ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ಕೊಡುವ ಉತ್ತರ

ಬೈಬಲ್‌ ಕೊಡುವ ಉತ್ತರ

ಸತ್ತವರು ಮತ್ತೆ ಜೀವಿಸುವ ನಿರೀಕ್ಷೆ ಇದೆಯಾ?

ಸಾವು ಒಂದು ರೀತಿ ನಿದ್ದೆಯಂತೆ. ಏಕೆಂದರೆ ಸತ್ತವರು ಏನೂ ಮಾಡಲಾಗದ ಪ್ರಜ್ಞಾಹೀನ ಸ್ಥಿತಿಯಲ್ಲಿರುತ್ತಾರೆ. ಆದರೆ ಜೀವದ ಸೃಷ್ಟಿಕರ್ತನಿಗೆ ಸತ್ತವರನ್ನು ಪುನರುತ್ಥಾನ ಮಾಡಿ ಜೀವ ಕೊಡುವ ಶಕ್ತಿ ಇದೆ. ಇದಕ್ಕೆ ಪುರಾವೆಯಾಗಿ ಆತನು ಯೇಸು ಭೂಮಿಯಲ್ಲಿದ್ದಾಗ ಅನೇಕ ಸತ್ತ ಜನರನ್ನು ಮತ್ತೆ ಜೀವಕ್ಕೆ ತರುವಂತೆ ಮಾಡಿದನು.ಪ್ರಸಂಗಿ 9:5; ಯೋಹಾನ 11:11, 43, 44 ಓದಿ.

ಸಾವು ನಿದ್ದೆಯಂತಿರುವುದು ಹೇಗೆ?

ಸತ್ತವರು ದೇವರ ನೆನಪಿನಲ್ಲಿರುತ್ತಾರೆ. ಅವರನ್ನು ಆತನು ನೀತಿ ತುಂಬಿದ ಹೊಸ ಲೋಕದಲ್ಲಿ ಪುನರುತ್ಥಾನ ಮಾಡುವನೆಂಬ ಮಾತು ಕೊಟ್ಟಿದ್ದಾನೆ. ಅಲ್ಲಿವರೆಗೆ ಅವರು ಮೃತ ಸ್ಥಿತಿಯಲ್ಲೇ ಇರುತ್ತಾರೆ. ಸತ್ತವರಿಗೆ ಪುನಃ ಜೀವ ಕೊಡುವ ತನ್ನ ಶಕ್ತಿಯನ್ನು ಬಳಸಲು ಸರ್ವಶಕ್ತ ದೇವರು ಹಂಬಲಿಸುತ್ತಿದ್ದಾನೆ.ಯೋಬ 14:14, 15 ಓದಿ.

ಪುನರುತ್ಥಾನ ಹೇಗಿರುತ್ತದೆ?

ದೇವರು ಸತ್ತವರನ್ನು ಪುನರುತ್ಥಾನ ಮಾಡುವಾಗ ಅವರು ತಮ್ಮನ್ನು, ತಮ್ಮ ಸ್ನೇಹಿತರನ್ನು, ಕುಟುಂಬದವರನ್ನು ಗುರುತು ಹಿಡಿಯಲು ಶಕ್ತರಾಗುವರು. ಒಬ್ಬ ವ್ಯಕ್ತಿಯ ದೇಹ ಪೂರ್ತಿ ನಶಿಸಿ ಹೋಗಿದ್ದರೂ ದೇವರು ಅದೇ ವ್ಯಕ್ತಿಗೆ ಹೊಸ ದೇಹ ಕೊಟ್ಟು ಪುನರುತ್ಥಾನಗೊಳಿಸಬಲ್ಲನು.1 ಕೊರಿಂಥ 15:35, 38 ಓದಿ.

ಸ್ವಲ್ಪ ಜನ ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗಲಿದ್ದಾರೆ. (ಪ್ರಕಟನೆ 20:6) ಆದರೆ ಹೆಚ್ಚಿನವರ ಪುನರುತ್ಥಾನ ಆಗುವುದು ಇದೇ ಭೂಮಿ ಮೇಲೆ ಜೀವಿಸಲಿಕ್ಕಾಗಿ. ಆಗ ಭೂಮಿ ಒಂದು ಸುಂದರ ಉದ್ಯಾನ ಆಗಿರುವುದು. ಹೀಗೆ ಒಂದು ಹೊಸ ಬದುಕನ್ನು ಆರಂಭಿಸುತ್ತಾರೆ. ಶಾಶ್ವತವಾಗಿ ಜೀವಿಸುವ ಸಾಧ್ಯತೆ ಅವರಿಗಿದೆ.ಕೀರ್ತನೆ 37:29; ಅಪೊಸ್ತಲರ ಕಾರ್ಯಗಳು 24:15 ಓದಿ. (w13-E 10/01)