ನಿಮಗೆ ನೆನಪಿದೆಯೇ?
ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:
ಕ್ರೈಸ್ತರು ಯೇಸು ಕ್ರಿಸ್ತನಿಗೆ ಪ್ರಾರ್ಥಿಸಬೇಕಾ?
ಇಲ್ಲ. ಯೆಹೋವನಿಗೆ ಪ್ರಾರ್ಥಿಸಬೇಕೆಂದು ಯೇಸುವೇ ಕಲಿಸಿದ್ದಾನೆ. ತನ್ನ ತಂದೆಗೆ ಪ್ರಾರ್ಥನೆ ಮಾಡುವ ಮೂಲಕ ಮಾದರಿಯನ್ನೂ ಇಟ್ಟಿದ್ದಾನೆ. (ಮತ್ತಾ. 6:6-9; ಯೋಹಾ. 11:41; 16:23) ಅವನು ಕಲಿಸಿಕೊಟ್ಟಂತೆಯೇ ಅವನ ಆರಂಭದ ಹಿಂಬಾಲಕರು ದೇವರಿಗೆ ಪ್ರಾರ್ಥಿಸಿದರೇ ಹೊರತು ಯೇಸುವಿಗಲ್ಲ. (ಅ. ಕಾ. 4:24, 30; ಕೊಲೊ. 1:3)—4/1, ಪುಟ 14.
ಯೇಸುವಿನ ಮರಣದ ಸ್ಮರಣೆಗೆ ನಾವು ಪ್ರತಿ ವರ್ಷ ಹೇಗೆ ಸಿದ್ಧರಾಗಬಹುದು?
ಒಂದು ವಿಷಯವೇನೆಂದರೆ, ಈ ಘಟನೆಗೆ ಸಂಬಂಧಿಸಿದ ಬೈಬಲ್ ಓದುವಿಕೆಯನ್ನು ತಪ್ಪದೆ ಮಾಡಬಹುದು. ಅಲ್ಲದೆ ಈ ಅವಧಿಯಲ್ಲಿ ಸಾರುವ ಕೆಲಸದಲ್ಲಿ ಹೆಚ್ಚನ್ನು ಮಾಡಲು ಪ್ರಯತ್ನಿಸಬಹುದು. ದೇವರು ನಮಗೆ ಕೊಟ್ಟಿರುವ ನಿರೀಕ್ಷೆ ಬಗ್ಗೆ ಪ್ರಾರ್ಥನಾಪೂರ್ವಕವಾಗಿ ಯೋಚಿಸಲೂಬಹುದು.—1/15, ಪುಟ 14-16.
ಜಪಾನಿನಲ್ಲಿರುವ ಸಹೋದರರಿಗೆ ಸಿಕ್ಕಿದ ಅಚ್ಚರಿಯ ಉಡುಗೊರೆ ಏನು?
ನೂತನ ಲೋಕ ಭಾಷಾಂತರ ಬೈಬಲಿನಿಂದ ಮತ್ತಾಯನ ಸುವಾರ್ತಾ ಪುಸ್ತಕವಿರುವ ಕಿರುಪುಸ್ತಿಕೆಯನ್ನು ಪಡೆದರು. ಇದನ್ನು ಸೇವೆಯಲ್ಲಿ ಜನರಿಗೆ ಕೊಡಲಾಗುತ್ತಿದೆ. ಬೈಬಲ್ ಬಗ್ಗೆ ಏನೂ ಗೊತ್ತಿಲ್ಲದ ಅನೇಕ ಜನರು ಅದನ್ನು ಸ್ವೀಕರಿಸುತ್ತಿದ್ದಾರೆ.—2/15 ಪುಟ 3.
ಒಂದನೇ ಶತಮಾನದಲ್ಲಿದ್ದ ಯಾವ ಪರಿಸ್ಥಿತಿಗಳಿಂದಾಗಿ ಸುವಾರ್ತೆ ಸಾರಲು ಸುಲಭವಾಯಿತು?
ದೀರ್ಘಕಾಲದ ವರೆಗೆ ಉಳಿದ ‘ರೋಮ್ನ ಶಾಂತಿಯ ಯುಗ’ದಿಂದಾಗಿ ಶಾಂತಿಯ ವಾತಾವರಣವಿತ್ತು. ಆರಂಭದ ಶಿಷ್ಯರಿಗೆ ಆಗ ಇದ್ದ ಒಳ್ಳೇ ರಸ್ತೆಗಳಲ್ಲಿ ಪ್ರಯಾಣಿಸಲು ಸುಲಭವಾಯಿತು. ಹೆಚ್ಚಿನ ಪ್ರದೇಶಗಳಲ್ಲಿ ಗ್ರೀಕ್ ಭಾಷೆಯನ್ನು ಬಳಸಲಾಗುತ್ತಿತ್ತು. ಇದರಿಂದಾಗಿ ಸುವಾರ್ತೆ ಸಾರಲು ಸುಲಭವಾಯಿತು. ಸಾಮ್ರಾಜ್ಯದ ಎಲ್ಲಾ ಕಡೆ ಇದ್ದ ಯೆಹೂದ್ಯರಿಗೂ ಸಾರಲು ಸಾಧ್ಯವಾಯಿತು. ಸುವಾರ್ತೆ ಸಾರುವ ಕೆಲಸವನ್ನು ಸಮರ್ಥಿಸಲು ಶಿಷ್ಯರು ರೋಮನ್ ನಿಯಮಗಳನ್ನು ಬಳಸಲು ಸಾಧ್ಯವಿತ್ತು.—2/15, ಪುಟ 20-23.
ಇತ್ತೀಚಿನ ವರ್ಷಗಳಲ್ಲಿ ನಮ್ಮ ಸಾಹಿತ್ಯದಲ್ಲಿ ಬೈಬಲ್ಗೆ ಸಂಬಂಧಪಟ್ಟ ಸೂಚಕ ಮತ್ತು ಸೂಚಕರೂಪಗಳ ಕುರಿತ ವಿಷಯ ಕಡಿಮೆಯಾಗಿದೆ ಏಕೆ?
ಕೆಲವು ವ್ಯಕ್ತಿಗಳು ಭವಿಷ್ಯದಲ್ಲಿ ಬರುವ ಒಂದು ದೊಡ್ಡ ವಿಷಯವನ್ನು ಪ್ರತಿನಿಧಿಸುವ ಸೂಚಕಗಳಾಗಿದ್ದಾರೆಂದು ಬೈಬಲ್ ಹೇಳುತ್ತದೆ. ಇದಕ್ಕೊಂದು ಉದಾಹರಣೆ ಗಲಾತ್ಯ 4:21-31. ಬೈಬಲ್ನಲ್ಲಿ ಹೀಗಿಲ್ಲದಿದ್ದರೆ ಯಾವುದೊ ಒಂದು ವಿಷಯ ಅಥವಾ ವ್ಯಕ್ತಿಯನ್ನು ಸೂಚಕ ಎನ್ನುವುದು ಅಥವಾ ಊಹಿಸುವುದು ತಪ್ಪು. ಬೈಬಲಿನಲ್ಲಿ ತಿಳಿಸಲಾಗಿರುವ ವ್ಯಕ್ತಿಗಳು ಮತ್ತು ಘಟನೆಗಳಿಂದ ಯಾವ ಪಾಠಗಳನ್ನು ಕಲಿಯಬಹುದು ಎಂಬುದಕ್ಕೆ ನಾವು ಗಮನಕೊಡಬೇಕು. (ರೋಮ. 15:4)—3/15, ಪುಟ 17-18.
ತಪ್ಪಿಗೆ ಪಶ್ಚಾತ್ತಾಪಪಟ್ಟಿರದ ವ್ಯಕ್ತಿಯನ್ನು ಬಹಿಷ್ಕಾರ ಮಾಡುವುದು ಏಕೆ ಪ್ರೀತಿಯ ಏರ್ಪಾಡಾಗಿದೆ?
ಬಹಿಷ್ಕಾರ ಮಾಡುವ ಗಂಭೀರ ಹೆಜ್ಜೆಯ ಬಗ್ಗೆ ಬೈಬಲಿನಲ್ಲಿ ತಿಳಿಸಲಾಗಿದೆ. ಈ ಏರ್ಪಾಡು ಪ್ರಯೋಜನಗಳನ್ನು ತರುತ್ತದೆ. (1 ಕೊರಿಂ. 5:11-13) ಅದು ದೇವರ ಹೆಸರಿಗೆ ಗೌರವ ತರುತ್ತದೆ, ಸಭೆಯ ಶುದ್ಧತೆಯನ್ನು ಕಾಪಾಡುತ್ತದೆ ಮತ್ತು ತಪ್ಪು ಮಾಡಿದವನಿಗೆ ತಪ್ಪಿನ ಅರಿವನ್ನು ಹುಟ್ಟಿಸಲೂಬಹುದು.—4/15, ಪುಟ 29-30.