ಪರಿಣಾಮವನ್ನು ಖಂಡಿತವಾಗಿಯೂ ಬೀರಬಲ್ಲದು. ಡಾ. ಜೇಮ್ಸ್ ಪಿ. ಕಮರ್ ಕೂಡಿಸುವುದು: “ದೇಹದ ರೂಪವು ಸ್ವಪ್ರತೀಕದ ಒಂದು ಭಾಗವಾಗಿದೆ. ಅದು ವ್ಯಕ್ತಿಯೊಬ್ಬನ ಆತ್ಮವಿಶ್ವಾಸವನ್ನು ಮತ್ತು ಅವನು ಜೀವಿತದಲ್ಲಿ ಮಾಡುವ ಹಾಗೂ ಮಾಡದಿರುವ ವಿಷಯಗಳನ್ನು ಬಾಧಿಸಬಲ್ಲದು.” ಹೀಗೆ ನಿಮ್ಮ ತೋರಿಕೆಯ ಕುರಿತಾದ ಒಂದು ಸ್ವಸ್ಥಕರವಾದ ಚಿಂತೆಯು ವಿವೇಕಯುತವಾಗಿರುತ್ತದೆ. ಆದಾಗಲೂ, ನೀವು ಇತರರಿಂದ ದೂರವಿರುವವರಾಗಿ ಅಥವಾ ನಿಮ್ಮ ಕುರಿತಾಗಿ ಕೆಟ್ಟದ್ದಾಗಿ ಭಾವಿಸುವಷ್ಟು ಸ್ವಪ್ರಜ್ಞೆಯುಳ್ಳವರಾಗಿ ಪರಿಣಮಿಸುವಾಗ, ಅಂತಹ ಚಿಂತೆಯು ಇನ್ನು ಮುಂದೆ ಸ್ವಸ್ಥಕರವಾಗಿರುವುದಿಲ್ಲ.
ನೀವು ಅನಾಕರ್ಷಕರೆಂದು ಯಾರು ಹೇಳುತ್ತಾರೆ?
ಆಸಕ್ತಿಕರವಾಗಿ, ವೈಯಕ್ತಿಕ ತೋರಿಕೆಯ ಕುರಿತಾದ ವ್ಯಥೆಯು, ಯಾವಾಗಲೂ ನಿಜವಾದ ಶಾರೀರಿಕ ಕುಂದುಗಳಿಂದಾಗಿ ಇರುವುದಿಲ್ಲ. ಒಬ್ಬ ತೆಳ್ಳನೆಯ ಹುಡುಗಿಯು ತರಗತಿಯಲ್ಲಿ ಕುಳಿತುಕೊಂಡು, ತಾನು ಹೆಚ್ಚು ತೂಕವುಳ್ಳವಳಾಗಿರಲು ಆಶಿಸುತ್ತಿರುವಾಗ, ಮುಂದಿನ
ಸಾಲಿನಲ್ಲಿ ದುಂಡುದುಂಡಾಗಿರುವ ಹುಡುಗಿಯೊಬ್ಬಳು, ತಾನು ಎಷ್ಟು “ದಪ್ಪ”ಗಿದ್ದೇನೆಂದು ಪ್ರಲಾಪಿಸುತ್ತಾಳೆ. ಅಂತಹ ಅತೃಪ್ತಿಯು ಎಲ್ಲಿಂದ ಬರುತ್ತದೆ? ಒಳ್ಳೆಯ ಅಂಗಸೌಷ್ಠವವುಳ್ಳ ಯುವ ಜನರು, ತಾವು ಆಕರ್ಷಕರಾಗಿಲ್ಲವೆಂದು ಯೋಚಿಸುವಂತೆ ಮಾಡುವಂತಹದ್ದು ಯಾವುದು?ಮನೋರೋಗ ಶಾಸ್ತ್ರದ ಪ್ರೊಫೆಸರರಾದ ರಿಚರ್ಡ್ ಎಮ್. ಸಾರ್ಲ್ಸ್ ಹೇಳುವುದು: “ತರುಣಾವಸ್ಥೆಯು, ದೇಹದಲ್ಲಿ ಒಂದು ಪ್ರಧಾನ ಪುನರ್ಸಂಘಟನೆಯು ನಡೆಯುವಂತಹ, ಪರಿವರ್ತನಾ ಅವಧಿಯಾಗಿದೆ. . . . ಒಂದು ಹೊಸ ಮತ್ತು ಬದಲಾಗುತ್ತಿರುವ ದೇಹದ ಮುಜುಗರದೊಂದಿಗೆ ವ್ಯವಹರಿಸಲು, ಹೆಚ್ಚಿನ ತರುಣ ಜನರು ತಮ್ಮ ಸಮಾನಸ್ಥರ ಗುಂಪಿನ ಸುರಕ್ಷೆಯ ಮೇಲೆ ಆತುಕೊಳ್ಳುತ್ತಾರೆ.” ಆದರೆ ನಿಮ್ಮ ಸಮಾನಸ್ಥರ ವಿಮರ್ಶಕ ದೃಷ್ಟಿಯ ಕೆಳಗೆ, ನೀವು ಎಷ್ಟು ಉದ್ದ, ಗಿಡ್ಡ, ದಪ್ಪ ಅಥವಾ ತೆಳ್ಳಗಿದ್ದೀರಿ—ನಿಮ್ಮ ಮೂಗು ಅಥವಾ ಕಿವಿಗಳ ಆಕಾರವನ್ನು ಹೇಳುವುದೇ ಬೇಡ—ಎಂಬುದು, ಮಹತ್ತಾದ ವ್ಯಾಕುಲತೆಯ ಒಂದು ಮೂಲವಾಗಬಲ್ಲದು. ಮತ್ತು ಇತರರು ನಿಮಗಿಂತ ಹೆಚ್ಚಿನ ಗಮನವನ್ನು ಪಡೆಯುವಾಗ ಅಥವಾ ನಿಮ್ಮ ರೂಪದ ವಿಷಯದಲ್ಲಿ ನೀವು ನಿಂದಿಸಲ್ಪಡುವಾಗ, ನೀವು ಸುಲಭವಾಗಿಯೇ ನಿಮ್ಮ ಕುರಿತಾಗಿ ಕೆಟ್ಟದ್ದಾಗಿ ಭಾವಿಸಿಕೊಳ್ಳಲು ಆರಂಭಿಸಬಹುದು.
ಅನಂತರ, ಟಿವಿ, ಪುಸ್ತಕಗಳು ಮತ್ತು ಚಲನ ಚಿತ್ರಗಳ ಸರ್ವವ್ಯಾಪಿ ಪ್ರಭಾವವಿದೆ. ಟಿವಿ ಪರದೆಗಳು ಮತ್ತು ಪತ್ರಿಕಾ ಪುಟಗಳಿಂದ ಆಕರ್ಷಕ ಪುರುಷರು ಮತ್ತು ಸ್ತ್ರೀಯರು, ಸುಗಂಧ ತೈಲದಿಂದ ಹಿಡಿದು ಸರಪಣಿಗರಗಸಗಳ ವರೆಗೆ ಎಲ್ಲವನ್ನು ಮಾರಾಟಮಾಡುತ್ತಾ ನಮ್ಮ ಕಡೆಗೆ ದಿಟ್ಟಿಸಿ ನೋಡುತ್ತಾರೆ. ಹೀಗೆ, ನೀವು ಕುಂದಿಲ್ಲದ ತ್ವಚೆಯ ಸುಂದರಿ ಅಥವಾ ಒಬ್ಬ ಮಾಂಸಪುಷ್ಟಿಯುಳ್ಳ “ಆಸಾಮಿ” ಆಗಿರದಿದ್ದರೆ, ನೀವು ಎಲ್ಲಿಯಾದರೂ ಮರೆಯಾಗಿ ಕೂತುಕೊಳ್ಳುವುದು—ಅಥವಾ ಕಡಿಮೆಪಕ್ಷ ಎಂದೂ ಜನಪ್ರಿಯರು ಅಥವಾ ಸಂತುಷ್ಟರಾಗಿರುವಿರೆಂಬುದನ್ನು ಮರೆತುಬಿಡುವುದು—ಒಳ್ಳೆಯದೆಂದು ನೀವು ನಂಬುವಂತೆ ಸಂಸರ್ಗ ಮಾಧ್ಯಮಗಳು ಮಾಡುವುವು.
‘ಅವರ ಅಚ್ಚಿನೊಳಗೆ ಇರುಕಿಸ’ಲ್ಪಡಬೇಡಿರಿ!
ಆದರೆ ನೀವು ಒಬ್ಬ ಕುರೂಪಿ ಮರಿಬಾತು ಆಗಿದ್ದೀರೆಂದು ತೀರ್ಮಾನಿಸುವುದಕ್ಕೆ ಮೊದಲು, ನಿಮ್ಮ ಶಾರೀರಿಕ ದೋಷಗಳು ಎಷ್ಟರ ಮಟ್ಟಿಗೆ ನಿಜ—ಅಥವಾ ಊಹಿತ—ವಾಗಿವೆಯೆಂಬುದನ್ನು ಸ್ವತಃ ಕೇಳಿಕೊಳ್ಳಿರಿ. ನೀವು ಯಾವುದರ ಕುರಿತಾಗಿ ಪರಿತಪಿಸುತ್ತೀರೊ (ಅಥವಾ ಚುಡಾಯಿಸಲ್ಪಡುತ್ತೀರೊ) ಆ ಮುಖದ ಲಕ್ಷಣವು ನಿಜವಾಗಿಯೂ ಅಷ್ಟು ಅನಾಕರ್ಷಕವಾಗಿದೆಯೊ? ಅಥವಾ ಅದು ಹಾಗಿದೆಯೆಂದು ನೆನಸುವಂತೆ ಇತರರು ನಿಮ್ಮ ಮೇಲೆ ಒತ್ತಡಹಾಕಿದ್ದಾರೊ? ಬೈಬಲ್ ಬುದ್ಧಿವಾದ ಕೊಡುವುದು: “ನಿಮ್ಮ ಸುತ್ತಲಿರುವ ಲೋಕವು ನಿಮ್ಮನ್ನು ತನ್ನ ಅಚ್ಚಿನೊಳಗೆ ಇರುಕಿಸುವಂತೆ ಬಿಡಬೇಡಿರಿ.”—ರೋಮಾಪುರ 12:2, ಫಿಲಿಪ್ಸ್.
ಯೋಚಿಸಿರಿ: ನೀವು ಜನಪ್ರಿಯರು, ಸಫಲರು ಅಥವಾ ಸಂತುಷ್ಟರು ಆಗಿರಬೇಕಾದರೆ, ಒಂದು ನಿರ್ದಿಷ್ಟ ರೂಪವನ್ನು ಹೊಂದಿರಬೇಕೆಂಬ ವಿಚಾರವನ್ನು ಪ್ರವರ್ಧಿಸುವವರು ಯಾರು? ನೀವು ಗೀಳಿನ ಆಹಾರಪಥ್ಯಗಳನ್ನು ಬೆನ್ನಟ್ಟುವುದರಿಂದ ಅಥವಾ ದುಬಾರಿಯಾದ ಸೌಂದರ್ಯ ಸಾಧನಗಳನ್ನು ಖರೀದಿಸುವುದರಿಂದ ಲಾಭಪಡೆಯುವ ಉತ್ಪಾದಕರು ಮತ್ತು ಜಾಹೀರಾತುದಾರರೇ ಅಲ್ಲವೊ? ಅವರು ನಿಮ್ಮ ಯೋಚನೆಯನ್ನು ರೂಪಿಸುವಂತೆ ನೀವೇಕೆ ಬಿಡಬೇಕು? ಮತ್ತು ಸಮಾನಸ್ಥರು ನಿಮ್ಮ ರೂಪದ ಕುರಿತಾಗಿ ಟೀಕಾತ್ಮಕರಾಗಿರುವಲ್ಲಿ, ಅವರು ಹಾಗೆ ಮಾಡುವುದು ಸಹಾಯ ಮಾಡುವುದಕ್ಕಾಗಿಯೊ—ಅಥವಾ ಸುಮ್ಮನೆ ನಿಮ್ಮನ್ನು ಕಡೆಗಣಿಸಲಿಕ್ಕಾಗಿಯೊ? ಎರಡನೆಯದು ಸತ್ಯವಾಗಿರುವಲ್ಲಿ, ಆ ರೀತಿಯ “ಸ್ನೇಹಿತರು” ಯಾರಿಗೆ ತಾನೇ ಬೇಕು?
ನಿಮ್ಮ “ಹೃದಯವನ್ನು ವಿವೇಕದ [“ವಿವೇಚನಾಶಕ್ತಿಯ,” NW] ಕಡೆಗೂ ತಿರುಗಿಸು”ಜ್ಞಾನೋಕ್ತಿ 2:2) ನಿಮ್ಮ ಶಾರೀರಿಕ ಸೊತ್ತುಗಳನ್ನು ವಾಸ್ತವವಾದ ರೀತಿಯಲ್ಲಿ ದೃಷ್ಟಿಸುವಂತೆ ಮತ್ತು ವಾರ್ತಾಮಾಧ್ಯಮದ ಪ್ರಚಾರದ ಕುರಿತಾಗಿ ಅವಿಶ್ವಸನೀಯರಾಗಿರುವಂತೆ, ವಿವೇಚನಾಶಕ್ತಿಯು ನಿಮಗೆ ಸಹಾಯ ಮಾಡುವುದು. ಕೆಲವೇ ಜನರು ಅತ್ಯುತ್ಕೃಷ್ಟ ರೂಪದರ್ಶಿಗಳಂತೆ ತೋರುವರು. ಮತ್ತು “ಸೌಂದರ್ಯವು ಒಂದು ನೀರ್ಗುಳ್ಳೆಯಾಗಿದೆ.” (ಜ್ಞಾನೋಕ್ತಿ 31:30, ಬೈಯಿಂಗ್ಟ್ನ್) ತಮ್ಮ ರೂಪಕ್ಕಾಗಿ ಹಣ ನೀಡಲ್ಪಡುವ ಜನರು, ಒಂದು ಅಲ್ಪ ಕ್ಷಣದ ವರೆಗೆ ತುತ್ತತುದಿಯಲ್ಲಿರುತ್ತಾರೆ, ನಂತರ ಒಂದು ಹೊಚ್ಚಹೊಸತಾದ ಮುಖ ಬರುವಾಗ ತೊರೆಯಲ್ಪಡುತ್ತಾರೆ. ಅಲ್ಲದೆ ಅವರ ರೂಪಕ್ಕೆ, ಮೇಕಪ್, ಲೈಟಿಂಗ್ ಮತ್ತು ಛಾಯಾಗ್ರಾಹಕ ಕಲಾನೈಪುಣ್ಯದೊಂದಿಗೆ ಅದ್ಭುತಗಳು ಮಾಡಲ್ಪಡುತ್ತವೆ. (ಪ್ರಸಿದ್ಧ ವ್ಯಕ್ತಿಗಳು ತಮ್ಮ ಸೌಂದರ್ಯವರ್ಧಕ ವ್ಯವಸ್ಥೆಗಳಿಲ್ಲದೆ ಕಾಣುವ ರೀತಿಯನ್ನು ನೋಡುವಾಗ ಕೆಲವರು ದಿಗಿಲುಗೊಳ್ಳುತ್ತಾರೆ!)
ವಂತೆ ಬೈಬಲ್ ನಿಮಗೆ ಇನ್ನೂ ಹೆಚ್ಚಿನ ಬುದ್ಧಿವಾದವನ್ನು ಕೊಡುತ್ತದೆ. (ಆದುದರಿಂದ ನೀವು ಒಬ್ಬ ಟಿವಿ ಅಥವಾ ಪತ್ರಿಕಾ ರೂಪದರ್ಶಿಯಂತೆ ಕಾಣದಿರುವುದಕ್ಕಾಗಿ ಖಿನ್ನರಾಗಲು ಯಾವುದೇ ಕಾರಣವಿಲ್ಲ. ಇಲ್ಲವೇ, ನೀವು ಆಕರ್ಷಿತರಾಗಿ ಕಾಣಲು ಎಷ್ಟು ಉದ್ದ, ಗಿಡ್ಡ ಅಥವಾ ತೆಳ್ಳಗಿರಬೇಕೆಂಬ ವಿಷಯದಲ್ಲಿ ನಿಮ್ಮ ಸಮಾನಸ್ಥರು ಕೊನೆಯ ತೀರ್ಪುಗಾರರಾಗಿಲ್ಲ. ನೀವು ಹೇಗೆ ಕಾಣುತ್ತೀರೊ ಅದರೊಂದಿಗೆ ನೀವು ಹಾಯಾಗಿರುವಲ್ಲಿ, ನಿಮ್ಮ ಸಮಾನಸ್ಥರಿಗೆ ಲಕ್ಷ್ಯಕೊಡಬೇಡಿರಿ. ಹಾಸ್ಯವ್ಯಂಗ್ಯವಾಗಿ, ನಿಮ್ಮ ರೂಪದ ಕುರಿತಾಗಿ ನೀವು ಇಷ್ಟಪಡದಿರುವ ಸಂಗತಿಯೇ, ಯಾರೋ ಒಬ್ಬರ ಮತ್ಸರಕ್ಕೆ ಮೂಲವಾಗಿರಬಹುದು.
ಅತ್ಯುತ್ತಮವಾಗಿ ತೋರಿಬನ್ನಿರಿ!
ಕೆಲವು ಸಲ ಯುವ ಜನರಿಗೆ ನ್ಯಾಯಸಮ್ಮತವಾದ ತೋರಿಕೆಯ ಸಮಸ್ಯೆಗಳಿರುತ್ತವೆ: ಒಂದು ಕೆಟ್ಟ ಮುಖಛಾಯೆ, ವಿಪರೀತ ದೇಹ ತೂಕ, ಒಂದು ವಿಕಾರವಾದ ಮೂಗು, ಹೊರಚಾಚುತ್ತಿರುವ ಕಿವಿಗಳು, ತೀರ ಕುಳ್ಳ ಗಾತ್ರ. ನಿಶ್ಚಯವಾಗಿಯೂ, ಬೆಳೆಯುತ್ತಿರುವ ಯುವ ವ್ಯಕ್ತಿಯೋಪಾದಿ, ನಿಮ್ಮ ತೋರಿಕೆಯು ಇನ್ನೂ ಬದಲಾಗುತ್ತಾ ಇದೆ. ಮೊಡವೆ, ತೂಕದಲ್ಲಿ ಹೆಚ್ಚುಕಡಿಮೆ, ಮತ್ತು ಮಿಂಚಿನಷ್ಟು ವೇಗದ (ಅಥವಾ ವೇದನಾತ್ಮಕವಾಗಿ ನಿಧಾನವಾದ) ಬೆಳವಣಿಗೆಯು ಹದಿವಯಸ್ಕ ವರುಷಗಳ ಕಾಟವಾಗಿವೆ. ಸಮಯವು ಇಂತಹ ಅನೇಕ ಸಮಸ್ಯೆಗಳನ್ನು ಬಗೆಹರಿಸುತ್ತದೆ.
ಇತರ ಸಮಸ್ಯೆಗಳನ್ನು ಅದು ಬಗೆಹರಿಸುವುದಿಲ್ಲ. ಮತ್ತು ಅನೇಕ ಯುವ ಜನರು, ತಮ್ಮ ರೂಪವು ಸಾದಾ ಆಗಿದೆ ಎಂಬ ವಾಸ್ತವಾಂಶದೊಂದಿಗೆ ಜೀವಿಸತಕ್ಕದ್ದು. ಬರಹಗಾರ ಜಾನ್ ಕಿಲಿಂಗರ್ ಹೇಳಿದ್ದು: “ಹೆಚ್ಚಿನ ಜನರಿಗಾದರೋ, ಸ್ಫುರದ್ರೂಪದ ಕೊರತೆಯು, ಜೀವಿತದ ಅತಿ ವೇದನಾಮಯ ವಾಸ್ತವಾಂಶಗಳಲ್ಲಿ ಒಂದಾಗಿದೆ. ಇದು ಆರಂಭದಲ್ಲಿಯೇ ಅವರಿಗೆ ತಿಳಿದುಬರುವ ಮತ್ತು ಅವರ ಉಳಿದ ಜೀವಿತಗಳಲ್ಲಿ ಅವರು ವಿರಳವಾಗಿ ತಪ್ಪಿಸಿಕೊಳ್ಳುವ ವಿಷಯವಾಗಿರುತ್ತದೆ.” ಆದರೂ, ನೀವು ನಿಮಗಿರುವ ರೂಪದ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬಲ್ಲಿರಿ!
ಶಸ್ತ್ರಚಿಕಿತ್ಸೆಯು, ಶಾರೀರಿಕ ಅಪರಿಪೂರ್ಣತೆಗಳನ್ನು ಸರಿಪಡಿಸುವ ದುಬಾರಿಯಾದ * ಸರಳವಾದ ಆರೋಗ್ಯಶಾಸ್ತ್ರವಾದರೊ, ದುಬಾರಿಯಲ್ಲ ಮತ್ತು ನಿಮ್ಮ ಆಕರ್ಷಣೆಯನ್ನು ವರ್ಧಿಸಲು ಹೆಚ್ಚನ್ನು ಮಾಡಬಲ್ಲದು. ನಿಮ್ಮ ಕೂದಲಿಗೆ ಒಬ್ಬ ಚಲನಚಿತ್ರ ನಟ ಅಥವಾ ನಟಿಯ ಕೂದಲಿನ ಕಾಂತಿ ಇರಲಿಕ್ಕಿಲ್ಲ, ಆದರೆ ಅದು ಚೊಕ್ಕಟವಾಗಿರಬಲ್ಲದು; ಅಂತೆಯೇ ನಿಮ್ಮ ಮುಖ, ಕೈಗಳು, ಮತ್ತು ಉಗುರುಗಳು ಕೂಡ. ಬಿಳಿ ಹಲ್ಲು ಮತ್ತು ಶುದ್ಧವಾದ, ತೆಳುಗೆಂಪು ಒಸಡುಗಳು, ಯಾವುದೇ ನಸುನಗೆಯನ್ನು ಹೆಚ್ಚು ಮೋಹಕವನ್ನಾಗಿ ಮಾಡುವುವು. ನಿಮಗೆ ಮಿತಿಮೀರಿದ ತೂಕದ ಒಂದು ಸಮಸ್ಯೆಯಿದೆಯೊ? ಆಹಾರಪಥ್ಯ ಮತ್ತು ವ್ಯಾಯಾಮದ (ಪ್ರಾಯಶಃ ಒಬ್ಬ ವೈದ್ಯನ ಆರೈಕೆಯ ಕೆಳಗೆ) ಒಂದು ಗೊತ್ತುಪಾಡು, ನಿಮ್ಮ ತೂಕವನ್ನು ನಿಯಂತ್ರಣಕ್ಕೆ ತರುವುದರಲ್ಲಿ ಹೆಚ್ಚನ್ನು ಮಾಡಬಹುದು.
ಮತ್ತು ಪ್ರಾಯಶಃ ಅಪಾಯಕಾರಿ ವಿಧವಾಗಿದೆ.ಹೆತ್ತವರ ಸಮ್ಮತಿಯೊಂದಿಗೆ, ನಿಮ್ಮ ಶಾರೀರಿಕ ಸ್ವತ್ತುಗಳಿಗೆ ಒತ್ತುಕೊಡುವ ಮತ್ತು ನಿಮ್ಮ ದೋಷಗಳನ್ನು ಅಡಗಿಸುವಂತಹ ಬಟ್ಟೆಬರೆ ಮತ್ತು ಕೇಶಶೈಲಿಗಳನ್ನು ನೀವು ಪ್ರಯತ್ನಿಸಲೂಬಹುದು. ಉದಾಹರಣೆಗಾಗಿ, ಬರಹಗಾರರಾದ ಶ್ಯಾರನ್ ಫೆಲ್ಟನ್ರಿಗನುಸಾರ, “ಒಂದು ದುಂಡಗಿನ ಕೇಶರಚನೆ ಅಥವಾ ಮೇಲೆ ಬಾಚಿರುವ ಮುಡಿಯನ್ನು” ಧರಿಸುವುದರಿಂದ, ಒಂದು ದೊಡ್ಡ ಮೂಗು ಸಣ್ಣದಾಗಿ ತೋರಸಾಧ್ಯವಿದೆ. ಮೊನಚಾದ, ಚೂಪಾದ ಮುಖಚರ್ಯೆಗಳನ್ನು ತದ್ರೀತಿಯಲ್ಲಿ “ಒಂದು ಅಲೆಯಾಕಾರದ ಅಥವಾ ಗುಂಗುರಾದ ಕೇಶಶೈಲಿ”ಯ ಮೂಲಕ ಕೋಮಲಗೊಳಿಸಸಾಧ್ಯವಿದೆ, ಮತ್ತು ಮೇಕಪ್ನ ಯುಕ್ತಾಯುಕ್ತವಾದ ಉಪಯೋಗವು, ಒಬ್ಬ ಹುಡುಗಿಯ ಮುಖದ ದೋಷಗಳನ್ನು ಮುಚ್ಚಬಲ್ಲದು. ಗಂಡಾಗಿರಲಿ ಹೆಣ್ಣಾಗಿರಲಿ, ಬಟ್ಟೆಯ ವಿಷಯದಲ್ಲಿ ನಿಮ್ಮ ಒಳ್ಳೇ ಆಯ್ಕೆಯೊಂದಿಗೂ ನೀವು ಹೆಚ್ಚನ್ನು ಸಾಧಿಸಬಲ್ಲಿರಿ. ನಿಮ್ಮ ಮುಖಛಾಯೆಯನ್ನು ವರ್ಧಿಸುವ ಬಣ್ಣಗಳನ್ನು ಮತ್ತು ಹೆಚ್ಚು ಅಂದವಾಗಿ ಕಾಣುವಂತೆ ಮಾಡುವ ಶೈಲಿಗಳನ್ನು ಆರಿಸಿರಿ. ಬಟ್ಟೆಯ ರೇಖೆಗಳಿಗೆ ಗಮನವನ್ನು ಕೊಡಿರಿ: ಲಂಬ ರೇಖೆಗಳು ತೆಳ್ಳಗೆ ಕಾಣುವಂತೆ ಮಾಡುತ್ತವೆ; ಸಮತಲ ರೇಖೆಗಳು ಅದಕ್ಕೆ ವಿರುದ್ಧವಾದುದನ್ನು ಮಾಡುತ್ತವೆ!
ಹೌದು, ಪ್ರಯತ್ನ ಮತ್ತು ಕಲ್ಪನಾಶಕ್ತಿಯೊಂದಿಗೆ, ನೀವು ಸ್ವಾಭಾವಿಕವಾಗಿ ಸುರೂಪದಿಂದ ಸಂಪನ್ನರಾಗಿರದಿದ್ದರೂ, ನೀವು ಒಂದು ಹಿತಕರವಾದ ತೋರಿಕೆಯನ್ನು ಪ್ರಸ್ತುತಪಡಿಸಸಾಧ್ಯವಿದೆ.
ಸಮತೋಲನಕ್ಕಾಗಿರುವ ಅಗತ್ಯ
ನೀವು ಹೇಗೆ ಕಾಣುತ್ತೀರೆಂಬುದಕ್ಕೆ ಗಮನವನ್ನು ಕೊಡುವುದು ಪ್ರಾಮುಖ್ಯವಾಗಿರುವಾಗ, ನಿಮ್ಮ ತೋರಿಕೆಯನ್ನು ನಿಮ್ಮ ಜೀವಿತದಲ್ಲಿ ಒಂದು ದೊಡ್ಡ ವಿಷಯವಾಗಿ ಮಾಡದಿರುವಂತೆ ಜಾಗರೂಕರಾಗಿರಿ. ಜನರ ರೂಪಗಳ ಕುರಿತಾಗಿ ಬೈಬಲ್ ಎಷ್ಟು ಕೊಂಚವಾಗಿ ತಿಳಿಸುತ್ತದೆಂಬುದನ್ನು
ನೀವು ಎಂದಾದರೂ ಗಮನಿಸಿದ್ದೀರೊ? ಅಬ್ರಹಾಮ, ಮರಿಯ, ಅಥವಾ ಯೇಸು ಕೂಡ ಹೇಗೆ ತೋರುತ್ತಿದ್ದರೆಂಬುದು ನಮಗೆ ಏಕೆ ತಿಳಿಸಲ್ಪಟ್ಟಿಲ್ಲ? ಸ್ಪಷ್ಟವಾಗಿ, ದೇವರು ಅದನ್ನು ಪ್ರಾಮುಖ್ಯವೆಂದು ಎಣಿಸಲಿಲ್ಲ.ಆಸಕ್ತಿಕರವಾಗಿ, ದೇವರು ಒಮ್ಮೆ, ಯಾರ ಎತ್ತರವು ತೀರ ಪ್ರಭಾವಿಸುವಂತಹದ್ದಾಗಿತ್ತೋ ಆ ಎಲೀಯಾಬನೆಂಬ ಹೆಸರಿನ ಒಬ್ಬ ಯುವ ಪುರುಷನನ್ನು, ರಾಜನ ಸ್ಥಾನಕ್ಕಾಗಿ ತಿರಸ್ಕರಿಸಿದನು! ಯೆಹೋವ ದೇವರು ಪ್ರವಾದಿಯಾದ ಸಮುವೇಲನಿಗೆ ವಿವರಿಸಿದ್ದು: “ಅವನ ಚೆಲುವಿಕೆಯನ್ನೂ ನೀಳವನ್ನೂ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.” (1 ಸಮುವೇಲ 16:6, 7) ನಿಜವಾಗಿ ಪ್ರಾಮುಖ್ಯವಾಗಿರುವ ದೇವರಿಗೆ, ನಮ್ಮ ರೂಪವು ಪ್ರಾಮುಖ್ಯ ಸಂಗತಿಯಲ್ಲವೆಂಬುದನ್ನು ತಿಳಿಯುವುದು, ಎಂತಹ ಒಂದು ಸಾಂತ್ವನವಾಗಿದೆ! ‘ಅವನು ಹೃದಯವನ್ನೇ ನೋಡುವವನಾಗಿದ್ದಾನೆ.’
ಪರಿಗಣಿಸಲಿಕ್ಕಾಗಿರುವ ಇನ್ನೊಂದು ಅಂಶ: ನಿಮ್ಮ ಸ್ನೇಹಿತರಲ್ಲಿ ಹೆಚ್ಚಿನವರು ಸಾಮಾನ್ಯವಾದ ರೂಪವಿರುವವರಲ್ಲವೊ? ಮತ್ತು ನಿಮ್ಮ ಹೆತ್ತವರಲ್ಲಿ ಯಾರಾದರೂ, ಒಂದು ಫ್ಯಾಷನ್ ಪತ್ರಿಕೆಯ ಮುಖಪುಟಕ್ಕೆ ವಸ್ತುವಿಷಯವಾಗಿರುವಷ್ಟು ಸುಂದರ ರೂಪವುಳ್ಳವರಾಗಿದ್ದಾರೊ? ಬಹುಶಃ ಇಲ್ಲ. ನಿಶ್ಚಯವಾಗಿಯೂ, ಅವರ ಉತ್ತಮ ಗುಣಗಳನ್ನು ತಿಳಿದವರಾಗಿದ್ದು, ಅವರ ತೋರಿಕೆಗಳ ಕುರಿತಾಗಿ ನೀವು ಯೋಚಿಸುವುದೇ ವಿರಳ! ಒಬ್ಬ ವ್ಯಕ್ತಿಯೋಪಾದಿ, ನಿಮಗೂ ಯಾವುದೇ ಶಾರೀರಿಕ ಕೊರತೆಗಳಿಗಿಂತ—ನೈಜ ಅಥವಾ ಊಹಿಸಲ್ಪಟ್ಟಂತಹವುಗಳು—ಹೆಚ್ಚು ಪ್ರಧಾನವಾಗಿರುವ ಸೊತ್ತುಗಳಿವೆ.
ಹಾಗಿದ್ದರೂ, ನಿಮ್ಮ ಸಮಾನಸ್ಥರಿಗೆ ರೂಪವು ಪ್ರಾಮುಖ್ಯವಾಗಿದೆ, ಮತ್ತು ನೀವು ಅವರ ಉಡುಪು ಹಾಗೂ ಕೇಶರಚನೆಯ ಶೈಲಿಗಳಿಗೆ ಹೊಂದಿಕೊಳ್ಳುವ ಒತ್ತಡದ ಕೆಳಗೆ ಇರುವುದನ್ನು ಕಂಡುಕೊಳ್ಳಬಹುದು. ಆ ಒತ್ತಡಕ್ಕೆ ನೀವು ಹೇಗೆ ಪ್ರತಿಕ್ರಿಯಿಸತಕ್ಕದ್ದು?
[ಅಧ್ಯಯನ ಪ್ರಶ್ನೆಗಳು]
^ ವಕ್ರವಾದ ಹಲ್ಲುಗಳನ್ನು ಸರಿಪಡಿಸಲು ದಂತಬಂಧ (ಹಲ್ಲುಕ್ಲಿಪ್ಪು)ಗಳಂತಹ ಕೆಲವು ವೈದ್ಯಕೀಯ ಕಾರ್ಯವಿಧಾನಗಳು, ಆರೋಗ್ಯ ಮತ್ತು ಕಾಂತಿವರ್ಧಕ ಪ್ರಯೋಜನಗಳನ್ನು—ಎರಡನ್ನೂ—ಹೊಂದಿರಬಲ್ಲವು.
ಚರ್ಚೆಗಾಗಿ ಪ್ರಶ್ನೆಗಳು
◻ ಯುವ ಜನರು ತಮ್ಮ ರೂಪದ ಕುರಿತಾಗಿ ಅಷ್ಟು ಚಿಂತಿತರಾಗಿರುವುದು ಏಕೆ? ನಿಮ್ಮ ಸ್ವಂತ ರೂಪದ ಕುರಿತಾಗಿ ನಿಮಗೆ ಹೇಗನಿಸುತ್ತದೆ?
◻ ರೂಪದ ಪ್ರಮುಖತೆಯ ಕುರಿತಾದ ಯಾವ ನೋಟವು ವಾರ್ತಾಮಾಧ್ಯಮ ಮತ್ತು ನಿಮ್ಮ ಸಮಾನಸ್ಥರಿಂದ ಪ್ರವರ್ಧಿಸಲ್ಪಟ್ಟಿದೆ? ಅಂತಹ ಪ್ರಭಾವಕ್ಕೆ ನೀವು ಹೇಗೆ ಪ್ರತಿಕ್ರಿಯಿಸತಕ್ಕದ್ದು?
◻ ಮೊಡವೆಯ ಸಮಸ್ಯೆಯೊಂದಿಗೆ ವ್ಯವಹರಿಸುವ ಕೆಲವು ವಿಧಗಳು ಯಾವುವು?
◻ ನಿಮ್ಮ ರೂಪವನ್ನು ನೀವು ಹೇಗೆ ಅತಿ ಉತ್ತಮವನ್ನಾಗಿ ಮಾಡಬಲ್ಲಿರಿ? ಈ ವಿಷಯದಲ್ಲಿ ಸಮತೋಲನದ ಅಗತ್ಯವಿದೆ ಏಕೆ?
[ಪುಟ 93 ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ನನ್ನ ಅಂಗಸೌಷ್ಠವ ನನಗೆ ಇಷ್ಟವಿಲ್ಲ . . . ನಾನು ಅಷ್ಟು ಚೆನ್ನಾಗಿ ಕಾಣುವುದಿಲ್ಲವೆಂದು ನನ್ನೆಣಿಕೆ’
[ಪುಟ 99 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಯಾವುದೇ ಶಾರೀರಿಕ ಕುಂದುಗಳಿಗಿಂತ ಹೆಚ್ಚು ಪ್ರಧಾನವಾಗಿರುವ ಸ್ವತ್ತುಗಳು ನಿಮಗಿವೆ
[Box/Picture on page 84, 85]
‘ನನ್ನ ಮೊಡವೆಯ ಕುರಿತಾಗಿ ನಾನು ಏನನ್ನೂ ಮಾಡಲಾರೆನೊ?’
ಮೊಡವೆಯು ಚರ್ಮದ ಒಂದು ವ್ಯಾಧಿಯಾಗಿದೆ; ಅದು ಚರ್ಮವನ್ನು, ಮೊಡವೆಗಳು, ಕಪ್ಪುಕಲೆಗಳು, ಕೆಂಪು ಊತಗಳು ಅಥವಾ ಕೋಷ್ಠ (ಸಿಸ್ಟ್)ಗಳಿಂದ ಕಲೆಗಳಾಗಿರುವಂತೆ ಮಾಡುತ್ತದೆ ಅಥವಾ ವಿರೂಪಗೊಳಿಸುತ್ತದೆ. ಅನೇಕ ಯುವ ಜನರಿಗಾದರೋ, ಇದು ಕೆಲವೇ ತಿಂಗಳುಗಳ ವರೆಗೆ ಬಾಳುವಂತಹ ಒಂದು ದಾಟಿಹೋಗುವ ಬರಿಯ ಅಸೌಖ್ಯವಾಗಿರುವ ಬದಲಿಗೆ, ಒಂದು ಗಂಭೀರವಾದ ಚರ್ಮ ವ್ಯಾಧಿಯಾಗಿರುತ್ತದೆ. ಎಲ್ಲಾ ವಯಸ್ಸುಗಳ ಜನರು ಅದರಿಂದ ಬಾಧಿಸಲ್ಪಡಬಲ್ಲರು, ಆದರೆ ಹದಿವಯಸ್ಕರು ತೀರ ಹೆಚ್ಚು ಕಷ್ಟಾನುಭವಿಸುತ್ತಾರೆ. ಕೆಲವು ಪರಿಣತರಿಗನುಸಾರ, ಮೊಡವೆಯು, ಸುಮಾರು 80 ಪ್ರತಿಶತ ಹದಿವಯಸ್ಕರಲ್ಲಿ ವಿವಿಧ ಮಟ್ಟಗಳಲ್ಲಿ ಬೆಳೆಯುತ್ತದೆ.
ತಮ್ಮ ಕುರಿತಾಗಿ ಅವರು ಏನನ್ನು ಅತಿ ಹೆಚ್ಚಾಗಿ ಇಷ್ಟಪಡಲಿಲ್ಲವೆಂಬುದನ್ನು ಹೇಳುವಂತೆ 2,000 ಹದಿವಯಸ್ಕರನ್ನು ಕೇಳಿಕೊಂಡಾಗ, ಚರ್ಮದೊಂದಿಗಿನ ಸಮಸ್ಯೆಗಳು ಬೇರೆ ಯಾವುದೇ ದೂರನ್ನು ಮೀರಿದ್ದರಲ್ಲಿ ಆಶ್ಚರ್ಯವಿಲ್ಲ. ಇನ್ನೂ ಪ್ರೌಢ ಶಾಲೆಯಲ್ಲಿ ಇರುವಾಗಲೇ ಮೊಡವೆಯ ತೀಕ್ಷ್ಣ ಸ್ಥಿತಿಯಿದ್ದ, ಸ್ಯಾಂಡ್ರ ಎಂಬ ಹೆಸರಿನ ಒಬ್ಬ ಯುವತಿಯು ಜ್ಞಾಪಿಸಿಕೊಳ್ಳುವುದು: “ನನಗೆ ಎಷ್ಟು ಕೆಟ್ಟದಾದ ಮೊಡವೆಯಿತ್ತೆಂದರೆ, ನಾನು ಯಾವಾಗಲೂ ನನ್ನ ಮುಖವನ್ನು ಬೇರೆ ಜನರಿಂದ ಅಡಗಿಸುತ್ತಿದ್ದೆ. ನಾನು ಕಾಣುತ್ತಿದ್ದ ರೀತಿಯ ಕುರಿತಾಗಿ ನಾನು ಮುಜುಗರಪಡುತ್ತಿದ್ದ ಕಾರಣದಿಂದ ನಾನು ಲಜ್ಜಿತಳಾಗಿದ್ದೆ. . . . ನಾನು ತುಂಬ ಅಸಹ್ಯವಾಗಿ ಕಾಣುತ್ತಿದ್ದೆ.”—ಕೋ-ಎಡ್ ಪತ್ರಿಕೆ.
ಈ ಪೀಡೆಯು ನಿಮ್ಮ ಹದಿವಯಸ್ಸಿನ ವರ್ಷಗಳಲ್ಲಿ—ನೀವು ತುಂಬ ಚೆನ್ನಾಗಿ ಕಾಣಲು ಬಯಸುವ ಸಮಯದಲ್ಲೇ—ಏಕೆ ತೋರಿಬರುತ್ತದೆ? ಏಕೆಂದರೆ ನೀವು ಬೆಳೆಯುತ್ತಿದ್ದೀರಿ. ಪ್ರೌಢಾವಸ್ಥೆಯ ಆರಂಭದೊಂದಿಗೆ, ಚರ್ಮದ ರಸಗ್ರಂಥಿಗಳು ತಮ್ಮ ಚಟುವಟಿಕೆಯನ್ನು ಹೆಚ್ಚಿಸುತ್ತವೆ.
ಏನು ಸಂಭವಿಸುತ್ತದೆ? ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಸರಳ ಶಬ್ದಗಳಲ್ಲಿ ವಿವರಿಸುವುದು: ಪ್ರತಿಯೊಂದು ರಸಗ್ರಂಥಿಯು ಒಂದು ರೋಮಕೂಪದೊಳಗೆ—ಅಂದರೆ, ಪ್ರತಿಯೊಂದು ರೋಮದ ಸುತ್ತಲಿರುವ ಚಿಕ್ಕ ಚೀಲ—ಬರಿದಾಗುತ್ತದೆ. ಸಾಧಾರಣವಾಗಿ, ಎಣ್ಣೆಯು ಚರ್ಮದ ಒಂದು ರಂಧ್ರದ ಮೂಲಕ ಹೊರಸ್ರವಿಸುವುದು, ಆದರೆ ಕೆಲವೊಮ್ಮೆ ಒಂದು ರಂಧ್ರವು ಮುಚ್ಚಿಹೋಗುತ್ತದೆ ಮತ್ತು ಆ ಎಣ್ಣೆಯು ಸಾಕಷ್ಟು ಬೇಗನೆ ಹೊರಬರಲು ಸಾಧ್ಯವಾಗುವುದಿಲ್ಲ. ಮುಚ್ಚಿಕೊಂಡಿರುವ ರಂಧ್ರವು ಈಗ ಒಂದು ಕಪ್ಪುಕಲೆಯೆಂದು ಕರೆಯಲ್ಪಡುವ ಒಂದು ಕಲೆಯನ್ನು ರೂಪಿಸುತ್ತದೆ ಯಾಕಂದರೆ, ಆ ಸಿಕ್ಕಿಕೊಂಡಿರುವ ಎಣ್ಣೆಯು, ಆ ಆಮ್ಲಜನಕದೊಡನೆ ಸಂಯೋಗವಾಗಿ, ಒಣಗುತ್ತದೆ ಮತ್ತು ಕಪ್ಪಾಗುತ್ತದೆ. ಕೀವು ಉಂಟಾಗುವಾಗ ಒಂದು ಮೊಡವೆಯುಂಟಾಗುತ್ತದೆ. ತಡೆದುಹಿಡಿಯಲ್ಪಟ್ಟಿರುವ ಎಣ್ಣೆಯಲ್ಲಿ ಕ್ರಿಮಿಗಳು ಹುಟ್ಟುವಾಗ, ಕೋಷ್ಠಗಳು ಉಂಟಾಗುತ್ತವೆ. ಶಾಶ್ವತವಾದ ಕಲೆಗಳನ್ನು ಬಿಟ್ಟುಹೋಗುವಂತಹವುಗಳು ಈ ಕೋಷ್ಠಗಳೇ ಆಗಿವೆ. ಅವು ಸೋಂಕಿತವಾಗುವ ವರೆಗೆ ಮೊಡವೆಗಳು ಕಲೆಗಳನ್ನುಂಟುಮಾಡುವುದಿಲ್ಲ, ಇದು ಅನೇಕ ವೇಳೆ ಕಿವಿಚುವ ಅಥವಾ ಕೀಳುವ ಫಲವಾಗಿ ಸಂಭವಿಸುತ್ತದೆ, ಆದುದರಿಂದ ಅವುಗಳನ್ನು ಕಿವಿಚಬೇಡಿರಿ ಅಥವಾ ಕೀಳಬೇಡಿರಿ!
ಆಸಕ್ತಿಕರವಾಗಿ, ಮಾನಸಿಕ ಉದ್ವೇಗ ಮತ್ತು ಭಾವನಾತ್ಮಕ ಕ್ಷೋಭೆಗಳು ಚರ್ಮದ ರಸಗ್ರಂಥಿಗಳನ್ನು ಕ್ರಿಯಾಶೀಲಗೊಳಿಸಬಲ್ಲವು. ಕೆಲವರು ಒಂದು ಪ್ರಾಮುಖ್ಯ ಘಟನೆಯ ಮುಂಚೆ ಅಥವಾ ಪರೀಕ್ಷೆಗಳ ಮುಂಚೆ ಮತ್ತು ಪರೀಕ್ಷೆಗಳ ಸಮಯದಲ್ಲಿ ಒಂದು ದೊಡ್ಡ ಮೊಡವೆಯ ತೋರಿಬರುವಿಕೆಯನ್ನು ಅನುಭವಿಸುತ್ತಾರೆ. ಆದುದರಿಂದ ಮತ್ತಾಯ 6:34.
ಯೇಸುವಿನ ಮಾತುಗಳು ವ್ಯಾವಹಾರಿಕವಾಗಿವೆ: “ನಾಳಿನ ವಿಷಯವಾಗಿ ಚಿಂತೆಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು.”—ದುಃಖಕರವಾಗಿ, ಯಾವುದೇ ಚಮತ್ಕಾರ ವಾಸಿಯು ಅಸ್ತಿತ್ವದಲ್ಲಿಲ್ಲ. ಆದಾಗಲೂ, ಮೊಡವೆಯನ್ನು ನಿಯಂತ್ರಣಕ್ಕೆ ತರಸಾಧ್ಯವಿರುವ ಬೆನ್ಸೈಲ್ ಪೆರಕ್ಸೈಡ್ (ಆ್ಯಂಟಿಬ್ಯಾಕ್ಟೀರಿಯಲ್ ಏಜೆಂಟ್)ನ್ನು ಹೊಂದಿರುವ ಅಸ್ಫಟಿಕ ದ್ರಾವಣಗಳು (ಜೆಲ್ಸ್), ಕ್ರೀಮುಗಳು, ಲೋಶನ್ಗಳು, ಲೇಪಗಳು, ಸಾಬೂನುಗಳು ಮತ್ತು ಮುಖಮುಚ್ಚು ಮಿಶ್ರಣಗಳು (ಫೇಶಿಯಲ್ ಮಾಸ್ಕ್ಗಳು) ಅಂಗಡಿಗಳಲ್ಲಿ ದೊರಕುತ್ತವೆ. (ಹೆಚ್ಚು ಬಲವಾದ ಕ್ರಮವು ಅಗತ್ಯವಿರುವಲ್ಲಿ, ನಿಮ್ಮ ಕುಟುಂಬ ವೈದ್ಯರನ್ನು ವಿಚಾರಿಸಸಾಧ್ಯವಿದೆ.) ಬೆನ್ಸೈಲ್ ಪೆರಕ್ಸೈಡ್ ಸೇರಿರುವ ಒಂದು ಸಾಬೂನು ಅಥವಾ ಲೇಪದಿಂದ ತಮ್ಮ ಚರ್ಮವನ್ನು ಸಂಪೂರ್ಣವಾಗಿ ಶುದ್ಧಗೊಳಿಸುವುದು ಸಹಾಯಕಾರಿಯೆಂದು ಅನೇಕರು ಕಂಡುಕೊಳ್ಳುತ್ತಾರೆ. ಆದಾಗಲೂ, ಎಣ್ಣೆಬಳಿದ ಸಾಬೂನುಗಳು ಅಥವಾ ಎಣ್ಣೆಯು ಪ್ರಧಾನಾಂಶವಾಗಿರುವ ಕಾಂತಿವರ್ಧಕಗಳನ್ನು ಉಪಯೋಗಿಸುವುದರಿಂದ ದೂರವಿರಿ.
ತಮ್ಮ ಇಡೀ ಆರೋಗ್ಯದ ಆರೈಕೆಯನ್ನು ತೆಗೆದುಕೊಳ್ಳುವ ಮೂಲಕ—ತುಂಬ ವ್ಯಾಯಾಮವನ್ನು ಮಾಡುವುದು, ಸಾಧ್ಯವಿರುವಷ್ಟು ಹೆಚ್ಚಾಗಿ ಸ್ವಚ್ಛ ಗಾಳಿಯಲ್ಲಿ ಹೊರಗಿರುವುದು, ಮತ್ತು ಸಾಕಷ್ಟು ನಿದ್ರೆಯನ್ನು ಪಡೆಯುವುದು—ತಮ್ಮ ಮೊಡವೆಯ ಸ್ಥಿತಿಯು ಉತ್ತಮಗೊಳ್ಳುತ್ತದೆಂಬುದನ್ನೂ ಕೆಲವು ಯುವ ಜನರು ಕಂಡುಹಿಡಿದಿದ್ದಾರೆ. ಮತ್ತು ಕೊಬ್ಬುರಹಿತವಾದ ಆಹಾರಪಥ್ಯವನ್ನು ಸೇವಿಸುವುದರ ಪ್ರಯೋಜನಗಳು ಕೆಲವರಿಂದ ವಾಗ್ವಾದಮಾಡಲ್ಪಡುವುದಾದರೂ, ಕಳಪೆ ಆಹಾರವನ್ನು ಸೇವಿಸುವುದರಿಂದ ದೂರವಿರುವುದು ಹಾಗೂ ಒಂದು ಸಮತೋಲನದ ಆಹಾರಪಥ್ಯವನ್ನು ತಿನ್ನುವುದು ವಿವೇಕಯುತವೆಂದು ತೋರುತ್ತದೆಂಬುದು ಸ್ಪಷ್ಟ.
ಏನೇ ಆಗಿರಲಿ, ತಾಳ್ಮೆಯು ಅತ್ಯಾವಶ್ಯಕ. ನೆನಪಿನಲ್ಲಿಡಿರಿ: ಸಮಸ್ಯೆಯು ಬೆಳೆಯಲು ಸಮಯಾವಧಿಯು ತಗಲಿದೆ, ಆದುದರಿಂದ ಅದು ರಾತ್ರಿಬೆಳಗಾಗುವುದರೊಳಗೆ ಪರಿಹಾರವಾಗದು. ಈ ಮುಂಚೆ ತಿಳಿಸಲ್ಪಟ್ಟಿದ್ದ ಸ್ಯಾಂಡ್ರ ಹೇಳುವುದು: “ನನ್ನ ಚರ್ಮವು ಪೂರ್ಣವಾಗಿ ಗುಣವಾಗಲು ಸುಮಾರು ಒಂದು ವರ್ಷ ತಗಲಿತೆಂದು ನಾನೆಣಿಸುತ್ತೇನೆ, ಆದರೆ ಆರು ವಾರಗಳೊಳಗೆ ನನ್ನ ಚರ್ಮದಲ್ಲಿನ ಬದಲಾವಣೆಗಳನ್ನು ನಾನು ನೋಡಸಾಧ್ಯವಿತ್ತು.” ಒಂದು ಸಮಯಾವಧಿಯ ವರೆಗೆ ನಿಮ್ಮ ಚಿಕಿತ್ಸೆಗೆ ಅಂಟಿಕೊಳ್ಳುವ ಮೂಲಕ, ನೀವು ಸ್ವಲ್ಪ ಉಪಶಮನವನ್ನು ಅನುಭವಿಸಬಹುದು.
ಅಷ್ಟರೊಳಗೆ, ಕೆಲವೊಂದು ಕಲೆಗಳು ನಿಮ್ಮ ಸ್ವಪ್ರತಿಷ್ಠೆಯನ್ನು ತುಳಿಯುವಂತೆ ಅಥವಾ ಇತರರೊಂದಿಗೆ ನೀವು ಮಾತಾಡುವುದನ್ನು ತಡೆಗಟ್ಟುವಂತೆ ಬಿಡಬೇಡಿರಿ. ನಿಮ್ಮ ಚರ್ಮದ ಕುರಿತಾಗಿ ನಿಮಗೆ ಸ್ವಲ್ಪ ಸ್ವಪ್ರಜ್ಞೆಯ ಅನಿಸಿಕೆಯಾಗಬಹುದಾದರೂ, ಇತರರು ಬಹುಶಃ ನೀವು ನೆನಸುವುದಕ್ಕಿಂತ ತೀರ ಕಡಮೆಯಾಗಿ ಅದನ್ನು ಗಮನಿಸುತ್ತಾರೆ. ಆದುದರಿಂದ ಒಂದು ಸಕಾರಾತ್ಮಕವಾದ, ಗೆಲವಿನ ಆತ್ಮವನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿರಿ. ಮತ್ತು ನಿಮ್ಮ ಮೊಡವೆಗಾಗಿ ನೀವೇನನ್ನು ಮಾಡಸಾಧ್ಯವಿದೆಯೊ ಅದನ್ನು ಈಗಲೇ ಮಾಡಿರಿ!
[ಪುಟ 83 ರಲ್ಲಿರುವ ಚಿತ್ರ]
ನೀವು ನಿಮ್ಮ ಕುರಿತಾಗಿ ಏನನ್ನು ಇಷ್ಟಪಡುವುದಿಲ್ಲವೊ ಅದು ಇತರರು ಮತ್ಸರಪಡುವ ವಿಷಯವಾಗಿರಬಹುದು
[ಪುಟ 86 ರಲ್ಲಿರುವ ಚಿತ್ರಗಳು]
ಪತ್ರಿಕಾ ರೂಪದರ್ಶಿಗಳಿಗೆ ಸೌಂದರ್ಯವರ್ಧಕ ತಂಡದ ವ್ಯವಸ್ಥೆಯ ಸೌಲಭ್ಯಗಳಿವೆ ಎಂಬುದನ್ನು ಯುವ ಜನರು ಅನೇಕವೇಳೆ ತಿಳಿಯಲು ತಪ್ಪಿಹೋಗುತ್ತಾರೆ