ಕಾವಲಿನಬುರುಜು - ಅಧ್ಯಯನ ಆವೃತ್ತಿ ಏಪ್ರಿಲ್ 2014

ಮೋಶೆಯಲ್ಲಿದ್ದ ಅದೇ ನಂಬಿಕೆಯನ್ನು ನಾವು ಹೇಗೆ ತೋರಿಸಬಹುದು? ಕುಟುಂಬದ ಶಿರಸ್ಸು ತನ್ನ ಕುಟುಂಬವನ್ನು ಹೇಗೆ ನೋಡಿಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ? ಆ ಜವಾಬ್ದಾರಿಗಳನ್ನು ಪೂರೈಸಲು ಆತನು ಹೇಗೆ ಸಹಾಯ ಮಾಡುತ್ತಾನೆ? ಈ ಪ್ರಶ್ನೆಗಳಿಗೆ ಉತ್ತರ ಈ ಸಂಚಿಕೆಯಲ್ಲಿದೆ.

ಮೋಶೆಯಲ್ಲಿದ್ದಂಥ ನಂಬಿಕೆ ನಿಮ್ಮಲ್ಲೂ ಇರಲಿ

ಶಾರೀರಿಕ ಬಯಕೆಗಳನ್ನು ನಿರಾಕರಿಸಲು ಮತ್ತು ತನಗಿರುವ ಸೇವಾ ಸುಯೋಗಗಳನ್ನು ಮಾನ್ಯಮಾಡಲು ಮೋಶೆಯನ್ನು ನಂಬಿಕೆಯು ಹೇಗೆ ಪ್ರಚೋದಿಸಿತು? ಮೋಶೆ ಏಕೆ “ತೀವ್ರಾಸಕ್ತಿಯಿಂದ ಬಹುಮಾನದ ನೀಡುವಿಕೆಯ ಕಡೆಗೆ ದೃಷ್ಟಿನೆಟ್ಟವನಾಗಿದ್ದನು”?

“ಅದೃಶ್ಯನಾಗಿರುವಾತನನ್ನು” ನೀವು ನೋಡುತ್ತಿದ್ದೀರೋ?

ದೇವರಲ್ಲಿ ನಂಬಿಕೆಯು ಮೋಶೆಗೆ ಮನುಷ್ಯ ಭಯವನ್ನು ಮೆಟ್ಟಿನಿಲ್ಲಲು ಮತ್ತು ದೇವರು ನುಡಿದ ಮಾತುಗಳಲ್ಲಿ ನಂಬಿಕೆಯನ್ನಿಡಲು ಹೇಗೆ ಸಹಾಯಮಾಡಿತು? ನಿಮಗೆ ಸಹಾಯ ಮಾಡಲು ತವಕಿಸುವ ಒಬ್ಬ ನಿಜ ವ್ಯಕ್ತಿಯಾಗಿ ಯೆಹೋವನನ್ನು ನೋಡಲು ಸಾಧ್ಯವಾಗುವಷ್ಟು ನಿಮ್ಮ ನಂಬಿಕೆಯನ್ನು ಬಲಪಡಿಸಿರಿ.

ಜೀವನ ಕಥೆ

ಪೂರ್ಣಸಮಯದ ಸೇವೆ ತೆರೆದಿಟ್ಟ ಸೇವಾಸುಯೋಗಗಳು

ಪೂರ್ಣಸಮಯದ ಸೇವೆಯಲ್ಲಿ ಕಳೆದಿರುವ 65 ವರ್ಷಗಳ ಕುರಿತು ರಾಬರ್ಟ್ ವಾಲನ್‍ರವರು ತುಂಬ ಸಂತೃಪ್ತಿಯ ಅರ್ಥಪೂರ್ಣ ಜೀವನ ನನ್ನದಾಗಿದೆ ಎಂದು ಹೇಳಿದ್ದೇಕೆ ಎಂದು ತಿಳಿಯಿರಿ.

ಯಾರೂ ಇಬ್ಬರು ಯಜಮಾನರ ಸೇವೆಮಾಡಲಾರರು

ಕೆಲವರು ಹೆಚ್ಚು ಹಣ ಗಳಿಸಲು ವಿದೇಶಗಳಿಗೆ ಹೋಗಿದ್ದಾರೆ. ಹೀಗೆ ಕುಟುಂಬದಿಂದ ದೂರ ಇರುವುದರಿಂದ ವಿವಾಹ ಬಂಧ, ಮಕ್ಕಳೊಂದಿಗೆ ಮತ್ತು ದೇವರೊಂದಿಗಿನ ಸಂಬಂಧ ಹೇಗೆ ಬಾಧಿಸಲ್ಪಡುತ್ತದೆ?

ಧೈರ್ಯವಾಗಿರಿ—ಯೆಹೋವನು ನಿಮ್ಮ ಸಹಾಯಕನು!

ದುಡಿಯಲಿಕ್ಕಾಗಿ ಹೆಂಡತಿ ಮಕ್ಕಳನ್ನು ಬಿಟ್ಟು ವಿದೇಶಕ್ಕೆ ಹೋಗಿದ್ದ ತಂದೆಯೊಬ್ಬನು ದೇವರಲ್ಲಿ ನಂಬಿಕೆಯಿಟ್ಟು ತನ್ನ ಕುಟುಂಬವನ್ನು ಕಟ್ಟಲು ಯಾವ ಹೆಜ್ಜೆಗಳನ್ನು ತಕ್ಕೊಂಡನೆಂದು ತಿಳಿಯಿರಿ. ಹಣಕಾಸಿನ ತಾಪತ್ರಯದ ಮಧ್ಯೆಯೂ ಕುಟುಂಬ ನೋಡಿಕೊಳ್ಳಲು ಯೆಹೋವನು ಅವನಿಗೆ ಹೇಗೆ ಸಹಾಯ ಮಾಡಿದನೆಂದು ಗಮನಿಸಿ.

ಯೆಹೋವನು ಕಾಳಜಿಯಿಂದ ನಿಮ್ಮನ್ನು ಗಮನಿಸುತ್ತಿರುವುದನ್ನು ಗಣ್ಯಮಾಡಿ

ಯೆಹೋವನು ಪ್ರೀತಿಭರಿತ ಕಾಳಜಿ ತೋರಿಸುವ 5 ವಿಧಗಳನ್ನು ತಿಳಿಯಿರಿ. ಆತನು ನಮ್ಮಲ್ಲಿ ಒಬ್ಬೊಬ್ಬರನ್ನೂ ಗಮನಿಸುವುದರಿಂದ ಪ್ರಯೋಜನವೇನೆಂದು ತಿಳಿದುಕೊಳ್ಳಿ.

ನಿಮಗೆ ತಿಳಿದಿತ್ತೋ?

ಬೈಬಲ್‌ ಕಾಲದಲ್ಲಿ ಒಬ್ಬ ವ್ಯಕ್ತಿ ತನ್ನ ಬಟ್ಟೆಗಳನ್ನು ಹರಿದುಕೊಳ್ಳುವುದು ಏನನ್ನು ಸೂಚಿಸುತ್ತಿತ್ತು?