ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?

1 | ಭೇದಭಾವ ಮಾಡಬೇಡಿ

1 | ಭೇದಭಾವ ಮಾಡಬೇಡಿ

ಬೈಬಲ್‌ ಕಲಿಸೋದು:

“ದೇವರು ಭೇದಭಾವ ಮಾಡಲ್ಲ . . . ಯಾವುದೇ ದೇಶ ಆಗಿರಲಿ, ಜನ ದೇವ್ರ ಮೇಲೆ ಭಯಭಕ್ತಿಯಿಂದ ಆತನಿಗೆ ಇಷ್ಟ ಆಗಿರೋದನ್ನ ಮಾಡಿದ್ರೆ ದೇವರು ಅವ್ರನ್ನ ತನ್ನ ಸೇವಕರಾಗಿ ಆರಿಸ್ಕೊಳ್ತಾನೆ.”ಅಪೊಸ್ತಲರ ಕಾರ್ಯ 10:34, 35.

ಇದರ ಅರ್ಥ ಏನು?

ಯೆಹೋವ * ದೇವರು ಯಾವತ್ತೂ ದೇಶ, ಭಾಷೆ, ಬಣ್ಣ ಮತ್ತು ಸಂಸ್ಕೃತಿ ನೋಡಿ ಭೇದಭಾವ ಮಾಡಲ್ಲ. ಅದಕ್ಕೆ ಬದಲು ನಾವು ಎಂಥ ವ್ಯಕ್ತಿಗಳಾಗಿದ್ದೀವಿ ಅಂತ ನೋಡ್ತಾನೆ. ಬೈಬಲ್‌ ಹೇಳುತ್ತೆ: “ಮನುಷ್ಯರು ಕಣ್ಣಿಗೆ ಕಾಣಿಸೋದನ್ನ ನೋಡ್ತಾರೆ. ಆದ್ರೆ ಯೆಹೋವ ಹೃದಯದಲ್ಲಿ ಇರೋದನ್ನ ನೋಡ್ತಾನೆ.”—1 ಸಮುವೇಲ 16:7.

ನೀವೇನು ಮಾಡಬಹುದು?

ನಮಗೆ ದೇವರ ತರ ಮನುಷ್ಯರ ಮನಸ್ಸನ್ನು ಓದೋಕೆ ಆಗಲ್ಲ. ದೇವರು ಹೇಗೆ ಭೇದಭಾವ ಮಾಡಲ್ವೋ ಹಾಗೆ ನಾವೂ ಇರೋಕೆ ಪ್ರಯತ್ನಿಸಬೇಕು. ಒಬ್ಬ ವ್ಯಕ್ತಿಯನ್ನ ನೋಡುವಾಗ ಅವನು ಯಾವ ಗುಂಪಿನವನು ಅಂಥ ಯೋಚಿಸೋ ಬದ್ಲು, ಅವನು ಎಂಥ ವ್ಯಕ್ತಿ ಆಗಿದ್ದಾನೆ ಅಂತ ಯೋಚಿಸಬೇಕು. ಬೇರೆ ದೇಶ, ಜಾತಿಯ ಜನ್ರ ಬಗ್ಗೆ ತಪ್ಪಾದ ಭಾವನೆ ಇದ್ರೆ, ಅದನ್ನ ಮನಸ್ಸಿಂದ ಕಿತ್ತು ಹಾಕೋಕೆ ದೇವರ ಹತ್ರ ಪ್ರಾರ್ಥಿಸಿ ಸಹಾಯ ಕೇಳಬೇಕು. (ಕೀರ್ತನೆ 139:23, 24) ಭೇದಭಾವ ಮಾಡ್ದೇ ಇರೋಕೆ ನೀವು ಪ್ರಾಮಾಣಿಕವಾಗಿ ಬಯಸೋದಾದ್ರೆ ನೀವು ಮಾಡುವ ಪ್ರಾರ್ಥನೆಗೆ ದೇವರು ಖಂಡಿತ ಉತ್ತರ ಕೊಡ್ತಾನೆ. ಸಹಾಯನೂ ಮಾಡ್ತಾನೆ.—1 ಪೇತ್ರ 3:12.

^ ಪ್ಯಾರ. 6 ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.

“ಈ ಮುಂಚೆ ನಾನು ಯಾವತ್ತೂ ಬಿಳಿ ಜನರ ಜೊತೆ ಸಮಾಧಾನವಾಗಿ ಕೂತಿದ್ದೇ ಇಲ್ಲ . . . ನಾನು ಈಗ ನಿಜ ಪ್ರೀತಿ ತೋರಿಸೋ ಒಂದು ದೊಡ್ಡ ಕುಟುಂಬದ ಭಾಗವಾಗಿದ್ದೀನಿ.”—ಟೈಟಸ್‌