ಬೈಬಲ್‌ ನಮಗೆ ಕಲಿಸುವ ಪಾಠಗಳು

ಈ ಪುಸ್ತಕವು ಬೈಬಲಿನಲ್ಲಿ ತಿಳಿಸಲಾಗಿರುವ ಸೃಷ್ಟಿಯಿಂದ ಆರಂಭಿಸಿ, ಯೇಸುವಿನ ಜನನ ಮತ್ತು ಶುಶ್ರೂಷೆ, ದೇವರ ರಾಜ್ಯದ ಸಮಯಾವಧಿಯ ತನಕ ಆವರಿಸುತ್ತದೆ.

ಆಡಳಿತ ಮಂಡಲಿಯ ಪತ್ರ

ಇದನ್ನು ಹೇಗೆ ಉಪಯೋಗಿಸಬಹುದು?

ಪಾಠ 1

ದೇವರು ಆಕಾಶ-ಭೂಮಿಯನ್ನು ಸೃಷ್ಟಿಮಾಡಿದನು

ದೇವರು ಆಕಾಶ ಮತ್ತು ಭೂಮಿಯನ್ನು ಸೃಷ್ಟಿಮಾಡಿದನು ಅಂತ ಬೈಬಲ್‌ ಹೇಳುತ್ತೆ. ಎಲ್ಲರನ್ನು ಮತ್ತು ಎಲ್ಲವನ್ನು ಸೃಷ್ಟಿಸುವ ಮುಂಚೆ ದೇವರು ಯಾಕೆ ಒಬ್ಬ ದೇವದೂತನನ್ನು ಸೃಷ್ಟಿಸಿದನು?

ಪಾಠ 2

ದೇವರು ಮೊದಲ ಗಂಡು-ಹೆಣ್ಣನ್ನು ಸೃಷ್ಟಿಸಿದನು

ದೇವರು ಮೊದಲ ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿ ಅವರನ್ನು ಏದೆನ್‌ ತೋಟದಲ್ಲಿ ಇರಿಸಿದನು. ಅವರು ಮಕ್ಕಳನ್ನು ಪಡೆದು ಇಡೀ ಭೂಮಿಯನ್ನು ಸುಂದರ ತೋಟವನ್ನಾಗಿ ಮಾಡಬೇಕು ಎನ್ನುವುದು ಆತನ ಇಷ್ಟವಾಗಿತ್ತು.

ಪಾಠ 3

ಆದಾಮ-ಹವ್ವ ದೇವರ ಮಾತನ್ನು ಕೇಳಲಿಲ್ಲ

ಏದೆನ್‌ ತೋಟದಲ್ಲಿದ್ದ ಒಂದು ನಿರ್ದಿಷ್ಟ ಮರದ ವಿಶೇಷತೆ ಏನು?

ಪಾಠ 4

ಕೋಪದಿಂದ ಕೊಲೆಗೆ

ದೇವರು ಹೇಬೆಲ ಕಾಣಿಕೆಯನ್ನು ಮೆಚ್ಚಿದನು ಆದರೆ ಕಾಯಿನನ ಕಾಣಿಕೆಯನ್ನು ಮೆಚ್ಚಲಿಲ್ಲ. ಇದರಿಂದ ಕೋಪಗೊಂಡ ಕಾಯಿನ ಘೋರ ಕೃತ್ಯವನ್ನು ಮಾಡಿಬಿಟ್ಟ.

ಪಾಠ 5

ನೋಹನ ಹಡಗು

ಸ್ವರ್ಗದಿಂದ ಬಂದ ದೇವದೂತರು ಭೂಮಿಯಲ್ಲಿದ್ದ ಸ್ತ್ರೀಯರನ್ನು ಮದುವೆಯಾದರು. ಅವರಿಗೆ ಹುಟ್ಟಿದ ಮಕ್ಕಳು ದೈತ್ಯ ಹಿಂಸಕರಾಗಿದ್ದರು. ಎಲ್ಲಾ ಕಡೆ ಹಿಂಸೆ ತುಂಬಿತುಳುಕುತ್ತಿತ್ತು. ಆದರೆ ನೋಹ ಅವರಂತೆ ಇರಲಿಲ್ಲ. ಅವನು ದೇವರನ್ನು ಪ್ರೀತಿಸಿದನು, ವಿಧೇಯನಾದನು.

ಪಾಠ 6

ಹೊಸ ಲೋಕಕ್ಕೆ ಕಾಲಿಟ್ಟ ಎಂಟು ಜನ

40 ದಿನ ಹಗಲು-ರಾತ್ರಿ ಮಳೆ ಬಂತು. ನೋಹ ಮತ್ತು ಅವನ ಕುಟುಂಬ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಹಡಗಲ್ಲಿದ್ದರು. ಕೊನೆಗೆ ದೇವರು ಹಡಗಿಂದ ಹೊರಬರಲು ಹೇಳಿದನು.

ಪಾಠ 7

ಬಾಬೆಲಿನ ಗೋಪುರ

ಜನರು ಆಕಾಶವನ್ನು ಮುಟ್ಟುವಷ್ಟು ದೊಡ್ಡ ಪಟ್ಟಣ ಹಾಗೂ ಗೋಪುರವನ್ನ ಕಟ್ಟಲು ಕೈಹಾಕಿದರು. ದೇವರು ಇದ್ದಕ್ಕಿದ್ದಂತೆ ಅವರ ಭಾಷೆಯನ್ನು ಬದಲಾಯಿಸಿದ್ದೇಕೆ?

ಪಾಠ 8

ಅಬ್ರಹಾಮ-ಸಾರ ದೇವರ ಮಾತನ್ನು ಕೇಳಿದರು

ಅಬ್ರಹಾಮ ಮತ್ತು ಸಾರ ತಮ್ಮ ಆರಾಮವಾದ ಜೀವನವನ್ನು ಬಿಟ್ಟು ಅಲೆಮಾರಿಗಳಂತೆ ಜೀವಿಸಲು ಕಾನಾನಿಗೆ ಯಾಕೆ ಹೋದರು?

ಪಾಠ 9

ಕೊನೆಗೂ ಮಗನನ್ನು ಹೆತ್ತಳು!

ದೇವರು ಅಬ್ರಾಹಾಮನಿಗೆ ಕೊಟ್ಟ ಮಾತನ್ನು ಹೇಗೆ ನೆರವೇರಿಸಿದನು? ಈ ವಾಗ್ದಾನದಲ್ಲಿ ಅಬ್ರಹಾಮನ ಮಕ್ಕಳಲ್ಲಿ ಯಾರು ಒಳಗೂಡಿದ್ದಾರೆ? ಇಸಾಕನೋ ಅಥವಾ ಇಷ್ಮಾಯೇಲನೋ?

ಪಾಠ 10

ಲೋಟನ ಹೆಂಡತಿಯಿಂದ ಪಾಠ

ದೇವರು ಸೊದೋಮ್‌ ಮತ್ತು ಗೊಮೋರ ಪಟ್ಟಣಗಳನ್ನು ಬೆಂಕಿ ಮಳೆಯಿಂದ ನಾಶ ಮಾಡಿದನು. ಯಾಕೆ? ಲೋಟನ ಹೆಂಡತಿಯಿಂದ ನಾವೇನು ಕಲಿಯಬಹುದು?

ಪಾಠ 11

ನಂಬಿಕೆಯ ಪರೀಕ್ಷೆ

ದೇವರು ಅಬ್ರಹಾಮನಿಗೆ ‘ನಿನ್ನ ಒಬ್ಬನೇ ಮಗನನ್ನ ಮೊರೀಯ ದೇಶದ ಬೆಟ್ಟದಲ್ಲಿ ಬಲಿಯಾಗಿ ನನಗೆ ಕೊಡು’ ಅಂದನು. ಈ ನಂಬಿಕೆಯ ಪರೀಕ್ಷೆಯನ್ನು ಅಬ್ರಹಾಮನು ಹೇಗೆ ಜಯಿಸಿದನು?

ಪಾಠ 12

ಯಾಕೋಬನಿಗೆ ಬಾಧ್ಯತೆ ಸಿಕ್ಕಿತು

ಇಸಾಕ ಮತ್ತು ರೆಬೆಕ್ಕರಿಗೆ ಏಸಾವ ಮತ್ತು ಯಾಕೋಬ ಎಂಬ ಇಬ್ಬರು ಗಂಡುಮಕ್ಕಳಿದ್ದರು. ಏಸಾವ ಮೊದಲನೇ ಮಗನಾಗಿದ್ದರಿಂದ ಅವನಿಗೆ ಬಾಧ್ಯತೆ ಸಿಗಲಿತ್ತು. ಆದರೆ ಅವನು ಒಂದು ಹೊತ್ತಿನ ಊಟಕ್ಕಾಗಿ ಯಾಕೆ ಕೊಟ್ಟುಬಿಟ್ಟ?

ಪಾಠ 13

ಯಾಕೋಬ ಮತ್ತು ಏಸಾವ ಒಂದಾದರು

ಯಾಕೋಬ ದೇವದೂತನಿಂದ ಆಶೀರ್ವಾದ ಪಡೆದಿದ್ದು ಯಾಕೆ? ಯಾಕೋಬ ಏಸಾವನೊಂದಿಗೆ ಹೇಗೆ ಸಮಾಧಾನ ಮಾಡಿಕೊಂಡ?

ಪಾಠ 14

ಒಬ್ಬ ಆಳು ದೇವರಿಗೆ ವಿಧೇಯನಾದ

ಯೋಸೇಫನು ಸರಿಯಾದದ್ದನ್ನೇ ಮಾಡಿದನಾದರೂ ಅವನು ತುಂಬಾ ಕಷ್ಟಗಳನ್ನು ಅನುಭವಿಸಿದ ಏಕೆ?

ಪಾಠ 15

ಯೆಹೋವನು ಯೋಸೇಫನನ್ನು ಯಾವತ್ತೂ ಮರೆಯಲಿಲ್ಲ

ಯೋಸೇಫ ತನ್ನ ಕುಟುಂಬದಿಂದ ದೂರವಿದ್ದರೂ ದೇವರು ಆತನೊಟ್ಟಿಗೆ ಇದ್ದನೆಂದು ಆತನು ತೋರಿಸಿಕೊಟ್ಟನು.

ಪಾಠ 16

ಯೋಬ ಯಾರು?

ತುಂಬಾ ಕಷ್ಟದ ಪರಿಸ್ಥಿತಿಯಲ್ಲೂ ಅವನು ಯೆಹೋವನಿಗೆ ವಿಧೇಯನಾದನು.

ಪಾಠ 17

ಮೋಶೆ ಯೆಹೋವನನ್ನು ಆರಾಧಿಸುವ ಆಯ್ಕೆ ಮಾಡಿದ

ತನ್ನ ತಾಯಿಯ ಬುದ್ಧಿವಂತಿಕೆಯಿಂದ ಪುಟ್ಟ ಮೋಶೆ ರಕ್ಷಿಸಲ್ಪಟ್ಟನು.

ಪಾಠ 18

ಉರಿಯುತ್ತಿರುವ ಪೊದೆ

ಬೆಂಕಿ ಪೊದೆಯನ್ನು ಸುಡಲಿಲ್ಲ ಏಕೆ?

ಪಾಠ 19

ಮೊದಲ ಮೂರು ಶಿಕ್ಷೆಗಳು

ಅಹಂಕಾರಿ ಫರೋಹ ಒಂದು ಚಿಕ್ಕ ಕೆಲಸ ಮಾಡದೇ ಈಜಿಪ್ಟಿನವರ ಮೇಲೆ ತೊಂದರೆಗಳನ್ನು ತಂದ.

ಪಾಠ 20

ಮುಂದಿನ ಆರು ಶಿಕ್ಷೆಗಳು

ಈ ಆರು ಶಿಕ್ಷೆಗಳು ಮೊದಲ ಮೂರು ಶಿಕ್ಷೆಗಳಿಗಿಂತ ಹೇಗೆ ಭಿನ್ನವಾಗಿತ್ತು?

ಪಾಠ 21

ಹತ್ತನೇ ಶಿಕ್ಷೆ

ಈ ಶಿಕ್ಷೆ ಎಷ್ಟು ಭೀಕರವಾಗಿತ್ತೆಂದರೆ ಅಹಂಕಾರಿ ಫರೋಹ ಕೊನೆಗೂ ಬಿಟ್ಟುಕೊಟ್ಟ.

ಪಾಠ 22

ಕೆಂಪು ಸಮುದ್ರದ ಬಳಿ ನಡೆದ ಅದ್ಭುತ

ಫರೋಹ ಹತ್ತು ಶಿಕ್ಷೆಗಳನ್ನು ಅನುಭವಿಸಬೇಕಾಯಿತು. ದೇವರು ಮಾಡಿದ ಈ ಅದ್ಭುತಗಳಿಂದ ಅವನು ಬಚಾವಾಗಲೂ ಸಾಧ್ಯವಾಯಿತಾ?

ಪಾಠ 23

ಯೆಹೋವನಿಗೆ ಕೊಟ್ಟ ಮಾತು

ಇಸ್ರಾಯೇಲ್ಯರು ಸಿನಾಯಿ ಬೆಟ್ಟದ ಹತ್ತಿರ ಇದ್ದಾಗ ದೇವರಿಗೆ ಒಂದು ವಿಶೇಷವಾದ ಮಾತು ಕೊಟ್ಟರು.

ಪಾಠ 24

ಅವರು ಕೊಟ್ಟ ಮಾತನ್ನು ತಪ್ಪಿದರು

ಮೋಶೆ ಹತ್ತು ಆಜ್ಞೆಗಳನ್ನು ತರುವಷ್ಟರಲ್ಲಿ ಜನರು ಘೋರ ಪಾಪವನ್ನು ಮಾಡಿದರು.

ಪಾಠ 25

ಆರಾಧೆನೆಗಾಗಿ ಒಂದು ಪವಿತ್ರ ಡೇರೆ

ಈ ವಿಶೇಷ ಪವಿತ್ರ ಡೇರೆಯಲ್ಲಿ ಒಪ್ಪಂದದ ಮಂಜೂಷವಿತ್ತು.

ಪಾಠ 26

ಹನ್ನೆರಡು ಗೂಢಚಾರರು

ಕಾನಾನ್‌ ದೇಶವನ್ನು ನೋಡಿ ಬರಲು ಹೋದ ಗೂಢಚಾರರಲ್ಲಿ ಯೆಹೋಶುವ ಕಾಲೇಬರು ಉಳಿದ ಹತ್ತು ಗಂಡಸರಿಗಿಂತ ಭಿನ್ನರಾಗಿದ್ದರು.

ಪಾಠ 27

ಅವರು ಯೆಹೋವನ ವಿರುದ್ಧ ತಿರುಗಿಬಿದ್ದರು

ಕೋರಹ, ದಾತಾನ್‌, ಅಬೀರಾಮ, ಮತ್ತು ಇತರ 250 ಜನ ಯೆಹೋವನ ಬಗ್ಗೆ ಒಂದು ಮುಖ್ಯ ವಿಷಯವನ್ನು ತಿಳಿದುಕೊಳ್ಳಲು ತಪ್ಪಿಹೋದರು.

ಪಾಠ 28

ಬಿಳಾಮನ ಕತ್ತೆ ಮಾತಾಡಿತು

ಬಿಳಾಮನಿಗೆ ಕಾಣದಿದ್ದ ದೇವದೂತ ಕತ್ತೆಗೆ ಕಾಣಿಸಿದನು.

ಪಾಠ 29

ಯೆಹೋವನು ಯೆಹೋಶುವನನ್ನು ಆರಿಸಿದನು

ಯೆಹೋವನು ಯೆಹೋಶುವನಿಗೆ ಕೊಟ್ಟ ನಿರ್ದೇಶನಗಳಿಂದ ಇಂದು ನಮಗೂ ಪ್ರಯೋಜನವಿದೆ.

ಪಾಠ 30

ರಾಹಾಬ ಗೂಢಚಾರರನ್ನು ಅಡಗಿಸಿಟ್ಟಳು

ಯೆರಿಕೋವಿನ ಗೋಡೆಗಳು ಕುಸಿದು ಬಿದ್ದು ನೆಲ ಸಮವಾದವು. ಆದರೆ ಗೋಡೆಯ ಮೇಲೆ ಇದ್ದ ರಾಹಾಬಳ ಮನೆಗೆ ಮಾತ್ರ ಏನೂ ಆಗಲಿಲ್ಲ.

ಪಾಠ 31

ಯೆಹೋಶುವ ಮತ್ತು ಗಿಬ್ಯೋನ್ಯರು

ಯೆಹೋಶುವನು ದೇವರಿಗೆ, ‘ಸೂರ್ಯನೇ ಚಲಿಸದೆ ಹಾಗೇ ನಿಲ್ಲು’ ಎಂದು ಪ್ರಾರ್ಥಿಸುತ್ತಾನೆ. ಆಗ ದೇವರು ಉತ್ತರಿಸಿದನಾ?

ಪಾಠ 32

ಒಬ್ಬ ಹೊಸ ನಾಯಕ ಮತ್ತು ಇಬ್ಬರು ಧೀರ ಸ್ತ್ರೀಯರು

ಯೆಹೋಶುವ ಸತ್ತ ನಂತರ ಇಸ್ರಾಯೇಲ್ಯರು ಮೂರ್ತಿಗಳನ್ನು ಪೂಜಿಸಲು ಆರಂಭಿಸಿದರು. ಅವರು ಕಷ್ಟಗಳನ್ನು ಅನುಭವಿಸಿದರು. ಆದರೆ ನ್ಯಾಯಸ್ಥಾಪಕ ಬಾರಾಕ ಮತ್ತು ಪ್ರವಾದಿನಿ ದೆಬೋರ ಮತ್ತು ಯಾಯೇಲಳ ಮೂಲಕ ಸಹಾಯ ಸಿಕ್ಕಿತು.

ಪಾಠ 33

ರೂತ್‌ ಮತ್ತು ನೊವೊಮಿ

ತಮ್ಮ ಗಂಡಂದಿರನ್ನು ಕಳೆದುಕೊಂಡ ಇಬ್ಬರು ಇಸ್ರಾಯೇಲಿಗೆ ಹಿಂತಿರುಗಿದರು. ರೂತಳು ಕೆಲಸಕ್ಕಾಗಿ ಹೋದಾಗ ಬೋವಜನನ್ನು ಕಂಡಳು.

ಪಾಠ 34

ಗಿದ್ಯೋನ ಮಿದ್ಯಾನ್ಯರನ್ನು ಸೋಲಿಸಿದನು

ಮಿದ್ಯಾನ್ಯರು ಇಸ್ರಾಯೇಲ್ಯರ ಜೀವನವನ್ನೇ ಕಷ್ಟಕರವನ್ನಾಗಿ ಮಾಡಿದಾಗ, ಇಸ್ರಾಯೇಲ್ಯರು ಸಹಾಯಕ್ಕಾಗಿ ಯೆಹೋವನಿಗೆ ಬೇಡಿದರು. ಗಿದ್ಯೋನನ ಚಿಕ್ಕ ಸೈನ್ಯ 1,35,000 ವೈರಿ ಸೈನಿಕರನ್ನು ಹೇಗೆ ಸೋಲಿಸಿತು?

ಪಾಠ 35

ಒಬ್ಬ ಮಗನಿಗಾಗಿ ಹನ್ನಳ ಪ್ರಾರ್ಥನೆ

ಎಲ್ಕಾನ ಹನ್ನ, ಪೆನಿನ್ನ ಮತ್ತು ಮಕ್ಕಳನ್ನು ಆರಾಧನೆಗಾಗಿ ಶೀಲೋವಿನಲ್ಲಿದ್ದ ಪವಿತ್ರ ಡೇರೆಗೆ ಹೋಗುತ್ತಿದ್ದ. ಅಲ್ಲಿ ಒಬ್ಬ ಮಗನಿಗಾಗಿ ಹನ್ನಳು ಪ್ರಾರ್ಥಿಸಿದಳು. ಒಂದು ವರ್ಷದ ನಂತರ ಸಮುವೇಲ ಜನಿಸಿದನು!

ಪಾಠ 36

ಯೆಫ್ತಾಹ ಕೊಟ್ಟ ಮಾತು

ಯೆಫ್ತಾಹ ಏನೆಂದು ಮಾತು ಕೊಟ್ಟ ಮತ್ತು ಏಕೆ? ಈ ಮಾತಿಗೆ ಯೆಫ್ತಾಹನ ಮಗಳು ಹೇಗೆ ಪ್ರತಿಕ್ರಿಯಿಸಿದಳು?

ಪಾಠ 37

ಯೆಹೋವನು ಸಮುವೇಲನೊಂದಿಗೆ ಮಾತಾಡಿದ

ಮಹಾ ಪುರೋಹಿತ ಏಲಿಯ ಇಬ್ಬರು ಗಂಡುಮಕ್ಕಳು ಪವಿತ್ರ ಡೇರೆಯಲ್ಲಿ ಪುರೋಹಿತರಾಗಿ ಸೇವೆ ಮಾಡುತ್ತಿದ್ದರು. ಆದರೆ ದೇವರ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ಆದರೆ ಹುಡುಗ ಸಮುವೇಲ ಭಿನ್ನನಾಗಿದ್ದ. ಯೆಹೋವನು ಸಮುವೇಲನೊಂದಿಗೆ ಮಾತಾಡಿದನು.

ಪಾಠ 38

ಯೆಹೋವನಿಂದ ಶಕ್ತಿ ಪಡೆದ ಸಂಸೋನ

ಫಿಲಿಷ್ಟಿಯರ ವಿರುದ್ಧ ಹೋರಾಡಲು ದೇವರು ಸಂಸೋನನಿಗೆ ಶಕ್ತಿ ಕೊಟ್ಟನು ಆದರೆ ಸಂಸೋನ ತಪ್ಪಾದ ನಿರ್ಧಾರ ಮಾಡಿದ್ದರಿಂದ ಫಿಲಿಷ್ಟಿಯರು ಅವನನ್ನು ಜೈಲಿಗೆ ಹಾಕಿದರು.

ಪಾಠ 39

ಇಸ್ರಾಯೇಲ್ಯರ ಮೊದಲ ರಾಜ

ದೇವರು ಇಸ್ರಾಯೇಲ್ಯರನ್ನು ಮಾರ್ಗದರ್ಶಿಸಲು ನ್ಯಾಯಾಧೀಶರನ್ನು ನೀಡಿದನು, ಆದರೆ ಅವರು ತಮಗೊಬ್ಬ ರಾಜ ಬೇಕು ಎಂದು ಕೇಳಿದರು. ಸಮುವೇಲನು ಸೌಲನನ್ನು ರಾಜನಾಗಿ ಅಭಿಷೇಕಿಸಿದ ಆದರೆ ಸಮಯ ಕಳೆದಂತೆ ಸೌಲನನ್ನು ದೇವರು ತಿರಸ್ಕರಿಸಿದನು. ಯಾಕೆ?

ಪಾಠ 40

ದಾವೀದ ಮತ್ತು ಗೊಲ್ಯಾತ

ಯೆಹೋವನು ದಾವೀದನನ್ನು ಇಸ್ರಾಯೇಲಿನ ರಾಜನಾಗುವಂತೆ ಆರಿಸುತ್ತಾನೆ ಮತ್ತು ಆ ಆಯ್ಕೆ ಉತ್ತಮವಾಗಿತ್ತೆಂದು ದಾವೀದನು ತೋರಿಸಿಕೊಡುತ್ತಾನೆ.

ಪಾಠ 41

ದಾವೀದ ಮತ್ತು ಸೌಲ

ಇವರಲ್ಲಿ ಒಬ್ಬನು ಇನ್ನೊಬ್ಬನನ್ನು ದ್ವೇಷಿಸಿದ್ದು ಯಾಕೆ ಮತ್ತು ದ್ವೇಷಕ್ಕೆ ಗುರಿಯಾದವನು ಹೇಗೆ ಪ್ರತಿಕ್ರಿಯಿಸಿದನು?

ಪಾಠ 42

ಧೈರ್ಯಶಾಲಿ ಹಾಗೂ ನಿಷ್ಠಾವಂತ ಯೋನಾತಾನ

ರಾಜನ ಮಗ ದಾವೀದನ ಸ್ನೇಹಿತನಾದ.

ಪಾಠ 43

ರಾಜ ದಾವೀದ ಮಾಡಿದ ದೊಡ್ಡ ಪಾಪ

ಒಂದು ತಪ್ಪಾದ ತೀರ್ಮಾನ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಪಾಠ 44

ಯೆಹೋವನಿಗಾಗಿ ಒಂದು ಆಲಯ

ದೇವರು ರಾಜ ಸೊಲೊಮೋನನ ವಿನಂತಿಯನ್ನು ಕೇಳಿ ಅವನಿಗೆ ಅನೇಕ ಆಶೀರ್ವಾದಗಳನ್ನು ಕೊಟ್ಟನು.

ಪಾಠ 45

ರಾಜ್ಯ ಎರಡು ಭಾಗವಾಯಿತು

ಅನೇಕ ಇಸ್ರಾಯೇಲ್ಯರು ಯೆಹೋವನ ಸೇವೆ ಮಾಡುವುದನ್ನು ನಿಲ್ಲಿಸಿದರು.

ಪಾಠ 46

ಕರ್ಮೆಲ್‌ ಬೆಟ್ಟದಲ್ಲಿ ಒಂದು ಪರೀಕ್ಷೆ

ಸತ್ಯ ದೇವರು ಯಾರು? ಯೆಹೋವನೋ ಅಥವಾ ಬಾಳನೋ?

ಪಾಠ 47

ಯೆಹೋವನು ಎಲೀಯನನ್ನು ಬಲಪಡಿಸಿದ

ದೇವರು ನಿಮ್ಮನ್ನು ಬಲಪಡಿಸುತ್ತಾನೆಂದು ನೆನಸುತ್ತೀರಾ?

ಪಾಠ 48

ವಿಧವೆಯ ಮಗ ಮತ್ತೆ ಬದುಕಿ ಬಂದ

ಒಂದೇ ಮನೆಯಲ್ಲಿ ಎರಡು ಅದ್ಭುತಗಳು!

ಪಾಠ 49

ಕೆಟ್ಟ ರಾಣಿಗೆ ಶಿಕ್ಷೆ ಸಿಕ್ಕಿತು

ಇಸ್ರಾಯೇಲ್ಯನಾದ ನಾಬೋತನ ದ್ರಾಕ್ಷಿ ತೋಟವನ್ನು ಕಿತ್ತುಕೊಳ್ಳಲಿಕ್ಕಾಗಿ ಈಜೆಬೇಲಳು ಅವನನ್ನು ಕೊಲ್ಲುವ ಯೋಜನೆ ಮಾಡುತ್ತಾಳೆ. ಅವಳ ಈ ಕೆಟ್ಟ ಕೆಲಸ ಮತ್ತು ಅನ್ಯಾಯವನ್ನು ಯೆಹೋವನು ನೋಡದೆ ಇರಲಿಲ್ಲ.

ಪಾಠ 50

ಯೆಹೋವನು ಯೆಹೋಷಾಫಾಟನನ್ನು ಕಾಪಾಡಿದನು

ಯೆಹೂದಕ್ಕೆ ಶತ್ರು ರಾಜ್ಯಗಳಿಂದ ಬೆದರಿಕೆ ಬಂದಾಗ ಒಳ್ಳೆಯ ರಾಜನಾದ ಯೆಹೋಷಾಫಾಟನು ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸಿದನು.

ಪಾಠ 51

ಒಬ್ಬ ಯುದ್ಧವೀರ ಮತ್ತು ಪುಟ್ಟ ಹುಡುಗಿ

ಇಸ್ರಾಯೇಲಿನ ಒಬ್ಬ ಪುಟ್ಟ ಹುಡುಗಿ ತನ್ನ ಒಡೆಯನಿಗೆ ಯೆಹೋವನ ಅಪಾರ ಶಕ್ತಿ ಮತ್ತು ಅದರ ಅದ್ಭುತ ಫಲಿತಾಂಶಗಳ ಬಗ್ಗೆ ಹೇಳಿದಳು.

ಪಾಠ 52

ಯೆಹೋವನ ಅಗ್ನಿಮಯ ಸೈನ್ಯ

ಎಲೀಷನ ಸೇವಕನಿಗೆ ‘ಅವ್ರ ಜೊತೆ ಇರುವವ್ರಿಗಿಂತ ನಮ್ಮ ಜೊತೆ ಇರುವವ್ರೇ ಜಾಸ್ತಿ’ ಎಂದು ಹೇಗೆ ಗೊತ್ತಾಯಿತು?

ಪಾಠ 53

ಧೀರ ಯೆಹೋಯಾದ

ಒಬ್ಬ ನಂಬಿಗಸ್ತ ಪುರೋಹಿತ ದುಷ್ಟ ರಾಣಿಯ ವಿರುದ್ದ ನಿಲ್ಲುತ್ತಾನೆ.

ಪಾಠ 54

ಯೆಹೋವನು ಯೋನನ ಜೊತೆ ತಾಳ್ಮೆಯಿಂದ ನಡಕೊಂಡ

ದೇವರ ಪ್ರವಾದಿಯೊಬ್ಬನನ್ನು ಮೀನು ಏಕೆ ನುಂಗಿತು? ಅದರಿಂದ ಅವನು ಹೇಗೆ ಹೊರಗೆ ಬಂದನು? ಯೆಹೋವನು ಅವನಿಗೆ ಯಾವ ಪಾಠಗಳನ್ನು ಕಲಿಸಿದನು?

ಪಾಠ 55

ಯೆಹೋವನ ದೂತನು ಹಿಜ್ಕೀಯನನ್ನು ಕಾಪಾಡಿದ

ಯೆಹೋವನು ತನ್ನ ವೈರಿಗಳನ್ನು ಕಾಪಾಡುವುದಿಲ್ಲ ಎಂದು ಯೆಹೂದದ ವೈರಿಗಳು ಹೇಳಿದ್ದರು, ಆದರೆ ಅವರ ಅನಿಸಿಕೆ ತಪ್ಪು!

ಪಾಠ 56

ಯೋಷೀಯ ನಿಯಮ ಪುಸ್ತಕವನ್ನ ಪ್ರೀತಿಸಿದ

ಯೋಷೀಯ ರಾಜನಾದಾಗ ಅವನಿಗೆ ಎಂಟು ವರ್ಷ ವಯಸ್ಸಾಗಿತ್ತು ಮತ್ತು ಅವನು ಜನರು ಯೆಹೋವನನ್ನು ಆರಾಧಿಸಲು ಸಹಾಯ ಮಾಡಿದನು.

ಪಾಠ 57

ಯೆಹೋವನು ಯೆರೆಮೀಯನನ್ನು ಸಾರಲು ಕಳುಹಿಸಿದ

ಯೆರೆಮೀಯನ ಸಂದೇಶವನ್ನು ಕೇಳಿ ಯೆಹೂದದ ಹಿರಿಯರು ಕೋಪಗೊಂಡರು.

ಪಾಠ 58

ಯೆರೂಸಲೇಮ್‌ ನಾಶವಾಯಿತು

ಯೆಹೂದದ ಜನರು ಬಿಡದೆ ಸುಳ್ಳು ದೇವರುಗಳನ್ನು ಆರಾಧಿಸಿದರು. ಆದ್ದರಿಂದ ಯೆಹೋವನು ಅವರ ಕೈಬಿಟ್ಟನು.

ಪಾಠ 59

ಯೆಹೋವನಿಗೆ ವಿಧೇಯರಾದ ನಾಲ್ಕು ಹುಡುಗರು

ಯುವ ಯೆಹೂದ್ಯರು ಬಾಬೆಲಿನ ನೆಬೂಕದ್ನೆಚ್ಚರನ ಆಸ್ಥಾನದಲ್ಲಿದ್ದರೂ ಯೆಹೋವನಿಗೆ ನಿಷ್ಠರಾಗಿ ಉಳಿಯಬೇಕೆಂದು ದೃಢತೀರ್ಮಾನ ಮಾಡಿದ್ದರು.

ಪಾಠ 60

ಸದಾಕಾಲ ಇರುವ ಆಳ್ವಿಕೆ

ನೆಬೂಕದ್ನೆಚ್ಚರನು ಕಂಡ ವಿಚಿತ್ರ ಕನಸಿನ ಅರ್ಥವನ್ನು ದಾನಿಯೇಲನು ತಿಳಿಸುತ್ತಾನೆ.

ಪಾಠ 61

ಅವರು ಅಡ್ಡಬೀಳಲಿಲ್ಲ

ಶದ್ರಕ್‌, ಮೇಶಕ್‌, ಅಬೇದ್‌ನೆಗೋ ನೆಬೂಕದ್ನೆಚ್ಚರನು ನಿಲ್ಲಿಸಿದ ದೊಡ್ಡ ಚಿನ್ನದ ಮೂರ್ತಿಗೆ ಅಡ್ಡಬೀಳಲಿಲ್ಲ.

ಪಾಠ 62

ದೊಡ್ಡ ಮರದಂತಿರುವ ಸಾಮ್ರಾಜ್ಯ

ನೆಬೂಕದ್ನೆಚ್ಚರ ಕಂಡ ಕನಸು ಅವನ ಭವಿಷ್ಯವನ್ನೇ ತಿಳಿಸಿತು.

ಪಾಠ 63

ಗೋಡೆಯ ಮೇಲೆ ಕೈಬರಹ

ಈ ಗೋಡೆಯ ಮೇಲಿನ ರಹಸ್ಯ ಪದಗಳು ಯಾವಾಗ ಬರೆಯಲ್ಪಟ್ಟವು ಮತ್ತು ಅದರ ಅರ್ಥವೇನಾಗಿತ್ತು?

ಪಾಠ 64

ಸಿಂಹಗಳ ಗುಂಡಿಯಲ್ಲಿ ದಾನಿಯೇಲ

ದಾನಿಯೇಲನಂತೆ ದಿನಾಲೂ ಯೆಹೋವನಿಗೆ ಪ್ರಾರ್ಥಿಸಿ!

ಪಾಠ 65

ತನ್ನ ಜನರನ್ನು ಕಾಪಾಡಿದ ಎಸ್ತೇರ್‌

ಅನಾಥಳು ಮತ್ತು ಪರದೇಶದವಳಾಗಿದ್ದರೂ ಅವಳು ರಾಣಿಯಾದಳು.

ಪಾಠ 66

ಎಜ್ರನು ನಿಯಮ ಪುಸ್ತಕವನ್ನು ಕಲಿಸಿದ

ಎಜ್ರನ ಮಾತನ್ನು ಕೇಳಿದ ನಂತರ ಇಸ್ರಾಯೇಲ್ಯರು ದೇವರಿಗೆ ಒಂದು ಮಾತನ್ನು ಕೊಟ್ಟರು.

ಪಾಠ 67

ಯೆರೂಸಲೇಮಿನ ಗೋಡೆಗಳು

ಶತ್ರುಗಳು ದಾಳಿ ಮಾಡಬೇಕೆಂದು ಯೋಜಿಸಿದ್ದಾರೆಂದು ನೆಹೆಮೀಯನಿಗೆ ಗೊತ್ತಾಯಿತು. ಆಗ ಅವನೇಕೆ ಭಯಪಡಲಿಲ್ಲ?

ಪಾಠ 68

ಎಲಿಸಬೆತಳಿಗೆ ಮಗುವಾಯಿತು

ಮಗು ಹುಟ್ಟುವ ತನಕ ಎಲಿಸಬೆತಳ ಗಂಡನಿಗೆ ಮಾತಾಡಲು ಆಗುವುದಿಲ್ಲ ಎಂದು ಏಕೆ ಹೇಳಲಾಯಿತು?

ಪಾಠ 69

ಗಬ್ರಿಯೇಲನು ಮರಿಯಳನ್ನು ಭೇಟಿಯಾಗುತ್ತಾನೆ

ಅವನು ಅವಳ ಜೀವನವನ್ನೇ ಬದಲಾಯಿಸುವಂಥ ಸಂದೇಶವನ್ನು ತಿಳಿಸಿದನು.

ಪಾಠ 70

ಯೇಸು ಹುಟ್ಟಿದನೆಂದು ದೇವದೂತರು ತಿಳಿಸುತ್ತಾರೆ

ದೇವದೂತರು ಹೇಳಿದ್ದನ್ನು ಕೇಳಿದ ಕುರುಬರು ತಕ್ಷಣ ಕ್ರಿಯೆಗೈದರು.

ಪಾಠ 71

ಯೆಹೋವನು ಯೇಸುವನ್ನು ಕಾಪಾಡಿದನು

ಯೇಸುವನ್ನು ಕೊಲ್ಲಬೇಕೆಂದು ಒಬ್ಬ ಕೆಟ್ಟ ರಾಜ ಬಯಸಿದನು.

ಪಾಠ 72

ಬಾಲಕ ಯೇಸು

ಯೇಸು ದೇವಾಲಯದಲ್ಲಿದ್ದ ಬೋಧಕರಿಗೆ ಆಶ್ಚರ್ಯ ಆಗುವಂಥದ್ದೇನು ಮಾಡಿದ?

ಪಾಠ 73

ಯೋಹಾನನು ಮೆಸ್ಸೀಯನ ಬಗ್ಗೆ ಸಾರಿದನು

ಯೋಹಾನ ದೊಡ್ಡವನಾದಾಗ ಒಬ್ಬ ಪ್ರವಾದಿಯಾಗುತ್ತಾನೆ. ಮೆಸ್ಸೀಯನು ಬರುತ್ತಾನೆ ಎಂದು ಅವನು ಜನರಿಗೆ ಕಲಿಸಿದನು. ಅವನು ಹೇಳಿದ ಸಂದೇಶಕ್ಕೆ ಜನರು ಹೇಗೆ ಪ್ರತಿಕ್ರಿಯಿಸಿದರು?

ಪಾಠ 74

ಯೇಸು ಮೆಸ್ಸೀಯನಾದನು

ಯೋಹಾನನು ಯೇಸುವನ್ನು ದೇವರ ಕುರಿಮರಿ ಎಂದು ಏಕೆ ಹೇಳಿದನು?

ಪಾಠ 75

ಯೇಸುವನ್ನು ಪಿಶಾಚನು ಪರೀಕ್ಷಿಸಿದನು

ಪಿಶಾಚನು ಮೂರು ಬಾರಿ ಯೇಸುವನ್ನು ಪರೀಕ್ಷಿಸಿದನು. ಯೇಸುವಿಗೆ ಯಾವ ಮೂರು ಪರೀಕ್ಷೆಗಳು ಬಂದವು? ಯೇಸು ಪಿಶಾಚನಿಗೆ ಹೇಗೆ ಉತ್ತರ ಕೊಟ್ಟನು?

ಪಾಠ 76

ಯೇಸು ದೇವಾಲಯವನ್ನು ಶುದ್ಧ ಮಾಡುತ್ತಾನೆ

ಯೇಸು ಹಗ್ಗಗಳಿಂದ ಚಾಟಿ ಮಾಡಿ ಪ್ರಾಣಿಗಳನ್ನು ದೇವಾಲಯದಿಂದ ಹೊರಗೆ ಓಡಿಸಿ ಹಣ ಬದಲಾಯಿಸ್ತಿದ್ದವ್ರ ಮೇಜುಗಳನ್ನು ಬೀಳಿಸಿದ್ದು ಯಾಕೆ?

ಪಾಠ 77

ಬಾವಿಗೆ ಬಂದ ಸ್ತ್ರೀ

ಯೇಸು ಸಮಾರ್ಯ ಸ್ತ್ರೀಯ ಜೊತೆ ಮಾತಾಡಿದಾಗ ಅವಳಿಗೆ ಆಶ್ಚರ್ಯ ಆಯಿತು. ಏಕೆ? ಯಾರಿಗೂ ಹೇಳದ ಯಾವ ವಿಷಯವನ್ನು ಯೇಸು ಅವಳಿಗೆ ಹೇಳಿದನು?

ಪಾಠ 78

ಯೇಸು ದೇವರ ಆಳ್ವಿಕೆಯ ಸಿಹಿಸುದ್ದಿ ಸಾರಿದ

ಯೇಸು ಕೆಲವರನ್ನು ‘ಮನುಷ್ಯರನ್ನ ಹಿಡಿಯೋ ಬೆಸ್ತರಾಗಲು’ ಆಮಂತ್ರಿಸಿದನು. ನಂತರ ಸಿಹಿಸುದ್ದಿ ಸಾರಲು 70 ಜನರಿಗೆ ತರಬೇತಿ ನೀಡಿದನು.

ಪಾಠ 79

ಯೇಸು ಅನೇಕ ಅದ್ಭುತಗಳನ್ನು ಮಾಡುತ್ತಾನೆ

ಕಾಯಿಲೆಬಿದ್ದ ಜನರು ಯೇಸು ಹೋದಲ್ಲೆಲ್ಲಾ ಬರುತ್ತಿದ್ದರು ಮತ್ತು ಯೇಸು ಅವರನ್ನು ವಾಸಿ ಮಾಡುತ್ತಿದ್ದನು. ಅವನು ತೀರಿಕೊಂಡ ಒಬ್ಬ ಹುಡುಗಿಯನ್ನೂ ಬದುಕಿಸಿದನು.

ಪಾಠ 80

ಯೇಸು ಹನ್ನೆರಡು ಅಪೊಸ್ತಲರನ್ನು ಆರಿಸಿದನು

ಅವನು ಅವರನ್ನು ಯಾಕೆ ಆರಿಸಿಕೊಂಡನು? ನಿನಗೆ ಅವರ ಹೆಸರುಗಳು ನೆನಪಿದೆಯಾ?

ಪಾಠ 81

ಬೆಟ್ಟದ ಭಾಷಣ

ಯೇಸು ಕೂಡಿ ಬಂದ ಜನರ ಗುಂಪಿಗೆ ಅಮೂಲ್ಯ ಪಾಠಗಳನ್ನು ಕಲಿಸುತ್ತಾನೆ.

ಪಾಠ 82

ಯೇಸು ತನ್ನ ಶಿಷ್ಯರಿಗೆ ಪ್ರಾರ್ಥಿಸಲು ಕಲಿಸುತ್ತಾನೆ

ಯಾವೆಲ್ಲಾ ವಿಷಯಗಳಿಗಾಗಿ ಬೇಡಿಕೊಳ್ಳುತ್ತಾ ಇರಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು?

ಪಾಠ 83

ಯೇಸು ಸಾವಿರಾರು ಜನರಿಗೆ ಊಟ ಕೊಟ್ಟನು

ಈ ಅದ್ಭುತದಿಂದ ಯೇಸು ಮತ್ತು ಯೆಹೋವನ ಬಗ್ಗೆ ನಮಗೆ ಏನು ಗೊತ್ತಾಗುತ್ತದೆ?

ಪಾಠ 84

ಯೇಸು ನೀರಿನ ಮೇಲೆ ನಡೆಯುತ್ತಾನೆ

ಈ ಅದ್ಭುತವನ್ನು ನೋಡಿದಾಗ ಅಪೊಸ್ತಲರಿಗೆ ಹೇಗನಿಸಿತು ಗೊತ್ತಾ?

ಪಾಠ 85

ಯೇಸು ಸಬ್ಬತ್‌ ದಿನದಂದು ವಾಸಿ ಮಾಡಿದನು

ಯೇಸು ಮಾಡಿದ್ದು ಕೆಲವರಿಗೆ ಇಷ್ಟ ಆಗಲಿಲ್ಲ ಏಕೆ?

ಪಾಠ 86

ಯೇಸು ಲಾಜರನಿಗೆ ಮತ್ತೆ ಜೀವ ಕೊಟ್ಟನು

ಮರಿಯಳು ಅಳುವುದನ್ನು ನೋಡಿ ಯೇಸು ಸಹ ಅತ್ತನು. ಆದರೆ ಸ್ವಲ್ಪದರಲ್ಲೇ ಅವರು ಅಳುವುದನ್ನು ನಿಲ್ಲಿಸಿ ಸಂತೋಷಪಟ್ಟರು.

ಪಾಠ 87

ಯೇಸು ಆಚರಿಸಿದ ಕೊನೆಯ ಪಸ್ಕ ಹಬ್ಬ

ಯೇಸು ಆಚರಿಸಿದ ಕೊನೆಯ ಪಸ್ಕ ಹಬ್ಬದಂದು ತನ್ನ ಅಪೊಸ್ತಲರಿಗೆ ತುಂಬಾ ಪ್ರಾಮುಖ್ಯವಾದ ಮಾರ್ಗದರ್ಶನೆಯನ್ನು ಕೊಟ್ಟನು.

ಪಾಠ 88

ಯೇಸುವನ್ನು ಬಂಧಿಸಲಾಯಿತು

ಯೇಸುವನ್ನು ಬಂಧಿಸಲು ಇಸ್ಕರಿಯೂತ ಯೂದನು ಕತ್ತಿ ದೊಣ್ಣೆಗಳನ್ನು ಹಿಡಿದುಕೊಂಡ ಒಂದು ದೊಡ್ಡ ಗುಂಪಿನೊಂದಿಗೆ ಬಂದನು.

ಪಾಠ 89

ಯೇಸು ಯಾರಂತ ನಂಗೊತ್ತಿಲ್ಲ ಅಂದ ಪೇತ್ರ

ಕಾಯಫನ ಮನೆಯ ಅಂಗಳದಲ್ಲಿ ಏನು ನಡೆಯಿತು? ಮನೆಯೊಳಗೆ ಯೇಸುವಿಗೆ ಏನಾಯಿತು?

ಪಾಠ 90

ಯೇಸು ಗೊಲ್ಗೊಥಾದಲ್ಲಿ ಸತ್ತನು

ಯೇಸುವನ್ನು ಕೊಲ್ಲಲು ಪಿಲಾತನು ಯಾಕೆ ಅನುಮತಿ ಕೊಟ್ಟನು?

ಪಾಠ 91

ಯೇಸು ಮತ್ತೆ ಜೀವ ಪಡ್ಕೊಂಡನು

ಯೇಸು ಕೊಲೆಯಾದ ಮಾರನೇ ದಿನ ಯಾವೆಲ್ಲಾ ಅದ್ಭುತ ವಿಷಯಗಳು ನಡೆದವು?

ಪಾಠ 92

ಮೀನು ಹಿಡಿಯುವವರಿಗೆ ಯೇಸು ಕಾಣಿಸಿಕೊಂಡನು

ಅವರ ಗಮನವನ್ನು ಸೆಳೆಯಲು ಅವನು ಏನು ಮಾಡಿದನು?

ಪಾಠ 93

ಯೇಸು ಸ್ವರ್ಗಕ್ಕೆ ಹೋದನು

ಅದಕ್ಕೂ ಮುಂಚೆ ಯೇಸು ತನ್ನ ಶಿಷ್ಯರಿಗೆ ಕೆಲವು ಮುಖ್ಯ ನಿರ್ದೇಶನಗಳನ್ನು ಕೊಟ್ಟನು.

ಪಾಠ 94

ಶಿಷ್ಯರ ಮೇಲೆ ಪವಿತ್ರಶಕ್ತಿ ಬಂತು

ಪವಿತ್ರಶಕ್ತಿಯಿಂದ ಅವರು ಯಾವ ಅದ್ಭುತ ಮಾಡಿದರು?

ಪಾಠ 95

ಯಾವುದೂ ಅವರನ್ನು ತಡೆಯಲಿಲ್ಲ

ಯೇಸುವನ್ನು ಕೊಂದ ಧಾರ್ಮಿಕ ನಾಯಕರು ಆತನ ಶಿಷ್ಯರ ಬಾಯಿ ಮುಚ್ಚಿಸಲು ಪ್ರಯತ್ನಿಸಿದರು. ಆದರೆ ಅವರಿಂದ ಆಗಲಿಲ್ಲ.

ಪಾಠ 96

ಯೇಸು ಸೌಲನನ್ನು ಆರಿಸಿಕೊಂಡನು

ಸೌಲನು ಕ್ರೈಸ್ತರ ಬದ್ಧ ವೈರಿಯಾಗಿದ್ದನು. ಆದರೆ ಆಮೇಲೆ ಬದಲಾದನು.

ಪಾಠ 97

ಕೊರ್ನೇಲ್ಯನು ಪವಿತ್ರಶಕ್ತಿ ಪಡೆದನು

ಕೊರ್ನೇಲ್ಯನು ಯೆಹೂದ್ಯನಲ್ಲದಿದ್ದರೂ, ಅವನ ಮನೆಗೆ ಹೋಗುವಂತೆ ದೇವರು ಪೇತ್ರನನ್ನು ಏಕೆ ಕಳುಹಿಸಿದನು?

ಪಾಠ 98

ಕ್ರೈಸ್ತ ಧರ್ಮ ಅನೇಕ ದೇಶಗಳಿಗೆ ಹಬ್ಬಿತು

ಅಪೊಸ್ತಲ ಪೌಲನು ಮತ್ತು ಅವನ ಮಿಷೆನರಿ ಜೊತೆಗಾರರು ದೂರದೂರುಗಳಿಗೆ ಸಾರುವ ಕೆಲಸವನ್ನು ಆರಂಭಿಸಿದರು.

ಪಾಠ 99

ಸತ್ಯ ಕಲಿತ ಜೈಲಿನ ಅಧಿಕಾರಿ

ಈ ಕಥೆಯಲ್ಲಿ ಕೆಟ್ಟ ದೇವದೂತ, ಭೂಕಂಪ ಮತ್ತು ಕತ್ತಿಯ ಬಗ್ಗೆ ಏನು ಹೇಳಲಾಗಿದೆ?

ಪಾಠ 100

ಪೌಲ ಮತ್ತು ತಿಮೊತಿ

ಅವರಿಬ್ಬರು ಸ್ನೇಹಿತರಾಗಿ, ಜೊತೆ ಸೇವಕರಾಗಿ ಅನೇಕ ವರ್ಷಗಳ ತನಕ ಕೆಲಸಮಾಡಿದರು.

ಪಾಠ 101

ಪೌಲನನ್ನು ರೋಮಿಗೆ ಕಳುಹಿಸಲಾಯಿತು

ಪ್ರಯಾಣದುದ್ದಕ್ಕೂ ಅಪಾಯಗಳು ಎದುರಾದವು. ಆದರೆ ಅವು ಯಾವುವೂ ಈ ಅಪೊಸ್ತಲನನ್ನು ತಡೆಯಲಿಲ್ಲ.

ಪಾಠ 102

ಯೋಹಾನನು ಕಂಡ ದರ್ಶನಗಳು

ಭವಿಷ್ಯತ್ತಿನ ಬಗ್ಗೆ ಒಂದರ ನಂತರ ಒಂದು ದರ್ಶನಗಳನ್ನು ಯೇಸು ಅವನಿಗೆ ತೋರಿಸಿದನು.

ಪಾಠ 103

“ನಿನ್ನ ಆಳ್ವಿಕೆ ಬರಲಿ”

ಯೋಹಾನನು ಬರೆದ ಪ್ರಕಟನೆ ದೇವರ ಆಳ್ವಿಕೆ ಬಂದಾಗ ಭೂಮಿಯ ಮೇಲೆ ಜೀವನ ಹೇಗಿರುತ್ತೆ ಅಂತ ತಿಳಿಸುತ್ತೆ.