ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಸರ್ಕಾರದ ನಾಯಕ ಯಾರು?

ದೇವರ ಸರ್ಕಾರದ ನಾಯಕ ಯಾರು?

ದೇವರ ಸರ್ಕಾರದ ನಾಯಕ ಯಾರು ಅಂತ ಕಂಡುಹಿಡಿಯಕ್ಕೆ ದೇವರು ಬೈಬಲ್‌ನಲ್ಲಿ ಕೆಲವು ವಿವರಗಳನ್ನು ಬರೆಸಿದ್ದಾನೆ. ಆ ವಿವರಗಳು ಕೆಳಗಿವೆ:

  • ಅವನನ್ನ ಸ್ವತಃ ದೇವರೇ ಆರಿಸುತ್ತಾನೆ. ‘ನಾನೇ ಒಬ್ಬ ಅರಸನನ್ನು ನೇಮಿಸಿದ್ದೇನೆ. ನಾನು ಎಲ್ಲಾ ದೇಶಗಳನ್ನು ನಿನಗೆ ಅಧೀನ ಮಾಡುವೆನು; ಭೂಮಿಯ ಕಟ್ಟಕಡೆಯ ವರೆಗೂ ಇರುವ ಎಲ್ಲಾ ದೇಶಗಳನ್ನೂ ನಿನಗೆ ಸ್ವಾಸ್ತ್ಯವಾಗಿ ಕೊಡುವೆನು.’ aಕೀರ್ತನೆ 2:5, 8.

  • ಅವನು ರಾಜ ದಾವೀದನ ವಂಶದಲ್ಲಿ ಬರುತ್ತಾನೆ. “ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು . . . ಅವನ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವದು, ದಾವೀದನ ರಾಜ್ಯದಲ್ಲಿ ನಿತ್ಯ ಸಮಾಧಾನವಿರುವದು, ಆ ರಾಜ್ಯವು ಇಂದಿನಿಂದ ಯಾವಾಗಲೂ ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವದು.”—ಯೆಶಾಯ 9:6, 7.

  • ಅವನು ಬೇತ್ಲೆಹೇಮ್‌ನಲ್ಲಿ ಹುಟ್ಟುತ್ತಾನೆ. “ಬೇತ್ಲೆಹೇಮೇ . . . ಆಳತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು . . . ಆತನು ಭೂಮಿಯ ಕಟ್ಟಕಡೆಯ ವರೆಗೂ ಪ್ರಬಲನಾಗಿರುವನು.”—ಮೀಕ 5:2, 4.

  • ಅವನನ್ನ ಜನರು ತಿರಸ್ಕರಿಸಿ ಕೊಲ್ಲುತ್ತಾರೆ. “[ಅವನು] ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು. ನಾವು ಅವನನ್ನು ಲಕ್ಷ್ಯಕ್ಕೇ ತರಲಿಲ್ಲ . . . ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು.”—ಯೆಶಾಯ 53:3, 5.

  • ಅವನು ಸತ್ತರೂ ದೇವರು ಪುನಃ ಎಬ್ಬಿಸಿ ಉನ್ನತ ಸ್ಥಾನ ಕೊಡುತ್ತಾನೆ. “ನೀನು ನನ್ನನ್ನು ಸಮಾಧಿಯಲ್ಲಿ ಬಿಟ್ಟುಬಿಡುವುದಿಲ್ಲ; ನಿನ್ನ ಪರಿಶುದ್ಧನನ್ನು ಕೊಳೆಯುವ ಅವಸ್ಥೆಗೆ ತರುವುದಿಲ್ಲ . . . ನಿನ್ನ ಬಲಗೈಯಲ್ಲಿ ಶಾಶ್ವತಭಾಗ್ಯವಿದೆ.”—ಕೀರ್ತನೆ 16:10, 11, ಪವಿತ್ರ ಬೈಬಲ್‌.

ಯೇಸು ಕ್ರಿಸ್ತ ಒಬ್ಬ ಅರ್ಹ ನಾಯಕ

ದೇವರ ಸರ್ಕಾರದ ನಾಯಕನ ಬಗ್ಗೆ ಕೊಟ್ಟ ವಿವರಗಳೆಲ್ಲಾ ಒಬ್ಬ ವ್ಯಕ್ತಿಗೆ ಮಾತ್ರ ಸರಿಹೊಂದುತ್ತೆ. ಅವನು ಯೇಸು ಕ್ರಿಸ್ತ. ಒಬ್ಬ ದೇವದೂತ ಸಹ ಯೇಸು ಬಗ್ಗೆ “ದೇವರು ಅವನ ತಂದೆಯಾದ ದಾವೀದನ ಸಿಂಹಾಸನವನ್ನು ಅವನಿಗೆ ಕೊಡುವನು . . . ಅವನ ರಾಜ್ಯಕ್ಕೆ ಅಂತ್ಯವೇ ಇರದು” ಅಂತ ಹೇಳಿದ.—ಲೂಕ 1:31-33.

ಯೇಸು ಭೂಮಿಯಲ್ಲಿದ್ದಾಗ ಯಾವತ್ತೂ ಆಳ್ವಿಕೆ ಮಾಡಲಿಲ್ಲ. ಆದರೆ ಭವಿಷ್ಯದಲ್ಲಿ ದೇವರ ಸರ್ಕಾರದ ನಾಯಕನಾಗಿ ಈ ಭೂಮಿಯನ್ನ ಆಳುತ್ತಾನೆ. ಯೇಸುಗೆ ಈ ಅರ್ಹತೆ ಇದೆ ಅಂತ ಹೇಗೆ ಹೇಳಬಹುದು? ಭೂಮಿಯಲ್ಲಿದ್ದಾಗ ಅವನು ಏನೇನು ಮಾಡಿದ ಅಂತ ಗಮನಿಸಿ.

  • ಯೇಸು ಜನರಿಗೆ ಕಾಳಜಿ ತೋರಿಸಿದ. ಯೇಸು ಭೇದ ಭಾವ ಮಾಡಲಿಲ್ಲ. ಗಂಡಸರಿರಲಿ ಹೆಂಗಸರಿರಲಿ, ಚಿಕ್ಕವರಿರಲಿ ಡೊಡ್ಡವರಿರಲಿ, ಜನರ ಹಿನ್ನಲೆ ಅಂತಸ್ತು ಏನೇ ಇರಲಿ ಎಲ್ಲರಿಗೂ ಸಹಾಯ ಮಾಡಿದ. (ಮತ್ತಾಯ 9:36; ಮಾರ್ಕ 10:16) ಒಬ್ಬ ಕುಷ್ಠರೋಗಿ ‘ನಿನಗೆ ಮನಸ್ಸಿದ್ದರೆ ನನ್ನನ್ನು ಗುಣಪಡಿಸು’ ಅಂತ ಬೇಡಿಕೊಂಡಾಗ ಯೇಸು ಅವನ ಮೇಲೆ ಕನಿಕರ ಪಟ್ಟು ಗುಣಪಡಿಸಿದ.—ಮಾರ್ಕ 1:40-42.

  • ಯೇಸು ಜನರಿಗೆ ದೇವರನ್ನು ಸಂತೋಷ ಪಡಿಸೋದು ಹೇಗೆ ಅಂತ ಹೇಳಿಕೊಟ್ಟ. ಹಣ-ಐಶ್ವರ್ಯದ ವಿಷಯದಲ್ಲಿ “ನೀವು ದೇವರನ್ನೂ ಐಶ್ವರ್ಯವನ್ನೂ ಸೇವಿಸಲಾರಿರಿ” ಅಂತ ಯೇಸು ಹೇಳಿದ. ಬೇರೆಯವರು ನಮ್ಮ ಹತ್ರ ಹೇಗೆ ನಡಕೊಳ್ಳಬೇಕೆಂದು ಇಷ್ಟ ಪಡುತ್ತೇವೋ, ನಾವು ಅವರ ಹತ್ರ ಹಾಗೇ ನಡಕೊಳ್ಳಬೇಕು ಅಂತ ತಿಳಿಸಿದ. ನಾವು ಏನು ಮಾಡ್ತೀವಿ ಅನ್ನೋದು ಮಾತ್ರ ಅಲ್ಲ ಹೇಗೆ ಯೋಚಿಸ್ತೀವಿ ಅನ್ನೋದೂ ದೇವರಿಗೆ ಮುಖ್ಯ ಅಂತ ತೋರಿಸಿಕೊಟ್ಟ. ಹಾಗಾಗಿ ದೇವರನ್ನು ಸಂತೋಷ ಪಡಿಸಬೇಕಂದ್ರೆ ನಾವು ಒಳ್ಳೇದನ್ನೇ ಯೋಚಿಸಬೇಕು. (ಮತ್ತಾಯ 5:28; 6:24; 7:12) ನಾವು ಸಂತೋಷವಾಗಿ ಇರಬೇಕಂದ್ರೆ ದೇವರ ಇಷ್ಟಗಳನ್ನ ತಿಳುಕೊಂಡು ಅದರಂತೇ ಜೀವಿಸಬೇಕು ಅಂತಾನೂ ಯೇಸು ಸಲಹೆ ಕೊಟ್ಟ.—ಲೂಕ 11:28.

  • ಯೇಸು ಜನರಿಗೆ ಪ್ರೀತಿ ತೋರಿಸಲು ಕಲಿಸಿದ. ಯೇಸುವಿನ ಮಾತುಗಳಿಗೆ ಎಷ್ಟು ಶಕ್ತಿ ಇತ್ತು ಅಂದ್ರೆ ಅದು ಕೇಳುಗರ ಮನಸ್ಸನ್ನು ಮುಟ್ಟಿತು. “ಜನರ ಗುಂಪುಗಳು ಅವನು ಬೋಧಿಸುವ ರೀತಿಯನ್ನು ಕಂಡು ಅತ್ಯಾಶ್ಚರ್ಯಪಟ್ಟವು. ಏಕೆಂದರೆ ಅವನು ಅವರ ಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಿದ್ದ ವ್ಯಕ್ತಿಯಂತೆ ಬೋಧಿಸುತ್ತಿದ್ದನು.” (ಮತ್ತಾಯ 7:28, 29) “ನಿಮ್ಮ ವೈರಿಗಳನ್ನು ಪ್ರೀತಿಸುತ್ತಾ ಇರಿ” ಅಂತ ಯೇಸು ಜನರಿಗೆ ಕಲಿಸಿದ. ಅಷ್ಟೇ ಅಲ್ಲ ಅವನು ಸಾಯುವಾಗಲೂ ತನ್ನ ಸಾವಿಗೆ ಕಾರಣರಾದವರ ಕುರಿತು ದೇವರಿಗೆ “ತಂದೆಯೇ, ಅವರನ್ನು ಕ್ಷಮಿಸು; ತಾವು ಏನು ಮಾಡುತ್ತಿದ್ದೇವೆ ಎಂಬುದು ಅವರಿಗೆ ತಿಳಿದಿಲ್ಲ” ಅಂತ ಪ್ರಾರ್ಥಿಸಿದ.—ಮತ್ತಾಯ 5:44; ಲೂಕ 23:34.

ಇದನ್ನೆಲ್ಲ ನೋಡಿದಾಗ ಪ್ರೀತಿ, ಕಾಳಜಿ ತೋರಿಸುವ ನಾಯಕನಾಗೋ ಅರ್ಹತೆ ಯೇಸುಗೆ ಇದೆ ಅಂತ ಗೊತ್ತಾಗುತ್ತೆ. ಹಾಗಾದರೆ ಅವನು ಭೂಮಿನಾ ಯಾವಾಗ ಆಳಕ್ಕೆ ಶುರುಮಾಡುತ್ತಾನೆ?

a ಈ ಮಾತುಗಳನ್ನು ಸ್ವತಃ ದೇವರೇ ಹೇಳಿದ್ದಾನೆ.