ನಿಮ್ಮ ಭವಿಷ್ಯತ್ತು
ವಿಭಾಗ 10
ನಿಮ್ಮ ಭವಿಷ್ಯತ್ತು
ಇಂದಿನ ಯುವ ಜನರು, ಯಾವ ಭವಿಷ್ಯತ್ತೂ ಇರದ ಬೆದರಿಕೆಯಲ್ಲಿ ಬೆಳೆದಿದ್ದಾರೆ. ನ್ಯೂಕ್ಲಿಯರ್ ಯುದ್ಧ, ಜೀವಿಪರಿಸ್ಥಿತಿಯ ಅನಾಹುತ, ಮತ್ತು ಆರ್ಥಿಕ ಅವ್ಯವಸ್ಥೆ—ಇವೆಲ್ಲವೂ ಬಾನಂಚಿನಲ್ಲಿ ಬೃಹತ್ತಾಗಿ ಕಾಣಿಸಿಕೊಳ್ಳುತ್ತವೆ. ಆದರೂ, ಮಾನವಕುಲದ ಭವಿಷ್ಯವು, ನಿಮ್ಮ ಚಿಂತೆಗಳಲ್ಲಿ ಅತ್ಯಂತ ಅಲ್ಪವಾದ ವಿಷಯವಾಗಿರಬಹುದು. ನೀವು, ಈಗಿನ ಸಮಯದಿಂದ ಹಿಡಿದು, 10, 20, ಅಥವಾ 30 ವರ್ಷಗಳ ನಂತರ ಎಲ್ಲಿರುವಿರಿ ಎಂಬುದರ ಕುರಿತು ಹೆಚ್ಚು ಚಿಂತಿತರಾಗಿರಬಹುದು.
ಸಂತೋಷಕರವಾಗಿ, ನಿಮ್ಮ ಭವಿಷ್ಯತ್ತಿನ ಕುರಿತು ಆಶಾವಾದಿಗಳಾಗಿರಲು ನಿಮಗೆ ವಾಸ್ತವವಾದ ಕಾರಣವಿದೆ. ಇದು, ನೀವು ವರ್ತಮಾನಕಾಲವನ್ನು ಹೇಗೆ ಉಪಯೋಗಿಸಿಕೊಳ್ಳುತ್ತೀರೊ ಅದರ ಮೇಲೆ ಅವಲಂಬಿಸುತ್ತದೆ.