ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯದ ಬೇರು—ಬೈಬಲ್‌

ಸತ್ಯದ ಬೇರು—ಬೈಬಲ್‌

ಶತಮಾನಗಳಿಂದ, ಅನೇಕ ಜನರು ಬೈಬಲಲ್ಲಿ ಇರೋ ವಿಷ್ಯ ಸತ್ಯ, ಅದನ್ನು ನಂಬಬಹುದು ಅಂತ ಹೇಳ್ತಾ ಬಂದಿದ್ದಾರೆ. ಇಂದು ಸಹ ತುಂಬಾ ಜನ ಬೈಬಲ್‌ ಹೇಳೋ ತರ ಜೀವನ ಮಾಡ್ತಿದ್ದಾರೆ. ಆದರೆ ಇನ್ನು ಕೆಲವರು, ಇದು ಬರೀ ಒಂದು ಕಟ್ಟುಕಥೆ, ಇದನ್ನೆಲ್ಲಾ ನಂಬಿಕೊಂಡು ಜೀವನ ಮಾಡಕ್ಕಾಗಲ್ಲ ಅಂತನೂ ಹೇಳ್ತಾರೆ. ನಿಮಗೇನು ಅನಿಸುತ್ತೆ? ಬೈಬಲ್‌ನಲ್ಲಿ ಇರೋದೆಲ್ಲಾ ಸತ್ಯನಾ?

ಬೈಬಲಿನಲ್ಲಿ ಇರೋ ವಿಷ್ಯ ಸತ್ಯನಾ?

ಬೈಬಲ್‌ ಸತ್ಯ ಅನ್ನೋದಕ್ಕೆ ಒಂದು ಉದಾಹರಣೆ ನೋಡೋಣ. ನಿಮಗೆ ಒಬ್ಬ ಒಳ್ಳೇ ಫ್ರೆಂಡ್‌ ಇದ್ದಾರೆ ಅಂತಿಟ್ಟುಕೊಳ್ಳಿ. ಅವರು ತುಂಬಾ ವರ್ಷಗಳಿಂದ ನಿಮಗೆ ಗೊತ್ತು. ಅವರು ಯಾವಾಗಲೂ ನಿಜಾನೇ ಹೇಳ್ತಾರೆ. ನೀವು ಅವರನ್ನ ನಂಬ್ತೀರಾ ಅಲ್ವಾ? ಬೈಬಲ್‌ ಕೂಡ ನಂಬಬಹುದಾದ ಒಬ್ಬ ಫ್ರೆಂಡ್‌ ತರ. ಆದರೆ ಅದ್ರಲ್ಲಿರೋ ವಿಷ್ಯನೂ ಸತ್ಯನಾ? ಇದಕ್ಕೆ ಕೆಲವು ಸಾಕ್ಷಿಗಳನ್ನು ನೋಡೋಣ.

ಸತ್ಯವನ್ನೇ ಬರೆದವರು

ಬೈಬಲ್‌ ಬರೆದವರು, ತುಂಬಾ ಪ್ರಾಮಾಣಿಕರಾಗಿದ್ದರು. ಎಷ್ಟರಮಟ್ಟಿಗೆ ಅಂದ್ರೆ, ಅವರು ತಮ್ಮ ತಪ್ಪುಗಳ ಮತ್ತು ಇತಿಮಿತಿಗಳ ಬಗ್ಗೆನೂ ಬರೆದಿದ್ದಾರೆ. ಉದಾಹರಣೆಗೆ, ಬೈಬಲ್‌ ಬರಹಗಾರರಲ್ಲಿ ಒಬ್ಬನಾದ ಯೋನನು ಸಹ ತನ್ನ ತಪ್ಪುಗಳ ಬಗ್ಗೆ ಬರೆದ. (ಯೋನ 1:1-3) ಅವನು ಯಾವುದೇ ಮುಚ್ಚುಮರೆಯಿಲ್ಲದೆ, ತನ್ನ ತಪ್ಪನ್ನು ದೇವರು ಹೇಗೆ ತಿದ್ದಿದನು ಅಂತ ಕೂಡ ಬರೆದಿದ್ದಾನೆ. ಇದು ಅವನಲ್ಲಿದ್ದ ಪ್ರಾಮಾಣಿಕತೆಯನ್ನು ತೋರಿಸುತ್ತೆ. (ಯೋನ 4:1, 4, 10, 11) ಬೈಬಲ್‌ ಬರೆದ ಎಲ್ಲಾ ಬರಹಗಾರರೂ ಇದೇ ರೀತಿ ಪ್ರಾಮಾಣಿಕರಾಗಿದ್ದರು. ಇದರಿಂದ ಇವರಿಗೆಲ್ಲಾ ಸತ್ಯ ಎಷ್ಟು ಪ್ರಾಮುಖ್ಯವಾಗಿತ್ತು ಅಂತ ಗೊತ್ತಾಗುತ್ತೆ.

ಬದುಕಿಗೆ ಬೇಕಾದ ಸತ್ಯ

ನಮ್ಮ ದಿನನಿತ್ಯದ ಸಮಸ್ಯೆಗಳಿಗೆ ಬೈಬಲ್‌ ಸಲಹೆ ಕೊಡುತ್ತಾ? ಖಂಡಿತ ಕೊಡುತ್ತೆ. ಉದಾಹರಣೆಗೆ, ನಾವು ಬೇರೆಯವರ ಜೊತೆ ಹೇಗಿರಬೇಕು ಅಂತ ಬೈಬಲ್‌ ಹೇಳುತ್ತೆ. ಅವುಗಳಲ್ಲಿ ಕೆಲವು, “ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅವುಗಳೆಲ್ಲವನ್ನು ನೀವು ಸಹ ಅವರಿಗೆ ಮಾಡಬೇಕು.” (ಮತ್ತಾಯ 7:12) “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು.” (ಜ್ಞಾನೋಕ್ತಿ 15:1) ಬೈಬಲಲ್ಲಿರುವ ವಿಷಯಗಳು ಇವತ್ತಿಗೂ ಸಹಾಯಕ.

ಐತಿಹಾಸಿಕ ಸತ್ಯ

ಬೈಬಲ್‌ನಲ್ಲಿ ಕೆಲವು ವ್ಯಕ್ತಿಗಳು ಮತ್ತು ಸ್ಥಳಗಳ ಬಗ್ಗೆ ಇದೆ. ಈ ದಾಖಲೆಗಳೆಲ್ಲಾ ನಿಜ ಅಂತ ಸಂಶೋಧನೆಗಳಿಂದ ಗೊತ್ತಾಗಿದೆ. ಉದಾಹರಣೆಗೆ, ಬೈಬಲ್‌ನಲ್ಲಿರುವ ಒಂದು ಚಿಕ್ಕ ಮಾಹಿತಿಯ ಬಗ್ಗೆ ನೋಡೋಣ. ಕ್ರಿ.ಪೂ. 5 ನೇ ಶತಮಾನದಲ್ಲಿ, ತೂರ್‌ (ಟೈರ್‌) ದೇಶದಿಂದ ಬಂದ ವ್ಯಾಪಾರಿಗಳು ಜೆರುಸಲೇಮಿನಲ್ಲಿ (ಇಸ್ರೇಲ್‌ನ ರಾಜಧಾನಿಯಲ್ಲಿ) ಇದ್ದರು. ಅವರು “ಮೀನು ಮುಂತಾದ ಸರಕುಗಳನ್ನು” ತೂರ್‌ನಿಂದ ತಂದು ಅಲ್ಲಿ ಮಾರುತ್ತಿದ್ದರು ಅಂತ ಬೈಬಲ್‌ನಲ್ಲಿ ಇದೆ.—ನೆಹೆಮೀಯ 13:16.

ಇದಕ್ಕೆ ಏನಾದರೂ ಪುರಾವೆ ಇದ್ಯಾ? ಇದೆ! ಸಂಶೋಧಕರು, ಇಸ್ರೇಲ್‌ನಲ್ಲಿ ತೂರಿನವರ ಸಾಮಾನುಗಳನ್ನು ಕಂಡುಹಿಡಿದಿದ್ದಾರೆ. ಇದರಿಂದ, ಇಸ್ರೇಲ್‌ ಮತ್ತು ತೂರಿನ ನಡುವೆ ವ್ಯಾಪಾರ ನಡೆಯುತ್ತಿತ್ತು ಅಂತ ಗೊತ್ತಾಗುತ್ತೆ. ಇವರು ತೂರಿನ ಹತ್ತಿರ ಇರೋ ಸಮುದ್ರದ (ಮೆಡಿಟರೇನಿಯನ್‌ ಸಮುದ್ರದ) ಮೀನುಗಳ ಮೂಳೆಗಳನ್ನು ಜೆರುಸಲೇಮಿನಲ್ಲಿ ಕಂಡುಹಿಡಿದಿದ್ದಾರೆ. ಇವರ ಪ್ರಕಾರ, ವ್ಯಾಪಾರಿಗಳು ಈ ಸಮುದ್ರದಿಂದ ಮೀನುಗಳನ್ನು ಜೆರುಸಲೇಮಿಗೆ ತಂದು ಮಾರುತ್ತಿದ್ದರು. ಇದನ್ನೆಲ್ಲಾ ನೋಡಿದ ಒಬ್ಬ ಪರಿಣಿತ ಸಂಶೋಧಕ ಏನು ಹೇಳ್ತಾರೆಂದರೆ, “ತೂರಿನ ವ್ಯಾಪಾರಿಗಳು, ಜೆರುಸಲೇಮಿಗೆ ಮೀನುಗಳನ್ನು ತಂದು ಮಾರುತ್ತಿದ್ದರು ಅಂತ ನೆಹೆಮೀಯ 13:16 ರಲ್ಲಿ ಹೇಳಿರುವ ವಿಷಯ ಖಂಡಿತ ಸತ್ಯವಾಗಿರಬೇಕು.”

ವೈಜ್ಞಾನಿಕ ಸತ್ಯ

ಬೈಬಲ್‌ ಮುಖ್ಯವಾಗಿ, ಒಂದು ಧಾರ್ಮಿಕ ಮತ್ತು ಐತಿಹಾಸಿಕ ಪುಸ್ತಕ. ಆದರೆ ಅದರಲ್ಲಿರುವ ವೈಜ್ಞಾನಿಕ ವಿಷಯಗಳೂ ನೂರಕ್ಕೆ ನೂರು ಸತ್ಯ. ಒಂದು ಉದಾಹರಣೆ ನೋಡೋಣ.

ಭೂಮಿಯನ್ನು, ‘ಯಾವ ಆಧಾರವೂ ಇಲ್ಲದೆ ತೂಗು ಹಾಕಲಾಗಿದೆ’ ಅಂತ ಬೈಬಲ್‌ನಲ್ಲಿ 3500 ವರ್ಷಗಳ ಹಿಂದೆನೇ ಬರೆಯಲಾಗಿತ್ತು. (ಯೋಬ 26:7) ಆಗಿನ ಜನರು, ಭೂಮಿ ಯಾವ ಆಧಾರವೂ ಇಲ್ಲದೆ ಇರಲು ಸಾಧ್ಯವೇ ಇಲ್ಲ, ಯಾವುದಾದರೊಂದು ವಸ್ತು ಅದನ್ನು ಹಿಡಕೊಂಡಿರಲೇ ಬೇಕು ಅಂತ ನಂಬುತ್ತಿದ್ದರು. ಅವರು, ಭೂಮಿ ನೀರಿನ ಮೇಲೆ ತೇಲುತ್ತಿದೆ ಅಥವಾ ಒಂದು ದೊಡ್ಡ ಆಮೆ ಭೂಮಿಯನ್ನು ಹೊತ್ತುಕೊಂಡಿದೆ ಅಂತೆಲ್ಲಾ ಅನ್ಕೊಂಡಿದ್ದರು. 1687 ರಲ್ಲಿ, ಐಸಾಕ್‌ ನ್ಯೂಟನ್‌ ಗುರುತ್ವಾಕರ್ಷಣಾ ಶಕ್ತಿಯ (Gravitational force) ಬಗ್ಗೆ ಅಧ್ಯಯನ ಮಾಡಿದರು. ಈ ಕಣ್ಣಿಗೆ ಕಾಣದ ಶಕ್ತಿಯ ಕಾರಣ, ಭೂಮಿ ಯಾವ ಆಧಾರವೂ ಇಲ್ಲದೆ ನಿಂತಿದೆ ಅಂತ ಅವರು ಹೇಳಿದರು. ಇದನ್ನು ಕಂಡುಹಿಡಿದದ್ದು 300 ವರ್ಷಗಳ ಹಿಂದೆಯಷ್ಟೇ! ಆದರೆ ಬೈಬಲ್‌ ಇದನ್ನು 3000 ವರ್ಷಗಳ ಹಿಂದೆನೇ ಹೇಳಿತ್ತು.

ಬೈಬಲ್‌ ಹೇಳೋ ಭವಿಷ್ಯ ಸತ್ಯ

ಭವಿಷ್ಯದ ಬಗ್ಗೆನೂ ಬೈಬಲ್‌ ಸತ್ಯ ಹೇಳುತ್ತೆ. ಅದ್ರಲ್ಲಿ ಒಂದನ್ನು ನಾವೀಗ ನೋಡೋಣ: ಬಾಬೆಲ್‌ ಸಾಮ್ರಾಜ್ಯದ ನಾಶನ.

ಭವಿಷ್ಯನುಡಿ: ಕ್ರಿ.ಪೂ 8 ನೇ ಶತಮಾನದಲ್ಲಿ, ಬೈಬಲಿನ ಒಬ್ಬ ಬರಹಗಾರನಾದ ಯೆಶಾಯ, ಬಾಬೆಲ್‌ ಸಾಮ್ರಾಜ್ಯದ ಬಗ್ಗೆ ಹೇಳಿದನು. ಆ ಸಾಮ್ರಾಜ್ಯ ಶ್ರೀಮಂತವಾಗಿತ್ತು, ಬಲಿಷ್ಟವಾಗಿತ್ತು. ಆದರೂ ಮುಂದೆ ಅದು ನಿರ್ಜನ ಪ್ರದೇಶವಾಗುತ್ತೆ ಅಂತ ಯೆಶಾಯ ಹೇಳಿದನು. (ಯೆಶಾಯ 13:17-20) ಈ ಸಾಮ್ರಾಜ್ಯವನ್ನು ಕೋರೆಷ ಎಂಬವನು ನಾಶ ಮಾಡುತ್ತಾನೆ ಅನ್ನೋ ವಿಷಯವನ್ನೂ ಹೇಳಿದನು. ಇದಿಷ್ಟೇ ಅಲ್ಲ, ಕೋರೆಷ ಬಾಬೆಲ್‌ ಸಾಮ್ರಾಜ್ಯದ ಸುತ್ತಲೂ ಇದ್ದ ನದಿಯ “ನೀರನ್ನು ಬತ್ತಿಸಿ” ಒಳಗೆ ಬರುತ್ತಾನೆ, ದಾಳಿ ಮಾಡುವ ದಿನ ಕೋಟೆಯ ಬೃಹತ್‌ ಬಾಗಿಲುಗಳು ತೆರದಿರುತ್ತೆ ಅಂತಾನೂ ಮುಂತಿಳಿಸಿದನು.—ಯೆಶಾಯ 44:27–45:1.

ನೆರವೇರಿಕೆ: ಯೆಶಾಯ ಈ ವಿಷಯವನ್ನು ಮುಂತಿಳಿಸಿ, ಸುಮಾರು 200 ವರ್ಷಗಳಾದ ಮೇಲೆ, ಪರ್ಷಿಯದ ರಾಜ ಬಾಬೆಲ್‌ ಮೇಲೆ ದಾಳಿಮಾಡಿದ. ಅವನ ಹೆಸರೇನು ಗೊತ್ತಾ? ಕೋರೆಷ! ಬಾಬೆಲ್‌ ಗೋಡೆಯ ಸುತ್ತ ಯೂಫ್ರೇಟೀಸ್‌ ನದಿ ಹರಿಯುತ್ತಿತ್ತು. ಅದರ ನೀರಿನ ಮಟ್ಟ ಜಾಸ್ತಿ ಇತ್ತು. ಹಾಗಾಗಿ ಕೋರೆಷನ ಸೈನಿಕರು, ನದಿಯ ನೀರನ್ನು ಬೇರೆ ದಿಕ್ಕಿಗೆ ತಿರುಗಿಸಿದರು. ಆಗ, ನೀರಿನ ಮಟ್ಟ ಕಡಿಮೆಯಾಗಿ ಅವರು ಆರಾಮಾಗಿ ನಡೆದು ಹೋಗುವಂತೆ ಆಯಿತು. ಅಷ್ಟೇ ಅಲ್ಲ, ಅಂದು ನದಿಯ ಕಡೆ ಇರುವ ಕೋಟೆಯ ಬಾಗಿಲನ್ನು ಸಹ ಮುಚ್ಚಿರಲಿಲ್ಲ! ಈ ಬಾಗಿಲಿಂದ ಸುಲಭವಾಗಿ ಒಳಗೆ ಬಂದ ಕೋರೆಷನ ಸೈನ್ಯ ಎದುರಾಳಿಗಳನ್ನು ಹೇಳ ಹೆಸರಿಲ್ಲದಂತೆ ಮಾಡಿತು.

ಆದರೆ ಬಾಬೆಲ್‌ ನಿರ್ಜನ ಪ್ರದೇಶ ಆಯ್ತಾ? ಕೆಲವು ಶತಮಾನಗಳವರೆಗೆ ಅಲ್ಲಿ ಎಂದಿನಂತೆ ಜನರು ವಾಸಿಸುತ್ತಿದ್ದರು. ಆದರೆ ಇಂದು ಅಲ್ಲಿ ಯಾರೂ ಇಲ್ಲ. ಬಾಬೆಲ್‌ ಪಟ್ಟಣದ ಅವಶೇಷಗಳು ಇರಾಕಿನ ಬಾಗ್ದಾದ್‌ ಸಮೀಪದಲ್ಲಿದೆ. ಬೈಬಲ್‌ ಭವಿಷ್ಯದ ಬಗ್ಗೆ ಸತ್ಯವನ್ನೇ ಹೇಳಿದೆ ಅನ್ನಲು ಇದೊಂದು ಸಾಕ್ಷಿ.