ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?

ವಿವಿಧ ವಿಷಯಗಳ ಕುರಿತು ಬೈಬಲ್‌ ಏನು ಹೇಳುತ್ತದೆಂದು ತಿಳಿಯಲು ಈ ಸಾಧನ ಹೊರತರಲಾಗಿದೆ. ಉದಾಹರಣೆಗೆ, ನಮಗೆ ಕಷ್ಟ ಯಾಕೆ ಬರುತ್ತೆ? ನಾವ್ಯಾಕೆ ಸಾಯುತ್ತೇವೆ? ಕುಟುಂಬದಲ್ಲಿ ಸಂತೋಷ ಗಳಿಸುವ ಗುಟ್ಟೇನು? ಇತ್ಯಾದಿ.

ದೇವರು ಇದನ್ನೇ ಉದ್ದೇಶಿಸಿದನೊ?

ಇವತ್ತು ಇಷ್ಟೇಕೆ ಸಮಸ್ಯೆಗಳಿವೆ? ನಿಮಗೆ ಗೊತ್ತಾ, ಬೇಗನೆ ಬೈಬಲ್‌ ಈ ಎಲ್ಲ ಸಮಸ್ಯೆಗಳಿಲ್ಲದ ದಿನಗಳು ಬರಲಿವೆ ಅಂತ ಹೇಳುತ್ತದೆ. ನೀವೂ ಅದರಿಂದ ಪ್ರಯೋಜನ ಪಡೆಯಬಹುದು.

ಅಧ್ಯಾಯ 1

ದೇವರ ಕುರಿತಾದ ಸತ್ಯವೇನು?

ದೇವರಿಗೆ ವೈಯಕ್ತಿಕವಾಗಿ ನಿಮ್ಮ ಬಗ್ಗೆ ಕಾಳಜಿ ಇದೆಯಾ? ದೇವರಲ್ಲಿರುವ ಗುಣಗಳ ಬಗ್ಗೆ, ನೀವು ಆತನ ಸ್ನೇಹಿತರಾಗುವುದು ಹೇಗೆ ಎಂಬ ಬಗ್ಗೆ ಕಲಿಯಿರಿ.

ಅಧ್ಯಾಯ 2

ಬೈಬಲ್‌—ದೇವರಿಂದ ಬಂದಿರುವ ಒಂದು ಗ್ರಂಥ

ನಿಮ್ಮ ಸಮಸ್ಯೆಗಳನ್ನು ನಿಭಾಯಿಸಲು ಈ ಪುಸ್ತಕ ನಿಮಗೆ ಹೇಗೆ ಸಹಾಯಮಾಡುತ್ತದೆ? ಅದರಲ್ಲಿರುವ ಪ್ರವಾದನೆಗಳನ್ನು ನಾವು ಯಾಕೆ ನಂಬಬಹುದು?

ಅಧ್ಯಾಯ 3

ಭೂಮಿಗಾಗಿ ದೇವರ ಉದ್ದೇಶವೇನು?

ಭೂಮಿಯನ್ನು ಪರದೈಸಾಗಿ ಮಾಡಬೇಕೆಂಬ ದೇವರ ಉದ್ದೇಶ ನಿಜವಾಗುತ್ತದಾ? ಆಗುತ್ತದಾದರೆ ಯಾವಾಗ?

ಅಧ್ಯಾಯ 4

ಯೇಸು ಕ್ರಿಸ್ತನು ಯಾರು?

ಯೇಸು ಏಕೆ ವಾಗ್ದತ್ತ ಮೆಸ್ಸೀಯನು? ಅವನು ಎಲ್ಲಿಂದ ಬಂದನು? ಅವನನ್ನು ಏಕೆ ಯೆಹೋವನು ಒಬ್ಬನೇ ಮಗನೆಂದು ಕರೆಯುತ್ತಾರೆ? ತಿಳಿದುಕೊಳ್ಳಿ.

ಅಧ್ಯಾಯ 5

ವಿಮೋಚನಾ ಮೌಲ್ಯ—ದೇವರ ಅತಿಶ್ರೇಷ್ಠ ಉಡುಗೊರೆ

ವಿಮೋಚನಾ ಮೌಲ್ಯ ಅಂದರೇನು? ಅದರಿಂದ ನೀವು ಹೇಗೆ ಪ್ರಯೋಜನ ಪಡೆಯಬಲ್ಲಿರಿ?

ಅಧ್ಯಾಯ 6

ಮೃತಜನರು ಎಲ್ಲಿದ್ದಾರೆ?

ಮೃತಜನರು ಎಲ್ಲಿದ್ದಾರೆ? ನಾವು ಯಾಕೆ ಸಾಯುತ್ತೇವೆ? ಎನ್ನುವ ಪ್ರಶ್ನೆಗಳಿಗೆ ಬೈಬಲಿನಲ್ಲಿರುವ ಉತ್ತರ ತಿಳಿಯಿರಿ.

ಅಧ್ಯಾಯ 7

ನಿಮ್ಮ ಮೃತ ಪ್ರಿಯ ಜನರಿಗಿರುವ ನಿಜ ನಿರೀಕ್ಷೆ

ನೀವು ಪ್ರೀತಿಸುವ ಯಾರಾದರೂ ತೀರಿಹೋಗಿದ್ದಾರಾ? ಅವರನ್ನು ಮತ್ತೆ ನೋಡಲು ಸಾಧ್ಯನಾ? ಪುನರುತ್ಥಾನದ ಬಗ್ಗೆ ಬೈಬಲ್‌ ಏನು ಹೇಳುತ್ತದೆಂದು ತಿಳಿಯಿರಿ.

ಅಧ್ಯಾಯ 8

ದೇವರ ರಾಜ್ಯ ಎಂದರೇನು?

ಲಕ್ಷಾಂತರ ಜನರಿಗೆ ಪರಲೋಕ ಪ್ರಾರ್ಥನೆ ಗೊತ್ತು. ‘ನಿನ್ನ ರಾಜ್ಯ ಬರಲಿ’ ಎಂಬುದರ ಅರ್ಥ ಏನು?

ಅಧ್ಯಾಯ 9

ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೋ?

ನಮ್ಮ ಸುತ್ತಮುತ್ತ ನಡೆಯುತ್ತಿರುವ ವಿಷಯಗಳು ಬೈಬಲ್‌ ಹೇಳಿದಂತೆ ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎನ್ನುವುದಕ್ಕೆ ರುಜುವಾತೆಂದು ತಿಳಿಯಿರಿ.

ಅಧ್ಯಾಯ 10

ಆತ್ಮಜೀವಿಗಳು ನಮ್ಮ ಮೇಲೆ ಪರಿಣಾಮ ಬೀರುವ ವಿಧ

ಬೈಬಲ್‌ ದೇವದೂತರ ಬಗ್ಗೆ ಮತ್ತು ದೆವ್ವಗಳ ಬಗ್ಗೆ ಹೇಳುತ್ತದೆ. ಈ ಆತ್ಮಜೀವಿಗಳು ನಿಜವಾಗಲೂ ಇದ್ದಾರಾ? ಅವು ನಮ್ಮ ಜೀವನದಲ್ಲಿ ಪರಿಣಾಮ ಬೀರಬಲ್ಲವಾ?

ಅಧ್ಯಾಯ 11

ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆ?

ಲೋಕದಲ್ಲಿರುವ ಎಲ್ಲ ಕಷ್ಟಸಮಸ್ಯೆಗಳಿಗೆ ದೇವರೇ ಕಾರಣ ಅಂತ ಜನ ಅಂದುಕೊಂಡಿದ್ದಾರೆ. ನಿಮಗೆ ಏನು ಅನಿಸುತ್ತದೆ? ನಮ್ಮ ಕಷ್ಟಕ್ಕೆ ಕಾರಣ ಏನಂತ ದೇವರು ಹೇಳಿದ್ದಾನೆ. ಈ ಕುರಿತು ತಿಳಿಯಿರಿ.

ಅಧ್ಯಾಯ 12

ದೇವರನ್ನು ಸಂತೋಷಪಡಿಸುವ ರೀತಿಯಲ್ಲಿ ಜೀವಿಸುವುದು

ಯೆಹೋವ ದೇವರನ್ನು ಸಂತೋಷಪಡಿಸುವ ರೀತಿಯಲ್ಲಿ ಜೀವಿಸುವುದು ಸಾಧ್ಯನಾ? ನೀವು ಆತನ ಸ್ನೇಹಿತರೂ ಆಗಬಹುದು.

ಅಧ್ಯಾಯ 13

ಜೀವದ ಬಗ್ಗೆ ದೇವರಿಗಿರುವ ನೋಟವನ್ನು ಹೊಂದಿರುವುದು

ಗರ್ಭಪಾತ, ರಕ್ತ ತೆಗೆದುಕೊಳ್ಳುವುದು, ಪ್ರಾಣಿ ಹಿಂಸೆ ಬಗ್ಗೆ ದೇವರಿಗೆ ಹೇಗನಿಸುತ್ತದೆ?

ಅಧ್ಯಾಯ 14

ನಿಮ್ಮ ಕುಟುಂಬ ಜೀವನವನ್ನು ಸಂತೋಷವುಳ್ಳದ್ದಾಗಿ ಮಾಡುವ ವಿಧ

ಪ್ರೀತಿ ತೋರಿಸುವುದರಲ್ಲಿ ಯೇಸುವಿಟ್ಟ ಮಾದರಿಯಿಂದ ಗಂಡ, ಹೆಂಡತಿ, ಹೆತ್ತವರು ಹಾಗೂ ಮಕ್ಕಳಿಗೆ ಪಾಠವಿದೆ. ಏನದು?

ಅಧ್ಯಾಯ 15

ದೇವರು ಒಪ್ಪುವ ಆರಾಧನೆ

ದೇವರು ಒಪ್ಪುವ ಸತ್ಯ ಧರ್ಮವನ್ನು ಕಂಡುಹಿಡಿಯಲು ಆರು ಅಂಶಗಳನ್ನು ಗಮನಿಸಿ.

ಅಧ್ಯಾಯ 16

ಸತ್ಯಾರಾಧನೆಯ ಪಕ್ಷದಲ್ಲಿ ಸ್ಥಿರವಾಗಿ ನಿಲ್ಲಿರಿ

ನಿಮ್ಮ ನಂಬಿಕೆಯನ್ನು ಇತರರಿಗೆ ವಿವರಿಸುವಾಗ ಯಾವ ಸವಾಲುಗಳು ಎದುರಾಗಬಹುದು? ಅವರ ಮನಸ್ಸಿಗೆ ನೋವಾಗದಂತೆ ನೀವು ಹೇಗೆ ವಿವರಿಸಬಹುದು?

ಅಧ್ಯಾಯ 17

ಪ್ರಾರ್ಥನೆಯ ಮುಖಾಂತರ ದೇವರ ಸಮೀಪಕ್ಕೆ ಬನ್ನಿರಿ

ದೇವರು ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನಾ? ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಲು ನೀವು ಪ್ರಾರ್ಥನೆ ಕುರಿತು ಬೈಬಲ್‌ ಏನು ಹೇಳುತ್ತೆ ಅಂತ ತಿಳಿದುಕೊಳ್ಳಬೇಕು.

ಅಧ್ಯಾಯ 18

ದೀಕ್ಷಾಸ್ನಾನ ಮತ್ತು ದೇವರೊಂದಿಗಿನ ನಿಮ್ಮ ಸಂಬಂಧ

ಕ್ರೈಸ್ತ ದೀಕ್ಷಾಸ್ನಾನ ಪಡೆಯಲು ಅರ್ಹತೆಗಳೇನು? ದೀಕ್ಷಾಸ್ನಾನ ಹೇಗೆ ಕೊಡಲಾಗುತ್ತದೆ? ಎನ್ನುವುದನ್ನು ಕಲಿಯಿರಿ.

ಅಧ್ಯಾಯ 19

ದೇವರ ಪ್ರೀತಿಯಲ್ಲಿ ನೆಲೆಗೊಳ್ಳಿರಿ

ಇಲ್ಲಿಯವರೆಗೆ ದೇವರು ನಿಮಗಾಗಿ ಏನೆಲ್ಲ ಮಾಡಿದ್ದಾನೋ ಅದಕ್ಕೆ ಆತನಿಗೆ ಕೃತಜ್ಞತೆ ತೋರಿಸುವುದು ಹೇಗೆ?

ಪರಿಶಿಷ್ಟ

ದೇವರ ಹೆಸರು—ಅದರ ಉಪಯೋಗ ಮತ್ತು ಅದರ ಅರ್ಥ

ಬೈಬಲಿನ ಅನೇಕ ಭಾಷಾಂತರಗಳಲ್ಲಿ ದೇವರ ಹೆಸರನ್ನು ಹಾಕಲಾಗಿಲ್ಲ. ಏಕೆ? ದೇವರ ಹೆಸರನ್ನು ಬಳಸುವುದು ಪ್ರಾಮುಖ್ಯವೇ?

ಪರಿಶಿಷ್ಟ

ದಾನಿಯೇಲನ ಪ್ರವಾದನೆಯು ಮೆಸ್ಸೀಯನ ಆಗಮನವನ್ನು ಮುಂತಿಳಿಸುವ ವಿಧ

ಮೆಸ್ಸೀಯ ಬರುವುದಕ್ಕಿಂತ 500 ವರ್ಷಗಳ ಹಿಂದೆಯೇ ದೇವರು ಮೆಸ್ಸೀಯನು ಬರುವ ಸಮಯವನ್ನು ನಿಖರವಾಗಿ ತಿಳಿಸಿದ್ದನು. ಈ ಆಸಕ್ತಿಕರ ಪ್ರವಾದನೆಯ ಬಗ್ಗೆ ಕಲಿಯಿರಿ.

ಪರಿಶಿಷ್ಟ

ಯೇಸು ಕ್ರಿಸ್ತನು-ವಾಗ್ದತ್ತ ಮೆಸ್ಸೀಯನು

ಮೆಸ್ಸೀಯನ ಬಗ್ಗೆ ಇದ್ದ ಎಲ್ಲ ಪ್ರವಾದನೆಗಳು ಯೇಸುವಿನ ಜೀವನದಲ್ಲಿ ನೆರವೇರಿದವು. ಈ ಪ್ರವಾದನೆಗಳು ಚಾಚೂತಪ್ಪದೆ ನೆರವೇರಿದವೋ ಎಂದು ನಿಮ್ಮ ಬೈಬಲಿನಲ್ಲಿ ಪರೀಕ್ಷಿಸಿ ನೋಡಿ.

ಪರಿಶಿಷ್ಟ

ತಂದೆ, ಮಗ ಮತ್ತು ಪವಿತ್ರಾತ್ಮದ ಕುರಿತಾದ ಸತ್ಯ

ಬೈಬಲ್‌ ತ್ರಯೈಕ್ಯವನ್ನು ಬೋಧಿಸುತ್ತದೆ ಎಂದು ತುಂಬ ಜನರು ನಂಬುತ್ತಾರೆ. ಆದರೆ ಅದು ಸರಿನಾ?

ಪರಿಶಿಷ್ಟ

ಸತ್ಯಕ್ರೈಸ್ತರು ಆರಾಧನೆಯಲ್ಲಿ ಶಿಲುಬೆಯನ್ನು ಏಕೆ ಉಪಯೋಗಿಸುವುದಿಲ್ಲ?

ಯೇಸು ನಿಜವಾಗಿಯೂ ಶಿಲುಬೆಯ ಮೇಲೆ ಸತ್ತನೋ? ಉತ್ತರವನ್ನು ಬೈಬಲಿನಿಂದಲೇ ಓದಿ ತಿಳಿದುಕೊಳ್ಳಿ.

ಪರಿಶಿಷ್ಟ

ಕರ್ತನ ಸಂಧ್ಯಾ ಭೋಜನ—ದೇವರಿಗೆ ಗೌರವ ತರುವ ಒಂದು ಆಚರಣೆ

ಕ್ರೈಸ್ತರಿಗೆ ಕ್ರಿಸ್ತನ ಮರಣದ ಜ್ಞಾಪಕವನ್ನು ಆಚರಿಸುವಂತೆ ಆಜ್ಞಾಪಿಸಲಾಗಿದೆ. ಇದನ್ನು ಯಾವಾಗ ಮತ್ತು ಹೇಗೆ ಆಚರಿಸಬೇಕು?

ಪರಿಶಿಷ್ಟ

ಮಾನವರಲ್ಲಿ ಅದೃಶ್ಯವಾದ ಅಮರ ಭಾಗವೊಂದು ನಿಜವಾಗಿಯೂ ಇದೆಯೊ?

ಮರಣದ ಸಮಯದಲ್ಲಿ ಮನುಷ್ಯನಲ್ಲಿರುವ ಅದ್ಯಶ್ಯ ಭಾಗವೊಂದು ಶರೀರದಿಂದ ಹೊರಬಂದು ಜೀವಿಸುವುದನ್ನು ಮುಂದುವರಿಸುತ್ತದೆ ಎಂದು ಅನೇಕರು ನಂಬುತ್ತಾರೆ. ಇದರ ಬಗ್ಗೆ ನಮಗೆ ದೇವರ ವಾಕ್ಯ ಏನು ಹೇಳುತ್ತದೆ?

ಪರಿಶಿಷ್ಟ

ಷೀಓಲ್‌ ಮತ್ತು ಹೇಡೀಸ್‌ ಎಂದರೇನು?

ಬೈಬಲಿನ ಕೆಲವು ಭಾಷಾಂತರಗಳಲ್ಲಿ ಈ ಪದಗಳನ್ನು “ಸಮಾಧಿ” ಅಥವಾ “ನರಕ” ಎಂದು ಕೊಡಲಾಗಿದೆ. ಈ ಪದಗಳ ನಿಜವಾದ ಅರ್ಥವೇನು?

ಪರಿಶಿಷ್ಟ

ನ್ಯಾಯವಿಚಾರಣೆಯ ದಿನ—ಅದೇನು?

ನ್ಯಾಯತೀರ್ಪಿನ ದಿನದಂದು ಎಲ್ಲ ನಂಬಿಗಸ್ತ ಮನುಷ್ಯರಿಗೆ ಆಶೀರ್ವಾದ ಸಿಗುವುದು. ಹೇಗೆಂದು ತಿಳಿಯಿರಿ.

ಪರಿಶಿಷ್ಟ

1914—ಬೈಬಲ್‌ ಪ್ರವಾದನೆಯಲ್ಲಿ ಮಹತ್ವಪೂರ್ಣವಾದ ಒಂದು ವರುಷ

1914ನೇ ವರ್ಷ ಮಹತ್ವಪೂರ್ಣ ಎಂಬುದಕ್ಕೆ ಬೈಬಲಿನಲ್ಲಿ ಯಾವ ರುಜುವಾತುಗಳಿವೆ?

ಪರಿಶಿಷ್ಟ

ಪ್ರಧಾನ ದೇವದೂತನಾದ ಮೀಕಾಯೇಲನು ಯಾರು?

ಈ ಶಕ್ತಿಶಾಲಿ ಪ್ರಧಾನ ದೇವದೂತನು ಯಾರೆಂದು ಗುರುತಿಸಲು ಬೈಬಲ್‌ ಸಹಾಯಮಾಡುತ್ತದೆ. ಅವನ ಬಗ್ಗೆ ಮತ್ತು ಅವನೀಗ ಏನು ಮಾಡುತ್ತಿದ್ದಾನೆ ಎಂಬ ಕುರಿತು ಕಲಿಯಿರಿ.

ಪರಿಶಿಷ್ಟ

‘ಮಹಾ ಬಾಬೆಲ್‌’ ಯಾರೆಂಬುದನ್ನು ಗುರುತಿಸುವುದು

‘ಮಹಾ ಬಾಬೆಲ್‌’ ಎಂಬ ಸ್ತ್ರೀಯ ಬಗ್ಗೆ ಪ್ರಕಟನೆ ಪುಸ್ತಕದಲ್ಲಿ ಹೇಳಲಾಗಿದೆ. ಅವಳು ನಿಜವಾಗಿ ಒಬ್ಬ ಸ್ತ್ರೀಯೋ? ಅವಳ ಬಗ್ಗೆ ಬೈಬಲಿನಲ್ಲಿ ಏನು ಹೇಳಲಾಗಿದೆ?

ಪರಿಶಿಷ್ಟ

ಯೇಸು ಡಿಸೆಂಬರ್‌ ತಿಂಗಳಿನಲ್ಲಿ ಹುಟ್ಟಿದನೊ?

ಯೇಸು ಹುಟ್ಟಿದ ಸಮಯದಲ್ಲಿ ಇದ್ದ ಹವಮಾನದ ಬಗ್ಗೆ ತಿಳಿಯಿರಿ. ಅದರಿಂದ ನಮಗೇನು ಗೊತ್ತಾಗುತ್ತದೆ?

ಪರಿಶಿಷ್ಟ

ನಾವು ಹಬ್ಬ, ಉತ್ಸವಗಳನ್ನು ಆಚರಿಸಬೇಕೊ?

ನಿಮ್ಮ ಪ್ರದೇಶದಲ್ಲಿ ಜನಪ್ರಿಯವಾಗಿರುವ ಅನೇಕ ಹಬ್ಬಗಳ ಮೂಲ ಯಾವುದು? ಉತ್ತರ ತಿಳಿದರೆ ಆಶ್ಚರ್ಯಪಡುವಿರಿ.