ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾರ್ಯಸಾಧಕ ಉತ್ತರಗಳು

ಕಾರ್ಯಸಾಧಕ ಉತ್ತರಗಳು

ಮುನ್ನುಡಿ

ಕಾರ್ಯಸಾಧಕ ಉತ್ತರಗಳು

‘ನನ್ನ ಹೆತ್ತವರು ನನ್ನನ್ನು ಏಕೆ ಅರ್ಥಮಾಡಿಕೊಳ್ಳುವುದಿಲ್ಲ?’ ‘ನಾನು ಅಮಲೌಷಧಗಳು ಮತ್ತು ಮದ್ಯಪಾನವನ್ನು ಉಪಯೋಗಿಸಿ ನೋಡಬೇಕೊ?’ ‘ವಿವಾಹಕ್ಕೆ ಮುಂಚಿನ ಸಂಭೋಗದ ಕುರಿತೇನು?’ ‘ಅದು ನಿಜ ಪ್ರೀತಿಯೆಂದು ನಾನು ಹೇಗೆ ತಿಳಿಯಬಲ್ಲೆ?’ ‘ಭವಿಷ್ಯತ್ತು ನನಗಾಗಿ ಏನನ್ನು ಕಾದಿರಿಸಿದೆ?’

ಇಂತಹ ಪ್ರಶ್ನೆಗಳನ್ನು ಕೇಳುವ ಯುವ ಜನರಲ್ಲಿ ನೀವು ಮೊದಲನೆಯವರೂ ಅಲ್ಲ ಕೊನೆಯವರೂ ಅಲ್ಲ. ಹಾಗಿದ್ದರೂ, ಯುವ ಜನರು ಈ ಮೂಲಭೂತ ವಿವಾದಾಂಶಗಳನ್ನು ಎಬ್ಬಿಸುವಾಗ, ಅವರು ಅನೇಕ ವೇಳೆ ಅಸಂಗತವಾದ ಉತ್ತರಗಳಿಂದ ಆಕ್ರಮಿಸಲ್ಪಡುತ್ತಾರೆ. ಉದಾಹರಣೆಗೆ, ಮದ್ಯಸಾರದ ಪಾನೀಯಗಳನ್ನು ಕುಡಿಯುವ ವಿಷಯವನ್ನು ತೆಗೆದುಕೊಳ್ಳಿ. ಹೆತ್ತವರು, ಸ್ವತಃ ಅದರಲ್ಲಿ ಲೋಲುಪರಾಗುವುದಾದರೂ, ಅದನ್ನು ಪ್ರೋತ್ಸಾಹಿಸದಿರಬಹುದು. ಪತ್ರಿಕೆಗಳು ಮತ್ತು ಟಿವಿ ಪ್ರದರ್ಶನಗಳು ಅದನ್ನು ಮಹಿಮೆಪಡಿಸುತ್ತವೆ. ಅದನ್ನು ಉಪಯೋಗಿಸಿ ನೋಡುವಂತೆ ಸಮಾನಸ್ಥರು ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. ಹಾಗಾದರೆ, ತಾವು ಏನು ಮಾಡಬೇಕೆಂಬುದರ ಕುರಿತು ಅನೇಕ ಯುವ ಜನರು ನಿಜವಾಗಿಯೂ ಕಂಗೆಡಿಸಲ್ಪಟ್ಟಿದ್ದಾರೆಂಬುದರಲ್ಲಿ ಆಶ್ಚರ್ಯವೇನೂ ಇಲ್ಲ.

ಇಂದಿನ ಯುವ ಜನರ ಪ್ರಶ್ನೆಗಳಿಗೆ ಯಥಾರ್ಥವಾದ, ಕಾರ್ಯಸಾಧ್ಯ ಉತ್ತರಗಳಿಗಾಗಿರುವ ಅಗತ್ಯವನ್ನು ಗುರುತಿಸುತ್ತಾ, ಅವೇಕ್‌! ಪತ್ರಿಕೆಯು * ಜನವರಿ 1982ರಲ್ಲಿ “ಯಂಗ್‌ ಪೀಪಲ್‌ ಆಸ್ಕ್‌ . . . ” ಎಂಬ ಶೀರ್ಷಿಕೆಯ ಒಂದು ವಿಶೇಷ ಲೇಖನಮಾಲೆಯನ್ನು ಆರಂಭಿಸಿತು. ಆ ಸರಣಿಯು ಕೂಡಲೇ ಅನುಕೂಲಕರವಾದ ವಾಚಕ ಪ್ರತಿಕ್ರಿಯೆಯನ್ನು ಪಡೆಯಿತು. “ಆ ಸರಣಿಯು, ಇಂದಿನ ಯುವ ಜನರ ಅವಸ್ಥೆಯಲ್ಲಿನ ನಿಮ್ಮ ನಿರಂತರವಾದ ಆಸಕ್ತಿಯ ಪ್ರಮಾಣವಾಗಿದೆ,” ಎಂಬುದಾಗಿ ಒಬ್ಬ ಗುಣಗ್ರಾಹಿ ವಾಚಕನು ಬರೆದನು. “ಈ ಲೇಖನಗಳು ಎಂದೂ ಕೊನೆಗೊಳ್ಳದಿರಲೆಂದು ನಾನು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ,” ಎಂಬುದಾಗಿ ಮತ್ತೊಬ್ಬ ವಾಚಕನು ಬರೆದನು.

ಮತ್ತೊಬ್ಬ ಯುವ ವಾಚಕನು ಅದನ್ನು ಈ ರೀತಿಯಲ್ಲಿ ಬರೆದನು: ‘ನಾನು 14 ವರ್ಷ ಪ್ರಾಯದವನು ಮತ್ತು ದೊಡ್ಡವನಾಗುವುದು ಇಷ್ಟೊಂದು ಕಷ್ಟಕರವಾಗಿರಸಾಧ್ಯವಿತ್ತೆಂದು ನನಗೆ ಗೊತ್ತೇ ಇರಲಿಲ್ಲ. ಇಂದು ಯುವ ಮಕ್ಕಳ ಮೇಲೆ ಬಹಳಷ್ಟು ಒತ್ತಡವಿದೆ. ಆ ಕಾರಣದಿಂದಲೇ ನಾನು ಈ ಲೇಖನಗಳಿಗಾಗಿ ಬಹಳ ಕೃತಜ್ಞನಾಗಿದ್ದೇನೆ. ಅವುಗಳು ಪ್ರಕಾಶಿಸಲ್ಪಡುವಂತೆ ಮಾಡಿದುದಕ್ಕಾಗಿ ನಾನು ಪ್ರತಿ ರಾತ್ರಿ ದೇವರಿಗೆ ಉಪಕಾರ ಸಲ್ಲಿಸುತ್ತೇನೆ.’ ಲೇಖನಗಳಾದರೊ, ಬಾಲಿಶವಾಗಿರಲಿಲ್ಲ, ಇಲ್ಲವೆ ನಮ್ಮ ವಾಚಕರಿಗೆ “ಜರೆದು ಬರೆಯುವ” ಯಾವ ಪ್ರಯತ್ನವೂ ಮಾಡಲ್ಪಡಲಿಲ್ಲ. ಹೀಗೆ “ಯುವ ಜನರು ಪ್ರಶ್ನಿಸುವುದು (ಇಂಗ್ಲಿಷ್‌) . . . ” ವಯಸ್ಕರ ಮಧ್ಯದಲ್ಲಿ ಒಂದು ಗುಣಗ್ರಾಹಿ ಪಾಠಕ ವೃಂದವನ್ನು ಕಂಡುಕೊಂಡಿತು. “ನಾನು 40 ವರ್ಷ ಪ್ರಾಯದವಳು,” ಎಂದು ಹೆತ್ತವರಲ್ಲೊಬ್ಬರು ಬರೆದರು. “ಈ ಲೇಖನಗಳು ಹೆತ್ತವರಾದ ನಮಗೆ ನಿಜವಾಗಿಯೂ ದೈವದತ್ತ ಲೇಖನಗಳಾಗಿವೆ.” ಕ್ರೈಸ್ತ ಹಿರಿಯರು, ಯೆಹೋವನ ಸಾಕ್ಷಿಗಳ ಸಭೆಗಳಲ್ಲಿರುವ ಯುವ ಜನರನ್ನು ಅರ್ಥಮಾಡಿಕೊಳ್ಳುವುದರಲ್ಲಿ ಮತ್ತು ಅವರೊಂದಿಗೆ ವ್ಯವಹರಿಸುವುದರಲ್ಲಿ, ಅವುಗಳನ್ನು ವಿಶೇಷವಾಗಿ ಸಹಾಯಕಾರಿಯಾಗಿ ಕಂಡುಕೊಂಡರು.

“ಯುವ ಜನರು ಪ್ರಶ್ನಿಸುವುದು . . . ” ಇಂತಹ ಅತ್ಯುತ್ಸಾಹಿ ಪ್ರತಿಕ್ರಿಯೆಯನ್ನು ಏಕೆ ಕೆರಳಿಸಿದೆ? ಕೊಡಲ್ಪಟ್ಟ ಉತ್ತರಗಳು ನಿಜವಾಗಿಯೂ ಕಾರ್ಯಸಾಧಕ! ಪ್ರತಿಯೊಂದು ಲೇಖನವು ವಿಸ್ತಾರವಾದ ಸಂಶೋಧನೆಯ ಉತ್ಪಾದನೆಯಾಗಿದೆ. ಇನ್ನೂ ಹೆಚ್ಚಾಗಿ, ಯುವ ಜನರು ನಿಜವಾಗಿಯೂ ಹೇಗೆ ಯೋಚಿಸುತ್ತಾರೆ ಮತ್ತು ಭಾವಿಸಿಕೊಳ್ಳುತ್ತಾರೆಂಬುದನ್ನು ನಿರ್ಧರಿಸುವ ಸಲುವಾಗಿ, ಎಚ್ಚರ!ದ ವರದಿಗಾರರು ಲೋಕದಾದ್ಯಂತ ಇರುವ ನೂರಾರು ಯುವ ಜನರೊಂದಿಗೆ ಮಾತಾಡಿದ್ದಾರೆ! ಅವರ ನಿಷ್ಕಪಟ ಅಭಿವ್ಯಕ್ತಿಗಳು, ಈ ಲೇಖನಗಳನ್ನು ವಾಸ್ತವಿಕವಾಗಿಯೂ ಪ್ರಾಯೋಗಿಕವಾಗಿಯೂ ಮಾಡುವುದರಲ್ಲಿ ಬಹಳಷ್ಟು ಸಹಾಯಕಾರಿಯಾಗಿ ಪರಿಣಮಿಸಿವೆ.

ಹಾಗಿದ್ದರೂ, “ಯುವ ಜನರು ಪ್ರಶ್ನಿಸುವುದು . . . ” ಇದರ ಯಶಸ್ಸಿನ ನಿಜವಾದ ರಹಸ್ಯವು, ಕೊಡಲ್ಪಟ್ಟ ಉತ್ತರಗಳು ಸಿದ್ಧಾಂತ ಅಥವಾ ವೈಯಕ್ತಿಕ ಅಭಿಪ್ರಾಯದ ಮೇಲಲ್ಲ, ಬದಲಿಗೆ ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಕೊಳ್ಳಲ್ಪಡುವ ಅನಂತ ಸತ್ಯಗಳ ಮೇಲೆ ಆಧರಿಸಿವೆ ಎಂಬ ವಾಸ್ತವಾಂಶದಲ್ಲಿ ಅಡಗಿದೆ. ‘ಬೈಬಲಿನ ಮೇಲೆಯೊ?’ ಎಂದು ನೀವು ಕೇಳಬಹುದು. ಹೌದು, ಯುವ ಜನರಿಗೆ ಹೇಳಲಿಕ್ಕಾಗಿ ಅದರಲ್ಲಿ ಬಹಳಷ್ಟು ವಿಷಯವಿದೆ. (ಜ್ಞಾನೋಕ್ತಿಗಳು, ಅಧ್ಯಾಯಗಳು 1-7ನ್ನು ನೋಡಿರಿ; ಎಫೆಸ 6:1-3.) ಅದು, “ಯೌವನದ ಇಚ್ಛೆ”ಗಳ ಕುರಿತು ಸೂಕ್ಷ್ಮವಾಗಿ ಬಲ್ಲವನಾಗಿರುವ ನಮ್ಮ ಸೃಷ್ಟಿಕರ್ತನ ಮೂಲಕ ಪ್ರೇರಿಸಲ್ಪಟ್ಟಿತು. (2 ತಿಮೊಥೆಯ 2:20-22; 3:16) ಮತ್ತು ಬೈಬಲ್‌ ಸಮಯಗಳಂದಿನಿಂದ ಮಾನವ ಸಮಾಜವು ಬಹಳಷ್ಟು ಮಾರ್ಪಟ್ಟಿರುವುದಾದರೂ, ಯೌವನಭರಿತ ಇಚ್ಛೆಗಳು ಸ್ವಲ್ಪ ಮಟ್ಟಿಗೆ ಮಾತ್ರ ಮಾರ್ಪಟ್ಟಿವೆ. ಹೀಗಾಗಿ ಬೈಬಲು ಹಿಂದಿದ್ದಷ್ಟೇ ಪ್ರಚಲಿತವಾಗಿದೆ. ತಮಗೆ ಧರ್ಮೋಪದೇಶ ಮಾಡಲಾಗುತ್ತಿಲ್ಲ ಬದಲಿಗೆ ತಮ್ಮೊಂದಿಗೆ ವಿವೇಚಿಸಲಾಗುತ್ತಿದೆ ಎಂಬುದಾಗಿ ಯುವ ಜನರಿಗೆ ಅನಿಸುವಂತಹ ಒಂದು ವಿಧದಲ್ಲಿ ಬೈಬಲಿನ ಸಲಹೆಯನ್ನು ಪ್ರಸ್ತುತಪಡಿಸಲು ನಾವು ಪ್ರಯತ್ನಪಟ್ಟಿದ್ದೇವೆ. ಮತ್ತು ವಿಷಯವು ಮುಖ್ಯವಾಗಿ ಯೆಹೋವನ ಸಾಕ್ಷಿಗಳ ಮಧ್ಯದಲ್ಲಿರುವ ಯುವ ಜನರನ್ನು ಮನಸ್ಸಿನಲ್ಲಿಟ್ಟು ಬರೆಯಲ್ಪಟ್ಟಿರುವಾಗ, ಬೈಬಲಿನಲ್ಲಿರುವ ಪ್ರಾಯೋಗಿಕ ವಿವೇಕಕ್ಕಾಗಿ ಗೌರವವಿರುವ ಯಾವನೇ ವ್ಯಕ್ತಿಯಿಂದ ಅದು ಓದಲ್ಪಟ್ಟು, ಆನಂದಿಸಲ್ಪಡಸಾಧ್ಯವಿದೆ.

ಅನೇಕ ವಾಚಕರ ವಿನಂತಿಗಳಿಗೆ ಪ್ರತಿಕ್ರಿಯೆಯಲ್ಲಿ, ನಾವು ಅನೇಕ “ಯುವ ಜನರು ಪ್ರಶ್ನಿಸುವುದು . . . ” ಲೇಖನಗಳನ್ನು ಪುಸ್ತಕದ ರೂಪದಲ್ಲಿ ಸಂಕಲಿಸಿದ್ದೇವೆ. ಇದರಲ್ಲಿರುವ 39 ಅಧ್ಯಾಯಗಳು, 1982 ಮತ್ತು 1989ರ ನಡುವೆ ಅವೇಕ್‌! ಪತ್ರಿಕೆಯಲ್ಲಿ ಕಾಣಿಸಿಕೊಂಡ ಬಹುಮಟ್ಟಿಗೆ 200 ಲೇಖನಗಳಲ್ಲಿ, 100ಕ್ಕಿಂತಲೂ ಹೆಚ್ಚಿನ ಲೇಖನಗಳಿಂದ ತೆಗೆಯಲ್ಪಟ್ಟ ಮಾಹಿತಿಯನ್ನು ಸಂಕ್ಷೇಪಿಸಲ್ಪಟ್ಟ ರೂಪದಲ್ಲಿ ನಿರೂಪಿಸುತ್ತವೆ. ಒಂದಿಷ್ಟು ನವೀನ ವಿಷಯವನ್ನು ಸೇರಿಸಲಾಗಿದೆ. ಇನ್ನೂ ಹೆಚ್ಚಾಗಿ ಅದು, ವಿಭಿನ್ನ ದೇಶಗಳು ಮತ್ತು ಕುಲಗಳ ಯುವ ಜನರ ಛಾಯಾಚಿತ್ರಗಳಿಂದ ಸಮೃದ್ಧವಾಗಿ ಚಿತ್ರಿಸಲ್ಪಟ್ಟಿದೆ.

ಪರಿವಿಡಿಯನ್ನು ಪರಿಶೀಲಿಸಲು ಸಂಕೋಚಪಡಬೇಡಿರಿ ಮತ್ತು ನಿಮಗೆ ಬಹಳಷ್ಟು ಆಸಕ್ತಿಯ ವಿಷಯವಾಗಿರುವ ಪ್ರಶ್ನೆಗಳನ್ನು ತಡಮಾಡದೆ ತೆರೆದುನೋಡಿರಿ. ಆದರೂ, ತದನಂತರ ನೀವು ಇಡೀ ಪುಸ್ತಕವನ್ನು, ಬೈಬಲಿನ ನಿಮ್ಮ ಸ್ವಂತ ಪ್ರತಿಯಲ್ಲಿ ಶಾಸ್ತ್ರವಚನಗಳನ್ನು ತೆರೆದುನೋಡುತ್ತಾ, ಓದಲು ಸಮಯವನ್ನು ತೆಗೆದುಕೊಳ್ಳಿರೆಂದು ನಾವು ಶಿಫಾರಸ್ಸು ಮಾಡುತ್ತೇವೆ.

ಕೆಲವು ಕುಟುಂಬಗಳಲ್ಲಿ, ಹೆತ್ತವರು ಮಗುವಿನ ಮಧ್ಯದ ಸಂವಾದದ ಕೊರತೆಯಿದೆ ಇಲ್ಲವೆ ಅದು ಬಹುತೇಕ ಪೇಚಿನ ವಿಷಯವಾಗಿದೆ. ಆದ್ದರಿಂದ ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ ಕಾಣಿಸಿಕೊಳ್ಳುವ, ಚರ್ಚೆಗಾಗಿ ಪ್ರಶ್ನೆಗಳು ಎಂಬುದಾಗಿ ಕರೆಯಲ್ಪಡುವ ಒಂದು ವೈಶಿಷ್ಟ್ಯವನ್ನು ನಾವು ಸೇರಿಸಿದ್ದೇವೆ. ಪ್ರಶ್ನೆಗಳು ಪ್ರತಿಯೊಂದು ಪ್ಯಾರಗ್ರಾಫ್‌ನ ವಿಶ್ಲೇಷಣೆಗಾಗಿ ವಿನ್ಯಾಸಿಸಲ್ಪಟ್ಟಿರುವುದಿಲ್ಲ. ಅಥವಾ ತಮ್ಮ ಮಕ್ಕಳನ್ನು ಪರೀಕ್ಷಿಸಲು ಅವು ಹೆತ್ತವರಿಗಾಗಿರುವ ಒಂದು ಸಾಧನವಲ್ಲ. ಅವು ಯುವ ಜನರು ಮತ್ತು ಹೆತ್ತವರ ನಡುವೆ ಚರ್ಚೆಗಳನ್ನು ಪ್ರಚೋದಿಸಲು ವಿನ್ಯಾಸಿಸಲ್ಪಟ್ಟಿವೆ. ಪ್ರಶ್ನೆಗಳಲ್ಲಿ ಹೆಚ್ಚಿನವು, ನಿಮ್ಮ ಸ್ವಂತ ದೃಷ್ಟಿಕೋನವನ್ನು ನೀಡಲು ಅಥವಾ ಚರ್ಚಿಸುತ್ತಿರುವ ವಿಷಯವನ್ನು ನಿಮ್ಮ ಸ್ವಂತ ಸನ್ನಿವೇಶಕ್ಕೆ ಅನ್ವಯಿಸಿಕೊಳ್ಳಲು ನಿಮ್ಮನ್ನು ಅನುಮತಿಸುತ್ತವೆ.

ಆದುದರಿಂದ ಅನೇಕ ಕುಟುಂಬಗಳು ಈ ಪುಸ್ತಕವನ್ನು ಕೆಲವೊಮ್ಮೆ ಕುಟುಂಬ ಅಧ್ಯಯನಕ್ಕಾಗಿ ಒಂದು ಆಧಾರವಾಗಿ ಉಪಯೋಗಿಸಲು ಬಯಸಬಹುದು. ಕುಟುಂಬದ ಸದಸ್ಯರು ಪ್ಯಾರಗ್ರಾಫ್‌ಗಳನ್ನು ಓದಲು ಸರದಿಗಳನ್ನು ತೆಗೆದುಕೊಳ್ಳುತ್ತಾ, ಉದ್ಧರಿಸಲ್ಪಟ್ಟ ಯಾವುದೇ ಶಾಸ್ತ್ರವಚನಗಳನ್ನು ತೆರೆದುನೋಡುತ್ತಾ ಹಾಗೆ ಮಾಡಬಹುದು. ಸೂಕ್ತವಾದ ಉಪಶೀರ್ಷಿಕೆಗಳು ಪೂರ್ಣಗೊಳಿಸಲ್ಪಟ್ಟಂತೆ ಇಲ್ಲವೆ ಇಡೀ ಅಧ್ಯಾಯವು ಪೂರ್ಣಗೊಳಿಸಲ್ಪಟ್ಟಂತೆ, ಚರ್ಚೆಗಾಗಿರುವ ಪ್ರಶ್ನೆಗಳನ್ನು ಬಿಟ್ಟು ಬಿಟ್ಟು ಕೇಳಸಾಧ್ಯವಿದೆ. ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ವ್ಯಕ್ತಪಡಿಸುವಂತೆ ಎಲ್ಲರು ಉತ್ತೇಜಿಸಲ್ಪಡಸಾಧ್ಯವಿದೆ. ತಮ್ಮೊಳಗೆಯೇ ಪುಸ್ತಕವನ್ನು ಚರ್ಚಿಸುವುದನ್ನು ಯುವ ಜನರು ಆನಂದಿಸಬಹುದು.

ಇವು, ಯುವ ಜನರಿಗೂ “ನಿಭಾಯಿಸಲು ಕಠಿನವಾದ ಸಮಯಗಳು” ಆಗಿವೆ. (2 ತಿಮೊಥೆಯ 3:1, NW) ಆದರೆ, ದೇವರ ವಾಕ್ಯದ ಜ್ಞಾನದೊಂದಿಗೆ, ಜೀವನದ ಆ ಕಷ್ಟಕರ ಸಮಯವನ್ನು ನೀವು ಯಶಸ್ವಿಕರವಾಗಿ ದಾಟಸಾಧ್ಯವಿದೆ. (ಕೀರ್ತನೆ 119:9) ಆದುದರಿಂದ, ನಿಮ್ಮನ್ನು ಕಂಗೆಡಿಸಬಹುದಾದ ಪ್ರಶ್ನೆಗಳಿಗೆ ಪ್ರಾಯೋಗಿಕ, ಬೈಬಲಾಧಾರಿತ ಉತ್ತರಗಳ ಈ ಸಂಗ್ರಹವನ್ನು ಒದಗಿಸಲು ನಾವು ಸಂತೋಷಿಸುತ್ತೇವೆ.

ಪ್ರಕಾಶಕರು

[ಅಧ್ಯಯನ ಪ್ರಶ್ನೆಗಳು]

^ ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಇವರಿಂದ ಪಾಕ್ಷಿಕವಾಗಿ ಪ್ರಕಾಶಿಸಲ್ಪಡುತ್ತದೆ.