ದೇವರಿಂದ ನಿಮಗೊಂದು ಸಿಹಿಸುದ್ದಿ!

ದೇವರು ನಮಗೆ ತಿಳಿಸುವ ಸಿಹಿಸುದ್ದಿ ಏನು? ನಾವೇಕೆ ಅದನ್ನು ನಂಬಬೇಕು? ದೇವರಿಗೆ ಸಂಬಂಧಪಟ್ಟ ಹಲವಾರು ಪ್ರಶ್ನೆಗಳಿಗೆ ಬೈಬಲ್‌ ಕೊಡುವ ಉತ್ತರ ಈ ಕಿರುಹೊತ್ತಗೆಯಲ್ಲಿದೆ.

ಕಿರುಹೊತ್ತಗೆಯ ಪ್ರಯೋಜನ ಏನು ಗೊತ್ತೆ?

ದೇವರ ವಾಕ್ಯವಾದ ಬೈಬಲನ್ನು ಕಲಿಯಲು ಈ ಕಿರುಹೊತ್ತಗೆ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಬೈಬಲಿನಿಂದಲೇ ವಚನಗಳನ್ನು ತೆರೆದು ಓದಲು ಕಲಿಯಿರಿ.

ಪಾಠ 1

ಏನಿದು ಸಿಹಿಸುದ್ದಿ?

ದೇವರು ತಿಳಿಸುವ ಸಿಹಿಸುದ್ದಿ ಏನು? ನೀವು ಸಿಹಿಸುದ್ದಿಯನ್ನು ತಿಳಿದುಕೊಳ್ಳುವುದು ಪ್ರಾಮುಖ್ಯವೇಕೆ? ಸುಂದರ ಭವಿಷ್ಯ ನಿಮ್ಮದಾಗಲು ಏನು ಮಾಡಬೇಕು? ಅಂತ ತಿಳಿದುಕೊಳ್ಳಿ.

ಪಾಠ 2

ಸೃಷ್ಟಿಕರ್ತ ದೇವರು ಯಾರು?

ದೇವರಿಗೆ ಹೆಸರಿದೆಯಾ? ದೇವರಿಗೆ ನಮ್ಮ ಬಗ್ಗೆ ಅಕ್ಕರೆ ಕಾಳಜಿ ಇದೆಯಾ?

ಪಾಠ 3

ಸಿಹಿಸುದ್ದಿ ನಿಜವಾಗ್ಲೂ ದೇವರಿಂದನಾ?

ಬೈಬಲಲ್ಲಿರುವ ವಿಷಯಗಳು ನಿಜವಾಗ್ಲೂ ಸತ್ಯ ಎನ್ನುವುದಕ್ಕೆ ಯಾವ ಖಾತ್ರಿ ಇದೆ?

ಪಾಠ 4

ಯೇಸು ಯಾರು?

ಯೇಸು ಯಾಕೆ ಪ್ರಾಣಕೊಟ್ಟನು, ವಿಮೋಚನಾ ಮೌಲ್ಯ ಅಂದರೇನು, ಯೇಸು ಈಗ ಏನು ಮಾಡುತ್ತಿದ್ದಾನೆ ಅಂತ ತಿಳಿದುಕೊಳ್ಳಿ.

ಪಾಠ 5

ದೇವರು ಭೂಮಿಯನ್ನು ಯಾವ ಉದ್ದೇಶದಿಂದ ಸೃಷ್ಟಿಸಿದ್ದಾನೆ?

ದೇವರು ಭೂಮಿಯನ್ನು ಯಾಕೆ ಸೃಷ್ಟಿಸಿದನು, ಮಾನವರ ಕಷ್ಟಸಂಕಟಗಳಿಗೆ ಕೊನೆ ಯಾವಾಗ, ಭವಿಷ್ಯದಲ್ಲಿ ಭೂಮಿ ಹೇಗಿರುತ್ತೆ, ಮನುಷ್ಯರಿಗೆ ಏನಾಗುತ್ತೆ ಅಂತ ಬೈಬಲ್‌ ಹೇಳುವುದನ್ನು ತಿಳಿದುಕೊಳ್ಳಿ.

ಪಾಠ 6

ಮೃತರನ್ನು ಪುನಃ ನೋಡಸಾಧ್ಯವೆ?

ಸತ್ತ ಮೇಲೆ ಏನಾಗುತ್ತದೆ? ಸತ್ತ ನಮ್ಮ ಆತ್ಮೀಯರನ್ನು ಮತ್ತೆ ನೋಡಬಹುದಾ?

ಪಾಠ 7

ದೇವರ ರಾಜ್ಯ ಅಂದರೇನು?

ದೇವರ ರಾಜ್ಯದ ರಾಜ ಯಾರು? ದೇವರ ರಾಜ್ಯ ಏನನ್ನು ಸಾಧಿಸುತ್ತದೆ?

ಪಾಠ 8

ಕೆಟ್ಟಸಂಗತಿಗಳು ನಡೆಯುವಂತೆ ದೇವರೇಕೆ ಬಿಟ್ಟಿದ್ದಾನೆ?

ಪ್ರಪಂಚದಲ್ಲಿ ಕೆಟ್ಟ ಸಂಗತಿಗಳು ಹೇಗೆ ಆರಂಭವಾಯಿತು, ಕೆಟ್ಟಸಂಗತಿ ನಡೆಯುವಂತೆ ದೇವರೇಕೆ ಬಿಟ್ಟಿದ್ದಾನೆ? ನಮ್ಮ ಕಷ್ಟಗಳಿಗೆ ಒಂದು ಶಾಶ್ವತ ಪರಿಹಾರ ಅನ್ನೋದು ಇದೆಯಾ?

ಪಾಠ 9

ಸಂಸಾರ ಆನಂದ ಸಾಗರವಾಗಲು ಏನು ಮಾಡಬೇಕು?

ಸಂತೋಷದ ದೇವರಾದ ಯೆಹೋವ ಎಲ್ಲ ಕುಟುಂಬಗಳು, ಸಂಸಾರಗಳು ಸಂತೋಷದಿಂದ ಬಾಳಬೇಕು ಅಂತ ಇಷ್ಟಪಡುತ್ತಾನೆ. ಗಂಡ, ಹೆಂಡತಿ, ಮಕ್ಕಳು, ಹೆತ್ತವರಿಗೆ ಬೈಬಲ್‌ ನೀಡುವ ಬುದ್ಧಿವಾದವೇನು? ಓದಿ ನೋಡಿ.

ಪಾಠ 10

ಯಾವ ರೀತಿಯ ಆರಾಧನೆ ಸರಿ?

ಎಷ್ಟು ಸತ್ಯ ಧರ್ಮಗಳಿವೆ? ಸತ್ಯ ಧರ್ಮದ ಐದು ಪ್ರಧಾನ ಚಿಹ್ನೆಗಳನ್ನು ತಿಳಿದುಕೊಳ್ಳಿ.

ಪಾಠ 11

ಬೈಬಲ್‌ ತತ್ವಗಳಿಂದ ಯಾವ ಲಾಭವಿದೆ?

ನಮಗೆ ಯಾಕೆ ದೇವರ ಮಾರ್ಗದರ್ಶನ ಬೇಕು ಮತ್ತು ಯಾವ ಎರಡು ಬೈಬಲ್‌ ತತ್ವಗಳನ್ನು ನಮ್ಮ ಬದುಕಲ್ಲಿ ಪಾಲಿಸಬೇಕು ಅಂತ ಯೇಸು ವಿವರಿಸಿದ್ದಾನೆ.

ಪಾಠ 12

ದೇವರ ಗೆಳೆಯರಾಗಲು ಏನು ಮಾಡಬೇಕು?

ದೇವರು ಎಲ್ಲರ ಪ್ರಾರ್ಥನೆಗಳನ್ನು ಕೇಳುತ್ತಾನಾ, ನಾವು ಹೇಗೆ ಪ್ರಾರ್ಥಿಸಬೇಕು, ದೇವರ ಗೆಳೆಯರಾಗಲು ಇನ್ನೇನು ಮಾಡಬೇಕು ಅಂತ ಓದಿ ತಿಳಿದುಕೊಳ್ಳಿ.

ಪಾಠ 13

ಧರ್ಮಗಳ ಭವಿಷ್ಯದ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ಎಲ್ಲ ಜನರು ಒಗ್ಗಟ್ಟಿನಿಂದ ಒಂದೇ ದೇವರನ್ನು ಆರಾಧಿಸುವ ಕಾಲ ಬರುತ್ತಾ?

ಪಾಠ 14

ದೇವರು ಒಂದು ಸಂಘಟನೆಯ ಏರ್ಪಾಡು ಮಾಡಿರುವುದೇಕೆ?

ಯಾವಾಗ ಮತ್ತು ಹೇಗೆ ಯೆಹೋವನ ಸಾಕ್ಷಿಗಳನ್ನು ಸಂಘಟಿಸಲಾಯಿತು ಅಂತ ಬೈಬಲ್‌ ಹೇಳುತ್ತೆ.

ಪಾಠ 15

ನೀವೇಕೆ ದೇವರ ಬಗ್ಗೆ ಕಲಿಯುತ್ತಾ ಇರಬೇಕು?

ದೇವರ ಬಗ್ಗೆ ಮತ್ತು ದೇವರ ವಾಕ್ಯದ ಬಗ್ಗೆ ನಿಮಗೆ ಗೊತ್ತಿರುವುದಾದರೆ ಅದರಿಂದ ಬೇರೆಯವರಿಗೆ ನೀವು ಹೇಗೆ ಸಹಾಯ ಮಾಡಬಹುದು? ನಿಮ್ಮ ಮತ್ತು ದೇವರ ಸಂಬಂಧ ಹೇಗಿರುತ್ತದೆ?