ಬೈಬಲ್ ಏನು ಹೇಳುತ್ತದೆ?
ಸತ್ತಾಗ ನಮಗೆ ಏನಾಗುತ್ತದೆ?
ಅನೇಕರ ನಂಬಿಕೆ ನಾವು ಬೇರೊಂದು ರೂಪದಲ್ಲಿ ಬದುಕುತ್ತೇವೆ ಅಂತ ಕೆಲವರು ನಂಬಿದರೆ, ಇನ್ನು ಕೆಲವರು ಸತ್ತ ಕೂಡಲೆ ಎಲ್ಲಾ ಮುಗಿದು ಹೋಯಿತು ಎಂದು ನಂಬುತ್ತಾರೆ. ನೀವೇನು ನಂಬುತ್ತೀರಿ?
ಬೈಬಲ್ ಏನನ್ನುತ್ತದೆ
“ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.” (ಪ್ರಸಂಗಿ 9:5) ನಾವು ಸತ್ತಾಗ ಇಲ್ಲದೆ ಹೋಗುತ್ತೇವೆ.
ಬೈಬಲಿನಿಂದ ಇನ್ನೂ ಏನನ್ನು ಕಲಿಯಬಹುದು?
ಮೊದಲ ಮಾನವನಾದ ಆದಾಮನು ಸತ್ತ ಮೇಲೆ ಮಣ್ಣಾಗಿ ಹೋದನು. (ಆದಿಕಾಂಡ 2:7; 3:19) ಅದೇ ರೀತಿ, ನಾವೆಲ್ಲರೂ ಸತ್ತ ಮೇಲೆ ಮಣ್ಣಾಗಿ ಹೋಗುತ್ತೇವೆ.—ಪ್ರಸಂಗಿ 3:19, 20.
ಜನರು ಸತ್ತಾಗ ಅವರು ತಮ್ಮ ಪಾಪದಿಂದ ಸಂಪೂರ್ಣ ಬಿಡುಗಡೆ ಹೊಂದುತ್ತಾರೆ. (ರೋಮನ್ನರಿಗೆ 6:7) ಅವರು ಮಾಡಿದ ಪಾಪಕ್ಕೆ ಸತ್ತ ನಂತರ ಯಾವುದೇ ಶಿಕ್ಷೆ ಸಿಗುವುದಿಲ್ಲ.
ಸತ್ತವರು ಪುನಃ ಬದುಕುತ್ತಾರಾ?
ನೀವೇನು ನೆನಸುತ್ತೀರಿ?
ಹೌದು
ಇಲ್ಲ
ಇರಬಹುದೇನೋ
ಬೈಬಲ್ ಏನನ್ನುತ್ತದೆ
‘ಪುನರುತ್ಥಾನವಾಗುವುದು.’—ಅಪೊಸ್ತಲರ ಕಾರ್ಯಗಳು 24:15.
ಬೈಬಲಿನಿಂದ ಇನ್ನೂ ಏನನ್ನು ಕಲಿಯಬಹುದು?
ಬೈಬಲಿನಲ್ಲಿ ಸತ್ತವರ ಸ್ಥಿತಿಯನ್ನು ಹೆಚ್ಚಾಗಿ ನಿದ್ದೆಗೆ ಹೋಲಿಸಲಾಗಿದೆ. (ಯೋಹಾನ 11:11-14) ಒಬ್ಬ ವ್ಯಕ್ತಿಯನ್ನು ನಾವು ನಿದ್ದೆಯಿಂದ ಎಬ್ಬಿಸುವ ಹಾಗೆ ದೇವರು ಸತ್ತವರನ್ನು ಎಬ್ಬಿಸಬಲ್ಲನು.—ಯೋಬ 14:13-15.
ಪುನರುತ್ಥಾನದ ಹಲವಾರು ಘಟನೆಗಳು ಬೈಬಲಿನಲ್ಲಿ ದಾಖಲಾಗಿವೆ. ಸತ್ತವರು ಪುನಃ ಬದುಕಿಬರುವರು ಎಂದು ನಂಬಲು ಇದು ನಮಗೆ ಬಲವಾದ ಆಧಾರ ಕೊಡುತ್ತದೆ.—1 ಅರಸುಗಳು 17:17-24; ಲೂಕ 7:11-17; ಯೋಹಾನ 11:39-44. (w16-E No.1)