ಕರ್ತನ ಸಂಧ್ಯಾ ಭೋಜನವನ್ನು ನಾವೇಕೆ ನಡೆಸಬೇಕು?
“ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ.”—1 ಕೊರಿಂಥ 11:24.
1, 2. ಕ್ರಿ.ಶ. 33 ನೈಸಾನ್ 14ರ ರಾತ್ರಿಯಂದು ಯೇಸು ಏನು ಮಾಡಿದನು? (ಶೀರ್ಷಿಕೆ ಚಿತ್ರ ನೋಡಿ.)
ಕ್ರಿ.ಶ. 33 ನೈಸಾನ್ 14ರ ರಾತ್ರಿ ಸಮಯ. ಯೆರೂಸಲೇಮಿನಲ್ಲಿ ಪೂರ್ಣಚಂದ್ರ ಕಾಣುತ್ತಿತ್ತು. ಯೇಸು ಹಾಗೂ ಅಪೊಸ್ತಲರು ಆ ರಾತ್ರಿ ಪಸ್ಕ ಹಬ್ಬವನ್ನು ಆಚರಿಸಿದರು. ಈ ಹಬ್ಬವು 1,500 ವರ್ಷಗಳ ಹಿಂದೆ ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದ ಬಂದಿವಾಸದಿಂದ ಬಿಡಿಸಿದ್ದನ್ನು ಜನರ ನೆನಪಿಗೆ ತರುತ್ತಿತ್ತು. ಈ ಆಚರಣೆಯ ನಂತರ ಯೇಸು ತನ್ನ 11 ಮಂದಿ ನಿಷ್ಠಾವಂತ ಅಪೊಸ್ತಲರೊಂದಿಗೆ ಒಂದು ವಿಶೇಷ ಭೋಜನ ಮಾಡಿದನು. ತನ್ನ ಮರಣವನ್ನು ಸ್ಮರಿಸಲು ಅಪೊಸ್ತಲರು ಪ್ರತಿ ವರ್ಷ ಇದನ್ನು ಮಾಡಲಿದ್ದರು.—ಮತ್ತಾ. 26:1, 2.
2 ಯೇಸು ದೇವರಿಗೆ ಪ್ರಾರ್ಥಿಸಿ ಹುಳಿಯಿಲ್ಲದ ರೊಟ್ಟಿಯನ್ನು ತನ್ನ ಅಪೊಸ್ತಲರಿಗೆ ದಾಟಿಸುತ್ತಾ “ತೆಗೆದುಕೊಳ್ಳಿರಿ, ತಿನ್ನಿರಿ” ಎಂದು ಹೇಳಿದನು. ನಂತರ ದ್ರಾಕ್ಷಾಮದ್ಯದ ಪಾತ್ರೆ ತೆಗೆದುಕೊಂಡು ಪುನಃ ಕೃತಜ್ಞತೆ ಸಲ್ಲಿಸಿ “ನೀವೆಲ್ಲರೂ ಇದರಲ್ಲಿರುವುದನ್ನು ಕುಡಿಯಿರಿ” ಎಂದು ಹೇಳಿದನು. (ಮತ್ತಾ. 26:26, 27) ಆ ರೊಟ್ಟಿ ಹಾಗೂ ದ್ರಾಕ್ಷಾಮದ್ಯಕ್ಕೆ ವಿಶೇಷ ಅರ್ಥ ಇತ್ತು. ಆ ಪ್ರಾಮುಖ್ಯ ರಾತ್ರಿಯಂದು ಆತನ ನಂಬಿಗಸ್ತ ಶಿಷ್ಯರು ಇನ್ನೂ ಅನೇಕ ವಿಷಯಗಳನ್ನು ಕಲಿತರು.
3. ಈ ಲೇಖನದಲ್ಲಿ ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?
3 ಪ್ರತಿ ವರ್ಷ ಶಿಷ್ಯರು ತನ್ನ ಮರಣವನ್ನು ನೆನಪಿಸಿಕೊಳ್ಳಬೇಕೆಂದು ಯೇಸು 1 ಕೊರಿಂ. 11:20) ಆದರೆ ಕೆಲವು ಪ್ರಶ್ನೆಗಳು ಏಳಬಹುದು: ಕ್ರಿಸ್ತನ ಮರಣವನ್ನು ಯಾಕೆ ಸ್ಮರಿಸಬೇಕು? ರೊಟ್ಟಿ ಹಾಗೂ ದ್ರಾಕ್ಷಾಮದ್ಯ ಏನನ್ನು ಸೂಚಿಸುತ್ತದೆ? ಕ್ರಿಸ್ತನ ಸ್ಮರಣೆಗೆ ನಾವು ಸಿದ್ಧರಾಗುವುದು ಹೇಗೆ? ಕುರುಹುಗಳನ್ನು ಯಾರು ಸೇವಿಸಬೇಕು? ಕ್ರೈಸ್ತರು ತಮ್ಮ ನಿರೀಕ್ಷೆಯನ್ನು ಅಮೂಲ್ಯವಾಗಿ ಎಣಿಸುತ್ತಾರೆಂದು ಹೇಗೆ ತೋರಿಸುತ್ತಾರೆ?
ಬಯಸಿದನು. ಇದನ್ನು ಕಾಲಾನಂತರ “ಕರ್ತನ ಸಂಧ್ಯಾ ಭೋಜನ” ಅಥವಾ ಕ್ರಿಸ್ತನ ಮರಣದ ಸ್ಮರಣೆ ಎಂದು ಕರೆಯಲಾಯಿತು. (ಕ್ರಿಸ್ತನ ಮರಣವನ್ನು ಯಾಕೆ ಸ್ಮರಿಸುತ್ತೇವೆ?
4. ಯೇಸುವಿನ ಮರಣ ಏನನ್ನು ಸಾಧ್ಯಮಾಡಿತು?
4 ಆದಾಮನು ಪಾಪಮಾಡಿದ ಕಾರಣ ನಮಗೆ ಪಾಪಮರಣ ಬಾಧ್ಯತೆಯಾಗಿ ಬಂದಿದೆ. (ರೋಮ. 5:12) ಯಾವ ಅಪರಿಪೂರ್ಣ ಮಾನವನೂ ತನಗಾಗಲಿ ಇತರರಿಗಾಗಲಿ ಈಡನ್ನು ಅಂದರೆ ವಿಮೋಚನಾ ಮೌಲ್ಯವನ್ನು ದೇವರಿಗೆ ಕೊಡಲು ಸಾಧ್ಯವಿಲ್ಲ. (ಕೀರ್ತ. 49:6-9) ಆದರೆ ಯೇಸು ತನ್ನ ಪರಿಪೂರ್ಣ ಜೀವವನ್ನು ನಮಗಾಗಿ ಕೊಟ್ಟು ಈ ವಿಮೋಚನಾ ಮೌಲ್ಯವನ್ನು ದೇವರಿಗೆ ಒಪ್ಪಿಸಿದನು. ಹೀಗೆ ಯೇಸು ನಮ್ಮನ್ನು ಪಾಪಮರಣದಿಂದ ಬಿಡಿಸಿದನು ಹಾಗೂ ನಿತ್ಯಜೀವದ ವರ ಸಿಗುವಂತೆ ಮಾಡಿದನು.—ರೋಮ. 6:23; 1 ಕೊರಿಂ. 15:21, 22.
5. (ಎ) ದೇವರು ಮತ್ತು ಯೇಸು ನಮ್ಮನ್ನು ಪ್ರೀತಿಸುತ್ತಾರೆಂದು ನಮಗೆ ಹೇಗೆ ಗೊತ್ತು? (ಬಿ) ಕ್ರಿಸ್ತನ ಮರಣದ ಸ್ಮರಣೆಗೆ ನಾವು ಯಾಕೆ ಹಾಜರಾಗಬೇಕು?
5 ದೇವರು ಮನುಷ್ಯರ ಮೇಲಿನ ತನ್ನ ಪ್ರೀತಿಯನ್ನು ವಿಮೋಚನಾ ಮೌಲ್ಯದ ಏರ್ಪಾಡು ಮಾಡುವ ಮೂಲಕ ತೋರಿಸಿಕೊಟ್ಟನು. (ಯೋಹಾ. 3:16) ಯೇಸು ಕೂಡ ತನ್ನ ಪ್ರೀತಿಯನ್ನು ತೋರಿಸಿಕೊಟ್ಟದ್ದು ನಮಗಾಗಿ ತನ್ನ ಜೀವ ಕೊಡುವ ಮೂಲಕ. ಭೂಮಿಗೆ ಬರುವ ಮುಂಚೆಯೂ ಅವನು ‘ಮಾನವಸಂತಾನದಲ್ಲಿ ಹರ್ಷಿಸುತ್ತಿದ್ದನು’ ಅಥವಾ ಅವರನ್ನು ತುಂಬ ಇಷ್ಟಪಡುತ್ತಿದ್ದನು. (ಜ್ಞಾನೋ. 8:30, 31) ಯೆಹೋವನು ಮತ್ತು ಯೇಸು ನಮಗಾಗಿ ಏನು ಮಾಡಿದ್ದಾರೋ ಅದಕ್ಕೆ ನಾವು ತುಂಬ ಕೃತಜ್ಞರು. ಆದ್ದರಿಂದ “ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ” ಎಂದು ಯೇಸು ಕೊಟ್ಟ ಆಜ್ಞೆ ಪಾಲಿಸುತ್ತೇವೆ.—1 ಕೊರಿಂ. 11:23-25.
ಕುರುಹುಗಳು ಏನನ್ನು ಸೂಚಿಸುತ್ತವೆ?
6. ರೊಟ್ಟಿ ಮತ್ತು ದ್ರಾಕ್ಷಾಮದ್ಯ ಏನಾಗಿದೆ, ಏನಲ್ಲ?
6 ಯೇಸು ತನ್ನ ಅಪೊಸ್ತಲರೊಂದಿಗೆ ಕೊನೆ ಭೋಜನ ಮಾಡಿದಾಗ ಚಮತ್ಕಾರದಿಂದ ರೊಟ್ಟಿಯನ್ನು ತನ್ನ ದೇಹವನ್ನಾಗಿ, ದ್ರಾಕ್ಷಾಮದ್ಯವನ್ನು ತನ್ನ ರಕ್ತವನ್ನಾಗಿ ಮಾಡಲಿಲ್ಲ. ಅವನು ರೊಟ್ಟಿಯ ಬಗ್ಗೆ ಹೀಗಂದನು: “ಇದು ನನ್ನ ದೇಹವನ್ನು ಸೂಚಿಸುತ್ತದೆ.” ದ್ರಾಕ್ಷಾಮದ್ಯದ ಬಗ್ಗೆ “ಇದು ಅನೇಕರಿಗೋಸ್ಕರ ಸುರಿಸಲ್ಪಡಲಿರುವ ನನ್ನ ‘ಒಡಂಬಡಿಕೆಯ ರಕ್ತವನ್ನು’ ಸೂಚಿಸುತ್ತದೆ” ಎಂದನು. (ಮಾರ್ಕ 14:22-24) ಆದ್ದರಿಂದ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಬರೀ ಚಿಹ್ನೆಗಳು ಅಥವಾ ಕುರುಹುಗಳಾಗಿ ವೀಕ್ಷಿಸಬೇಕು.
7. ಹುಳಿಯಿಲ್ಲದ ರೊಟ್ಟಿ ಏನನ್ನು ಸೂಚಿಸುತ್ತದೆ?
7 ಪಸ್ಕದೂಟದಿಂದ ಮಿಕ್ಕಿದ್ದ ಹುಳಿಯಿಲ್ಲದ ರೊಟ್ಟಿಯನ್ನು ಯೇಸು ಆ ಪ್ರಾಮುಖ್ಯ ಸಂಜೆಯಂದು ಉಪಯೋಗಿಸಿದನು. (ವಿಮೋ. 12:8) ಬೈಬಲಿನಲ್ಲಿ ಕೆಲವೊಮ್ಮೆ ಹುಳಿಯನ್ನು ಪಾಪದ ಸಂಕೇತವಾಗಿ ಬಳಸಲಾಗಿದೆ. (ಮತ್ತಾ. 16:6, 11, 12; ಲೂಕ 12:1) ಯೇಸು ಉಪಯೋಗಿಸಿದ ಹುಳಿಯಿಲ್ಲದ ರೊಟ್ಟಿ ಆತನ ಪಾಪರಹಿತ ದೇಹವನ್ನು ಸೂಚಿಸಿತು. (ಇಬ್ರಿ. 7:26) ಈ ಕಾರಣದಿಂದ ಸ್ಮರಣೆಯ ದಿನದಂದು ನಾವು ಹುಳಿಯಿಲ್ಲದ ರೊಟ್ಟಿಯನ್ನು ಬಳಸುತ್ತೇವೆ.
8. ದ್ರಾಕ್ಷಾಮದ್ಯ ಏನನ್ನು ಸೂಚಿಸುತ್ತದೆ?
8 ಯೇಸು ಬಳಸಿದ ದ್ರಾಕ್ಷಾಮದ್ಯ ಆತನ ರಕ್ತವನ್ನು ಅಥವಾ ಜೀವವನ್ನು ಸೂಚಿಸಿತು. ಇಂದು ಕೂಡ ಸ್ಮರಣೆಯ ದಿನದಂದು ನಾವು ಬಳಸುವ ದ್ರಾಕ್ಷಾಮದ್ಯ ಅದನ್ನೇ ಸೂಚಿಸುತ್ತದೆ. ಯೇಸುವನ್ನು ಯೆರೂಸಲೇಮ್ ಪಟ್ಟಣದ ಆಚೆ ಇದ್ದ ಗೊಲ್ಗೊಥಾ ಎಂಬಲ್ಲಿ ಕೊಲ್ಲಲಾಯಿತು. ಹೀಗೆ ಆತನು ನಮ್ಮ “ಪಾಪಗಳ ಕ್ಷಮಾಪಣೆಗಾಗಿ” ತನ್ನ ಜೀವವನ್ನೇ ತೆತ್ತನು. (ಮತ್ತಾ. 26:28; 27:33) ಈ ಅಮೂಲ್ಯ ಉಡುಗೊರೆಗಾಗಿ ನಾವು ಕೃತಜ್ಞರಾಗಿರುವುದಾದರೆ ಪ್ರತಿ ವರ್ಷ ಈ ವಿಶೇಷ ದಿನಕ್ಕಾಗಿ ವೈಯಕ್ತಿಕವಾಗಿ ಸಿದ್ಧರಾಗುತ್ತೇವೆ. ಹೇಗೆ?
ಸಿದ್ಧರಾಗುವ ಕೆಲವು ವಿಧಗಳು
9. (ಎ) ಸ್ಮರಣೆಯ ಬೈಬಲ್ ಓದುವಿಕೆಯನ್ನು ನಾವೇಕೆ ಮಾಡಬೇಕು? (ಬಿ) ವಿಮೋಚನಾ ಮೌಲ್ಯದ ಬಗ್ಗೆ ನಿಮಗೆ ಏನನಿಸುತ್ತದೆ?
9 ಸ್ಮರಣೆಯ ದಿನಕ್ಕೆ ಸಿದ್ಧರಾಗುವ ಒಂದು ವಿಧ * (ಪಾದಟಿಪ್ಪಣಿ ನೋಡಿ.) ಒಬ್ಬ ಸಹೋದರಿ ಹೀಗೆ ಬರೆದರು: “ಕ್ರಿಸ್ತನ ಮರಣದ ಸ್ಮರಣೆಯ ದಿನಕ್ಕಾಗಿ ಕಾಯುತ್ತಾ ಇರುತ್ತೇನೆ.” ಆಕೆ ಮುಂದುವರಿಸಿದ್ದು: “ಪ್ರತಿ ವರ್ಷ ಅದು ನನಗೆ ಹೆಚ್ಚು ವಿಶೇಷ ಅನಿಸುತ್ತೆ. ನನ್ನ ಅಪ್ಪ ತೀರಿಕೊಂಡಾಗ ಅವರ ಮೃತ ದೇಹದ ಮುಂದೆ ನಿಂತಿದ್ದು ನನಗಿನ್ನೂ ನೆನಪಿದೆ. ವಿಮೋಚನಾ ಮೌಲ್ಯಕ್ಕಾಗಿ ನನ್ನಲ್ಲಿ ಮನದಾಳದ ಕೃತಜ್ಞತೆ ಹುಟ್ಟಿದ್ದು ಆಗಲೇ. . . . ಅದರ ಕುರಿತ ಎಲ್ಲಾ ವಚನಗಳು ನನಗೆ ಗೊತ್ತಿದ್ದವು, ಅವನ್ನು ಹೇಗೆ ವಿವರಿಸೋದು ಅಂಥನೂ ಗೊತ್ತಿತ್ತು! ಆದರೆ ಅಮೂಲ್ಯವಾದ ಈ ವಿಮೋಚನಾ ಮೌಲ್ಯವು ಏನನ್ನು ಸಾಧಿಸಲಿದೆಯೋ ಅದರ ಬಗ್ಗೆ ನನ್ನ ಹೃದಯ ಸಂತೋಷದಿಂದ ಕುಪ್ಪಳಿಸಿದ್ದು ಸಾವು ಕೊಡುವ ನೋವು ನನ್ನನ್ನು ತಟ್ಟಿದಾಗಲೇ.” ಹೀಗೆ ಯೇಸುವಿನ ಯಜ್ಞದಿಂದ ವೈಯಕ್ತಿಕವಾಗಿ ನಮಗಾಗುವ ಪ್ರಯೋಜನಗಳ ಬಗ್ಗೆ ಧ್ಯಾನಿಸುವುದು ಸ್ಮರಣೆಯ ದಿನಕ್ಕೆ ಸಿದ್ಧರಾಗುವ ಒಂದು ಪ್ರಾಮುಖ್ಯ ವಿಧ.
ದಿನದ ವಚನ ಓದಿ ಚರ್ಚಿಸೋಣ ಪುಸ್ತಿಕೆಯಲ್ಲಿ ಕೊಡಲಾದ ಸ್ಮರಣೆಯ ಬೈಬಲ್ ಓದುವಿಕೆಯನ್ನು ತಪ್ಪದೆ ಮಾಡುವುದೇ. ಈ ಬೈಬಲ್ ವೃತ್ತಾಂತಗಳನ್ನು ಓದಿದರೆ ಯೇಸು ಮರಣಕ್ಕೆ ಮುಂಚೆ ಏನೆಲ್ಲ ಮಾಡಿದನೆಂದು ಧ್ಯಾನಿಸಲು ಸಹಾಯವಾಗುವುದು.10. ಕ್ರಿಸ್ತನ ಮರಣದ ಸ್ಮರಣೆಗೆ ಸಿದ್ಧರಾಗಲು ನಾವು ಇನ್ನೇನು ಮಾಡಬಹುದು?
10 ನಾವು ಸಿದ್ಧರಾಗಬಹುದಾದ ಇನ್ನೊಂದು ವಿಧ ಸಾರುವ ಕೆಲಸದಲ್ಲಿ ಹೆಚ್ಚು ಸಮಯ ಕಳೆಯುವುದೇ. ಹೀಗೆ ಮಾಡುವುದರಿಂದ ಸಾಧ್ಯವಾದಷ್ಟು ಹೆಚ್ಚು ಜನರನ್ನು ಕ್ರಿಸ್ತನ ಮರಣದ ಸ್ಮರಣೆಗೆ ಆಮಂತ್ರಿಸಲು ಆಗುತ್ತದೆ. ಅದಕ್ಕಾಗಿ ಆ ತಿಂಗಳು ಆಕ್ಸಿಲಿಯರಿ ಪಯನೀಯರಿಂಗ್ ಮಾಡಬಹುದು. ನಾವು ಇತರರ ಜೊತೆ ದೇವರ ಬಗ್ಗೆ, ಯೇಸು ಬಗ್ಗೆ, ನಿತ್ಯಜೀವದ ನಿರೀಕ್ಷೆ ಬಗ್ಗೆ ಮಾತಾಡುವಾಗ ದೇವರು ನಮ್ಮಿಂದ ಬಯಸಿದ್ದನ್ನೇ ಮಾಡುತ್ತಿದ್ದೇವೆ ಎಂಬ ಸಂತೃಪ್ತಿ ಸಿಗುತ್ತದೆ.—ಕೀರ್ತ. 148:12, 13.
11. ಕ್ರಿಸ್ತನ ಮರಣದ ಸ್ಮರಣೆಯಂದು ಕೆಲವರು ಅಯೋಗ್ಯವಾಗಿ ಕುರುಹುಗಳನ್ನು ಸೇವಿಸಿದರೆಂದು ಪೌಲನು ಹೇಳಿದ್ದೇಕೆ?
11 ಕ್ರಿಸ್ತನ ಮರಣದ ಸ್ಮರಣೆಗಾಗಿ ಸಿದ್ಧರಾಗುವಾಗ ಅಪೊಸ್ತಲ ಪೌಲನು ಕೊರಿಂಥದಲಿದ್ದ ಕ್ರೈಸ್ತರಿಗೆ ಬರೆದ ವಿಷಯದ ಬಗ್ಗೆ ಧ್ಯಾನಿಸಿ. (1 ಕೊರಿಂಥ 11:27-34 ಓದಿ.) ಅಯೋಗ್ಯನಾದ, ಅಂದರೆ ಅರ್ಹನಲ್ಲದ ಒಬ್ಬ ವ್ಯಕ್ತಿ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಸೇವಿಸಿದರೆ “ಕರ್ತನ ದೇಹದ ವಿಷಯದಲ್ಲಿಯೂ ರಕ್ತದ ವಿಷಯದಲ್ಲಿಯೂ ದೋಷಿಯಾಗುವನು” ಎಂದು ಪೌಲನು ಹೇಳಿದನು. ಒಬ್ಬ ಅಭಿಷಿಕ್ತನು ಕೆಟ್ಟ ನಡತೆಯಲ್ಲಿ ಒಳಗೂಡಿದ್ದರೂ ಕುರುಹುಗಳನ್ನು ಸೇವಿಸಿದರೆ ಅವನು “ತನ್ನ ವಿರುದ್ಧವಾಗಿಯೇ ತೀರ್ಪನ್ನು ತಂದುಕೊಳ್ಳುತ್ತಾನೆ.” ಪೌಲನ ಸಮಯದಲ್ಲಿ ಕೊರಿಂಥದಲ್ಲಿದ್ದ ಅನೇಕ ಕ್ರೈಸ್ತರು ಕೆಟ್ಟ ನಡತೆಯಲ್ಲಿ ಒಳಗೂಡಿದ್ದರು. ಕೆಲವರು ಸ್ಮರಣೆ ಆರಂಭವಾಗುವ ಮುನ್ನ ಹಾಗೂ ಸ್ಮರಣೆಯ ಸಮಯದಲ್ಲಿ ಎಷ್ಟು ತಿಂದು ಕುಡಿಯುತ್ತಿದ್ದರೆಂದರೆ ಸ್ಮರಣೆ ನಡೆಯುವಾಗ ತೂಕಡಿಸುತ್ತಿದ್ದರು. ಹೀಗೆ ಅವರು ಆ ವಿಶೇಷ ಸಂದರ್ಭಕ್ಕೆ ಅಗೌರವ ತೋರಿಸಿದರು. ಆದ್ದರಿಂದ ಅವರು ಕುರುಹುಗಳನ್ನು ಸೇವಿಸಿದರೂ ದೇವರಿಗೆ ಅದು ಇಷ್ಟವಾಗಲಿಲ್ಲ.
12. (ಎ) ಕ್ರಿಸ್ತನ ಮರಣದ ಸ್ಮರಣೆಯನ್ನು ಪೌಲನು ಯಾವುದಕ್ಕೆ ಹೋಲಿಸುತ್ತಾನೆ? (ಬಿ) ಕುರುಹುಗಳನ್ನು ಸೇವಿಸುವವರಿಗೆ ಯಾವ ಎಚ್ಚರಿಕೆ ಕೊಟ್ಟನು? (ಸಿ) ಕುರುಹುಗಳನ್ನು ಸೇವಿಸುವ ಒಬ್ಬನು ಗಂಭೀರ ಪಾಪ ಮಾಡಿದ್ದರೆ ಏನು ಮಾಡಬೇಕು?
12 ಕ್ರಿಸ್ತನ ಮರಣದ ಸ್ಮರಣೆಯನ್ನು ಒಂದು ಭೋಜನಕ್ಕೆ ಹೋಲಿಸುತ್ತಾ ಪೌಲನು ಕುರುಹುಗಳನ್ನು ಸೇವಿಸುವವರಿಗೆ ಎಚ್ಚರಿಸಿದ್ದು: “ನೀವು ಯೆಹೋವನ ಪಾತ್ರೆಯಲ್ಲಿಯೂ ದೆವ್ವಗಳ ಪಾತ್ರೆಯಲ್ಲಿಯೂ ಕುಡಿಯಲಾರಿರಿ; ನೀವು ‘ಯೆಹೋವನ ಮೇಜು’ ಮತ್ತು ದೆವ್ವಗಳ ಮೇಜು ಇವೆರಡರಲ್ಲಿಯೂ ಪಾಲುಗಾರರಾಗಲು ಸಾಧ್ಯವಿಲ್ಲ.” (1 ಕೊರಿಂ. 10:16-21) ಕುರುಹುಗಳನ್ನು ಸೇವಿಸುವ ಅಭಿಷಿಕ್ತನೊಬ್ಬನು ಗಂಭೀರ ಪಾಪಮಾಡಿದ್ದರೆ ಅವನು ಹಿರಿಯರ ಸಹಾಯ ಕೋರಬೇಕು. (ಯಾಕೋಬ 5:14-16 ಓದಿ.) ನಿಜವಾಗಿ ಪಶ್ಚಾತ್ತಾಪ ಪಟ್ಟಿದ್ದಾನೆಂದು ಅವನ ಕ್ರಿಯೆಗಳಿಂದ ಸಾಬೀತಾದರೆ ಅವನು ಕುರುಹುಗಳನ್ನು ಸೇವಿಸಬಹುದು. ಇದು ಯೇಸುವಿನ ಯಜ್ಞಕ್ಕೆ ಅಗೌರವ ತೋರಿಸಿದಂತೆ ಆಗುವುದಿಲ್ಲ.—ಲೂಕ 3:8.
13. ದೇವರು ನಮಗೆ ಕೊಟ್ಟಿರುವ ನಿರೀಕ್ಷೆ ಬಗ್ಗೆ ನಾವೇಕೆ ಪ್ರಾರ್ಥಿಸಬೇಕು?
13 ನಾವು ಸ್ಮರಣೆಗಾಗಿ ಸಿದ್ಧರಾಗಬಹುದಾದ ಮತ್ತೊಂದು ವಿಧ, ದೇವರು ನಮಗೆ ಕೊಟ್ಟಿರುವ ನಿರೀಕ್ಷೆ ಬಗ್ಗೆ ಪ್ರಾರ್ಥಿಸುವುದು ಮತ್ತು ಧ್ಯಾನಿಸುವುದು. ನಮಗೆ ಸ್ವರ್ಗದ ನಿರೀಕ್ಷೆ ಇರಲಿ ಭೂನಿರೀಕ್ಷೆ ಇರಲಿ ಹೀಗೆ ಮಾಡಬೇಕು. ನಾವು ಅಭಿಷಿಕ್ತರು ಎನ್ನುವುದಕ್ಕೆ ಸ್ಪಷ್ಟ ಪುರಾವೆ ಇಲ್ಲದಿದ್ದರೆ ಕುರುಹುಗಳನ್ನು ಸೇವಿಸುವುದಿಲ್ಲ ಏಕೆಂದರೆ ನಾವು ಯೇಸುವಿನ ಯಜ್ಞಕ್ಕೆ ಅಗೌರವ ತೋರಿಸಲು ಇಷ್ಟಪಡುವುದಿಲ್ಲ. ಹಾಗಾದರೆ ಕುರುಹುಗಳನ್ನು ಯಾರು ಸೇವಿಸಬೇಕು?
ಕುರುಹುಗಳನ್ನು ಯಾರು ಸೇವಿಸಬೇಕು?
14. ಅಭಿಷಿಕ್ತರು ಹೊಸ ಒಡಂಬಡಿಕೆಯ ಭಾಗ ಆಗಿರುವುದರಿಂದ ಅವರು ಸ್ಮರಣೆಯಂದು ಏನು ಮಾಡುವರು?
14 ಸ್ಮರಣೆಯ ಕುರುಹುಗಳನ್ನು ಸೇವಿಸುವವರಿಗೆ ತಾವು ಹೊಸ ಒಡಂಬಡಿಕೆಯ ಭಾಗ ಆಗಿದ್ದೇವೆಂಬ ಪೂರ್ತಿ ಖಾತ್ರಿ ಇರುತ್ತದೆ. ಯೇಸು ದ್ರಾಕ್ಷಾಮದ್ಯದ ಕುರಿತು ಹೇಳಿದ್ದು: “ಈ ಪಾತ್ರೆಯು ನನ್ನ ರಕ್ತದ ಆಧಾರದ ಮೇಲೆ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.” (1 ಕೊರಿಂ. 11:25) ಯೆಹೋವನು ಇಸ್ರಾಯೇಲ್ಯರೊಂದಿಗೆ ಧರ್ಮಶಾಸ್ತ್ರದ ಒಡಂಬಡಿಕೆಯನ್ನು ಮಾಡಿದ್ದನು. ಆದರೆ ಇದರ ಸ್ಥಾನದಲ್ಲಿ ಹೊಸ ಒಡಂಬಡಿಕೆಯನ್ನು ತರುವೆನೆಂದು ವಾಗ್ದಾನಿಸಿದನು. (ಯೆರೆಮಿಾಯ 31:31-34 ಓದಿ.) ಈ ಹೊಸ ಒಡಂಬಡಿಕೆ ಅಥವಾ ಒಪ್ಪಂದವನ್ನು ಆತನು ಅಭಿಷಿಕ್ತರೊಂದಿಗೆ ಮಾಡಿದನು. (ಗಲಾ. 6:15, 16) ಇದನ್ನು ಸಾಧ್ಯಗೊಳಿಸಿದ್ದು ಯೇಸುವಿನ ಮರಣ. (ಲೂಕ 22:20) ಯೇಸುವೇ ಈ ಹೊಸ ಒಡಂಬಡಿಕೆಯ ಮಧ್ಯಸ್ಥ. ಹೊಸ ಒಡಂಬಡಿಕೆಯ ಭಾಗ ಆಗಿರುವ ನಿಷ್ಠಾವಂತ ಅಭಿಷಿಕ್ತರು ಯೇಸುವಿನೊಂದಿಗೆ ಸ್ವರ್ಗದಲ್ಲಿರುವರು.—ಇಬ್ರಿ. 8:6; 9:15.
15. (ಎ) ರಾಜ್ಯದ ಒಡಂಬಡಿಕೆಯಲ್ಲಿ ಯಾರು ಸೇರಿದ್ದಾರೆ? (ಬಿ) ನಂಬಿಗಸ್ತರಾಗಿದ್ದರೆ ಅವರಿಗೆ ಯಾವ ಸುಯೋಗ ಸಿಗುತ್ತದೆ?
15 ಅಭಿಷಿಕ್ತರಿಗೆ ತಾವು ರಾಜ್ಯದ ಒಡಂಬಡಿಕೆಯ ಭಾಗ ಆಗಿದ್ದೇವೆಂದು ಗೊತ್ತು. (ಲೂಕ 12:32 ಓದಿ.) ಈ ಒಡಂಬಡಿಕೆಯನ್ನು ಯೇಸು ತನ್ನ ‘ಕಷ್ಟಾನುಭವದಲ್ಲಿ ಪಾಲ್ಗೊಂಡ’ ನಿಷ್ಠಾವಂತ ಅಭಿಷಿಕ್ತ ಹಿಂಬಾಲಕರೊಂದಿಗೆ ಮಾಡಿದನು. (ಫಿಲಿ. 3:10) ಇಂದಿರುವ ನಂಬಿಗಸ್ತ ಅಭಿಷಿಕ್ತರು ಕೂಡ ಈ ಒಡಂಬಡಿಕೆಯ ಭಾಗ ಆಗಿದ್ದಾರೆ. ಅವರು ಕ್ರಿಸ್ತನೊಂದಿಗೆ ಸದಾಕಾಲ ಸ್ವರ್ಗದಲ್ಲಿ ರಾಜರಾಗಿ ಆಳುವರು. (ಪ್ರಕ. 22:5) ಕರ್ತನ ಸಂಧ್ಯಾ ಭೋಜನದಲ್ಲಿ ಕುರುಹುಗಳನ್ನು ಸೇವಿಸಲು ಅವರು ಅರ್ಹರು.
16. ರೋಮನ್ನರಿಗೆ 8:15-17ರ ಅರ್ಥವನ್ನು ಚುಟುಕಾಗಿ ವಿವರಿಸಿ.
16 ಅಭಿಷಿಕ್ತರಿಗೆ ತಾವು ದೇವರ ಮಕ್ಕಳಾಗಿದ್ದೇವೆ ಹಾಗೂ ಕುರುಹುಗಳನ್ನು ಸೇವಿಸಬಹುದು ಎಂಬ ಸಂಪೂರ್ಣ ಖಾತ್ರಿ ಇರುತ್ತದೆ. (ರೋಮನ್ನರಿಗೆ 8:15-17 ಓದಿ.) ಅವರು “ಅಪ್ಪಾ, ತಂದೆಯೇ!” ಎಂದು ಕರೆಯುತ್ತಾರೆ ಎಂದನು ಅಪೊಸ್ತಲ ಪೌಲನು. “ಅಪ್ಪಾ” ಎಂಬ ಪದದಲ್ಲಿ ಪ್ರೀತಿ ಹಾಗೂ ಗೌರವ ತೋರಿಬರುತ್ತದೆ. ಈ ಪದವು ಅಭಿಷಿಕ್ತರನ್ನು ‘ಪವಿತ್ರಾತ್ಮವು ಪುತ್ರರಂತೆ ದತ್ತುತೆಗೆದುಕೊಂಡಾಗ’ ಅವರಿಗೆ ಯೆಹೋವನೊಂದಿಗೆ ಉಂಟಾಗುವ ವಿಶೇಷ ಸಂಬಂಧವನ್ನು ತೋರಿಸುತ್ತದೆ. ದೇವರಾತ್ಮವೇ ಅವರೊಂದಿಗೆ “ಸಾಕ್ಷಿಹೇಳು”ವುದರಿಂದ ತಾವು ದೇವರಿಂದ ಅಭಿಷಿಕ್ತರು ಎನ್ನುವುದರಲ್ಲಿ ಅವರಿಗೆ ಕಿಂಚಿತ್ತೂ ಸಂಶಯ ಇರುವುದಿಲ್ಲ. ಅವರಿಗೆ ಭೂಮಿಯಲ್ಲಿ ಜೀವಿಸಲು ಇಷ್ಟವಿಲ್ಲ ಎಂದಲ್ಲ. ಸಾಯುವ ವರೆಗೂ ನಂಬಿಗಸ್ತರಾಗಿದ್ದರೆ ಅವರು ಯೇಸುವಿನೊಂದಿಗೆ ಸ್ವರ್ಗದಲ್ಲಿ ರಾಜರಾಗಿ ಆಳುವರು ಎಂದವರಿಗೆ ಗೊತ್ತು. ಅಷ್ಟುಮಾತ್ರವಲ್ಲ “ಪವಿತ್ರನಾಗಿರುವಾತನಿಂದ [ಯೆಹೋವನಿಂದ] ಅಭಿಷೇಕ” ಹೊಂದಿದ್ದಾರೆ ಎಂದವರಿಗೆ ಚೆನ್ನಾಗಿ ಗೊತ್ತು. ಈ 1,44,000 ಮಂದಿಯಲ್ಲಿ ಕೆಲವೇ ಅಭಿಷಿಕ್ತರು ಇಂದು ಭೂಮಿಯಲ್ಲಿ ಉಳಿದಿದ್ದಾರೆ. (1 ಯೋಹಾ. 2:20; ಪ್ರಕ. 14:1) ಅವರಿಗೆ ಯೆಹೋವನೊಟ್ಟಿಗೆ ಎಷ್ಟು ಆಪ್ತತೆ ಇದೆಯೆಂದರೆ ಅವರು ಆತನನ್ನು “ಅಪ್ಪಾ, ತಂದೆಯೇ!” ಎಂದು ಕರೆಯುತ್ತಾರೆ.
ನಿಮ್ಮ ಬೈಬಲಾಧರಿತ ನಿರೀಕ್ಷೆಯನ್ನು ಅಮೂಲ್ಯವೆಂದೆಣಿಸಿ
17. (ಎ) ಅಭಿಷಿಕ್ತರಿಗೆ ಯಾವ ನಿರೀಕ್ಷೆ ಇದೆ? (ಬಿ) ತಾವು ಅಭಿಷಿಕ್ತರೆಂದು ಅವರಿಗೆ ಹೇಗೆ ಗೊತ್ತಾಗುತ್ತದೆ?
17 ನೀವು ಅಭಿಷಿಕ್ತ ಕ್ರೈಸ್ತರಾಗಿರುವಲ್ಲಿ ಸ್ವರ್ಗಕ್ಕೆ ಹೋಗುವ ನಿರೀಕ್ಷೆಯ ಬಗ್ಗೆ ಆಗಾಗ ನಿಮ್ಮ ವೈಯಕ್ತಿಕ ಪ್ರಾರ್ಥನೆಗಳಲ್ಲಿ ಹೇಳುತ್ತಾ ಇರುತ್ತೀರಿ. ಬೈಬಲ್ ನಿಮಗೆ ವಿಶೇಷ ಅರ್ಥ ಹೊಂದಿರುತ್ತದೆ. ಉದಾಹರಣೆಗೆ, ಅದು ಸ್ವರ್ಗದಲ್ಲಿ ಯೇಸು ಹಾಗೂ ಆತನ “ಮದುಮಗಳ” ವಿವಾಹದ ಬಗ್ಗೆ ತಿಳಿಸುವಾಗ ನಿಮ್ಮ ಬಗ್ಗೆಯೇ ಮಾತಾಡುತ್ತಿದೆಯೆಂದು ನಿಮಗೆ ಗೊತ್ತಿದೆ. ಆದ್ದರಿಂದ ಆ ವಿವಾಹಕ್ಕಾಗಿ ಕಾಯುತ್ತಾ ಇದ್ದೀರಿ. (ಯೋಹಾ. 3:27-29; 2 ಕೊರಿಂ. 11:2; ಪ್ರಕ. 21:2, 9-14) ಅಥವಾ ದೇವರಿಗೆ ಅಭಿಷಿಕ್ತರ ಮೇಲಿರುವ ಪ್ರೀತಿಯ ಬಗ್ಗೆ ಬೈಬಲ್ ವಿವರಿಸುವಾಗ ಆತನು ನಿಮ್ಮೊಂದಿಗೇ ಮಾತಾಡುತ್ತಿದ್ದಾನೆಂದು ನಿಮಗೆ ತಿಳಿದಿದೆ. ಅಷ್ಟುಮಾತ್ರವಲ್ಲ ದೇವರ ವಾಕ್ಯದಲ್ಲಿ ನಿರ್ದಿಷ್ಟವಾಗಿ ಅಭಿಷಿಕ್ತರಿಗಿರುವ ಸೂಚನೆಗಳನ್ನು ಓದುವಾಗ ಅವನ್ನು ಪಾಲಿಸಲು ಪವಿತ್ರಾತ್ಮವು ನಿಮ್ಮನ್ನು ಪ್ರೇರಿಸುತ್ತದೆ. ನಿಮಗೆ ಸ್ವರ್ಗಕ್ಕೆ ಹೋಗುವ ನಿರೀಕ್ಷೆ ಇದೆ ಎಂದು ಪವಿತ್ರಾತ್ಮ ನಿಮಗೆ “ಸಾಕ್ಷಿಹೇಳು”ತ್ತದೆ.
18. (ಎ) ‘ಬೇರೆ ಕುರಿಗಳಿಗೆ’ ಯಾವ ನಿರೀಕ್ಷೆ ಇದೆ? (ಬಿ) ಈ ನಿರೀಕ್ಷೆ ಬಗ್ಗೆ ನಿಮಗೆ ಹೇಗನಿಸುತ್ತದೆ?
18 “ಬೇರೆ ಕುರಿ”ಗಳ “ಮಹಾ ಸಮೂಹ”ದಲ್ಲಿ ನೀವೂ ಒಬ್ಬರಾಗಿದ್ದರೆ ಪರದೈಸ್ ಭೂಮಿಯಲ್ಲಿ ಸದಾಕಾಲ ಜೀವಿಸುವ ಅವಕಾಶವನ್ನು ದೇವರು ನಿಮಗೆ ಕೊಟ್ಟಿದ್ದಾನೆ. (ಪ್ರಕ. 7:9; ಯೋಹಾ. 10:16) ನಿಮ್ಮ ಭವಿಷ್ಯದ ಬಗ್ಗೆ ನಿಮಗೆ ಹೇಗನಿಸುತ್ತದೆ? ಭವಿಷ್ಯದಲ್ಲಿ ಪರದೈಸ್ ಹೇಗಿರುವುದು ಎಂದು ಬೈಬಲ್‍ನಲ್ಲಿರುವ ವಿಷಯಗಳ ಬಗ್ಗೆ ಧ್ಯಾನಿಸುವಾಗ ನಿಮಗೆ ತುಂಬ ಖುಷಿಯಾಗುತ್ತದೆ. ಶಾಂತಿತುಂಬಿದ ಲೋಕದಲ್ಲಿ ಬಂಧುಮಿತ್ರರೊಂದಿಗೆ ಜೀವಿಸಲು ಎದುರುನೋಡುತ್ತಾ ಇದ್ದೀರಿ. ಹಸಿವು, ಬಡತನ, ನೋವು, ಕಾಯಿಲೆ ಹಾಗೂ ಮರಣದಿಂದ ಮುಕ್ತಿ ಪಡೆಯಲು ಕಾಯುತ್ತಾ ಇದ್ದೀರಿ. (ಕೀರ್ತ. 37:10, 11, 29; 67:6; 72:7, 16; ಯೆಶಾ. 33:24) ನಿಮ್ಮ ಪ್ರಿಯ ಜನರು ಪುನರುತ್ಥಾನವಾಗಿ ಬರುವುದನ್ನು ನೋಡಲು ಹಂಬಲಿಸುತ್ತಾ ಇದ್ದೀರಿ. (ಯೋಹಾ. 5:28, 29) ಈ ಸುಂದರ ನಿರೀಕ್ಷೆ ಕೊಟ್ಟದಕ್ಕೆ ನೀವು ನಿಜವಾಗಿಯೂ ಯೆಹೋವನಿಗೆ ತುಂಬ ಆಭಾರಿಗಳಲ್ಲವೇ? ನೀವು ಕುರುಹುಗಳನ್ನು ಸೇವಿಸುವುದಿಲ್ಲವಾದರೂ ಕ್ರಿಸ್ತನ ಮರಣದ ಸ್ಮರಣೆಗೆ ಹಾಜರಾಗುತ್ತೀರಿ ಏಕೆಂದರೆ ಯೇಸುವಿನ ವಿಮೋಚನಾ ಮೌಲ್ಯಕ್ಕಾಗಿ ನಿಮ್ಮಲ್ಲಿ ಕೃತಜ್ಞತೆಯಿದೆ.
ನೀವು ಹಾಜರಾಗುವಿರಾ?
19, 20. (ಎ) ಸದಾಕಾಲ ಜೀವಿಸಲು ನಿಮಗೆ ಹೇಗೆ ಸಾಧ್ಯ? (ಬಿ) ಕ್ರಿಸ್ತನ ಮರಣದ ಸ್ಮರಣೆಗೆ ನೀವು ಯಾಕೆ ಹಾಜರಾಗುವಿರಿ?
19 ಯೆಹೋವ, ಯೇಸು ಹಾಗೂ ವಿಮೋಚನಾ ಮೌಲ್ಯದಲ್ಲಿ ನೀವು ನಂಬಿಕೆಯಿಟ್ಟರೆ ಮಾತ್ರ ಸ್ವರ್ಗದಲ್ಲಿ ಅಥವಾ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವಿರಿ. ಏಪ್ರಿಲ್ 3, 2015ರ ಶುಕ್ರವಾರ ಸೂರ್ಯಾಸ್ತದ ನಂತರ ಲೋಕದಲ್ಲೆಲ್ಲ ಲಕ್ಷಾಂತರ ಜನರು ರಾಜ್ಯ ಸಭಾಗೃಹಗಳಲ್ಲಿ ಅಥವಾ ಇನ್ನಿತರ ಸ್ಥಳಗಳಲ್ಲಿ ಕ್ರಿಸ್ತನ ಮರಣದ ಸ್ಮರಣೆಗೆ ಹಾಜರಾಗುವರು. ನೀವು ಸಹ ಹಾಜರಾಗುವಾಗ ನಿಮಗಿರುವ ನಿರೀಕ್ಷೆ ಮತ್ತು ಯೇಸುವಿನ ಮರಣದ ಮಹತ್ವದ ಬಗ್ಗೆ ಧ್ಯಾನಿಸಿ.
20 ಕ್ರಿಸ್ತನ ಮರಣದ ಸ್ಮರಣೆಗೆ ನಾವು ಸರಿಯಾದ ಮನೋಭಾವದಿಂದ ಸಿದ್ಧರಾಗುವಾಗ ಯೇಸುವಿನ ವಿಮೋಚನಾ ಮೌಲ್ಯದ ಯಜ್ಞಕ್ಕಾಗಿ ನಮ್ಮ ಕೃತಜ್ಞತೆ ಹೆಚ್ಚಾಗುವುದು. ಸ್ಮರಣೆಯ ಭಾಷಣಕ್ಕೆ ನಿಕಟ ಗಮನ ಕೊಟ್ಟರೆ ಯೆಹೋವನ ಪ್ರೀತಿ ಹಾಗೂ ಉದ್ದೇಶದ ಕುರಿತು ಇತರರಿಗೆ ಹೇಳಲೇಬೇಕೆಂದು ನಿಮಗೆ ಅನಿಸುವುದು. ಹೀಗೆ ಅವರಿಗೂ ಪ್ರೀತಿ ತೋರಿಸಬಹುದು. (ಮತ್ತಾ. 22:34-40) ಆದ್ದರಿಂದ ಕ್ರಿಸ್ತನ ಮರಣದ ಸ್ಮರಣೆಗೆ ತಪ್ಪದೆ ಹಾಜರಾಗಿ.
^ ಪ್ಯಾರ. 9 ಬೈಬಲಿನ ಅಧ್ಯಯನ ಕೈಪಿಡಿ, ವಿಭಾಗ 16 ಓದಿ.