ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ಕಥೆಗಳ ನನ್ನ ಪುಸ್ತಕ್ಕಾಗಿ ಅಧ್ಯಯನ ಪ್ರಶ್ನೆಗಳು

ಬೈಬಲ್‌ ಕಥೆಗಳ ನನ್ನ ಪುಸ್ತಕ್ಕಾಗಿ ಅಧ್ಯಯನ ಪ್ರಶ್ನೆಗಳು

ಕಥೆ 1

ದೇವರು ಸೃಷ್ಟಿಮಾಡಲು ಆರಂಭಿಸುತ್ತಾನೆ

 1. ಎಲ್ಲಾ ಒಳ್ಳೆಯ ವಸ್ತುಗಳು ಎಲ್ಲಿಂದ ಬಂದಿರುತ್ತವೆ, ಮತ್ತು ನೀವು ಒಂದು ಉದಾಹರಣೆಯನ್ನು ಕೊಡಬಲ್ಲಿರೋ?

 2. ದೇವರ ಮೊದಲ ಸೃಷ್ಟಿ ಯಾವುದು?

 3. ಮೊದಲನೆಯ ದೇವದೂತನು ಏಕೆ ಅತಿ ವಿಶಿಷ್ಟನಾಗಿದ್ದನು?

 4. ಆರಂಭದಲ್ಲಿ ಭೂಮಿ ಹೇಗಿತ್ತು ಎಂಬುದನ್ನು ವರ್ಣಿಸಿರಿ. (ಚಿತ್ರವನ್ನು ನೋಡಿ.)

 5. ದೇವರು ಭೂಮಿಯನ್ನು ಪ್ರಾಣಿಗಳಿಗಾಗಿ ಮತ್ತು ಜನರಿಗಾಗಿ ಹೇಗೆ ಸಿದ್ಧಮಾಡತೊಡಗಿದನು?

ಹೆಚ್ಚಿನ ಪ್ರಶ್ನೆಗಳು:

 1. ಯೆರೆಮೀಯ 10:12 ಓದಿ.

  ದೇವರ ಯಾವ ಗುಣಗಳು ಆತನ ಸೃಷ್ಟಿಯ ಮೂಲಕ ತೋರಿಬರುತ್ತವೆ? (ಯೆಶಾ. 40:26; ರೋಮಾ. 11:33)

 2. ಕೊಲೊಸ್ಸೆ 1:15-17 ಓದಿ.

  ಸೃಷ್ಟಿಯಲ್ಲಿ ಯೇಸು ಯಾವ ಪಾತ್ರವನ್ನು ವಹಿಸಿದನು ಮತ್ತು ಇದು ಅವನನ್ನು ನಾವು ಹೇಗೆ ವೀಕ್ಷಿಸುವಂತೆ ಮಾಡಬೇಕು? (ಕೊಲೊ. 1:15-17)

 3. ಆದಿಕಾಂಡ 1:1-10 ಓದಿ.

  1. (ಎ) ಭೂಮಿಯ ಆರಂಭ ಹೇಗಾಯಿತು? (ಆದಿ. 1:1)

  2. (ಬಿ ಸೃಷ್ಟಿಯ ಮೊದಲನೆಯ ದಿನದಲ್ಲಿ ಏನಾಯಿತು? (ಆದಿ. 1:3-5)

  3. (ಸಿ) ಸೃಷ್ಟಿಯ ಎರಡನೆಯ ದಿನದಲ್ಲಿ ಏನಾಯಿತು ಎಂಬುದನ್ನು ವರ್ಣಿಸಿರಿ. (ಆದಿ. 1:7, 8)

ಕಥೆ 2

ಒಂದು ಸುಂದರ ತೋಟ

 1. ದೇವರು ನಮಗಾಗಿ ಈ ಭೂಮಿಯನ್ನು ಹೇಗೆ ಸಿದ್ಧಮಾಡಿದನು?

 2. ದೇವರು ಸೃಷ್ಟಿಸಿದ ವಿವಿಧ ರೀತಿಯ ಪ್ರಾಣಿಗಳನ್ನು ವರ್ಣಿಸಿರಿ. (ಚಿತ್ರವನ್ನು ನೋಡಿ.)

 3. ಏದೆನ್‌ ತೋಟವು ವಿಶಿಷ್ಟ ಸ್ಥಳವಾಗಿತ್ತು ಏಕೆ?

 4. ಇಡೀ ಭೂಮಿಯು ಹೇಗೆ ಆಗಬೇಕೆಂದು ದೇವರು ಬಯಸಿದನು?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 1:11-25 ಓದಿ.

  1. (ಎ) ಸೃಷ್ಟಿಯ ಮೂರನೆಯ ದಿನದಲ್ಲಿ ದೇವರು ಏನನ್ನು ಉಂಟುಮಾಡಿದನು? (ಆದಿ. 1:12)

  2. (ಬಿ) ಸೃಷ್ಟಿಯ ನಾಲ್ಕನೆಯ ದಿನದಲ್ಲಿ ಏನನ್ನು ಉಂಟುಮಾಡಲಾಯಿತು? (ಆದಿ. 1:16)

  3. (ಸಿ) ಐದನೆಯ ಮತ್ತು ಆರನೆಯ ದಿನಗಳಲ್ಲಿ ದೇವರು ಯಾವ ರೀತಿಯ ಪ್ರಾಣಿಗಳನ್ನು ಉಂಟುಮಾಡಿದನು? (ಆದಿ. 1:20, 21, 25)

 2. ಆದಿಕಾಂಡ 2:8, 9 ಓದಿ.

  ಏದೆನ್‌ ತೋಟದಲ್ಲಿ ದೇವರು ಯಾವ ಎರಡು ವಿಶೇಷ ಮರಗಳನ್ನು ಬೆಳೆಯಿಸಿದನು, ಮತ್ತು ಅವು ಯಾವುದನ್ನು ಸೂಚಿಸುತ್ತವೆ?

ಕಥೆ 3

ಮೊದಲನೆಯ ಪುರುಷ ಮತ್ತು ಸ್ತ್ರೀ

 1. ಕಥೆ 2ರಲ್ಲಿರುವ ಚಿತ್ರಕ್ಕಿಂತ ಕಥೆ 3ರಲ್ಲಿರುವ ಚಿತ್ರವು ಹೇಗೆ ಭಿನ್ನವಾಗಿದೆ?

 2. ಮೊದಲನೆಯ ಪುರುಷನನ್ನು ಉಂಟುಮಾಡಿದ್ದು ಯಾರು, ಮತ್ತು ಆ ಪುರುಷನ ಹೆಸರೇನು?

 3. ದೇವರು ಆದಾಮನಿಗೆ ಯಾವ ಕೆಲಸವನ್ನು ಕೊಟ್ಟನು?

 4. ದೇವರು ಆದಾಮನಿಗೆ ಗಾಢ ನಿದ್ದೆಯನ್ನು ಏಕೆ ಬರಮಾಡಿದನು?

 5. ಆದಾಮಹವ್ವರು ಎಷ್ಟು ಕಾಲ ಜೀವಿಸಬಹುದಿತ್ತು, ಮತ್ತು ಅವರು ಯಾವ ಕೆಲಸವನ್ನು ಮಾಡುವಂತೆ ಯೆಹೋವನು ಬಯಸಿದನು?

ಹೆಚ್ಚಿನ ಪ್ರಶ್ನೆಗಳು:

 1. ಕೀರ್ತನೆ 83:18 ಓದಿ.

  ದೇವರ ಹೆಸರೇನು, ಮತ್ತು ಭೂಮಿಯ ಮೇಲೆ ಆತನಿಗಿರುವ ಅದ್ವಿತೀಯ ಸ್ಥಾನವು ಯಾವುದು? (ಯೆರೆ. 16:21; ದಾನಿ. 4:17)

 2. ಆದಿಕಾಂಡ 1:26-31 ಓದಿ.

  1. (ಎ) ಆರನೆಯ ದಿನದ ಕೊನೆಯಲ್ಲಿ ದೇವರು ಏನನ್ನು ಸೃಷ್ಟಿಮಾಡಿದನು, ಮತ್ತು ಈ ಸೃಷ್ಟಿಯು ಪ್ರಾಣಿಗಳಿಗಿಂತ ಹೇಗೆ ಭಿನ್ನವಾಗಿತ್ತು? (ಆದಿ. 1:26)

  2. (ಬಿ) ಮನುಷ್ಯರಿಗೂ ಪ್ರಾಣಿಗಳಿಗೂ ದೇವರು ಏನನ್ನು ಒದಗಿಸಿದನು? (ಆದಿ. 1:30)

 3. ಆದಿಕಾಂಡ 2:7-25 ಓದಿ.

  1. (ಎ) ಪ್ರಾಣಿಗಳಿಗೆ ಹೆಸರಿಡಬೇಕಾಗಿದ್ದ ತನ್ನ ನೇಮಕದಲ್ಲಿ ಆದಾಮನು ಏನು ಮಾಡಬೇಕಿತ್ತು? (ಆದಿ. 2:19)

  2. (ಬಿ) ವಿವಾಹ, ಪ್ರತ್ಯೇಕವಾಸ ಮತ್ತು ವಿಚ್ಛೇದದ ಕುರಿತು ಯೆಹೋವನ ದೃಷ್ಟಿಕೋನವನ್ನು ನಾವು ಅರ್ಥಮಾಡಿಕೊಳ್ಳಲು ಆದಿಕಾಂಡ 2:24 ಹೇಗೆ ಸಹಾಯಮಾಡುತ್ತದೆ? (ಮತ್ತಾ. 19:4-6, 9)

ಕಥೆ 4

ಅವರು ತಮ್ಮ ಬೀಡನ್ನು ಕಳೆದುಕೊಂಡದ್ದಕ್ಕೆ ಕಾರಣ

 1. ಈ ಚಿತ್ರದಲ್ಲಿ ಆದಾಮಹವ್ವರಿಗೆ ಏನು ಸಂಭವಿಸುತ್ತಾ ಇದೆ?

 2. ಯೆಹೋವನು ಅವರನ್ನು ಏಕೆ ಶಿಕ್ಷಿಸಿದನು?

 3. ಒಂದು ಹಾವು ಹವ್ವಳಿಗೆ ಏನು ಹೇಳಿತು?

 4. ಆ ಹಾವು ಹವ್ವಳೊಂದಿಗೆ ಮಾತಾಡುವಂತೆ ಮಾಡಿದವನು ಯಾರು?

 5. ಆದಾಮಹವ್ವರು ತಮ್ಮ ಉದ್ಯಾನ ಬೀಡನ್ನು ಏಕೆ ಕಳೆದುಕೊಂಡರು?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 2:16, 17 ಮತ್ತು 3:1-13, 24 ಓದಿ.

  1. (ಎ) ಹವ್ವಳಿಗೆ ಹಾವು ಕೇಳಿದ ಪ್ರಶ್ನೆಯು ಯೆಹೋವನ ಮೇಲೆ ಯಾವ ಅಪಾದನೆಯನ್ನು ಹಾಕಿತು? (ಆದಿ. 3:1-5; 1 ಯೋಹಾ. 5:3)

  2. (ಬಿ) ನಮಗೆ ಹವ್ವಳು ಹೇಗೆ ಎಚ್ಚರಿಕೆಯ ಉದಾಹರಣೆಯಾಗಿದ್ದಾಳೆ? (ಫಿಲಿ. 4:8; ಯಾಕೋ. 1:14, 15; 1 ಯೋಹಾ. 2:16)

  3. (ಸಿ) ಆದಾಮಹವ್ವರು ಯಾವ ವಿಧದಲ್ಲಿ ತಮ್ಮ ಕೃತ್ಯಗಳ ಹೊಣೆಗಾರಿಕೆಯನ್ನು ಅಂಗೀಕರಿಸಲು ತಪ್ಪಿಹೋದರು? (ಆದಿ. 3:12, 13)

  4. (ಡಿ) ಏದೆನ್‌ ವನದ ಪೂರ್ವದಿಕ್ಕಿನಲ್ಲಿ ಇರಿಸಲ್ಪಟ್ಟ ಕೆರೂಬಿಯರು ಯೆಹೋವನ ಪರಮಾಧಿಕಾರವನ್ನು ಹೇಗೆ ಎತ್ತಿಹಿಡಿದರು? (ಆದಿ. 3:24)

 2. ಪ್ರಕಟನೆ 12:9 ಓದಿ.

  ಮಾನವಕುಲವನ್ನು ದೇವರ ಆಳ್ವಿಕೆಯ ವಿರುದ್ಧ ತಿರುಗಿಸುವುದರಲ್ಲಿ ಸೈತಾನನು ಎಷ್ಟು ಯಶಸ್ಸನ್ನು ಗಳಿಸಿದ್ದಾನೆ? (1 ಯೋಹಾ. 5:19)

ಕಥೆ 5

ಕಷ್ಟದ ಜೀವನ ಆರಂಭ

 1. ಏದೆನ್‌ ತೋಟದ ಹೊರಗೆ ಆದಾಮಹವ್ವರ ಜೀವನವು ಹೇಗಿತ್ತು?

 2. ಆದಾಮಹವ್ವರಿಗೆ ಸಮಯಾನಂತರ ಏನಾಯಿತು, ಮತ್ತು ಏಕೆ?

 3. ಆದಾಮಹವ್ವರ ಮಕ್ಕಳು ಸಹ ಏಕೆ ವೃದ್ಧರಾಗಿ ಸಾಯಲಿದ್ದರು?

 4. ಆದಾಮಹವ್ವರು ಯೆಹೋವನಿಗೆ ವಿಧೇಯರಾಗಿರುತ್ತಿದ್ದಲ್ಲಿ ಅವರ ಮತ್ತು ಅವರ ಮಕ್ಕಳ ಜೀವನವು ಹೇಗಿರುತ್ತಿತ್ತು?

 5. ಹವ್ವಳ ಅವಿಧೇಯತೆಯು ಅವಳಿಗೆ ಹೇಗೆ ನೋವನ್ನು ತಂದಿತು?

 6. ಆದಾಮಹವ್ವರಿಗೆ ಮೊದಲು ಹುಟ್ಟಿದ ಇಬ್ಬರು ಗಂಡುಮಕ್ಕಳ ಹೆಸರೇನು?

 7. ಚಿತ್ರದಲ್ಲಿರುವ ಇತರ ಮಕ್ಕಳು ಯಾರು?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 3:16-23 ಮತ್ತು 4:1, 2 ಓದಿ.

  1. (ಎ) ಭೂಮಿಗೆ ಕೊಡಲ್ಪಟ್ಟ ಶಾಪದಿಂದಾಗಿ ಆದಾಮನ ಜೀವನವು ಹೇಗೆ ಬಾಧಿಸಲ್ಪಟ್ಟಿತು? (ಆದಿ. 3:17-19; ರೋಮಾ. 8:20, 22)

  2. (ಬಿ) ‘ಜೀವ’ ಎಂಬ ಅರ್ಥವುಳ್ಳ ಹವ್ವ ಎಂಬ ಹೆಸರು ಏಕೆ ಸೂಕ್ತವಾಗಿತ್ತು? (ಆದಿ. 3:20, ಸತ್ಯವೇದವು ರೆಫರೆನ್ಸ್‌ ಎಡಿಷನ್‌ ಪಾದಟಿಪ್ಪಣಿ)

  3. (ಸಿ) ಆದಾಮಹವ್ವರು ಪಾಪಮಾಡಿದ ನಂತರವೂ ಯೆಹೋವನು ಅವರಿಗೆ ಹೇಗೆ ಪರಿಗಣನೆ ತೋರಿಸಿದನು? (ಆದಿ. 3:7, 21)

 2. ಪ್ರಕಟನೆ 21:3, 4 ಓದಿ.

  ‘ಮೊದಲಿದ್ದ’ ಯಾವ ವಿಷಯಗಳು ತೆಗೆದುಹಾಕಲ್ಪಡುವುದನ್ನು ನೀವು ನೋಡಬಯಸುತ್ತೀರಿ?

ಕಥೆ 6

ಒಳ್ಳೆಯ ಮಗ ಮತ್ತು ಕೆಟ್ಟ ಮಗ

 1. ಕಾಯಿನ ಮತ್ತು ಹೇಬೆಲನು ಯಾವ ಕಸಬನ್ನು ಮಾಡತೊಡಗಿದರು?

 2. ಕಾಯಿನ ಮತ್ತು ಹೇಬೆಲನು ಯೆಹೋವನಿಗೆ ಯಾವ ಕಾಣಿಕೆಗಳನ್ನು ತರುತ್ತಾರೆ?

 3. ಯೆಹೋವನು ಹೇಬೆಲನ ಕಾಣಿಕೆಯನ್ನು ಏಕೆ ಮೆಚ್ಚುತ್ತಾನೆ, ಮತ್ತು ಕಾಯಿನನ ಕಾಣಿಕೆಯನ್ನು ಏಕೆ ಮೆಚ್ಚುವುದಿಲ್ಲ?

 4. ಕಾಯಿನ ಎಂಥವನು, ಮತ್ತು ಅವನನ್ನು ತಿದ್ದಲು ಯೆಹೋವನು ಹೇಗೆ ಪ್ರಯತ್ನಿಸುತ್ತಾನೆ?

 5. ಅಡವಿಯಲ್ಲಿ ಕಾಯಿನ ಮತ್ತು ಅವನ ತಮ್ಮ ಇಬ್ಬರೇ ಇರುವಾಗ ಕಾಯಿನನು ಏನು ಮಾಡುತ್ತಾನೆ?

 6. ತನ್ನ ತಮ್ಮನನ್ನು ಕೊಂದ ಮೇಲೆ ಕಾಯಿನನಿಗೆ ಏನಾಯಿತು ಎಂಬುದನ್ನು ವಿವರಿಸಿ.

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 4:2-26 ಓದಿ.

  1. (ಎ) ಕಾಯಿನನಿದ್ದ ಅಪಾಯಕರ ಸ್ಥಿತಿಯನ್ನು ಯೆಹೋವನು ಹೇಗೆ ವರ್ಣಿಸಿದನು? (ಆದಿ. 4:7)

  2. (ಬಿ) ಕಾಯಿನನು ತನ್ನ ಹೃದಯದಲ್ಲಿದ್ದುದನ್ನು ಹೇಗೆ ಬಯಲುಪಡಿಸಿದನು? (ಆದಿ. 4:9)

  3. (ಸಿ) ನಿರ್ದೋಷಿಯ ರಕ್ತ ಸುರಿಸುವುದನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ? (ಆದಿ. 4:10; ಯೆಶಾ. 26:21)

 2. ಒಂದನೆಯ ಯೋಹಾನ 3:11, 12 ಓದಿ.

  1. (ಎ) ಕಾಯಿನನು ಏಕೆ ಬಹು ಕೋಪಗೊಂಡನು, ಮತ್ತು ಇದು ನಮಗಿಂದು ಯಾವ ಎಚ್ಚರಿಕೆಯನ್ನು ಕೊಡುತ್ತದೆ? (ಆದಿ. 4:4, 5; ಜ್ಞಾನೋ. 14:30; ಯಾಕೋ. 3:16)

  2. (ಬಿ) ನಮ್ಮ ಕುಟುಂಬದ ಎಲ್ಲಾ ಸದಸ್ಯರು ಯೆಹೋವನನ್ನು ವಿರೋಧಿಸುವಾಗಲೂ ನಾವು ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಸಾಧ್ಯವಿದೆ ಎಂಬುದನ್ನು ಬೈಬಲ್‌ ಹೇಗೆ ತೋರಿಸುತ್ತದೆ? (ಕೀರ್ತ. 27:10; ಮತ್ತಾ. 10:21, 22)

 3. ಯೋಹಾನ 11:25 ಓದಿ.

  ನೀತಿಯ ನಿಮಿತ್ತ ಸಾಯುವವರೆಲ್ಲರಿಗೂ ಯೆಹೋವನು ಯಾವ ಆಶ್ವಾಸನೆಯನ್ನು ಕೊಡುತ್ತಾನೆ? (ಯೋಹಾ. 5:24)

ಕಥೆ 7

ಒಬ್ಬ ಧೀರ ಪುರುಷ

 1. ಹನೋಕನು ಹೇಗೆ ಭಿನ್ನನಾಗಿದ್ದನು?

 2. ಹನೋಕನ ದಿನದಲ್ಲಿ ಜನರು ಏಕೆ ಅಷ್ಟೊಂದು ಕೆಟ್ಟ ವಿಷಯಗಳನ್ನು ಮಾಡುತ್ತಿದ್ದರು?

 3. ಜನರು ಯಾವ ಕೆಟ್ಟ ವಿಷಯಗಳನ್ನು ಮಾಡುತ್ತಿದ್ದರು? (ಚಿತ್ರವನ್ನು ನೋಡಿ.)

 4. ಹನೋಕನು ಏಕೆ ಧೈರ್ಯದಿಂದ ಇರಬೇಕಿತ್ತು?

 5. ಆ ಸಮಯದಲ್ಲಿ ಮನುಷ್ಯರು ಎಷ್ಟು ಕಾಲ ಜೀವಿಸುತ್ತಿದ್ದರು, ಆದರೆ ಹನೋಕನು ಎಷ್ಟು ಕಾಲ ಜೀವಿಸಿದನು?

 6. ಹನೋಕನು ಸತ್ತ ಮೇಲೆ ಏನು ಸಂಭವಿಸಿತು?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 5:21-24, 27 ಓದಿ.

  1. (ಎ) ಹನೋಕನಿಗೆ ಯೆಹೋವನೊಂದಿಗೆ ಯಾವ ರೀತಿಯ ಸಂಬಂಧವಿತ್ತು? (ಆದಿ. 5:24)

  2. (ಬಿ) ಬೈಬಲಿಗನುಸಾರ ಎಲ್ಲರಿಗಿಂತಲೂ ಅತಿ ಹೆಚ್ಚು ಕಾಲ ಜೀವಿಸಿದವನು ಯಾರು, ಮತ್ತು ಅವನು ಸಾಯುವಾಗ ಅವನಿಗೆ ಎಷ್ಟು ವಯಸ್ಸಾಗಿತ್ತು? (ಆದಿ. 5:27)

 2. ಆದಿಕಾಂಡ 6:5 ಓದಿ.

  ಹನೋಕನ ಮರಣದ ಬಳಿಕ ಭೂಮಿಯ ಪರಿಸ್ಥಿತಿಗಳು ಎಷ್ಟು ಕೆಟ್ಟದಾಗಿತ್ತು, ಮತ್ತು ಅದು ನಮ್ಮ ದಿನವನ್ನು ಹೇಗೆ ಹೋಲುತ್ತದೆ? (2 ತಿಮೊ. 3:13)

 3. ಇಬ್ರಿಯ 11:5 ಓದಿ.

  ಹನೋಕನ ಯಾವ ಗುಣವು “ದೇವರಿಗೆ ಮೆಚ್ಚಿಕೆ”ಯಾಯಿತು, ಮತ್ತು ಇದರಿಂದ ಅವನಿಗೆ ಯಾವ ಪ್ರತಿಫಲ ಸಿಕ್ಕಿತು? (ಆದಿ. 5:22)

 4. ಯೂದ 14, 15 ಓದಿ.

  ಬರಲಿರುವ ಹರ್ಮಗೆದೋನ್‌ ಯುದ್ಧದ ಬಗ್ಗೆ ಇಂದು ಕ್ರೈಸ್ತರು ಜನರನ್ನು ಎಚ್ಚರಿಸುವಾಗ ಹನೋಕನಂತೆ ಹೇಗೆ ಧೈರ್ಯವನ್ನು ತೋರಿಸಬಲ್ಲರು? (2 ತಿಮೊ. 4:2; ಇಬ್ರಿ. 13:6)

ಕಥೆ 8

ಭೂಮಿಯಲ್ಲಿ ಮಹಾಶರೀರಿಗಳು

 1. ಕೆಲವು ದೇವದೂತರು ಸೈತಾನನ ಮಾತನ್ನು ಕೇಳಿದಾಗ ಏನು ಸಂಭವಿಸಿತು?

 2. ಕೆಲವು ದೇವದೂತರು ಸ್ವರ್ಗದಲ್ಲಿ ಅವರಿಗಿದ್ದ ಕೆಲಸವನ್ನು ನಿಲ್ಲಿಸಿ ಭೂಮಿಗೆ ಏಕೆ ಬಂದರು?

 3. ದೇವದೂತರು ಭೂಮಿಗೆ ಬಂದು ತಮಗಾಗಿ ಮಾನವದೇಹಗಳನ್ನು ಮಾಡಿಕೊಂಡದ್ದು ಏಕೆ ತಪ್ಪಾಗಿತ್ತು?

 4. ಆ ದೇವದೂತರ ಮಕ್ಕಳು ಬೇರೆಯವರಿಗಿಂತ ಹೇಗೆ ಭಿನ್ನರಾಗಿದ್ದರು?

 5. ನೀವು ಚಿತ್ರದಲ್ಲಿ ನೋಡುವಂತೆ ಆ ದೇವದೂತರ ಮಕ್ಕಳು ಮಹಾಶರೀರಿಗಳಾಗಿ ಬೆಳೆದಾಗ ಏನು ಮಾಡಿದರು?

 6. ಹನೋಕನ ಬಳಿಕ ಭೂಮಿಯ ಮೇಲೆ ಜೀವಿಸಿದ ಒಳ್ಳೆಯ ಮನುಷ್ಯನು ಯಾರು, ಮತ್ತು ದೇವರು ಅವನನ್ನು ಏಕೆ ಮೆಚ್ಚಿದನು?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 6:1-8 ಓದಿ.

  ನಮ್ಮ ನಡತೆಯು ಯೆಹೋವನ ಭಾವನೆಗಳನ್ನು ಪ್ರಭಾವಿಸುತ್ತದೆ ಎಂಬುದರ ಕುರಿತು ಆದಿಕಾಂಡ 6:6 ಏನನ್ನು ತಿಳಿಯಪಡಿಸುತ್ತದೆ? (ಕೀರ್ತ. 78:40, 41; ಜ್ಞಾನೋ. 27:11)

 2. ಯೂದ 6 ಓದಿ.

  ನೋಹನ ದಿನದಲ್ಲಿ, “ತಮಗೆ ತಕ್ಕ ವಾಸಸ್ಥಾನವನ್ನು ಬಿಟ್ಟ” ದೇವದೂತರ ಉದಾಹರಣೆಯು ಇಂದು ನಮಗೆ ಹೇಗೆ ಒಂದು ಎಚ್ಚರಿಕೆಯಾಗಿದೆ? (1 ಕೊರಿಂ. 3:5-9; 2 ಪೇತ್ರ 2:4, 9, 10)

ಕಥೆ 9

ನೋಹನು ಒಂದು ನಾವೆಯನ್ನು ಕಟ್ಟುತ್ತಾನೆ

 1. ನೋಹನ ಕುಟುಂಬದಲ್ಲಿ ಎಷ್ಟು ಮಂದಿ ಇದ್ದರು, ಮತ್ತು ಅವನ ಮೂವರು ಪುತ್ರರ ಹೆಸರೇನು?

 2. ಯಾವ ಅಪೂರ್ವ ಕೆಲಸವನ್ನು ಮಾಡುವಂತೆ ದೇವರು ನೋಹನಿಗೆ ಹೇಳಿದನು ಮತ್ತು ಏಕೆ?

 3. ನಾವೆಯ ಬಗ್ಗೆ ನೋಹನು ಜನರಿಗೆ ತಿಳಿಸಿದಾಗ ಅವರು ಹೇಗೆ ಪ್ರತಿಕ್ರಿಯಿಸಿದರು?

 4. ಪ್ರಾಣಿಗಳನ್ನು ಏನು ಮಾಡಬೇಕೆಂದು ದೇವರು ನೋಹನಿಗೆ ಹೇಳಿದನು?

 5. ದೇವರು ನಾವೆಯ ಬಾಗಿಲನ್ನು ಮುಚ್ಚಿದ ನಂತರ ನೋಹ ಮತ್ತು ಅವನ ಕುಟುಂಬವು ಏನು ಮಾಡಬೇಕಿತ್ತು?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 6:9-22 ಓದಿ.

  1. (ಎ) ಯಾವ ವಿಷಯವು ನೋಹನನ್ನು ಸತ್ಯದೇವರ ಒಬ್ಬ ಎದ್ದುಕಾಣುವ ಆರಾಧಕನನ್ನಾಗಿ ಮಾಡಿತು? (ಆದಿ. 6:9, 22)

  2. (ಬಿ) ಹಿಂಸಾಕೃತ್ಯವನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ, ಮತ್ತು ಇದು ನಮ್ಮ ಮನೋರಂಜನೆಯ ಆಯ್ಕೆಯನ್ನು ಹೇಗೆ ಪ್ರಭಾವಿಸಬೇಕು? (ಆದಿ. 6:11, 12; ಕೀರ್ತ. 11:5)

  3. (ಸಿ) ಯೆಹೋವನ ಸಂಘಟನೆಯ ಮೂಲಕ ನಮಗೆ ನಿರ್ದೇಶನಗಳು ಸಿಗುವಾಗ ನಾವು ಹೇಗೆ ನೋಹನನ್ನು ಅನುಕರಿಸಸಾಧ್ಯವಿದೆ? (ಆದಿ. 6:22; 1 ಯೋಹಾ. 5:3)

 2. ಆದಿಕಾಂಡ 7:1-9 ಓದಿ.

  ಯೆಹೋವನು ಅಪರಿಪೂರ್ಣ ಮನುಷ್ಯನಾದ ನೋಹನನ್ನು ನೀತಿವಂತನಾಗಿ ವೀಕ್ಷಿಸಿದ ನಿಜತ್ವವು ಇಂದು ನಮ್ಮನ್ನು ಹೇಗೆ ಉತ್ತೇಜಿಸುತ್ತದೆ? (ಆದಿ. 7:1; ಜ್ಞಾನೋ. 10:16; ಯೆಶಾ. 26:7)

ಕಥೆ 10

ಮಹಾ ಜಲಪ್ರಳಯ

 1. ಮಳೆ ಬರಲು ಆರಂಭಿಸಿದ ಬಳಿಕ ಯಾರಿಗೂ ನಾವೆಯೊಳಗೆ ಹೋಗಲು ಸಾಧ್ಯವಾಗಲಿಲ್ಲ ಏಕೆ?

 2. ಯೆಹೋವನು ಎಷ್ಟು ದಿನ ಹಗಲುರಾತ್ರಿ ಮಳೆ ಬರುವಂತೆ ಮಾಡಿದನು, ಹಾಗೂ ನೀರು ಎಷ್ಟು ಎತ್ತರದ ವರೆಗೆ ತುಂಬಿತು?

 3. ನೀರು ಭೂಮಿಯ ಮೇಲೆಲ್ಲಾ ತುಂಬಿದಂತೆ ನಾವೆ ಏನಾಯಿತು?

 4. ಮಹಾಶರೀರಿಗಳು ಜಲಪ್ರಳಯದಿಂದ ಪಾರಾದರೋ, ಮತ್ತು ಅವರ ತಂದೆಗಳಿಗೆ ಏನು ಸಂಭವಿಸಿತು?

 5. ಐದು ತಿಂಗಳ ನಂತರ ನಾವೆಗೆ ಏನಾಯಿತು?

 6. ನೋಹನು ನಾವೆಯಿಂದ ಒಂದು ಕಾಗೆಯನ್ನು ಏಕೆ ಹೊರಗೆ ಬಿಟ್ಟನು?

 7. ಭೂಮಿಯ ಮೇಲಿದ್ದ ನೀರು ಇಳಿದುಹೋಗಿದೆಯೆಂದು ನೋಹನಿಗೆ ಹೇಗೆ ತಿಳಿಯಿತು?

 8. ನೋಹ ಮತ್ತು ಅವನ ಕುಟುಂಬವು ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದ ವರೆಗೆ ನಾವೆಯಲ್ಲಿದ್ದ ಬಳಿಕ ದೇವರು ಅವನಿಗೆ ಏನು ಹೇಳಿದನು?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 7:10-24 ಓದಿ.

  1. (ಎ) ಭೂಮಿಯಲ್ಲಿದ್ದ ಜೀವಿಗಳ ನಾಶನವು ಎಷ್ಟರ ಮಟ್ಟಿಗೆ ಆಯಿತು? (ಆದಿ. 7:23)

  2. (ಬಿ) ಪ್ರಳಯದ ನೀರು ಇಳಿದುಹೋಗಿ ಭೂಮಿಯು ಒಣಗಿ ಒಣನೆಲ ಕಾಣಿಸಿಕೊಳ್ಳಲು ಎಷ್ಟು ಸಮಯ ಹಿಡಿಯಿತು? (ಆದಿ. 7:11; 8:13, 14)

 2. ಆದಿಕಾಂಡ 8:1-17 ಓದಿ.

  ಭೂಮಿಯ ಕಡೆಗಿದ್ದ ಯೆಹೋವನ ಮೂಲ ಉದ್ದೇಶವು ಬದಲಾಗಲಿಲ್ಲ ಎಂಬುದನ್ನು ಆದಿಕಾಂಡ 8:17 ಹೇಗೆ ತೋರಿಸುತ್ತದೆ? (ಆದಿ. 1:22)

 3. ಒಂದನೆಯ ಪೇತ್ರ 3:19, 20 ಓದಿ.

  1. (ಎ) ದಂಗೆಕೋರ ದೇವದೂತರು ಪರಲೋಕಕ್ಕೆ ಹಿಂದಿರುಗಿದಾಗ ಅವರಿಗೆ ಯಾವ ದಂಡನೆಯ ತೀರ್ಪನ್ನು ನೀಡಲಾಯಿತು? (ಯೂದ 6)

  2. (ಬಿ) ನೋಹ ಮತ್ತು ಅವನ ಕುಟುಂಬದ ಕುರಿತಾದ ಈ ವೃತ್ತಾಂತವು, ತನ್ನ ಜನರನ್ನು ರಕ್ಷಿಸಲು ಯೆಹೋವನಿಗಿರುವ ಸಾಮರ್ಥ್ಯದಲ್ಲಿನ ನಮ್ಮ ಭರವಸೆಯನ್ನು ಹೇಗೆ ಬಲಪಡಿಸುತ್ತದೆ? (2 ಪೇತ್ರ 2:9)

ಕಥೆ 11

ಮೊದಲ ಮುಗಿಲುಬಿಲ್ಲು

 1. ಚಿತ್ರದಲ್ಲಿ ನೋಡುವಂತೆ, ನೋಹನು ನಾವೆಯಿಂದ ಹೊರಗೆ ಬಂದ ಮೇಲೆ ಮಾಡಿದ ಮೊದಲ ಕೆಲಸವೇನು?

 2. ಜಲಪ್ರಳಯದ ನಂತರ ದೇವರು ನೋಹನಿಗೂ ಅವನ ಕುಟುಂಬಕ್ಕೂ ಯಾವ ಆಜ್ಞೆಯನ್ನು ಕೊಟ್ಟನು?

 3. ದೇವರು ಯಾವ ವಾಗ್ದಾನವನ್ನು ಮಾಡಿದನು?

 4. ನಾವು ಮುಗಿಲುಬಿಲ್ಲನ್ನು ನೋಡುವಾಗ ಅದು ನಮಗೆ ಏನನ್ನು ನೆನಪಿಗೆ ತರಬೇಕು?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 8:18-22 ಓದಿ.

  1. (ಎ) ನಾವು ಇಂದು ಯೆಹೋವನಿಗೆ ‘ಸುವಾಸನೆಯನ್ನು’ ಹೇಗೆ ಅರ್ಪಿಸಸಾಧ್ಯವಿದೆ? (ಆದಿ. 8:21; ಇಬ್ರಿ. 13:15, 16)

  2. (ಬಿ) ಮನುಷ್ಯರ ಹೃದಯದ ಸ್ಥಿತಿಯ ಕುರಿತಾಗಿ ಯೆಹೋವನು ಏನನ್ನು ಗಮನಿಸಿದನು, ಹಾಗೂ ಇದರಿಂದಾಗಿ ನಾವು ಯಾವ ಎಚ್ಚರಿಕೆಯನ್ನು ವಹಿಸಬೇಕಾಗಿದೆ? (ಆದಿ. 8:21; ಮತ್ತಾ. 15:18, 19)

 2. ಆದಿಕಾಂಡ 9:9-17 ಓದಿ.

  1. (ಎ) ಭೂಮಿಯ ಎಲ್ಲಾ ಸೃಷ್ಟಿಜೀವಿಗಳೊಂದಿಗೆ ಯೆಹೋವನು ಯಾವ ಪ್ರತಿಜ್ಞೆಯನ್ನು ಇಲ್ಲವೆ ಒಡಂಬಡಿಕೆಯನ್ನು ಮಾಡಿದನು? (ಆದಿ. 9:10, 11)

  2. (ಬಿ) ಮುಗಿಲುಬಿಲ್ಲಿನ ಒಡಂಬಡಿಕೆಯು ಎಷ್ಟರ ವರೆಗೆ ಜಾರಿಯಲ್ಲಿರುವುದು? (ಆದಿ. 9:16)

ಕಥೆ 12

ಮನುಷ್ಯರು ಒಂದು ದೊಡ್ಡ ಬುರುಜನ್ನು ಕಟ್ಟುತ್ತಾರೆ

 1. ನಿಮ್ರೋದನು ಯಾರು, ಮತ್ತು ದೇವರಿಗೆ ಅವನ ಕುರಿತು ಯಾವ ಅಭಿಪ್ರಾಯವಿತ್ತು?

 2. ಚಿತ್ರದಲ್ಲಿ ಜನರು ಏಕೆ ಇಟ್ಟಿಗೆಗಳನ್ನು ಮಾಡುತ್ತಿದ್ದಾರೆ?

 3. ಆ ಕಟ್ಟುವ ಕೆಲಸವನ್ನು ಯೆಹೋವನು ಏಕೆ ಮೆಚ್ಚಲಿಲ್ಲ?

 4. ಆ ಬುರುಜನ್ನು ಕಟ್ಟುವುದನ್ನು ದೇವರು ಹೇಗೆ ನಿಲ್ಲಿಸಿದನು?

 5. ಆ ಪಟ್ಟಣಕ್ಕೆ ಯಾವ ಹೆಸರಾಯಿತು, ಮತ್ತು ಆ ಹೆಸರಿನ ಅರ್ಥವೇನು?

 6. ದೇವರು ಭಾಷೆಯನ್ನು ಗಲಿಬಿಲಿಗೊಳಿಸಿದ ಬಳಿಕ ಜನರು ಏನು ಮಾಡಿದರು?

ಹೆಚ್ಚಿನ ಪ್ರಶ್ನೆಗಳು:

 1. ಜ್ಞಾನೋ. 3:31 ಓದಿ.

  ನಿಮ್ರೋದನು ಯಾವ ಗುಣಗಳನ್ನು ತೋರಿಸಿದನು, ಮತ್ತು ಇದು ನಮಗೆ ಯಾವ ಎಚ್ಚರಿಕೆಯನ್ನು ಕೊಡುತ್ತದೆ? (ಕೀರ್ತ 11:5)

 2. ಆದಿಕಾಂಡ 11:1-9 ಓದಿ.

  ಬುರುಜನ್ನು ಕಟ್ಟುವುದರ ಉದ್ದೇಶ ಏನಾಗಿತ್ತು, ಮತ್ತು ಆ ಯೋಜನೆಯು ಏಕೆ ವಿಫಲವಾಯಿತು? (ಆದಿ. 11:4; ಜ್ಞಾನೋ. 16:18; ಯೋಹಾ. 5:44)

ಕಥೆ 13

ಅಬ್ರಹಾಮ—ದೇವರ ಸ್ನೇಹಿತ

 1. ಊರ್‌ ಪಟ್ಟಣದಲ್ಲಿ ಯಾವ ರೀತಿಯ ಜನರು ಜೀವಿಸುತ್ತಿದ್ದರು?

 2. ಚಿತ್ರದಲ್ಲಿರುವ ಮನುಷ್ಯನು ಯಾರು? ಅವನು ಯಾವಾಗ ಜನಿಸಿದ್ದನು? ಮತ್ತು ಅವನು ಎಲ್ಲಿ ವಾಸಿಸುತ್ತಿದ್ದನು?

 3. ಯೆಹೋವನು ಅಬ್ರಹಾಮನಿಗೆ ಏನು ಮಾಡುವಂತೆ ಹೇಳಿದನು?

 4. ಅಬ್ರಹಾಮನು ದೇವರ ಸ್ನೇಹಿತನೆಂದು ಏಕೆ ಕರೆಯಲ್ಪಟ್ಟನು?

 5. ಅಬ್ರಹಾಮನು ಊರ್‌ ಪಟ್ಟಣವನ್ನು ಬಿಟ್ಟುಹೊರಟಾಗ ಅವನೊಂದಿಗೆ ಯಾರೆಲ್ಲಾ ಹೋದರು?

 6. ಅಬ್ರಹಾಮನು ಕಾನಾನ್‌ ದೇಶವನ್ನು ತಲಪಿದಾಗ ಯೆಹೋವನು ಅವನಿಗೆ ಏನು ಹೇಳಿದನು?

 7. ಅಬ್ರಹಾಮನು 99 ವರ್ಷದವನಾಗಿದ್ದಾಗ ಯೆಹೋವನು ಅವನಿಗೆ ಯಾವ ವಾಗ್ದಾನವನ್ನು ಮಾಡಿದನು?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 11:27-32 ಓದಿ.

  1. (ಎ) ಅಬ್ರಹಾಮ ಮತ್ತು ಲೋಟನು ಹೇಗೆ ಸಂಬಂಧಿಕರಾಗಿದ್ದರು? (ಆದಿ. 11:27)

  2. (ಬಿ) ತೆರಹನು ತನ್ನ ಕುಟುಂಬವನ್ನು ಕಾನಾನಿಗೆ ಸ್ಥಳಾಂತರಿಸಲು ಹೊರಟನೆಂದು ಹೇಳಲಾಗಿರುವುದಾದರೂ, ವಾಸ್ತವದಲ್ಲಿ ಅಬ್ರಹಾಮನೇ ಪ್ರಥಮ ಹೆಜ್ಜೆಯನ್ನು ತೆಗೆದುಕೊಂಡನೆಂದು ನಮಗೆ ಹೇಗೆ ಗೊತ್ತು, ಮತ್ತು ಅವನು ಹೀಗೇಕೆ ಮಾಡಿದನು? (ಆದಿ. 11:31; ಅ. ಕೃ. 7:2-4)

 2. ಆದಿಕಾಂಡ 12:1-7 ಓದಿ.

  ಅಬ್ರಹಾಮನು ಕಾನಾನ್‌ ದೇಶವನ್ನು ತಲಪಿದ ನಂತರ ಯೆಹೋವನು ಅಬ್ರಹಾಮನ ಒಡಂಬಡಿಕೆಯ ಕುರಿತು ಯಾವ ಹೆಚ್ಚಿನ ವಿವರಣೆಯನ್ನು ನೀಡಿದನು? (ಆದಿ. 12:7)

 3. ಆದಿಕಾಂಡ 17:1-8, 15-17 ಓದಿ.

  1. (ಎ) ಅಬ್ರಾಮನು 99 ವರ್ಷದವನಾಗಿದ್ದಾಗ ಅವನ ಹೆಸರಿನಲ್ಲಿ ಯಾವ ಬದಲಾವಣೆ ಮಾಡಲಾಯಿತು, ಮತ್ತು ಏಕೆ? (ಆದಿ. 17:5)

  2. (ಬಿ) ಯೆಹೋವನು ಸಾರಳಿಗೆ ಯಾವ ಭಾವೀ ಆಶೀರ್ವಾದಗಳನ್ನು ವಾಗ್ದಾನಿಸಿದನು? (ಆದಿ. 17:15, 16)

 4. ಆದಿಕಾಂಡ 18:9-19 ಓದಿ.

  1. (ಎ) ಆದಿಕಾಂಡ 18:19ರಲ್ಲಿ, ತಂದೆಯಂದಿರಿಗೆ ಯಾವ ಜವಾಬ್ದಾರಿಗಳು ಕೊಡಲ್ಪಟ್ಟಿವೆ? (ಧರ್ಮೋ. 6:6, 7; ಎಫೆ. 6:4)

  2. (ಬಿ) ಸಾರಳ ಯಾವ ಅನುಭವವು, ನಾವು ಯೆಹೋವನಿಂದ ಯಾವುದನ್ನೂ ಮರೆಮಾಡಸಾಧ್ಯವಿಲ್ಲ ಎಂಬುದನ್ನು ತೋರಿಸುತ್ತದೆ? (ಆದಿ. 18:12, 15; ಕೀರ್ತ. 44:21)

ಕಥೆ 14

ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸುತ್ತಾನೆ

 1. ದೇವರು ಅಬ್ರಹಾಮನಿಗೆ ಏನೆಂದು ಮಾತುಕೊಟ್ಟಿದ್ದನು, ಮತ್ತು ಅದನ್ನು ಹೇಗೆ ನೆರವೇರಿಸಿದನು?

 2. ಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ ದೇವರು ಅಬ್ರಹಾಮನ ನಂಬಿಕೆಯನ್ನು ಹೇಗೆ ಪರೀಕ್ಷಿಸಿದನು?

 3. ದೇವರು ಕೊಟ್ಟ ಆಜ್ಞೆಗೆ ಕಾರಣವೇನೆಂದು ಅಬ್ರಹಾಮನಿಗೆ ಅರ್ಥವಾಗದಿದ್ದರೂ ಅವನು ಏನು ಮಾಡಿದನು?

 4. ಅಬ್ರಹಾಮನು ತನ್ನ ಮಗನನ್ನು ಕೊಲ್ಲಲು ಕತ್ತಿಯನ್ನು ಹೊರತೆಗೆದಾಗ ಏನು ಸಂಭವಿಸಿತು?

 5. ದೇವರಲ್ಲಿ ಅಬ್ರಹಾಮನಿಗಿದ್ದ ನಂಬಿಕೆಯು ಎಷ್ಟು ಬಲವಾಗಿತ್ತು?

 6. ದೇವರು ಅಬ್ರಹಾಮನಿಗೆ ಯಜ್ಞಕ್ಕಾಗಿ ಏನನ್ನು ಒದಗಿಸಿದನು, ಮತ್ತು ಹೇಗೆ?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 21:1-7 ಓದಿ.

  ಅಬ್ರಹಾಮನು ತನ್ನ ಮಗನಿಗೆ ಎಂಟನೆಯ ದಿನದಲ್ಲಿ ಏಕೆ ಸುನ್ನತಿಮಾಡಿದನು? (ಆದಿ. 17:10-12; 21:4)

 2. ಆದಿಕಾಂಡ 22:1-18 ಓದಿ.

  ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ ಹೇಗೆ ಅಧೀನತೆಯನ್ನು ತೋರಿಸಿದನು, ಮತ್ತು ಇದು ಮುಂದೆ ನಡೆಯಲಿದ್ದ ಹೆಚ್ಚು ಮಹತ್ವಪೂರ್ಣವಾದ ಒಂದು ಘಟನೆಯನ್ನು ಹೇಗೆ ಚಿತ್ರಿಸಿತು? (ಆದಿ. 22:7-9; 1 ಕೊರಿಂ. 5:7; ಫಿಲಿ. 2:8, 9)

ಕಥೆ 15

ಲೋಟನ ಪತ್ನಿ ಹಿಂದೆ ನೋಡಿದಳು

 1. ಅಬ್ರಹಾಮನೂ ಲೋಟನೂ ಏಕೆ ಅಗಲಿದರು?

 2. ಲೋಟನು ಸೊದೋಮಿನಲ್ಲಿ ಜೀವಿಸಲು ಆಯ್ಕೆಮಾಡಿದ್ದೇಕೆ?

 3. ಸೊದೋಮಿನವರು ಯಾವ ರೀತಿಯ ಜನರಾಗಿದ್ದರು?

 4. ಇಬ್ಬರು ದೇವದೂತರು ಲೋಟನಿಗೆ ಯಾವ ಎಚ್ಚರಿಕೆಯನ್ನು ಕೊಟ್ಟರು?

 5. ಲೋಟನ ಹೆಂಡತಿಯು ಏಕೆ ಉಪ್ಪಿನ ಕಂಬವಾದಳು?

 6. ಲೋಟನ ಹೆಂಡತಿಯಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 13:5-13 ಓದಿ.

  ಇನ್ನೊಬ್ಬರೊಂದಿಗಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ವಿಷಯದಲ್ಲಿ ನಾವು ಅಬ್ರಹಾಮನಿಂದ ಯಾವ ಪಾಠವನ್ನು ಕಲಿಯಬಲ್ಲೆವು? (ಆದಿ. 13:8, 9; ರೋಮಾ. 12:10; ಫಿಲಿ. 2:3, 4)

 2. ಆದಿಕಾಂಡ 18:20-33 ಓದಿ.

  ಯೆಹೋವನು ಅಬ್ರಹಾಮನೊಂದಿಗೆ ವ್ಯವಹರಿಸಿದ ವಿಧವು, ಆತನು ಮತ್ತು ಯೇಸು ನ್ಯಾಯವಾಗಿಯೇ ತೀರ್ಪುಮಾಡುವರೆಂಬ ಭರವಸೆಯನ್ನು ನಮಗೆ ಹೇಗೆ ಕೊಡುತ್ತದೆ? (ಆದಿ. 18:25, 26; ಮತ್ತಾ. 25:31-33)

 3. ಆದಿಕಾಂಡ 19:1-29 ಓದಿ.

  1. (ಎ) ಈ ಬೈಬಲ್‌ ವೃತ್ತಾಂತವು ಸಲಿಂಗಕಾಮದ ಕಡೆಗಿರುವ ದೇವರ ನೋಟದ ಬಗ್ಗೆ ಏನನ್ನು ತಿಳಿಸುತ್ತದೆ? (ಆದಿ. 19:5, 13; ಯಾಜ. 20:13)

  2. (ಬಿ) ದೇವರ ನಿರ್ದೇಶನಕ್ಕೆ ಲೋಟನು ಮತ್ತು ಅಬ್ರಹಾಮನು ಪ್ರತಿಕ್ರಿಯಿಸಿದ ವಿಧಗಳಲ್ಲಿ ನಾವು ಯಾವ ವ್ಯತ್ಯಾಸವನ್ನು ಕಂಡುಕೊಳ್ಳುತ್ತೇವೆ, ಮತ್ತು ನಾವು ಇದರಿಂದ ಏನನ್ನು ಕಲಿಯಬಲ್ಲೆವು? (ಆದಿ. 19:15, 16, 19, 20; 22:3)

 4. ಲೂಕ 17:28-32 ಓದಿ.

  ಭೌತಿಕ ವಸ್ತುಗಳ ಕಡೆಗೆ ಲೋಟನ ಹೆಂಡತಿಗೆ ಯಾವ ಮನೋಭಾವವಿತ್ತು, ಮತ್ತು ಇದು ನಮಗೆ ಹೇಗೆ ಒಂದು ಎಚ್ಚರಿಕೆಯಂತಿದೆ? (ಲೂಕ 12:15; 17:31, 32; ಮತ್ತಾ. 6:19-21, 25)

 5. ಎರಡನೆಯ ಪೇತ್ರ 2:6-8 ಓದಿ.

  ಲೋಟನ ಹಾಗೆ, ನಮ್ಮ ಸುತ್ತಲಿರುವ ಭಕ್ತಿಹೀನ ಲೋಕದ ಕಡೆಗಿನ ನಮ್ಮ ಮನೋಭಾವವು ಏನಾಗಿರಬೇಕು? (ಯೆಹೆ. 9:4; 1 ಯೋಹಾ. 2:15-17)

ಕಥೆ 16

ಇಸಾಕನು ಒಳ್ಳೆಯ ಪತ್ನಿಯನ್ನು ಪಡೆಯುತ್ತಾನೆ

 1. ಚಿತ್ರದಲ್ಲಿರುವ ಪುರುಷ ಮತ್ತು ಸ್ತ್ರೀ ಯಾರು?

 2. ತನ್ನ ಮಗನು ಒಳ್ಳೆಯ ಪತ್ನಿಯನ್ನು ಪಡೆಯಲು ಅಬ್ರಹಾಮನು ಏನು ಮಾಡಿದನು, ಮತ್ತು ಏಕೆ?

 3. ಅಬ್ರಹಾಮನ ಸೇವಕನ ಪ್ರಾರ್ಥನೆಯು ಹೇಗೆ ಉತ್ತರಿಸಲ್ಪಟ್ಟಿತು?

 4. ಇಸಾಕನನ್ನು ಮದುವೆಯಾಗಲು ಇಷ್ಟವಿದೆಯೋ ಎಂದು ರೆಬೆಕ್ಕಳನ್ನು ಕೇಳಿದಾಗ ಅವಳು ಏನೆಂದು ಉತ್ತರಿಸಿದಳು?

 5. ಯಾವುದು ಇಸಾಕನನ್ನು ಪುನಃ ಸಂತೋಷವುಳ್ಳವನಾಗುವಂತೆ ಮಾಡಿತು?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 24:1-67 ಓದಿ.

  1. (ಎ) ರೆಬೆಕ್ಕಳು ಬಾವಿಯ ಬಳಿ ಅಬ್ರಹಾಮನ ಸೇವಕನನ್ನು ಭೇಟಿಯಾದಾಗ ಯಾವ ಉತ್ತಮ ಗುಣಗಳನ್ನು ತೋರಿಸಿದಳು? (ಆದಿ. 24:17-20; ಜ್ಞಾನೋ. 31:17, 31)

  2. (ಬಿ) ಇಸಾಕನಿಗೋಸ್ಕರ ಅಬ್ರಹಾಮನು ಮಾಡಿದ ಏರ್ಪಾಡು, ಇಂದು ಕ್ರೈಸ್ತರಿಗಾಗಿ ಯಾವ ಉತ್ತಮ ಮಾದರಿಯನ್ನು ಒದಗಿಸುತ್ತದೆ? (ಆದಿ. 24:37, 38; 1 ಕೊರಿಂ. 7:39; 2 ಕೊರಿಂ. 6:14)

  3. (ಸಿ) ಇಸಾಕನಂತೆ ನಾವು ಸಹ ಧ್ಯಾನಮಾಡುವುದಕ್ಕೋಸ್ಕರ ಸಮಯವನ್ನು ಏಕೆ ಕಂಡುಕೊಳ್ಳಬೇಕು? (ಆದಿ. 24:63; ಕೀರ್ತ. 77:12; ಫಿಲಿ. 4:8)

ಕಥೆ 17

ಭಿನ್ನರಾಗಿದ್ದ ಅವಳಿಗಳು

 1. ಏಸಾವ ಮತ್ತು ಯಾಕೋಬ ಯಾರಾಗಿದ್ದರು, ಹಾಗೂ ಅವರು ಹೇಗೆ ಪರಸ್ಪರ ಭಿನ್ನರಾಗಿದ್ದರು?

 2. ಏಸಾವ ಮತ್ತು ಯಾಕೋಬನ ಅಜ್ಜನಾದ ಅಬ್ರಹಾಮನು ಸಾಯುವಾಗ ಅವರಿಬ್ಬರಿಗೂ ಎಷ್ಟು ಪ್ರಾಯವಾಗಿತ್ತು?

 3. ಏಸಾವನು ತನ್ನ ತಂದೆತಾಯಿಗೆ ತುಂಬ ದುಃಖವನ್ನುಂಟುಮಾಡಿದ ಯಾವ ಕೆಲಸವನ್ನು ಮಾಡಿದನು?

 4. ಏಸಾವನು ತನ್ನ ತಮ್ಮನಾದ ಯಾಕೋಬನ ಮೇಲೆ ಏಕೆ ತುಂಬಾ ಕೋಪಗೊಂಡನು?

 5. ಇಸಾಕನು ತನ್ನ ಮಗನಾದ ಯಾಕೋಬನಿಗೆ ಯಾವ ಬುದ್ಧಿವಾದ ಕೊಟ್ಟನು?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 25:5-11, 20-34 ಓದಿ.

  1. (ಎ) ಯೆಹೋವನು ರೆಬೆಕ್ಕಳ ಇಬ್ಬರು ಪುತ್ರರ ಬಗ್ಗೆ ಏನನ್ನು ಪ್ರವಾದಿಸಿದ್ದನು? (ಆದಿ. 25:23)

  2. (ಬಿ) ಚೊಚ್ಚಲತನದ ಬಗ್ಗೆ ಯಾಕೋಬನಿಗೂ ಏಸಾವನಿಗೂ ಯಾವ ಭಿನ್ನ ಮನೋಭಾವವಿತ್ತು? (ಆದಿ. 25:31-34)

 2. ಆದಿಕಾಂಡ 26:34, 35; 27:1-46 ಮತ್ತು 28:1-5 ಓದಿ.

  1. (ಎ) ಆಧ್ಯಾತ್ಮಿಕ ವಿಷಯಗಳ ಬಗ್ಗೆ ಏಸಾವನಿಗೆ ಗಣ್ಯತೆಯಿರಲಿಲ್ಲ ಎಂಬುದು ಹೇಗೆ ವ್ಯಕ್ತವಾಯಿತು? (ಆದಿ. 26:34, 35; 27:46)

  2. (ಬಿ) ಯಾಕೋಬನು ದೇವರ ಆಶೀರ್ವಾದವನ್ನು ಪಡೆದುಕೊಳ್ಳಲಿಕ್ಕಾಗಿ ಏನನ್ನು ಮಾಡುವಂತೆ ಇಸಾಕನು ಹೇಳಿದನು? (ಆದಿ. 28:1-4)

 3. ಇಬ್ರಿಯ 12:16, 17 ಓದಿ.

  ಪವಿತ್ರ ವಿಷಯಗಳನ್ನು ಕಡೆಗಣಿಸುವವರಿಗೆ ಸಿಗುವ ಪ್ರತಿಫಲದ ಕುರಿತು ಏಸಾವನ ಮಾದರಿಯು ಏನನ್ನು ತೋರಿಸುತ್ತದೆ?

ಕಥೆ 18

ಯಾಕೋಬನು ಖಾರಾನಿಗೆ ಹೋಗುತ್ತಾನೆ

 1. ಚಿತ್ರದಲ್ಲಿರುವ ಸ್ತ್ರೀ ಯಾರು, ಮತ್ತು ಅವಳಿಗೆ ಯಾಕೋಬನು ಯಾವ ಸಹಾಯಮಾಡಿದನು?

 2. ರಾಹೇಲಳನ್ನು ವಿವಾಹವಾಗಲಿಕ್ಕಾಗಿ ಯಾಕೋಬನು ಏನನ್ನು ಮಾಡಲು ಸಿದ್ಧನಿದ್ದನು?

 3. ಯಾಕೋಬನು ರಾಹೇಲಳನ್ನು ವಿವಾಹವಾಗುವ ಸಮಯವು ಬಂದಾಗ ಲಾಬಾನನು ಏನು ಮಾಡಿದನು?

 4. ರಾಹೇಲಳನ್ನು ತನ್ನ ಪತ್ನಿಯಾಗಿ ಪಡೆದುಕೊಳ್ಳಲಿಕ್ಕಾಗಿ ಯಾಕೋಬನು ಏನು ಮಾಡಲು ಒಪ್ಪಿಕೊಂಡನು?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 29:1-30 ಓದಿ.

  1. (ಎ) ಲಾಬಾನನು ಯಾಕೋಬನನ್ನು ವಂಚಿಸಿದರೂ ಯಾಕೋಬನು ಹೇಗೆ ತನ್ನ ಪ್ರಾಮಾಣಿಕತೆಯನ್ನು ತೋರಿಸಿಕೊಟ್ಟನು, ಮತ್ತು ಇದರಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು? (ಆದಿ. 29:26-28; ಮತ್ತಾ. 5:37)

  2. (ಬಿ) ಪ್ರೀತಿ ಮತ್ತು ವ್ಯಾಮೋಹದ ಮಧ್ಯೆಯಿರುವ ವ್ಯತ್ಯಾಸವನ್ನು ಯಾಕೋಬನ ಮಾದರಿಯು ಹೇಗೆ ತೋರಿಸುತ್ತದೆ? (ಆದಿ. 29:18, 20, 30; ಪರಮ. 8:6)

  3. (ಸಿ) ಯಾಕೋಬನಿಗೆ ಹೆಂಡತಿಯರಾಗಿದ್ದು ಅವನಿಗೆ ಮಕ್ಕಳನ್ನು ಹೆತ್ತ ನಾಲ್ಕು ಸ್ತ್ರೀಯರು ಯಾರು? (ಆದಿ. 29:23, 24, 28, 29)

ಕಥೆ 19

ಯಾಕೋಬನಿಗೆ ಒಂದು ದೊಡ್ಡ ಕುಟುಂಬವಿದೆ

 1. . ಯಾಕೋಬನ ಮೊದಲ ಪತ್ನಿಯಾದ ಲೇಯಳಿಗೆ ಹುಟ್ಟಿದ ಆರು ಮಂದಿ ಗಂಡು ಮಕ್ಕಳ ಹೆಸರುಗಳೇನು?

 2. ಲೇಯಳ ದಾಸಿಯಾದ ಜಿಲ್ಪಳು ಯಾಕೋಬನಿಗೆ ಹಡೆದ ಇಬ್ಬರು ಪುತ್ರರು ಯಾರು?

 3. ರಾಹೇಲಳ ದಾಸಿಯಾದ ಬಿಲ್ಹಳು ಯಾಕೋಬನಿಗೆ ಹಡೆದ ಇಬ್ಬರು ಪುತ್ರರ ಹೆಸರುಗಳೇನು?

 4. ರಾಹೇಲಳು ಹೆತ್ತ ಇಬ್ಬರು ಪುತ್ರರು ಯಾರು? ಎರಡನೆಯ ಪುತ್ರನು ಜನಿಸಿದಾಗ ಏನಾಯಿತು?

 5. ಚಿತ್ರದಲ್ಲಿರುವ ಪ್ರಕಾರ ಯಾಕೋಬನಿಗೆ ಎಷ್ಟು ಮಂದಿ ಗಂಡುಮಕ್ಕಳಿದ್ದರು ಮತ್ತು ಅವರಿಂದ ಏನು ಉಂಟಾಯಿತು?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 29:32-35; 30:1-26; ಮತ್ತು 35:16-19 ಓದಿ.

  ಯಾಕೋಬನ 12 ಮಂದಿ ಗಂಡುಮಕ್ಕಳ ವಿಷಯದಲ್ಲಿ ತಿಳಿಸಲ್ಪಟ್ಟಿರುವಂತೆ, ಪುರಾತನ ಸಮಯಗಳಲ್ಲಿ ಅನೇಕವೇಳೆ ಇಬ್ರಿಯ ಹುಡುಗರಿಗೆ ಹೇಗೆ ಹೆಸರಿಡಲಾಗುತ್ತಿತ್ತು?

 2. ಆದಿಕಾಂಡ 37:35 ಓದಿ.

  ಬೈಬಲಿನಲ್ಲಿ ದೀನಳ ಹೆಸರು ಮಾತ್ರ ಕೊಡಲ್ಪಟ್ಟಿರುವುದಾದರೂ ಯಾಕೋಬನಿಗೆ ಬೇರೆ ಹೆಣ್ಣುಮಕ್ಕಳು ಸಹ ಇದ್ದರು ಎಂಬುದು ನಮಗೆ ಹೇಗೆ ಗೊತ್ತು? (ಆದಿ. 37:34, 35)

ಕಥೆ 20

ದೀನಳು ತೊಂದರೆಯಲ್ಲಿ ಸಿಕ್ಕಿಕೊಳ್ಳುತ್ತಾಳೆ

 1. ತಮ್ಮ ಮಕ್ಕಳು ಕಾನಾನ್‌ ದೇಶದ ಜನರೊಂದಿಗೆ ಮದುವೆಯಾಗುವುದನ್ನು ಅಬ್ರಹಾಮ ಮತ್ತು ಇಸಾಕನು ಏಕೆ ಇಷ್ಟಪಡಲಿಲ್ಲ?

 2. ತನ್ನ ಮಗಳು ಕಾನಾನ್ಯ ಹುಡುಗಿಯರೊಂದಿಗೆ ಸ್ನೇಹ ಬೆಳೆಸುವುದು ಯಾಕೋಬನಿಗೆ ಇಷ್ಟವಾಗಿತ್ತೋ?

 3. ಚಿತ್ರದಲ್ಲಿ ದೀನಳನ್ನು ನೋಡುತ್ತಿರುವ ಪುರುಷನು ಯಾರು, ಮತ್ತು ಅವನು ಯಾವ ಕೆಟ್ಟ ಸಂಗತಿಯನ್ನು ಮಾಡಿದನು?

 4. ನಡೆದ ಸಂಗತಿಯ ಕುರಿತು ದೀನಳ ಸಹೋದರರಾದ ಸಿಮೆಯೋನ ಮತ್ತು ಲೇವಿ ಕೇಳಿದಾಗ ಅವರೇನು ಮಾಡಿದರು?

 5. ಸಿಮೆಯೋನ ಮತ್ತು ಲೇವಿ ಮಾಡಿದ ಕೆಲಸವನ್ನು ಯಾಕೋಬನು ಮೆಚ್ಚಿದನೋ?

 6. ಕುಟುಂಬದಲ್ಲಿ ಆ ಎಲ್ಲಾ ತೊಂದರೆಯು ಪ್ರಾರಂಭವಾದದ್ದು ಹೇಗೆ?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 34:1-31 ಓದಿ.

  1. (ಎ) ದೀನಳು ಕಾನಾನ್ಯ ಸ್ತ್ರೀಯರನ್ನು ನೋಡಲು ಕೇವಲ ಒಮ್ಮೆ ಮಾತ್ರ ಹೋಗಿದ್ದಳೋ? ವಿವರಿಸಿರಿ. (ಆದಿ. 34:1, NW: “ಯಾಕೋಬನಿಗೆ ಲೇಯಳಲ್ಲಿ ಹುಟ್ಟಿದ ದೀನಳಿಗೆ ಆ ದೇಶದ ಸ್ತ್ರೀಯರನ್ನು ನೋಡಲು ಹೋಗುವ ರೂಢಿ ಇತ್ತು.”)

  2. (ಬಿ) ತನ್ನ ಕನ್ಯಾವಸ್ಥೆ ಅಥವಾ ಶೀಲವನ್ನು ಕಳೆದುಕೊಂಡದ್ದಕ್ಕಾಗಿ ದೀನಳು ಸಹ ಕಾರಣಳಾಗಿದ್ದಳು ಎಂದು ಏಕೆ ಹೇಳಬಹುದು? (ಗಲಾ. 6:7)

  3. (ಸಿ) ದೀನಳ ಎಚ್ಚರಿಕೆಯ ಮಾದರಿಯನ್ನು ಮನಸ್ಸಿಗೆ ತೆಗೆದುಕೊಂಡಿದ್ದೇವೆಂದು ಇಂದಿನ ಯುವ ಜನರು ಹೇಗೆ ತೋರಿಸಬಲ್ಲರು? (ಜ್ಞಾನೋ. 13:20; 1 ಕೊರಿಂ. 15:33; 1 ಯೋಹಾ. 5:19)

ಕಥೆ 21

ಯೋಸೇಫನ ಅಣ್ಣಂದಿರು ಅವನನ್ನು ದ್ವೇಷಿಸುತ್ತಾರೆ

 1. ಯೋಸೇಫನ ಅಣ್ಣಂದಿರು ಅವನ ಮೇಲೆ ಏಕೆ ಹೊಟ್ಟೆಕಿಚ್ಚುಪಟ್ಟರು ಮತ್ತು ಅದಕ್ಕಾಗಿ ಅವರು ಏನು ಮಾಡಿದರು?

 2. ಯೋಸೇಫನ ಅಣ್ಣಂದಿರು ಅವನಿಗೆ ಏನು ಮಾಡಲು ಬಯಸುತ್ತಾರೆ? ಆದರೆ ರೂಬೇನನು ಏನು ಹೇಳುತ್ತಾನೆ?

 3. ಇಷ್ಮಾಯೇಲ್ಯ ವ್ಯಾಪಾರಿಗಳು ಅಲ್ಲಿಗೆ ಬಂದಾಗ ಏನಾಗುತ್ತದೆ?

 4. ಯೋಸೇಫನು ಸತ್ತಿದ್ದಾನೆಂದು ತಮ್ಮ ತಂದೆ ನೆನಸುವಂತೆ ಮಾಡಲಿಕ್ಕಾಗಿ ಯೋಸೇಫನ ಅಣ್ಣಂದಿರು ಏನು ಮಾಡುತ್ತಾರೆ?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 37:1-35 ಓದಿ.

  1. (ಎ) ಸಭೆಯಲ್ಲಿನ ತಪ್ಪನ್ನು ವರದಿಸುವ ಮೂಲಕ ಕ್ರೈಸ್ತರು ಹೇಗೆ ಯೋಸೇಫನ ಮಾದರಿಯನ್ನು ಅನುಕರಿಸಬಲ್ಲರು? (ಆದಿ. 37:2; ಯಾಜ. 5:1; 1 ಕೊರಿಂ. 1:11)

  2. (ಬಿ) ಯೋಸೇಫನ ಅಣ್ಣಂದಿರು ಅವನಿಗೆ ದ್ರೋಹ ಬಗೆಯಲು ಕಾರಣವೇನು? (ಆದಿ. 37:11, 18; ಜ್ಞಾನೋ. 27:4; ಯಾಕೋ. 3:14-16)

  3. (ಸಿ) ದುಃಖಿಸುವವರು ಯಾಕೋಬನಂತೆ ಸಾಮಾನ್ಯವಾಗಿ ಏನು ಮಾಡುತ್ತಾರೆ? (ಆದಿ. 37:35)

ಕಥೆ 22

ಯೋಸೇಫನನ್ನು ಸೆರೆಮನೆಗೆ ಹಾಕುತ್ತಾರೆ

 1. ಯೋಸೇಫನನ್ನು ಐಗುಪ್ತಕ್ಕೆ ಕರೆದುಕೊಂಡು ಹೋದಾಗ ಅವನಿಗೆ ಎಷ್ಟು ವರ್ಷ ಪ್ರಾಯವಾಗಿತ್ತು, ಮತ್ತು ಅವನು ಅಲ್ಲಿಗೆ ಹೋದಾಗ ಏನಾಯಿತು?

 2. ಯೋಸೇಫನು ಸೆರೆಮನೆಗೆ ಹಾಕಲ್ಪಟ್ಟದ್ದು ಏಕೆ?

 3. ಸೆರೆಮನೆಯಲ್ಲಿ ಯೋಸೇಫನಿಗೆ ಯಾವ ಜವಾಬ್ದಾರಿಯು ಕೊಡಲ್ಪಡುತ್ತದೆ?

 4. ಸೆರೆಮನೆಯಲ್ಲಿ ಯೋಸೇಫನು ಫರೋಹನ ಪಾನದಾಯಕನಿಗೂ ಭಕ್ಷ್ಯಗಾರನಿಗೂ ಯಾವ ಸಹಾಯಮಾಡುತ್ತಾನೆ?

 5. ಪಾನದಾಯಕನು ಸೆರೆಯಿಂದ ಬಿಡುಗಡೆಯಾದ ಬಳಿಕ ಏನು ಸಂಭವಿಸುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 39:1-23 ಓದಿ.

  ಯೋಸೇಫನ ದಿನದಲ್ಲಿ, ಹಾದರವನ್ನು ಖಂಡಿಸುವ ಯಾವುದೇ ಲಿಖಿತ ನಿಯಮವನ್ನು ದೇವರು ಕೊಟ್ಟಿರದಿದ್ದರೂ ಫರೋಹನ ಹೆಂಡತಿಯ ಬಳಿಯಿಂದ ಓಡಿಹೋಗುವಂತೆ ಯೋಸೇಫನನ್ನು ಯಾವುದು ಪ್ರಚೋದಿಸಿತು? (ಆದಿ. 2:24; 20:3; 39:9)

 2. ಆದಿಕಾಂಡ 40:1-23 ಓದಿ.

  1. (ಎ) ಪಾನದಾಯಕನ ಕನಸನ್ನು ಮತ್ತು ಯೆಹೋವನು ಯೋಸೇಫನಿಗೆ ತಿಳಿಸಿದ ಆ ಕನಸಿನ ಅರ್ಥವನ್ನು ಚುಟುಕಾಗಿ ವಿವರಿಸಿರಿ. (ಆದಿ. 40:9-13)

  2. (ಬಿ) ಭಕ್ಷ್ಯಗಾರನಿಗೆ ಯಾವ ಕನಸು ಬಿತ್ತು, ಮತ್ತು ಅದರ ಅರ್ಥವೇನು? (ಆದಿ. 40:16-19)

  3. (ಸಿ) ಇಂದು ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗವು ಯೋಸೇಫನ ಮನೋಭಾವವನ್ನು ಹೇಗೆ ಅನುಕರಿಸಿದೆ? (ಆದಿ. 40:8; ಕೀರ್ತ. 36:9; ಯೋಹಾ. 17:17; ಅ. ಕೃ. 17:2, 3)

  4. (ಡಿ) ಹುಟ್ಟುಹಬ್ಬದ ಆಚರಣೆಯ ಕುರಿತ ಕ್ರೈಸ್ತರ ದೃಷ್ಟಿಕೋನವನ್ನು ಆದಿಕಾಂಡ 40:20, 22 ಹೇಗೆ ಸ್ಪಷ್ಟಪಡಿಸುತ್ತದೆ? (ಪ್ರಸಂ. 7:1; ಮಾರ್ಕ 6:21-28)

ಕಥೆ 23

ಫರೋಹನ ಕನಸುಗಳು

 1. ಒಂದು ರಾತ್ರಿ ಫರೋಹನಿಗೆ ಏನಾಗುತ್ತದೆ?

 2. ಪಾನದಾಯಕನು ಕೊನೆಗೆ ಯೋಸೇಫನನ್ನು ಏಕೆ ನೆನಪಿಸಿಕೊಳ್ಳುತ್ತಾನೆ?

 3. ಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ ಫರೋಹನು ಯಾವ ಎರಡು ಕನಸುಗಳನ್ನು ಕಾಣುತ್ತಾನೆ?

 4. ಆ ಕನಸುಗಳ ಅರ್ಥವನ್ನು ಯೋಸೇಫನು ಹೇಗೆ ವಿವರಿಸುತ್ತಾನೆ?

 5. ಐಗುಪ್ತದಲ್ಲಿ ಫರೋಹನಿಗೆ ನಂತರದ ಪ್ರಧಾನ ಸ್ಥಾನಕ್ಕೆ ಯೋಸೇಫನು ಹೇಗೆ ಬರುತ್ತಾನೆ?

 6. ಯೋಸೇಫನ ಅಣ್ಣಂದಿರು ಐಗುಪ್ತಕ್ಕೆ ಬರಲು ಕಾರಣವೇನು, ಮತ್ತು ಅವರಿಗೆ ಏಕೆ ಯೋಸೇಫನ ಗುರುತು ಸಿಕ್ಕುವುದಿಲ್ಲ?

 7. ತಾನು ಕಂಡ ಯಾವ ಕನಸು ಯೋಸೇಫನ ನೆನಪಿಗೆ ಬರುತ್ತದೆ, ಮತ್ತು ಇದರಿಂದ ಅವನಿಗೆ ಏನು ತಿಳಿದುಬರುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 41:1-57 ಓದಿ.

  1. (ಎ) ಯೋಸೇಫನು ಹೇಗೆ ಯೆಹೋವನ ಕಡೆಗೆ ಗಮನ ನಿರ್ದೇಶಿಸಿದನು, ಮತ್ತು ಇಂದು ಕ್ರೈಸ್ತರು ಅವನ ಮಾದರಿಯನ್ನು ಹೇಗೆ ಅನುಕರಿಸಬಲ್ಲರು? (ಆದಿ. 41:16, 25, 28; ಮತ್ತಾ. 5:16; 1 ಪೇತ್ರ 2:12)

  2. (ಬಿ) ಐಗುಪ್ತದಲ್ಲಿ ಸಮೃದ್ಧಿಯ ವರುಷಗಳ ನಂತರ ಬಂದ ಕ್ಷಾಮದ ವರುಷಗಳು, ಇಂದು ಯೆಹೋವನ ಜನರ ಮತ್ತು ಕ್ರೈಸ್ತಪ್ರಪಂಚದ ಆಧ್ಯಾತ್ಮಿಕ ಪರಿಸ್ಥಿತಿಯ ನಡುವೆಯಿರುವ ವ್ಯತ್ಯಾಸವನ್ನು ಹೇಗೆ ನಿಷ್ಕೃಷ್ಟವಾಗಿ ಚಿತ್ರಿಸುತ್ತದೆ? (ಆದಿ. 41:29, 30; ಆಮೋ. 8:11, 12)

 2. ಆದಿಕಾಂಡ 42:1-8 ಮತ್ತು 50:20 ಓದಿ.

  ಒಬ್ಬ ವ್ಯಕ್ತಿಗಿರುವ ಸ್ಥಾನಮಾನಕ್ಕೆ ಗೌರವಾರ್ಥವಾಗಿ ಅವನ ಮುಂದೆ ಅಡ್ಡಬೀಳುವುದು ಒಂದು ದೇಶದ ಪದ್ಧತಿಯಾಗಿರುವಲ್ಲಿ ಯೆಹೋವನ ಆರಾಧಕರು ಹಾಗೆ ಮಾಡುವುದು ತಪ್ಪೊ? (ಆದಿ. 42:6)

ಕಥೆ 24

ಯೋಸೇಫನು ತನ್ನ ಅಣ್ಣಂದಿರನ್ನು ಪರೀಕ್ಷಿಸುತ್ತಾನೆ

 1. ಯೋಸೇಫನು ತನ್ನ ಅಣ್ಣಂದಿರ ಮೇಲೆ ಗೂಢಚಾರರೆಂಬ ಆರೋಪವನ್ನು ಏಕೆ ಹೊರಿಸಿದನು?

 2. ತನ್ನ ಕಿರಿಯ ಮಗನಾದ ಬೆನ್ಯಾಮೀನನ್ನು ಐಗುಪ್ತಕ್ಕೆ ಹೋಗಲು ಯಾಕೋಬನು ಅನುಮತಿಸುವುದೇಕೆ?

 3. ಯೋಸೇಫನ ಬೆಳ್ಳಿಯ ಪಾತ್ರೆಯು ಬೆನ್ಯಾಮೀನನ ಚೀಲದೊಳಗೆ ಬಂದದ್ದು ಹೇಗೆ?

 4. ಬೆನ್ಯಾಮೀನನನ್ನು ಬಿಟ್ಟುಬಿಡುವುದಕ್ಕೆ ಪ್ರತಿಯಾಗಿ ತಾನೇನು ಮಾಡುತ್ತೇನೆಂದು ಯೆಹೂದನು ಹೇಳುತ್ತಾನೆ?

 5. ಯೋಸೇಫನ ಅಣ್ಣಂದಿರು ಬದಲಾಗಿದ್ದಾರೆಂದು ಹೇಗೆ ಗೊತ್ತಾಗುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 42:9-38 ಓದಿ.

  ಆದಿಕಾಂಡ 42:18 ರಲ್ಲಿರುವ ಯೋಸೇಫನ ಹೇಳಿಕೆಯು ಇಂದು ಯೆಹೋವನ ಸಂಘಟನೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಹೇಗೆ ಒಂದು ಉತ್ತಮವಾದ ಮರುಜ್ಞಾಪನವಾಗಿದೆ? (ನೆಹೆ. 5:15; 2 ಕೊರಿಂ. 7:1, 2)

 2. ಆದಿಕಾಂಡ 43:1-34 ಓದಿ.

  1. (ಎ) ರೂಬೇನನು ಚೊಚ್ಚಲ ಮಗನಾಗಿದ್ದರೂ, ಯೆಹೂದನು ತನ್ನ ಅಣ್ಣತಮ್ಮಂದಿರ ಪರವಾಗಿ ಮಾತಾಡಿದನು ಎಂಬುದು ಹೇಗೆ ವ್ಯಕ್ತವಾಗುತ್ತದೆ? (ಆದಿ. 43:3, 8, 9; 44:14, 18; 1 ಪೂರ್ವ. 5:2)

  2. (ಬಿ) ಯೋಸೇಫನು ತನ್ನ ಸಹೋದರರನ್ನು ಹೇಗೆ ಪರೀಕ್ಷಿಸಿದನು, ಮತ್ತು ಏಕೆ? (ಆದಿ. 43:33, 34)

 3. ಆದಿಕಾಂಡ 44:1-34 ಓದಿ.

  1. (ಎ) ತನ್ನ ಸಹೋದರರು ತನ್ನ ಗುರುತು ಹಿಡಿಯದಿರಲಿಕ್ಕಾಗಿ ಯೋಸೇಫನು ತನ್ನನ್ನು ಯಾರೆಂದು ತೋರಿಸಿಕೊಂಡನು? (ಆದಿ. 44:5, 15; ಯಾಜ. 19:26)

  2. (ಬಿ) ಯೋಸೇಫನ ಮೇಲೆ ತಮಗಿದ್ದ ಹೊಟ್ಟೆಕಿಚ್ಚು ಈಗ ಇಲ್ಲವೆಂದು ಅವನ ಅಣ್ಣಂದಿರು ಹೇಗೆ ತೋರಿಸಿದರು? (ಆದಿ. 44:13, 33, 34)

ಕಥೆ 25

ಇಡೀ ಕುಟುಂಬವು ಐಗುಪ್ತಕ್ಕೆ ಸ್ಥಳಾಂತರಿಸುತ್ತದೆ

 1. ಯೋಸೇಫನು ತಾನು ಯಾರೆಂಬುದನ್ನು ತನ್ನ ಸಹೋದರರಿಗೆ ತಿಳಿಸಿದಾಗ ಏನು ಸಂಭವಿಸುತ್ತದೆ?

 2. ಯೋಸೇಫನು ದಯೆಯಿಂದ ತನ್ನ ಸಹೋದರರಿಗೆ ಏನನ್ನು ವಿವರಿಸುತ್ತಾನೆ?

 3. ಯೋಸೇಫನ ಸಹೋದರರ ಬಗ್ಗೆ ಫರೋಹನಿಗೆ ತಿಳಿದುಬಂದಾಗ ಅವನು ಏನು ಹೇಳುತ್ತಾನೆ?

 4. ಯಾಕೋಬನ ಕುಟುಂಬವು ಐಗುಪ್ತಕ್ಕೆ ಬಂದಾಗ ಎಷ್ಟು ದೊಡ್ಡದಾಗಿತ್ತು?

 5. ಯಾಕೋಬನ ಕುಟುಂಬವು ಯಾವ ಹೆಸರಿನಿಂದ ಕರೆಯಲ್ಪಟ್ಟಿತು, ಮತ್ತು ಏಕೆ?

ಹೆಚ್ಚಿನ ಪ್ರಶ್ನೆಗಳು:

 1. ಆದಿಕಾಂಡ 45:1-28 ಓದಿ.

  ತನ್ನ ಜನರಿಗೆ ಹಾನಿಮಾಡಲಿಕ್ಕಾಗಿ ಹೂಡಲಾದ ಯಾವುದೇ ಕುತಂತ್ರವು ಒಳಿತನ್ನು ಉಂಟುಮಾಡುವಂತೆ ಯೆಹೋವನು ಮಾಡಬಲ್ಲನು ಎಂಬುದನ್ನು ಯೋಸೇಫನ ಕುರಿತಾದ ಬೈಬಲ್‌ ವೃತ್ತಾಂತವು ಹೇಗೆ ತೋರಿಸುತ್ತದೆ? (ಆದಿ. 45:5-8; ಯೆಶಾ. 8:10; ಫಿಲಿ. 1:12-14)

 2. ಆದಿಕಾಂಡ 46:1-27 ಓದಿ.

  ಯಾಕೋಬನು ಐಗುಪ್ತಕ್ಕೆ ಹೋಗುತ್ತಿರುವಾಗ ಯೆಹೋವನು ಅವನಿಗೆ ಯಾವ ಆಶ್ವಾಸನೆಯನ್ನು ಕೊಟ್ಟನು? (ಆದಿ. 46:1-4)

ಕಥೆ 26

ಯೋಬನು ದೇವರಿಗೆ ನಂಬಿಗಸ್ತನಾಗಿರುತ್ತಾನೆ

 1. ಯೋಬನು ಯಾರು?

 2. ಸೈತಾನನು ಏನು ಮಾಡಲು ಪ್ರಯತ್ನಿಸಿದನು? ಆದರೆ ಅವನು ಯಶಸ್ವಿಯಾದನೊ?

 3. ಸೈತಾನನು ಏನು ಮಾಡುವಂತೆ ಯೆಹೋವನು ಅನುಮತಿಸಿದನು, ಮತ್ತು ಏಕೆ?

 4. ಯೋಬನ ಹೆಂಡತಿಯು ಅವನಿಗೆ “ದೇವರನ್ನು ದೂಷಿಸಿ ಸಾಯಿ” ಎಂದು ಏಕೆ ಹೇಳಿದಳು? (ಚಿತ್ರವನ್ನು ನೋಡಿ.)

 5. ನೀವು ಎರಡನೆಯ ಚಿತ್ರದಲ್ಲಿ ನೋಡುವಂತೆ ಯೆಹೋವನು ಯೋಬನನ್ನು ಹೇಗೆ ಆಶೀರ್ವದಿಸಿದನು, ಮತ್ತು ಏಕೆ?

 6. ನಾವು ಯೋಬನಂತೆ ಯೆಹೋವನಿಗೆ ನಂಬಿಗಸ್ತರಾಗಿ ಇರುವಲ್ಲಿ ಯಾವ ಆಶೀರ್ವಾದಗಳನ್ನು ಪಡೆದುಕೊಳ್ಳುವೆವು?

ಹೆಚ್ಚಿನ ಪ್ರಶ್ನೆಗಳು:

 1. ಯೋಬ 1:1-22 ಓದಿ.

  ಇಂದು ಕ್ರೈಸ್ತರು ಯೋಬನನ್ನು ಹೇಗೆ ಅನುಕರಿಸಸಾಧ್ಯವಿದೆ? (ಯೋಬ. 1:1; ಫಿಲಿ. 2:15; 2 ಪೇತ್ರ 3:14)

 2. ಯೋಬ 2:1-13 ಓದಿ.

  ಸೈತಾನನು ತಂದ ಹಿಂಸೆಗೆ ಯೋಬನೂ ಅವನ ಹೆಂಡತಿಯೂ ಹೇಗೆ ಭಿನ್ನವಾಗಿ ಪ್ರತಿಕ್ರಿಯಿಸಿದರು? (ಯೋಬ 2:9, 10; ಜ್ಞಾನೋ. 19:3; ಮೀಕ 7:7; ಮಲಾ. 3:14)

 3. ಯೋಬ 42:10-17 ಓದಿ.

  1. (ಎ) ನಂಬಿಗಸ್ತ ಜೀವನಮಾರ್ಗಕ್ಕಾಗಿ ಯೋಬನೂ ಯೇಸುವೂ ಪಡೆದುಕೊಂಡ ಪ್ರತಿಫಲಗಳ ಮಧ್ಯೆ ಯಾವ ಹೋಲಿಕೆಗಳಿವೆ? (ಯೋಬ 42:12; ಫಿಲಿ. 2:9-11)

  2. (ಬಿ) ದೇವರಿಗೆ ಸಮಗ್ರತೆಯನ್ನು ಕಾಪಾಡಿಕೊಂಡದ್ದಕ್ಕಾಗಿ ಯೋಬನು ಪಡೆದುಕೊಂಡ ಆಶೀರ್ವಾದಗಳಿಂದ ನಮಗೆ ಯಾವ ಪ್ರೋತ್ಸಾಹ ಸಿಗುತ್ತವೆ? (ಯೋಬ 42:10, 12; ಇಬ್ರಿ. 6:10; ಯಾಕೋ. 1:2-4, 12; 5:11)

ಕಥೆ 27

ಒಬ್ಬ ಕೆಟ್ಟ ಅರಸನು ಐಗುಪ್ತವನ್ನು ಆಳುತ್ತಾನೆ

 1. ಚಿತ್ರದಲ್ಲಿ ಕೊರಡೆಯನ್ನು ಹಿಡಿದುಕೊಂಡಿರುವ ಪುರುಷನು ಯಾರು, ಮತ್ತು ಅವನು ಯಾರನ್ನು ಹೊಡೆಯುತ್ತಿದ್ದಾನೆ?

 2. ಯೋಸೇಫನು ಸತ್ತ ಬಳಿಕ ಇಸ್ರಾಯೇಲ್ಯರಿಗೆ ಏನು ಸಂಭವಿಸಿತು?

 3. ಐಗುಪ್ತ್ಯರು ಇಸ್ರಾಯೇಲ್ಯರಿಗೆ ಏಕೆ ಹೆದರಿದರು?

 4. ಇಸ್ರಾಯೇಲ್ಯ ತಾಯಂದಿರಿಗೆ ಹೆರಿಗೆಯ ಸಮಯದಲ್ಲಿ ಸಹಾಯಮಾಡುತ್ತಿದ್ದ ಸ್ತ್ರೀಯರಿಗೆ ಫರೋಹನು ಯಾವ ಆಜ್ಞೆ ಕೊಟ್ಟನು?

ಹೆಚ್ಚಿನ ಪ್ರಶ್ನೆಗಳು:

 1. ವಿಮೋಚನಕಾಂಡ 1:6-22 ಓದಿ.

  1. (ಎ) ಅಬ್ರಹಾಮನಿಗೆ ಮಾಡಿದ ತನ್ನ ವಾಗ್ದಾನವನ್ನು ಯೆಹೋವನು ಯಾವ ವಿಧದಲ್ಲಿ ನೆರವೇರಿಸಲು ಆರಂಭಿಸಿದನು? (ವಿಮೋ. 1:7; ಆದಿ. 12:2; ಅ. ಕೃ. 7:17)

  2. (ಬಿ) ಆ ಇಬ್ರಿಯ ಸೂಲಗಿತ್ತಿಯರು ಜೀವದ ಪವಿತ್ರತೆಗೆ ಹೇಗೆ ಗೌರವ ತೋರಿಸಿದರು? (ವಿಮೋ. 1:17; ಆದಿ. 9:6)

  3. (ಸಿ) ಯೆಹೋವನಿಗೆ ನಂಬಿಗಸ್ತರಾಗಿದ್ದುದಕ್ಕಾಗಿ ಆ ಸೂಲಗಿತ್ತಿಯರು ಹೇಗೆ ಆಶೀರ್ವದಿಸಲ್ಪಟ್ಟರು? (ವಿಮೋ. 1:20, 21; ಜ್ಞಾನೋ. 19:17)

  4. (ಡಿ) ಅಬ್ರಹಾಮನ ವಾಗ್ದತ್ತ ಸಂತತಿಯ ಕುರಿತಾದ ಯೆಹೋವನ ಉದ್ದೇಶವನ್ನು ಕೆಡಿಸಲು ಸೈತಾನನು ಹೇಗೆ ಪ್ರಯತ್ನಿಸಿದನು? (ವಿಮೋ. 1:22; ಮತ್ತಾ. 2:16)

ಕಥೆ 28

ಪುಟಾಣಿ ಮೋಶೆ ಸಂರಕ್ಷಿಸಲ್ಪಟ್ಟ ವಿಧ

 1. ಚಿತ್ರದಲ್ಲಿರುವ ಮಗು ಯಾರು, ಮತ್ತು ಅದು ಯಾರ ಬೆರಳನ್ನು ಹಿಡಿದುಕೊಂಡಿದೆ?

 2. ಪುಟಾಣಿ ಮೋಶೆಯನ್ನು ಸಂರಕ್ಷಿಸಲು ಅವನ ತಾಯಿ ಏನು ಮಾಡಿದಳು?

 3. ಚಿತ್ರದಲ್ಲಿರುವ ಚಿಕ್ಕ ಹುಡುಗಿ ಯಾರು, ಮತ್ತು ಅವಳು ಏನು ಮಾಡಿದಳು?

 4. ಫರೋಹನ ಮಗಳು ಮಗುವನ್ನು ನೋಡಿದಾಗ ಮಿರ್ಯಾಮಳು ಯಾವ ಸಲಹೆ ಕೊಟ್ಟಳು?

 5. ರಾಜಕುಮಾರಿಯು ಮೋಶೆಯ ತಾಯಿಗೆ ಏನು ಹೇಳಿದಳು?

ಹೆಚ್ಚಿನ ಪ್ರಶ್ನೆ:

 1. ವಿಮೋಚನಕಾಂಡ 2:1-10 ಓದಿ.

  ಮಗುವಾಗಿದ್ದಾಗಲೇ ಮೋಶೆಗೆ ತರಬೇತಿ ನೀಡಲು ಮತ್ತು ಕಲಿಸಲು ಅವನ ತಾಯಿಗೆ ಯಾವ ಅವಕಾಶ ಸಿಕ್ಕಿತು, ಮತ್ತು ಇದು ಹೆತ್ತವರಿಗೆ ಇಂದು ಯಾವ ಮಾದರಿಯನ್ನು ಒದಗಿಸುತ್ತದೆ? (ವಿಮೋ. 2:9, 10; ಧರ್ಮೋ. 6:6-9; ಜ್ಞಾನೋ. 22:6; ಎಫೆ. 6:4; 2 ತಿಮೊ. 3:15)

ಕಥೆ 29

ಮೋಶೆ ಓಡಿಹೋಗಲು ಕಾರಣ

 1. ಮೋಶೆ ಎಲ್ಲಿ ಬೆಳೆದನು, ಅವನಿಗೆ ತನ್ನ ಹೆತ್ತವರ ಬಗ್ಗೆ ಏನು ತಿಳಿದಿತ್ತು?

 2. ಮೋಶೆ 40 ವರ್ಷದವನಾದಾಗ ಏನು ಮಾಡಿದನು?

 3. ಜಗಳವಾಡುತ್ತಿದ್ದ ಒಬ್ಬ ಇಸ್ರಾಯೇಲ್ಯ ಪುರುಷನಿಗೆ ಮೋಶೆ ಏನು ಹೇಳಿದನು, ಮತ್ತು ಆ ಪುರುಷನು ಏನೆಂದು ಉತ್ತರಕೊಟ್ಟನು?

 4. ಮೋಶೆಯು ಐಗುಪ್ತದಿಂದ ಏಕೆ ಓಡಿಹೋದನು?

 5. ಮೋಶೆಯು ಎಲ್ಲಿಗೆ ಓಡಿಹೋದನು, ಮತ್ತು ಅಲ್ಲಿ ಅವನು ಯಾರನ್ನು ಸಂಧಿಸಿದನು?

 6. ಐಗುಪ್ತದಿಂದ ಓಡಿಹೋದ ಬಳಿಕ ಮೋಶೆ 40 ವರುಷಗಳ ವರೆಗೆ ಏನು ಮಾಡಿದನು?

ಹೆಚ್ಚಿನ ಪ್ರಶ್ನೆಗಳು:

 1. ವಿಮೋಚನಕಾಂಡ 2:11-25 ಓದಿ.

  ಮೋಶೆಯು ಐಗುಪ್ತದೇಶದವರ ವಿದ್ಯೆಯಲ್ಲಿ ಅನೇಕ ವರ್ಷಗಳ ಶಿಕ್ಷಣವನ್ನು ಪಡೆದರೂ ಯೆಹೋವನಿಗೂ ಆತನ ಜನರಿಗೂ ತನ್ನ ನಿಷ್ಠೆಯನ್ನು ಹೇಗೆ ತೋರಿಸಿದನು? (ವಿಮೋ. 2:11, 12; ಇಬ್ರಿ. 11:24)

 2. ಅಪೊಸ್ತಲರ ಕೃತ್ಯಗಳು 7:22-29 ಓದಿ.

  ಇಸ್ರಾಯೇಲ್ಯರನ್ನು ಐಗುಪ್ತದ ದಾಸತ್ವದಿಂದ ಬಿಡಿಸಲು ಮೋಶೆ ತನ್ನಷ್ಟಕ್ಕೇ ಮಾಡಿದ ಪ್ರಯತ್ನದಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು? (ಅ. ಕೃ. 7:23-25; 1 ಪೇತ್ರ 5:6, 10)

ಕಥೆ 30

ಉರಿಯುತ್ತಿರುವ ಪೊದೆ

 1. ಚಿತ್ರದಲ್ಲಿರುವ ಬೆಟ್ಟದ ಹೆಸರೇನು?

 2. ಮೋಶೆಯು ಕುರಿಗಳೊಂದಿಗೆ ಬೆಟ್ಟಕ್ಕೆ ಹೋದಾಗ ಅವನು ನೋಡಿದ ಅಸಾಮಾನ್ಯ ಸಂಗತಿಯನ್ನು ವರ್ಣಿಸಿರಿ.

 3. ಉರಿಯುತ್ತಿರುವ ಪೊದೆಯೊಳಗಿಂದ ಬಂದ ವಾಣಿಯು ಏನು ಹೇಳಿತು, ಮತ್ತು ಅದು ಯಾರ ವಾಣಿಯಾಗಿತ್ತು?

 4. ದೇವಜನರನ್ನು ಐಗುಪ್ತದಿಂದ ಹೊರಗೆ ಕರೆತರುವಂತೆ ದೇವರು ಮೋಶೆಗೆ ತಿಳಿಸಿದಾಗ ಅವನು ಹೇಗೆ ಪ್ರತಿಕ್ರಿಯಿಸಿದನು?

 5. ಮೋಶೆಯನ್ನು ಯಾರು ಕಳುಹಿಸಿದರೆಂದು ಜನರು ಕೇಳುವುದಾದರೆ ಅವನೇನು ತಿಳಿಸಬೇಕೆಂದು ದೇವರು ಹೇಳಿದನು?

 6. ತನ್ನನ್ನು ದೇವರೇ ಕಳುಹಿಸಿದ್ದಾನೆ ಎಂಬುದನ್ನು ಮೋಶೆಯು ಹೇಗೆ ತೋರಿಸಿಕೊಡಸಾಧ್ಯವಿತ್ತು?

ಹೆಚ್ಚಿನ ಪ್ರಶ್ನೆಗಳು:

 1. ವಿಮೋಚನಕಾಂಡ 3:1-22 ಓದಿ.

  ಒಂದು ದೇವಪ್ರಭುತ್ವಾತ್ಮಕ ನೇಮಕವನ್ನು ಪೂರೈಸಲು ನಾವು ಯೋಗ್ಯರಲ್ಲವೆಂದು ನಮಗೆ ಅನಿಸುವುದಾದರೂ ಯೆಹೋವನು ನಮ್ಮನ್ನು ಬೆಂಬಲಿಸುವನು ಎಂಬ ಭರವಸೆಯನ್ನು ಮೋಶೆಯ ಅನುಭವವು ಹೇಗೆ ಕೊಡುತ್ತದೆ? (ವಿಮೋ. 3:11, 13; 2 ಕೊರಿಂ. 3:5, 6)

 2. ವಿಮೋಚನಕಾಂಡ 4:1-20 ಓದಿ.

  1. (ಎ) ಮಿದ್ಯಾನಿನಲ್ಲಿ 40 ವರುಷಗಳನ್ನು ಕಳೆದ ಸಮಯದಲ್ಲಿ ಮೋಶೆಯ ಮನೋಭಾವದಲ್ಲಿ ಯಾವ ಬದಲಾವಣೆಯಾಯಿತು ಮತ್ತು ಈ ವಿಷಯದಿಂದ, ಸಭಾ ಸುಯೋಗಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುವವರು ಯಾವ ಪಾಠವನ್ನು ಕಲಿಯಸಾಧ್ಯವಿದೆ? (ವಿಮೋ. 2:11, 12; 4:10, 13; ಮೀಕ 6:8; 1 ತಿಮೊ. 3:1, 6, 10)

  2. (ಬಿ) ಯೆಹೋವನ ಸಂಘಟನೆಯ ಮೂಲಕ ನಾವು ಶಿಸ್ತನ್ನು ಪಡೆಯುವುದಾದರೂ ಕೂಡ, ಮೋಶೆಯ ಮಾದರಿಯು ನಮಗೆ ಯಾವ ಭರವಸೆಯನ್ನು ಕೊಡಬಲ್ಲದು? (ವಿಮೋ. 4:12-14; ಕೀರ್ತ. 103:14; ಇಬ್ರಿ. 12:4-11)

ಕಥೆ 31

ಮೋಶೆ-ಆರೋನರು ಫರೋಹನನ್ನು ಭೇಟಿಯಾಗುತ್ತಾರೆ

 1. ಮೋಶೆ ಮತ್ತು ಆರೋನನು ಮಾಡಿದ ಅದ್ಭುತಗಳು ಇಸ್ರಾಯೇಲ್ಯರ ಮೇಲೆ ಯಾವ ಪರಿಣಾಮ ಬೀರಿದವು?

 2. ಮೋಶೆ ಮತ್ತು ಆರೋನ ಫರೋಹನಿಗೆ ಏನು ಹೇಳಿದರು, ಮತ್ತು ಫರೋಹನ ಉತ್ತರವೇನಾಗಿತ್ತು?

 3. ಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ, ಆರೋನನು ತನ್ನ ಕೋಲನ್ನು ಕೆಳಗೆ ಬಿಸಾಡಿದಾಗ ಏನು ಸಂಭವಿಸಿತು?

 4. ಯೆಹೋವನು ಫರೋಹನಿಗೆ ಹೇಗೆ ಪಾಠ ಕಲಿಸಿದನು, ಮತ್ತು ಫರೋಹನು ಹೇಗೆ ಪ್ರತಿಕ್ರಿಯಿಸಿದನು?

 5. ಹತ್ತನೆಯ ಬಾಧೆಯ ನಂತರ ಏನಾಯಿತು?

ಹೆಚ್ಚಿನ ಪ್ರಶ್ನೆಗಳು:

 1. ವಿಮೋಚನಕಾಂಡ 4:27-31 ಮತ್ತು 5:1-23 ಓದಿ.

  “ಯೆಹೋವನು ಯಾರೋ ನನಗೆ ಗೊತ್ತಿಲ್ಲ” ಎಂದು ಫರೋಹನು ಹೇಳಿದಾಗ ಅವನ ಮಾತಿನ ಅರ್ಥವೇನಾಗಿತ್ತು? (ವಿಮೋ. 5:2; 1 ಸಮು. 2:12; ರೋಮಾ. 1:21)

 2. ವಿಮೋಚನಕಾಂಡ 6:1-13, 26-30 ಓದಿ.

  1. (ಎ) ಅಬ್ರಹಾಮ, ಇಸಾಕ ಮತ್ತು ಯಾಕೋಬರಿಗೆ ಯೆಹೋವನು ಗೋಚರವಾಗದೆ ಇದ್ದದ್ದು ಯಾವ ಅರ್ಥದಲ್ಲಿ? (ವಿಮೋ. 3:13, 14; 6:3; ಆದಿ. 12:8)

  2. (ಬಿ) ತನಗೆ ನೇಮಿಸಲ್ಪಟ್ಟ ಕೆಲಸಕ್ಕೆ ತಾನು ಅರ್ಹನಲ್ಲವೆಂದು ಮೋಶೆಯು ನೆನಸಿದಾಗಲೂ ಯೆಹೋವನು ಅವನನ್ನು ಉಪಯೋಗಿಸಿದ ವಿಷಯವು ನಮ್ಮಲ್ಲಿ ಯಾವ ಭಾವನೆಯನ್ನು ಉಂಟುಮಾಡುತ್ತದೆ? (ವಿಮೋ. 6:12, 30; ಲೂಕ 21:13-15)

 3. ವಿಮೋಚನಕಾಂಡ 7:1-13 ಓದಿ.

  1. (ಎ) ಮೋಶೆಆರೋನರು ಫರೋಹನಿಗೆ ಯೆಹೋವನ ತೀರ್ಪುಗಳನ್ನು ಧೈರ್ಯದಿಂದ ತಿಳಿಸಿದಾಗ, ಅವರು ಇಂದಿನ ದೇವರ ಸೇವಕರಿಗಾಗಿ ಯಾವ ಮಾದರಿಯನ್ನು ಇಟ್ಟರು? (ವಿಮೋ. 7:2, 3, 6; ಅ. ಕೃ. 4:29-31)

  2. (ಬಿ) ಐಗುಪ್ತದ ದೇವರುಗಳಿಗಿಂತಲೂ ತಾನು ಮಹನ್ನೋತನೆಂದು ಯೆಹೋವನು ಹೇಗೆ ತೋರಿಸಿದನು? (ವಿಮೋ. 7:12; 1 ಪೂರ್ವ. 29:12)

ಕಥೆ 32

ಹತ್ತು ಬಾಧೆಗಳು

 1. ಚಿತ್ರಗಳನ್ನು ನೋಡಿ, ಯೆಹೋವನು ಐಗುಪ್ತದ ಮೇಲೆ ಬರಮಾಡಿದ ಮೊದಲ ಮೂರು ಬಾಧೆಗಳನ್ನು ವಿವರಿಸಿ.

 2. ಮೊದಲ ಮೂರು ಬಾಧೆಗಳಿಗೂ ಉಳಿದ ಇನ್ನಿತರ ಬಾಧೆಗಳಿಗೂ ಇದ್ದ ವ್ಯತ್ಯಾಸವೇನು?

 3. ನಾಲ್ಕನೆಯ, ಐದನೆಯ ಮತ್ತು ಆರನೆಯ ಬಾಧೆಗಳು ಯಾವುವು?

 4. ಏಳನೆಯ, ಎಂಟನೆಯ ಮತ್ತು ಒಂಬತ್ತನೆಯ ಬಾಧೆಗಳನ್ನು ವಿವರಿಸಿ.

 5. ಹತ್ತನೆಯ ಬಾಧೆಗೆ ಮುಂಚೆ ಇಸ್ರಾಯೇಲ್ಯರು ಏನು ಮಾಡಬೇಕೆಂದು ಯೆಹೋವನು ತಿಳಿಸಿದನು?

 6. ಹತ್ತನೆಯ ಬಾಧೆ ಯಾವುದಾಗಿತ್ತು, ಮತ್ತು ಅದರ ನಂತರ ಏನು ಸಂಭವಿಸಿತು?

ಹೆಚ್ಚಿನ ಪ್ರಶ್ನೆಗಳು:

 1. ವಿಮೋಚನಕಾಂಡ 7:19-8:23 ಓದಿ.

  1. (ಎ) ಯೆಹೋವನು ಬರಮಾಡಿದ ಮೊದಲ ಎರಡು ಬಾಧೆಗಳನ್ನು ಐಗುಪ್ತದ ಜೋಯಿಸರು ಸಹ ನಕಲುಮಾಡಿ ತೋರಿಸಿದರಾದರೂ ಮೂರನೆಯ ಬಾಧೆಯ ಬಳಿಕ ಅವರು ಏನನ್ನು ಒಪ್ಪಿಕೊಳ್ಳಲೇಬೇಕಾಯಿತು? (ವಿಮೋ. 8:18, 19; ಮತ್ತಾ. 12:24-28)

  2. (ಬಿ) ನಾಲ್ಕನೆಯ ಬಾಧೆಯು, ತನ್ನ ಜನರನ್ನು ಸಂರಕ್ಷಿಸಲು ಯೆಹೋವನಿಗಿರುವ ಸಾಮರ್ಥ್ಯವನ್ನು ಹೇಗೆ ಪ್ರದರ್ಶಿಸಿತು, ಮತ್ತು ಇದನ್ನು ತಿಳಿದಿರುವುದು ಮುಂತಿಳಿಸಲ್ಪಟ್ಟ “ಮಹಾ ಸಂಕಟವನ್ನು” ಎದುರಿಸುವಾಗ ದೇವಜನರು ಯಾವ ಭರವಸೆಯಿಂದಿರುವಂತೆ ಮಾಡುತ್ತದೆ? (ವಿಮೋ. 8:22, 23; ಪ್ರಕ. 7:13, 14; 2 ಪೂರ್ವ. 16:9)

 2. ವಿಮೋಚನಕಾಂಡ 8:24; 9:3, 6, 10, 11, 14, 16, 23-25; ಮತ್ತು 10:13-15, 21-23 ಓದಿ.

  1. (ಎ) ಫರೋಹ ಮತ್ತು ಜೋಯಿಸರು ಯಾವ ಎರಡು ವರ್ಗಗಳನ್ನು ಪ್ರತಿನಿಧಿಸುತ್ತಾರೆ, ಮತ್ತು ಇಂದು ಆ ಎರಡು ವರ್ಗಗಳು ತದ್ರೀತಿಯಲ್ಲಿ ಏನನ್ನು ಮಾಡಲು ಅಶಕ್ತವಾಗಿವೆ? (ವಿಮೋ. 8:10, 18, 19; 9:14)

  2. (ಬಿ) ಸೈತಾನನು ಇಂದಿನ ವರೆಗೂ ಇರುವಂತೆ ಯೆಹೋವನು ಏಕೆ ಅನುಮತಿಸಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಮೋಚನಕಾಂಡ 9:16 ನಮಗೆ ಹೇಗೆ ಸಹಾಯಮಾಡುತ್ತದೆ? (ರೋಮಾ. 9:21, 22)

 3. ವಿಮೋಚನಕಾಂಡ 12:21-32 ಓದಿ.

  ಪಸ್ಕವು ಹೇಗೆ ಅನೇಕರಿಗೆ ರಕ್ಷಣೆಯನ್ನು ಒದಗಿಸಿತು, ಮತ್ತು ಪಸ್ಕವು ಏನನ್ನು ಸೂಚಿಸಿತು? (ವಿಮೋ. 12:21-23; ಯೋಹಾ. 1:29; ರೋಮಾ. 5:18, 19, 21; 1 ಕೊರಿಂ. 5:7)

ಕಥೆ 33

ಕೆಂಪು ಸಮುದ್ರವನ್ನು ದಾಟುವುದು

 1. ಎಷ್ಟು ಮಂದಿ ಇಸ್ರಾಯೇಲ್ಯ ಸ್ತ್ರೀಪುರುಷರು ಮತ್ತು ಮಕ್ಕಳು ಐಗುಪ್ತದಿಂದ ಹೊರಟರು, ಹಾಗೂ ಅವರೊಂದಿಗೆ ಯಾರು ಸಹ ಹೊರಟರು?

 2. ಇಸ್ರಾಯೇಲ್ಯರನ್ನು ಹೋಗುವಂತೆ ಬಿಟ್ಟ ಬಳಿಕ ಫರೋಹನಿಗೆ ಹೇಗನಿಸತೊಡಗಿತು, ಮತ್ತು ಅವನೇನು ಮಾಡಿದನು?

 3. ಐಗುಪ್ತರು ತನ್ನ ಜನರನ್ನು ಆಕ್ರಮಿಸದಂತೆ ಯೆಹೋವನು ಏನು ಮಾಡಿದನು?

 4. ಮೋಶೆಯು ತನ್ನ ಕೋಲನ್ನು ಸಮುದ್ರದ ಕಡೆಗೆ ಚಾಚಿದಾಗ ಏನು ಸಂಭವಿಸಿತು, ಮತ್ತು ಇಸ್ರಾಯೇಲ್ಯರು ಏನು ಮಾಡಿದರು?

 5. ಐಗುಪ್ತ್ಯರು ಇಸ್ರಾಯೇಲ್ಯರನ್ನು ಬೆನ್ನಟ್ಟುತ್ತಾ ಸಮುದ್ರದೊಳಗೆ ಮುನ್ನುಗ್ಗಿದಾಗ ಏನು ಸಂಭವಿಸಿತು?

 6. ಇಸ್ರಾಯೇಲ್ಯರು ಸಂರಕ್ಷಿಸಲ್ಪಟ್ಟಾಗ ತಮಗಾದ ಸಂತೋಷವನ್ನು ಮತ್ತು ಯೆಹೋವನಿಗೆ ಕೃತಜ್ಞತೆಯನ್ನು ಹೇಗೆ ತೋರಿಸಿದರು?

ಹೆಚ್ಚಿನ ಪ್ರಶ್ನೆಗಳು:

 1. ವಿಮೋಚನಕಾಂಡ 12:33-36 ಓದಿ.

  ತನ್ನ ಜನರು ವರ್ಷಾನುಗಟ್ಟಲೆ ಐಗುಪ್ತ್ಯರ ಕೈಕೆಳಗೆ ಗುಲಾಮಚಾಕರಿ ಮಾಡಿದಕ್ಕೆ ಪ್ರತಿಫಲವು ದೊರಕುವಂತೆ ಯೆಹೋವನು ಹೇಗೆ ನೋಡಿಕೊಂಡನು? (ವಿಮೋ. 3:21, 22; 12:35, 36)

 2. ವಿಮೋಚನಕಾಂಡ 14:1-31 ಓದಿ.

  ವಿಮೋಚನಕಾಂಡ 14:13, 14 ರಲ್ಲಿರುವ ಮೋಶೆಯ ಮಾತುಗಳು, ಸಮೀಪಿಸುತ್ತಿರುವ ಅರ್ಮಗೆದೋನ್‌ ಯುದ್ಧವನ್ನು ಇಂದು ಯೆಹೋವನ ಸೇವಕರು ಎದುರಿಸುವಾಗ ಅವರನ್ನು ಹೇಗೆ ಹುರಿದುಂಬಿಸಬೇಕು? (2 ಪೂರ್ವ. 20:17; ಕೀರ್ತ. 91:8)

 3. ವಿಮೋಚನಕಾಂಡ 15:1-8, 20, 21 ಓದಿ.

  1. (ಎ) ಯೆಹೋವನ ಸೇವಕರು ಆತನಿಗೆ ಏಕೆ ಸ್ತುತಿಗೀತೆಗಳನ್ನು ಹಾಡಬೇಕು? (ವಿಮೋ. 15:1, 2; ಕೀರ್ತ. 105:2, 3; ಪ್ರಕ. 15:3, 4)

  2. (ಬಿ) ಕೆಂಪು ಸಮುದ್ರದ ಬಳಿ ಯೆಹೋವನಿಗೆ ಸ್ತುತಿಗೀತೆಯನ್ನು ಹಾಡಿದ ಮಿರ್ಯಾಮಳು ಮತ್ತು ಸ್ತ್ರೀಯರು ಇಂದಿರುವ ಕ್ರೈಸ್ತ ಸ್ತ್ರೀಯರಿಗೆ ಯಾವ ಮಾದರಿಯನ್ನು ಇಟ್ಟಿದ್ದಾರೆ? (ವಿಮೋ. 15:20, 21; ಕೀರ್ತ. 68:11)

ಕಥೆ 34

ಹೊಸ ವಿಧದ ಆಹಾರ

 1. ಚಿತ್ರದಲ್ಲಿ, ಜನರು ನೆಲದಿಂದ ಏನನ್ನು ಹೆಕ್ಕುತ್ತಿದ್ದಾರೆ, ಮತ್ತು ಅದರ ಹೆಸರೇನು?

 2. ಮನ್ನವನ್ನು ಹೆಕ್ಕುವುದರ ವಿಷಯದಲ್ಲಿ ಮೋಶೆಯು ಜನರಿಗೆ ಯಾವ ನಿರ್ದೇಶನವನ್ನು ಕೊಟ್ಟನು?

 3. ಆರನೆಯ ದಿನದಲ್ಲಿ ಜನರು ಏನು ಮಾಡುವಂತೆ ಯೆಹೋವನು ಹೇಳುತ್ತಾನೆ, ಮತ್ತು ಏಕೆ?

 4. ಇಸ್ರಾಯೇಲ್ಯರು ಏಳನೆಯ ದಿನಕ್ಕಾಗಿ ಮನ್ನವನ್ನು ಇಟ್ಟುಕೊಂಡಾಗ ಯೆಹೋವನು ಯಾವ ಅದ್ಭುತವನ್ನು ಮಾಡುತ್ತಾನೆ?

 5. ಯೆಹೋವನು ಎಷ್ಟು ಸಮಯದ ವರೆಗೆ ಜನರಿಗೆ ಮನ್ನವನ್ನು ಒದಗಿಸುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ವಿಮೋಚನಕಾಂಡ 16:1-36 ಮತ್ತು ಅರಣ್ಯಕಾಂಡ 11:7-9 ಓದಿ.

  1. (ಎ) ಕ್ರೈಸ್ತ ಸಭೆಯಲ್ಲಿ ಮೇಲ್ವಿಚಾರಕ ಸ್ಥಾನದಲ್ಲಿರುವವರಿಗೆ ನಾವು ಗೌರವ ತೋರಿಸುವ ಆವಶ್ಯಕತೆಯ ಕುರಿತು ವಿಮೋಚನಕಾಂಡ 16:8 ಏನನ್ನು ತಿಳಿಯಪಡಿಸುತ್ತದೆ? (ಇಬ್ರಿ. 13:17)

  2. (ಬಿ) ಯೆಹೋವನ ಮೇಲಿನ ಅವಲಂಬನೆಯನ್ನು ಇಸ್ರಾಯೇಲ್ಯರಿಗೆ ಅರಣ್ಯದಲ್ಲಿ ಪ್ರತಿದಿನವೂ ಹೇಗೆ ಮರುಜ್ಞಾಪಿಸಲಾಗುತ್ತಿತ್ತು? (ವಿಮೋ. 16:14-16, 35; ಧರ್ಮೋ. 8:2, 3)

  3. (ಸಿ) ಯೇಸು ಮನ್ನಕ್ಕೆ ಯಾವ ಸಾಂಕೇತಿಕ ಅರ್ಥವನ್ನು ಕೊಟ್ಟನು, ಮತ್ತು ಈ ‘ಪರಲೋಕದ ರೊಟ್ಟಿ’ಯಿಂದ ನಾವು ಹೇಗೆ ಪ್ರಯೋಜನ ಪಡೆದುಕೊಳ್ಳುತ್ತೇವೆ? (ಯೋಹಾ. 6:31-35, 40)

 2. ಯೆಹೋಶುವ 5:10-12 ಓದಿ.

  ಇಸ್ರಾಯೇಲ್ಯರು ಎಷ್ಟು ವರುಷಗಳ ವರೆಗೆ ಮನ್ನವನ್ನು ತಿಂದರು, ಇದು ಅವರನ್ನು ಹೇಗೆ ಪರೀಕ್ಷಿಸಿತು, ಹಾಗೂ ಈ ವೃತ್ತಾಂತದಿಂದ ನಾವು ಏನನ್ನು ಕಲಿಯಬಲ್ಲೆವು? (ವಿಮೋ. 16:35; ಅರ. 11:4-6; 1 ಕೊರಿಂ. 10:10, 11)

ಕಥೆ 35

ಯೆಹೋವನು ನಿಯಮಗಳನ್ನು ಕೊಡುತ್ತಾನೆ

 1. ಐಗುಪ್ತವನ್ನು ಬಿಟ್ಟು ಸುಮಾರು ಎರಡು ತಿಂಗಳುಗಳ ನಂತರ ಇಸ್ರಾಯೇಲ್ಯರು ಎಲ್ಲಿ ಪಾಳೆಯ ಹೂಡುತ್ತಾರೆ?

 2. ಜನರು ಏನು ಮಾಡುವಂತೆ ತಾನು ಬಯಸುವುದಾಗಿ ಯೆಹೋವನು ತಿಳಿಸುತ್ತಾನೆ, ಮತ್ತು ಅವರ ಉತ್ತರವೇನು?

 3. ಯೆಹೋವನು ಮೋಶೆಗೆ ಎರಡು ಕಲ್ಲಿನ ಹಲಗೆಗಳನ್ನು ಏಕೆ ಕೊಡುತ್ತಾನೆ?

 4. ದಶಾಜ್ಞೆಗಳಲ್ಲದೆ ಯಾವ ಇನ್ನಿತರ ನಿಯಮಗಳನ್ನು ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟನು?

 5. ಯೇಸು ಕ್ರಿಸ್ತನು ಯಾವ ಎರಡು ನಿಯಮಗಳನ್ನು ಅತಿ ಪ್ರಾಮುಖ್ಯವೆಂದು ತಿಳಿಸಿದನು?

ಹೆಚ್ಚಿನ ಪ್ರಶ್ನೆಗಳು:

 1. ವಿಮೋಚನಕಾಂಡ 19:1-25; 20:1-21; 24:12-18; ಮತ್ತು 31:18 ಓದಿ.

  ಕ್ರೈಸ್ತ ಸಮರ್ಪಣೆಯನ್ನು ಮಾಡುವುದರಲ್ಲಿ ಏನು ಒಳಗೂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಮೋಚನಕಾಂಡ 19:8 ನಮಗೆ ಹೇಗೆ ಸಹಾಯಮಾಡುತ್ತವೆ? (ಮತ್ತಾ. 16:24; 1 ಪೇತ್ರ 4:1-3)

 2. ಧರ್ಮೋಪದೇಶಕಾಂಡ 6:4-6; ಯಾಜಕಕಾಂಡ 19:18; ಮತ್ತು ಮತ್ತಾಯ 22:36-40 ಓದಿ.

  ದೇವರ ಮತ್ತು ನೆರೆಯವರ ಕಡೆಗಿನ ತಮ್ಮ ಪ್ರೀತಿಯನ್ನು ಕ್ರೈಸ್ತರು ಹೇಗೆ ಪ್ರದರ್ಶಿಸುತ್ತಾರೆ? (ಮಾರ್ಕ 6:34; ಅ. ಕೃ. 4:20; ರೋಮಾ. 15:2)

ಕಥೆ 36

ಚಿನ್ನದ ಬಸವ

 1. ಚಿತ್ರದಲ್ಲಿ ಜನರು ಏನು ಮಾಡುತ್ತಿದ್ದಾರೆ, ಮತ್ತು ಏಕೆ?

 2. ಯೆಹೋವನು ಏಕೆ ಕೋಪಗೊಂಡಿದ್ದಾನೆ, ಮತ್ತು ಜನರು ಮಾಡುತ್ತಿರುವ ವಿಷಯವನ್ನು ನೋಡಿ ಮೋಶೆ ಏನು ಮಾಡುತ್ತಾನೆ?

 3. ಮೋಶೆ ಕೆಲವು ಪುರುಷರಿಗೆ ಏನು ಮಾಡುವಂತೆ ತಿಳಿಸುತ್ತಾನೆ?

 4. ಈ ಕಥೆಯು ನಮಗೆ ಯಾವ ಪಾಠವನ್ನು ಕಲಿಸಬೇಕು?

ಹೆಚ್ಚಿನ ಪ್ರಶ್ನೆಗಳು:

 1. ವಿಮೋಚನಕಾಂಡ 32:1-35 ಓದಿ.

  1. ಈ ವೃತ್ತಾಂತವು, ಸತ್ಯಾರಾಧನೆಯೊಂದಿಗೆ ಸುಳ್ಳುಧರ್ಮವನ್ನು ಬೆರೆಸುವುದರ ಕುರಿತು ಯೆಹೋವನಿಗಿರುವ ಮನೋಭಾವವನ್ನು ಹೇಗೆ ತೋರಿಸುತ್ತದೆ? (ವಿಮೋ. 32:4-6, 10; 1 ಕೊರಿಂ. 10:7, 11)

  2. (ಬಿ) ಮನೋರಂಜನೆಯನ್ನು ಆಯ್ಕೆಮಾಡುವಾಗ ಕ್ರೈಸ್ತರು ಯಾವ ಎಚ್ಚರಿಕೆ ವಹಿಸಬೇಕು? (ವಿಮೋ. 32:18, 19; ಎಫೆ. 5:15, 16; 1 ಯೋಹಾ. 2:15-17)

  3. (ಸಿ) ನೀತಿಯ ಪಕ್ಷವಹಿಸುವ ವಿಷಯದಲ್ಲಿ ಲೇವಿ ಕುಲದವರು ಹೇಗೆ ಒಂದು ಉತ್ತಮ ಮಾದರಿಯನ್ನು ಒದಗಿಸಿದರು? (ವಿಮೋ. 32:25-28)

ಕಥೆ 37

ಆರಾಧನೆಗಾಗಿ ಒಂದು ಡೇರೆ

 1. ಚಿತ್ರದಲ್ಲಿರುವ ಕಟ್ಟಡದ ಹೆಸರು ಏನು, ಮತ್ತು ಅದು ಯಾವುದಕ್ಕಾಗಿ ಉಪಯೋಗಿಸಲ್ಪಡುತ್ತದೆ?

 2. ಯೆಹೋವನು ಮೋಶೆಗೆ, ಗುಡಾರವನ್ನು ಬಿಡಿ ಬಿಡಿ ಭಾಗಗಳಾಗಿ ಬಿಡಿಸಲು ಆಗುವಂಥ ರೀತಿಯಲ್ಲಿ ನಿರ್ಮಿಸುವಂತೆ ಹೇಳಿದ್ದು ಏಕೆ?

 3. ಡೇರೆಯ ಕೊನೆಯಲ್ಲಿರುವ ಚಿಕ್ಕ ಕೋಣೆಯೊಳಗೆ ಕಾಣುವ ಸಣ್ಣ ಪೆಟ್ಟಿಗೆ ಏನಾಗಿದೆ, ಮತ್ತು ಅದರೊಳಗೆ ಏನಿದೆ?

 4. ಯೆಹೋವನು ಯಾರನ್ನು ಮಹಾ ಯಾಜಕನನ್ನಾಗಿ ಆಯ್ಕೆಮಾಡುತ್ತಾನೆ, ಮತ್ತು ಆ ಮಹಾ ಯಾಜಕನು ಏನು ಮಾಡುತ್ತಾನೆ?

 5. ಡೇರೆಯ ದೊಡ್ಡ ಕೋಣೆಯಲ್ಲಿರುವ ಮೂರು ವಸ್ತುಗಳ ಹೆಸರುಗಳನ್ನು ತಿಳಿಸಿರಿ.

 6. ಗುಡಾರದ ಅಂಗಣದಲ್ಲಿ ಯಾವ ಎರಡು ವಸ್ತುಗಳಿವೆ, ಮತ್ತು ಅವನ್ನು ಯಾವುದಕ್ಕಾಗಿ ಉಪಯೋಗಿಸಲಾಗುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ವಿಮೋಚನಕಾಂಡ 25:8-40; 26:1-37; 27:1-8; ಮತ್ತು 28:1 ಓದಿ.

  ‘ಕೃಪಾಸನದ ಮೇಲಿರುವ’ ಕೆರೂಬಿಗಳು ಏನನ್ನು ಪ್ರತಿನಿಧಿಸುತ್ತವೆ? (ವಿಮೋ. 25:20, 22; ಅರ. 7:89; 2 ಅರ. 19:15)

 2. ವಿಮೋಚನಕಾಂಡ 30:1-10, 17-21; 34:1, 2; ಮತ್ತು ಇಬ್ರಿಯ 9:1-5 ಓದಿ.

  1. (ಎ) ಗುಡಾರದಲ್ಲಿ ಸೇವೆಸಲ್ಲಿಸುತ್ತಿದ್ದ ಯಾಜಕರಿಗೆ ಶಾರೀರಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವುದರ ಮಹತ್ವವನ್ನು ಯೆಹೋವನು ಏಕೆ ಒತ್ತಿಹೇಳಿದನು, ಮತ್ತು ಇದು ನಾವು ಹೇಗೆ ಇರುವಂತೆ ನಮ್ಮನ್ನು ಪ್ರಚೋದಿಸಬೇಕು? (ವಿಮೋ. 30:18-21; 40:30, 31; ಇಬ್ರಿ. 10:22)

  2. (ಬಿ) ಅಪೊಸ್ತಲ ಪೌಲನು ಇಬ್ರಿಯರಿಗೆ ಪತ್ರ ಬರೆದ ಸಮಯದಲ್ಲಿ, ಗುಡಾರ ಮತ್ತು ನಿಯಮದ ಒಡಂಬಡಿಕೆಯು ಜಾರಿಯಲ್ಲಿರಲಿಲ್ಲ ಎಂಬುದನ್ನು ಹೇಗೆ ತೋರಿಸುತ್ತಾನೆ? (ಇಬ್ರಿ. 9:1, 9; 10:1)

ಕಥೆ 38

ಹನ್ನೆರಡು ಗೂಢಚಾರರು

 1. ಚಿತ್ರದಲ್ಲಿರುವ ದ್ರಾಕ್ಷೆ ಗೊಂಚಲಿನ ಕುರಿತು ನೀವು ಏನನ್ನು ಗಮನಿಸುತ್ತೀರಿ, ಮತ್ತು ಈ ಹಣ್ಣುಗಳನ್ನು ಎಲ್ಲಿಂದ ತಂದರು?

 2. ಮೋಶೆ 12 ಮಂದಿ ಗೂಢಚಾರರನ್ನು ಕಾನಾನ್‌ ದೇಶಕ್ಕೆ ಏಕೆ ಕಳುಹಿಸುತ್ತಾನೆ?

 3. ಹತ್ತು ಮಂದಿ ಗೂಢಚಾರರು ಮೋಶೆಗೆ ಏನೆಂದು ವರದಿಸುತ್ತಾರೆ?

 4. ಇಬ್ಬರು ಗೂಢಚಾರರು ಹೇಗೆ ಯೆಹೋವನಲ್ಲಿ ಭರವಸೆಯನ್ನು ತೋರಿಸುತ್ತಾರೆ, ಮತ್ತು ಅವರ ಹೆಸರುಗಳೇನು?

 5. ಯೆಹೋವನು ಏಕೆ ಕೋಪಗೊಳ್ಳುತ್ತಾನೆ, ಮತ್ತು ಆತನು ಮೋಶೆಗೆ ಏನು ತಿಳಿಸುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ಅರಣ್ಯಕಾಂಡ 13:1-33 ಓದಿ.

  1. (ಎ) ದೇಶವನ್ನು ಸಂಚರಿಸಿ ನೋಡಲು ಯಾರು ಆಯ್ಕೆಮಾಡಲ್ಪಟ್ಟರು, ಮತ್ತು ಯಾವ ಭವ್ಯ ಅವಕಾಶವು ಅವರಿಗಿತ್ತು? (ಅರ. 13:2, 3, 18-20)

  2. (ಬಿ) ಯೆಹೋಶುವ ಮತ್ತು ಕಾಲೇಬರ ದೃಷ್ಟಿಕೋನವು ಇತರ ಗೂಢಚಾರರ ದೃಷ್ಟಿಕೋನಕ್ಕಿಂತಲೂ ಏಕೆ ಭಿನ್ನವಾಗಿತ್ತು, ಮತ್ತು ಇದು ನಮಗೆ ಏನನ್ನು ಕಲಿಸುತ್ತದೆ? (ಅರ. 13:28-30; ಮತ್ತಾ. 17:20; 2 ಕೊರಿಂ. 5:7)

 2. ಅರಣ್ಯಕಾಂಡ 14:1-38 ಓದಿ.

  1. (ಎ) ಯೆಹೋವನ ಭೂಪ್ರತಿನಿಧಿಗಳಿಗೆ ವಿರುದ್ಧವಾಗಿ ಗುಣುಗುಟ್ಟುವ ವಿಷಯದ ಬಗ್ಗೆ ನಾವು ಏಕೆ ಎಚ್ಚರಿಕೆಯಿಂದ ಇರಬೇಕು? (ಅರ. 14:2, 3, 27; ಮತ್ತಾ. 25:40, 45; 1 ಕೊರಿಂ. 10:10)

  2. (ಬಿ) ಯೆಹೋವನು ತನ್ನ ಒಬ್ಬೊಬ್ಬ ಸೇವಕರ ಕುರಿತೂ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾನೆ ಎಂಬುದನ್ನು ಅರಣ್ಯಕಾಂಡ 14:24 ಹೇಗೆ ತೋರಿಸುತ್ತದೆ? (1 ಅರ. 19:18; ಜ್ಞಾನೋ. 15:3)

ಕಥೆ 39

ಆರೋನನ ಕೋಲು ಹೂಬಿಡುತ್ತದೆ

 1. ಮೋಶೆಆರೋನರ ಅಧಿಕಾರದ ವಿರುದ್ಧ ಯಾರು ದಂಗೆಯೇಳುತ್ತಾರೆ, ಮತ್ತು ಅವರು ಮೋಶೆಗೆ ಏನು ಹೇಳುತ್ತಾರೆ?

 2. ಕೋರಹನಿಗೂ ಅವನ 250 ಮಂದಿ ಹಿಂಬಾಲಕರಿಗೂ ಮೋಶೆ ಏನು ಹೇಳುತ್ತಾನೆ?

 3. ಮೋಶೆ ಜನರಿಗೆ ಏನು ಹೇಳುತ್ತಾನೆ, ಮತ್ತು ಮೋಶೆ ಮಾತಾಡುವುದನ್ನು ನಿಲ್ಲಿಸಿದ ಕೂಡಲೆ ಏನು ಸಂಭವಿಸುತ್ತದೆ?

 4. ಕೋರಹನಿಗೂ ಅವನ 250 ಮಂದಿ ಹಿಂಬಾಲಕರಿಗೂ ಏನು ಸಂಭವಿಸುತ್ತದೆ?

 5. ಸತ್ತ ಮನುಷ್ಯರ ಧೂಪಾರತಿಗಳನ್ನು ಆರೋನನ ಪುತ್ರನಾದ ಎಲ್ಲಾಜಾರನು ಏನು ಮಾಡುತ್ತಾನೆ, ಮತ್ತು ಏಕೆ?

 6. ಯೆಹೋವನು ಏಕೆ ಆರೋನನ ಕೋಲು ಹೂಬಿಡುವಂತೆ ಮಾಡುತ್ತಾನೆ? (ಚಿತ್ರವನ್ನು ನೋಡಿ.)

ಹೆಚ್ಚಿನ ಪ್ರಶ್ನೆಗಳು:

 1. ಅರಣ್ಯಕಾಂಡ 16:1-49 ಓದಿ.

  1. (ಎ) ಕೋರಹನೂ ಅವನ ಹಿಂಬಾಲಕರೂ ಏನು ಮಾಡಿದರು, ಮತ್ತು ಇದು ಯೆಹೋವನಿಗೆ ವಿರುದ್ಧವಾದ ದಂಗೆಕೋರ ಕೃತ್ಯವಾಗಿತ್ತು ಏಕೆ? (ಅರ. 16:9, 10, 18; ಯಾಜ. 10:1, 2; ಜ್ಞಾನೋ. 11:2)

  2. (ಬಿ) ಕೋರಹ ಮತ್ತು ‘ಸಮೂಹದವರಲ್ಲಿ ಮುಖ್ಯಸ್ಥರಾಗಿದ್ದ’ 250 ಮಂದಿ ಯಾವ ತಪ್ಪಾದ ದೃಷ್ಟಿಕೋನವನ್ನು ಬೆಳೆಸಿಕೊಂಡಿದ್ದರು? (ಅರ. 16:1-3; ಜ್ಞಾನೋ. 15:33; ಯೆಶಾ. 49:7)

 2. ಅರಣ್ಯಕಾಂಡ 17:1-11 ಮತ್ತು 26:10 ಓದಿ.

  1. (ಎ) ಆರೋನನ ಕೋಲು ಚಿಗುರಿದ್ದು ಏನನ್ನು ಸೂಚಿಸಿತು, ಮತ್ತು ಅದನ್ನು ಮಂಜೂಷದಲ್ಲಿ ಇಡುವಂತೆ ಯೆಹೋವನು ಏಕೆ ಆಜ್ಞಾಪಿಸಿದನು? (ಅರ. 17:5, 8, 10; ಇಬ್ರಿ. 9:4)

  2. (ಬಿ) ಆರೋನನ ಕೋಲಿನಿಂದ ಏನು ಸೂಚಿಸಲ್ಪಟ್ಟಿತೋ ಅದರಿಂದ ನಾವು ಯಾವ ಪ್ರಾಮುಖ್ಯ ಪಾಠವನ್ನು ಕಲಿಯಬಲ್ಲೆವು? (ಅರ. 17:10; ಅ. ಕೃ. 20:28; ಫಿಲಿ. 2:14; ಇಬ್ರಿ. 13:17)

ಕಥೆ 40

ಮೋಶೆ ಬಂಡೆಯನ್ನು ಹೊಡೆಯುತ್ತಾನೆ

 1. ಇಸ್ರಾಯೇಲ್ಯರು ಅರಣ್ಯದಲ್ಲಿರುವಾಗ ಯೆಹೋವನು ಅವರನ್ನು ಹೇಗೆ ಪರಾಮರಿಸುತ್ತಾನೆ?

 2. ಇಸ್ರಾಯೇಲ್ಯರು ಕಾದೇಶಿನಲ್ಲಿ ಪಾಳೆಯ ಹೂಡಿದಾಗ ಏನೆಂದು ದೂರುತ್ತಾರೆ?

 3. ಯೆಹೋವನು ಜನರಿಗಾಗಿಯೂ ಅವರ ಪಶುಗಳಿಗಾಗಿಯೂ ಹೇಗೆ ನೀರನ್ನು ಒದಗಿಸುತ್ತಾನೆ?

 4. ಚಿತ್ರದಲ್ಲಿ ತನಗೆ ಬೆರಳುತೋರಿಸಿಕೊಳ್ಳುತ್ತಿರುವ ಪುರುಷನು ಯಾರು, ಮತ್ತು ಅವನೇಕೆ ಹಾಗೆ ಮಾಡುತ್ತಿದ್ದಾನೆ?

 5. ಮೋಶೆಆರೋನರ ಮೇಲೆ ಯೆಹೋವನು ಏಕೆ ಸಿಟ್ಟುಗೊಳ್ಳುತ್ತಾನೆ, ಮತ್ತು ಅವರಿಗೆ ಯಾವ ಶಿಕ್ಷೆ ನೀಡುತ್ತಾನೆ?

 6. ಹೋರ್‌ ಬೆಟ್ಟದ ಬಳಿ ಏನು ಸಂಭವಿಸುತ್ತದೆ, ಮತ್ತು ಯಾರು ಇಸ್ರಾಯೇಲ್ಯರ ಮಹಾಯಾಜಕನಾಗುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ಅರಣ್ಯಕಾಂಡ 20:1-13, 22-29; ಮತ್ತು ಧರ್ಮೋಪದೇಶಕಾಂಡ 29:5 ಓದಿ.

  1. (ಎ) ಯೆಹೋವನು ಇಸ್ರಾಯೇಲ್ಯರನ್ನು ಅರಣ್ಯದಲ್ಲಿ ಪರಾಮರಿಸಿದ ವಿಧದಿಂದ ನಾವು ಏನನ್ನು ಕಲಿಯುತ್ತೇವೆ? (ಧರ್ಮೋ. 29:5; ಮತ್ತಾ. 6:31; ಇಬ್ರಿ. 13:5; ಯಾಕೋ. 1:17)

  2. (ಬಿ) ಮೋಶೆಆರೋನರು ಇಸ್ರಾಯೇಲ್ಯರ ಎದುರಿನಲ್ಲಿ ಯೆಹೋವನ ಗೌರವವನ್ನು ಕಾಪಾಡಲು ತಪ್ಪಿಹೋದದ್ದನ್ನು ಆತನು ಹೇಗೆ ಪರಿಗಣಿಸಿದನು? (ಅರ. 20:12; 1 ಕೊರಿಂ. 10:12; ಪ್ರಕ. 4:11)

  3. (ಸಿ) ಯೆಹೋವನಿಂದ ಪಡೆದುಕೊಂಡ ಶಿಸ್ತಿಗೆ ಮೋಶೆಯು ಪ್ರತಿಕ್ರಿಯಿಸಿದ ವಿಧದಿಂದ ನಾವೇನನ್ನು ಕಲಿಯಬಲ್ಲೆವು? (ಅರ. 12:3; 20:12, 27, 28; ಧರ್ಮೋ. 32:4; ಇಬ್ರಿ. 12:7-11)

ಕಥೆ 41

ತಾಮ್ರದ ಸರ್ಪ

 1. ಚಿತ್ರದಲ್ಲಿ ಆ ಕಂಬದ ಸುತ್ತಲೂ ಏನು ಸುತ್ತಲ್ಪಟ್ಟಿದೆ, ಮತ್ತು ಅದನ್ನು ಅಲ್ಲಿಡುವಂತೆ ಯೆಹೋವನು ಮೋಶೆಗೆ ಏಕೆ ಹೇಳಿದನು?

 2. ದೇವರು ತಮಗೆ ಮಾಡಿದ ಎಲ್ಲಾ ಒಳ್ಳೆಯ ವಿಷಯಗಳಿಗೆ ಜನರು ಹೇಗೆ ಕೃತಘ್ನರಾಗಿದ್ದಾರೆ?

 3. ಯೆಹೋವನು ಜನರನ್ನು ಶಿಕ್ಷಿಸುವುದಕ್ಕಾಗಿ ವಿಷಸರ್ಪಗಳನ್ನು ಕಳುಹಿಸಿದಾಗ ಅವರು ಮೋಶೆಯ ಬಳಿ ಏನೆಂದು ಕೇಳಿಕೊಳ್ಳುತ್ತಾರೆ?

 4. ಯೆಹೋವನು ಮೋಶೆಗೆ ತಾಮ್ರದ ಸರ್ಪವನ್ನು ಮಾಡುವಂತೆ ಏಕೆ ಹೇಳುತ್ತಾನೆ?

 5. ಈ ಕಥೆಯಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?

ಹೆಚ್ಚಿನ ಪ್ರಶ್ನೆಗಳು:

 1. ಅರಣ್ಯಕಾಂಡ 21:4-9 ಓದಿ.

  1. (ಎ) ಯೆಹೋವನ ಒದಗಿಸುವಿಕೆಗಳ ಬಗ್ಗೆ ಇಸ್ರಾಯೇಲ್ಯರು ಗುಣುಗುಟ್ಟಿದ ವಿಷಯದಿಂದ ನಮಗೆ ಯಾವ ಎಚ್ಚರಿಕೆಯ ಪಾಠವಿದೆ? (ಅರ. 21:5, 6; ರೋಮಾ. 2:4)

  2. (ಬಿ) ತದನಂತರದ ಶತಮಾನಗಳಲ್ಲಿ, ಇಸ್ರಾಯೇಲ್ಯರು ಆ ತಾಮ್ರದ ಸರ್ಪವನ್ನು ಯಾವುದಕ್ಕಾಗಿ ಉಪಯೋಗಿಸಿದರು, ಮತ್ತು ಅರಸನಾದ ಹಿಜ್ಕೀಯನು ಯಾವ ಕ್ರಮವನ್ನು ಕೈಗೊಂಡನು? (ಅರ. 21:9; 2 ಅರ. 18:1-4)

 2. ಯೋಹಾನ 3:14, 15 ಓದಿ.

  ತಾಮ್ರದ ಸರ್ಪವನ್ನು ಒಂದು ಧ್ವಜಸ್ತಂಭದ ಮೇಲೆ ಇರಿಸಿದ್ದು ಯೇಸು ಕ್ರಿಸ್ತನು ವಧಾಸ್ತಂಭಕ್ಕೆ ಏರಿಸಲ್ಪಟ್ಟ ವಿಷಯವನ್ನು ಹೇಗೆ ಅತ್ಯುತ್ತಮವಾಗಿ ಚಿತ್ರಿಸಿತು? (ಗಲಾ. 3:14; 1 ಪೇತ್ರ 2:24)

ಕಥೆ 42

ಕತ್ತೆ ಮಾತಾಡುತ್ತದೆ

 1. ಬಾಲಾಕನು ಯಾರು ಮತ್ತು ಅವನು ಬಿಳಾಮನನ್ನು ಏಕೆ ಕರೆಕಳುಹಿಸುತ್ತಾನೆ?

 2. ಬಿಳಾಮನ ಕತ್ತೆಯು ಏಕೆ ದಾರಿಯಲ್ಲೇ ಮಲಗಿಬಿಡುತ್ತದೆ?

 3. ಕತ್ತೆ ಬಿಳಾಮನಿಗೆ ಏನು ಹೇಳುತ್ತದೆ?

 4. ಒಬ್ಬ ದೇವದೂತನು ಬಿಳಾಮನಿಗೆ ಏನು ಹೇಳುತ್ತಾನೆ?

 5. ಇಸ್ರಾಯೇಲ್ಯರನ್ನು ಶಪಿಸಲು ಬಿಳಾಮನು ಪ್ರಯತ್ನಿಸುವಾಗೆಲ್ಲಾ ಏನಾಗುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಅರಣ್ಯಕಾಂಡ 21:21-35 ಓದಿ.

  ಇಸ್ರಾಯೇಲ್ಯರು ಅಮೋರಿಯರ ಅರಸನಾದ ಸೀಹೋನನನ್ನು ಮತ್ತು ಬಾಷಾನಿನ ಅರಸನಾದ ಓಗನನ್ನು ಯುದ್ಧಮಾಡಿ ಸೋಲಿಸಿದೇಕೆ? (ಅರ. 21:21-23, 33, 34)

 2. ಅರಣ್ಯಕಾಂಡ 22:1-40 ಓದಿ.

  ಬಿಳಾಮನು ಇಸ್ರಾಯೇಲ್ಯರನ್ನು ಶಪಿಸಲು ಪ್ರಯತ್ನಿಸಿದ್ದರ ಉದ್ದೇಶವು ಏನಾಗಿತ್ತು, ಮತ್ತು ನಾವು ಇದರಿಂದ ಯಾವ ಪಾಠಗಳನ್ನು ಕಲಿಯಸಾಧ್ಯವಿದೆ? (ಅರ. 22:16, 17; ಜ್ಞಾನೋ. 6:16, 18; 2 ಪೇತ್ರ 2:15; ಯೂದ 11)

 3. ಅರಣ್ಯಕಾಂಡ 23:1-30 ಓದಿ.

  ಬಿಳಾಮನು ತಾನು ಯೆಹೋವನ ಆರಾಧಕನಾಗಿದ್ದೇನೊ ಎಂಬಂತೆ ಮಾತಾಡಿದರೂ, ಅವನ ಕೃತ್ಯಗಳು ಅದಕ್ಕೆ ವಿರುದ್ಧವಾಗಿದ್ದವೆಂಬುದು ಹೇಗೆ ರುಜುವಾಯಿತು? (ಅರ. 23:3, 11-14; 1 ಸಮು. 15:22)

 4. ಅರಣ್ಯಕಾಂಡ 24:1-25 ಓದಿ.

  ಈ ಬೈಬಲ್‌ ವೃತ್ತಾಂತವು, ಯೆಹೋವನ ಉದ್ದೇಶದ ನೆರವೇರಿಕೆಯಲ್ಲಿ ನಮ್ಮ ನಂಬಿಕೆಯನ್ನು ಹೇಗೆ ಬಲಪಡಿಸುತ್ತದೆ? (ಅರ. 24:10; ಯೆಶಾ. 54:17)

ಕಥೆ 43

ಯೆಹೋಶುವನು ನಾಯಕನಾಗುತ್ತಾನೆ

 1. ಚಿತ್ರದಲ್ಲಿ ಮೋಶೆಯೊಂದಿಗೆ ನಿಂತಿರುವ ಆ ಇಬ್ಬರು ಪುರುಷರು ಯಾರು?

 2. ಯೆಹೋವನು ಯೆಹೋಶುವನಿಗೆ ಏನು ಹೇಳುತ್ತಾನೆ?

 3. ಮೋಶೆಯು ಏಕೆ ನೆಬೋ ಬೆಟ್ಟವನ್ನು ಹತ್ತುತ್ತಾನೆ, ಮತ್ತು ಯೆಹೋವನು ಅವನಿಗೆ ಏನು ಹೇಳುತ್ತಾನೆ?

 4. ಮೋಶೆ ಸಾಯುವಾಗ ಅವನಿಗೆ ಎಷ್ಟು ವರ್ಷ ಪ್ರಾಯವಾಗಿತ್ತು?

 5. ಜನರು ಏಕೆ ದುಃಖಪಡುತ್ತಾರೆ, ಆದರೆ ಸಂತೋಷಪಡಲು ಅವರಿಗೆ ಯಾವ ಕಾರಣವಿದೆ?

ಹೆಚ್ಚಿನ ಪ್ರಶ್ನೆಗಳು:

 1. ಅರಣ್ಯಕಾಂಡ 27:12-23 ಓದಿ.

  ಯೆಹೋಶುವನು ಯೆಹೋವನಿಂದ ಯಾವ ಜವಾಬ್ದಾರಿಯುತ ನೇಮಕವನ್ನು ಪಡೆದುಕೊಂಡನು, ಮತ್ತು ತನ್ನ ಜನರ ಕಡೆಗಿರುವ ಯೆಹೋವನ ಕಾಳಜಿಯು ಇಂದು ಹೇಗೆ ತೋರಿಸಲ್ಪಟ್ಟಿದೆ? (ಅರ. 27:15-19; ಅ. ಕೃ. 20:28; ಇಬ್ರಿ. 13:7)

 2. ಧರ್ಮೋಪದೇಶಕಾಂಡ 3:23-29 ಓದಿ.

  ಯೆಹೋವನು ಮೋಶೆಆರೋನರಿಗೆ ವಾಗ್ದಾತ್ತ ದೇಶವನ್ನು ಪ್ರವೇಶಿಸಲು ಏಕೆ ಅನುಮತಿಸಲಿಲ್ಲ, ಮತ್ತು ನಾವು ಇದರಿಂದ ಯಾವ ಪಾಠವನ್ನು ಕಲಿಯಬಲ್ಲೆವು? (ಧರ್ಮೋ. 3:25-27; ಅರ. 20:12, 13)

 3. ಧರ್ಮೋಪದೇಶಕಾಂಡ 31:1-8, 14-23 ಓದಿ.

  ಮೋಶೆಯು ಇಸ್ರಾಯೇಲ್ಯರನ್ನು ಬೀಳ್ಕೊಡುವಾಗ ಆಡಿದ ಮಾತುಗಳು, ಯೆಹೋವನು ಕೊಟ್ಟ ಶಿಸ್ತನ್ನು ಅವನು ದೀನತೆಯಿಂದ ಅಂಗೀಕರಿಸಿದ್ದನೆಂಬುದನ್ನು ಹೇಗೆ ತೋರಿಸುತ್ತವೆ? (ಧರ್ಮೋ. 31:6-8, 23)

 4. ಧರ್ಮೋಪದೇಶಕಾಂಡ 32:45-52 ಓದಿ.

  ದೇವರ ವಾಕ್ಯವು ನಮ್ಮ ಜೀವಿತಗಳನ್ನು ಹೇಗೆ ಪ್ರಭಾವಿಸಬೇಕು? (ಧರ್ಮೋ. 32:47; ಯಾಜ. 18:5; ಇಬ್ರಿ. 4:12)

 5. ಧರ್ಮೋಪದೇಶಕಾಂಡ 34:1-12 ಓದಿ.

  ಮೋಶೆಯು ಯೆಹೋವನನ್ನು ಎಂದಿಗೂ ಕಣ್ಣಾರೆ ನೋಡದಿದ್ದರೂ ಅವನಿಗೆ ಯೆಹೋವನೊಂದಿಗಿದ್ದ ಸಂಬಂಧದ ಕುರಿತಾಗಿ ಧರ್ಮೋಪದೇಶಕಾಂಡ 34:10 ಏನನ್ನು ತಿಳಿಸುತ್ತದೆ? (ವಿಮೋ. 33:11, 20; ಅರ. 12:8)

ಕಥೆ 44

ರಾಹಾಬಳು ಗೂಢಚಾರರನ್ನು ಅಡಗಿಸಿಡುತ್ತಾಳೆ

 1. ರಾಹಾಬಳು ಎಲ್ಲಿ ವಾಸಿಸುತ್ತಾಳೆ?

 2. ಚಿತ್ರದಲ್ಲಿರುವ ಇಬ್ಬರು ಪುರುಷರು ಯಾರು, ಮತ್ತು ಅವರೇಕೆ ಯೆರಿಕೋವಿನಲ್ಲಿದ್ದಾರೆ?

 3. ಯೆರಿಕೋವಿನ ಅರಸನು ತನ್ನ ಆಳುಗಳನ್ನು ಕಳುಹಿಸಿ ರಾಹಾಬಳಿಗೆ ಏನೆಂದು ಆಜ್ಞಾಪಿಸುತ್ತಾನೆ, ಮತ್ತು ಅವಳು ಯಾವ ಉತ್ತರವನ್ನು ಕೊಡುತ್ತಾಳೆ?

 4. ರಾಹಾಬಳು ಆ ಇಬ್ಬರು ಪುರುಷರಿಗೆ ಹೇಗೆ ಸಹಾಯಮಾಡಿದಳು, ಮತ್ತು ಅವಳು ಯಾವ ಸಹಾಯವನ್ನು ಕೇಳುತ್ತಾಳೆ?

 5. ಆ ಇಬ್ಬರು ಗೂಢಚಾರರು ರಾಹಾಬಳಿಗೆ ಏನೆಂದು ವಚನಕೊಡುತ್ತಾರೆ?

ಹೆಚ್ಚಿನ ಪ್ರಶ್ನೆಗಳು:

 1. ಯೆಹೋಶುವ 2:1-24 ಓದಿ.

  ವಿಮೋಚನಕಾಂಡ 23:27ರಲ್ಲಿರುವ ಯೆಹೋವನ ವಾಗ್ದಾನವು, ಇಸ್ರಾಯೇಲ್ಯರು ಯೆರಿಕೋವಿನ ವಿರುದ್ಧವಾಗಿ ಬಂದಾಗ ಹೇಗೆ ನೆರವೇರಿತು? (ಯೆಹೋ. 2:9-11)

 2. ಇಬ್ರಿಯ 11:31 ಓದಿ.

  ರಾಹಾಬಳ ಮಾದರಿಯು ನಂಬಿಕೆಯ ಮಹತ್ವವನ್ನು ಹೇಗೆ ಎತ್ತಿತೋರಿಸುತ್ತದೆ? (ರೋಮಾ. 1:17; ಇಬ್ರಿ. 10:39; ಯಾಕೋ. 2:25)

ಕಥೆ 45

ಯೊರ್ದನ್‌ ಹೊಳೆಯನ್ನು ದಾಟುವುದು

 1. ಇಸ್ರಾಯೇಲ್ಯರು ಯೊರ್ದನ್‌ ಹೊಳೆಯನ್ನು ದಾಟುವಂತೆ ಯೆಹೋವನು ಯಾವ ಅದ್ಭುತವನ್ನು ಮಾಡುತ್ತಾನೆ?

 2. ಇಸ್ರಾಯೇಲ್ಯರು ಯೊರ್ದನ್‌ ಹೊಳೆಯನ್ನು ದಾಟಲು ನಂಬಿಕೆಯ ಯಾವ ಕ್ರಿಯೆಯನ್ನು ಮಾಡಬೇಕಿತ್ತು?

 3. ಯೆಹೋವನು ಯೆಹೋಶುವನಿಗೆ ಹೊಳೆಯೊಳಗಿಂದ 12 ಕಲ್ಲುಗಳನ್ನು ತರುವಂತೆ ಹೇಳಿದ್ದೇಕೆ?

 4. ಯಾಜಕರು ಯೊರ್ದನಿನಿಂದ ಮೇಲೆ ಬಂದ ಕೂಡಲೆ ಏನಾಗುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಯೆಹೋಶುವ 3:1-17 ಓದಿ.

  1. (ಎ) ಈ ವೃತ್ತಾಂತದಿಂದ ದೃಷ್ಟಾಂತಿಸಲ್ಪಟ್ಟಿರುವಂತೆ ಯೆಹೋವನ ಸಹಾಯವನ್ನು ಮತ್ತು ಆಶೀರ್ವಾದವನ್ನು ಪಡೆದುಕೊಳ್ಳಲಿಕ್ಕಾಗಿ ನಾವೇನು ಮಾಡುವುದು ಅಗತ್ಯ? (ಯೆಹೋ. 3:13, 15; ಜ್ಞಾನೋ. 3:5; ಯಾಕೋ. 2:22, 26)

  2. (ಬಿ) ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವಾಗ ಯೊರ್ದನ್‌ ಹೊಳೆ ಹೇಗಿತ್ತು, ಮತ್ತು ಇದು ಯೆಹೋವನ ನಾಮವನ್ನು ಹೇಗೆ ಘನಪಡಿಸಿತು? (ಯೆಹೋ. 3:15; 4:18; ಕೀರ್ತ. 66:5-7)

 2. ಯೆಹೋಶುವ 4:1-18 ಓದಿ.

  ಯೊರ್ದನಿನಿಂದ 12 ಕಲ್ಲುಗಳನ್ನು ತೆಗೆದು ಗಿಲ್ಗಾಲಿನಲ್ಲಿ ಇಟ್ಟದ್ದರ ಉದ್ದೇಶವೇನಾಗಿತ್ತು? (ಯೆಹೋ. 4:4-7, 19-24)

ಕಥೆ 46

ಯೆರಿಕೋವಿನ ಗೋಡೆಗಳು

 1. ಆರು ದಿನಗಳ ವರೆಗೆ ಯೋಧರು ಮತ್ತು ಯಾಜಕರು ಏನು ಮಾಡಬೇಕೆಂದು ಯೆಹೋವನು ತಿಳಿಸುತ್ತಾನೆ?

 2. ಏಳನೆಯ ದಿನದಂದು ಆ ಪುರುಷರು ಏನು ಮಾಡಬೇಕು?

 3. ನೀವು ಚಿತ್ರದಲ್ಲಿ ನೋಡುವಂತೆ ಯೆರಿಕೋವಿನ ಗೋಡೆಗಳಿಗೆ ಏನು ಸಂಭವಿಸುತ್ತಿದೆ?

 4. ಆ ಕಿಟಕಿಯಿಂದ ಒಂದು ಕೆಂಪು ಹಗ್ಗವು ಏಕೆ ತೂಗಾಡುತ್ತಿದೆ?

 5. ಯೆಹೋಶುವನು ಆ ಯೋಧರಿಗೆ ಜನರನ್ನೂ ಪಟ್ಟಣವನ್ನೂ ಏನು ಮಾಡಬೇಕೆಂದು ತಿಳಿಸುತ್ತಾನೆ, ಆದರೆ ಬೆಳ್ಳಿ, ಬಂಗಾರ, ತಾಮ್ರ ಮತ್ತು ಕಬ್ಬಿಣವನ್ನು ಅವರು ಏನು ಮಾಡಬೇಕಾಗಿತ್ತು?

 6. ಇಬ್ಬರು ಗೂಢಚಾರರಿಗೆ ಏನು ಮಾಡಬೇಕೆಂದು ತಿಳಿಸಲಾಗುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಯೆಹೋಶುವ 6:1-25 ಓದಿ.

  1. (ಎ) ಇಸ್ರಾಯೇಲ್ಯರು ಯೆರಿಕೋವನ್ನು ಏಳನೆಯ ದಿನದಲ್ಲಿ ಸುತ್ತಿದ ವಿಷಯವು ಈ ಅಂತ್ಯಕಾಲದಲ್ಲಿನ ಯೆಹೋವನ ಸಾಕ್ಷಿಗಳ ಸಾರುವಿಕೆಯ ಚಟುವಟಿಕೆಗಳಿಗೆ ಹೇಗೆ ಹೋಲಿಕೆಯಾಗಿದೆ? (ಯೆಹೋ. 6:15, 16; ಯೆಶಾ. 60:22; ಮತ್ತಾ. 24:14; 1 ಕೊರಿಂ. 9:16)

  2. (ಬಿ) ಯೆಹೋಶುವ 6:26 ರಲ್ಲಿನ ಪ್ರವಾದನೆಯು ಸುಮಾರು 500 ವರ್ಷಗಳ ನಂತರ ಹೇಗೆ ನೆರವೇರಿತು, ಮತ್ತು ಇದು ಯೆಹೋವನ ಮಾತುಗಳ ಕುರಿತು ನಮಗೆ ಏನನ್ನು ಕಲಿಸುತ್ತದೆ? (1 ಅರ. 16:34; ಯೆಶಾ. 55:11)

ಕಥೆ 47

ಇಸ್ರಾಯೇಲಿನಲ್ಲಿ ಒಬ್ಬ ಕಳ್ಳ

 1. ಚಿತ್ರದಲ್ಲಿ ಕಾಣುವಂತೆ ಯೆರಿಕೋ ಪಟ್ಟಣದಿಂದ ತೆಗೆದುಕೊಂಡಿರುವ ಬೆಲೆಬಾಳುವ ವಸ್ತುಗಳನ್ನು ಹೂತಿಡುತ್ತಿರುವ ಮನುಷ್ಯನು ಯಾರು, ಮತ್ತು ಅವನಿಗೆ ಯಾರು ಸಹಾಯಮಾಡುತ್ತಿದ್ದಾರೆ?

 2. ಆಕಾನನ ಮತ್ತು ಅವನ ಕುಟುಂಬದವರ ಈ ಕೃತ್ಯವು ಏಕೆ ತುಂಬಾ ಗಂಭೀರವಾಗಿದೆ?

 3. ಆಯಿ ಎಂಬ ಪ್ರದೇಶದಲ್ಲಿ ನಡೆದ ಯುದ್ಧದಲ್ಲಿ ಇಸ್ರಾಯೇಲ್ಯರು ಏಕೆ ಸೋತುಹೋದರೆಂದು ಯೆಹೋಶುವನು ಯೆಹೋವನನ್ನು ಕೇಳಿದಾಗ ಆತನು ಏನು ಹೇಳುತ್ತಾನೆ?

 4. ಆಕಾನನೂ ಅವನ ಕುಟುಂಬವೂ ಯೆಹೋಶುವನ ಮುಂದೆ ಕರೆತರಲ್ಪಟ್ಟ ಬಳಿಕ ಏನು ಸಂಭವಿಸುತ್ತದೆ?

 5. ಆಕಾನನಿಗೆ ಸಿಕ್ಕಿದ ದಂಡನೆಯು ನಮಗೆ ಯಾವ ಪ್ರಾಮುಖ್ಯ ಪಾಠವನ್ನು ಕಲಿಸುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಯೆಹೋಶುವ 7:1-26 ಓದಿ.

  1. (ಎ) ಯೆಹೋಶುವನ ಪ್ರಾರ್ಥನೆಗಳು ಸೃಷ್ಟಿಕರ್ತನೊಂದಿಗೆ ಅವನಿಗಿದ್ದ ಸಂಬಂಧದ ಕುರಿತಾಗಿ ಏನನ್ನು ತಿಳಿಯಪಡಿಸುತ್ತವೆ? (ಯೆಹೋ. 7:7-9; ಕೀರ್ತ. 119:145; 1 ಯೋಹಾ. 5:14)

  2. (ಬಿ) ಆಕಾನನ ಉದಾಹರಣೆಯು ಏನನ್ನು ತೋರಿಸುತ್ತದೆ, ಮತ್ತು ಇದು ನಮಗೆ ಯಾವ ಎಚ್ಚರಿಕೆಯನ್ನು ಕೊಡುತ್ತದೆ? (ಯೆಹೋ. 7:11, 14, 15; ಜ್ಞಾನೋ. 15:3; 1 ತಿಮೊ. 5:24; ಇಬ್ರಿ. 4:13)

 2. ಯೆಹೋಶುವ 8:1-29 ಓದಿ.

  ಕ್ರೈಸ್ತ ಸಭೆಯಲ್ಲಿ ಇಂದು ವೈಯಕ್ತಿಕವಾಗಿ ನಮಗೆ ಯಾವ ಜವಾಬ್ದಾರಿಯಿದೆ? (ಯೆಹೋ. 7:13; ಯಾಜ. 5:1; ಜ್ಞಾನೋ. 28:13)

ಕಥೆ 48

ವಿವೇಕಿಗಳಾದ ಗಿಬ್ಯೋನ್ಯರು

 1. ಗಿಬ್ಯೋನಿನ ಜನರು ಸಮೀಪದ ಪಟ್ಟಣಗಳಲ್ಲಿದ್ದ ಕಾನಾನ್ಯರಿಗಿಂತಲೂ ಹೇಗೆ ಭಿನ್ನರಾಗಿದ್ದಾರೆ?

 2. ಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ ಈ ಗಿಬ್ಯೋನ್ಯರು ಏನು ಮಾಡುತ್ತಾರೆ, ಮತ್ತು ಏಕೆ?

 3. ಯೆಹೋಶುವನೂ ಇಸ್ರಾಯೇಲ್ಯರ ಪ್ರಧಾನರೂ ಗಿಬ್ಯೋನ್ಯರಿಗೆ ಏನೆಂದು ವಚನಕೊಡುತ್ತಾರೆ, ಆದರೆ ಮೂರು ದಿನಗಳ ಅನಂತರ ಅವರಿಗೇನು ತಿಳಿದುಬರುತ್ತದೆ?

 4. ಗಿಬ್ಯೋನ್ಯರು ಇಸ್ರಾಯೇಲ್ಯರೊಂದಿಗೆ ಒಪ್ಪಂದಮಾಡಿಕೊಂಡ ವಿಷಯವನ್ನು ಇತರ ಪಟ್ಟಣಗಳ ಅರಸರು ಕೇಳಿಸಿಕೊಂಡಾಗ ಏನು ಸಂಭವಿಸುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಯೆಹೋಶುವ 9:1-27 ಓದಿ.

  1. (ಎ) ದೇಶದ ‘ಎಲ್ಲಾ ನಿವಾಸಿಗಳನ್ನು ಸಂಹರಿಸಿಬಿಡಬೇಕೆಂದು’ ಯೆಹೋವನು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ್ದರೂ ಆತನು ಗಿಬ್ಯೋನ್ಯರನ್ನು ಕಾಪಾಡಿದ ವಿಷಯದಿಂದ ಆತನ ಯಾವ ಗುಣಗಳು ಎತ್ತಿತೋರಿಸಲ್ಪಟ್ಟಿವೆ? (ಯೆಹೋ. 9:22, 24; ಮತ್ತಾ. 9:13; ಅ. ಕೃ. 10:34, 35; 2 ಪೇತ್ರ 3:9)

  2. (ಬಿ) ಗಿಬ್ಯೋನ್ಯರೊಂದಿಗೆ ಮಾಡಿದ ಒಡಂಬಡಿಕೆಯನ್ನು ಮುರಿಯದಿರುವ ಮೂಲಕ ಯೆಹೋಶುವನು ಇಂದಿರುವ ಕ್ರೈಸ್ತರಿಗೆ ಹೇಗೆ ಒಂದು ಉತ್ತಮ ಮಾದರಿಯಾಗಿದ್ದಾನೆ? (ಯೆಹೋ. 9:18, 19; ಮತ್ತಾ. 5:37; ಎಫೆ. 4:25)

 2. ಯೆಹೋಶುವ 10:1-5 ಓದಿ.

  ಇಂದು ಮಹಾ ಸಮೂಹದವರು ಗಿಬ್ಯೋನ್ಯರನ್ನು ಹೇಗೆ ಅನುಕರಿಸುತ್ತಾರೆ, ಮತ್ತು ಇದರಿಂದಾಗಿ ಅವರು ಯಾವುದಕ್ಕೆ ಗುರಿಯಾಗಿದ್ದಾರೆ? (ಯೆಹೋ. 10:4; ಜೆಕ. 8:23; ಮತ್ತಾ. 25:35-40; ಪ್ರಕ. 12:17)

ಕಥೆ 49

ಸೂರ್ಯನು ಕದಲದೆ ನಿಲ್ಲುತ್ತಾನೆ

 1. ಚಿತ್ರದಲ್ಲಿ ಯೆಹೋಶುವನು ಏನು ಹೇಳುತ್ತಿದ್ದಾನೆ, ಮತ್ತು ಏಕೆ?

 2. ಯೆಹೋವನು ಯೆಹೋಶುವನಿಗೂ ಅವನ ಯೋಧರಿಗೂ ಹೇಗೆ ಸಹಾಯಮಾಡುತ್ತಾನೆ?

 3. ಯೆಹೋಶುವನು ವಿರೋಧಿಗಳಾಗಿದ್ದ ಎಷ್ಟು ಮಂದಿ ಅರಸರುಗಳನ್ನು ಸೋಲಿಸುತ್ತಾನೆ, ಮತ್ತು ಅದಕ್ಕೆ ಎಷ್ಟು ಸಮಯ ತಗಲುತ್ತದೆ?

 4. ಯೆಹೋಶುವನು ಕಾನಾನ್‌ ದೇಶವನ್ನು ಏಕೆ ಹಂಚುತ್ತಾನೆ?

 5. ಯೆಹೋಶುವನು ಸಾಯುವಾಗ ಅವನಿಗೆ ಎಷ್ಟು ಪ್ರಾಯವಾಗಿರುತ್ತದೆ, ಮತ್ತು ತದನಂತರ ಜನರಿಗೆ ಏನು ಸಂಭವಿಸುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಯೆಹೋಶುವ 10:6-15 ಓದಿ.

  ಯೆಹೋವನು ಇಸ್ರಾಯೇಲ್ಯರಿಗಾಗಿ ಸೂರ್ಯಚಂದ್ರರನ್ನು ಕದಲದೆ ನಿಲ್ಲಿಸಿದ ವಿಷಯವು ಇಂದು ನಮಗೆ ಯಾವ ಭರವಸೆಯನ್ನು ಕೊಡುತ್ತದೆ? (ಯೆಹೋ. 10:8, 10, 12, 13; ಕೀರ್ತ. 18:3; ಜ್ಞಾನೋ. 18:10)

 2. ಯೆಹೋಶುವ 12:7-24 ಓದಿ.

  ಕಾನಾನಿನಲ್ಲಿ 31 ಮಂದಿ ಅರಸರ ಸೋಲಿಗೆ ನಿಜವಾಗಿಯೂ ಯಾರು ಕಾರಣನಾಗಿದ್ದನು, ಮತ್ತು ಇದು ನಮಗಿಂದು ಪ್ರಾಮುಖ್ಯವಾಗಿದೆ ಏಕೆ? (ಯೆಹೋ. 12:7; 24:11-13; ಧರ್ಮೋ. 31:8; ಲೂಕ 21:9, 25-28)

 3. ಯೆಹೋಶುವ 14:1-5 ಓದಿ.

  ಇಸ್ರಾಯೇಲಿನ ಕುಲಗಳ ಮಧ್ಯೆ ದೇಶವು ಹೇಗೆ ಹಂಚಲ್ಪಟ್ಟಿತು, ಮತ್ತು ಇದು ಪರದೈಸಿನಲ್ಲಿನ ಸ್ವಾಸ್ತ್ಯಗಳ ಬಗ್ಗೆ ಏನನ್ನು ತಿಳಿಯಪಡಿಸುತ್ತದೆ? (ಯೆಹೋ. 14:2; ಯೆಶಾ. 65:21; ಯೆಹೆ. 47:21-23; 1 ಕೊರಿಂ. 14:33)

 4. ನ್ಯಾಯಸ್ಥಾಪಕರು 2:8-13 ಓದಿ.

  ಇಸ್ರಾಯೇಲಿನ ಯೆಹೋಶುವನಂತೆ ಇಂದು ಯಾರು ಧರ್ಮಭ್ರಷ್ಟತೆಯನ್ನು ತಡೆಯುತ್ತಾರೆ? (ನ್ಯಾಯ. 2:8, 10, 11; ಮತ್ತಾ. 24:45-47; 2 ಥೆಸ. 2:3-6; ತೀತ. 1:7-9; ಪ್ರಕ. 1:1; 2:1, 2)

ಕಥೆ 50

ಧೀರೆಯರಾದ ಇಬ್ಬರು ಸ್ತ್ರೀಯರು

 1. ನ್ಯಾಯಸ್ಥಾಪಕರು ಯಾರು, ಮತ್ತು ಅವರಲ್ಲಿ ಕೆಲವರ ಹೆಸರುಗಳು ಯಾವುವು?

 2. ದೆಬೋರಳಿಗೆ ಯಾವ ವಿಶೇಷ ಸುಯೋಗವಿದೆ, ಮತ್ತು ಅವಳು ಏನು ಮಾಡಬೇಕಿತ್ತು?

 3. ಅರಸನಾದ ಯಾಬೀನನಿಂದಲೂ ಅವನ ಸೇನಾಪತಿಯಾದ ಸೀಸೆರನಿಂದಲೂ ಇಸ್ರಾಯೇಲ್ಯರು ಬೆದರಿಸಲ್ಪಟ್ಟಾಗ, ದೆಬೋರಳು ನ್ಯಾಯಸ್ಥಾಪಕನಾದ ಬಾರಾಕನಿಗೆ ಯೆಹೋವನ ಯಾವ ಸಂದೇಶವನ್ನು ಕೊಡುತ್ತಾಳೆ, ಮತ್ತು ವಿಜಯಕ್ಕಾಗಿ ಕೀರ್ತಿಯು ಯಾರಿಗೆ ಸಿಗುವುದೆಂದು ಅವಳು ಹೇಳುತ್ತಾಳೆ?

 4. ಯಾಯೇಲಳು ತಾನು ಧೀರ ಸ್ತ್ರೀಯೆಂಬುದನ್ನು ಹೇಗೆ ತೋರಿಸಿಕೊಡುತ್ತಾಳೆ?

 5. ಅರಸ ಯಾಬೀನನ ಮರಣದ ಬಳಿಕ ಏನು ಸಂಭವಿಸುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ನ್ಯಾಯಸ್ಥಾಪಕರು 2:14-22 ಓದಿ.

  ಇಸ್ರಾಯೇಲ್ಯರು ತಮ್ಮ ಮೇಲೆ ಯೆಹೋವನ ಕೋಪವನ್ನು ಹೇಗೆ ಬರಮಾಡಿಕೊಂಡರು, ಮತ್ತು ನಾವು ಇದರಿಂದ ಯಾವ ಪಾಠವನ್ನು ಕಲಿಯಬಲ್ಲೆವು? (ನ್ಯಾಯ. 2:20; ಜ್ಞಾನೋ. 3:1, 2; ಯೆಹೆ. 18:21-23)

 2. ನ್ಯಾಯಸ್ಥಾಪಕರು 4:1-24 ಓದಿ.

  ದೆಬೋರ ಮತ್ತು ಯಾಯೇಲಳ ಮಾದರಿಗಳಿಂದ, ಇಂದು ಕ್ರೈಸ್ತ ಸ್ತ್ರೀಯರು ನಂಬಿಕೆ ಮತ್ತು ಧೈರ್ಯದ ವಿಷಯದಲ್ಲಿ ಯಾವ ಪಾಠಗಳನ್ನು ಕಲಿಯಬಲ್ಲರು? (ನ್ಯಾಯ. 4:4, 8, 9, 14, 21, 22; ಜ್ಞಾನೋ. 31:30; 1 ಕೊರಿಂ. 16:13)

 3. ನ್ಯಾಯಸ್ಥಾಪಕರು 5:1-31 ಓದಿ.

  ಬಾರಾಕನೂ ದೆಬೋರಳೂ ಹಾಡಿದ ಜಯಗೀತೆಯನ್ನು ಬರಲಿರುವ ಹರ್ಮಗೆದೋನ್‌ ಯುದ್ಧದ ಸಂಬಂಧದಲ್ಲಿ ಒಂದು ಪ್ರಾರ್ಥನೆಯಾಗಿ ಹೇಗೆ ಉಪಯೋಗಿಸಸಾಧ್ಯವಿದೆ? (ನ್ಯಾಯ. 5:3, 31; 1 ಪೂರ್ವ. 16:8-10; ಪ್ರಕ. 7:9, 10; 16:16; 19:19-21)

ಕಥೆ 51

ರೂತ್‌ ಮತ್ತು ನೊವೊಮಿ

 1. ನೊವೊಮಿಯು ಮೋವಾಬ್‌ ದೇಶಕ್ಕೆ ಬಂದದ್ದು ಹೇಗೆ?

 2. ರೂತ್‌ ಮತ್ತು ಒರ್ಫಳು ಯಾರು?

 3. ತಮ್ಮ ಜನರ ಬಳಿಗೆ ಹಿಂದಿರುಗುವಂತೆ ರೂತ್‌ ಮತ್ತು ಒರ್ಫಳಿಗೆ ನೊವೊಮಿ ತಿಳಿಸಿದಾಗ ಅವರಿಬ್ಬರೂ ಹೇಗೆ ಪ್ರತಿಕ್ರಿಯಿಸುತ್ತಾರೆ?

 4. ಬೋವಜನು ಯಾರು, ಮತ್ತು ಅವನು ನೊವೊಮಿಗೆ ಹಾಗೂ ರೂತಳಿಗೆ ಹೇಗೆ ಸಹಾಯಮಾಡುತ್ತಾನೆ?

 5. ಬೋವಜ ಮತ್ತು ರೂತಳಿಗೆ ಹುಟ್ಟಿದ ಮಗುವಿನ ಹೆಸರೇನು, ಮತ್ತು ನಾವು ಅವನನ್ನು ನೆನಪಿನಲ್ಲಿಡಬೇಕು ಏಕೆ?

ಹೆಚ್ಚಿನ ಪ್ರಶ್ನೆಗಳು:

 1. ರೂತಳು 1:1-17 ಓದಿ.

  1. (ಎ) ರೂತಳು ನಿಷ್ಠಾವಂತ ಪ್ರೀತಿಯ ಯಾವ ಸುಂದರ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಿದಳು? (ರೂತ. 1:16, 17)

  2. (ಬಿ) ರೂತಳ ಮನೋವೃತ್ತಿಯು, ಇಂದು ಭೂಮಿಯಲ್ಲಿರುವ ಅಭಿಷಿಕ್ತರ ಕಡೆಗೆ “ಬೇರೆ ಕುರಿ”ಗಳಿಗಿರುವ ಮನೋಭಾವವನ್ನು ಹೇಗೆ ಚೆನ್ನಾಗಿ ವ್ಯಕ್ತಪಡಿಸುತ್ತದೆ? (ಯೋಹಾ. 10:16; ಜೆಕ. 8:23)

 2. ರೂತಳು 2:1-23 ಓದಿ.

  ರೂತಳು ಇಂದಿನ ಯುವ ಸ್ತ್ರೀಯರಿಗೆ ಹೇಗೆ ಒಂದು ಉತ್ತಮ ಮಾದರಿಯಾಗಿದ್ದಾಳೆ? (ರೂತ. 2:17, 18; ಜ್ಞಾನೋ. 23:22; 31:15)

 3. ರೂತಳು 3:5-13 ಓದಿ.

  1. (ಎ) ರೂತಳು ಒಬ್ಬ ಯುವ ಪುರುಷನನ್ನು ಮದುವೆಯಾಗುವ ಬದಲು ಬೋವಜನನ್ನು ಮದುವೆಯಾಗಲು ತೋರಿಸಿದ ಸಿದ್ಧಮನಸ್ಸನ್ನು ಅವನು ಹೇಗೆ ಪರಿಗಣಿಸಿದನು?

  2. (ಬಿ) ರೂತಳ ಮನೋಭಾವವು ನಿಷ್ಠಾವಂತ ಪ್ರೀತಿಯ ಕುರಿತು ನಮಗೆ ಏನನ್ನು ಕಲಿಸುತ್ತದೆ? (ರೂತ. 3:10; 1 ಕೊರಿಂ. 13:4, 5)

 4. ರೂತಳು 4:7-17 ಓದಿ.

  ಇಂದು ಕ್ರೈಸ್ತ ಪುರುಷರು ಹೇಗೆ ಬೋವಜನಂತೆ ಇರಸಾಧ್ಯವಿದೆ? (ರೂತ. 4:9, 10; 1 ತಿಮೊ. 3:1, 12, 13; 5:8)

ಕಥೆ 52

ಗಿದ್ಯೋನ ಮತ್ತು ಅವನ 300 ಪುರುಷರು

 1. ಇಸ್ರಾಯೇಲ್ಯರು ಹೇಗೆ ಮತ್ತು ಏಕೆ ಬಹಳಷ್ಟು ತೊಂದರೆಯಲ್ಲಿದ್ದಾರೆ?

 2. ಗಿದ್ಯೋನನ ಸೈನ್ಯದಲ್ಲಿ ತೀರ ಹೆಚ್ಚು ಜನರಿದ್ದಾರೆ ಎಂದು ಯೆಹೋವನು ಹೇಳಲು ಕಾರಣವೇನು?

 3. ಧೈರ್ಯವಿಲ್ಲದವರು ಮನೆಗೆ ಹಿಂದಿರುಗಿ ಹೋಗುವಂತೆ ಗಿದ್ಯೋನನು ತಿಳಿಸಿದ ನಂತರ ಎಷ್ಟು ಮಂದಿ ಸೈನಿಕರು ಉಳಿಯುತ್ತಾರೆ?

 4. ಯೆಹೋವನು ಹೇಗೆ ಗಿದ್ಯೋನನ ಸೈನಿಕರ ಸಂಖ್ಯೆಯನ್ನು ಕೇವಲ 300ಕ್ಕೆ ಇಳಿಸುತ್ತಾನೆಂಬುದನ್ನು ಚಿತ್ರ ನೋಡಿ ವಿವರಿಸಿರಿ.

 5. ಗಿದ್ಯೋನನು ತನ್ನ 300 ಮಂದಿ ಸೈನಿಕರನ್ನು ಹೇಗೆ ಸಂಘಟಿಸುತ್ತಾನೆ, ಮತ್ತು ಇಸ್ರಾಯೇಲ್ಯರು ಹೇಗೆ ಯುದ್ಧದಲ್ಲಿ ಜಯಗಳಿಸುತ್ತಾರೆ?

ಹೆಚ್ಚಿನ ಪ್ರಶ್ನೆಗಳು:

 1. ನ್ಯಾಯಸ್ಥಾಪಕರು 6:36-40 ಓದಿ.

  1. (ಎ) ಗಿದ್ಯೋನನು ಯೆಹೋವನ ಚಿತ್ತವೇನೆಂಬುದನ್ನು ಹೇಗೆ ಖಚಿತಪಡಿಸಿಕೊಂಡನು?

  2. (ಬಿ) ಯೆಹೋವನ ಚಿತ್ತವೇನೆಂಬುದನ್ನು ನಾವಿಂದು ಹೇಗೆ ಕಂಡುಕೊಳ್ಳುತ್ತೇವೆ? (ಜ್ಞಾನೋ. 2:3-6; ಮತ್ತಾ. 7:7-11; 2 ತಿಮೊ. 3:16, 17)

 2. ನ್ಯಾಯಸ್ಥಾಪಕರು 7:1-25 ಓದಿ.

  1. (ಎ) ಅಜಾಗರೂಕತೆಯನ್ನು ತೋರಿಸಿದವರಿಗೆ ವ್ಯತಿರಿಕ್ತವಾಗಿ ಎಚ್ಚರವಾಗಿ ಉಳಿದ 300 ಮಂದಿಯಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು? (ನ್ಯಾಯ. 7:3, 6; ರೋಮಾ. 13:11, 12; ಎಫೆ. 5:15-17)

  2. (ಬಿ) ಗಿದ್ಯೋನನನ್ನು ಗಮನಿಸುವ ಮೂಲಕ ಏನು ಮಾಡಬೇಕೆಂಬುದನ್ನು ಕಲಿತುಕೊಂಡ ಆ 300 ಮಂದಿಯಂತೆ ನಾವು ಮಹಾ ಗಿದ್ಯೋನನಾದ ಯೇಸು ಕ್ರಿಸ್ತನನ್ನು ಗಮನಿಸುವ ಮೂಲಕ ಹೇಗೆ ಪಾಠ ಕಲಿಯಬಲ್ಲೆವು? (ನ್ಯಾಯ. 7:17; ಮತ್ತಾ. 11:29, 30; 28:19, 20; 1 ಪೇತ್ರ 2:21)

  3. (ಸಿ) ಯೆಹೋವನ ಸಂಘಟನೆಯಲ್ಲಿ ಸಿಗುವ ಯಾವುದೇ ನೇಮಕದಲ್ಲಿ ಸಂತೃಪ್ತರಾಗಿರುವಂತೆ ನ್ಯಾಯಸ್ಥಾಪಕರು 7:21 ನಮಗೆ ಹೇಗೆ ಸಹಾಯಮಾಡುತ್ತದೆ? (1 ಕೊರಿಂ. 4:2; 12:14-18; ಯಾಕೋ. 4:10)

 3. ನ್ಯಾಯಸ್ಥಾಪಕರು 8:1-3 ಓದಿ.

  ಒಬ್ಬ ಸಹೋದರನೊಂದಿಗೆ ಅಥವಾ ಸಹೋದರಿಯೊಂದಿಗೆ ಇರುವ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ವಿಷಯದಲ್ಲಿ, ಗಿದ್ಯೋನನು ಎಫ್ರಾಯೀಮ್ಯರೊಂದಿಗಿನ ಕಲಹವನ್ನು ಬಗೆಹರಿಸಿದ ವಿಧದಿಂದ ನಾವೇನನ್ನು ಕಲಿಯಬಲ್ಲೆವು? (ಜ್ಞಾನೋ. 15:1; ಮತ್ತಾ. 5:23, 24; ಲೂಕ 9:48)

ಕಥೆ 53

ಯೆಪ್ತಾಹನ ವಚನ

 1. ಯೆಪ್ತಾಹನು ಯಾರು, ಮತ್ತು ಯಾವ ಸಮಯದಲ್ಲಿ ಜೀವಿಸುತ್ತಿದ್ದನು?

 2. ಯೆಪ್ತಾಹನು ಯೆಹೋವನಿಗೆ ಯಾವ ವಚನಕೊಡುತ್ತಾನೆ?

 3. ಯೆಪ್ತಾಹನು ಅಮ್ಮೋನಿಯರ ಮೇಲೆ ಜಯಗಳಿಸಿ ಮನೆಗೆ ಹಿಂದಿರುಗಿದಾಗ ಅವನಿಗೆ ಏಕೆ ದುಃಖವಾಗುತ್ತದೆ?

 4. ಯೆಪ್ತಾಹನ ಮಗಳು ತನ್ನ ತಂದೆ ನೀಡಿದ ವಚನದ ಕುರಿತು ತಿಳಿದಾಗ ಏನು ಹೇಳುತ್ತಾಳೆ?

 5. ಯೆಪ್ತಾಹನ ಮಗಳನ್ನು ಜನರು ಏಕೆ ಪ್ರೀತಿಸುತ್ತಾರೆ?

ಹೆಚ್ಚಿನ ಪ್ರಶ್ನೆಗಳು:

 1. ನ್ಯಾಯಸ್ಥಾಪಕರು 10:6-18 ಓದಿ.

  ಯೆಹೋವನಿಗೆ ಅಪನಂಬಿಗಸ್ತರಾಗಿದ್ದ ಇಸ್ರಾಯೇಲ್ಯರ ದಾಖಲೆಯಿಂದ ನಮಗೆ ಯಾವ ಎಚ್ಚರಿಕೆಯ ಪಾಠವಿದೆ? (ನ್ಯಾಯ. 10:6, 15, 16; ರೋಮಾ. 15:4; ಪ್ರಕ. 2:10)

 2. ನ್ಯಾಯಸ್ಥಾಪಕರು 11:1-11, 29-40 ಓದಿ.

  1. (ಎ) ಯೆಪ್ತಾಹನು ತನ್ನ ಮಗಳನ್ನು “ಹೋಮ”ವಾಗಿ ಕೊಟ್ಟದ್ದು, ಅವಳನ್ನು ಯಜ್ಞವಾಗಿ ಬೆಂಕಿಯಲ್ಲಿ ಆಹುತಿಕೊಡುವುದನ್ನು ಅರ್ಥೈಸಲಿಲ್ಲವೆಂದು ನಮಗೆ ಹೇಗೆ ಗೊತ್ತು? (ನ್ಯಾಯ. 11:31; ಯಾಜ. 16:24; ಧರ್ಮೋ. 18:10, 12)

  2. (ಬಿ) ಯಾವ ವಿಧದಲ್ಲಿ ಯೆಪ್ತಾಹನು ತನ್ನ ಮಗಳನ್ನು ಯಜ್ಞವಾಗಿ ಅರ್ಪಿಸಿದನು?

  3. (ಸಿ)ಯೆಹೋವನಿಗೆ ಮಾಡಿದ ಹರಕೆಯ ಬಗ್ಗೆ ಯೆಪ್ತಾಹನಿಗಿದ್ದ ಮನೋಭಾವದಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು? (ನ್ಯಾಯ. 11:35, 39; ಪ್ರಸಂ. 5:4, 5; ಮತ್ತಾ. 16:24)

  4. (ಡಿ) ಪೂರ್ಣಸಮಯದ ಸೇವೆಯನ್ನು ಜೀವನವೃತ್ತಿಯಾಗಿ ಬೆನ್ನಟ್ಟುವುದರಲ್ಲಿ ಯೆಪ್ತಾಹನ ಮಗಳು ಯುವ ಕ್ರೈಸ್ತರಿಗೆ ಹೇಗೆ ಒಂದು ಉತ್ತಮ ಮಾದರಿಯಾಗಿದ್ದಾಳೆ? (ನ್ಯಾಯ. 11:36; ಮತ್ತಾ. 6:33; ಫಿಲಿ. 3:8)

ಕಥೆ 54

ಅತಿ ಬಲಿಷ್ಠ ಪುರುಷ

 1. ಜೀವಿಸಿರುವವರಲ್ಲಿ ಅತಿ ಬಲಿಷ್ಠ ಪುರುಷನ ಹೆಸರೇನು, ಮತ್ತು ಅವನಿಗೆ ಬಲವನ್ನು ಕೊಟ್ಟವರು ಯಾರು?

 2. ನೀವು ಚಿತ್ರದಲ್ಲಿ ನೋಡುವಂತೆ, ಸಂಸೋನನು ಒಮ್ಮೆ ಒಂದು ದೊಡ್ಡ ಸಿಂಹವನ್ನು ಏನು ಮಾಡಿದನು?

 3. ಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ ಸಂಸೋನನು ದೆಲೀಲಾಳಿಗೆ ಯಾವ ರಹಸ್ಯವನ್ನು ತಿಳಿಸಿಬಿಡುತ್ತಾನೆ, ಮತ್ತು ಇದರಿಂದ ಫಿಲಿಷ್ಟಿಯರು ಅವನನ್ನು ಹೇಗೆ ಬಂದಿಸಿದರು?

 4. ಸಂಸೋನನು ತಾನು ಸಾಯುವ ದಿನದಲ್ಲಿ, 3,000 ಫಿಲಿಷ್ಟಿಯ ಶತ್ರುಗಳನ್ನು ಹೇಗೆ ಕೊಂದನು?

ಹೆಚ್ಚಿನ ಪ್ರಶ್ನೆಗಳು:

 1. ನ್ಯಾಯಸ್ಥಾಪಕರು 13:1-14 ಓದಿ.

  ಮಾನೋಹ ಮತ್ತು ಅವನ ಹೆಂಡತಿಯು, ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಹೆತ್ತವರಿಗೆ ಹೇಗೆ ಒಂದು ಉತ್ತಮ ಮಾದರಿಯನ್ನು ಇಟ್ಟರು? (ನ್ಯಾಯ. 13:8; ಕೀರ್ತ. 127:3; ಎಫೆ. 6:4)

 2. ನ್ಯಾಯಸ್ಥಾಪಕರು 14:5-9 ಮತ್ತು 15:9-16 ಓದಿ.

  1. (ಎ) ಸಂಸೋನನು ಸಿಂಹವನ್ನು ಕೊಂದದ್ದು, ತನಗೆ ಕಟ್ಟಿದ ಹೊಸ ಹಗ್ಗಗಳನ್ನು ತುಂಡರಿಸಿದ್ದು ಮತ್ತು ಕತ್ತೆಯ ದವಡೆ ಎಲುಬಿನಿಂದ 1,000 ಜನರನ್ನು ಹತಿಸಿದ್ದು ಮುಂತಾದ ವೃತ್ತಾಂತಗಳು ಯೆಹೋವನ ಪವಿತ್ರಾತ್ಮದ ಕಾರ್ಯಾಚರಣೆಯ ಬಗ್ಗೆ ಏನನ್ನು ತಿಳಿಯಪಡಿಸುತ್ತವೆ?

  2. (ಬಿ) ಇಂದು ಪವಿತ್ರಾತ್ಮವು ನಮಗೆ ಹೇಗೆ ಸಹಾಯಮಾಡುತ್ತದೆ? (ನ್ಯಾಯ. 14:6; 15:14; ಜೆಕ. 4:6; ಅ. ಕೃ. 4:31)

 3. ನ್ಯಾಯಸ್ಥಾಪಕರು 16:18-31 ಓದಿ.

  ದುಸ್ಸಹವಾಸದಿಂದ ಸಂಸೋನನು ಹೇಗೆ ಬಾಧಿಸಲ್ಪಟ್ಟನು, ಮತ್ತು ನಾವು ಇದರಿಂದ ಏನನ್ನು ಕಲಿಯಬಲ್ಲೆವು? (ನ್ಯಾಯ. 16:18, 19; 1 ಕೊರಿಂ. 15:33)

ಕಥೆ 55

ಪುಟ್ಟ ಬಾಲಕನು ದೇವರ ಸೇವೆಮಾಡುತ್ತಾನೆ

 1. ಚಿತ್ರದಲ್ಲಿರುವ ಚಿಕ್ಕ ಹುಡುಗನ ಹೆಸರೇನು, ಮತ್ತು ಇನ್ನಿತರರು ಯಾರು?

 2. ಒಂದು ದಿನ ಹನ್ನಳು ಯೆಹೋವನ ಗುಡಾರಕ್ಕೆ ಹೋದಾಗ ಏನೆಂದು ಪ್ರಾರ್ಥಿಸುತ್ತಾಳೆ, ಮತ್ತು ಯೆಹೋವನು ಅವಳಿಗೆ ಹೇಗೆ ಉತ್ತರ ಕೊಡುತ್ತಾನೆ?

 3. ಯೆಹೋವನ ಗುಡಾರದಲ್ಲಿ ಸೇವೆಸಲ್ಲಿಸಲಿಕ್ಕಾಗಿ ಸಮುವೇಲನನ್ನು ಕರೆದೊಯ್ಯುವಾಗ ಅವನು ಎಷ್ಟು ದೊಡ್ಡವನಾಗಿದ್ದಾನೆ, ಮತ್ತು ಅವನ ತಾಯಿ ಪ್ರತಿ ವರ್ಷವೂ ಅವನಿಗಾಗಿ ಏನನ್ನು ತೆಗೆದುಕೊಂಡು ಹೋಗುತ್ತಾಳೆ?

 4. ಏಲಿಯ ಪುತ್ರರ ಹೆಸರೇನು, ಮತ್ತು ಅವರು ಯಾವ ರೀತಿಯ ವ್ಯಕ್ತಿಗಳಾಗಿದ್ದಾರೆ?

 5. ಯೆಹೋವನು ಸಮುವೇಲನನ್ನು ಹೇಗೆ ಕರೆಯುತ್ತಾನೆ, ಮತ್ತು ಅವನಿಗೆ ಯಾವ ಸಂದೇಶವನ್ನು ಕೊಡುತ್ತಾನೆ?

 6. ಸಮುವೇಲನು ದೊಡ್ಡವನಾದಾಗ ಏನಾಗುತ್ತಾನೆ, ಮತ್ತು ಅವನು ಮುದುಕನಾದಾಗ ಏನಾಗುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಒಂದನೆಯ ಸಮುವೇಲ 1:1-28 ಓದಿ.

  1. (ಎ) ಕುಟುಂಬದ ಶಿರಸ್ಸಾಗಿರುವವರು ಸತ್ಯಾರಾಧನೆಯಲ್ಲಿ ಮುಂದಾಳುತ್ವ ವಹಿಸುವ ಬಗ್ಗೆ ಎಲ್ಕಾನನು ಹೇಗೆ ಉತ್ತಮ ಮಾದರಿಯನ್ನು ಇಟ್ಟಿದ್ದಾನೆ? (1 ಸಮು. 1:3, 21; ಮತ್ತಾ. 6:33; ಫಿಲಿ. 1:10)

  2. (ಬಿ) ಕಳವಳಗೊಳಿಸುವಂಥ ಸಮಸ್ಯೆಯನ್ನು ನಿಭಾಯಿಸುವ ವಿಷಯದಲ್ಲಿ ನಾವು ಹನ್ನಳ ಮಾದರಿಯಿಂದ ಯಾವ ಪಾಠವನ್ನು ಕಲಿಯಬಲ್ಲೆವು? (1 ಸಮು. 1:10, 11; ಕೀರ್ತ. 55:22; ರೋಮಾ. 12:12)

 2. ಒಂದನೆಯ ಸಮುವೇಲ 2:11-36 ಓದಿ.

  ಏಲಿಯು ಹೇಗೆ ಯೆಹೋವನಿಗಿಂತಲೂ ಹೆಚ್ಚಾಗಿ ತನ್ನ ಪುತ್ರರಿಗೆ ಗೌರವನೀಡಿದನು, ಮತ್ತು ಇದು ಹೇಗೆ ನಮಗೆ ಒಂದು ಎಚ್ಚರಿಕೆಯಾಗಿರಬಲ್ಲದು? (1 ಸಮು. 2:22-24, 27, 29; ಧರ್ಮೋ. 21:18-21; ಮತ್ತಾ. 10:36, 37)

 3. ಒಂದನೆಯ ಸಮುವೇಲ 4:16-18 ಓದಿ.

  ಯಾವ ನಾಲ್ಕು ಕೆಟ್ಟಸುದ್ದಿಯು ರಣರಂಗದಿಂದ ಬರುತ್ತದೆ, ಮತ್ತು ಇದು ಏಲಿಯ ಮೇಲೆ ಯಾವ ಪರಿಣಾಮ ಬೀರುತ್ತದೆ?

 4. ಒಂದನೆಯ ಸಮುವೇಲ 8:4-9 ಓದಿ.

  ಇಸ್ರಾಯೇಲ್ಯರು ಹೇಗೆ ಯೆಹೋವನಿಗೆ ತುಂಬ ದುಃಖವನ್ನುಂಟುಮಾಡಿದರು, ಮತ್ತು ನಾವಿಂದು ಆತನ ರಾಜ್ಯವನ್ನು ಹೇಗೆ ನಿಷ್ಠೆಯಿಂದ ಬೆಂಬಲಿಸಸಾಧ್ಯವಿದೆ? (1 ಸಮು. 8:5, 7; ಯೋಹಾ. 17:16; ಯಾಕೋ. 4:4)

ಕಥೆ 56

ಸೌಲ—ಇಸ್ರಾಯೇಲಿನ ಮೊದಲನೆಯ ಅರಸ

 1. ಚಿತ್ರದಲ್ಲಿ ಸಮುವೇಲನು ಏನು ಮಾಡುತ್ತಿದ್ದಾನೆ, ಮತ್ತು ಏಕೆ?

 2. ಯೆಹೋವನು ಸೌಲನನ್ನು ಏಕೆ ಮೆಚ್ಚುತ್ತಾನೆ, ಮತ್ತು ಅವನು ಯಾವ ರೀತಿಯ ವ್ಯಕ್ತಿಯಾಗಿದ್ದಾನೆ?

 3. ಸೌಲನ ಮಗನ ಹೆಸರೇನು, ಮತ್ತು ಅವನು ಏನು ಮಾಡುತ್ತಾನೆ?

 4. ಯಜ್ಞವನ್ನು ಅರ್ಪಿಸಲು ಸಮುವೇಲನಿಗಾಗಿ ಕಾಯುವ ಬದಲಾಗಿ ಸೌಲನೇ ಅದನ್ನು ಏಕೆ ಅರ್ಪಿಸಿದನು?

 5. ಸೌಲನ ಕುರಿತಾದ ವೃತ್ತಾಂತದಿಂದ ನಾವು ಯಾವ ಪಾಠಗಳನ್ನು ಕಲಿಯಸಾಧ್ಯವಿದೆ?

ಹೆಚ್ಚಿನ ಪ್ರಶ್ನೆಗಳು:

 1. ಒಂದನೆಯ ಸಮುವೇಲ 9:15-21 ಮತ್ತು 10:17-27 ಓದಿ.

  ಕೆಲವರು ಸೌಲನ ಬಗ್ಗೆ ಅಗೌರವದಿಂದ ಮಾತಾಡಿದಾಗಲೂ ದುಡುಕಿ ಕ್ರಿಯೆಗೈಯದಂತೆ ನಮ್ರ ಮನೋಭಾವವು ಅವನಿಗೆ ಹೇಗೆ ಸಹಾಯಮಾಡಿತು? (1 ಸಮು. 9:21; 10:21, 22, 27; ಜ್ಞಾನೋ. 17:27)

 2. ಒಂದನೆಯ ಸಮುವೇಲ 13:5-14 ಓದಿ.

  ಸೌಲನು ಗಿಲ್ಗಾಲಿನಲ್ಲಿ ಯಾವ ತಪ್ಪನ್ನು ಮಾಡಿದನು? (1 ಸಮು. 10:8; 13:8, 9, 13)

 3. ಒಂದನೆಯ ಸಮುವೇಲ 15:1-35 ಓದಿ.

  1. (ಎ) ಸೌಲನು ಅಮಾಲೇಕ್ಯರ ಅರಸನಾದ ಆಗಾಗನ ಸಂಬಂಧದಲ್ಲಿ ಯಾವ ಗಂಭೀರವಾದ ತಪ್ಪನ್ನು ಮಾಡಿದನು? (1 ಸಮು. 15:2, 3, 8, 9, 22)

  2. (ಬಿ) ಸೌಲನು ಹೇಗೆ ತನ್ನ ಕೃತ್ಯಗಳನ್ನು ಸಮರ್ಥಿಸಿ, ಇತರರ ಮೇಲೆ ತಪ್ಪುಹೊರಿಸಲು ಪ್ರಯತ್ನಿಸಿದನು? (1 ಸಮು. 15:24)

  3. (ಸಿ) ನಮಗೆ ಸಲಹೆಯು ಕೊಡಲ್ಪಡುವಾಗ ನಾವಿಂದು ಯಾವ ಎಚ್ಚರಿಕೆಗೆ ಕಿವಿಗೊಡಬೇಕು? (1 ಸಮು. 15:19-21; ಕೀರ್ತ. 141:5; ಜ್ಞಾನೋ. 9:8, 9; 11:2)

ಕಥೆ 57

ದೇವರು ದಾವೀದನನ್ನು ಆರಿಸುತ್ತಾನೆ

 1. ಚಿತ್ರದಲ್ಲಿರುವ ಹುಡುಗನ ಹೆಸರೇನು, ಮತ್ತು ಅವನು ಧೀರನೆಂಬುದು ನಮಗೆ ಹೇಗೆ ಗೊತ್ತು?

 2. ದಾವೀದನು ಎಲ್ಲಿ ಜೀವಿಸುತ್ತಾನೆ, ಮತ್ತು ಅವನ ತಂದೆ ಹಾಗೂ ಅಜ್ಜನ ಹೆಸರೇನು?

 3. ಯೆಹೋವನು ಸಮುವೇಲನಿಗೆ ಬೇತ್ಲೆಹೇಮ್‌ನಲ್ಲಿರುವ ಇಷಯನ ಮನೆಗೆ ಹೋಗುವಂತೆ ಏಕೆ ಹೇಳುತ್ತಾನೆ?

 4. ಇಷಯನು ತನ್ನ ಪುತ್ರರಲ್ಲಿ ಏಳು ಮಂದಿಯನ್ನು ಸಮುವೇಲನ ಬಳಿಗೆ ಕರೆತಂದಾಗ ಏನಾಗುತ್ತದೆ?

 5. ದಾವೀದನನ್ನು ಕರೆದುಕೊಂಡು ಬಂದಾಗ ಯೆಹೋವನು ಸಮುವೇಲನಿಗೆ ಏನು ಹೇಳುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ಒಂದನೆಯ ಸಮುವೇಲ 17:34, 35 ಓದಿ.

  ಈ ಘಟನೆಗಳು, ದಾವೀದನ ಧೈರ್ಯವನ್ನು ಮತ್ತು ಅವನು ಯೆಹೋವನ ಮೇಲೆ ಹೊಂದಿಕೊಂಡಿದ್ದನ್ನು ಹೇಗೆ ಒತ್ತಿಹೇಳುತ್ತವೆ? (1 ಸಮು. 17:37)

 2. ಒಂದನೆಯ ಸಮುವೇಲ 16:1-14 ಓದಿ.

  1. (ಎ) ಒಂದನೆಯ ಸಮುವೇಲ 16:7 ರಲ್ಲಿರುವ ಯೆಹೋವನ ಮಾತುಗಳು, ಪಕ್ಷಪಾತ ತೋರಿಸದಿರಲು ಮತ್ತು ಹೊರತೋರಿಕೆಯಿಂದ ತಪ್ಪಾಭಿಪ್ರಾಯವನ್ನು ತಾಳದಿರಲು ನಮಗೆ ಹೇಗೆ ಸಹಾಯಮಾಡುತ್ತವೆ? (ಅ. ಕೃ. 10:34, 35; 1 ತಿಮೊ. 2:4)

  2. (ಬಿ) ಯೆಹೋವನು ಒಬ್ಬ ವ್ಯಕ್ತಿಯಿಂದ ತನ್ನ ಪವಿತ್ರಾತ್ಮವನ್ನು ಹಿಂದೆಗೆಯುವಲ್ಲಿ ಆ ಸ್ಥಾನವನ್ನು ದುರಾತ್ಮವು ಅಥವಾ ಕೆಟ್ಟದ್ದನ್ನು ಮಾಡುವ ಆಂತರಿಕ ಪ್ರಚೋದನೆಯು ಆಕ್ರಮಿಸಬಲ್ಲದು ಎಂಬುದನ್ನು ಸೌಲನ ಮಾದರಿಯು ಹೇಗೆ ತೋರಿಸುತ್ತದೆ? (1 ಸಮು. 16:14; ಮತ್ತಾ. 12:43-45; ಗಲಾ. 5:16)

ಕಥೆ 58

ದಾವೀದ ಮತ್ತು ಗೊಲ್ಯಾತ

 1. ಗೊಲ್ಯಾತನು ಇಸ್ರಾಯೇಲ್ಯ ಸೈನ್ಯಕ್ಕೆ ಯಾವ ಸವಾಲನ್ನೆಸೆಯುತ್ತಾನೆ?

 2. ಗೊಲ್ಯಾತನ ಎತ್ತರ ಎಷ್ಟು, ಮತ್ತು ಗೊಲ್ಯಾತನನ್ನು ಕೊಲ್ಲುವವನಿಗೆ ಯಾವ ಬಹುಮಾನ ಕೊಡುತ್ತೇನೆಂದು ಅರಸ ಸೌಲನು ವಚನಕೊಡುತ್ತಾನೆ?

 3. ಇನ್ನೂ ಹುಡುಗನಾಗಿರುವುದರಿಂದ ಗೊಲ್ಯಾತನೊಂದಿಗೆ ಕಾದಾಡಲು ಸಾಧ್ಯವಾಗಲಾರದೆಂದು ಸೌಲನು ದಾವೀದನಿಗೆ ಹೇಳಿದಾಗ ಅವನು ಏನು ಹೇಳಿದನು?

 4. ದಾವೀದನು ಗೊಲ್ಯಾತನಿಗೆ ಕೊಟ್ಟ ಪ್ರತ್ಯುತ್ತರದಲ್ಲಿ ತನಗೆ ಯೆಹೋವನಲ್ಲಿದ್ದ ಭರವಸೆಯನ್ನು ಹೇಗೆ ವ್ಯಕ್ತಪಡಿಸುತ್ತಾನೆ?

 5. ನೀವು ಚಿತ್ರದಲ್ಲಿ ನೋಡುವಂತೆ, ಗೊಲ್ಯಾತನನ್ನು ಕೊಲ್ಲಲು ದಾವೀದನು ಏನನ್ನು ಉಪಯೋಗಿಸುತ್ತಾನೆ, ಮತ್ತು ಇದರ ನಂತರ ಫಿಲಿಷ್ಟಿಯರಿಗೆ ಏನು ಸಂಭವಿಸುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಒಂದನೆಯ ಸಮುವೇಲ 17:1-54 ಓದಿ.

  1. (ಎ) ದಾವೀದನ ಧೈರ್ಯದ ರಹಸ್ಯವೇನಾಗಿತ್ತು, ಮತ್ತು ನಾವು ಅವನ ಧೈರ್ಯವನ್ನು ಹೇಗೆ ಅನುಕರಿಸಬಲ್ಲೆವು? (1 ಸಮು. 17:37, 45; ಎಫೆ. 6:10, 11)

  2. (ಬಿ) ಕ್ರೈಸ್ತರು ಆಟಗಳಲ್ಲಿ ಅಥವಾ ವಿನೋದಕ್ರೀಡೆಯಲ್ಲಿ ಪಾಲ್ಗೊಳ್ಳುವಾಗ ಗೊಲ್ಯಾತನಿಗಿದ್ದಂಥ ಸ್ಪರ್ಧಾತ್ಮಕ ಮನೋಭಾವವನ್ನು ತೋರಿಸಬಾರದೇಕೆ? (1 ಸಮು. 17:8; ಗಲಾ. 5:26; 1 ತಿಮೊ. 4:8)

  3. (ಸಿ) ದಾವೀದನಿಗೆ ದೇವರ ಬೆಂಬಲದಲ್ಲಿ ನಂಬಿಕೆಯಿತ್ತೆಂಬುದನ್ನು ಅವನ ಮಾತುಗಳು ಹೇಗೆ ಸೂಚಿಸುತ್ತವೆ? (1 ಸಮು. 17:45-47; 2 ಪೂರ್ವ. 20:15)

  4. (ಡಿ) ಈ ಯುದ್ಧವು ಕೇವಲ ಎರಡು ಶತ್ರುಸೈನ್ಯಗಳ ನಡುವಣ ಕಾದಾಟವಲ್ಲ, ಬದಲಾಗಿ ಸುಳ್ಳು ದೇವರುಗಳ ಮತ್ತು ಸತ್ಯ ದೇವರಾದ ಯೆಹೋವನ ಮಧ್ಯೆ ನಡೆದ ಒಂದು ಹೋರಾಟವಾಗಿತ್ತೆಂಬುದನ್ನು ಈ ವೃತ್ತಾಂತವು ಹೇಗೆ ತೋರಿಸುತ್ತದೆ? (1 ಸಮು. 17:43, 46, 47)

  5. (ಇ) ಯೆಹೋವನಲ್ಲಿ ಭರವಸೆಯಿಡುವ ವಿಷಯದಲ್ಲಿ ಅಭಿಷಿಕ್ತ ಉಳಿಕೆಯವರು ದಾವೀದನ ಮಾದರಿಯನ್ನು ಹೇಗೆ ಅನುಕರಿಸುತ್ತಾರೆ? (1 ಸಮು. 17:37; ಯೆರೆ. 1:17-19; ಪ್ರಕ. 12:17)

ಕಥೆ 59

ದಾವೀದನು ಓಡಿಹೋಗಲು ಕಾರಣ

 1. ಸೌಲನು ದಾವೀದನ ಮೇಲೆ ಏಕೆ ಹೊಟ್ಟೆಕಿಚ್ಚುಪಡುತ್ತಾನೆ, ಆದರೆ ಸೌಲನ ಮಗನಾದ ಯೋನಾತಾನನು ಹೇಗೆ ಭಿನ್ನನಾಗಿದ್ದಾನೆ?

 2. ಒಂದು ದಿನ ದಾವೀದನು ಸೌಲನಿಗಾಗಿ ಕಿನ್ನರಿ ಬಾರಿಸುತ್ತಿರುವಾಗ ಏನು ಸಂಭವಿಸುತ್ತದೆ?

 3. ತನ್ನ ಮಗಳಾದ ಮೀಕಲಳನ್ನು ದಾವೀದನು ಮದುವೆಯಾಗುವುದಕ್ಕೆ ಮುಂಚೆ ಅವನೇನು ಮಾಡಬೇಕೆಂದು ಸೌಲನು ಹೇಳುತ್ತಾನೆ, ಮತ್ತು ಅವನು ಹಾಗೆ ಹೇಳಲು ಕಾರಣವೇನು?

 4. ಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ, ದಾವೀದನು ಸೌಲನಿಗಾಗಿ ಕಿನ್ನರಿಯನ್ನು ಬಾರಿಸುತ್ತಿದ್ದಾಗ ಮೂರನೆಯ ಬಾರಿ ಏನು ಸಂಭವಿಸುತ್ತದೆ?

 5. ದಾವೀದನ ಜೀವವನ್ನು ಕಾಪಾಡಲು ಮೀಕಲಳು ಹೇಗೆ ಸಹಾಯಮಾಡಿದಳು, ಮತ್ತು ಅನಂತರ ಏಳು ವರ್ಷಗಳ ವರೆಗೆ ದಾವೀದನು ಏನು ಮಾಡಬೇಕಾಗುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಒಂದನೆಯ ಸಮುವೇಲ 18:1-30 ಓದಿ.

  1. (ಎ) ದಾವೀದನ ಮೇಲೆ ಯೋನಾತಾನನಿಗಿದ್ದ ಅಚಲ ಪ್ರೀತಿಯು, ‘ಬೇರೆ ಕುರಿಗಳ’ ಮತ್ತು ‘ಚಿಕ್ಕ ಹಿಂಡಿನ’ ಮಧ್ಯೆಯಿರುವ ಅನ್ಯೋನ್ಯ ಪ್ರೀತಿಯನ್ನು ಹೇಗೆ ಮುನ್‌ಚಿತ್ರಿಸಿತು? (1 ಸಮು. 18:1; ಯೋಹಾ. 10:16; ಲೂಕ 12:32; ಜೆಕ. 8:23)

  2. (ಬಿ) ಯೋನಾತಾನನೇ ಸೌಲನ ವಾರಸುದಾರನಾಗಿದ್ದರೂ, ಅರಸನ ಸ್ಥಾನಕ್ಕೆ ಆಯ್ಕೆಮಾಡಲ್ಪಟ್ಟವನಿಗೆ ಯೋನಾತಾನನು ತೋರಿಸಿದ ಎದ್ದುಕಾಣುವ ಅಧೀನತೆಯನ್ನು 1 ಸಮುವೇಲ 18:4 ಹೇಗೆ ತೋರಿಸುತ್ತದೆ?

  3. (ಸಿ) ಹೊಟ್ಟೆಕಿಚ್ಚು ಅಥವಾ ಮತ್ಸರವು ಘೋರ ಪಾಪಕ್ಕೆ ನಡೆಸಬಲ್ಲದು ಎಂಬುದನ್ನು ಸೌಲನ ಮಾದರಿಯು ಹೇಗೆ ತೋರಿಸುತ್ತದೆ, ಮತ್ತು ಇದು ನಮಗೆ ಯಾವ ಎಚ್ಚರಿಕೆಯನ್ನು ಕೊಡುತ್ತದೆ? (1 ಸಮು. 18:7-9, 25; ಯಾಕೋ. 3:14-16)

 2. ಒಂದನೆಯ ಸಮುವೇಲ 19:1-17 ಓದಿ.

  ಯೋನಾತಾನನು ಸೌಲನ ಮುಂದೆ ನಿಂತು ಮಾತಾಡಿದಾಗ ತನ್ನ ಜೀವವನ್ನು ಹೇಗೆ ಗಂಡಾಂತರಕ್ಕೊಡ್ಡಿದನು? (1 ಸಮು. 19:1, 4-6; ಜ್ಞಾನೋ. 16:14)

ಕಥೆ 60

ಅಬೀಗೈಲ್‌ ಮತ್ತು ದಾವೀದ

 1. ಚಿತ್ರದಲ್ಲಿ, ದಾವೀದನನ್ನು ಎದುರುಗೊಳ್ಳಲು ಬರುತ್ತಿರುವ ಸ್ತ್ರೀಯ ಹೆಸರೇನು, ಮತ್ತು ಅವಳ ಸ್ವಭಾವವೇನು?

 2. ನಾಬಾಲನು ಯಾರು?

 3. ನಾಬಾಲನಿಂದ ಒಂದು ಉಪಕಾರವನ್ನು ಕೇಳಲಿಕ್ಕಾಗಿ ದಾವೀದನು ತನ್ನ ಜನರಲ್ಲಿ ಕೆಲವರನ್ನು ಏಕೆ ಕಳುಹಿಸುತ್ತಾನೆ?

 4. ನಾಬಾಲನು ದಾವೀದನ ಜನರಿಗೆ ಏನು ಹೇಳುತ್ತಾನೆ, ಮತ್ತು ದಾವೀದನು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ?

 5. ತಾನೊಬ್ಬಳು ಬುದ್ಧಿವಂತೆಯೆಂಬುದನ್ನು ಅಬೀಗೈಲಳು ಹೇಗೆ ತೋರಿಸಿಕೊಡುತ್ತಾಳೆ?

ಹೆಚ್ಚಿನ ಪ್ರಶ್ನೆಗಳು:

 1. ಒಂದನೆಯ ಸಮುವೇಲ 22:1-4 ಓದಿ.

  ಕ್ರೈಸ್ತ ಸಹೋದರತ್ವದಲ್ಲಿ ನಾವು ಒಬ್ಬೊರಿಗೊಬ್ಬರು ಸಹಾಯಮಾಡಬೇಕೆಂಬುದರ ಕುರಿತು ದಾವೀದನ ಕುಟುಂಬವು ಹೇಗೆ ಒಂದು ಉತ್ತಮ ಮಾದರಿಯನ್ನಿಟ್ಟಿದೆ? (ಜ್ಞಾನೋ. 17:17; 1 ಥೆಸ. 5:14)

 2. ಒಂದನೆಯ ಸಮುವೇಲ 25:1-43 ಓದಿ.

  1. (ಎ) ನಾಬಾಲನನ್ನು ಏಕೆ ತುಂಬ ತುಚ್ಛವಾಗಿ ವರ್ಣಿಸಲಾಗಿದೆ? (1 ಸಮು. 25:2-5, 10, 14, 21, 25)

  2. (ಬಿ) ಅಬೀಗೈಲಳ ಮಾದರಿಯಿಂದ ಇಂದು ಕ್ರೈಸ್ತ ಪತ್ನಿಯರು ಏನನ್ನು ಕಲಿಯಸಾಧ್ಯವಿದೆ? (1 ಸಮು. 25:32, 33; ಜ್ಞಾನೋ. 31:26; ಎಫೆ. 5:24)

  3. (ಸಿ) ದಾವೀದನು ಯಾವ ಎರಡು ಅಪರಾಧಗಳನ್ನು ಮಾಡದಂತೆ ಅಬೀಗೈಲಳು ತಡೆದಳು? (1 ಸಮು. 25:31, 33; ರೋಮಾ. 12:19; ಎಫೆ. 4:26)

  4. (ಡಿ) ಅಬೀಗೈಲಳ ಮಾತಿಗೆ ದಾವೀದನು ತೋರಿಸಿದ ಪ್ರತಿಕ್ರಿಯೆಯು, ಸ್ತ್ರೀಯರ ಕಡೆಗೆ ಯೆಹೋವನಿಗಿರುವ ದೃಷ್ಟಿಕೋನವನ್ನೇ ಹೊಂದಿರುವಂತೆ ಇಂದು ಪುರುಷರಿಗೆ ಹೇಗೆ ಸಹಾಯಮಾಡುತ್ತದೆ? (ಅ. ಕೃ. 21:8, 9; ರೋಮಾ. 2:11; 1 ಪೇತ್ರ 3:7)

ಕಥೆ 61

ದಾವೀದನು ಅರಸನಾಗುತ್ತಾನೆ

 1. ಸೌಲನು ತನ್ನ ಪಾಳೆಯದಲ್ಲಿ ನಿದ್ದೆಮಾಡುತ್ತಿದ್ದಾಗ ದಾವೀದನೂ ಅಬೀಷೈಯೂ ಏನು ಮಾಡಿದರು?

 2. ದಾವೀದನು ಸೌಲನಿಗೆ ಯಾವ ಪ್ರಶ್ನೆಗಳನ್ನು ಕೇಳುತ್ತಾನೆ?

 3. ಸೌಲನನೊಂದಿಗೆ ಮಾತಾಡಿದ ಬಳಿಕ ದಾವೀದನು ಎಲ್ಲಿಗೆ ಹೋಗುತ್ತಾನೆ?

 4. ದಾವೀದನಿಗೆ ತುಂಬಾ ದುಃಖವನ್ನುಂಟುಮಾಡಿ ಅವನೊಂದು ಸುಂದರ ಗೀತೆಯನ್ನು ರಚಿಸುವಂತೆ ಮಾಡಿದ ವಿಷಯ ಯಾವುದು?

 5. ದಾವೀದನು ಹೆಬ್ರೋನಿನಲ್ಲಿ ಅರಸನಾಗಿ ಮಾಡಲ್ಪಟ್ಟಾಗ ಅವನಿಗೆ ಎಷ್ಟು ವಯಸ್ಸು, ಮತ್ತು ಅವನ ಕೆಲವು ಪುತ್ರರ ಹೆಸರೇನು?

 6. ದಾವೀದನು ತದನಂತರ ಎಲ್ಲಿ ಅರಸನಾಗಿ ಆಳುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ಒಂದನೆಯ ಸಮುವೇಲ 26:1-25 ಓದಿ.

  1. (ಎ) ಒಂದನೆಯ ಸಮುವೇಲ 26:11 ರಲ್ಲಿರುವ ದಾವೀದನ ಮಾತುಗಳು, ದೇವಪ್ರಭುತ್ವಾತ್ಮಕ ಕ್ರಮದ ಕಡೆಗೆ ಯಾವ ಮನೋಭಾವವನ್ನು ತಿಳಿಯಪಡಿಸುತ್ತದೆ? (ಕೀರ್ತ. 37:7; ರೋಮಾ. 13:2)

  2. (ಬಿ) ಪ್ರೀತಿಪೂರ್ವಕ ದಯೆ ತೋರಿಸಲಿಕ್ಕಾಗಿ ನಾವು ಶ್ರದ್ಧೆಯಿಂದ ಪ್ರಯತ್ನಿಸುವಾಗ ಇತರರು ಅದಕ್ಕೆ ಗಣ್ಯತೆ ತೋರಿಸದಿರುವಾಗಲೂ ಯೋಗ್ಯ ದೃಷ್ಟಿಕೋನವನ್ನು ಕಾಪಾಡಿಕೊಳ್ಳುವಂತೆ 1 ಸಮುವೇಲ 26:23 ರ ದಾವೀದನ ಮಾತುಗಳು ಹೇಗೆ ಸಹಾಯಮಾಡುತ್ತವೆ? (1 ಅರ. 8:32; ಕೀರ್ತ. 18:20)

 2. ಎರಡನೆಯ ಸಮುವೇಲ 1:26 ಓದಿ.

  ದಾವೀದ ಮತ್ತು ಯೋನಾತಾನರಿಗಿದ್ದ “ಯಥಾರ್ಥವಾದ ಪ್ರೀತಿ”ಯನ್ನೇ ಇಂದು ಕ್ರೈಸ್ತರು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ? (1 ಪೇತ್ರ 4:8; ಕೊಲೊ. 3:14; 1 ಯೋಹಾ. 4:12)

 3. ಎರಡನೆಯ ಸಮುವೇಲ 5:1-10 ಓದಿ.

  1. (ಎ) ದಾವೀದನು ಒಟ್ಟು ಎಷ್ಟು ವರುಷ ಅರಸನಾಗಿ ಆಳಿದನು, ಮತ್ತು ಈ ಸಮಯಾವಧಿಯು ಹೇಗೆ ವಿಭಾಗಿಸಲ್ಪಟ್ಟಿತ್ತು? (2 ಸಮು. 5:4, 5)

  2. (ಬಿ) ದಾವೀದನು ಅಭಿವೃದ್ಧಿ ಹೊಂದಿದಕ್ಕಾಗಿ ಕೀರ್ತಿಯನ್ನು ಯಾರಿಗೆ ಸಲ್ಲಿಸಲಾಗಿದೆ, ಮತ್ತು ಇದು ಇಂದು ನಮಗೆ ಯಾವ ಮರುಜ್ಞಾಪನವನ್ನು ಕೊಡುತ್ತದೆ? (2 ಸಮು. 5:10; 1 ಸಮು. 16:13; 1 ಕೊರಿಂ. 1:31; ಫಿಲಿ. 4:13)

ಕಥೆ 62

ದಾವೀದನ ಮನೆಯಲ್ಲಿ ತೊಂದರೆ

 1. ಯೆಹೋವನ ಸಹಾಯದಿಂದ ಕೊನೆಗೂ ಕಾನಾನ್‌ ದೇಶ ಏನಾಗುತ್ತದೆ?

 2. ಒಂದು ಸಂಜೆ ದಾವೀದನು ತನ್ನ ಅರಮನೆಯ ಮಾಳಿಗೆಯ ಮೇಲಿರುವಾಗ ಏನಾಗುತ್ತದೆ?

 3. ಯೆಹೋವನು ದಾವೀದನ ಮೇಲೆ ಏಕೆ ಬಹಳ ಸಿಟ್ಟುಗೊಳ್ಳುತ್ತಾನೆ?

 4. ಚಿತ್ರದಲ್ಲಿ ತೋರಿಸಲ್ಪಟ್ಟಂತೆ ದಾವೀದನ ತಪ್ಪುಗಳನ್ನು ತಿಳಿಸಲಿಕ್ಕಾಗಿ ಯೆಹೋವನು ಯಾರನ್ನು ಕಳುಹಿಸುತ್ತಾನೆ, ಮತ್ತು ದಾವೀದನಿಗೆ ಏನು ಸಂಭವಿಸುವುದೆಂದು ಆ ವ್ಯಕ್ತಿ ಹೇಳುತ್ತಾನೆ?

 5. ದಾವೀದನಿಗೆ ಯಾವ ತೊಂದರೆಯುಂಟಾಗುತ್ತದೆ?

 6. ದಾವೀದನ ನಂತರ ಯಾರು ಇಸ್ರಾಯೇಲಿನ ಅರಸನಾಗುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ಎರಡನೆಯ ಸಮುವೇಲ 11:1-27 ಓದಿ.

  1. (ಎ) ಯೆಹೋವನ ಸೇವೆಯಲ್ಲಿ ಕಾರ್ಯಮಗ್ನರಾಗಿರುವುದು ನಮಗೆ ಹೇಗೆ ಸಂರಕ್ಷಣೆ ನೀಡುತ್ತದೆ?

  2. (ಬಿ) ದಾವೀದನು ಪಾಪಮಾಡುವಂತೆ ಹೇಗೆ ಸೆಳೆಯಲ್ಪಟ್ಟನು, ಮತ್ತು ಇದು ಇಂದಿರುವ ಯೆಹೋವನ ಸೇವಕರಿಗೆ ಯಾವ ಎಚ್ಚರಿಕೆಯನ್ನು ಕೊಡುತ್ತದೆ? (2 ಸಮು. 11:2; ಮತ್ತಾ. 5:27-29; 1 ಕೊರಿಂ. 10:12; ಯಾಕೋ. 1:14, 15)

 2. ಎರಡನೆಯ ಸಮುವೇಲ 12:1-18 ಓದಿ.

  1. (ಎ) ನಾತಾನನು ದಾವೀದನಿಗೆ ಸಲಹೆಯನ್ನು ಕೊಟ್ಟ ವಿಧದಿಂದ ಹಿರಿಯರು ಮತ್ತು ಹೆತ್ತವರು ಯಾವ ಪಾಠವನ್ನು ಕಲಿಯಸಾಧ್ಯವಿದೆ? (2 ಸಮು. 12:1-4; ಜ್ಞಾನೋ. 12:18; ಮತ್ತಾ. 13:34)

  2. (ಬಿ) ಯೆಹೋವನು ದಾವೀದನ ವಿಷಯದಲ್ಲಿ ಏಕೆ ದಯೆಯಿಂದ ವರ್ತಿಸಿದನು? (2 ಸಮು. 12:13; ಕೀರ್ತ. 32:5; 2 ಕೊರಿಂ. 7:9, 10)

ಕಥೆ 63

ವಿವೇಕಿ ಅರಸ ಸೊಲೊಮೋನ

 1. ಯೆಹೋವನು ಸೊಲೊಮೋನನಿಗೆ ಯಾವ ಪ್ರಶ್ನೆ ಕೇಳುತ್ತಾನೆ, ಮತ್ತು ಸೊಲೊಮೋನನು ಏನೆಂದು ಉತ್ತರಕೊಡುತ್ತಾನೆ?

 2. ಸೊಲೊಮೋನನು ಕೇಳಿಕೊಂಡದ್ದನ್ನು ಯೆಹೋವನು ಮೆಚ್ಚಿದ್ದರಿಂದ ಯಾವ ಆಶೀರ್ವಾದಗಳನ್ನು ಕೊಡುತ್ತೇನೆಂದು ವಚನಕೊಡುತ್ತಾನೆ?

 3. ಇಬ್ಬರು ಸ್ತ್ರೀಯರು ಯಾವ ಕಷ್ಟಕರ ಸಮಸ್ಯೆಯನ್ನು ಬಗೆಹರಿಸುವಂತೆ ಸೊಲೊಮೋನನನ್ನು ಕೇಳಿಕೊಳ್ಳುತ್ತಾರೆ?

 4. ನೀವು ಚಿತ್ರದಲ್ಲಿ ನೋಡುವಂತೆ, ಸೊಲೊಮೋನನು ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾನೆ?

 5. ಸೊಲೊಮೋನನ ಆಳ್ವಿಕೆಯ ಸಮಯ ಹೇಗಿತ್ತು, ಮತ್ತು ಏಕೆ?

ಹೆಚ್ಚಿನ ಪ್ರಶ್ನೆಗಳು:

 1. ಒಂದನೆಯ ಅರಸುಗಳು 3:3-28 ಓದಿ.

  1. (ಎ) 1 ಅರಸುಗಳು 3:7, 8 ರಲ್ಲಿರುವ ಸೊಲೊಮೋನನ ಹೃತ್ಪೂರ್ವಕ ಅಭಿವ್ಯಕ್ತಿಯಿಂದ ಇಂದು ಯೆಹೋವನ ಸಂಘಟನೆಯಲ್ಲಿರುವ ಜವಾಬ್ದಾರಿಯುತ ಪುರುಷರು ಏನನ್ನು ಕಲಿಯಸಾಧ್ಯವಿದೆ? (ಕೀರ್ತ. 119:105; ಜ್ಞಾನೋ. 3:5, 6)

  2. (ಬಿ) ಪ್ರಾರ್ಥನೆಯಲ್ಲಿ ಕೇಳಿಕೊಳ್ಳಬೇಕಾದ ಯೋಗ್ಯ ವಿಷಯಗಳ ಕುರಿತು ಸೊಲೊಮೋನನ ಬಿನ್ನಹವು ಹೇಗೆ ಒಂದು ಉತ್ತಮ ಉದಾಹರಣೆಯಾಗಿದೆ? (1 ಅರ. 3:9, 11; ಜ್ಞಾನೋ. 30:8, 9; 1 ಯೋಹಾ. 5:14)

  3. (ಸಿ) ಇಬ್ಬರು ಸ್ತ್ರೀಯರ ಜಗಳವನ್ನು ಸೊಲೊಮೋನನು ಬಗೆಹರಿಸಿದ ರೀತಿಯು, ಭವಿಷ್ಯತ್ತಿನಲ್ಲಿ ಮಹಾ ಸೊಲೊಮೋನನಾದ ಯೇಸು ಕ್ರಿಸ್ತನು ನಡೆಸಲಿರುವ ಆಳ್ವಿಕೆಯ ಕುರಿತು ನಮಗೆ ಯಾವ ಭರವಸೆಯನ್ನು ಕೊಡುತ್ತದೆ? (1 ಅರ. 3:28; ಯೆಶಾ. 9:6, 7; 11:2-4)

 2. ಒಂದನೆಯ ಅರಸುಗಳು 4:29-34 ಓದಿ.

  1. (ಎ) ವಿವೇಕ ಅಥವಾ ವಿಧೇಯ ಹೃದಯಕ್ಕಾಗಿ ಸೊಲೊಮೋನನು ಮಾಡಿದ ವಿನಂತಿಯನ್ನು ಯೆಹೋವನು ಹೇಗೆ ಉತ್ತರಿಸಿದನು? (1 ಅರ. 4:29)

  2. (ಬಿ) ಜನರು ಸೊಲೊಮೋನನ ವಿವೇಕದ ಕುರಿತು ಕೇಳಿಸಿಕೊಳ್ಳಲಿಕ್ಕಾಗಿ ಅಷ್ಟೊಂದು ಪ್ರಯತ್ನಮಾಡಿರುವುದಾದರೆ ದೇವರ ವಾಕ್ಯವನ್ನು ಅಧ್ಯಯನ ಮಾಡುವ ವಿಷಯದಲ್ಲಿ ನಮ್ಮ ಮನೋಭಾವ ಹೇಗಿರಬೇಕು? (1 ಅರ. 4:29, 34; ಯೋಹಾ. 17:3; 2 ತಿಮೊ. 3:16)

ಕಥೆ 64

ಸೊಲೊಮೋನನು ದೇವಾಲಯ ಕಟ್ಟುತ್ತಾನೆ

 1. ಸೊಲೊಮೋನನಿಗೆ ಯೆಹೋವನ ಆಲಯವನ್ನು ಕಟ್ಟಿಮುಗಿಸಲು ಎಷ್ಟು ಸಮಯ ಹಿಡಿಯುತ್ತದೆ, ಮತ್ತು ಅದನ್ನು ಕಟ್ಟಲು ಬಹಳಷ್ಟು ಹಣ ತಗಲುತ್ತದೆ ಏಕೆ?

 2. ಆಲಯದಲ್ಲಿ ಎಷ್ಟು ಮುಖ್ಯ ಕೋಣೆಗಳಿವೆ, ಮತ್ತು ಒಳಗಿನ ಕೋಣೆಯಲ್ಲಿ ಏನನ್ನು ಇಡಲಾಯಿತು?

 3. ಆಲಯವು ಕಟ್ಟಿಮುಗಿಸಲ್ಪಟ್ಟಾಗ ಸೊಲೊಮೋನನು ಪ್ರಾರ್ಥನೆಯಲ್ಲಿ ಏನು ಹೇಳುತ್ತಾನೆ?

 4. ಸೊಲೊಮೋನನ ಪ್ರಾರ್ಥನೆಯನ್ನು ತಾನು ಮೆಚ್ಚಿದ್ದೇನೆಂದು ಯೆಹೋವನು ಹೇಗೆ ತೋರಿಸುತ್ತಾನೆ?

 5. ಸೊಲೊಮೋನನು ಏನು ಮಾಡುವಂತೆ ಅವನ ಪತ್ನಿಯರು ಮನವೊಲಿಸುತ್ತಾರೆ, ಮತ್ತು ಸೊಲೊಮೋನನಿಗೆ ಏನಾಗುತ್ತದೆ?

 6. ಯೆಹೋವನು ಸೊಲೊಮೋನನ ಮೇಲೆ ಏಕೆ ಸಿಟ್ಟುಗೊಳ್ಳುತ್ತಾನೆ, ಮತ್ತು ಅವನಿಗೆ ಏನು ಹೇಳುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ಒಂದನೆಯ ಪೂರ್ವಕಾಲವೃತ್ತಾಂತ 28:9, 10 ಓದಿ.

  ಒಂದನೇ ಪೂರ್ವಕಾಲವೃತ್ತಾಂತ 28:9, 10 ರಲ್ಲಿರುವ ದಾವೀದನ ಮಾತುಗಳಿಗನುಸಾರ ನಮ್ಮ ದಿನನಿತ್ಯದ ಜೀವಿತಗಳಲ್ಲಿ ನಾವು ಏನನ್ನು ಮಾಡಲು ಹೆಣಗಾಡಬೇಕು? (ಕೀರ್ತ. 19:14; ಫಿಲಿ. 4:8, 9)

 2. ಎರಡನೆಯ ಪೂರ್ವಕಾಲವೃತ್ತಾಂತ 6:12-21, 32-42 ಓದಿ.

  1. (ಎ) ಯಾವುದೇ ಮಾನವ-ನಿರ್ಮಿತ ಕಟ್ಟಡದಲ್ಲಿ ಸರ್ವೋನ್ನತನಾದ ದೇವರು ವಾಸಿಸಸಾಧ್ಯವಿಲ್ಲವೆಂದು ಸೊಲೊಮೋನನು ಹೇಗೆ ತೋರಿಸಿದನು? (2 ಪೂರ್ವ. 6:18; ಅ. ಕೃ. 17:24, 25)

  2. (ಬಿ) 2 ಪೂರ್ವಕಾಲವೃತ್ತಾಂತ 6:32, 33 ರಲ್ಲಿರುವ ಸೊಲೊಮೋನನ ಮಾತುಗಳು ಯೆಹೋವನ ಬಗ್ಗೆ ಏನನ್ನು ತಿಳಿಯಪಡಿಸುತ್ತವೆ? (ಅ. ಕೃ. 10:34, 35; ಗಲಾ. 2:6)

 3. ಎರಡನೆಯ ಪೂರ್ವಕಾಲವೃತ್ತಾಂತ 7:1-5 ಓದಿ.

  ಯೆಹೋವನ ತೇಜಸ್ಸನ್ನು ನೋಡಿ ಆತನಿಗೆ ಸ್ತುತಿಯನ್ನು ಸಲ್ಲಿಸುವಂತೆ ಪ್ರಚೋದಿಸಲ್ಪಟ್ಟ ಇಸ್ರಾಯೇಲ್ಯರಂತೆ, ನಾವಿಂದು ಯೆಹೋವನು ತನ್ನ ಜನರ ಮೇಲೆ ಸುರಿಸಿರುವ ಆಶೀರ್ವಾದಗಳ ಕುರಿತು ಯೋಚಿಸುವಾಗ ಹೇಗೆ ಪ್ರಚೋದಿಸಲ್ಪಡಬೇಕು? (2 ಪೂರ್ವ. 7:3; ಕೀರ್ತ. 22:22; 34:1; 96:2)

 4. ಒಂದನೆಯ ಅರಸುಗಳು 11:9-13 ಓದಿ.

  ಕೊನೆವರೆಗೂ ನಾವು ನಂಬಿಗಸ್ತರಾಗಿ ಉಳಿಯುವುದರ ಪ್ರಮುಖತೆಯನ್ನು ಸೊಲೊಮೋನನ ಜೀವನ ಮಾರ್ಗವು ಹೇಗೆ ತೋರಿಸುತ್ತದೆ? (1 ಅರ. 11:4, 9; ಮತ್ತಾ. 10:22; ಪ್ರಕ. 2:10)

ಕಥೆ 65

ರಾಜ್ಯವು ಇಬ್ಭಾಗವಾಗುತ್ತದೆ

 1. ಚಿತ್ರದಲ್ಲಿರುವ ಇಬ್ಬರು ಪುರುಷರ ಹೆಸರೇನು, ಮತ್ತು ಅವರು ಯಾರು?

 2. ಅಹೀಯನು ತಾನು ಧರಿಸಿದ್ದ ಅಂಗಿಯನ್ನು ತೆಗೆದು ಏನು ಮಾಡುತ್ತಾನೆ, ಮತ್ತು ಆ ಕೃತ್ಯದ ಅರ್ಥವೇನು?

 3. ಸೊಲೊಮೋನನು ಯಾರೊಬ್ಬಾಮನಿಗೆ ಏನು ಮಾಡಲು ಪ್ರಯತ್ನಿಸುತ್ತಾನೆ?

 4. ಜನರು ಯಾರೊಬ್ಬಾಮನನ್ನು ಹತ್ತು ಕುಲಗಳ ಮೇಲೆ ಅರಸನನ್ನಾಗಿ ಏಕೆ ಮಾಡುತ್ತಾರೆ?

 5. ಯಾರೊಬ್ಬಾಮನು ಬಂಗಾರದ ಎರಡು ಬಸವನ ಮೂರ್ತಿಗಳನ್ನು ಏಕೆ ಮಾಡುತ್ತಾನೆ, ಮತ್ತು ಬಲುಬೇಗನೆ ದೇಶಕ್ಕೆ ಏನು ಸಂಭವಿಸುತ್ತದೆ?

 6. ಎರಡು-ಕುಲಗಳ ರಾಜ್ಯಕ್ಕೂ ಯೆರೂಸಲೇಮಿನಲ್ಲಿದ್ದ ಯೆಹೋವನ ಆಲಯಕ್ಕೂ ಏನು ಸಂಭವಿಸುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಒಂದನೆಯ ಅರಸುಗಳು 11:26-43 ಓದಿ.

  ಯಾರೊಬ್ಬಾಮನು ಎಂತಹ ವ್ಯಕ್ತಿಯಾಗಿದ್ದನು, ಮತ್ತು ತನ್ನ ನಿಯಮಗಳನ್ನು ಕೈಗೊಂಡು ನಡೆದಲ್ಲಿ ತಾನೇನು ಮಾಡುವನೆಂದು ಯೆಹೋವನು ವಾಗ್ದಾನಿಸಿದನು? (1 ಅರ. 11:28, 38)

 2. ಒಂದನೆಯ ಅರಸುಗಳು 12:1-33 ಓದಿ.

  1. (ಎ) ಹೆತ್ತವರು ಮತ್ತು ಹಿರಿಯರು ಅಧಿಕಾರದ ದುರುಪಯೋಗದ ಕುರಿತು ರೆಹಬ್ಬಾಮನ ಕೆಟ್ಟ ಮಾದರಿಯಿಂದ ಏನನ್ನು ಕಲಿತುಕೊಳ್ಳಸಾಧ್ಯವಿದೆ? (1 ಅರ. 12:13; ಪ್ರಸಂ. 7:7; 1 ಪೇತ್ರ 5:2, 3)

  2. (ಬಿ) ಯುವ ಜನರು ಜೀವನದಲ್ಲಿ ಗಂಭೀರ ನಿರ್ಣಯಗಳನ್ನು ಮಾಡುವಾಗ ಭರವಸಾರ್ಹ ಮಾರ್ಗದರ್ಶನೆಗಾಗಿ ಇಂದು ಯಾರ ಕಡೆಗೆ ನೋಡಬೇಕು? (1 ಅರ. 12:6, 7; ಜ್ಞಾನೋ. 1:8, 9; 2 ತಿಮೊ. 3:16, 17; ಇಬ್ರಿ. 13:7)

  3. (ಸಿ) ಬಸವನ ಆರಾಧನೆಗಾಗಿ ಎರಡು ಕೇಂದ್ರಗಳನ್ನು ರಚಿಸುವಂತೆ ಯಾರೊಬ್ಬಾಮನನ್ನು ಯಾವುದು ಪ್ರೇರಿಸಿತು, ಮತ್ತು ಇದು ಅವನಿಗೆ ಯೆಹೋವನ ಮೇಲೆ ಸ್ವಲ್ಪವೂ ನಂಬಿಕೆಯಿಲ್ಲದ್ದನ್ನೂ ಹೇಗೆ ತೋರಿಸಿತು? (1 ಅರ. 11:37; 12:26-28)

  4. (ಡಿ) ಹತ್ತು-ಕುಲಗಳ ರಾಜ್ಯದ ಜನರು ಸತ್ಯಾರಾಧನೆಯ ವಿರುದ್ಧ ದಂಗೆಯೇಳುವಂತೆ ಮಾಡಿದವನು ಯಾರು? (1 ಅರ. 12:32, 33)

ಕಥೆ 66

ದುಷ್ಟ ರಾಣಿ ಈಜೆಬೆಲ್‌

 1. ಈಜೆಬೆಲಳು ಯಾರು?

 2. ಒಂದು ದಿನ ಅರಸನಾದ ಅಹಾಬನು ಏಕೆ ಬೇಸರದಿಂದಿರುತ್ತಾನೆ?

 3. ತನ್ನ ಗಂಡನಿಗಾಗಿ ನಾಬೋತನ ದ್ರಾಕ್ಷೇತೋಟವನ್ನು ಪಡೆದುಕೊಳ್ಳಲು ಈಜೆಬೆಲಳು ಏನು ಮಾಡುತ್ತಾಳೆ?

 4. ಈಜೆಬೆಲಳನ್ನು ಶಿಕ್ಷಿಸಲಿಕ್ಕಾಗಿ ಯೆಹೋವನು ಯಾರನ್ನು ಕಳುಹಿಸುತ್ತಾನೆ?

 5. ನೀವು ಚಿತ್ರದಲ್ಲಿ ನೋಡುವಂತೆ, ಯೇಹುವು ಈಜೆಬೆಲಳ ಅರಮನೆಯ ಬಳಿ ಬಂದಾಗ ಏನಾಗುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಒಂದನೆಯ ಅರಸುಗಳು 16:29-33 ಮತ್ತು 18:3, 4 ಓದಿ.

  ಅರಸನಾದ ಅಹಾಬನ ಸಮಯದಲ್ಲಿ ಇಸ್ರಾಯೇಲಿನಲ್ಲಿ ಪರಿಸ್ಥಿತಿಗಳು ಎಷ್ಟರಮಟ್ಟಿಗೆ ಕೆಟ್ಟುಹೋಗಿದ್ದವು? (1 ಅರ. 16:33)

 2. ಒಂದನೆಯ ಅರಸುಗಳು 21:1-16 ಓದಿ.

  1. (ಎ) ನಾಬೋತನು ಧೈರ್ಯವನ್ನೂ ಯೆಹೋವನಿಗೆ ನಿಷ್ಠೆಯನ್ನೂ ತೋರಿಸಿದ್ದು ಹೇಗೆ? (1 ಅರ. 21:1-3; ಯಾಜ. 25:23-28)

  2. (ಬಿ) ನಿರುತ್ಸಾಹವನ್ನು ನಿಭಾಯಿಸುವಾಗ ಏನು ಮಾಡಬಾರದೆಂದು ಅಹಾಬನ ಉದಾಹರಣೆಯಿಂದ ನಾವು ಕಲಿಯಸಾಧ್ಯವಿದೆ? (1 ಅರ. 21:4; ರೋಮಾ. 5:3-5)

 3. ಎರಡನೆಯ ಅರಸುಗಳು 9:30-37 ಓದಿ.

  ಯೆಹೋವನ ಚಿತ್ತವನ್ನು ಮಾಡುವುದರಲ್ಲಿ ಯೇಹು ತೋರಿಸಿದ ಹುರುಪಿನಿಂದ ನಾವು ಏನನ್ನು ಕಲಿಯಸಾಧ್ಯವಿದೆ? (2 ಅರ. 9:4-10; 2 ಕೊರಿಂ. 9:1, 2; 2 ತಿಮೊ. 4:2)

ಕಥೆ 67

ಯೆಹೋಷಾಫಾಟನು ಯೆಹೋವನಲ್ಲಿ ಭರವಸೆಯಿಡುತ್ತಾನೆ

 1. ಯೆಹೋಷಾಫಾಟನು ಯಾರು, ಮತ್ತು ಅವನು ಯಾವ ಸಮಯದಲ್ಲಿ ಜೀವಿಸುತ್ತಾನೆ?

 2. ಇಸ್ರಾಯೇಲ್ಯರು ಏಕೆ ಹೆದರಿದ್ದಾರೆ, ಮತ್ತು ಅನೇಕರು ಏನು ಮಾಡುತ್ತಾರೆ?

 3. ಯೆಹೋಷಾಫಾಟನ ಪ್ರಾರ್ಥನೆಗೆ ಯೆಹೋವನು ಏನೆಂದು ಉತ್ತರ ಕೊಡುತ್ತಾನೆ?

 4. ಯುದ್ಧಕ್ಕೆ ಮೊದಲು ಏನು ಸಂಭವಿಸುವಂತೆ ಯೆಹೋವನು ಮಾಡುತ್ತಾನೆ?

 5. ಯೆಹೋಷಾಫಾಟನಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?

ಹೆಚ್ಚಿನ ಪ್ರಶ್ನೆಗಳು:

 1. ಎರಡನೆಯ ಪೂರ್ವಕಾಲವೃತ್ತಾಂತ 20:1-30 ಓದಿ.

  1. (ಎ) ಅಪಾಯದ ಪರಿಸ್ಥಿತಿಗಳನ್ನು ಎದುರಿಸುವಾಗ, ದೇವರ ನಂಬಿಗಸ್ತ ಸೇವಕರು ಮಾಡಬೇಕಾಗಿರುವ ವಿಷಯವನ್ನು ಯೆಹೋಷಾಫಾಟನು ಹೇಗೆ ತೋರಿಸಿದನು? (2 ಪೂರ್ವ. 20:12; ಕೀರ್ತ. 25:15; 62:1)

  2. (ಬಿ) ಯೆಹೋವನು ತನ್ನ ಜನರೊಂದಿಗೆ ವ್ಯವಹರಿಸುವಾಗ ಯಾವಾಗಲೂ ಒಂದು ಸಂಪರ್ಕ ಮಾಧ್ಯಮವನ್ನು ಉಪಯೋಗಿಸಿರುವುದರಿಂದ, ಇಂದು ಆತನು ಯಾವ ಮಾಧ್ಯಮವನ್ನು ಉಪಯೋಗಿಸುತ್ತಿದ್ದಾನೆ? (2 ಪೂರ್ವ. 20:14, 15; ಮತ್ತಾ. 24:45-47; ಯೋಹಾ. 15:15)

  3. (ಸಿ) “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ”ವನ್ನು ದೇವರು ಆರಂಭಿಸುವಾಗ ನಮ್ಮ ಪರಿಸ್ಥಿತಿಯು ಯೆಹೋಷಾಫಾಟನ ಪರಿಸ್ಥಿತಿಯಂತಿರುವುದು ಹೇಗೆ? (2 ಪೂರ್ವ. 20:15, 17; 32:8; ಪ್ರಕ. 16:14, 16)

  4. (ಡಿ) ಲೇವಿಯರನ್ನು ಅನುಕರಿಸುತ್ತಾ ಪಯನೀಯರರು ಮತ್ತು ಮಿಷನೆರಿಗಳು ಇಂದು ಲೋಕವ್ಯಾಪಕ ಸಾರುವ ಕೆಲಸಕ್ಕೆ ಯಾವ ರೀತಿಯಲ್ಲಿ ಸಹಾಯಮಾಡುತ್ತಾರೆ? (2 ಪೂರ್ವ. 20:19, 21; ರೋಮಾ. 10:13-15; 2 ತಿಮೊ. 4:2)

ಕಥೆ 68

ಪುನಃ ಜೀವ ಪಡೆದ ಇಬ್ಬರು ಹುಡುಗರು

 1. ಚಿತ್ರದಲ್ಲಿರುವ ಆ ಮೂವರು ಯಾರು, ಮತ್ತು ಚಿಕ್ಕ ಹುಡುಗನಿಗೆ ಏನಾಗುತ್ತದೆ?

 2. ಎಲೀಯನು ಹುಡುಗನಿಗಾಗಿ ಏನೆಂದು ಪ್ರಾರ್ಥಿಸುತ್ತಾನೆ, ಮತ್ತು ನಂತರ ಏನಾಗುತ್ತದೆ?

 3. ಎಲೀಯನ ಸಹಾಯಕನ ಹೆಸರೇನು?

 4. ಶೂನೇಮ್‌ ಪಟ್ಟಣದಲ್ಲಿದ್ದ ಸ್ತ್ರೀಯೊಬ್ಬಳು ತನ್ನ ಮನೆಗೆ ಎಲೀಷನನ್ನು ಕರೆದುಕೊಂಡು ಬಂದದ್ದು ಯಾಕೆ?

 5. ಅಲ್ಲಿ ಎಲೀಷನು ಏನು ಮಾಡಿದನು, ಮತ್ತು ಸತ್ತ ಮಗುವಿಗೆ ಏನಾಗುತ್ತದೆ?

 6. ಎಲೀಯ ಮತ್ತು ಎಲೀಷನ ಮೂಲಕ ತೋರಿಸಲ್ಪಟ್ಟಂತೆ ಯೆಹೋವನಿಗೆ ಯಾವ ಶಕ್ತಿಯಿದೆ?

ಹೆಚ್ಚಿನ ಪ್ರಶ್ನೆಗಳು:

 1. ಒಂದನೆಯ ಅರಸುಗಳು 17:8-24 ಓದಿ.

  1. (ಎ) ಎಲೀಯನ ವಿಧೇಯತೆ ಮತ್ತು ನಂಬಿಕೆಯು ಹೇಗೆ ಪರೀಕ್ಷಿಸಲ್ಪಟ್ಟಿತು? (1 ಅರ. 17:8; 19:1-4, 10)

  2. (ಬಿ) ಚಾರೆಪ್ತಾ ಪಟ್ಟಣದ ವಿಧವೆಯ ನಂಬಿಕೆಯು ಏಕೆ ಎದ್ದುಕಾಣುವಂಥದ್ದಾಗಿತ್ತು? (1 ಅರ. 17:12-16; ಲೂಕ 4:25, 26)

  3. (ಸಿ) ಮತ್ತಾಯ 10:41, 42 ರಲ್ಲಿರುವ ಯೇಸುವಿನ ಮಾತುಗಳ ಸತ್ಯತೆಯನ್ನು ಚಾರೆಪ್ತಾ ಪಟ್ಟಣದ ವಿಧವೆಯ ಅನುಭವವು ಹೇಗೆ ದೃಢೀಕರಿಸುತ್ತದೆ? (1 ಅರ. 17:10-12, 17, 23, 24)

 2. ಎರಡನೆಯ ಅರಸುಗಳು 4:8-37 ಓದಿ.

  1. (ಎ) ಅತಿಥಿಸತ್ಕಾರದ ವಿಷಯದಲ್ಲಿ ಶೂನೇಮಿನ ಸ್ತ್ರೀಯಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ? (2 ಅರ. 4:8; ಲೂಕ 6:38; ರೋಮಾ. 12:13; 1 ಯೋಹಾ. 3:17)

  2. (ಬಿ) ನಾವು ಇಂದು ದೇವರ ಸೇವಕರಿಗೆ ಯಾವ ವಿಧಗಳಲ್ಲಿ ದಯೆಯನ್ನು ತೋರಿಸಸಾಧ್ಯವಿದೆ? (ಅ. ಕೃ. 20:35; 28:1, 2; ಗಲಾ. 6:9, 10; ಇಬ್ರಿ. 6:10)

ಕಥೆ 69

ಪರಾಕ್ರಮಶಾಲಿಗೆ ಚಿಕ್ಕ ಹುಡುಗಿ ಸಹಾಯಮಾಡುತ್ತಾಳೆ

 1. ಚಿತ್ರದಲ್ಲಿ, ಚಿಕ್ಕ ಹುಡುಗಿಯು ಆ ಸ್ತ್ರೀಗೆ ಏನು ಹೇಳುತ್ತಿದ್ದಾಳೆ?

 2. ಚಿತ್ರದಲ್ಲಿರುವ ಸ್ತ್ರೀ ಯಾರು, ಮತ್ತು ಆ ಚಿಕ್ಕ ಹುಡುಗಿಯು ಈ ಸ್ತ್ರೀಯ ಮನೆಯಲ್ಲಿ ಏನು ಮಾಡುತ್ತಿದ್ದಾಳೆ?

 3. ನಾಮಾನನಿಗೆ ಏನು ಹೇಳುವಂತೆ ಎಲೀಷನು ತನ್ನ ಸೇವಕನಿಗೆ ತಿಳಿಸುತ್ತಾನೆ, ಮತ್ತು ನಾಮಾನನು ಏಕೆ ಕೋಪಿಸಿಕೊಳ್ಳುತ್ತಾನೆ?

 4. ನಾಮಾನನು ತನ್ನ ಸೇವಕರ ಮಾತನ್ನು ಕೇಳಿದಾಗ ಏನು ಸಂಭವಿಸುತ್ತದೆ?

 5. ಎಲೀಷನು ನಾಮಾನನ ಕಾಣಿಕೆಯನ್ನು ಏಕೆ ತೆಗೆದುಕೊಳ್ಳುವುದಿಲ್ಲ, ಆದರೆ ಗೇಹಜಿ ಏನು ಮಾಡುತ್ತಾನೆ?

 6. ಗೇಹಜಿಗೆ ಏನಾಗುತ್ತದೆ, ಮತ್ತು ಇದರಿಂದ ನಾವೇನನ್ನು ಕಲಿಯಸಾಧ್ಯವಿದೆ?

ಹೆಚ್ಚಿನ ಪ್ರಶ್ನೆಗಳು:

 1. ಎರಡನೆಯ ಅರಸುಗಳು 5:1-27 ಓದಿ.

  1. (ಎ) ಆ ಚಿಕ್ಕ ಇಸ್ರಾಯೇಲ್ಯ ಹುಡುಗಿಯ ಮಾದರಿಯು ಇಂದು ಯುವ ಜನರನ್ನು ಹೇಗೆ ಉತ್ತೇಜಿಸಬಲ್ಲದು? (2 ಅರ. 5:3; ಕೀರ್ತ. 8:2; 148:12, 13)

  2. (ಬಿ) ನಾವು ಶಾಸ್ತ್ರಾಧಾರಿತ ಸಲಹೆಯನ್ನು ಪಡೆದುಕೊಳ್ಳುವಾಗ ನಾಮಾನನ ಉದಾಹರಣೆಯನ್ನು ಮನಸ್ಸಿನಲ್ಲಿಡುವುದು ಏಕೆ ಒಳ್ಳೇದು? (2 ಅರ. 5:15; ಇಬ್ರಿ. 12:5, 6; ಯಾಕೋ. 4:6)

  3. (ಸಿ) ಎಲೀಷನ ಹಾಗೂ ಗೇಹಜಿಯ ಉದಾಹರಣೆಗಳನ್ನು ತುಲನೆಮಾಡುವ ಮೂಲಕ ನಾವು ಯಾವ ಪಾಠಗಳನ್ನು ಕಲಿಯಸಾಧ್ಯವಿದೆ? (2 ಅರ. 5:9, 10, 14-16, 20; ಮತ್ತಾ. 10:8; ಅ. ಕೃ. 5:1-5; 2 ಕೊರಿಂ. 2:17)

ಕಥೆ 70

ಯೋನ ಮತ್ತು ದೊಡ್ಡ ಮೀನು

 1. ಯೋನನು ಯಾರು, ಮತ್ತು ಯೆಹೋವನು ಅವನಿಗೆ ಏನು ಮಾಡುವಂತೆ ಹೇಳುತ್ತಾನೆ?

 2. ಯೆಹೋವನು ಹೇಳಿದ ಸ್ಥಳಕ್ಕೆ ಹೋಗಲು ಯೋನನಿಗೆ ಮನಸ್ಸಿಲ್ಲದ ಕಾರಣ ಅವನೇನು ಮಾಡುತ್ತಾನೆ?

 3. ಬಿರುಗಾಳಿಯನ್ನು ಶಾಂತಗೊಳಿಸಲಿಕ್ಕಾಗಿ ಏನು ಮಾಡುವಂತೆ ಯೋನನು ನಾವಿಕರಿಗೆ ಹೇಳುತ್ತಾನೆ?

 4. ನೀವು ಚಿತ್ರದಲ್ಲಿ ನೋಡುವ ಹಾಗೆ, ಯೋನನು ನೀರಿನಲ್ಲಿ ಮುಳುಗುತ್ತಿರುವಾಗ ಏನಾಗುತ್ತದೆ?

 5. ಯೋನನು ಎಷ್ಟು ದಿವಸ ಆ ದೊಡ್ಡ ಮೀನಿನ ಹೊಟ್ಟೆಯೊಳಗೆ ಇರುತ್ತಾನೆ, ಮತ್ತು ಅವನು ಅಲ್ಲಿ ಏನು ಮಾಡುತ್ತಾನೆ?

 6. ದೊಡ್ಡ ಮೀನಿನ ಹೊಟ್ಟೆಯೊಳಗಿಂದ ಹೊರಗೆ ಬಂದ ಮೇಲೆ ಯೋನನು ಎಲ್ಲಿಗೆ ಹೋಗುತ್ತಾನೆ, ಮತ್ತು ಇದು ನಮಗೆ ಯಾವ ಪಾಠವನ್ನು ಕಲಿಸುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಯೋನ 1:1-17 ಓದಿ.

  ನಿನೆವೆ ಪಟ್ಟಣದವರಿಗೆ ಸಾರುವ ತನ್ನ ನೇಮಕದ ಬಗ್ಗೆ ಯೋನನಿಗೆ ನಿಜವಾಗಿಯೂ ಹೇಗನಿಸಿತು? (ಯೋನ 1:2, 3; ಜ್ಞಾನೋ. 3:7; ಪ್ರಸಂ. 8:12)

 2. ಯೋನ 2:1, 2, 10 ಓದಿ.

  ದೇವರು ನಮ್ಮ ಪ್ರಾರ್ಥನೆಗಳಿಗೆ ಉತ್ತರಿಸುತ್ತಾನೆಂಬ ವಿಷಯದಲ್ಲಿ ಯೋನನ ಅನುಭವವು ನಮಗೆ ಹೇಗೆ ಭರವಸೆಯನ್ನು ಕೊಡುತ್ತದೆ? (ಕೀರ್ತ. 22:24; 34:6; 1 ಯೋಹಾ. 5:14)

 3. ಯೋನ 3:1-10 ಓದಿ.

  1. (ಎ) ಯೋನನು ಮೊದಲು ತನ್ನ ನೇಮಕವನ್ನು ಪೂರೈಸಲು ತಪ್ಪಿದನಾದರೂ, ಯೆಹೋವನು ಅವನನ್ನೇ ಉಪಯೋಗಿಸಿದ ನಿಜಾಂಶದಿಂದ ನಾವು ಯಾವ ಉತ್ತೇಜನವನ್ನು ಪಡೆದುಕೊಳ್ಳುತ್ತೇವೆ? (ಕೀರ್ತ. 103:14; 1 ಪೇತ್ರ 5:10)

  2. (ಬಿ) ನಿನೆವೆ ಪಟ್ಟಣದವರೊಂದಿಗಿನ ಯೋನನ ಅನುಭವವು, ನಮ್ಮ ಕ್ಷೇತ್ರದಲ್ಲಿನ ಜನರ ಬಗ್ಗೆ ದುಡುಕಿ ತೀರ್ಮಾನಿಸುವುದರ ಕುರಿತು ಏನನ್ನು ಕಲಿಸುತ್ತದೆ? (ಯೋನ 3:6-9; ಪ್ರಸಂ. 11:6; ಅ. ಕೃ. 13:48)

ಕಥೆ 71

ದೇವರು ವಾಗ್ದಾನಿಸುವ ಪರದೈಸ್‌

 1. ಯೆಶಾಯನು ಯಾರಾಗಿದ್ದನು, ಯಾರ ಸಮಯದಲ್ಲಿ ಜೀವಿಸಿದನು, ಮತ್ತು ಯೆಹೋವನು ಅವನಿಗೆ ಏನನ್ನು ತೋರಿಸಿದನು?

 2. “ಪರದೈಸ್‌” ಎಂಬ ಪದದ ಅರ್ಥವೇನು, ಮತ್ತು ಇದು ನಿಮಗೆ ಯಾವುದನ್ನು ನೆನಪಿಸುತ್ತದೆ?

 3. ಹೊಸ ಪರದೈಸ್‌ನ ಕುರಿತು ಏನನ್ನು ಬರೆಯುವಂತೆ ಯೆಹೋವನು ಯೆಶಾಯನಿಗೆ ಹೇಳಿದನು?

 4. ಆದಾಮಹವ್ವರು ತಮ್ಮ ಸುಂದರವಾದ ಮನೆಯನ್ನು ಏಕೆ ಕಳೆದುಕೊಂಡರು?

 5. ಯೆಹೋವನು ತನ್ನನ್ನು ಪ್ರೀತಿಸುವ ಜನರಿಗಾಗಿ ಏನನ್ನು ವಾಗ್ದಾನಿಸುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ಯೆಶಾಯ 11:6-9 ಓದಿ.

  1. (ಎ) ಹೊಸ ಲೋಕದಲ್ಲಿ ಪ್ರಾಣಿ ಮತ್ತು ಮನುಷ್ಯರ ಮಧ್ಯೆಯಿರುವ ಶಾಂತಿಯನ್ನು ದೇವರ ವಾಕ್ಯವು ಹೇಗೆ ಚಿತ್ರಿಸುತ್ತದೆ? (ಕೀರ್ತ. 148:10, 13; ಯೆಶಾ. 65:25; ಯೆಹೆ. 34:25)

  2. (ಬಿ) ಯೆಶಾಯನ ಮಾತುಗಳು ಇಂದು ಯೆಹೋವನ ಜನರ ಮಧ್ಯೆ ಆಧ್ಯಾತ್ಮಿಕವಾಗಿ ಯಾವ ರೀತಿಯಲ್ಲಿ ನೆರವೇರಿಕೆಯನ್ನು ಪಡೆಯುತ್ತಿವೆ? (ರೋಮಾ. 12:2; ಎಫೆ. 4:23, 24)

  3. (ಸಿ) ಈಗ ಮತ್ತು ಹೊಸ ಲೋಕದಲ್ಲಿ ಮಾನವನ ವ್ಯಕ್ತಿತ್ವದಲ್ಲಾಗುವ ಬದಲಾವಣೆಗೆ ಕೀರ್ತಿಯು ಯಾರಿಗೆ ಸಲ್ಲತಕ್ಕದ್ದು? (ಯೆಶಾ. 48:17, 18; ಗಲಾ. 5:22, 23; ಫಿಲಿ. 4:7)

 2. ಪ್ರಕಟನೆ 21:3, 4 ಓದಿ.

  1. (ಎ) ದೇವರು ಮನುಷ್ಯರೊಡನೆ ವಾಸಿಸುವುದು, ಭೂಮಿಯ ಮೇಲೆ ಆತನು ಶಾರೀರಿಕವಾಗಿ ಇರುವುದಿಲ್ಲ ಬದಲಾಗಿ ಸಾಂಕೇತಿಕವಾಗಿ ಇರುವನು ಎಂಬ ಅರ್ಥಕೊಡುತ್ತದೆಂದು ಶಾಸ್ತ್ರವಚನಗಳು ಹೇಗೆ ತೋರಿಸುತ್ತವೆ? (ಯಾಜ. 26:11, 12; 2 ಪೂರ್ವ. 6:18; ಯೆಶಾ. 66:1; ಪ್ರಕ. 21:2, 3, 22-24)

  2. (ಬಿ) ಯಾವ ರೀತಿಯ ನೋವು ಮತ್ತು ಕಣ್ಣೀರು ತೆಗೆದುಹಾಕಲ್ಪಡುವುದು? (ಲೂಕ 8:49-52; ರೋಮಾ. 8:21, 22; ಪ್ರಕ. 21:4)

ಕಥೆ 72

ರಾಜ ಹಿಜ್ಕೀಯನಿಗೆ ದೇವರು ಸಹಾಯಮಾಡುತ್ತಾನೆ

 1. ಚಿತ್ರದಲ್ಲಿರುವ ಮನುಷ್ಯನು ಯಾರು, ಮತ್ತು ಅವನು ಯಾಕೆ ತುಂಬಾ ತೊಂದರೆಯೊಳಗೆ ಸಿಕ್ಕಿಕೊಂಡಿದ್ದಾನೆ?

 2. ಹಿಜ್ಕೀಯನು ದೇವರ ಮುಂದಿಟ್ಟಿರುವ ಪತ್ರಗಳು ಯಾವುವು, ಮತ್ತು ಅವನು ಏನೆಂದು ಪ್ರಾರ್ಥಿಸುತ್ತಾನೆ?

 3. ಹಿಜ್ಕೀಯನು ಎಂತಹ ಅರಸನಾಗಿದ್ದಾನೆ, ಮತ್ತು ಯೆಹೋವನು ಅವನಿಗೆ ಪ್ರವಾದಿ ಯೆಶಾಯನ ಮುಖಾಂತರ ಯಾವ ಸಂದೇಶವನ್ನು ಕಳುಹಿಸುತ್ತಾನೆ?

 4. ಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ, ಯೆಹೋವನ ದೂತನು ಅಶ್ಶೂರ್ಯರಿಗೆ ಏನು ಮಾಡುತ್ತಾನೆ?

 5. ಎರಡು-ಕುಲಗಳ ರಾಜ್ಯದಲ್ಲಿ ತುಸು ಕಾಲ ಶಾಂತಿಯಿತ್ತಾದರೂ, ಹಿಜ್ಕೀಯನು ಸತ್ತ ಬಳಿಕ ಏನಾಗುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಎರಡನೆಯ ಅರಸುಗಳು 18:1-36 ಓದಿ.

  1. (ಎ) ಅಶ್ಶೂರ್ಯರ ಪರವಾಗಿ ಮಾತಾಡಲು ಬಂದ ರಬ್ಷಾಕೆಯು ಇಸ್ರಾಯೇಲ್ಯರ ನಂಬಿಕೆಯನ್ನು ಕುಂದಿಸಲು ಹೇಗೆ ಪ್ರಯತ್ನಿಸಿದನು? (2 ಅರ. 18:19, 21; ವಿಮೋ. 5:2; ಕೀರ್ತ. 64:3)

  2. (ಬಿ) ವಿರೋಧಿಗಳೊಡನೆ ವ್ಯವಹರಿಸುವಾಗ, ಯೆಹೋವನ ಸಾಕ್ಷಿಗಳು ಹಿಜ್ಕೀಯನ ಮಾದರಿಯನ್ನು ಹೇಗೆ ಅನುಸರಿಸುತ್ತಾರೆ? (2 ಅರ. 18:36; ಕೀರ್ತ. 39:1; ಜ್ಞಾನೋ. 26:4; 2 ತಿಮೊ. 2:24)

 2. ಎರಡನೆಯ ಅರಸುಗಳು 19:1-37 ಓದಿ.

  1. (ಎ) ಸಂಕಟದ ಸಮಯದಲ್ಲಿ ಇಂದು ಯೆಹೋವನ ಸಾಕ್ಷಿಗಳು ಹಿಜ್ಕೀಯನನ್ನು ಹೇಗೆ ಅನುಸರಿಸುತ್ತಾರೆ? (2 ಅರ. 19:1, 2; ಜ್ಞಾನೋ. 3:5, 6; ಇಬ್ರಿ. 10:24, 25; ಯಾಕೋ. 5:14, 15)

  2. (ಬಿ) ರಾಜ ಸನ್ಹೇರಿಬನು ಯಾವ ಮೂರು ವಿಧಗಳಲ್ಲಿ ಸೋಲನ್ನು ಅನುಭವಿಸುತ್ತಾನೆ, ಮತ್ತು ಅವನು ಪ್ರವಾದನಾತ್ಮಕವಾಗಿ ಯಾರನ್ನು ಚಿತ್ರಿಸುತ್ತಾನೆ? (2 ಅರ. 19:32, 35, 37; ಪ್ರಕ. 20:2, 3)

 3. ಎರಡನೆಯ ಅರಸುಗಳು 21:1-6, 16 ಓದಿ.

  ಯೆರೂಸಲೇಮಿನಲ್ಲಿ ಆಳಿದ ಅತಿ ದುಷ್ಟ ಅರಸರಲ್ಲಿ ಮನಸ್ಸೆಯು ಒಬ್ಬನೆಂದು ಏಕೆ ಹೇಳಸಾಧ್ಯವಿದೆ? (2 ಪೂರ್ವ. 33:4-6, 9)

ಕಥೆ 73

ಇಸ್ರಾಯೇಲಿನ ಕೊನೆಯ ಒಳ್ಳೆಯ ಅರಸ

 1. ಯೋಷೀಯನು ಅರಸನಾದಾಗ ಎಷ್ಟು ಪ್ರಾಯದವನಾಗಿದ್ದಾನೆ, ಮತ್ತು ಅವನು ರಾಜನಾಗಿ ಏಳು ವರ್ಷಗಳಾದಾಗ ಏನು ಮಾಡಲಾರಂಭಿಸುತ್ತಾನೆ?

 2. ಮೊದಲನೆಯ ಚಿತ್ರದಲ್ಲಿ ಯೋಷೀಯನು ಏನು ಮಾಡುತ್ತಿರುವುದನ್ನು ನೀವು ನೋಡುತ್ತೀರಿ?

 3. ಪುರುಷರು ಆಲಯದ ರಿಪೇರಿ ಕೆಲಸ ಮಾಡುತ್ತಿರುವಾಗ ಮಹಾಯಾಜಕನು ಏನನ್ನು ಕಂಡುಕೊಳ್ಳುತ್ತಾನೆ?

 4. ಯೋಷೀಯನು ತನ್ನ ಬಟ್ಟೆಗಳನ್ನು ಹರಿದುಕೊಳ್ಳುವುದು ಏಕೆ?

 5. ಪ್ರವಾದಿನಿಯಾದ ಹುಲ್ದಳು ಯೆಹೋವನು ತಿಳಿಸಿದ ಯಾವ ಸಂದೇಶವನ್ನು ಯೋಷೀಯನಿಗೆ ಕಳುಹಿಸುತ್ತಾಳೆ?

ಹೆಚ್ಚಿನ ಪ್ರಶ್ನೆಗಳು:

 1. ಎರಡನೆಯ ಪೂರ್ವಕಾಲವೃತ್ತಾಂತ 34:1-28 ಓದಿ.

  1. (ಎ) ಬಾಲ್ಯದಲ್ಲಿ ತೊಂದರೆಗಳನ್ನು ಸಹಿಸಿಕೊಳ್ಳಬೇಕಾದವರಿಗೆ ಯೋಷೀಯನು ಯಾವ ಮಾದರಿಯನ್ನು ಒದಗಿಸುತ್ತಾನೆ? (2 ಪೂರ್ವ. 33:21-25; 34:1, 2; ಕೀರ್ತ. 27:10)

  2. (ಬಿ) ಯೋಷೀಯನು ತನ್ನ ಆಳಿಕೆಯ 8, 12, ಮತ್ತು 18ನೇ ವರ್ಷಗಳಲ್ಲಿ ಸತ್ಯಾರಾಧನೆಯನ್ನು ಪ್ರವರ್ಧಿಸಲಿಕ್ಕಾಗಿ ಯಾವ ಗಮನಾರ್ಹ ಹೆಜ್ಜೆಗಳನ್ನು ತೆಗೆದುಕೊಂಡನು? (2 ಪೂರ್ವ. 34:3, 8)

  3. (ಸಿ) ನಮ್ಮ ಆರಾಧನಾ ಸ್ಥಳಗಳನ್ನು ಸುಸ್ಥಿತಿಯಲ್ಲಿಡುವ ವಿಷಯದಲ್ಲಿ ಅರಸನಾದ ಯೋಷೀಯ ಮತ್ತು ಮಹಾಯಾಜಕನಾದ ಹಿಲ್ಕೀಯನು ಇಟ್ಟ ಮಾದರಿಗಳಿಂದ ನಾವು ಯಾವ ಪಾಠಗಳನ್ನು ಕಲಿಯಸಾಧ್ಯವಿದೆ? (2 ಪೂರ್ವ. 34:9-13; ಜ್ಞಾನೋ. 11:14; 1 ಕೊರಿಂ. 10:31)

ಕಥೆ 74

ಭಯಪಡದ ಒಬ್ಬ ಮನುಷ್ಯ

 1. ಚಿತ್ರದಲ್ಲಿರುವ ತರುಣನು ಯಾರು?

 2. ಪ್ರವಾದಿಯಾಗುವುದರ ಕುರಿತು ಯೆರೆಮೀಯನು ಏನೆಂದು ನೆನಸುತ್ತಾನೆ, ಆದರೆ ಯೆಹೋವನು ಅವನಿಗೆ ಏನು ಹೇಳುತ್ತಾನೆ?

 3. ಯೆರೆಮೀಯನು ಜನರಿಗೆ ಯಾವ ಸಂದೇಶವನ್ನು ಹೇಳುತ್ತಾ ಇರುತ್ತಾನೆ?

 4. ಯೆರೆಮೀಯನನ್ನು ತಡೆಯಲು ಯಾಜಕರು ಹೇಗೆ ಪ್ರಯತ್ನಮಾಡುತ್ತಾರೆ, ಆದರೆ ಅದಕ್ಕೆ ಹೆದರುವುದಿಲ್ಲವೆಂಬುದನ್ನು ಅವನು ಹೇಗೆ ತೋರಿಸುತ್ತಾನೆ?

 5. ಇಸ್ರಾಯೇಲ್ಯರು ತಮ್ಮ ದುರ್ಮಾರ್ಗಗಳನ್ನು ಬಿಟ್ಟು ಹಿಂದಿರುಗದಿರುವಲ್ಲಿ ಏನು ಸಂಭವಿಸುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಯೆರೆಮೀಯ 1:1-8 ಓದಿ.

  1. (ಎ) ಯೆರೆಮೀಯನ ಉದಾಹರಣೆಯು ತೋರಿಸುವಂತೆ ಯೆಹೋವನ ಸೇವೆಮಾಡಲು ಒಬ್ಬನನ್ನು ಯಾವುದು ಅರ್ಹನನ್ನಾಗಿ ಮಾಡುತ್ತದೆ? (2 ಕೊರಿಂ. 3:5, 6)

  2. (ಬಿ) ಯೆರೆಮೀಯನ ಉದಾಹರಣೆಯು ಇಂದು ಕ್ರೈಸ್ತ ಯುವ ಜನರಿಗೆ ಯಾವ ಉತ್ತೇಜನವನ್ನು ಕೊಡುತ್ತದೆ? (ಪ್ರಸಂ. 12:1; 1 ತಿಮೊ. 4:12)

 2. ಯೆರೆಮೀಯ 10:1-5 ಓದಿ.

  ವಿಗ್ರಹಗಳಲ್ಲಿ ಭರವಸೆಯಿಡುವುದು ವ್ಯರ್ಥ ಎಂಬುದನ್ನು ತೋರಿಸಲು ಯೆರೆಮೀಯನು ಯಾವ ಪ್ರಬಲವಾದ ದೃಷ್ಟಾಂತವನ್ನು ಉಪಯೋಗಿಸುತ್ತಾನೆ? (ಯೆರೆ. 10:5; ಯೆಶಾ. 46:7; ಹಬ. 2:19)

 3. ಯೆರೆಮೀಯ 26:1-16 ಓದಿ.

  1. (ಎ) “ಒಂದು ಮಾತನ್ನೂ ಬಿಡಬಾರದು” ಎಂದು ಯೆಹೋವನು ಯೆರೆಮೀಯನಿಗೆ ಕೊಟ್ಟ ಆಜ್ಞೆಯನ್ನು ಅಭಿಷಿಕ್ತ ಉಳಿಕೆಯವರು ಇಂದು ಎಚ್ಚರಿಕೆಯ ಸಂದೇಶವನ್ನು ಸಾರುವಾಗ ಹೇಗೆ ಪಾಲಿಸುತ್ತಿದ್ದಾರೆ? (ಯೆರೆ. 26:2; ಧರ್ಮೋ. 4:2; ಅ. ಕೃ. 20:27)

  2. (ಬಿ) ಯೆಹೋವನ ಎಚ್ಚರಿಕೆಯ ಸಂದೇಶವನ್ನು ಜನರಿಗೆ ಸಾರುವ ವಿಷಯದಲ್ಲಿ ಯೆರೆಮೀಯನು ಇಂದಿರುವ ಯೆಹೋವನ ಸಾಕ್ಷಿಗಳಿಗೆ ಯಾವ ಒಳ್ಳೇ ಮಾದರಿಯನ್ನು ಇಟ್ಟಿದ್ದಾನೆ? (ಯೆರೆ. 26:8, 12, 14, 15; 2 ತಿಮೊ. 4:1-5)

 4. ಎರಡನೆಯ ಅರಸುಗಳು 24:1-17 ಓದಿ.

  ಯೆಹೂದವು ಯೆಹೋವನಿಗೆ ಅಪನಂಬಿಗಸ್ತಿಕೆ ತೋರಿಸಿದ ಕಾರಣ ಯಾವ ಕೆಟ್ಟ ಪರಿಣಾಮಗಳು ಉಂಟಾದವು? (2 ಅರ. 24:2-4, 14)

ಕಥೆ 75

ಬಾಬೆಲಿನಲ್ಲಿ ನಾಲ್ವರು ಹುಡುಗರು

 1. ಚಿತ್ರದಲ್ಲಿರುವ ನಾಲ್ವರು ಹುಡುಗರು ಯಾರು, ಮತ್ತು ಅವರು ಬಾಬೆಲಿನಲ್ಲಿರುವುದೇಕೆ?

 2. ನೆಬೂಕದ್ನೆಚ್ಚರನು ಆ ನಾಲ್ವರು ಹುಡುಗರಿಗಾಗಿ ಯಾವ ಏರ್ಪಾಡುಮಾಡುತ್ತಾನೆ, ಮತ್ತು ತನ್ನ ಸೇವಕರಿಗೆ ಏನೆಂದು ಆಜ್ಞಾಪಿಸುತ್ತಾನೆ?

 3. ದಾನಿಯೇಲನು ಅನ್ನಪಾನಗಳ ವಿಷಯದಲ್ಲಿ ತನಗಾಗಿ ಮತ್ತು ತನ್ನ ಮೂವರು ಮಿತ್ರರಿಗಾಗಿ ಏನೆಂದು ವಿನಂತಿಸುತ್ತಾನೆ?

 4. ದಾನಿಯೇಲನು ಮತ್ತು ಅವನ ಮೂವರು ಮಿತ್ರರು ಹತ್ತು ದಿನ ಕಾಯಿಪಲ್ಯ ತಿಂದ ನಂತರ ಬೇರೆಲ್ಲಾ ಯುವಕರಿಗಿಂತ ಹೇಗೆ ಭಿನ್ನರಾಗಿ ಕಾಣುತ್ತಾರೆ?

 5. ದಾನಿಯೇಲನು ಮತ್ತು ಅವನ ಮೂವರು ಮಿತ್ರರು ಅರಸನ ಅರಮನೆಯಲ್ಲಿ ಕೆಲಸಕ್ಕೆ ನೇಮಿಸಲ್ಪಟ್ಟದ್ದು ಹೇಗೆ, ಮತ್ತು ಯಾವ ರೀತಿಯಲ್ಲಿ ಜೋಯಿಸರಿಗಿಂತಲೂ ವಿದ್ವಾಂಸರಿಗಿಂತಲೂ ಅವರು ಉತ್ತಮರಾಗಿದ್ದಾರೆ?

ಹೆಚ್ಚಿನ ಪ್ರಶ್ನೆಗಳು:

 1. ದಾನಿಯೇಲ 1:1-21 ಓದಿ.

  1. (ಎ) ಶೋಧನೆಗಳನ್ನು ಪ್ರತಿರೋಧಿಸಲು ಮತ್ತು ಬಲಹೀನತೆಗಳನ್ನು ಜಯಿಸಲು ಯಾವ ರೀತಿಯ ಪ್ರಯತ್ನ ಅಗತ್ಯ? (ದಾನಿ. 1:8; ಆದಿ. 39:7, 10; ಗಲಾ. 6:9)

  2. (ಬಿ) “ರಾಜನ ಭೋಜನಪದಾರ್ಥ”ಗಳೆಂದು ಕೆಲವರು ಎಣಿಸುವ ಕಾರ್ಯಗಳಲ್ಲಿ ಮುಳುಗುವಂತೆ ಇಂದು ಯುವ ಜನರನ್ನು ಯಾವ ವಿಧಗಳಲ್ಲಿ ಪ್ರಲೋಭಿಸಲಾಗುತ್ತದೆ ಅಥವಾ ಒತ್ತಡಹಾಕಲಾಗುತ್ತದೆ? (ದಾನಿ. 1:8; ಜ್ಞಾನೋ. 20:1; 2 ಕೊರಿಂ. 6:17–7:1)

  3. ನಾಲ್ವರು ಇಬ್ರಿಯ ಯುವಕರ ಕುರಿತ ಬೈಬಲ್‌ ವೃತ್ತಾಂತವು ಐಹಿಕ ಜ್ಞಾನವನ್ನು ಪಡೆದುಕೊಳ್ಳುವ ವಿಷಯದಲ್ಲಿ ಏನನ್ನು ಗ್ರಹಿಸುವಂತೆ ಸಹಾಯಮಾಡುತ್ತದೆ? (ದಾನಿ. 1:20; ಯೆಶಾ. 54:13; 1 ಕೊರಿಂ. 3:18-20)

ಕಥೆ 76

ಯೆರೂಸಲೇಮ್‌ ನಾಶವಾಗುತ್ತದೆ

 1. ಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ ಯೆರೂಸಲೇಮಿಗೆ ಮತ್ತು ಇಸ್ರಾಯೇಲ್ಯರಿಗೆ ಏನು ಸಂಭವಿಸುತ್ತಾ ಇದೆ?

 2. ಯೆಹೆಜ್ಕೇಲನು ಯಾರು, ಮತ್ತು ಆಘಾತವನ್ನು ಉಂಟುಮಾಡುವ ಯಾವ ವಿಷಯಗಳನ್ನು ಯೆಹೋವನು ಅವನಿಗೆ ತೋರಿಸುತ್ತಾನೆ?

 3. ಇಸ್ರಾಯೇಲ್ಯರು ತನಗೆ ಗೌರವ ತೋರಿಸದ ಕಾರಣ ಯೆಹೋವನ ಏನೆಂದು ವಚನ ಕೊಡುತ್ತಾನೆ?

 4. ಇಸ್ರಾಯೇಲ್ಯರು ತನ್ನ ವಿರುದ್ಧ ದಂಗೆಯೆದ್ದಾಗ ಅರಸ ನೆಬೂಕದ್ನೆಚ್ಚರನು ಏನು ಮಾಡುತ್ತಾನೆ?

 5. ಇಸ್ರಾಯೇಲ್ಯರಿಗೆ ಭೀಕರ ನಾಶನವು ಸಂಭವಿಸುವಂತೆ ಯೆಹೋವನು ಅನುಮತಿಸುವುದೇಕೆ?

 6. ಇಸ್ರಾಯೇಲ್‌ ದೇಶವು ನಿರ್ಜನವಾಗುವಂತೆ ಏಕೆ ಬಿಡಲಾಗುತ್ತದೆ, ಮತ್ತು ಎಷ್ಟು ಸಮಯದ ವರೆಗೆ?

ಹೆಚ್ಚಿನ ಪ್ರಶ್ನೆಗಳು:

 1. ಎರಡನೆಯ ಅರಸುಗಳು 25:1-26 ಓದಿ.

  1. (ಎ) ಚಿದ್ಕೀಯನು ಯಾರಾಗಿದ್ದನು, ಅವನಿಗೆ ಏನು ಸಂಭವಿಸಿತು, ಮತ್ತು ಇದು ಬೈಬಲ್‌ ಪ್ರವಾದನೆಯನ್ನು ಹೇಗೆ ನೆರವೇರಿಸಿತು? (2 ಅರ. 25:5-7; ಯೆಹೆ. 12:13-15)

  2. (ಬಿ) ಇಸ್ರಾಯೇಲ್‌ನ ಎಲ್ಲಾ ಅಪನಂಬಿಗಸ್ತಿಕೆಗಾಗಿ ಯೆಹೋವನು ಯಾರನ್ನು ಹೊಣೆಗಾರರನ್ನಾಗಿ ಮಾಡಿದನು? (2 ಅರ. 25:9, 11, 12, 18, 19; 2 ಪೂರ್ವ. 36:14, 17)

 2. ಯೆಹೆಜ್ಕೇಲ 8:1-18 ಓದಿ.

  ಸೂರ್ಯನ ಆರಾಧಕರಾದ ಧರ್ಮಭ್ರಷ್ಟ ಇಸ್ರಾಯೇಲ್ಯರನ್ನು ಕ್ರೈಸ್ತಪ್ರಪಂಚವು ಹೇಗೆ ಅನುಕರಿಸಿದೆ? (ಯೆಹೆ. 8:16; ಯೆಶಾ. 5:20, 21; ಯೋಹಾ. 3:19-21; 2 ತಿಮೊ. 4:3)

ಕಥೆ 77

ಅವರು ಅಡ್ಡಬೀಳುವುದಿಲ್ಲ

 1. ಬಾಬೆಲಿನ ಅರಸ ನೆಬೂಕದ್ನೆಚ್ಚರನು ಜನರಿಗೆ ಯಾವ ಆಜ್ಞೆಯನ್ನು ಕೊಟ್ಟಿದ್ದಾನೆ?

 2. ದಾನಿಯೇಲನ ಮೂವರು ಮಿತ್ರರು ಬಂಗಾರದ ಪ್ರತಿಮೆಗೆ ಅಡ್ಡಬೀಳುತ್ತಿಲ್ಲವೇಕೆ?

 3. ಬಂಗಾರದ ಪ್ರತಿಮೆಗೆ ಅಡ್ಡಬೀಳುವಂತೆ ಆ ಮೂವರು ಇಬ್ರಿಯರಿಗೆ ನೆಬೂಕದ್ನೆಚ್ಚರನು ಇನ್ನೊಂದು ಅವಕಾಶವನ್ನು ಕೊಡುವಾಗ ಅವರು ಯೆಹೋವನಲ್ಲಿನ ತಮ್ಮ ಭರವಸೆಯನ್ನು ಹೇಗೆ ವ್ಯಕ್ತಪಡಿಸುತ್ತಾರೆ?

 4. ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋರನ್ನು ಏನು ಮಾಡುವಂತೆ ನೆಬೂಕದ್ನೆಚ್ಚರನು ತನ್ನ ಸೇವಕರಿಗೆ ಹೇಳುತ್ತಾನೆ?

 5. ನೆಬೂಕದ್ನೆಚ್ಚರನು ಆವಿಗೆಯೊಳಗೆ ನೋಡುವಾಗ ಏನನ್ನು ಕಾಣುತ್ತಾನೆ?

 6. ಅರಸನು ಶದ್ರಕ್‌, ಮೇಶಕ್‌ ಹಾಗೂ ಅಬೇದ್‌ನೆಗೋರ ದೇವರನ್ನು ಸ್ತುತಿಸುವುದೇಕೆ, ಮತ್ತು ಅವರು ನಮಗಾಗಿ ಯಾವ ಮಾದರಿಯನ್ನು ಇಟ್ಟಿದ್ದಾರೆ?

ಹೆಚ್ಚಿನ ಪ್ರಶ್ನೆಗಳು:

 1. ದಾನಿಯೇಲ 3:1-30 ಓದಿ.

  1. (ಎ) ಸಮಗ್ರತೆಯ ಪರೀಕ್ಷೆಗಳನ್ನು ಎದುರಿಸುವಾಗ, ಆ ಮೂವರು ಇಬ್ರಿಯ ಯುವಕರು ತೋರಿಸಿದ ಯಾವ ಮನೋಭಾವವನ್ನು ದೇವರ ಸೇವಕರೆಲ್ಲರು ಅನುಕರಿಸಬೇಕು? (ದಾನಿ. 3:17, 18; ಮತ್ತಾ. 10:28; ರೋಮಾ. 14:7, 8)

  2. (ಬಿ) ಯೆಹೋವ ದೇವರು ನೆಬೂಕದ್ನೆಚ್ಚರನಿಗೆ ಯಾವ ಪ್ರಾಮುಖ್ಯ ಪಾಠವನ್ನು ಕಲಿಸಿದನು? (ದಾನಿ. 3:28, 29; 4:34, 35)

ಕಥೆ 78

ಗೋಡೆಯ ಮೇಲೆ ಕೈಬರಹ

 1. ಯೆರೂಸಲೇಮಿನ ಯೆಹೋವನ ಆಲಯದಿಂದ ತಂದಿದ್ದ ಪಾತ್ರೆಗಳನ್ನು ಮತ್ತು ಬೋಗುಣಿಗಳನ್ನು ಬಳಸಿ ಬಾಬೆಲಿನ ಅರಸನು ದೊಡ್ಡ ಔತಣ ನಡಿಸುತ್ತಿದ್ದಾಗ ಏನಾಗುತ್ತದೆ?

 2. ಬೇಲ್ಶೆಚ್ಚರನು ತನ್ನ ವಿದ್ವಾಂಸರಿಗೆ ಏನೆಂದು ಹೇಳುತ್ತಾನೆ, ಆದರೆ ಅವರಿಂದ ಏನನ್ನು ಮಾಡಲಾಗುವುದಿಲ್ಲ?

 3. ಅರಸನು ಏನು ಮಾಡಬೇಕೆಂದು ಅವನ ತಾಯಿ ಹೇಳುತ್ತಾಳೆ?

 4. ಗೋಡೆಯ ಮೇಲೆ ಬರಹವನ್ನು ಬರೆಯುವಂತೆ ದೇವರು ಆ ಕೈಯನ್ನು ಕಳುಹಿಸಿದ್ದೇಕೆಂದು ದಾನಿಯೇಲನು ಅರಸನಿಗೆ ಹೇಳುತ್ತಾನೆ?

 5. ಗೋಡೆಯ ಮೇಲಿನ ಬರಹದ ಅರ್ಥವನ್ನು ದಾನಿಯೇಲನು ಹೇಗೆ ವಿವರಿಸುತ್ತಾನೆ?

 6. ದಾನಿಯೇಲನು ಮಾತಾಡುತ್ತಿರುವಾಗಲೇ ಏನಾಗುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ದಾನಿಯೇಲ 5:1-31 ಓದಿ.

  1. (ಎ) ಗೋಡೆಯ ಮೇಲಿನ ಬರಹವನ್ನು ಕಂಡಾಗ ಬೇಲ್ಶೆಚ್ಚರನಿಗಾದ ಭಯಕ್ಕೂ ದೇವಭಯಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಿರಿ. (ದಾನಿ. 5:6, 7; ಕೀರ್ತ. 19:9; ರೋಮಾ. 8:35-39)

  2. (ಬಿ) ದಾನಿಯೇಲನು ಬೇಲ್ಶೆಚ್ಚರನೊಂದಿಗೂ ಅವನೊಂದಿಗಿದ್ದ ಗಣ್ಯ ವ್ಯಕ್ತಿಗಳೊಂದಿಗೂ ಮಾತಾಡುವಾಗ ಮಹತ್ತಾದ ಧೈರ್ಯವನ್ನು ತೋರಿಸಿದ್ದು ಹೇಗೆ? (ದಾನಿ. 5:17, 18, 22, 26-28; ಅ. ಕೃ. 4:29)

  3. (ಸಿ) ಯಾವ ವಿಧದಲ್ಲಿ ದಾನಿಯೇಲ 5ನೆಯ ಅಧ್ಯಾಯವು ಯೆಹೋವನ ವಿಶ್ವ ಪರಮಾಧಿಕಾರವನ್ನು ಒತ್ತಿಹೇಳುತ್ತದೆ? (ದಾನಿ. 4:17, 25; 5:21)

ಕಥೆ 79

ಸಿಂಹಗಳ ಗವಿಯಲ್ಲಿ ದಾನಿಯೇಲ

 1. ದಾರ್ಯಾವೆಷನು ಯಾರು, ಮತ್ತು ದಾನಿಯೇಲನ ಬಗ್ಗೆ ಅವನಿಗೆ ಯಾವ ಅಭಿಪ್ರಾಯವಿದೆ?

 2. ಕೆಲವು ಹೊಟ್ಟೆಕಿಚ್ಚಿನ ಪುರುಷರು ದಾರ್ಯಾವೆಷನ ಮೂಲಕ ಯಾವ ಕಾರ್ಯವನ್ನು ಮಾಡಿಸುತ್ತಾರೆ?

 3. ಹೊಸ ನಿಯಮದ ಕುರಿತು ತಿಳಿದಾಗಲೂ ದಾನಿಯೇಲನು ಏನು ಮಾಡುತ್ತಾನೆ?

 4. ದಾರ್ಯಾವೆಷನು ರಾತ್ರಿಯಲ್ಲಿ ನಿದ್ದೆಬಾರದಷ್ಟು ಕಳವಳಗೊಂಡಿರುವುದೇಕೆ, ಮತ್ತು ಮಾರಣೆಯ ದಿನ ಬೆಳಗ್ಗೆ ಅವನು ಏನು ಮಾಡುತ್ತಾನೆ?

 5. ದಾನಿಯೇಲನು ದಾರ್ಯಾವೆಷನಿಗೆ ಯಾವ ಉತ್ತರಕೊಡುತ್ತಾನೆ?

 6. ದಾನಿಯೇಲನನ್ನು ಕೊಲ್ಲಲು ಪ್ರಯತ್ನಿಸಿದ ಆ ದುರ್ಜನರಿಗೆ ಏನು ಸಂಭವಿಸುತ್ತದೆ, ಮತ್ತು ಅರಸ ದಾರ್ಯಾವೆಷನು ತನ್ನ ರಾಜ್ಯದ ಎಲ್ಲಾ ಜನರಿಗೆ ಏನೆಂದು ಬರೆಯುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ದಾನಿಯೇಲ 6:1-28 ಓದಿ.

  1. (ಎ) ದಾನಿಯೇಲನ ವಿರುದ್ಧ ನಡೆಸಲ್ಪಟ್ಟ ಒಳಸಂಚು, ಆಧುನಿಕ ದಿನಗಳಲ್ಲಿ ಯೆಹೋವನ ಸಾಕ್ಷಿಗಳು ಮಾಡುವ ಕೆಲಸವನ್ನು ನಿಗ್ರಹಿಸಲು ವಿರೋಧಿಗಳು ಮಾಡಿರುವ ಪ್ರಯತ್ನಗಳನ್ನು ಹೇಗೆ ನೆನಪಿಗೆ ತರುತ್ತದೆ? (ದಾನಿ. 6:7; ಕೀರ್ತ. 94:20; ಯೆಶಾ. 10:1; ರೋಮಾ. 8:31)

  2. (ಬಿ) ‘ಮೇಲಧಿಕಾರಿಗಳಿಗೆ’ ಅಧೀನರಾಗಿರುವ ವಿಷಯದಲ್ಲಿ ಇಂದು ದೇವರ ಸೇವಕರು ದಾನಿಯೇಲನನ್ನು ಹೇಗೆ ಅನುಕರಿಸಬಲ್ಲರು? (ದಾನಿ. 6:5, 10; ರೋಮಾ. 13:1; ಅ. ಕೃ. 5:29)

  3. (ಸಿ) ಯೆಹೋವನಿಗೆ “ನಿತ್ಯವೂ” ಸೇವೆಸಲ್ಲಿಸುವ ವಿಷಯದಲ್ಲಿ ದಾನಿಯೇಲನ ಮಾದರಿಯನ್ನು ನಾವು ಹೇಗೆ ಅನುಕರಿಸಬಲ್ಲೆವು? (ದಾನಿ. 6:16, 20; ಫಿಲಿ. 3:16; ಪ್ರಕ. 7:15)

ಕಥೆ 80

ದೇವಜನರು ಬಾಬೆಲನ್ನು ಬಿಟ್ಟುಬರುತ್ತಾರೆ

 1. ಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ, ಇಸ್ರಾಯೇಲ್ಯರು ಏನು ಮಾಡುತ್ತಿದ್ದಾರೆ?

 2. ಯೆಶಾಯನ ಮೂಲಕ ಯೆಹೋವನು ಮುಂತಿಳಿಸಿದ ಪ್ರವಾದನೆಯನ್ನು ಕೋರೆಷನು ಹೇಗೆ ನೆರವೇರಿಸಿದನು?

 3. ಯೆರೂಸಲೇಮಿಗೆ ಹಿಂದಿರುಗಲು ಸಾಧ್ಯವಾಗದೆ ಇರುವ ಇಸ್ರಾಯೇಲ್ಯರಿಗೆ ಕೋರೆಷನು ಏನು ಹೇಳುತ್ತಾನೆ?

 4. ಯೆರೂಸಲೇಮಿಗೆ ಕೊಂಡೊಯ್ಯುವಂತೆ ಕೋರೆಷನು ಜನರಿಗೆ ಏನನ್ನು ಕೊಡುತ್ತಾನೆ?

 5. ಯೆರೂಸಲೇಮಿಗೆ ಹಿಂದಿರುಗಲು ಇಸ್ರಾಯೇಲ್ಯರಿಗೆ ಎಷ್ಟು ಸಮಯ ಬೇಕಾಗುತ್ತದೆ?

 6. ದೇಶವು ನಿರ್ಜನವಾಗಿ ಪಾಳುಬಿದ್ದು ಎಷ್ಟು ವರ್ಷಗಳಾಗಿವೆ?

ಹೆಚ್ಚಿನ ಪ್ರಶ್ನೆಗಳು:

 1. ಯೆಶಾಯ 44:28 ಮತ್ತು 45:1-4 ಓದಿ.

  1. (ಎ) ಕೋರೆಷನ ಕುರಿತಾದ ತನ್ನ ಪ್ರವಾದನೆಯು ಚಾಚೂತಪ್ಪದೆ ನೆರವೇರುತ್ತದೆಂದು ಯೆಹೋವನು ಹೇಗೆ ಒತ್ತಿಹೇಳಿದನು? (ಯೆಶಾ. 55:10, 11; ರೋಮಾ. 4:17)

  2. (ಬಿ) ಕೋರೆಷನ ಕುರಿತಾದ ಯೆಶಾಯನ ಪ್ರವಾದನೆಯು, ಭವಿಷ್ಯತ್ತನ್ನು ಮುಂತಿಳಿಸುವ ಯೆಹೋವ ದೇವರ ಸಾಮರ್ಥ್ಯದ ಕುರಿತು ಏನನ್ನು ತೋರಿಸುತ್ತದೆ? (ಯೆಶಾ. 42:9; 45:21; 46:10, 11; 2 ಪೇತ್ರ 1:20)

 2. ಎಜ್ರ 1:1-11 ಓದಿ.

  ಯೆರೂಸಲೇಮಿಗೆ ಹಿಂದಿರುಗಲು ಅಶಕ್ತರಾದವರ ಮಾದರಿಯನ್ನು ಅನುಸರಿಸುತ್ತಾ, ನಾವು ಇಂದು ಪೂರ್ಣಸಮಯದ ಸೇವೆಯನ್ನು ಪ್ರವೇಶಿಸುವವರಿಗೆ ಹೇಗೆ ‘ಸಹಾಯಮಾಡ’ಸಾಧ್ಯವಿದೆ? (ಎಜ್ರ 1:4, 6; ರೋಮಾ. 12:13; ಕೊಲೊ. 4:12)

ಕಥೆ 81

ದೇವರ ಸಹಾಯದಲ್ಲಿ ಭರವಸೆ

 1. ಎಷ್ಟು ಜನರು ಬಾಬೆಲಿನಿಂದ ಯೆರೂಸಲೇಮಿಗೆ ದೀರ್ಘ ಪ್ರಯಾಣವನ್ನು ಮಾಡುತ್ತಾರೆ, ಆದರೆ ಅವರು ಅಲ್ಲಿ ಬಂದು ಮುಟ್ಟಿದಾಗ ನೋಡಿದ್ದು ಏನನ್ನು?

 2. ಇಸ್ರಾಯೇಲ್ಯರು ಏನನ್ನು ಕಟ್ಟಲು ಆರಂಭಿಸುತ್ತಾರೆ, ಆದರೆ ಅವರ ಶತ್ರುಗಳು ಏನು ಮಾಡುತ್ತಾರೆ?

 3. ಹಗ್ಗಾಯ ಹಾಗೂ ಜೆಕರ್ಯ ಯಾರಾಗಿದ್ದಾರೆ, ಮತ್ತು ಅವರು ಜನರಿಗೆ ಏನು ಹೇಳುತ್ತಾರೆ?

 4. ತತ್ತೆನೈ ಬಾಬೆಲಿಗೆ ಒಂದು ಪತ್ರವನ್ನು ಏಕೆ ಕಳುಹಿಸುತ್ತಾನೆ, ಮತ್ತು ಅವನು ಯಾವ ಉತ್ತರವನ್ನು ಪಡೆಯುತ್ತಾನೆ?

 5. ದೇವರ ಆಲಯವನ್ನು ದುರಸ್ತುಗೊಳಿಸುವ ಅಗತ್ಯದ ಕುರಿತು ಎಜ್ರನಿಗೆ ತಿಳಿದಾಗ ಅವನು ಏನು ಮಾಡುತ್ತಾನೆ?

 6. ಚಿತ್ರದಲ್ಲಿ ಎಜ್ರನು ಯಾವುದಕ್ಕಾಗಿ ಪ್ರಾರ್ಥಿಸುತ್ತಿದ್ದಾನೆ, ಅವನ ಪ್ರಾರ್ಥನೆ ಹೇಗೆ ಉತ್ತರಿಸಲ್ಪಡುತ್ತದೆ, ಮತ್ತು ಇದು ನಮಗೆ ಏನನ್ನು ಕಲಿಸುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಎಜ್ರ 3:1-13 ಓದಿ.

  ಒಂದು ವೇಳೆ ದೇವಜನರ ಸಭೆಯೇ ಇಲ್ಲದಿರುವ ಪ್ರದೇಶದಲ್ಲಿ ನಾವಿರುವುದಾದರೆ, ಏನು ಮಾಡುವುದನ್ನು ಮುಂದುವರಿಸಬೇಕು? (ಎಜ್ರ 3:3, 6; ಅ. ಕೃ. 17:16, 17; ಇಬ್ರಿ. 13:15)

 2. ಎಜ್ರ 4:1-7 ಓದಿ.

  ನಂಬಿಕೆಯಿಲ್ಲದವರೊಂದಿಗೆ ಸಹವಾಸ ಮಾಡುವ ವಿಷಯದಲ್ಲಿ ಜೆರುಬ್ಬಾಬೆಲನು ಯೆಹೋವನ ಜನರಿಗೆ ಯಾವ ಮಾದರಿಯನ್ನಿಟ್ಟನು? (ವಿಮೋ. 34:12; 1 ಕೊರಿಂ. 15:33; 2 ಕೊರಿಂ. 6:14-17)

 3. ಎಜ್ರ 5:1-5, 17 ಮತ್ತು 6:1-22 ಓದಿ.

  1. (ಎ) ಆಲಯ ಕಟ್ಟುವ ಕೆಲಸವನ್ನು ನಿಲ್ಲಿಸಲು ವಿರೋಧಿಗಳಿಗೆ ಸಾಧ್ಯವಾಗಲಿಲ್ಲವೇಕೆ? (ಎಜ್ರ 5:5; ಯೆಶಾ. 54:17)

  2. (ಬಿ) ವಿರೋಧಿಗಳನ್ನು ಎದುರಿಸುವ ಸಮಯದಲ್ಲಿ ಕ್ರೈಸ್ತ ಹಿರಿಯರು ಯೆಹೋವನ ಮಾರ್ಗದರ್ಶನ ಪಡೆದುಕೊಳ್ಳಲು ಪ್ರಯತ್ನಿಸುವಂತೆ ಯೆಹೂದಿ ಹಿರಿಯರ ಕೃತ್ಯಗಳು ಹೇಗೆ ಪ್ರೋತ್ಸಾಹವನ್ನೀಯುತ್ತವೆ? (ಎಜ್ರ 6:14; ಕೀರ್ತ. 32:8; ರೋಮಾ. 8:31; ಯಾಕೋ. 1:5)

 4. ಎಜ್ರ 8:21-23, 28-36 ಓದಿ.

  ಒಂದು ಕೆಲಸವನ್ನು ಆರಂಭಿಸುವ ಮೊದಲು, ಎಜ್ರನ ಯಾವ ಮಾದರಿಯನ್ನು ಅನುಕರಿಸುವುದು ಒಳ್ಳೆಯದು? (ಎಜ್ರ 8:23; ಕೀರ್ತ. 127:1; ಜ್ಞಾನೋ. 10:22; ಯಾಕೋ. 4:13-15)

ಕಥೆ 82

ಮೊರ್ದೆಕೈ ಮತ್ತು ಎಸ್ತೇರ್‌

 1. ಮೊರ್ದೆಕೈ ಮತ್ತು ಎಸ್ತೇರ್‌ ಯಾರಾಗಿದ್ದಾರೆ?

 2. ಅರಸ ಅಹಷ್ವೇರೋಷನು ಹೊಸ ಪತ್ನಿಯನ್ನು ಆರಿಸುವುದೇಕೆ, ಮತ್ತು ಅವನು ಯಾರನ್ನು ಆರಿಸಿಕೊಳ್ಳುತ್ತಾನೆ?

 3. ಹಾಮಾನನು ಯಾರು, ಮತ್ತು ಅವನು ಬಹು ಕೋಪಗೊಳ್ಳಲು ಕಾರಣವೇನು?

 4. ಯಾವ ನಿಯಮವನ್ನು ಜಾರಿಗೆ ತರಲಾಗುತ್ತದೆ, ಮತ್ತು ಮೊರ್ದೆಕೈ ಆ ಕುರಿತು ಎಸ್ತೇರಳಿಗೆ ಸುದ್ದಿಮುಟ್ಟಿಸಿದಾಗ ಅವಳು ಏನು ಮಾಡುತ್ತಾಳೆ?

 5. ಹಾಮಾನನಿಗೆ ಏನಾಗುತ್ತದೆ, ಮತ್ತು ಮೊರ್ದೆಕೈಗೆ ಏನಾಗುತ್ತದೆ?

 6. ಇಸ್ರಾಯೇಲ್ಯರು ತಮ್ಮ ಶತ್ರುಗಳಿಂದ ಹೇಗೆ ಕಾಪಾಡಲ್ಪಡುತ್ತಾರೆ?

ಹೆಚ್ಚಿನ ಪ್ರಶ್ನೆಗಳು:

 1. ಎಸ್ತೇರಳು 2:12-18 ಓದಿ.

  ‘ಸಾತ್ವಿಕವಾದ ಶಾಂತಮನಸ್ಸನ್ನು’ ಬೆಳೆಸಿಕೊಳ್ಳುವುದರ ಮೌಲ್ಯವನ್ನು ಎಸ್ತೇರಳು ಹೇಗೆ ತೋರಿಸಿದ್ದಾಳೆ? (ಎಸ್ತೇ. 2:15; 1 ಪೇತ್ರ 3:1-5)

 2. ಎಸ್ತೇರಳು 4:1-17 ಓದಿ.

  ಸತ್ಯಾರಾಧನೆಯ ಪರವಾಗಿ ಕ್ರಿಯೆಗೈಯುವ ಅವಕಾಶ ಎಸ್ತೇರಳಿಗೆ ದೊರೆತಂತೆಯೇ, ಇಂದು ಯೆಹೋವನಿಗೆ ನಮ್ಮ ಭಕ್ತಿ ಮತ್ತು ನಿಷ್ಠೆಯನ್ನು ತೋರಿಸಲು ನಮಗೆ ಯಾವ ಅವಕಾಶವಿದೆ? (ಎಸ್ತೇ. 4:13, 14; ಮತ್ತಾ. 5:14-16; 24:14)

 3. ಎಸ್ತೇರಳು 7:1-6 ಓದಿ.

  ಹಿಂಸೆ ಬರುವುದೆಂದು ತಿಳಿದಿದ್ದರೂ ಇಂದು ದೇವಜನರಲ್ಲಿ ಅನೇಕರು ಹೇಗೆ ಎಸ್ತೇರಳಂತೆ ಕ್ರಿಯೆಗೈದಿದ್ದಾರೆ? (ಎಸ್ತೇ. 7:4; ಮತ್ತಾ. 10:16-22; 1 ಪೇತ್ರ 2:12)

ಕಥೆ 83

ಯೆರೂಸಲೇಮಿನ ಗೋಡೆಗಳು

 1. ಯೆರೂಸಲೇಮ್‌ ಪಟ್ಟಣದ ಸುತ್ತಲೂ ಗೋಡೆಗಳಿಲ್ಲದೆ ಇದ್ದಾಗ ಇಸ್ರಾಯೇಲ್ಯರಿಗೆ ಹೇಗನಿಸಿತು?

 2. ನೆಹೆಮೀಯನು ಯಾರು?

 3. ನೆಹೆಮೀಯನ ಕೆಲಸವೇನು, ಮತ್ತು ಅದು ಏಕೆ ಪ್ರಾಮುಖ್ಯದ ಕೆಲಸವಾಗಿದೆ?

 4. ಯಾವ ಸುದ್ದಿಯು ನೆಹೆಮೀಯನನ್ನು ಬಹಳ ಬೇಸರಗೊಳಿಸುತ್ತದೆ, ಮತ್ತು ಅವನು ಏನು ಮಾಡುತ್ತಾನೆ?

 5. ಅರಸನಾದ ಅರ್ತಷಸ್ತನು ನೆಹೆಮೀಯನಿಗೆ ಹೇಗೆ ದಯೆತೋರಿಸುತ್ತಾನೆ?

 6. ಇಸ್ರಾಯೇಲ್ಯರ ಶತ್ರುಗಳು ಕಟ್ಟುವ ಕೆಲಸವನ್ನು ನಿಲ್ಲಿಸದಂತೆ ನೆಹೆಮೀಯನು ಯಾವ ಏರ್ಪಾಡು ಮಾಡುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ನೆಹೆಮೀಯ 1:4-6 ಮತ್ತು 2:1-20 ಓದಿ.

  ನೆಹೆಮೀಯನು ಹೇಗೆ ಯೆಹೋವನ ಮಾರ್ಗದರ್ಶನವನ್ನು ಕೋರಿದನು? (ನೆಹೆ. 2:4, 5; ರೋಮಾ. 12:12; 1 ಪೇತ್ರ 4:7)

 2. ನೆಹೆಮೀಯ 3:3-5 ಓದಿ.

  ತೆಕೋವದ ಜನರ ಮತ್ತು ಅಲ್ಲಿದ್ದ ‘ಶ್ರೀಮಂತರ’ ನಡುವೆಯಿದ್ದ ವ್ಯತ್ಯಾಸದಿಂದ ಸಭೆಯ ಹಿರಿಯರು ಮತ್ತು ಶುಶ್ರೂಷಾ ಸೇವಕರು ಏನನ್ನು ಕಲಿಯಸಾಧ್ಯವಿದೆ? (ನೆಹೆ. 3:4, 5, 27; 2 ಥೆಸ. 3:7-10; 1 ಪೇತ್ರ 5:5)

 3. ನೆಹೆಮೀಯ 4:1-23 ಓದಿ.

  1. (ಎ) ತೀವ್ರ ವಿರೋಧದ ನಡುವೆಯೂ ಕಟ್ಟುವ ಕೆಲಸವನ್ನು ಮುಂದುವರಿಸುವಂತೆ ಇಸ್ರಾಯೇಲ್ಯರನ್ನು ಯಾವುದು ಪ್ರೇರೇಪಿಸಿತು? (ನೆಹೆ. 4:6, 8, 9; ಕೀರ್ತ. 50:15; ಯೆಶಾ. 65:13, 14)

  2. (ಬಿ) ಇಸ್ರಾಯೇಲ್ಯರ ಮಾದರಿಯು ಇಂದು ನಮ್ಮನ್ನು ಯಾವ ರೀತಿಯಲ್ಲಿ ಉತ್ತೇಜಿಸುತ್ತದೆ?

 4. ನೆಹೆಮೀಯ 6:15 ಓದಿ.

  ಯೆರೂಸಲೇಮಿನ ಗೋಡೆಗಳನ್ನು ಎರಡು ತಿಂಗಳುಗಳೊಳಗೆ ಕಟ್ಟಿ ಪೂರ್ತಿಗೊಳಿಸಿದ ನಿಜತ್ವವು ನಂಬಿಕೆಗಿರುವ ಬಲದ ಕುರಿತು ಏನನ್ನು ತಿಳಿಯಪಡಿಸುತ್ತದೆ? (ಕೀರ್ತ. 56:3, 4; ಮತ್ತಾ. 17:20; 19:26)

ಕಥೆ 84

ಒಬ್ಬ ದೇವದೂತನು ಮರಿಯಳನ್ನು ಭೇಟಿಯಾಗುತ್ತಾನೆ

 1. ಚಿತ್ರದಲ್ಲಿರುವ ಸ್ತ್ರೀ ಯಾರು?

 2. ಗಬ್ರಿಯೇಲ ದೇವದೂತನು ಮರಿಯಳಿಗೆ ಏನೆಂದು ಹೇಳುತ್ತಾನೆ?

 3. ಮರಿಯಳು ಒಬ್ಬ ಪುರುಷನೊಂದಿಗೆ ಜೀವನ ನಡೆಸಿಲ್ಲವಾದರೂ, ಅವಳಿಗೊಂದು ಮಗುವಾಗುವುದೆಂದು ಗಬ್ರಿಯೇಲನು ಹೇಗೆ ವಿವರಿಸುತ್ತಾನೆ?

 4. ಮರಿಯಳು ತನ್ನ ಸಂಬಂಧಿಕಳಾದ ಎಲಿಸಬೇತಳನ್ನು ಭೇಟಿಯಾಗಲು ಹೋದಾಗ ಏನಾಗುತ್ತದೆ?

 5. ಮರಿಯಳಿಗೆ ಮಗುವಾಗಲಿದೆ ಎಂದು ಯೋಸೇಫನಿಗೆ ತಿಳಿದಾಗ ಅವನು ಏನು ಯೋಚಿಸುತ್ತಾನೆ, ಆದರೆ ಅವನು ತನ್ನ ಮನಸ್ಸನ್ನು ಏಕೆ ಬದಲಾಯಿಸುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ಲೂಕ 1:26-56 ಓದಿ.

  1. (ಎ) ಪರಲೋಕದಿಂದ ದೇವರ ಮಗನ ಜೀವವು ಮರಿಯಳ ಗರ್ಭಕ್ಕೆ ವರ್ಗಾಯಿಸಲ್ಪಟ್ಟಾಗ ಅವಳ ಅಂಡಾಣುವಿನಲ್ಲಿ ಆದಾಮನಿಂದ ಬಂದ ಅಪರಿಪೂರ್ಣತೆ ಇರಲಿಲ್ಲವೆಂಬುದನ್ನು ಲೂಕ 1:35 ಹೇಗೆ ಸೂಚಿಸುತ್ತದೆ? (ಹಗ್ಗಾ. 2:11-13; ಯೋಹಾ. 6:69; ಇಬ್ರಿ. 7:26; 10:5)

  2. (ಬಿ) ಯೇಸು ಹುಟ್ಟುವ ಮೊದಲೇ ಅವನಿಗೆ ಗೌರವ ಸಿಕ್ಕಿದ್ದು ಹೇಗೆ? (ಲೂಕ 1:41-43)

  3. (ಸಿ) ಇಂದು ವಿಶೇಷ ಸೇವಾ ಸುಯೋಗಗಳನ್ನು ಪಡೆದುಕೊಳ್ಳುವ ಕ್ರೈಸ್ತರಿಗೆ ಮರಿಯಳು ಯಾವ ಒಳ್ಳೆಯ ಮಾದರಿಯನ್ನು ಇಟ್ಟಿದ್ದಾಳೆ? (ಲೂಕ 1:38, 46-49; 17:10; ಜ್ಞಾನೋ. 11:2)

 2. ಮತ್ತಾಯ 1:18-25 ಓದಿ.

  ಯೇಸುವಿಗೆ ಇಮ್ಮಾನುವೇಲ್‌ ಎಂಬ ಹೆಸರು ಕೊಡಲ್ಪಡದಿದ್ದರೂ, ಒಬ್ಬ ಮಾನವನಾಗಿ ಅವನು ವಹಿಸಿದ ಪಾತ್ರವು ಅದರ ಅರ್ಥವನ್ನು ಹೇಗೆ ಪೂರೈಸಿತು? (ಮತ್ತಾ. 1:22, 23; ಯೋಹಾ. 14:8-10; ಇಬ್ರಿ. 1:1-3)

ಕಥೆ 85

ಯೇಸು ಒಂದು ಹಟ್ಟಿಯಲ್ಲಿ ಜನಿಸುತ್ತಾನೆ

 1. ಚಿತ್ರದಲ್ಲಿರುವ ಚಿಕ್ಕ ಮಗು ಯಾರು, ಮತ್ತು ಮರಿಯಳು ಆ ಮಗುವನ್ನು ಎಲ್ಲಿ ಮಲಗಿಸುತ್ತಾಳೆ?

 2. ಯೇಸು ಪ್ರಾಣಿಗಳ ಹಟ್ಟಿಯಲ್ಲಿ ಜನಿಸಿದ್ದೇಕೆ?

 3. ಚಿತ್ರದಲ್ಲಿ, ಹಟ್ಟಿಗೆ ಬರುತ್ತಿರುವ ಪುರುಷರು ಯಾರು, ಮತ್ತು ಒಬ್ಬ ದೇವದೂತನು ಅವರಿಗೆ ಏನೆಂದು ಹೇಳಿದ್ದನು?

 4. ಯೇಸು ಅಷ್ಟು ವಿಶೇಷ ವ್ಯಕ್ತಿಯೇಕೆ?

 5. ಯೇಸುವನ್ನು ದೇವರ ಕುಮಾರನೆಂದು ಏಕೆ ಹೇಳಸಾಧ್ಯವಿದೆ?

ಹೆಚ್ಚಿನ ಪ್ರಶ್ನೆಗಳು:

 1. ಲೂಕ 2:1-20 ಓದಿ.

  1. (ಎ) ಯೇಸುವಿನ ಜನನದ ಕುರಿತಾದ ಪ್ರವಾದನೆಯ ನೆರವೇರಿಕೆಯಲ್ಲಿ ಚಕ್ರವರ್ತಿ ಔಗುಸ್ತನು ಯಾವ ಪಾತ್ರವನ್ನು ವಹಿಸಿದನು? (ಲೂಕ 2:1-4; ಮೀಕ 5:2)

  2. (ಬಿ) ದೇವರ ಅನುಗ್ರಹ ಹೊಂದಿದವರಲ್ಲಿ ಒಬ್ಬನಾಗಬೇಕಾದರೆ ಒಬ್ಬ ವ್ಯಕ್ತಿಯು ಏನು ಮಾಡಬೇಕು? (ಮತ್ತಾ. 16:24; ಯೋಹಾ. 17:3; ಅ. ಕೃ. 3:19; ಇಬ್ರಿ. 11:6)

  3. (ಸಿ) ಒಬ್ಬ ರಕ್ಷಕನ ಜನನಕ್ಕಾಗಿ ನಮ್ರ ಯೆಹೂದಿ ಕುರುಬರು ಸಂತೋಷಪಟ್ಟಿರುವಲ್ಲಿ ಇಂದು ದೇವರ ಸೇವಕರಿಗೆ ಸಂತೋಷಪಡಲು ಅದಕ್ಕಿಂತಲೂ ಹೆಚ್ಚಾದ ಯಾವ ಕಾರಣವಿದೆ? (ಲೂಕ 2:10, 11; ಎಫೆ. 3:8, 9; ಪ್ರಕ. 11:15; 14:6)

ಕಥೆ 86

ಒಂದು ನಕ್ಷತ್ರದಿಂದ ಮಾರ್ಗದರ್ಶಿಸಲ್ಪಟ್ಟ ಪುರುಷರು

 1. ಚಿತ್ರದಲ್ಲಿರುವ ಪುರುಷರು ಯಾರು, ಮತ್ತು ಅವರಲ್ಲೊಬ್ಬನು ಪ್ರಕಾಶಮಾನವಾಗಿ ಹೊಳೆಯುವ ನಕ್ಷತ್ರಕ್ಕೆ ಬೆರಳು ತೋರಿಸುತ್ತಿರುವುದೇಕೆ?

 2. ಅರಸನಾದ ಹೆರೋದನು ಏಕೆ ಕಳವಳಗೊಳ್ಳುತ್ತಾನೆ, ಮತ್ತು ಅವನು ಏನು ಮಾಡುತ್ತಾನೆ?

 3. ಆ ಹೊಳೆಯುವ ನಕ್ಷತ್ರವು ಪುರುಷರನ್ನು ಎಲ್ಲಿಗೆ ಮಾರ್ಗದರ್ಶಿಸುತ್ತದೆ, ಮತ್ತು ಅವರು ಇನ್ನೊಂದು ದಾರಿಯಿಂದ ತಮ್ಮ ಸ್ವದೇಶಕ್ಕೆ ಹಿಂದಿರುಗುವುದು ಏಕೆ?

 4. ಹೆರೋದನು ಯಾವ ಆಜ್ಞೆಯನ್ನು ಕೊಡುತ್ತಾನೆ, ಮತ್ತು ಏಕೆ?

 5. ಯೆಹೋವನು ಯೋಸೇಫನಿಗೆ ಏನು ಮಾಡುವಂತೆ ಹೇಳುತ್ತಾನೆ?

 6. ಆ ಹೊಸ ನಕ್ಷತ್ರವನ್ನು ಗೋಚರಿಸುವಂತೆ ಮಾಡಿದವನಾರು, ಮತ್ತು ಏಕೆ?

ಹೆಚ್ಚಿನ ಪ್ರಶ್ನೆ:

 1. ಮತ್ತಾಯ 2:1-23 ಓದಿ.

  ಜೋಯಿಸರು ಯೇಸುವನ್ನು ನೋಡಲು ಹೋದಾಗ ಅವನು ಎಷ್ಟು ಪ್ರಾಯದವನಾಗಿದ್ದನು ಮತ್ತು ಎಲ್ಲಿ ವಾಸಿಸುತ್ತಿದ್ದನು? (ಮತ್ತಾ. 2:1, 11, 16)

ಕಥೆ 87

ಬಾಲಕನಾದ ಯೇಸು ದೇವಾಲಯದಲ್ಲಿ

 1. ಚಿತ್ರದಲ್ಲಿ ಕಾಣುವ ಯೇಸುವಿಗೆ ಎಷ್ಟು ಪ್ರಾಯ, ಮತ್ತು ಅವನು ಎಲ್ಲಿದ್ದಾನೆ?

 2. ಪ್ರತಿ ವರ್ಷ ಯೋಸೇಫನು ತನ್ನ ಕುಟುಂಬವನ್ನು ಎಲ್ಲಿಗೆ ಕರೆದೊಯ್ಯುತ್ತಾನೆ?

 3. ಮನೆಗೆ ಹಿಂದಿರುಗುವ ದಾರಿಯಲ್ಲಿ ಒಂದು ದಿನವಿಡೀ ಪ್ರಯಾಣಿಸಿದ ಬಳಿಕ, ಯೋಸೇಫ ಮತ್ತು ಮರಿಯಳು ಏಕೆ ಯೆರೂಸಲೇಮಿಗೆ ತಿರುಗಿ ಹೋಗುತ್ತಾರೆ?

 4. ಯೋಸೇಫನೂ ಮರಿಯಳೂ ಯೇಸುವನ್ನು ಎಲ್ಲಿ ಕಂಡುಕೊಳ್ಳುತ್ತಾರೆ, ಮತ್ತು ಅಲ್ಲಿರುವ ಜನರು ಏಕೆ ಬೆರಗಾಗುತ್ತಾರೆ?

 5. ತನ್ನ ತಾಯಿಯಾದ ಮರಿಯಳಿಗೆ ಯೇಸು ಏನೆಂದು ಹೇಳುತ್ತಾನೆ?

 6. ದೇವರ ಕುರಿತು ಕಲಿಯುವುದರಲ್ಲಿ ನಾವು ಹೇಗೆ ಯೇಸುವಿನಂತೆ ಇರಸಾಧ್ಯವಿದೆ?

ಹೆಚ್ಚಿನ ಪ್ರಶ್ನೆಗಳು:

 1. ಲೂಕ 2:41-52 ಓದಿ.

  1. (ಎ) ಧರ್ಮಶಾಸ್ತ್ರಕ್ಕನುಸಾರ ವಾರ್ಷಿಕ ಉತ್ಸವಗಳಿಗೆ ಕೇವಲ ಪುರುಷರು ಮಾತ್ರ ಹಾಜರಾಗಬೇಕಿತ್ತಾದರೂ, ಯೋಸೇಫ ಮತ್ತು ಮರಿಯಳು ಇಂದಿನ ಹೆತ್ತವರಿಗೆ ಯಾವ ಉತ್ತಮ ಮಾದರಿಯನ್ನಿಟ್ಟಿದ್ದಾರೆ? (ಲೂಕ 2:41; ಧರ್ಮೋ. 16:16; 31:12; ಜ್ಞಾನೋ. 22:6)

  2. (ಬಿ) ಇಂದಿನ ಎಳೆಯರು ತಮ್ಮ ಹೆತ್ತವರಿಗೆ ಅಧೀನರಾಗಿರುವ ವಿಷಯದಲ್ಲಿ ಯೇಸು ಹೇಗೆ ಒಂದು ಉತ್ತಮ ಮಾದರಿಯನ್ನಿಟ್ಟಿದ್ದಾನೆ? (ಲೂಕ 2:51; ಧರ್ಮೋ. 5:16; ಜ್ಞಾನೋ. 23:22; ಕೊಲೊ. 3:20)

 2. ಮತ್ತಾಯ 13:53-56 ಓದಿ.

  ಯೇಸುವಿನ ಯಾವ ನಾಲ್ಕು ಮಂದಿ ಒಡಹುಟ್ಟಿದ ಸಹೋದರರನ್ನು ಬೈಬಲ್‌ ಹೆಸರಿಸುತ್ತದೆ, ಮತ್ತು ಅವರಲ್ಲಿ ಇಬ್ಬರು ನಂತರ ಕ್ರೈಸ್ತ ಸಭೆಯಲ್ಲಿ ಹೇಗೆ ಉಪಯೋಗಿಸಲ್ಪಟ್ಟರು? (ಮತ್ತಾ. 13:55; ಅ. ಕೃ. 12:17; 15:6, 13; 21:18; ಗಲಾ. 1:19; ಯಾಕೋ. 1:1; ಯೂದ 1)

ಕಥೆ 88

ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ಮಾಡಿಸುತ್ತಾನೆ

 1. ಚಿತ್ರದಲ್ಲಿರುವ ಇಬ್ಬರು ಪುರುಷರು ಯಾರು?

 2. ವ್ಯಕ್ತಿಯೊಬ್ಬನು ದೀಕ್ಷಾಸ್ನಾನ ಪಡೆಯುವುದು ಹೇಗೆ?

 3. ಯೋಹಾನನು ಸಾಮಾನ್ಯವಾಗಿ ಯಾರಿಗೆ ದೀಕ್ಷಾಸ್ನಾನ ಮಾಡಿಸುತ್ತಾನೆ?

 4. ಯೇಸು ಯಾವ ವಿಶೇಷ ಕಾರಣಕ್ಕಾಗಿ ತನಗೆ ದೀಕ್ಷಾಸ್ನಾನ ಮಾಡಿಸುವಂತೆ ಯೋಹಾನನನ್ನು ಕೇಳಿಕೊಳ್ಳುತ್ತಾನೆ?

 5. ಯೇಸು ದೀಕ್ಷಾಸ್ನಾನ ಪಡೆದದ್ದನ್ನು ತಾನು ಮೆಚ್ಚಿದ್ದೇನೆಂದು ದೇವರು ಹೇಗೆ ತೋರಿಸುತ್ತಾನೆ?

 6. ಯೇಸು 40 ದಿನಗಳ ವರೆಗೆ ಒಂದು ಏಕಾಂತ ಸ್ಥಳಕ್ಕೆ ಹೋದಾಗ ಏನಾಗುತ್ತದೆ?

 7. ಯೇಸುವಿನ ಕೆಲವು ಪ್ರಥಮ ಹಿಂಬಾಲಕರು ಅಥವಾ ಶಿಷ್ಯರು ಯಾರಾಗಿದ್ದರು, ಮತ್ತು ಅವನ ಮೊದಲನೆಯ ಅದ್ಭುತ ಯಾವುದು?

ಹೆಚ್ಚಿನ ಪ್ರಶ್ನೆಗಳು:

 1. ಮತ್ತಾಯ 3:13-17 ಓದಿ.

  ತನ್ನ ಶಿಷ್ಯರು ದೀಕ್ಷಾಸ್ನಾನ ಪಡೆದುಕೊಳ್ಳುವ ವಿಷಯದಲ್ಲಿ ಯೇಸು ಯಾವ ಮಾದರಿಯನ್ನಿಟ್ಟಿದ್ದಾನೆ? (ಕೀರ್ತ. 40:7, 8; ಮತ್ತಾ. 28:19, 20; ಲೂಕ 3:21, 22)

 2. ಮತ್ತಾಯ 4:1-11 ಓದಿ.

  ಯೇಸು ಶಾಸ್ತ್ರವಚನಗಳನ್ನು ಕೌಶಲದಿಂದ ಉಪಯೋಗಿಸಿದ ವಿಷಯವು, ಬೈಬಲನ್ನು ಕ್ರಮವಾಗಿ ಅಧ್ಯಯನ ಮಾಡುವಂತೆ ನಮ್ಮನ್ನು ಹೇಗೆ ಉತ್ತೇಜಿಸುತ್ತದೆ? (ಮತ್ತಾ. 4:5-7; 2 ಪೇತ್ರ 3:17, 18; 1 ಯೋಹಾ. 4:1)

 3. ಯೋಹಾನ 1:29-51 ಓದಿ.

  ಸ್ನಾನಿಕನಾದ ಯೋಹಾನನು ತನ್ನ ಶಿಷ್ಯರನ್ನು ಯಾರೆಡೆಗೆ ನಿರ್ದೇಶಿಸಿದನು, ಮತ್ತು ಇಂದು ನಾವು ಅವನನ್ನು ಹೇಗೆ ಅನುಕರಿಸಬಲ್ಲೆವು? (ಯೋಹಾ. 1:29, 35, 36; 3:30; ಮತ್ತಾ. 23:10)

 4. ಯೋಹಾನ 2:1-12 ಓದಿ.

  ಯೆಹೋವನು ತನ್ನ ಸೇವಕರಿಗೆ ಯಾವುದೇ ಒಳ್ಳೆಯ ವಿಷಯಗಳು ಸಿಗದಂತೆ ತಡೆದು ಹಿಡಿಯುವುದಿಲ್ಲ ಎಂಬುದನ್ನು ಯೇಸುವಿನ ಮೊದಲನೇ ಅದ್ಭುತವು ಹೇಗೆ ತೋರಿಸಿತು? (ಯೋಹಾ. 2:9, 10; ಕೀರ್ತ. 84:11; ಯಾಕೋ. 1:17)

ಕಥೆ 89

ಯೇಸು ದೇವಾಲಯವನ್ನು ಶುದ್ಧಮಾಡುತ್ತಾನೆ

 1. ಜನರು ದೇವಾಲಯದಲ್ಲಿ ಪ್ರಾಣಿಗಳನ್ನು ಏಕೆ ಮಾರುತ್ತಿದ್ದಾರೆ?

 2. ಯೇಸು ಏಕೆ ಸಿಟ್ಟುಗೊಳ್ಳುತ್ತಾನೆ?

 3. ನೀವು ಚಿತ್ರದಲ್ಲಿ ನೋಡುವಂತೆ ಯೇಸು ಏನು ಮಾಡುತ್ತಾನೆ, ಮತ್ತು ಅವನು ಪಾರಿವಾಳಗಳನ್ನು ಮಾರುವವರಿಗೆ ಏನೆಂದು ಆಜ್ಞಾಪಿಸುತ್ತಾನೆ?

 4. ಯೇಸು ಮಾಡುತ್ತಿರುವ ವಿಷಯವನ್ನು ನೋಡಿ ಅವನ ಹಿಂಬಾಲಕರು ಏನನ್ನು ನೆನಪಿಸಿಕೊಳ್ಳುತ್ತಾರೆ?

 5. ಯೇಸು ಗಲಿಲಾಯಕ್ಕೆ ಪ್ರಯಾಣಮಾಡುವಾಗ ಯಾವ ಪ್ರದೇಶವನ್ನು ಹಾದುಹೋಗುತ್ತಾನೆ?

ಹೆಚ್ಚಿನ ಪ್ರಶ್ನೆ:

 1. ಯೋಹಾನ 2:13-25 ಓದಿ.

  ಯೇಸು ಆಲಯದಲ್ಲಿ ವ್ಯಾಪಾರಿಗಳ ಮೇಲೆ ಕೋಪೋದ್ರಿಕ್ತನಾದದ್ದನ್ನು ಪರಿಗಣಿಸುವಾಗ, ರಾಜ್ಯ ಸಭಾಗೃಹಗಳಲ್ಲಿ ವ್ಯಾಪಾರ ಚಟುವಟಿಕೆಗಳನ್ನು ನಡೆಸುವ ವಿಷಯದಲ್ಲಿ ನಮಗೆ ಯಾವ ಸರಿಯಾದ ನೋಟವಿರಬೇಕು? (ಯೋಹಾ. 2:15, 16; 1 ಕೊರಿಂ. 10:24, 31-33)

ಕಥೆ 90

ಬಾವಿಯ ಬಳಿಯಲ್ಲಿ ಸ್ತ್ರೀಯೊಂದಿಗೆ

 1. ಯೇಸು ಸಮಾರ್ಯದ ಒಂದು ಬಾವಿಯ ಬಳಿ ಏಕೆ ಕೂತುಕೊಳ್ಳುತ್ತಾನೆ, ಮತ್ತು ಅಲ್ಲಿ ಅವನು ಸ್ತ್ರೀಯೊಬ್ಬಳಿಗೆ ಏನು ಹೇಳುತ್ತಿದ್ದಾನೆ?

 2. ಆ ಸ್ತ್ರೀ ಏಕೆ ಆಶ್ಚರ್ಯಪಡುತ್ತಾಳೆ, ಯೇಸು ಅವಳಿಗೆ ಏನು ಹೇಳುತ್ತಾನೆ, ಮತ್ತು ಏಕೆ?

 3. ಯೇಸು ಯಾವ ನೀರಿನ ಕುರಿತು ಮಾತಾಡುತ್ತಿದ್ದಾನೆಂದು ಆ ಸ್ತ್ರೀ ನೆನಸುತ್ತಾಳೆ, ಆದರೆ ಅವನು ನಿಜವಾಗಿಯೂ ಯಾವ ನೀರಿನ ಕುರಿತು ಮಾತಾಡುತ್ತಿದ್ದಾನೆ?

 4. ಆ ಸ್ತ್ರೀಯು ತನ್ನ ಕುರಿತು ಯೇಸು ಹೇಳಿದ ವಿಷಯವನ್ನು ಕೇಳಿ ಏಕೆ ಆಶ್ಚರ್ಯಪಡುತ್ತಾಳೆ, ಮತ್ತು ಅವನಿಗೆ ಆ ವಿಷಯಗಳೆಲ್ಲಾ ಹೇಗೆ ತಿಳಿಯಿತು?

 5. ಬಾವಿಯ ಬಳಿಯಲ್ಲಿದ್ದ ಸ್ತ್ರೀಯ ವೃತ್ತಾಂತದಿಂದ ನಾವು ಯಾವ ಪಾಠಗಳನ್ನು ಕಲಿಯಬಲ್ಲೆವು?

ಹೆಚ್ಚಿನ ಪ್ರಶ್ನೆಗಳು:

 1. ಯೋಹಾನ 4:5-43 ಓದಿ.

  1. (ಎ) ಯೇಸುವಿನ ಮಾದರಿಯನ್ನು ಅನುಸರಿಸುತ್ತಾ, ವಿಭಿನ್ನ ಜಾತಿ ಅಥವಾ ಸಾಮಾಜಿಕ ಹಿನ್ನೆಲೆಯ ಜನರ ಕಡೆಗೆ ನಮಗೆ ಯಾವ ಮನೋಭಾವವಿರಬೇಕು? (ಯೋಹಾ. 4:9; 1 ಕೊರಿಂ. 9:22; 1 ತಿಮೊ. 2:3, 4; ತೀತ 2:11)

  2. (ಬಿ) ಯೇಸುವಿನ ಶಿಷ್ಯನಾಗುವ ಒಬ್ಬ ವ್ಯಕ್ತಿಗೆ ಯಾವ ಆಧ್ಯಾತ್ಮಿಕ ಪ್ರಯೋಜನಗಳು ದೊರೆಯುತ್ತವೆ? (ಯೋಹಾ. 4:14; ಯೆಶಾ. 58:11; 2 ಕೊರಿಂ. 4:16)

  3. (ಸಿ) ತಾನು ಕಲಿತ ವಿಷಯಗಳನ್ನು ಇತರರೊಡನೆ ಹಂಚಿಕೊಳ್ಳಲು ಕಾತುರಳಾಗಿದ್ದ ಆ ಸಮಾರ್ಯದ ಸ್ತ್ರೀಯಂತೆ ನಾವು ಸಹ ಹೇಗೆ ಗಣ್ಯತೆಯನ್ನು ತೋರಿಸಸಾಧ್ಯವಿದೆ? (ಯೋಹಾ. 4:7, 28; ಮತ್ತಾ. 6:33; ಲೂಕ 10:40-42)

ಕಥೆ 91

ಯೇಸು ಪರ್ವತದ ಮೇಲೆ ಕಲಿಸುತ್ತಾನೆ

 1. ಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ ಯೇಸು ಎಲ್ಲಿ ಕಲಿಸುತ್ತಿದ್ದಾನೆ, ಮತ್ತು ಅವನ ಪಕ್ಕದಲ್ಲಿ ಕೂತಿರುವವರು ಯಾರು?

 2. ಅವನ 12 ಮಂದಿ ಅಪೊಸ್ತಲರ ಹೆಸರೇನು?

 3. ಯೇಸು ಯಾವ ರಾಜ್ಯದ ಕುರಿತು ಸಾರುತ್ತಿದ್ದಾನೆ?

 4. ಯಾವುದಕ್ಕಾಗಿ ಪ್ರಾರ್ಥಿಸುವಂತೆ ಯೇಸು ಜನರಿಗೆ ಕಲಿಸುತ್ತಾನೆ?

 5. ಜನರು ಒಬ್ಬರನ್ನೊಬ್ಬರು ಹೇಗೆ ಉಪಚರಿಸಬೇಕೆಂದು ಯೇಸು ಹೇಳುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ಮತ್ತಾಯ 5:1-12 ಓದಿ.

  ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರಾಗಿದ್ದೇವೆ ಎಂಬುದನ್ನು ನಾವು ಯಾವ ವಿಧಗಳಲ್ಲಿ ತೋರಿಸಸಾಧ್ಯವಿದೆ? (ಮತ್ತಾ. 5:3, NW; ರೋಮಾ. 10:13-15; 1 ತಿಮೊ. 4:13, 15, 16)

 2. ಮತ್ತಾಯ 5:21-26 ಓದಿ.

  ಸಹೋದರರೊಂದಿಗಿರುವ ನಮ್ಮ ಸಂಬಂಧವು ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಪ್ರಭಾವಿಸುತ್ತದೆ ಎಂಬುದನ್ನು ಮತ್ತಾಯ 5:23, 24 ಹೇಗೆ ಒತ್ತಿಹೇಳುತ್ತದೆ? (ಮತ್ತಾ. 6:14, 15; ಕೀರ್ತ. 133:1; ಕೊಲೊ. 3:13; 1 ಯೋಹಾ. 4:20)

 3. ಮತ್ತಾಯ 6:1-8 ಓದಿ.

  ಕ್ರೈಸ್ತರು ತೊರೆಯಬೇಕಾದ ಸ್ವನೀತಿಯ ಕೆಲವು ವಿಧಗಳು ಯಾವುವು? (ಲೂಕ 18:11, 12; 1 ಕೊರಿಂ. 4:6, 7; 2 ಕೊರಿಂ. 9:7)

 4. ಮತ್ತಾಯ 6:25-34 ಓದಿ.

  ಭೌತಿಕ ಒದಗಿಸುವಿಕೆಗಳಿಗಾಗಿ ನಾವು ಯೆಹೋವನಲ್ಲಿ ಭರವಸೆಯಿಡುವುದರ ಕುರಿತು ಯೇಸು ಏನು ಕಲಿಸಿದನು? (ವಿಮೋ. 16:4; ಕೀರ್ತ. 37:25; ಫಿಲಿ. 4:6)

 5. ಮತ್ತಾಯ 7:1-11 ಓದಿ.

  ಮತ್ತಾಯ 7:5 ರಲ್ಲಿರುವ ದೃಷ್ಟಾಂತವು ನಮಗೆ ಯಾವ ಪಾಠವನ್ನು ಕಲಿಸುತ್ತದೆ? (ಜ್ಞಾನೋ. 26:12; ರೋಮಾ. 2:1; 14:10; ಯಾಕೋ. 4:11, 12)

ಕಥೆ 92

ಯೇಸು ಸತ್ತವರನ್ನು ಎಬ್ಬಿಸುತ್ತಾನೆ

 1. ಚಿತ್ರದಲ್ಲಿರುವ ಹುಡುಗಿಯ ತಂದೆ ಯಾರು, ಮತ್ತು ಅವನು ಹಾಗೂ ಅವನ ಪತ್ನಿ ಏಕೆ ಬಹಳ ಚಿಂತೆಯಲ್ಲಿದ್ದರು?

 2. ಯಾಯೀರನು ಯೇಸುವನ್ನು ಕಂಡುಹಿಡಿದಾಗ ಏನು ಮಾಡುತ್ತಾನೆ?

 3. ಯೇಸು ಯಾಯೀರನ ಮನೆಗೆ ಹೋಗುತ್ತಿರುವಾಗ ಏನು ಸಂಭವಿಸುತ್ತದೆ, ಮತ್ತು ದಾರಿಯಲ್ಲಿ ಯಾಯೀರನಿಗೆ ಯಾವ ಸುದ್ದಿ ಸಿಗುತ್ತದೆ?

 4. ಯಾಯೀರನ ಮನೆಯಲ್ಲಿದ್ದ ಜನರು ಯೇಸುವಿಗೆ ಏಕೆ ಗೇಲಿಮಾಡುತ್ತಾರೆ?

 5. ಆ ಹುಡುಗಿಯ ಕೋಣೆಯೊಳಗೆ ಅವಳ ತಂದೆತಾಯಿಯನ್ನೂ ತನ್ನ ಮೂವರು ಅಪೊಸ್ತಲರನ್ನೂ ಕರೆದುಕೊಂಡು ಹೋದ ಬಳಿಕ ಯೇಸು ಏನು ಮಾಡುತ್ತಾನೆ?

 6. ಯೇಸು ಬೇರೆ ಯಾರನ್ನು ಸಹ ಸತ್ತವರೊಳಗಿಂದ ಎಬ್ಬಿಸಿದ್ದಾನೆ, ಮತ್ತು ಇದು ಏನನ್ನು ತೋರಿಸುತ್ತದೆ?

ಹೆಚ್ಚಿನ ಪಶ್ನೆಗಳು:

 1. ಲೂಕ 8:40-56 ಓದಿ.

  ರಕ್ತಕುಸುಮರೋಗವಿದ್ದ ಸ್ತ್ರಿಗೆ ಯೇಸು ಕನಿಕರ ಮತ್ತು ನ್ಯಾಯಸಮ್ಮತತೆಯನ್ನು ಹೇಗೆ ತೋರಿಸಿದನು, ಮತ್ತು ಇಂದು ಕ್ರೈಸ್ತ ಹಿರಿಯರು ಅದರಿಂದ ಏನನ್ನು ಕಲಿಯಸಾಧ್ಯವಿದೆ? (ಲೂಕ 8:43, 44, 47, 48; ಯಾಜ. 15:25-27; ಮತ್ತಾ. 9:12, 13; ಕೊಲೊ. 3:12-14)

 2. ಲೂಕ 7:11-17 ಓದಿ.

  ನಾಯಿನೆಂಬ ಊರಿನಲ್ಲಿದ್ದ ವಿಧವೆಯ ಸ್ಥಿತಿಯನ್ನು ನೋಡಿ ಯೇಸು ಪ್ರತಿವರ್ತಿಸಿದ ರೀತಿಯು, ಮರಣದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವವರಿಗೆ ಏಕೆ ಬಹಳಷ್ಟು ಸಾಂತ್ವನ ನೀಡಬಲ್ಲದು? (ಲೂಕ 7:13; 2 ಕೊರಿಂ. 1:3, 4; ಇಬ್ರಿ. 4:15)

 3. ಯೋಹಾನ 11:17-44 ಓದಿ.

  ಪ್ರೀತಿಪಾತ್ರರ ಮರಣಕ್ಕಾಗಿ ದುಃಖಿಸುವುದು ಸಹಜವೆಂಬುದನ್ನು ಯೇಸು ಹೇಗೆ ತೋರಿಸಿದನು? (ಯೋಹಾ. 11:33-36, 38; 2 ಸಮು. 18:33; 19:1-4)

ಕಥೆ 93

ಯೇಸು ಅನೇಕ ಜನರಿಗೆ ಉಣಿಸುತ್ತಾನೆ

 1. ಸ್ನಾನಿಕನಾದ ಯೋಹಾನನಿಗೆ ಯಾವ ಭೀಕರ ಸಂಗತಿಯು ಸಂಭವಿಸಿದೆ, ಮತ್ತು ಇದರ ಕುರಿತು ಯೇಸುವಿಗೆ ಹೇಗನಿಸುತ್ತದೆ?

 2. ತನ್ನನ್ನು ಹಿಂಬಾಲಿಸಿ ಬಂದ ಜನರ ಗುಂಪಿಗೆ ಯೇಸು ಹೇಗೆ ಉಣಿಸುತ್ತಾನೆ, ಮತ್ತು ಎಷ್ಟು ಆಹಾರ ಉಳಿಯುತ್ತದೆ?

 3. ರಾತ್ರಿ ಸಮಯದಲ್ಲಿ ಶಿಷ್ಯರು ಬಹಳವಾಗಿ ಹೆದರುವುದು ಏಕೆ, ಮತ್ತು ಪೇತ್ರನಿಗೆ ಏನಾಗುತ್ತದೆ?

 4. ಎರಡನೆಯ ಬಾರಿ ಯೇಸು ಸಾವಿರಾರು ಜನರಿಗೆ ಉಣಿಸುವುದು ಹೇಗೆ?

 5. ಯೇಸು ದೇವರ ರಾಜ್ಯದ ಅರಸನಾಗಿ ಭೂಮಿಯನ್ನು ಆಳುವ ಸಮಯವು ಅದ್ಭುತಕರವಾಗಿರುವುದು ಏಕೆ?

ಹೆಚ್ಚಿನ ಪ್ರಶ್ನೆಗಳು:

 1. ಮತ್ತಾಯ 14:1-32 ಓದಿ.

  1. (ಎ) ಪೇತ್ರನ ವ್ಯಕ್ತಿತ್ವದ ಕುರಿತು ಮತ್ತಾಯ 14:23-32 ರಲ್ಲಿರುವ ವೃತ್ತಾಂತವು ಯಾವ ಒಳನೋಟವನ್ನು ಒದಗಿಸುತ್ತದೆ?

  2. (ಬಿ) ಪೇತ್ರನು ಪ್ರೌಢನಾದನು ಮತ್ತು ಆವೇಗಪರ ವರ್ತನೆಯನ್ನು ಬಿಟ್ಟುಬಿಟ್ಟನು ಎಂದು ಬೈಬಲಿನ ದಾಖಲೆಯು ಹೇಗೆ ತೋರಿಸುತ್ತದೆ? (ಮತ್ತಾ. 14:27-30; ಯೋಹಾ. 18:10; 21:7; ಅ. ಕೃ. 2:14, 37-40; 1 ಪೇತ್ರ 5:6, 10)

 2. ಮತ್ತಾಯ 15:29-38 ಓದಿ.

  ತನ್ನ ತಂದೆಯು ಒದಗಿಸಿದ ಭೌತಿಕ ವಿಷಯಗಳಿಗಾಗಿ ಯೇಸು ಹೇಗೆ ಗೌರವವನ್ನು ತೋರಿಸಿದನು? (ಮತ್ತಾ. 15:37; ಯೋಹಾ. 6:12; ಕೊಲೊ. 3:15)

 3. ಯೋಹಾನ 6:1-21 ಓದಿ.

  ಸರಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಇಂದು ಕ್ರೈಸ್ತರು ಯೇಸುವಿನ ಮಾದರಿಯನ್ನು ಹೇಗೆ ಅನುಕರಿಸಬಲ್ಲರು? (ಯೋಹಾ. 6:15; ಮತ್ತಾ. 22:21; ರೋಮಾ. 12:2; 13:1-4)

ಕಥೆ 94

ಅವನು ಚಿಕ್ಕ ಮಕ್ಕಳನ್ನು ಪ್ರೀತಿಸುತ್ತಾನೆ

 1. ಅಪೊಸ್ತಲರು ಬಹು ದೂರ ಪ್ರಯಾಣಿಸುತ್ತಿರುವಾಗ ದಾರಿಯಲ್ಲಿ ತಮ್ಮೊಳಗೆ ಏನೆಂದು ವಾಗ್ವಾದಮಾಡಿಕೊಳ್ಳುತ್ತಾರೆ?

 2. ಯೇಸು ಒಂದು ಚಿಕ್ಕ ಮಗುವನ್ನು ಕರೆದು ಅಪೊಸ್ತಲರ ಮಧ್ಯದಲ್ಲಿ ಏಕೆ ನಿಲ್ಲಿಸುತ್ತಾನೆ?

 3. ಯಾವ ರೀತಿಯಲ್ಲಿ ಅಪೊಸ್ತಲರು ಮಕ್ಕಳಂತಿರಲು ಕಲಿಯಬೇಕು?

 4. ತನಗೆ ಮಕ್ಕಳೆಂದರೆ ಇಷ್ಟವೆಂದು ಯೇಸು ಹಲವು ತಿಂಗಳುಗಳ ನಂತರ ಮತ್ತೆ ಹೇಗೆ ತೋರಿಸುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ಮತ್ತಾಯ 18:1-4 ಓದಿ.

  ತನ್ನ ಬೋಧನೆಯಲ್ಲಿ ಯೇಸು ಸಾಮ್ಯಗಳನ್ನು ಏಕೆ ಉಪಯೋಗಿಸಿದನು? (ಮತ್ತಾ. 13:34, 36; ಮಾರ್ಕ 4:33, 34)

 2. ಮತ್ತಾಯ 19:13-15 ಓದಿ.

  ರಾಜ್ಯದ ಆಶೀರ್ವಾದಗಳನ್ನು ನಾವು ಪಡೆದುಕೊಳ್ಳಬೇಕಾದರೆ ಚಿಕ್ಕ ಮಕ್ಕಳ ಯಾವ ಗುಣಗಳನ್ನು ನಾವು ಅನುಕರಿಸಬೇಕು? (ಕೀರ್ತ. 25:9; 138:6; 1 ಕೊರಿಂ. 14:20)

 3. ಮಾರ್ಕ 9:33-37 ಓದಿ.

  ಪ್ರತಿಷ್ಠಿತ ಸ್ಥಾನಗಳನ್ನು ಬಯಸುವ ವಿಷಯದಲ್ಲಿ ಯೇಸು ತನ್ನ ಶಿಷ್ಯರಿಗೆ ಯಾವ ಪಾಠವನ್ನು ಕಲಿಸಿದನು? (ಮಾರ್ಕ 9:35; ಮತ್ತಾ. 20:25, 26; ಗಲಾ. 6:3; ಫಿಲಿ. 2:5-8)

 4. ಮಾರ್ಕ 10:13-16 ಓದಿ.

  ಯೇಸು ಯಾವ ರೀತಿಯಲ್ಲಿ ಸ್ನೇಹಪರನಾಗಿದ್ದನು, ಮತ್ತು ಅವನ ಮಾದರಿಯಿಂದ ಕ್ರೈಸ್ತ ಹಿರಿಯರು ಏನನ್ನು ಕಲಿಯಸಾಧ್ಯವಿದೆ? (ಮಾರ್ಕ 6:30-34; ಫಿಲಿ. 2:1-4; 1 ತಿಮೊ. 4:12)

ಕಥೆ 95

ಯೇಸು ಕಲಿಸುವ ವಿಧ

 1. ಒಬ್ಬ ಮನುಷ್ಯನು ಯೇಸುವಿಗೆ ಯಾವ ಪ್ರಶ್ನೆ ಕೇಳುತ್ತಾನೆ, ಮತ್ತು ಏಕೆ?

 2. ಕೆಲವು ಸಲ ಯೇಸು ಯಾವುದರ ಮೂಲಕ ಕಲಿಸುತ್ತಾನೆ, ಮತ್ತು ಯೆಹೂದ್ಯರ ಹಾಗೂ ಸಮಾರ್ಯದವರ ಬಗ್ಗೆ ನಾವು ಈಗಾಗಲೇ ಏನನ್ನು ಕಲಿತಿದ್ದೇವೆ?

 3. ಯೇಸು ಹೇಳುವ ಕಥೆಯಲ್ಲಿ, ಒಬ್ಬ ಯೆಹೂದ್ಯನು ಯೆರಿಕೋವಿಗೆ ಪ್ರಯಾಣಿಸುತ್ತಿರುವಾಗ ದಾರಿಯಲ್ಲಿ ಏನಾಗುತ್ತದೆ?

 4. ಒಬ್ಬ ಯೆಹೂದ್ಯ ಯಾಜಕನು ಮತ್ತು ಲೇವಿಯನು ಆ ಮಾರ್ಗವಾಗಿ ಬಂದಾಗ ಏನು ಮಾಡುತ್ತಾರೆ?

 5. ಚಿತ್ರದಲ್ಲಿ, ಪೆಟ್ಟುಬಿದ್ದ ಯೆಹೂದ್ಯನಿಗೆ ಸಹಾಯಮಾಡುತ್ತಿರುವವನು ಯಾರು?

 6. ಯೇಸು ಕಥೆಯನ್ನು ಹೇಳಿ ಮುಗಿಸಿದ ನಂತರ ಯಾವ ಪ್ರಶ್ನೆಯನ್ನು ಕೇಳುತ್ತಾನೆ, ಮತ್ತು ಆ ಮನುಷ್ಯನು ಹೇಗೆ ಉತ್ತರಿಸುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ಲೂಕ 10:25-37 ಓದಿ.

  1. (ಎ) ಯೇಸು ಒಬ್ಬ ಧರ್ಮೋಪದೇಶಕನಿಗೆ ನೇರವಾದ ಉತ್ತರವನ್ನು ಕೊಡುವ ಬದಲು, ಆ ವಿಷಯದ ಕುರಿತು ಅವನೇ ವಿವೇಚಿಸುವಂತೆ ಹೇಗೆ ಸಹಾಯಮಾಡಿದನು? (ಲೂಕ 10:26; ಮತ್ತಾ. 16:13-16)

  2. (ಬಿ) ತನ್ನ ಕೇಳುಗರಲ್ಲಿದ್ದ ಪೂರ್ವಗ್ರಹವನ್ನು ತೊರೆಯಲು ಯೇಸು ದೃಷ್ಟಾಂತಗಳನ್ನು ಹೇಗೆ ಉಪಯೋಗಿಸಿದನು? (ಲೂಕ 10:36, 37; 18:9-14; ತೀತ 1:9)

ಕಥೆ 96

ಯೇಸು ರೋಗಿಗಳನ್ನು ಗುಣಪಡಿಸುತ್ತಾನೆ

 1. ಯೇಸು ದೇಶದಲ್ಲೆಲ್ಲಾ ಸಂಚಾರ ಮಾಡುತ್ತಿರುವಾಗ ಏನು ಮಾಡುತ್ತಾನೆ?

 2. ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡು ಮೂರು ವರ್ಷಗಳಾದ ಬಳಿಕ, ತನ್ನ ಅಪೊಸ್ತಲರಿಗೆ ಏನು ಹೇಳುತ್ತಾನೆ?

 3. ಚಿತ್ರದಲ್ಲಿರುವ ಜನರು ಯಾರು, ಮತ್ತು ಯೇಸು ಆ ಸ್ತ್ರೀಗೆ ಯಾವ ಸಹಾಯಮಾಡುತ್ತಾನೆ?

 4. ಧಾರ್ಮಿಕ ಮುಖಂಡರ ಆಕ್ಷೇಪಣೆಗಳಿಗೆ ಯೇಸು ನೀಡಿದ ಉತ್ತರವು ಅವರನ್ನು ಏಕೆ ನಾಚಿಕೆಗೀಡುಮಾಡುತ್ತದೆ?

 5. ಯೇಸು ತನ್ನ ಅಪೊಸ್ತಲರೊಂದಿಗೆ ಯೆರಿಕೋ ಪಟ್ಟಣದ ಸಮೀಪವಿದ್ದಾಗ ಇಬ್ಬರು ಕುರುಡ ಭಿಕ್ಷುಕರಿಗೆ ಏನು ಮಾಡುತ್ತಾನೆ?

 6. ಯೇಸು ಅದ್ಭುತಗಳನ್ನು ಏಕೆ ಮಾಡುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ಮತ್ತಾಯ 15:30, 31 ಓದಿ.

  ಯೆಹೋವನ ಶಕ್ತಿಯ ಯಾವ ಅದ್ಭುತಕರ ಪ್ರದರ್ಶನವು ಯೇಸುವಿನ ಮೂಲಕ ತೋರಿಸಲ್ಪಟ್ಟಿದೆ, ಮತ್ತು ಇದು ಯೆಹೋವನು ಹೊಸ ಲೋಕದ ಕುರಿತು ವಾಗ್ದಾನಿಸಿದ್ದರ ಬಗ್ಗೆ ತಿಳಿದುಕೊಳ್ಳಲು ನಮಗೆ ಹೇಗೆ ಸಹಾಯಮಾಡುತ್ತದೆ? (ಕೀರ್ತ. 37:29; ಯೆಶಾ. 33:24)

 2. ಲೂಕ 13:10-17 ಓದಿ.

  ಕೆಲವು ಎದ್ದುಕಾಣುವ ಅದ್ಭುತಗಳನ್ನು ಯೇಸು ಸಬ್ಬತ್‌ ದಿನದಲ್ಲಿ ಮಾಡಿದ ಸತ್ಯಾಂಶವು, ಅವನು ತನ್ನ ಸಾವಿರ ವರ್ಷದ ಆಳಿಕೆಯಲ್ಲಿ ಮಾನವಕುಲಕ್ಕಾಗಿ ತರಲಿರುವ ಉಪಶಮನವನ್ನು ಹೇಗೆ ತೋರಿಸುತ್ತದೆ? (ಲೂಕ 13:10-13; ಕೀರ್ತ. 46:9; ಮತ್ತಾ. 12:8; ಕೊಲೊ. 2:16, 17; ಪ್ರಕ. 21:1-4)

 3. ಮತ್ತಾಯ 20:29-34 ಓದಿ.

  ಯೇಸು ಜನರಿಗೆ ಸಹಾಯಮಾಡಲಿಕ್ಕಾಗದಷ್ಟು ಕಾರ್ಯಮಗ್ನನಾಗಿರಲಿಲ್ಲ ಎಂಬುದನ್ನು ಈ ವೃತ್ತಾಂತವು ಹೇಗೆ ತೋರಿಸುತ್ತದೆ, ಮತ್ತು ಇದರಿಂದ ನಾವು ಏನು ಕಲಿಯಸಾಧ್ಯವಿದೆ? (ಧರ್ಮೋ. 15:7; ಯಾಕೋ. 2:15, 16; 1 ಯೋಹಾ. 3:17)

ಕಥೆ 97

ಯೇಸು ರಾಜನೋಪಾದಿ ಬರುತ್ತಾನೆ

 1. ಯೆರೂಸಲೇಮಿನ ಸಮೀಪದ ಒಂದು ಚಿಕ್ಕ ಹಳ್ಳಿಗೆ ಯೇಸು ಬಂದಾಗ ತನ್ನ ಶಿಷ್ಯರಿಗೆ ಏನು ಮಾಡುವಂತೆ ಹೇಳುತ್ತಾನೆ?

 2. ಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ, ಯೇಸು ಯೆರೂಸಲೇಮ್‌ ಪಟ್ಟಣದ ಸಮೀಪ ಬರುವಾಗ ಏನಾಗುತ್ತದೆ?

 3. ಕುರುಡರು ಮತ್ತು ಕುಂಟರನ್ನು ಯೇಸು ವಾಸಿಮಾಡುವುದನ್ನು ನೋಡಿ ಎಳೆಯ ಮಕ್ಕಳು ಏನು ಮಾಡುತ್ತಾರೆ?

 4. ಸಿಟ್ಟುಗೊಂಡ ಯಾಜಕರಿಗೆ ಯೇಸು ಏನೆಂದು ಹೇಳುತ್ತಾನೆ?

 5. ಯೇಸುವನ್ನು ಸ್ತುತಿಸಿದ ಆ ಮಕ್ಕಳಂತೆ ನಾವು ಹೇಗೆ ಇರಬಲ್ಲೆವು?

 6. ಶಿಷ್ಯರು ಏನನ್ನು ತಿಳಿದುಕೊಳ್ಳಲು ಬಯಸುತ್ತಾರೆ?

ಹೆಚ್ಚಿನ ಪ್ರಶ್ನೆಗಳು:

 1. ಮತ್ತಾಯ 21:1-17 ಓದಿ.

  1. (ಎ) ರೋಮನ್‌ ಸಮಯದಲ್ಲಿ ವಿಜಯಿಗಳಾಗಿ ಬರುತ್ತಿದ್ದ ಸೇನಾಧಿಪತಿಗಳಿಗೆ ಹೋಲಿಸುವಾಗ ಯೇಸು ರಾಜನಂತೆ ಯೆರೂಸಲೇಮನ್ನು ಪ್ರವೇಶಿಸಿದ್ದು ಯಾವ ರೀತಿಯಲ್ಲಿ ಭಿನ್ನವಾಗಿತ್ತು? (ಮತ್ತಾ. 21:4, 5; ಜೆಕ. 9:9; ಫಿಲಿ. 2:5-8; ಕೊಲೊ. 2:15)

  2. (ಬಿ) ಯೇಸು ಆಲಯದೊಳಗೆ ಬಂದಾಗ ಕೀರ್ತನೆ 118ನ್ನು ಉಲ್ಲೇಖಿಸಿದ ಇಸ್ರಾಯೇಲ್ಯ ಹುಡುಗರಿಂದ ಯುವಜನರು ಯಾವ ಪಾಠವನ್ನು ಕಲಿಯಸಾಧ್ಯವಿದೆ? (ಮತ್ತಾ. 21:9, 15; ಕೀರ್ತ. 118:25, 26; 2 ತಿಮೊ. 3:15; 2 ಪೇತ್ರ 3:18)

 2. ಯೋಹಾನ 12:12-16 ಓದಿ.

  ಯೇಸುವಿಗೆ ಜಯಕಾರವೆತ್ತಲು ಜನರು ಉಪಯೋಗಿಸಿದ ಖರ್ಜೂರದ ಗರಿಗಳು ಏನನ್ನು ಸೂಚಿಸುತ್ತವೆ? (ಯೋಹಾ. 12:13; ಫಿಲಿ. 2:10; ಪ್ರಕ. 7:9, 10)

ಕಥೆ 98

ಆಲಿವ್‌ ಮರಗಳ ಗುಡ್ಡದ ಮೇಲೆ

 1. ಚಿತ್ರದಲ್ಲಿ ಯೇಸು ಯಾರೆಂದು ಗುರುತಿಸಿ, ಮತ್ತು ಅವನೊಟ್ಟಿಗೆ ಯಾರಿದ್ದಾರೆ?

 2. ಯಾಜಕರು ದೇವಾಲಯದಲ್ಲಿ ಯೇಸುವಿಗೆ ಏನು ಮಾಡಲು ಪ್ರಯತ್ನಿಸಿದರು, ಮತ್ತು ಯೇಸು ಅವರಿಗೆ ಏನು ಹೇಳಿದನು?

 3. ಅಪೊಸ್ತಲರು ಯೇಸುವಿಗೆ ಏನು ಕೇಳುತ್ತಾರೆ?

 4. ಪರಲೋಕದಲ್ಲಿ ತಾನು ಅರಸನಾಗಿ ಆಳುವಾಗ ಭೂಮಿಯ ಮೇಲೆ ಸಂಭವಿಸಲಿರುವ ಕೆಲವು ವಿಷಯಗಳನ್ನು ಯೇಸು ತನ್ನ ಅಪೊಸ್ತಲರಿಗೆ ಏಕೆ ಹೇಳುತ್ತಾನೆ?

 5. ಭೂಮಿಯ ಮೇಲಿನ ಎಲ್ಲ ಕೆಟ್ಟತನವನ್ನು ಅಂತ್ಯಗೊಳಿಸುವ ಮುಂಚೆ ಯಾವ ಘಟನೆಗಳು ಸಂಭವಿಸಲಿವೆಯೆಂದು ಯೇಸು ಹೇಳುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ಮತ್ತಾಯ 23:1-39 ಓದಿ.

  1. (ಎ) ಲೌಕಿಕ ಬಿರುದುಗಳನ್ನು ಉಪಯೋಗಿಸಬಹುದೆಂದು ಶಾಸ್ತ್ರವಚನಗಳು ಸೂಚಿಸುತ್ತವಾದರೂ, ಕ್ರೈಸ್ತ ಸಭೆಯಲ್ಲಿ ಹೊಗಳಿಕೆಗಾಗಿ ಬಿರುದುಗಳನ್ನು ಉಪಯೋಗಿಸುವುದರ ಕುರಿತು ಮತ್ತಾಯ 23:8-11 ರಲ್ಲಿರುವ ಯೇಸುವಿನ ಮಾತುಗಳು ಏನು ತೋರಿಸುತ್ತವೆ? (ಅ. ಕೃ. 26:25; ರೋಮಾ. 13:7; 1 ಪೇತ್ರ 2:13, 14)

  2. (ಬಿ) ಜನರು ಕ್ರೈಸ್ತರಾಗುವುದನ್ನು ತಡೆಯಲು ಫರಿಸಾಯರು ಯಾವ ತಂತ್ರ ಬಳಸಿದರು, ಮತ್ತು ಆಧುನಿಕ ದಿನಗಳಲ್ಲಿ ಧಾರ್ಮಿಕ ಮುಖಂಡರು ತದ್ರೀತಿಯ ತಂತ್ರೋಪಾಯಗಳನ್ನು ಹೇಗೆ ಉಪಯೋಗಿಸಿದ್ದಾರೆ? (ಮತ್ತಾ. 23:13; ಲೂಕ 11:52; ಯೋಹಾ. 9:22; 12:42; 1 ಥೆಸ. 2:16)

 2. ಮತ್ತಾಯ 24:1-14 ಓದಿ.

  1. (ಎ) ತಾಳಿಕೊಳ್ಳುವುದರ ಮಹತ್ವವನ್ನು ಮತ್ತಾಯ 24:13 ರಲ್ಲಿ ಹೇಗೆ ಒತ್ತಿಹೇಳಲಾಗಿದೆ?

  2. (ಬಿ) ಮತ್ತಾಯ 24:13 ರಲ್ಲಿರುವ “ಕಡೇವರೆಗೂ” ಎಂಬ ಅಭಿವ್ಯಕ್ತಿಯ ಅರ್ಥವೇನು? (ಮತ್ತಾ. 16:27; ರೋಮಾ. 14:10-12; 2 ಕೊರಿಂ. 5:10)

 3. ಮಾರ್ಕ 13:3-10 ಓದಿ.

  ಸುವಾರ್ತೆ ಸಾರುವುದು ತುಂಬಾ ಜರೂರಿ ಕೆಲಸವಾಗಿದೆಯೆಂಬುದನ್ನು ಮಾರ್ಕ 13:10 ರಲ್ಲಿರುವ ಯಾವ ಅಭಿವ್ಯಕ್ತಿಯು ತೋರಿಸುತ್ತದೆ, ಮತ್ತು ಯೇಸುವಿನ ಮಾತುಗಳು ನಮ್ಮನ್ನು ಏನು ಮಾಡುವಂತೆ ಪ್ರಚೋದಿಸಬೇಕು? (ರೋಮಾ. 13:11, 12; 1 ಕೊರಿಂ. 7:29-31; 2 ತಿಮೊ. 4:2)

ಕಥೆ 99

ಮಾಳಿಗೆಯ ಒಂದು ಕೋಣೆಯಲ್ಲಿ

 1. ಚಿತ್ರದಲ್ಲಿ ಕಾಣುವಂತೆ, ಯೇಸು ಮತ್ತು ಅವನ 12 ಮಂದಿ ಅಪೊಸ್ತಲರು ಮಾಳಿಗೆಯ ದೊಡ್ಡ ಕೋಣೆಯಲ್ಲಿ ಏಕೆ ಸೇರಿಬಂದಿದ್ದಾರೆ?

 2. ಹೊರಟು ಹೋಗುತ್ತಿರುವ ಆ ಮನುಷ್ಯನು ಯಾರು, ಮತ್ತು ಅವನು ಏನು ಮಾಡಲಿದ್ದಾನೆ?

 3. ಪಸ್ಕದೂಟವು ಮುಗಿದ ನಂತರ ಯೇಸು ಯಾವ ವಿಶೇಷ ಭೋಜನವನ್ನು ಆರಂಭಿಸುತ್ತಾನೆ?

 4. ಪಸ್ಕವು ಇಸ್ರಾಯೇಲ್ಯರಿಗೆ ಯಾವ ಘಟನೆಯನ್ನು ಜ್ಞಾಪಕಕ್ಕೆ ತರುತ್ತಿತ್ತು, ಮತ್ತು ಈ ವಿಶೇಷ ಭೋಜನವು ಯೇಸುವಿನ ಹಿಂಬಾಲಕರಿಗೆ ಏನನ್ನು ನೆನಪಿಸುತ್ತದೆ?

 5. ಕರ್ತನ ಸಂಧ್ಯಾ ಭೋಜನದ ನಂತರ ಯೇಸು ತನ್ನ ಹಿಂಬಾಲಕರಿಗೆ ಏನು ಹೇಳುತ್ತಾನೆ, ಮತ್ತು ಅವರು ಏನು ಮಾಡುತ್ತಾರೆ?

ಹೆಚ್ಚಿನ ಪ್ರಶ್ನೆಗಳು:

 1. ಮತ್ತಾಯ 26:14-30 ಓದಿ.

  1. (ಎ) ಯೂದನು ಯೇಸುವಿಗೆ ದ್ರೋಹಬಗೆದದ್ದು ಉದ್ದೇಶಭರಿತ ಕೃತ್ಯವಾಗಿತ್ತು ಎಂದು ಮತ್ತಾಯ 26:15 ಹೇಗೆ ತೋರಿಸುತ್ತದೆ?

  2. (ಬಿ) ಯೇಸು ಸುರಿಸಿದ ರಕ್ತವು ಯಾವ ಎರಡು ಉದ್ದೇಶವನ್ನು ಪೂರೈಸುತ್ತದೆ? (ಮತ್ತಾ. 26:27, 28; ಯೆರೆ. 31:31-33; ಎಫೆ. 1:7; ಇಬ್ರಿ. 9:19, 20)

 2. ಲೂಕ 22:1-39 ಓದಿ.

  ಯಾವ ಅರ್ಥದಲ್ಲಿ ಸೈತಾನನು ಯೂದನೊಳಗೆ ಪ್ರವೇಶಿಸಿದನು? (ಲೂಕ 22:3; ಯೋಹಾ. 13:2; ಅ. ಕೃ. 1:24, 25)

 3. ಯೋಹಾನ 13:1-20 ಓದಿ.

  1. (ಎ) ಯೋಹಾನ 13:2 ರಲ್ಲಿರುವ ವಿಷಯಕ್ಕನುಸಾರ, ಯೂದನು ಮಾಡಿದ ಪಾಪಕ್ಕಾಗಿ ಅವನನ್ನು ದೂಷಿಸಬಹುದೊ, ಮತ್ತು ಇದರಿಂದ ದೇವರ ಸೇವಕರು ಯಾವ ಪಾಠವನ್ನು ಕಲಿಯಸಾಧ್ಯವಿದೆ? (ಆದಿ. 4:7; 2 ಕೊರಿಂ. 2:11; ಗಲಾ. 6:1; ಯಾಕೋ. 1:13, 14)

  2. (ಬಿ) ಯೇಸು ಯಾವ ಉತ್ತಮ ಪಾಠವನ್ನು ಕಲಿಸಿದನು? (ಯೋಹಾ. 13:15; ಮತ್ತಾ. 23:11; 1 ಪೇತ್ರ 2:21)

 4. ಯೋಹಾನ 17:1-26 ಓದಿ.

  ತನ್ನ ಹಿಂಬಾಲಕರು ‘ಒಂದಾಗಿರು’ವಂತೆ ಯೇಸು ಪ್ರಾರ್ಥಿಸಿದ್ದು ಯಾವ ಅರ್ಥದಲ್ಲಿ? (ಯೋಹಾ. 17:11, 21-23; ರೋಮಾ. 13:8; 14:19; ಕೊಲೊ. 3:14)

ಕಥೆ 100

ತೋಟದಲ್ಲಿ ಯೇಸು

 1. ಮಾಳಿಗೆಯ ಕೋಣೆಯಿಂದ ಹೊರಟು ಯೇಸು ಹಾಗೂ ಅವನ ಅಪೊಸ್ತಲರು ಎಲ್ಲಿಗೆ ಹೋಗುತ್ತಾರೆ, ಮತ್ತು ಯೇಸು ಅವರಿಗೆ ಏನು ಮಾಡುವಂತೆ ಹೇಳುತ್ತಾನೆ?

 2. ಅಪೊಸ್ತಲರಿದ್ದ ಸ್ಥಳಕ್ಕೆ ಯೇಸು ಹಿಂದಿರುಗಿ ಬಂದಾಗ ಏನನ್ನು ಕಾಣುತ್ತಾನೆ, ಮತ್ತು ಎಷ್ಟು ಸಲ ಹೀಗಾಗುತ್ತದೆ?

 3. ತೋಟದೊಳಗೆ ಯಾರು ಬರುತ್ತಾರೆ, ಮತ್ತು ಚಿತ್ರದಲ್ಲಿ ತೋರಿಸಿರುವಂತೆ ಇಸ್ಕರಿಯೋತ ಯೂದನು ಏನು ಮಾಡುತ್ತಾನೆ?

 4. ಯೂದನು ಯೇಸುವಿಗೆ ಏಕೆ ಮುದ್ದಿಡುತ್ತಾನೆ, ಮತ್ತು ಪೇತ್ರನು ಏನು ಮಾಡುತ್ತಾನೆ?

 5. ಯೇಸು ಪೇತ್ರನಿಗೆ ಏನು ಹೇಳುತ್ತಾನೆ, ಮತ್ತು ಯೇಸು ದೂತರನ್ನು ಕಳುಹಿಸಿಕೊಡುವಂತೆ ದೇವರನ್ನು ಕೇಳಿಕೊಳ್ಳುವುದಿಲ್ಲವೇಕೆ?

ಹೆಚ್ಚಿನ ಪ್ರಶ್ನೆಗಳು:

 1. ಮತ್ತಾಯ 26:36-56 ಓದಿ.

  1. (ಎ) ಯೇಸು ತನ್ನ ಶಿಷ್ಯರಿಗೆ ಸಲಹೆಯನ್ನು ಕೊಟ್ಟ ರೀತಿಯು, ಇಂದಿನ ಕ್ರೈಸ್ತ ಹಿರಿಯರಿಗೆ ಹೇಗೆ ಒಂದು ಒಳ್ಳೇ ಮಾದರಿಯಾಗಿದೆ? (ಮತ್ತಾ. 20:25-28; 26:40, 41; ಗಲಾ. 5:17; ಎಫೆ. 4:29, 31, 32)

  2. (ಬಿ) ಇನ್ನೊಬ್ಬರ ವಿರುದ್ಧ ಆಯುಧ ಎತ್ತುವುದನ್ನು ಯೇಸು ಹೇಗೆ ವೀಕ್ಷಿಸಿದನು? (ಮತ್ತಾ. 26:52; ಲೂಕ 6:27, 28; ಯೋಹಾ. 18:36)

 2. ಲೂಕ 22:39-53 ಓದಿ.

  ಒಬ್ಬ ದೇವದೂತನು ಗೆತ್ಸೇಮನೆ ತೋಟದಲ್ಲಿ ಯೇಸುವನ್ನು ಬಲಪಡಿಸಲು ಕಾಣಿಸಿಕೊಂಡ ವಿಷಯವು, ಯೇಸು ತನ್ನ ನಂಬಿಕೆಯಲ್ಲಿ ಸ್ಥಿರನಾಗಿರಲಿಲ್ಲ ಎಂಬುದನ್ನು ಅರ್ಥೈಸಿತೋ? ವಿವರಿಸಿರಿ. (ಲೂಕ 22:41-43; ಯೆಶಾ. 49:8; ಮತ್ತಾ. 4:10, 11; ಇಬ್ರಿ. 5:7)

 3. ಯೋಹಾನ 18:1-12 ಓದಿ.

  ಯೇಸು ತನ್ನ ಶಿಷ್ಯರನ್ನು ವಿರೋಧಿಗಳಿಂದ ಹೇಗೆ ಕಾಪಾಡಿದನು, ಮತ್ತು ಈ ಉದಾಹರಣೆಯಿಂದ ನಾವು ಏನನ್ನು ಕಲಿಯಸಾಧ್ಯವಿದೆ? (ಯೋಹಾ. 10:11, 12; 18:1, 6-9; ಇಬ್ರಿ. 13:6; ಯಾಕೋ. 2:25)

ಕಥೆ 101

ಯೇಸು ಕೊಲ್ಲಲ್ಪಡುತ್ತಾನೆ

 1. ಯೇಸುವಿನ ಮರಣಕ್ಕೆ ಮುಖ್ಯವಾಗಿ ಯಾರು ಕಾರಣನು?

 2. ಧಾರ್ಮಿಕ ಮುಖಂಡರು ಯೇಸುವನ್ನು ಹಿಡಿದುಕೊಂಡು ಹೋದಾಗ ಅವನ ಅಪೊಸ್ತಲರು ಏನು ಮಾಡುತ್ತಾರೆ?

 3. ಮಹಾಯಾಜಕ ಕಾಯಫನ ಮನೆಯಲ್ಲಿ ಏನು ಸಂಭವಿಸುತ್ತದೆ?

 4. ಪೇತ್ರನು ಏಕೆ ಹೊರಗೆ ಹೋಗಿ ಅಳುತ್ತಾನೆ?

 5. ಯೇಸುವನ್ನು ಪುನಃ ಪಿಲಾತನ ಬಳಿಗೆ ಕರೆತಂದ ನಂತರ, ಮಹಾಯಾಜಕರು ಏನೆಂದು ಕೂಗುತ್ತಾರೆ?

 6. ಶುಕ್ರವಾರ ಮಧ್ಯಾಹ್ನ ಯೇಸುವಿಗೆ ಏನು ಮಾಡಲಾಗುತ್ತದೆ, ಮತ್ತು ತನ್ನ ಪಕ್ಕದಲ್ಲಿದ್ದ ಒಬ್ಬ ಕಳ್ಳನಿಗೆ ಅವನು ಏನೆಂದು ವಾಗ್ದಾನಿಸುತ್ತಾನೆ?

 7. ಯೇಸು ಹೇಳಿದ ಪರದೈಸ್‌ ಎಲ್ಲಿ ಸ್ಥಾಪಿಸಲ್ಪಡುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಮತ್ತಾಯ 26:57-75 ಓದಿ.

  ಯೆಹೂದಿ ಹಿರೀಸಭೆಯ ಸದಸ್ಯರು ತಮ್ಮ ಹೃದಯದಲ್ಲಿ ದುಷ್ಟ ವಿಷಯಗಳು ತುಂಬಿರುವುದನ್ನು ಹೇಗೆ ತೋರಿಸಿಕೊಟ್ಟರು? (ಮತ್ತಾ. 26:59, 67, 68)

 2. ಮತ್ತಾಯ 27:1-50 ಓದಿ.

  ಯೂದನ ಪಶ್ಚಾತ್ತಾಪವು ನಿಜವಾಗಿರಲಿಲ್ಲವೆಂದು ನಾವು ಏಕೆ ಹೇಳಸಾಧ್ಯವಿದೆ? (ಮತ್ತಾ. 27:3, 4; ಮಾರ್ಕ 3:29; 14:21; 2 ಕೊರಿಂ. 7:10, 11)

 3. ಲೂಕ 22:54-71 ಓದಿ.

  ಯೇಸುವನ್ನು ಹಿಡುಕೊಟ್ಟ ಮತ್ತು ಬಂಧಿಸಿದ ರಾತ್ರಿಯಂದು ಪೇತ್ರನು ಅವನನ್ನು ಅಲ್ಲಗಳೆದ ಸಂಗತಿಯಿಂದ ನಾವು ಏನನ್ನು ಕಲಿಯಸಾಧ್ಯವಿದೆ? (ಲೂಕ 22:60-62; ಮತ್ತಾ. 26:31-35; 1 ಕೊರಿಂ. 10:12)

 4. ಲೂಕ 23:1-49 ಓದಿ.

  ತನಗಾದ ಅನ್ಯಾಯಕ್ಕೆ ಯೇಸು ಹೇಗೆ ಪ್ರತಿಕ್ರಿಯೆ ತೋರಿಸಿದನು, ಮತ್ತು ಇದರಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ? (ಲೂಕ 23:33, 34; ರೋಮಾ. 12:17-19; 1 ಪೇತ್ರ 2:23)

 5. ಯೋಹಾನ 18:12-40 ಓದಿ.

  ಪೇತ್ರನು ಮನುಷ್ಯರ ಭಯದಿಂದ ಕ್ಷಣಿಕವಾಗಿ ಎಡವಿದನಾದರೂ, ನಂತರ ಚೇತರಿಸಿಕೊಂಡು ಒಬ್ಬ ಗಮನಾರ್ಹ ಅಪೊಸ್ತಲನಾದ ವಿಷಯವು ಏನನ್ನು ತೋರಿಸಿಕೊಡುತ್ತದೆ? (ಯೋಹಾ. 18:25-27; 1 ಕೊರಿಂ. 4:2; 1 ಪೇತ್ರ 3:14, 15; 5:8, 9)

 6. ಯೋಹಾನ 19:1-30 ಓದಿ.

  1. (ಎ) ಪ್ರಾಪಂಚಿಕ ವಿಷಯಗಳ ಕುರಿತು ಯೇಸುವಿಗೆ ಯಾವ ಸಮತೋಲನದ ದೃಷ್ಟಿಕೋನವಿತ್ತು? (ಯೋಹಾ. 2:1, 2, 9, 10; 19:23, 24; ಮತ್ತಾ. 6:31, 32; 8:20)

  2. (ಬಿ) ಯೇಸು ಸಾಯುವಾಗ ಆಡಿದ ಕೊನೆಯ ಮಾತುಗಳು, ಅವನು ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿದ್ದಿದ್ದರ ಕುರಿತಾದ ಒಂದು ವಿಜಯೋತ್ಸಾಹದ ಘೋಷಣೆಯಾಗಿತ್ತು ಹೇಗೆ? (ಯೋಹಾ. 16:33; 19:30; 2 ಪೇತ್ರ 3:14; 1 ಯೋಹಾ. 5:4)

ಕಥೆ 102

ಯೇಸು ಜೀವದಿಂದಿದ್ದಾನೆ

 1. ಚಿತ್ರದಲ್ಲಿರುವ ಸ್ತ್ರೀ ಯಾರು, ಆ ಇಬ್ಬರು ಪುರುಷರು ಯಾರು, ಮತ್ತು ಅವರು ಎಲ್ಲಿದ್ದಾರೆ?

 2. ಯೇಸುವಿನ ಸಮಾಧಿಯನ್ನು ಕಾಯಲು ಸೈನಿಕರನ್ನು ಏರ್ಪಾಡು ಮಾಡುವಂತೆ ಪಿಲಾತನು ಯಾಜಕರಿಗೆ ಏಕೆ ಹೇಳುತ್ತಾನೆ?

 3. ಯೇಸು ಸತ್ತ ಮೂರನೆಯ ದಿನ ಬೆಳಗ್ಗೆ ಬೇಗ ಒಬ್ಬ ದೇವದೂತನು ಏನು ಮಾಡುತ್ತಾನೆ, ಆದರೆ ಯಾಜಕರು ಏನು ಮಾಡುತ್ತಾರೆ?

 4. ಯೇಸುವಿನ ಸಮಾಧಿಯನ್ನು ನೋಡಲು ಬಂದ ಕೆಲವು ಸ್ತ್ರೀಯರು ಏಕೆ ಆಶ್ಚರ್ಯಪಡುತ್ತಾರೆ?

 5. ಪೇತ್ರಯೋಹಾನರು ಏಕೆ ಸಮಾಧಿಯ ಬಳಿಗೆ ಓಡುತ್ತಾರೆ, ಮತ್ತು ಅಲ್ಲಿ ಅವರು ಏನು ನೋಡುತ್ತಾರೆ?

 6. ಯೇಸುವಿನ ದೇಹ ಏನಾಯಿತು, ಆದರೆ ತಾನು ಜೀವಿತನಾಗಿದ್ದೇನೆಂದು ತನ್ನ ಶಿಷ್ಯರಿಗೆ ತೋರಿಸಲು ಅವನು ಏನು ಮಾಡುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ಮತ್ತಾಯ 27:62-66ಮತ್ತು28:1-15 ಓದಿ.

  ಯೇಸುವಿನ ಪುನರುತ್ಥಾನದ ಸಮಯದಲ್ಲಿ ಮಹಾಯಾಜಕರು, ಫರಿಸಾಯರು ಮತ್ತು ಹಿರೀಪುರುಷರು ಪವಿತ್ರಾತ್ಮದ ವಿರುದ್ಧ ಹೇಗೆ ಪಾಪಮಾಡಿದರು? (ಮತ್ತಾ. 12:24, 31, 32; 28:11-15)

 2. ಲೂಕ 24:1-12 ಓದಿ.

  ಯೆಹೋವನು ಸ್ತ್ರೀಯರನ್ನು ವಿಶ್ವಾಸಾರ್ಹ ಸಾಕ್ಷಿಗಳಾಗಿ ವೀಕ್ಷಿಸುತ್ತಾನೆಂದು ಯೇಸುವಿನ ಪುನರುತ್ಥಾನದ ವೃತ್ತಾಂತವು ಹೇಗೆ ತೋರಿಸುತ್ತದೆ? (ಲೂಕ 24:4, 9, 10; ಮತ್ತಾ. 28:1-7)

 3. ಯೋಹಾನ 20:1-12 ಓದಿ.

  ಒಂದು ಬೈಬಲ್‌ ಪ್ರವಾದನೆಯ ನೆರವೇರಿಕೆಯನ್ನು ನಾವು ಪೂರ್ಣವಾಗಿ ಅರ್ಥಮಾಡಿಕೊಳ್ಳದಿದ್ದರೂ ತಾಳ್ಮೆಯಿಂದಿರುವ ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳಲು ಯೋಹಾನ 20:8, 9 ನಮಗೆ ಹೇಗೆ ಸಹಾಯಮಾಡುತ್ತದೆ? (ಜ್ಞಾನೋ. 4:18; ಮತ್ತಾ. 17:22, 23; ಲೂಕ 24:5-8; ಯೋಹಾ. 16:12)

ಕಥೆ 103

ಬಾಗಿಲುಮುಚ್ಚಿದ್ದ ಕೋಣೆಯಲ್ಲಿ

 1. ಮರಿಯಳು ತೋಟಗಾರನೆಂದು ನೆನಸಿ ಒಬ್ಬ ಮನುಷ್ಯನಿಗೆ ಏನೆಂದು ಹೇಳುತ್ತಾಳೆ, ಆದರೆ ಅವನು ಯೇಸುವೆಂದು ಅವಳಿಗೆ ಹೇಗೆ ತಿಳಿಯುತ್ತದೆ?

 2. ಇಬ್ಬರು ಶಿಷ್ಯರು ಎಮ್ಮಾಹು ಎಂಬ ಹಳ್ಳಿಗೆ ಹೋಗುತ್ತಿದ್ದಾಗ ಏನಾಗುತ್ತದೆ?

 3. ತಾವು ಯೇಸುವನ್ನು ನೋಡಿದೆವೆಂದು ಆ ಇಬ್ಬರು ಶಿಷ್ಯರು ಅಪೊಸ್ತಲರಿಗೆ ತಿಳಿಸುತ್ತಿರುವಾಗಲೇ ಯಾವ ಆಶ್ಚರ್ಯಕರ ಸಂಗತಿ ಸಂಭವಿಸುತ್ತದೆ?

 4. ತನ್ನ ಹಿಂಬಾಲಕರಿಗೆ ಯೇಸು ಎಷ್ಟು ಬಾರಿ ಕಾಣಿಸಿಕೊಂಡನು?

 5. ಶಿಷ್ಯರು ತಾವು ಸ್ವಾಮಿಯನ್ನು ನೋಡಿದೆವು ಎಂದು ಹೇಳಿದಾಗ ತೋಮನು ಏನು ಹೇಳುತ್ತಾನೆ, ಆದರೆ ಎಂಟು ದಿನಗಳ ನಂತರ ಏನು ಸಂಭವಿಸುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಯೋಹಾನ 20:11-29 ಓದಿ.

  ಮನುಷ್ಯರಿಗೆ ಪಾಪಗಳನ್ನು ಕ್ಷಮಿಸುವ ಅಧಿಕಾರವು ಕೊಡಲ್ಪಟ್ಟಿದೆ ಎಂದು ಯೇಸು ಯೋಹಾನ 20:23 ರಲ್ಲಿ ಹೇಳುತ್ತಿದ್ದಾನೋ? ವಿವರಿಸಿರಿ. (ಕೀರ್ತ. 49:2, 7, 8; ಯೆಶಾ. 55:7; 1 ತಿಮೊ. 2:5, 6; 1 ಯೋಹಾ. 2:1, 2)

 2. ಲೂಕ 24:13-43 ಓದಿ.

  ಬೈಬಲ್‌ ಸತ್ಯಗಳನ್ನು ಗ್ರಹಿಸುವಂತೆ ನಮ್ಮ ಹೃದಯವನ್ನು ನಾವು ಹೇಗೆ ಸಿದ್ಧಗೊಳಿಸಸಾಧ್ಯವಿದೆ? (ಲೂಕ 24:32, 33; ಎಜ್ರ 7:10; ಅ. ಕೃ. 16:14; ಇಬ್ರಿ. 5:11-14)

ಕಥೆ 104

ಯೇಸು ಪರಲೋಕಕ್ಕೆ ಹಿಂದಿರುಗುತ್ತಾನೆ

 1. ಒಮ್ಮೆ ಎಷ್ಟು ಮಂದಿ ಶಿಷ್ಯರು ಯೇಸುವನ್ನು ನೋಡುತ್ತಾರೆ, ಮತ್ತು ಅವನು ಅವರೊಂದಿಗೆ ಯಾವುದರ ಕುರಿತು ಮಾತಾಡುತ್ತಾನೆ?

 2. ದೇವರ ರಾಜ್ಯವೆಂದರೇನು, ಮತ್ತು ಯೇಸು ಒಂದು ಸಾವಿರ ವರ್ಷ ಅರಸನಾಗಿ ಆಳುವಾಗ ಭೂಮಿಯಲ್ಲಿ ಜೀವನವು ಹೇಗಿರುವುದು?

 3. ಎಷ್ಟು ದಿನಗಳಿಂದ ಯೇಸು ಶಿಷ್ಯರಿಗೆ ಕಾಣಿಸಿಕೊಳ್ಳುತ್ತಿದ್ದಾನೆ, ಆದರೆ ಈಗ ಯಾವ ಸಮಯ ಬಂದಿದೆ?

 4. ಯೇಸು ತನ್ನ ಶಿಷ್ಯರನ್ನು ಬಿಟ್ಟುಹೋಗುವ ಸ್ವಲ್ಪ ಮುಂಚೆ ಏನು ಮಾಡುವಂತೆ ಅವರಿಗೆ ಹೇಳುತ್ತಾನೆ?

 5. ಚಿತ್ರದಲ್ಲಿ ಏನು ಸಂಭವಿಸುತ್ತಿದೆ, ಮತ್ತು ಯೇಸು ಹೇಗೆ ಮರೆಯಾಗುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ಒಂದನೆಯ ಕೊರಿಂಥ 15:3-8 ಓದಿ.

  ಯೇಸುವಿನ ಪುನರುತ್ಥಾನದ ಬಗ್ಗೆ ಅಪೊಸ್ತಲ ಪೌಲನು ಅಷ್ಟೊಂದು ಭರವಸೆಯಿಂದ ಏಕೆ ಮಾತಾಡಿದನು, ಮತ್ತು ಇಂದು ಯಾವ ವಿಷಯಗಳ ಕುರಿತು ಕ್ರೈಸ್ತರು ಭರವಸೆಯಿಂದ ಮಾತಾಡಸಾಧ್ಯವಿದೆ? (1 ಕೊರಿಂ. 15:4, 7, 8; ಯೆಶಾ. 2:2, 3; ಮತ್ತಾ. 24:14; 2 ತಿಮೊ. 3:1-5)

 2. ಅಪೊಸ್ತಲರ ಕೃತ್ಯಗಳು 1:1-11 ಓದಿ.

  ಅಪೊಸ್ತಲರ ಕೃತ್ಯಗಳು 1:8 ರಲ್ಲಿ ಮುಂತಿಳಿಸಲ್ಪಟ್ಟಿರುವಂತೆ ಸಾರುವ ಕೆಲಸವು ಎಷ್ಟು ವ್ಯಾಪಕವಾಗಿ ನಡೆಸಲ್ಪಡುತ್ತದೆ? (ಅ. ಕೃ. 6:7; 9:31; 11:19-21; ಕೊಲೊ. 1:23)

ಕಥೆ 105

ಯೆರೂಸಲೇಮಿನಲ್ಲಿ ಕಾಯುವುದು

 1. ಚಿತ್ರದಲ್ಲಿರುವಂತೆ, ಯೇಸುವಿನ ಶಿಷ್ಯರು ಯೆರೂಸಲೇಮಿನಲ್ಲಿ ಕಾಯುತ್ತಿರುವಾಗ ಏನಾಗುತ್ತದೆ?

 2. ಬೇರೆ ಬೇರೆ ದೇಶಗಳಿಂದ ಯೆರೂಸಲೇಮಿಗೆ ಬಂದವರು ಆಶ್ಚರ್ಯಪಡಲು ಕಾರಣವೇನು?

 3. ಪೇತ್ರನು ಜನರಿಗೆ ಏನನ್ನು ವಿವರಿಸುತ್ತಾನೆ?

 4. ಪೇತ್ರನು ವಿವರಿಸಿದ ವಿಷಯಗಳನ್ನು ಕೇಳಿದ ಜನರಿಗೆ ಹೇಗನಿಸುತ್ತದೆ, ಮತ್ತು ಅವರೇನು ಮಾಡುವಂತೆ ಪೇತ್ರನು ಹೇಳುತ್ತಾನೆ?

 5. ಸಾ.ಶ. 33ರ ಪಂಚಾಶತ್ತಮದಂದು ಎಷ್ಟು ಜನರು ದೀಕ್ಷಾಸ್ನಾನ ಪಡೆಯುತ್ತಾರೆ?

ಹೆಚ್ಚಿನ ಪ್ರಶ್ನೆಗಳು:

 1. ಅಪೊಸ್ತಲರ ಕೃತ್ಯಗಳು 2:1-47 ಓದಿ.

  1. (ಎ) ಯೇಸುವಿನ ಮರಣಕ್ಕೆ ಇಡೀ ಯೆಹೂದಿ ಜನಾಂಗವು ಕಾರಣವಾಗಿತ್ತೆಂಬುದನ್ನು ಅಪೊಸ್ತಲರ ಕೃತ್ಯಗಳು 2:23, 36 ರಲ್ಲಿರುವ ಪೇತ್ರನ ಮಾತುಗಳು ಹೇಗೆ ತೋರಿಸುತ್ತವೆ? (1 ಥೆಸ. 2:14, 15)

  2. (ಬಿ) ಶಾಸ್ತ್ರವಚನಗಳನ್ನು ಉಪಯೋಗಿಸಿ ತರ್ಕಿಸುವ ವಿಷಯದಲ್ಲಿ ಪೇತ್ರನು ಹೇಗೆ ಒಂದು ಒಳ್ಳೇ ಮಾದರಿಯನ್ನಿಟ್ಟನು? (ಅ. ಕೃ. 2:16, 17, 29, 31, 36, 39; ಕೊಲೊ. 4:6)

  3. (ಸಿ) ಯೇಸು ವಾಗ್ದಾನಿಸಿದ ‘ಪರಲೋಕರಾಜ್ಯದ ಬೀಗದ ಕೈಗಳಲ್ಲಿ’ ಮೊದಲನೆಯದನ್ನು ಪೇತ್ರನು ಹೇಗೆ ಉಪಯೋಗಿಸಿದನು? (ಅ. ಕೃ. 2:14, 22-24, 37, 38; ಮತ್ತಾ. 16:19)

ಕಥೆ 106

ಸೆರೆಮನೆಯಿಂದ ಬಿಡುಗಡೆ

 1. ಒಂದು ಮಧ್ಯಾಹ್ನ ಪೇತ್ರಯೋಹಾನರು ದೇವಾಲಯಕ್ಕೆ ಹೋಗುತ್ತಿರುವಾಗ ಏನು ಸಂಭವಿಸುತ್ತದೆ?

 2. ಪೇತ್ರನು ಒಬ್ಬ ಕುಂಟನಿಗೆ ಏನು ಹೇಳುತ್ತಾನೆ, ಮತ್ತು ಹಣಕ್ಕಿಂತಲೂ ಅಮೂಲ್ಯವಾದ ಯಾವುದನ್ನು ಅವನಿಗೆ ಕೊಡುತ್ತಾನೆ?

 3. ಧಾರ್ಮಿಕ ಮುಖಂಡರು ಏಕೆ ಸಿಟ್ಟುಗೊಳ್ಳುತ್ತಾರೆ, ಮತ್ತು ಪೇತ್ರಯೋಹಾನರನ್ನು ಏನು ಮಾಡುತ್ತಾರೆ?

 4. ಪೇತ್ರನು ಧಾರ್ಮಿಕ ಮುಖಂಡರಿಗೆ ಏನು ಹೇಳುತ್ತಾನೆ, ಮತ್ತು ಯಾವ ಎಚ್ಚರಿಕೆಯನ್ನು ಅಪೊಸ್ತಲರಿಗೆ ಕೊಡಲಾಗುತ್ತದೆ?

 5. ಧಾರ್ಮಿಕ ಮುಖಂಡರು ಏಕೆ ಹೊಟ್ಟೆಕಿಚ್ಚುಪಡುತ್ತಾರೆ, ಆದರೆ ಎರಡನೇ ಬಾರಿ ಅಪೊಸ್ತಲರನ್ನು ಸೆರೆಮನೆಗೆ ಹಾಕಿದಾಗ ಏನಾಗುತ್ತದೆ?

 6. ಸನ್ಹೇದ್ರಿನ್‌ ಸಭಾಗೃಹಕ್ಕೆ ಅಪೊಸ್ತಲರನ್ನು ಕರೆತಂದಾಗ ಅವರು ಹೇಗೆ ಉತ್ತರಿಸುತ್ತಾರೆ?

ಹೆಚ್ಚಿನ ಪ್ರಶ್ನೆಗಳು:

 1. ಅಪೊಸ್ತಲರ ಕೃತ್ಯಗಳು 3:1-10 ಓದಿ.

  ಇಂದು ನಾವು ಅದ್ಭುತಗಳನ್ನು ಮಾಡಲು ಶಕ್ತರಲ್ಲದಿದ್ದರೂ, ದೇವರ ರಾಜ್ಯದ ಸಂದೇಶದ ಮೌಲ್ಯವನ್ನು ಗಣ್ಯಮಾಡುವಂತೆ ಅಪೊಸ್ತಲರ ಕೃತ್ಯಗಳು 3:6 ರಲ್ಲಿರುವ ಪೇತ್ರನ ಮಾತುಗಳು ನಮಗೆ ಹೇಗೆ ಸಹಾಯಮಾಡುತ್ತವೆ? (ಯೋಹಾ. 17:3; 2 ಕೊರಿಂ. 5:18-20; ಫಿಲಿ. 3:8)

 2. ಅಪೊಸ್ತಲರ ಕೃತ್ಯಗಳು 4:1-31 ಓದಿ.

  ನಾವು ಸೇವೆಯಲ್ಲಿ ವಿರೋಧವನ್ನು ಎದುರಿಸುವಾಗ, ಯಾವ ವಿಧದಲ್ಲಿ ಪ್ರಥಮ ಶತಮಾನದ ನಮ್ಮ ಕ್ರೈಸ್ತ ಸಹೋದರರನ್ನು ಅನುಕರಿಸಬೇಕು? (ಅ. ಕೃ. 4:29, 31; ಎಫೆ. 6:18-20; 1 ಥೆಸ. 2:2)

 3. ಅಪೊಸ್ತಲರ ಕೃತ್ಯಗಳು 5:17-42 ಓದಿ.

  ಈ ಹಿಂದೆ ಮತ್ತು ಇಂದು, ಸಾರುವ ಕೆಲಸಕ್ಕೆ ಯೆಹೋವನ ಸಾಕ್ಷಿಗಳಲ್ಲದ ಕೆಲವರು ಹೇಗೆ ನ್ಯಾಯಸಮ್ಮತತೆಯನ್ನು ತೋರಿಸಿದ್ದಾರೆ? (ಅ. ಕೃ. 5:34-39)

ಕಥೆ 107

ಸ್ತೆಫನನನ್ನು ಕಲ್ಲೆಸೆದು ಕೊಲ್ಲಲಾಗುತ್ತದೆ

 1. ಸ್ತೆಫನನು ಯಾರು, ಮತ್ತು ದೇವರು ಅವನಿಗೆ ಯಾವ ಸಹಾಯಮಾಡುತ್ತಿದ್ದಾನೆ?

 2. ಸ್ತೆಫನನ ಯಾವ ಮಾತುಗಳು ಧಾರ್ಮಿಕ ಮುಖಂಡರನ್ನು ಬಹಳ ಕೋಪಗೊಳಿಸುತ್ತವೆ?

 3. ಜನರು ಸ್ತೆಫನನನ್ನು ಹಿಡಿದು ಊರಹೊರಗೆ ನೂಕಿಕೊಂಡು ಹೋಗಿ ಏನು ಮಾಡುತ್ತಾರೆ?

 4. ಚಿತ್ರದಲ್ಲಿ, ಮೇಲಂಗಿಗಳನ್ನು ನೋಡಿಕೊಳ್ಳುತ್ತಿರುವ ಆ ಯುವಕನು ಯಾರು?

 5. ಸಾಯುವ ಮುನ್ನ ಸ್ತೆಫನನು ಯೆಹೋವನಿಗೆ ಏನೆಂದು ಪ್ರಾರ್ಥಿಸುತ್ತಾನೆ?

 6. ಸ್ತೆಫನನನ್ನು ಅನುಕರಿಸುತ್ತಾ ನಾವು ನಮಗೆ ಕೆಟ್ಟದ್ದನ್ನು ಮಾಡಿದವರಿಗೆ ಏನು ಮಾಡಬೇಕು?

ಹೆಚ್ಚಿನ ಪ್ರಶ್ನೆಗಳು:

 1. ಅಪೊಸ್ತಲರ ಕೃತ್ಯಗಳು 6:8-15 ಓದಿ.

  ಯೆಹೋವನ ಸಾಕ್ಷಿಗಳ ಸಾರುವ ಕೆಲಸವನ್ನು ನಿಲ್ಲಿಸಲಿಕ್ಕಾಗಿ ಧಾರ್ಮಿಕ ಮುಖಂಡರು ಯಾವ ವಂಚಕ ಕೃತ್ಯಗಳನ್ನು ಮಾಡಿದ್ದಾರೆ? (ಅ. ಕೃ. 6:9, 11, 13)

 2. ಅಪೊಸ್ತಲರ ಕೃತ್ಯಗಳು 7:1-60 ಓದಿ.

  1. (ಎ) ಸನ್ಹೇದ್ರಿನ್‌ ಸಭೆಯ ಮುಂದೆ ಸುವಾರ್ತೆಯನ್ನು ಪರಿಣಾಮಕಾರಿಯಾಗಿ ಸಮರ್ಥಿಸಿ ಮಾತಾಡಲು ಸ್ತೆಫನನಿಗೆ ಯಾವುದು ಸಹಾಯಮಾಡಿತು, ಮತ್ತು ಅವನ ಉದಾಹರಣೆಯಿಂದ ನಾವೇನನ್ನು ಕಲಿಯಸಾಧ್ಯವಿದೆ? (ಅ. ಕೃ. 7:51-53; ರೋಮಾ. 15:4; 2 ತಿಮೊ. 3:14-17; 1 ಪೇತ್ರ 3:15)

  2. (ಬಿ) ನಮ್ಮ ಕೆಲಸವನ್ನು ವಿರೋಧಿಸುವವರ ಕಡೆಗೆ ನಾವು ಯಾವ ಮನೋಭಾವವನ್ನು ಬೆಳೆಸಿಕೊಳ್ಳಬೇಕು? (ಅ. ಕೃ. 7:58-60; ಮತ್ತಾ. 5:44; ಲೂಕ 23:33, 34)

ಕಥೆ 108

ದಮಸ್ಕಕ್ಕೆ ಹೋಗುವ ದಾರಿಯಲ್ಲಿ

 1. ಸ್ತೆಫನನು ಕೊಲ್ಲಲ್ಪಟ್ಟ ನಂತರ ಸೌಲನು ಏನು ಮಾಡುತ್ತಾನೆ?

 2. ಸೌಲನು ದಮಸ್ಕಕ್ಕೆ ಹೋಗುವ ದಾರಿಯಲ್ಲಿರುವಾಗ ಯಾವ ಆಶ್ಚರ್ಯಕರ ಸಂಗತಿ ನಡೆಯುತ್ತದೆ?

 3. ಯೇಸು ಸೌಲನಿಗೆ ಏನು ಹೇಳುತ್ತಾನೆ?

 4. ಅನನೀಯನಿಗೆ ಯೇಸು ಯಾವ ಸೂಚನೆಗಳನ್ನು ಕೊಡುತ್ತಾನೆ, ಮತ್ತು ಸೌಲನಿಗೆ ಮತ್ತೆ ಕಣ್ಣು ಕಾಣಿಸುವುದು ಹೇಗೆ?

 5. ಯಾವ ಹೆಸರಿನಿಂದ ಸೌಲನು ಖ್ಯಾತನಾಗುತ್ತಾನೆ, ಮತ್ತು ಅವನು ಯಾವ ರೀತಿಯಲ್ಲಿ ಉಪಯೋಗಿಸಲ್ಪಡುತ್ತಾನೆ?

ಹೆಚ್ಚಿನ ಪ್ರಶ್ನೆಗಳು:

 1. ಅಪೊಸ್ತಲರ ಕೃತ್ಯಗಳು 8:1-4 ಓದಿ.

  ಹೊಸದಾಗಿ ರಚಿಸಲ್ಪಟ್ಟ ಕ್ರೈಸ್ತ ಸಭೆಗೆ ಬಡಿದಂತಹ ಹಿಂಸೆಯ ಅಲೆಯು ಕ್ರೈಸ್ತ ನಂಬಿಕೆಯನ್ನು ವ್ಯಾಪಕವಾಗಿ ಹಬ್ಬಿಸಲು ಹೇಗೆ ಸಹಾಯಮಾಡಿತು, ಮತ್ತು ಇದಕ್ಕೆ ತುಲನಾತ್ಮಕವಾದ ಯಾವ ಸಂಗತಿಯು ಆಧುನಿಕ ದಿನಗಳಲ್ಲಿ ನಡೆದಿದೆ? (ಅ. ಕೃ. 8:4; ಯೆಶಾ. 54:17)

 2. ಅಪೊಸ್ತಲರ ಕೃತ್ಯಗಳು 9:1-20 ಓದಿ.

  ಸೌಲನ ವಿಷಯದಲ್ಲಿ ತನ್ನ ಮನಸ್ಸಿನಲ್ಲಿದ್ದ ಯಾವ ಮೂರು ಕೆಲಸವನ್ನು ಯೇಸು ಪ್ರಕಟಪಡಿಸಿದನು? (ಅ. ಕೃ. 9:15; 13:5; 26:1; 27:24; ರೋಮಾ. 11:13)

 3. ಅಪೊಸ್ತಲರ ಕೃತ್ಯಗಳು 22:6-16 ಓದಿ.

  ನಾವು ಹೇಗೆ ಅನನೀಯನಂತೆ ಇರಬಲ್ಲೆವು, ಮತ್ತು ಅದು ಏಕೆ ಪ್ರಾಮುಖ್ಯವಾಗಿದೆ? (ಅ. ಕೃ. 22:12; 1 ತಿಮೊ. 3:7; 1 ಪೇತ್ರ 1:14-16; 2:12)

 4. ಅಪೊಸ್ತಲರ ಕೃತ್ಯಗಳು 26:8-20 ಓದಿ

  ಸೌಲನು ಕ್ರೈಸ್ತನಾದ ವಿಷಯವು, ಅವಿಶ್ವಾಸಿ ಸಂಗಾತಿಗಳಿರುವವರಿಗೆ ಇಂದು ಹೇಗೆ ಪ್ರೋತ್ಸಾಹದಾಯಕವಾಗಿದೆ? (ಅ. ಕೃ. 26:11; 1 ತಿಮೊ. 1:14-16; 2 ತಿಮೊ. 4:2; 1 ಪೇತ್ರ 3:1-3)

ಕಥೆ 109

ಪೇತ್ರನು ಕೊರ್ನೇಲ್ಯನನ್ನು ಭೇಟಿಯಾಗುತ್ತಾನೆ

 1. ಚಿತ್ರದಲ್ಲಿ, ಅಡ್ಡಬೀಳುತ್ತಿರುವ ಮನುಷ್ಯನು ಯಾರು?

 2. ದೇವದೂತನು ಕೊರ್ನೇಲ್ಯನಿಗೆ ಏನು ಹೇಳುತ್ತಾನೆ?

 3. ಪೇತ್ರನು ಯೊಪ್ಪದಲ್ಲಿ ಸೀಮೋನನ ಮನೆಯ ಮಾಳಿಗೆಯ ಮೇಲಿದ್ದಾಗ ಏನನ್ನು ನೋಡುವಂತೆ ದೇವರು ಮಾಡುತ್ತಾನೆ?

 4. ತನಗೆ ಅಡ್ಡಬಿದ್ದು ಆರಾಧಿಸಬಾರದೆಂದು ಪೇತ್ರನು ಕೊರ್ನೇಲ್ಯನಿಗೆ ಹೇಳುವುದೇಕೆ?

 5. ಪೇತ್ರನೊಂದಿಗಿದ್ದ ಯೆಹೂದ್ಯ ಶಿಷ್ಯರು ಏಕೆ ಆಶ್ಚರ್ಯಗೊಳ್ಳುತ್ತಾರೆ?

 6. ಪೇತ್ರನು ಕೊರ್ನೇಲ್ಯನನ್ನು ಭೇಟಿಯಾದ ವಿಷಯದಿಂದ ನಾವು ಯಾವ ಪ್ರಾಮುಖ್ಯ ಪಾಠವನ್ನು ಕಲಿಯಬೇಕು?

ಹೆಚ್ಚಿನ ಪ್ರಶ್ನೆಗಳು:

 1. ಅಪೊಸ್ತಲರ ಕೃತ್ಯಗಳು 10:1-48 ಓದಿ.

  ಅಪೊಸ್ತಲರ ಕೃತ್ಯಗಳು 10:42 ರಲ್ಲಿರುವ ಪೇತ್ರನ ಮಾತುಗಳು, ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸದ ಕುರಿತು ಏನನ್ನು ತಿಳಿಯಪಡಿಸುತ್ತವೆ? (ಮತ್ತಾ. 28:19; ಮಾರ್ಕ 13:10; ಅ. ಕೃ. 1:8)

 2. ಅಪೊಸ್ತಲರ ಕೃತ್ಯಗಳು 11:1-18 ಓದಿ.

  ಅನ್ಯಜನರ ಕುರಿತಾದ ಯೆಹೋವನ ನಿರ್ದೇಶನವು ಸ್ಪಷ್ಟವಾದಾಗ ಪೇತ್ರನು ಯಾವ ಮನೋಭಾವವನ್ನು ತೋರಿಸಿದನು, ಮತ್ತು ಅವನ ಮಾದರಿಯನ್ನು ನಾವು ಹೇಗೆ ಅನುಕರಿಸಬಲ್ಲೆವು? (ಅ. ಕೃ. 11:17, 18; 2 ಕೊರಿಂ. 10:5; ಎಫೆ. 5:17)

ಕಥೆ 110

ತಿಮೊಥೆಯ—ಪೌಲನ ಹೊಸ ಸಹಾಯಕ

 1. ಚಿತ್ರದಲ್ಲಿ ನೀವು ಕಾಣುವ ಯುವಕನು ಯಾರು, ಅವನು ಎಲ್ಲಿ ವಾಸಿಸುತ್ತಾನೆ, ಮತ್ತು ಅವನ ತಾಯಿ ಹಾಗೂ ಅಜ್ಜಿಯ ಹೆಸರೇನು?

 2. ದೂರದ ಸ್ಥಳಗಳಲ್ಲಿರುವ ಜನರಿಗೆ ಸಾರಲಿಕ್ಕಾಗಿ ತನ್ನನ್ನು ಮತ್ತು ಸೀಲನನ್ನು ಜೊತೆಗೂಡಲು ಇಷ್ಟವಿದೆಯೋ ಎಂದು ಪೌಲನು ತಿಮೊಥೆಯನನ್ನು ಕೇಳಿದಾಗ ಅವನು ಏನೆಂದು ಉತ್ತರಿಸಿದನು?

 3. ಯೇಸುವಿನ ಶಿಷ್ಯರನ್ನು ಕ್ರೈಸ್ತರೆಂದು ಮೊದಮೊದಲು ಕರೆಯಲಾದದ್ದು ಎಲ್ಲಿ?

 4. ಪೌಲ, ಸೀಲ ಮತ್ತು ತಿಮೊಥೆಯನು ಲುಸ್ತ್ರದಿಂದ ಹೊರಟು ಯಾವ ಯಾವ ಸ್ಥಳಗಳನ್ನು ಸಂದರ್ಶಿಸಿದರು?

 5. ತಿಮೊಥೆಯನು ಪೌಲನಿಗೆ ಹೇಗೆ ಸಹಾಯಮಾಡಿದನು, ಮತ್ತು ಇಂದು ಯುವಜನರು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

ಹೆಚ್ಚಿನ ಪ್ರಶ್ನೆಗಳು:

 1. ಅಪೊಸ್ತಲರ ಕೃತ್ಯಗಳು 9:19-30 ಓದಿ.

  ಸುವಾರ್ತೆ ಸಾರುವ ಕೆಲಸಕ್ಕೆ ವಿರೋಧವನ್ನು ಎದುರಿಸಿದಾಗ ಅಪೊಸ್ತಲ ಪೌಲನು ಹೇಗೆ ವಿವೇಚನೆಯನ್ನು ತೋರಿಸಿದನು? (ಅ. ಕೃ. 9:22-25, 29, 30; ಮತ್ತಾ. 10:16)

 2. ಅಪೊಸ್ತಲರ ಕೃತ್ಯಗಳು 11:19-26 ಓದಿ.

  ಯೆಹೋವನ ಆತ್ಮವು ಸಾರುವ ಕೆಲಸವನ್ನು ಮಾರ್ಗದರ್ಶಿಸುತ್ತಿದೆ ಮತ್ತು ನಿರ್ದೇಶಿಸುತ್ತಿದೆ ಎಂಬುದನ್ನು ಅಪೊಸ್ತಲರ ಕೃತ್ಯಗಳು 11:19-21, 26 ರಲ್ಲಿರುವ ವೃತ್ತಾಂತವು ಹೇಗೆ ತೋರಿಸುತ್ತದೆ?

 3. ಅಪೊಸ್ತಲರ ಕೃತ್ಯಗಳು 13:13-16, 42-52 ಓದಿ.

  ವಿರೋಧವು ತಮ್ಮನ್ನು ನಿರುತ್ತೇಜಿಸುವಂತೆ ಶಿಷ್ಯರು ಬಿಡಲಿಲ್ಲವೆಂಬುದನ್ನು ಅಪೊಸ್ತಲರ ಕೃತ್ಯಗಳು 13:51, 52 ಹೇಗೆ ತೋರಿಸುತ್ತದೆ? (ಮತ್ತಾ. 10:14; ಅ. ಕೃ. 18:6; 1 ಪೇತ್ರ 4:14)

 4. ಅಪೊಸ್ತಲರ ಕೃತ್ಯಗಳು 14:1-6, 19-28 ಓದಿ.

  ‘ಯೆಹೋವನ ಕೈಗೆ ಅವರನ್ನು ಒಪ್ಪಿಸಿದರು’ ಎಂಬ ವಾಕ್ಸರಣಿಯು, ನಾವು ಹೊಸಬರಿಗೆ ನೆರವು ನೀಡುವಾಗ ಅನಗತ್ಯವಾಗಿ ಚಿಂತಿಸದಂತೆ ಹೇಗೆ ಸಹಾಯಮಾಡುತ್ತದೆ? (ಅ. ಕೃ. 14:21-23; 20:32; ಯೋಹಾ. 6:44)

 5. ಅಪೊಸ್ತಲರ ಕೃತ್ಯಗಳು 16:1-5 ಓದಿ.

  ಸುನ್ನತಿಯನ್ನು ಮಾಡಿಸಿಕೊಳ್ಳಲು ತಿಮೊಥೆಯನು ತೋರಿಸಿದ ಸಿದ್ಧಮನಸ್ಸು, ಎಲ್ಲವನ್ನೂ ‘ಸುವಾರ್ತೆಗೋಸ್ಕರ ಮಾಡುವುದರ’ ಪ್ರಮುಖತೆಯನ್ನು ಹೇಗೆ ಒತ್ತಿಹೇಳುತ್ತದೆ? (ಅ. ಕೃ. 16:3; 1 ಕೊರಿಂ. 9:23; 1 ಥೆಸ. 2:8)

 6. ಅಪೊಸ್ತಲರ ಕೃತ್ಯಗಳು 18:1-11, 18-22 ಓದಿ.

  ಸಾರುವ ಕೆಲಸವನ್ನು ನಿರ್ದೇಶಿಸುವುದರಲ್ಲಿ ಸ್ವತಃ ಯೇಸುವೇ ಒಳಗೂಡಿದ್ದಾನೆಂಬುದರ ಕುರಿತು ಅಪೊಸ್ತಲರ ಕೃತ್ಯಗಳು 18:9, 10 ಏನನ್ನು ತಿಳಿಸುತ್ತದೆ, ಮತ್ತು ಅದು ನಮಗಿಂದು ಯಾವ ಭರವಸೆಯನ್ನು ಕೊಡುತ್ತದೆ? (ಮತ್ತಾ. 28:20)

ಕಥೆ 111

ನಿದ್ದೆಹೋದ ಒಬ್ಬ ಹುಡುಗ

 1. ಚಿತ್ರದಲ್ಲಿ ನೆಲದ ಮೇಲೆ ಬಿದ್ದಿರುವ ಆ ಹುಡುಗನು ಯಾರು, ಮತ್ತು ಅವನಿಗೆ ಏನಾಯಿತು?

 2. ಹುಡುಗನು ಸತ್ತಿರುವುದನ್ನು ಕಂಡಾಗ ಪೌಲನು ಏನು ಮಾಡುತ್ತಾನೆ?

 3. ಪೌಲ, ತಿಮೊಥೆಯ ಮತ್ತು ಅವರೊಂದಿಗೆ ಪ್ರಯಾಣ ಮಾಡುವವರು ಎಲ್ಲಿಗೆ ಹೋಗುತ್ತಿದ್ದಾರೆ, ಮತ್ತು ಅವರು ಮಿಲೇತದಲ್ಲಿ ತಂಗುವಾಗ ಏನಾಗುತ್ತದೆ?

 4. ಪ್ರವಾದಿ ಅಗಬನು ಪೌಲನಿಗೆ ಯಾವ ಎಚ್ಚರಿಕೆಯನ್ನು ನೀಡುತ್ತಾನೆ, ಮತ್ತು ಹೇಗೆ ಪ್ರವಾದಿ ಹೇಳಿದಂತೆಯೇ ಆಗುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಅಪೊಸ್ತಲರ ಕೃತ್ಯಗಳು 20:7-38 ಓದಿ.

  1. (ಎ) ಅಪೊಸ್ತಲರ ಕೃತ್ಯಗಳು 20:26, 27 (NW)ರಲ್ಲಿರುವ ಪೌಲನ ಮಾತುಗಳಿಗನುಸಾರ, ನಾವು ಹೇಗೆ “ಸಕಲ ಜನರ ರಕ್ತಾಪರಾಧ ದೋಷದಿಂದ ವಿಮುಕ್ತ”ರಾಗಸಾಧ್ಯವಿದೆ? (ಯೆಹೆ. 33:8; ಅ. ಕೃ. 18:6, 7)

  2. (ಬಿ) ಹಿರಿಯರು ಬೋಧಿಸುವಾಗ “ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡವ”ರಾಗಿರಬೇಕು ಏಕೆ? (ಅ. ಕೃ. 20:17, 29, 30; ತೀತ 1:7-9; 2 ತಿಮೊ. 1:13)

 2. ಅಪೊಸ್ತಲರ ಕೃತ್ಯಗಳು 26:24-32 ಓದಿ.

  ಯೇಸುವಿನಿಂದ ಪಡೆದುಕೊಂಡ ಸಾರುವ ನೇಮಕವನ್ನು ಪೂರೈಸಲಿಕ್ಕಾಗಿ ಪೌಲನು ತನ್ನ ರೋಮನ್‌ ಪೌರತ್ವವನ್ನು ಹೇಗೆ ಉಪಯೋಗಿಸಿದನು? (ಅ. ಕೃ. 9:15; 16:37, 38; 25:11, 12; 26:32; ಲೂಕ 21:12, 13)

ಕಥೆ 112

ದ್ವೀಪವೊಂದರಲ್ಲಿ ಹಡಗು ಒಡೆದುಹೋದದ್ದು

 1. ಕ್ರೇತ ದ್ವೀಪದ ಸಮೀಪ ಹೋಗುತ್ತಿರುವಾಗ ಪೌಲನಿದ್ದ ಹಡಗಿಗೆ ಏನಾಗುತ್ತದೆ?

 2. ಹಡಗಿನಲ್ಲಿರುವವರಿಗೆ ಪೌಲನು ಏನು ಹೇಳುತ್ತಾನೆ?

 3. ಹಡಗು ಹೇಗೆ ಚೂರು ಚೂರಾಗಿ ಒಡೆದುಹೋಗುತ್ತದೆ?

 4. ಸೇನಾಧಿಕಾರಿಯು ಯಾವ ಸೂಚನೆಗಳನ್ನು ಕೊಡುತ್ತಾನೆ, ಮತ್ತು ಎಷ್ಟು ಜನರು ಸುರಕ್ಷಿತವಾಗಿ ದಡ ಸೇರುತ್ತಾರೆ?

 5. ಅವರು ತಲಪಿದ ದ್ವೀಪದ ಹೆಸರೇನು, ಮತ್ತು ಹವಾಮಾನವು ಸುಧಾರಿಸಿದಾಗ ಪೌಲನಿಗೆ ಏನು ಮಾಡಲಾಗುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಅಪೊಸ್ತಲರ ಕೃತ್ಯಗಳು 27:1-44 ಓದಿ.

  ಪೌಲನು ರೋಮ್‌ಗೆ ಪ್ರಯಾಣಿಸಿದ ವೃತ್ತಾಂತವನ್ನು ನಾವು ಓದುವಾಗ, ಬೈಬಲ್‌ ದಾಖಲೆಯ ನಿಷ್ಕೃಷ್ಟತೆಯಲ್ಲಿ ನಮ್ಮ ಭರವಸೆಯು ಹೇಗೆ ಬಲಗೊಳ್ಳುತ್ತದೆ? (ಅ. ಕೃ. 27:16-19, 27-32; ಲೂಕ 1:3; 2 ತಿಮೊ. 3:16, 17)

 2. ಅಪೊಸ್ತಲರ ಕೃತ್ಯಗಳು 28:1-14 ಓದಿ.

  ಹಡಗು ಒಡೆದುಹೋದಾಗ ಅಪೊಸ್ತಲ ಪೌಲನನ್ನು ಮತ್ತು ಅವನ ಜೊತೆಯಲ್ಲಿದ್ದವರನ್ನು “ಅಸಾಧಾರಣವಾದ ಮಾನವ ದಯೆ”ಯಿಂದ ಸತ್ಕರಿಸಲು ವಿಧರ್ಮಿಗಳಾಗಿದ್ದ ಮೆಲೀತೆಯ ನಿವಾಸಿಗಳು ಪ್ರಚೋದಿಸಲ್ಪಟ್ಟಿರುವುದಾದರೆ, ಕ್ರೈಸ್ತರು ಯಾವ ಗುಣವನ್ನು ತೋರಿಸುವಂತೆ ಪ್ರಚೋದಿಸಲ್ಪಡಬೇಕು ಮತ್ತು ವಿಶೇಷವಾಗಿ ಯಾವ ವಿಧದಲ್ಲಿ ಅದನ್ನು ತೋರಿಸಬೇಕು? (ಅ. ಕೃ. 28:1, 2, NW; ಇಬ್ರಿ. 13:1, 2; 1 ಪೇತ್ರ 4:9)

ಕಥೆ 113

ರೋಮ್‌ನಲ್ಲಿ ಪೌಲನು

 1. ಪೌಲನು ರೋಮ್‌ನಲ್ಲಿ ಸೆರೆಯಲ್ಲಿರುವಾಗ ಯಾರಿಗೆ ಸಾರುತ್ತಾನೆ?

 2. ಚಿತ್ರದಲ್ಲಿ ಮೇಜಿನ ಮೇಲೆ ಬರೆಯುತ್ತಿರುವವನು ಯಾರು, ಮತ್ತು ಅವನು ಪೌಲನಿಗೆ ಯಾವ ಸಹಾಯಮಾಡುತ್ತಿದ್ದಾನೆ?

 3. ಎಪಫ್ರೊದೀತನು ಯಾರು, ಮತ್ತು ಫಿಲಿಪ್ಪಿಗೆ ಹಿಂದೆಹೋಗುವಾಗ ಅವನು ಏನನ್ನು ಒಯ್ಯುತ್ತಾನೆ?

 4. ಪೌಲನು ತನ್ನ ಆಪ್ತ ಮಿತ್ರನಾದ ಫಿಲೆಮೋನನಿಗೆ ಏಕೆ ಪತ್ರ ಬರೆಯುತ್ತಾನೆ?

 5. ಪೌಲನು ಸೆರೆಯಿಂದ ಬಿಡುಗಡೆಯಾದಾಗ ಏನು ಮಾಡುತ್ತಾನೆ, ಮತ್ತು ತರುವಾಯ ಅವನಿಗೆ ಏನು ಸಂಭವಿಸುತ್ತದೆ?

 6. ಬೈಬಲಿನ ಕೊನೆಯ ಪುಸ್ತಕಗಳನ್ನು ಬರೆಯಲು ಯೆಹೋವನು ಯಾರನ್ನು ಉಪಯೋಗಿಸುತ್ತಾನೆ, ಮತ್ತು ಪ್ರಕಟನೆ ಪುಸ್ತಕವು ಯಾವ ವಿಷಯದ ಕುರಿತು ತಿಳಿಸುತ್ತದೆ?

ಹೆಚ್ಚಿನ ಪ್ರಶ್ನೆಗಳು:

 1. ಅಪೊಸ್ತಲರ ಕೃತ್ಯಗಳು 28:16-31 ಮತ್ತು ಫಿಲಿಪ್ಪಿ 1:13 ಓದಿ.

  ಪೌಲನು ರೋಮ್‌ನಲ್ಲಿ ಸೆರೆಯಾಗಿರುವಾಗ ತನ್ನ ಸಮಯವನ್ನು ಹೇಗೆ ಸದುಪಯೋಗಿಸಿದನು, ಮತ್ತು ಅವನ ಅಚಲ ನಂಬಿಕೆಯು ಕ್ರೈಸ್ತ ಸಭೆಯ ಮೇಲೆ ಯಾವ ಪರಿಣಾಮವನ್ನು ಬೀರಿತು? (ಅ. ಕೃ. 28:23, 30; ಫಿಲಿ. 1:14)

 2. ಫಿಲಿಪ್ಪಿ 2:19-30 ಓದಿ.

  ತಿಮೊಥೆಯ ಮತ್ತು ಎಪಫ್ರೊದೀತನ ಕುರಿತು ಪೌಲನು ಯಾವ ಗಣ್ಯತೆಯ ಮಾತುಗಳನ್ನು ಹೇಳಿದನು, ಮತ್ತು ಪೌಲನ ಮಾದರಿಯನ್ನು ನಾವು ಹೇಗೆ ಅನುಕರಿಸಬಲ್ಲೆವು? (ಫಿಲಿ. 2:20, 22, 25, 29, 30; 1 ಕೊರಿಂ. 16:18; 1 ಥೆಸ. 5:12, 13)

 3. ಫಿಲೆಮೋನ 1-25 ಓದಿ.

  1. (ಎ) ಪೌಲನು ಯಾವುದರ ನಿಮಿತ್ತ ಒಳ್ಳೆಯದನ್ನು ಮಾಡುವಂತೆ ಫಿಲೆಮೋನನನ್ನು ಬೇಡಿಕೊಳ್ಳುತ್ತಾನೆ, ಮತ್ತು ಇಂದು ಹಿರಿಯರಿಗೆ ಅದು ಒಂದು ಮಾರ್ಗದರ್ಶಕವಾಗಿದೆ ಹೇಗೆ? (ಫಿಲೆ. 9; 2 ಕೊರಿಂ. 8:8; ಗಲಾ. 5:13)

  2. (ಬಿ) ಫಿಲೆಮೋನ 13, 14 ರಲ್ಲಿರುವ ಪೌಲನ ಮಾತುಗಳು, ಸಭೆಯಲ್ಲಿರುವ ಇತರರ ಮನಸ್ಸಾಕ್ಷಿಯನ್ನು ಅವನು ಗೌರವಿಸಿದನೆಂದು ಹೇಗೆ ತೋರಿಸುತ್ತವೆ? (1 ಕೊರಿಂ. 8:7, 13; 10:31-33)

 4. ಎರಡನೆಯ ತಿಮೊಥೆಯ 4:7-9 ಓದಿ.

  ನಾವು ಕಡೇ ವರೆಗೂ ನಂಬಿಗಸ್ತರಾಗಿ ಉಳಿಯುವುದಾದರೆ ಯೆಹೋವನು ನಮಗೆ ಪ್ರತಿಫಲವನ್ನು ಕೊಡುವನೆಂಬುದರ ಕುರಿತು ನಾವು ಹೇಗೆ ಅಪೊಸ್ತಲ ಪೌಲನಂತೆ ಭರವಸೆಯಿಂದಿರಸಾಧ್ಯವಿದೆ? (ಮತ್ತಾ. 24:13; ಇಬ್ರಿ. 6:10)

ಕಥೆ 114

ಎಲ್ಲ ದುಷ್ಟತನಗಳ ಅಂತ್ಯ

 1. ಪರಲೋಕದಲ್ಲಿ ಕುದುರೆಗಳಿರುವುದರ ಕುರಿತು ಬೈಬಲು ಏಕೆ ಮಾತಾಡುತ್ತದೆ?

 2. ಭೂಮಿಯ ಮೇಲಿರುವ ಕೆಟ್ಟ ಜನರೊಂದಿಗೆ ದೇವರು ಮಾಡುವ ಯುದ್ಧದ ಹೆಸರೇನು, ಮತ್ತು ಈ ಯುದ್ಧದ ಉದ್ದೇಶವೇನು?

 3. ಚಿತ್ರದಲ್ಲಿ ನೋಡುವಂತೆ, ಈ ಹೋರಾಟದಲ್ಲಿ ನಾಯಕತ್ವವನ್ನು ವಹಿಸುವಾತನು ಯಾರು, ಅವನು ಏಕೆ ಕಿರೀಟವನ್ನು ಧರಿಸಿದ್ದಾನೆ ಮತ್ತು ಅವನ ಕೈಯಲ್ಲಿರುವ ಕತ್ತಿಯು ಏನನ್ನು ಸೂಚಿಸುತ್ತದೆ?

 4. ಕಥೆ 10, 15 ಮತ್ತು 33ನ್ನು ನೋಡುವಾಗ, ದೇವರು ಕೆಟ್ಟ ಜನರನ್ನು ನಾಶಮಾಡುವನೆಂಬ ಸಂಗತಿಯು ನಮ್ಮನ್ನು ಏಕೆ ಆಶ್ಚರ್ಯಗೊಳಿಸಬಾರದು?

 5. ಕೆಟ್ಟ ಜನರು ತಾವು ದೇವರನ್ನು ಆರಾಧಿಸುತ್ತೇವೆಂದು ಹೇಳಿಕೊಳ್ಳುವುದಾದರೂ, ಆತನು ಅವರನ್ನು ನಾಶಮಾಡುವನೆಂದು ಕಥೆ 36 ಮತ್ತು 76 ಹೇಗೆ ತೋರಿಸುತ್ತವೆ?

ಹೆಚ್ಚಿನ ಪ್ರಶ್ನೆಗಳು:

 1. ಪ್ರಕಟನೆ 19:11-16 ಓದಿ.

  1. (ಎ) ಬಿಳೀ ಕುದುರೆಯ ಮೇಲೆ ಸವಾರಿಮಾಡುತ್ತಿರುವವನು ಯೇಸು ಕ್ರಿಸ್ತನೆಂದು ಶಾಸ್ತ್ರವಚನಗಳು ಹೇಗೆ ಸ್ಪಷ್ಟಪಡಿಸುತ್ತವೆ? (ಪ್ರಕ. 1:5; 3:14; 19:11; ಯೆಶಾ. 11:4)

  2. (ಬಿ) ಯೇಸುವಿನ ರಕ್ತಪ್ರೋಕ್ಷಿತ ವಸ್ತ್ರವು, ಅವನು ಸಂಪೂರ್ಣವಾಗಿ ಖಂಡಿತ ಜಯಸಾಧಿಸುವನು ಎಂಬುದನ್ನು ಹೇಗೆ ದೃಢೀಕರಿಸುತ್ತದೆ? (ಪ್ರಕ. 14:18-20; 19:13)

  3. (ಸಿ) ಬಿಳೀ ಕುದುರೆಯ ಮೇಲಿರುವ ಯೇಸುವನ್ನು ಹಿಂಬಾಲಿಸುವ ಸೈನ್ಯದಲ್ಲಿ ಪ್ರಾಯಶಃ ಯಾರು ಒಳಗೂಡಿದ್ದಾರೆ? (ಪ್ರಕ. 2:26, 27; 12:7; 19:14; ಮತ್ತಾ. 25:31, 32)

ಕಥೆ 115

ಭೂಮಿಯ ಮೇಲೆ ಹೊಸ ಪರದೈಸ್‌

 1. ಭೂಮಿಯ ಮೇಲಿನ ಪರದೈಸಿನಲ್ಲಿ ನಾವು ಎಂತಹ ಪರಿಸ್ಥಿತಿಗಳಲ್ಲಿ ಆನಂದಿಸಲಿದ್ದೇವೆಂದು ಬೈಬಲು ಸೂಚಿಸುತ್ತದೆ?

 2. ಪರದೈಸಿನಲ್ಲಿ ಜೀವಿಸುವವರಿಗೆ ಬೈಬಲ್‌ ಏನನ್ನು ವಾಗ್ದಾನಿಸುತ್ತದೆ?

 3. ಈ ಆಶ್ಚರ್ಯಕರ ಬದಲಾವಣೆಯು ಯಾವಾಗ ಸಂಭವಿಸುವಂತೆ ಯೇಸು ನೋಡಿಕೊಳ್ಳುವನು?

 4. ತಾನು ದೇವರ ರಾಜ್ಯದ ರಾಜನಾಗುವಾಗ ಮಾಡಲಿರುವ ವಿಷಯಗಳನ್ನು ತೋರಿಸಲಿಕ್ಕಾಗಿ ಯೇಸು ಭೂಮಿಯ ಮೇಲಿದ್ದಾಗ ಏನು ಮಾಡಿದನು?

 5. ಯೇಸು ಮತ್ತು ಅವನ ಸ್ವರ್ಗೀಯ ಜೊತೆರಾಜರು ಪರಲೋಕದಿಂದ ಭೂಮಿಯನ್ನು ಆಳುವಾಗ ಏನು ಮಾಡುವರು?

ಹೆಚ್ಚಿನ ಪ್ರಶ್ನೆಗಳು:

 1. ಪ್ರಕಟನೆ 5:9, 10 ಓದಿ.

  ಸಹಸ್ರ ವರ್ಷದಾಳಿಕೆಯಲ್ಲಿ ಭೂಮಿಯನ್ನು ಆಳುವ ರಾಜರು ಮತ್ತು ಯಾಜಕರು ಸಹಾನುಭೂತಿಯುಳ್ಳವರೂ ದಯೆಯುಳ್ಳವರೂ ಆಗಿರುತ್ತಾರೆಂದು ನಾವು ಏಕೆ ಭರವಸೆಯಿಂದಿರಸಾಧ್ಯವಿದೆ? (ಎಫೆ. 4:20-24; 1 ಪೇತ್ರ 1:7; 3:8; 5:6-10)

 2. ಪ್ರಕಟನೆ 14:1-3 ಓದಿ.

  ತಂದೆಯ ಹೆಸರೂ ಯಜ್ಞದ ಕುರಿಯಾದಾತನ ಹೆಸರೂ 1,44,000 ಮಂದಿಯ ಹಣೆಯ ಮೇಲೆ ಬರೆಯಲ್ಪಟ್ಟಿದೆ ಎಂಬ ನಿಜಾಂಶವು ಏನನ್ನು ಸೂಚಿಸುತ್ತದೆ? (1 ಕೊರಿಂ. 3:23; 2 ತಿಮೊ. 2:19; ಪ್ರಕ. 3:12)

ಕಥೆ 116

ನಾವು ಹೇಗೆ ಸದಾಕಾಲ ಜೀವಿಸಬಲ್ಲೆವು?

 1. ಸದಾಕಾಲ ಜೀವಿಸಬೇಕಾದರೆ ನಾವು ಯಾರ ಕುರಿತು ತಿಳಿಯುವ ಆವಶ್ಯಕತೆಯಿದೆ?

 2. ಚಿತ್ರದಲ್ಲಿರುವ ಆ ಚಿಕ್ಕ ಹುಡುಗಿ ಮತ್ತು ಅವಳ ಸ್ನೇಹಿತರಂತೆ, ನಾವು ಯೆಹೋವ ದೇವರ ಕುರಿತು ಮತ್ತು ಯೇಸುವಿನ ಕುರಿತು ಹೇಗೆ ಕಲಿಯಸಾಧ್ಯವಿದೆ?

 3. ಚಿತ್ರದಲ್ಲಿ ನೀವು ಬೇರೆ ಯಾವ ಪುಸ್ತಕವನ್ನು ನೋಡುತ್ತೀರಿ, ಮತ್ತು ಅದನ್ನು ನಾವು ಏಕೆ ಕ್ರಮವಾಗಿ ಓದಬೇಕು?

 4. ನಿತ್ಯಜೀವವನ್ನು ಪಡೆಯಲು ಯೆಹೋವನ ಮತ್ತು ಯೇಸುವಿನ ಕುರಿತು ಕಲಿಯುವುದಲ್ಲದೆ ಬೇರೇನು ಮಾಡುವುದು ಅಗತ್ಯ?

 5. ನಾವು ಕಥೆ 69ರಿಂದ ಯಾವ ಪಾಠವನ್ನು ಕಲಿಯಸಾಧ್ಯವಿದೆ?

 6. ಕಥೆ 55ರಲ್ಲಿ ಎಳೆಯ ಸಮುವೇಲನ ಒಳ್ಳೇ ಮಾದರಿಯು ಏನನ್ನು ತೋರಿಸುತ್ತದೆ?

 7. ಯೇಸು ಕ್ರಿಸ್ತನ ಮಾದರಿಯನ್ನು ನಾವು ಹೇಗೆ ಅನುಸರಿಸಸಾಧ್ಯವಿದೆ, ಮತ್ತು ಹಾಗೆ ಮಾಡುವುದಾದರೆ ಭವಿಷ್ಯತ್ತಿನಲ್ಲಿ ನಮಗೆ ಏನು ಸಿಗುವುದು?

ಹೆಚ್ಚಿನ ಪ್ರಶ್ನೆಗಳು:

 1. ಯೋಹಾನ 17:3 ಓದಿ.

  ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುವುದರಲ್ಲಿ ಕೇವಲ ವಾಸ್ತವಾಂಶಗಳನ್ನು ಬಾಯಿಪಾಠಮಾಡುವುದು ಮಾತ್ರ ಸೇರಿಲ್ಲವೆಂದು ಶಾಸ್ತ್ರವಚನಗಳು ಹೇಗೆ ತೋರಿಸುತ್ತವೆ? (ಮತ್ತಾ. 7:21; ಯಾಕೋ. 2:18-20; 1 ಯೋಹಾ. 2:17)

 2. ಕೀರ್ತನೆ 145:1-21 ಓದಿ.

  1. (ಎ) ಯೆಹೋವನನ್ನು ಸ್ತುತಿಸಲಿಕ್ಕಾಗಿ ನಮಗಿರುವ ಕೆಲವು ಕಾರಣಗಳು ಯಾವುವು? (ಕೀರ್ತ. 145:8-11; ಪ್ರಕ. 4:11)

  2. (ಬಿ) ಯೆಹೋವನು ಹೇಗೆ “ಸರ್ವೋಪಕಾರಿ”ಯಾಗಿದ್ದಾನೆ, ಮತ್ತು ಇದು ಹೇಗೆ ನಮ್ಮನ್ನು ಆತನಿಗೆ ಇನ್ನಷ್ಟು ಸಮೀಪವಾಗುವಂತೆ ಮಾಡಬೇಕು? (ಕೀರ್ತ. 145:9; ಮತ್ತಾ. 5:43-45)

  3. (ಸಿ) ನಾವು ಯೆಹೋವನನ್ನು ಹೃದಯಾಳದಿಂದ ಪ್ರೀತಿಸುವುದಾದರೆ ಏನನ್ನು ಮಾಡುವಂತೆ ಪ್ರಚೋದಿಸಲ್ಪಡುವೆವು? (ಕೀರ್ತ. 119:171, 172, 175; 145:11, 12, 21)