ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ವಿಕಾಸವೇ?

ಜೇನುಗೂಡು

ಜೇನುಗೂಡು

ಜೇನುನೊಣಗಳ (ಎಪಿಸ್‌ ಮೆಲ್ಲಿಫರ) ಗೂಡು ಒಂದು ಅದ್ಭುತ ವಿನ್ಯಾಸ. ಈ ಗೂಡನ್ನು ನೊಣಗಳು ಮೇಣದಂಥ ಒಂದು ದ್ರವದಿಂದ ಕಟ್ಟುತ್ತವೆ. ಈ ದ್ರವ, ನೊಣದ ಹೊಟ್ಟೆಯ ಕೆಳಭಾಗದ ಗ್ರಂಥಿಯಿಂದ ಸ್ರವಿಸಲ್ಪಡುತ್ತದೆ. ಇಷ್ಟಕ್ಕೂ ಈ ಜೇನುಗೂಡಿನಲ್ಲಿ ಅಂಥ ಅದ್ಭುತ ಏನಿದೆ?

ಪರಿಗಣಿಸಿ: ಏನನ್ನಾದರೂ ನಿರ್ಮಿಸುವಾಗ ತ್ರಿಕೋನ, ಚೌಕ ಅಥವಾ ಬೇರೆ ಯಾವುದೇ ಆಕಾರಗಳ ಬದಲಿಗೆ ಜೇನುಗೂಡಿನಲ್ಲಿರುವಂತೆ ಷಡ್ಭುಜ ಆಕೃತಿಯಲ್ಲಿ (ಆರು ಕೋನಗಳ ಆಕೃತಿ) ನಿರ್ಮಿಸಿದರೆ ತುಂಬ ಪ್ರಯೋಜನವಿದೆ. ಇದರಿಂದ ನಿರ್ಮಾಣದಲ್ಲಿ ಕಡಿಮೆ ಸಾಮಗ್ರಿಗಳು ಬಳಕೆಯಾಗುತ್ತವೆ ಮತ್ತು ಹೆಚ್ಚು ಜಾಗ ಸಿಗುತ್ತದೆ ಎಂಬ ಅಭಿಪ್ರಾಯ ಗಣಿತಶಾಸ್ತ್ರಜ್ಞರಿಗೆ ಎಷ್ಟೋ ಶತಮಾನಗಳ ಮುಂಚಿನಿಂದ ಇತ್ತು. ಆದರೆ ಅದು ಹೇಗೆ ಸಾಧ್ಯ ಎಂದು ವಿವರಿಸಲು ಆಗ ಅವರಿಂದ ಆಗಲಿಲ್ಲ. ಆದರೆ 1999ರಲ್ಲಿ ಪ್ರೊಫೆಸರ್‌ ಥೋಮಸ್‌ ಸಿ. ಹಾಲ್ಸ್ರು ಷಡ್ಭುಜಾಕೃತಿಯ ರಚನೆಯಿಂದ ಹೆಚ್ಚಿನ ಪ್ರಯೋಜನವಿದೆ ಎನ್ನಲು ಗಣಿತಶಾಸ್ತ್ರವನ್ನು ಉಪಯೋಗಿಸುತ್ತಾ ಆಧಾರವನ್ನು ತಿಳಿಸಿದರು. ಷಡ್ಭುಜಾಕೃತಿಯಲ್ಲಿ ಆರು ಕೋನಗಳಿರುವುದರಿಂದ ಹೆಚ್ಚು ಆಧಾರ ಕಂಭಗಳನ್ನು ನಿರ್ಮಿಸಬೇಕಾಗಿಲ್ಲ, ಮಾತ್ರವಲ್ಲ ಇರೋ ಜಾಗವನ್ನು ಪೂರ್ತಿ ಬಳಸಿಕೊಳ್ಳಲು ಆಗುತ್ತದೆ ಎಂದು ತೋರಿಸಿಕೊಟ್ಟರು. ಅವರ ಈ ವಿವರಣೆಯನ್ನು “ಜೇನುಗೂಡಿನ ಸಿದ್ಧಾಂತ” ಎಂದು ಕರೆಯಲಾಗುತ್ತದೆ.

ಜೇನುಗೂಡಿನಲ್ಲಿ ಷಡ್ಭುಜಾಕೃತಿಯ ಕೋಣೆಗಳು ಅಥವಾ ರಂಧ್ರಗಳು ಇರುವುದರಿಂದ ಜೇನುನೊಣಗಳಿಗೆ ಹೆಚ್ಚು ಸ್ಥಳ ಸಿಗುತ್ತದೆ. ಇದರಿಂದ ಹೆಚ್ಚು ಜೇನನ್ನು ಶೇಖರಿಸಿ ಇಡಲು ಸಾಧ್ಯವಾಗುತ್ತದೆ. ಮಾತ್ರವಲ್ಲ, ಜೇನುಗೂಡಿನ ಈ ರಚನೆಯಿಂದಾಗಿ ಅದನ್ನು ಕಟ್ಟಲು ಉಪಯೋಗಿಸುವ ಮೇಣದಂಥ ದ್ರವ ಕಡಿಮೆ ಬಳಕೆಯಾಗುತ್ತದೆ. ಜೊತೆಗೆ, ಹಗುರವಾದ ಆದರೆ ಸುದೃಢವಾದ ಗೂಡನ್ನು ಕಟ್ಟಲು ಸಾಧ್ಯವಾಗುತ್ತದೆ. ಆದ್ದರಿಂದ ಜೇನುಗೂಡಿನ ರಚನೆಯನ್ನು “ಅತ್ಯುತ್ತಮ ವಿನ್ಯಾಸ” ಎಂದು ಕರೆಯುತ್ತಾರೆ.

ಏನನ್ನಾದರೂ ನಿರ್ಮಿಸುವಾಗ ಹೆಚ್ಚು ಸ್ಥಳ ವ್ಯರ್ಥವಾಗದಿರಲು ಮತ್ತು ಅವು ಸುದೃಢವಾಗಿರಲು ವಿಜ್ಞಾನಿಗಳು ಅವುಗಳಲ್ಲಿ ಜೇನುಗೂಡಿನ ರಚನಾ ವಿಧಾನವನ್ನು ಉಪಯೋಗಿಸುತ್ತಿದ್ದಾರೆ. ವಿಮಾನ ನಿರ್ಮಾಣ ಮಾಡುವವರು ಜೇನುಗೂಡಿನ ರಚನಾ ವಿಧಾನವನ್ನು ಅನುಸರಿಸುವ ಮೂಲಕ ಹಗುರ ಮತ್ತು ಸುದೃಢವಾದ ವಿಮಾನವನ್ನು ನಿರ್ಮಿಸಲು ಸಾಧ್ಯವಾಗಿದೆ. ಇದರಿಂದ ವಿಮಾನ ಚಲಾಯಿಸುವಾಗ ಆಗುವ ಇಂಧನದ ಖರ್ಚು ಕಡಿಮೆಯಾಗಿದೆ.

ನೀವೇನು ನೆನಸುತ್ತೀರಿ? ಜೇನುಗೂಡಿನ ಈ ಅದ್ಭುತ ರಚನೆ ವಿಕಾಸವಾಗಿ ಬಂತಾ? ಅಥವಾ ಸೃಷ್ಟಿಕರ್ತ ವಿನ್ಯಾಸಿಸಿದನಾ? ▪ (g15-E 01)