ಪಾಠ 6
ಮೃತರನ್ನು ಪುನಃ ನೋಡಸಾಧ್ಯವೆ?
1. ಮೃತರ ಬಗ್ಗೆ ಬೈಬಲಿನಲ್ಲಿ ಯಾವ ಸಿಹಿಸುದ್ದಿ ಇದೆ?
ಯೇಸುವಿಗೆ ಬೇಥಾನ್ಯ ಎಂಬ ಊರಿನಲ್ಲಿ ಲಾಜರ ಎಂಬ ಗೆಳೆಯನಿದ್ದ. ಅವನು ತೀರಿಕೊಂಡ ಸುದ್ದಿ ಯೇಸುವಿಗೆ ತಲುಪುತ್ತದೆ. ಯೆರೂಸಲೇಮ್ ಸಮೀಪವಿದ್ದ ಆ ಊರಿಗೆ ಬರಲು ಯೇಸುವಿಗೆ ನಾಲ್ಕು ದಿನ ಆಗುತ್ತೆ. ಅವನು ಲಾಜರನ ಸೋದರಿಯರಾದ ಮಾರ್ಥ ಹಾಗೂ ಮರಿಯಳೊಂದಿಗೆ ಲಾಜರನ ಸಮಾಧಿ ಬಳಿ ಹೋಗುತ್ತಾನೆ. ವಿಷಯ ತಿಳಿದ ಜನರ ಗುಂಪು ಸಹ ಅಲ್ಲಿ ಆಗಮಿಸುತ್ತದೆ. ಯೇಸು ಲಾಜರನನ್ನು ಬದುಕಿಸುತ್ತಾನೆ. ಲಾಜರನನ್ನು ಜೀವಂತ ನೋಡಿದ ಮಾರ್ಥ ಹಾಗೂ ಮರಿಯಳ ಸಂತೋಷವನ್ನು ಸ್ವಲ್ಪ ಊಹಿಸಿ.—ಯೋಹಾನ 11:21-24, 38-44 ಓದಿ.
ಯೆಹೋವ ದೇವರು ಸತ್ತವರನ್ನು ಪುನರುತ್ಥಾನ ಮಾಡುವನು ಮತ್ತು ಅವರು ಇದೇ ಭೂಮಿಯಲ್ಲಿ ಬದುಕುವರು ಎಂಬ ವಿಷಯ ಮಾರ್ಥಳಿಗೆ ಮೊದಲೇ ಗೊತ್ತಿತ್ತು.—ಯೋಬ 14:14, 15 ಓದಿ.
2. ಸತ್ತ ಮೇಲೆ ಏನಾಗುತ್ತದೆ?
ದೇವರು ಮನುಷ್ಯರನ್ನು ಸೃಷ್ಟಿಸಿದ್ದು ಮಣ್ಣಿನಿಂದ. (ಆದಿಕಾಂಡ 2:7; 3:19) ಮನುಷ್ಯರು ಸಾಯುವಾಗ ಅವರೊಳಗಿಂದ ಆತ್ಮವೇನೂ ಹೊರಗೆ ಹೋಗಿ ಬದುಕುವುದಿಲ್ಲ. ಮನುಷ್ಯ ಸತ್ತಾಗ ಮಿದುಳು ಸಹ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಅಂದಮೇಲೆ ಯೋಚಿಸುವ ಸಾಮರ್ಥ್ಯವೇ ನಿಂತುಹೋಗುತ್ತದೆ. ಲಾಜರನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಪುನರುತ್ಥಾನವಾಗಿ ಬಂದ ಅವನು ಸತ್ತಿದ್ದಾಗ ತನಗೆ ಹಾಗಾಯ್ತು ಹೀಗಾಯ್ತು ಎಂದೇನೂ ಹೇಳಲಿಲ್ಲ. ಏಕೆಂದರೆ ಸತ್ತವರಿಗೆ ಪ್ರಜ್ಞೆಯೇ ಇರಲ್ಲ.—ಕೀರ್ತನೆ 146:4; ಪ್ರಸಂಗಿ 9:5, 6, 10 ಓದಿ.
ಸತ್ತವರನ್ನು ದೇವರು ನರಕದ ಬೆಂಕಿಯಲ್ಲಿ ಹಾಕಿ ಚಿತ್ರ ಹಿಂಸೆ ಕೊಡುತ್ತಾನಾ? ಸತ್ತವರಿಗೆ ಪ್ರಜ್ಞೆ ಇರುವುದಿಲ್ಲ ಎಂದು ಬೈಬಲ್ ಸ್ಪಷ್ಟವಾಗಿ ಹೇಳುತ್ತದೆ. ಅಂದಮೇಲೆ ದೇವರು ಯೆರೆಮೀಯ 7:31 ಓದಿ.
ಸತ್ತವರನ್ನು ನರಕಾಗ್ನಿಯಲ್ಲಿ ಹಾಕಿ ಹಿಂಸೆ ಕೊಡುವುದು ಸುಳ್ಳಲ್ಲವೆ. ಇಂಥ ಬೋಧನೆ ದೇವರನ್ನು ಕ್ರೂರಿಯಾಗಿ ಚಿತ್ರಿಸಿ ಆತನ ಹೆಸರಿಗೆ ಕಳಂಕ ಉಂಟುಮಾಡುತ್ತದೆ. ಜನರನ್ನು ಬೆಂಕಿಯಲ್ಲಿ ಆಹುತಿಕೊಡುವ ವಿಚಾರವೇ ದೇವರಿಗೆ ಹೇಸಿಗೆ ಉಂಟುಮಾಡುತ್ತೆ ಎಂದು ಬೈಬಲ್ ಹೇಳುತ್ತದೆ.—ವಿಡಿಯೊ ನೋಡಿ ಸತ್ತ ಮೇಲೆ ಏನಾಗುತ್ತದೆ?
3. ಸತ್ತವರು ನಮ್ಮೊಟ್ಟಿಗೆ ಮಾತಾಡಲು ಸಾಧ್ಯವೆ?
ಸತ್ತವರು ಮಾತಾಡಲಾರರು, ಕೇಳಿಸಿಕೊಳ್ಳಲಾರರು. (ಕೀರ್ತನೆ 115:17) ಆದರೆ ಸತ್ತವರು ಮಾತಾಡಿದನ್ನು ಎಷ್ಟೋ ಜನ ಕೇಳಿದ್ದಾರಲ್ಲವೇ? ಆ ರೀತಿ ಸತ್ತವರ ಸ್ವರದಲ್ಲಿ ಮಾತಾಡಿ ಜನರನ್ನು ಮೋಸಗೊಳಿಸುತ್ತಿರುವುದು ದುಷ್ಟ ದೇವದೂತರಾದ ದೆವ್ವಗಳು. (2 ಪೇತ್ರ 2:4) ಸತ್ತವರನ್ನು ವಿಚಾರಿಸುವುದನ್ನು ಯೆಹೋವ ದೇವರು ಹಗೆ ಮಾಡುತ್ತಾನೆ.—ಧರ್ಮೋಪದೇಶಕಾಂಡ 18:10, 11 ಓದಿ.
4. ಯಾರೆಲ್ಲ ಪುನರುತ್ಥಾನ ಆಗಿ ಮತ್ತೆ ಬದುಕುವರು?
ಸಾವನ್ನಪ್ಪಿರುವ ಕೋಟ್ಯಂತರ ಜನರು ಪುನರುತ್ಥಾನ ಆಗಿ ಇದೇ ಭೂಮಿಯಲ್ಲಿ ಜೀವಿಸುವರು. ಅಷ್ಟೇಕೆ ಸೃಷ್ಟಿಕರ್ತ ದೇವರ ಬಗ್ಗೆ ಸತ್ಯ ತಿಳಿಯದೆ ಕೆಟ್ಟ ಕೆಲಸ ಮಾಡುತ್ತಿದ್ದ ಕೆಲವರು ಸಹ ಪುನರುತ್ಥಾನಗೊಳ್ಳುವರು.—ಲೂಕ 23:43; ಅಪೊಸ್ತಲರ ಕಾರ್ಯಗಳು 24:15 ಓದಿ.
ಪುನರುತ್ಥಾನಗೊಂಡವರಿಗೆ ದೇವರ ಕುರಿತ ಸತ್ಯವನ್ನು ಕಲಿಯುವ ಹಾಗೂ ಯೇಸುವಿನ ಮಾತನ್ನು ಪಾಲಿಸಿ ನಂಬಿಕೆ ಇದೆ ಎಂದು ತೋರಿಸುವ ಅವಕಾಶ ಇರುತ್ತದೆ. (ಪ್ರಕಟನೆ 20:11-13) ಈ ಅವಕಾಶವನ್ನು ಉಪಯೋಗಿಸಿಕೊಂಡು ಒಳ್ಳೆಯದನ್ನು ಮಾಡುವವರು ಭೂಮಿಯಲ್ಲಿ ಸದಾಕಾಲ ಜೀವಿಸುವರು.—ಯೋಹಾನ 5:28, 29 ಓದಿ.
5. ಪುನರುತ್ಥಾನದ ಏರ್ಪಾಡು ಯೆಹೋವ ದೇವರ ಬಗ್ಗೆ ನಮಗೇನನ್ನು ತಿಳಿಸುತ್ತದೆ?
ಯೆಹೋವ ದೇವರು ತನ್ನ ಮಗ ಯೇಸುವನ್ನು ಮಾನವರಿಗಾಗಿ ಪ್ರಾಣ ಅರ್ಪಿಸಲು ಈ ಭೂಮಿಗೆ ಕಳುಹಿಸಿದನು. ಇದರಿಂದಲೇ ಪುನರುತ್ಥಾನದ ಏರ್ಪಾಡು ಸಾಧ್ಯವಾಯಿತು. ಇದು ಯೆಹೋವ ದೇವರಿಗೆ ನಮ್ಮ ಮೇಲೆ ಅಪರಿಮಿತ ಪ್ರೀತಿ ಕರುಣೆ ಇದೆ ಎಂದು ತೋರಿಸುತ್ತದೆ. ದೇವರು ಸತ್ತವರನ್ನು ಪುನಃ ಎಬ್ಬಿಸುವ ಸಮಯದಲ್ಲಿ ಯಾರನ್ನು ನೋಡಲು ನೀವು ಹಂಬಲಿಸುತ್ತೀರಿ?—ಯೋಹಾನ 3:16; ರೋಮನ್ನರಿಗೆ 6:23 ಓದಿ.