ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಈ ಪ್ರಶ್ನೆ ಬಂದಿದೆಯಾ?

ನಿಮಗೆ ಈ ಪ್ರಶ್ನೆ ಬಂದಿದೆಯಾ?

ಜೀವನ ಅಂದರೆ ಇಷ್ಟೇನಾ?

ಜೀವನ ಅಂದರೆ ಇಷ್ಟೇನಾ ಅಂತ ನಿಮಗೆ ಯಾವಾಗಲಾದರೂ ಅನಿಸಿದೆಯಾ?

‘ಆಟ ಆಡುವುದು, ಕೆಲಸ ಮಾಡುವುದು, ಮದುವೆ ಮಾಡಿಕೊಳ್ಳುವುದು, ಕುಟುಂಬ ನೋಡಿಕೊಳ್ಳುವುದು, ಕೊನೆಗೊಂದು ದಿನ ವಯಸ್ಸಾಗಿ ಸಾಯುವುದು, ಇಷ್ಟೇನಾ ಜೀವನ?’ ಅಂತ ಯಾವತ್ತಾದರೂ ಯೋಚನೆ ಮಾಡಿದ್ದೀರಾ? (ಯೋಬ 14:1, 2) ಜೀವನದಲ್ಲಿ ಏನೇನೋ ಸಾಧಿಸಿದ ಎಷ್ಟೋ ಬುದ್ಧಿವಂತರು ಸಹ ಈ ಪ್ರಶ್ನೆಯ ಬಗ್ಗೆ ಯೋಚಿಸಿದ್ದಾರೆ ಎಂದು ಬೈಬಲ್‌ ಹೇಳುತ್ತದೆ.ಪ್ರಸಂಗಿ 2:11 ಓದಿ.

ನಮ್ಮ ಜೀವನಕ್ಕೆ ಏನಾದರೂ ಅರ್ಥ ಇದೆಯಾ? ಇದಕ್ಕೆ ಉತ್ತರ ಸಿಗಬೇಕೆಂದರೆ ಭೂಮಿಯ ಮೇಲೆ ಜೀವಿಗಳ ಆರಂಭ ಹೇಗಾಯಿತು ಅಂತ ಮೊದಲು ತಿಳಿದುಕೊಳ್ಳಬೇಕು. ಮನುಷ್ಯನ ಮೆದುಳಿನ ಅಥವಾ ದೇಹದ ಅದ್ಭುತ ರಚನೆಯನ್ನು ನೋಡಿದ ನಂತರ ಎಲ್ಲಾ ಜೀವಿಗಳನ್ನು ಒಬ್ಬ ಸೃಷ್ಟಿಕರ್ತ ಸೃಷ್ಟಿಸಿದ್ದಾನೆ ಅಂತ ಎಷ್ಟೋ ಜನ ತಿಳಿದುಕೊಂಡಿದ್ದಾರೆ. (ಕೀರ್ತನೆ 139:14 ಓದಿ.) ಹಾಗಾದರೆ, ಅವನು ನಮ್ಮನ್ನು ಒಂದು ಉದ್ದೇಶದಿಂದಲೇ ಸೃಷ್ಟಿ ಮಾಡಿರಬೇಕು. ಆ ಉದ್ದೇಶ ಏನು ಅಂಥ ನಾವು ತಿಳಿದುಕೊಂಡರೆ ನಮ್ಮ ಜೀವನಕ್ಕೆ ಒಂದು ಅರ್ಥ ಸಿಗುತ್ತದೆ.

ಯಾವ ಉದ್ದೇಶದಿಂದ ಮನುಷ್ಯರನ್ನು ಸೃಷ್ಟಿಸಲಾಯಿತು?

ಮೊದಲ ಮಾನವ ಜೋಡಿಯನ್ನು ದೇವರು ಆಶೀರ್ವದಿಸಿ, ಅವರಿಗೆ ಒಂದು ವಿಶೇಷ ಕೆಲಸವನ್ನು ಕೊಟ್ಟಿದ್ದನು. ಅವರೂ ಅವರ ಮಕ್ಕಳೂ ಇಡೀ ಭೂಮಿಯನ್ನು ತುಂಬಿಕೊಂಡು ಅದನ್ನು ಸುಂದರ ತೋಟವನ್ನಾಗಿ ಮಾಡಿ, ಸದಾಕಾಲ ಬಾಳಬೇಕು ಎಂಬ ಉದ್ದೇಶದಿಂದ ದೇವರು ಮನುಷ್ಯರನ್ನು ಸೃಷ್ಟಿಸಿದ್ದನು.ಆದಿಕಾಂಡ 1:28, 31 ಓದಿ.

ಆ ಮನುಷ್ಯರು ದೇವರ ಮಾತನ್ನು ಕೇಳದಿದ್ದಾಗ ದೇವರ ಈ ಉದ್ದೇಶಕ್ಕೆ ಅಡ್ಡಿ ಬಂತು. ಹಾಗಂತ ದೇವರು ತನ್ನ ಉದ್ದೇಶವನ್ನು ಬದಲಾಯಿಸಿದನಾ? ಇಲ್ಲ. ನೀತಿವಂತರನ್ನು ಕಾಪಾಡಲು ದೇವರು ಈಗಾಗಲೇ ಕೆಲಸ ಮಾಡುತ್ತಿದ್ದಾನೆ ಮತ್ತು ಭೂಮಿಗಾಗಿ ತನ್ನ ಉದ್ದೇಶವನ್ನು ಬಲುಬೇಗನೆ ನೆರವೇರಿಸಲಿದ್ದಾನೆ ಎಂದು ಬೈಬಲ್‌ ಆಶ್ವಾಸನೆ ಕೊಡುತ್ತದೆ. ಆದ್ದರಿಂದ ಮನುಷ್ಯರೆಲ್ಲರೂ ತನ್ನ ಉದ್ದೇಶದಂತೆ ಸಂತೋಷದಿಂದ ಸದಾಕಾಲ ಜೀವಿಸಬೇಕೆಂದು ದೇವರು ಇಷ್ಟಪಡುತ್ತಾನೆ. (ಕೀರ್ತನೆ 37:29 ಓದಿ.) ದೇವರ ಉದ್ದೇಶದಿಂದ ನಿಮಗೆ ಯಾವ ಪ್ರಯೋಜನವಿದೆ ಅಂತ ಬೈಬಲಿನಿಂದ ಕಲಿಯಿರಿ. (w15-E 08/01)