ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಪಾಠ 15

ನೀವೇಕೆ ದೇವರ ಬಗ್ಗೆ ಕಲಿಯುತ್ತಾ ಇರಬೇಕು?

ನೀವೇಕೆ ದೇವರ ಬಗ್ಗೆ ಕಲಿಯುತ್ತಾ ಇರಬೇಕು?

1. ಬೈಬಲ್‌ ಕಲಿಕೆಯನ್ನು ಮುಂದುವರಿಸುವಾಗ ಯಾವ ಲಾಭವಿದೆ?

ಬೈಬಲ್‌ ಬೋಧನೆಗಳ ಬಗ್ಗೆ ಈ ಕಿರುಹೊತ್ತಗೆ ನೀಡಿದ ನಸು ನೋಟ ಯೆಹೋವ ದೇವರ ಮೇಲೆ ನಿಮ್ಮ ಪ್ರೀತಿಯನ್ನು ಹೆಚ್ಚಿಸಿರುವುದರಲ್ಲಿ ಎರಡು ಮಾತಿಲ್ಲ. ಆ ನಿಮ್ಮ ಪ್ರೀತಿ ಸದಾ ಹಚ್ಚಹಸುರಾಗಿರಬೇಕು. (1 ಪೇತ್ರ 2:2) ಅಲ್ಲದೆ ಈ ಭೂಮಿಯಲ್ಲಿ ಸದಾಕಾಲ ಜೀವಿಸುವ ಅವಕಾಶ ನಿಮ್ಮದಾಗಬೇಕು. ಅದಕ್ಕಾಗಿ ದೇವರ ಬಗ್ಗೆ ಕಲಿಯುತ್ತಾ ನೀವು ಆತನಿಗೆ ಆಪ್ತರಾಗಬೇಕು.​ಯೋಹಾನ 17:3; ಯೂದ 21 ಓದಿ.

ದೇವರ ಜ್ಞಾನ ಪಡೆಯುತ್ತಾ ಹೋದಂತೆ ಆತನ ಮೇಲೆ ನಿಮ್ಮ ನಂಬಿಕೆ ವಿಶ್ವಾಸ ಹೆಚ್ಚಾಗುವುದು. ಆ ನಂಬಿಕೆ ದೇವರು ಮೆಚ್ಚುವಂಥ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತೆ. (ಇಬ್ರಿಯ 11:1, 6) ಮಾತ್ರವಲ್ಲ ಹಿಂದೆ ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪಪಟ್ಟು ದೇವರು ಇಷ್ಟಪಡುವಂಥ ಬದುಕನ್ನು ರೂಪಿಸಲು ಸಹ ನಿಮ್ಮನ್ನು ಹುರಿದುಂಬಿಸುತ್ತೆ.​ಅಪೊಸ್ತಲರ ಕಾರ್ಯಗಳು 3:19 ಓದಿ.

2. ದೈವಜ್ಞಾನದಿಂದ ಬೇರೆಯವರೂ ಪ್ರಯೋಜನ ಪಡೆಯಬೇಕಾದರೆ ನೀವೇನು ಮಾಡಬೇಕು?

ನೀವು ಯೆಹೋವನ ಜೊತೆ ವಿಶೇಷ ಸಂಬಂಧವನ್ನು ಹೊಂದಬಹುದು

ದೇವರು ತಿಳಿಸಿರುವ ಸಿಹಿಸುದ್ದಿಯ ಬಗ್ಗೆ ನೀವು ಇಷ್ಟರವರೆಗೆ ಕಲಿತಿರಿ. ಅದನ್ನು ಬೇರೆಯವರಿಗೆ ಹೇಳಲು ನೀವು ಹಾತೊರೆಯಬಹುದು. ಬೈಬಲ್‌ ಕಲಿಕೆಯನ್ನು ಮುಂದುವರಿಸಿದಂತೆ ಯೆಹೋವ ದೇವರ ಬಗ್ಗೆ, ಆತ ತಿಳಿಸಿರುವ ಸಿಹಿಸುದ್ದಿಯ ಬಗ್ಗೆ ಬೈಬಲಿನಿಂದ ಚೆನ್ನಾಗಿ ವಿವರಿಸಲು ಕಲಿಯುವಿರಿ.​ರೋಮನ್ನರಿಗೆ 10:13-15 ಓದಿ.

ನೀವು ಮೊದಮೊದಲು ನಿಮ್ಮ ಬಂಧುಮಿತ್ರರಿಗೆ ಸಿಹಿಸುದ್ದಿ ತಿಳಿಸಬಹುದು. ಆದರೆ ಬಲು ಜಾಣ್ಮೆಯಿಂದ ತಿಳಿಸಿ. ಅವರ ಧಾರ್ಮಿಕ ನಂಬಿಕೆ ತಪ್ಪೆಂದು ಹೇಳಿ ಅವರ ಮನಸ್ಸಿಗೆ ಘಾಸಿಮಾಡುವ ಬದಲು ದೇವರು ಮಾನವಕುಲಕ್ಕೆ ಕೊಡಲಿರುವ ಆಶೀರ್ವಾದಗಳ ಬಗ್ಗೆ ತಿಳಿಸಿ. ಎಲ್ಲಕ್ಕಿಂತ ಮುಖ್ಯವಾಗಿ ಸನ್ನಡತೆ ಇರಲಿ. ನುಡಿಗಿಂತಲೂ ನಡೆ ಜನರ ಮನಸ್ಸಿನ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.​2 ತಿಮೊಥೆಯ 2:24, 25 ಓದಿ.

3. ಬೈಬಲ್‌ ಕಲಿಕೆಯನ್ನು ಮುಂದುವರಿಸಿದರೆ ನಿಮ್ಮ ಮತ್ತು ದೇವರ ಸಂಬಂಧ ಹೇಗಿರುತ್ತೆ?

ಬೈಬಲನ್ನು ಓದಿ ಅಧ್ಯಯನ ಮಾಡಿದರೆ ದೇವರೊಂದಿಗಿನ ನಿಮ್ಮ ಸಂಬಂಧ ಗಾಢವಾಗುತ್ತದೆ. ದೇವರೊಂದಿಗೆ ವಿಶೇಷ ರೀತಿಯ ಆಪ್ತತೆಯನ್ನು ನೀವು ಸವಿಯುವಿರಿ. ಅಷ್ಟೇನಾ? ದೇವರ ಕುಟುಂಬದ ಓರ್ವ ಸದಸ್ಯರಾಗಿ ಆನಂದಿಸುವಿರಿ.2 ಕೊರಿಂಥ 6:18 ಓದಿ.

 4. ಪ್ರಗತಿ ಪಥದಲ್ಲಿ ಮುಂದುವರಿಯಲು ನೀವೇನು ಮಾಡಬೇಕು?

ಬೈಬಲ್‌ ಕಲಿಕೆಯನ್ನು ಮುಂದುವರಿಸಿದರೆ ನೀವು ಆಧ್ಯಾತ್ಮಿಕವಾಗಿ ಪ್ರಗತಿ ಮಾಡುವಿರಿ. (ಇಬ್ರಿಯ 5:13, 14) ಬೈಬಲಿನ ಅಧಿಕ ಜ್ಞಾನ ಗಳಿಸಲು ಇಷ್ಟವಿದ್ದರೆ ಯೆಹೋವನ ಸಾಕ್ಷಿಗಳ ನೆರವು ಕೇಳಿ. ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕ ಬಳಸಿ ಅವರು ನಿಮ್ಮೊಂದಿಗೆ ಬೈಬಲ್‌ ಜ್ಞಾನ ಹಂಚಿಕೊಳ್ಳುವರು. ಬೈಬಲ್‌ ಜ್ಞಾನವನ್ನು ಪಡೆದುಕೊಂಡಂತೆ ಬದುಕಿನಲ್ಲಿ ಹೆಚ್ಚು ಯಶಸ್ಸು ಪಡೆಯುವಿರಿ.​ಕೀರ್ತನೆ 1:1-3; 73:27, 28 ಓದಿ.

ನಿಮಗೆ ಸಿಹಿಸುದ್ದಿ ತಿಳಿಸಿರುವುದು ಸಂತೋಷವುಳ್ಳ ದೇವರಾಗಿರುವ ಯೆಹೋವನು. ಆತನ ಸ್ನೇಹ ಸಾಮೀಪ್ಯ ನಿಮಗೆ ಬೇಕಿರುವಲ್ಲಿ ಆತನ ಜನರೊಂದಿಗೆ ಗೆಳೆತನ ಬೆಳೆಸಿ. (ಇಬ್ರಿಯ 10:24, 25) ದೇವರಿಗೆ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡಲು ಶ್ರಮಿಸುವಾಗ ವಾಸ್ತವ ಜೀವನ ಅಂದರೆ ಸಾವಿಲ್ಲದ ಶಾಶ್ವತ ಜೀವನ ನಿಮ್ಮದಾಗುವುದು. ದೇವರ ಮಿತ್ರರಾಗುವುದಕ್ಕಿಂತ ಶ್ರೇಷ್ಠವಾದ ವಿಷಯ ಮತ್ತೊಂದಿಲ್ಲ!​1 ತಿಮೊಥೆಯ 1:11; 6:19 ಓದಿ.