ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭವಿಷ್ಯದ ಬಗ್ಗೆ ಸತ್ಯ

ಭವಿಷ್ಯದ ಬಗ್ಗೆ ಸತ್ಯ

ಭವಿಷ್ಯದಲ್ಲಿ ಏನಾಗುತ್ತೆ ಅಂತ ನೀವು ಯಾವತ್ತಾದರೂ ಯೋಚಿಸಿದ್ದೀರಾ? ಇದಕ್ಕೆ ಉತ್ತರ ಬೈಬಲ್‌ನಲ್ಲಿದೆ.

ಯೇಸು ಭವಿಷ್ಯದ ಬಗ್ಗೆ ಮಾತಾಡುತ್ತಾ, “ದೇವರ ರಾಜ್ಯವು ಹತ್ತಿರದಲ್ಲಿದೆ” ಅಂತ ಹೇಳಿದನು. (ಲೂಕ 21:31) ಆ ಸಮಯದಲ್ಲಿ ದೊಡ್ಡ-ದೊಡ್ಡ ಯುದ್ಧಗಳು, ಭೂಕಂಪಗಳು, ಆಹಾರದ ಕೊರತೆ, ಅಂಟುರೋಗಗಳು ಜಾಸ್ತಿ ಆಗುತ್ತೆ ಅಂತ ತಿಳಿಸಿದನು. (ಲೂಕ 21:10-17) ಇಂದು, ಇದನ್ನೆಲ್ಲಾ ನಾವು ಕಣ್ಣಾರೆ ನೋಡುವಾಗ ದೇವರ ರಾಜ್ಯ ಹತ್ತಿರದಲ್ಲಿದೆ ಅಂತ ಗೊತ್ತಾಗುತ್ತೆ.

ಮಾನವ ಆಳ್ವಿಕೆಯ ಈ “ಕಡೇ ದಿವಸಗಳಲ್ಲಿ” ಎಂಥ ಜನ ಇರುತ್ತಾರೆ ಅಂತ ಕೂಡ ಬೈಬಲ್‌ ಹೇಳುತ್ತೆ. ಉದಾಹರಣೆಗೆ, ಕಡೇ ದಿವಸಗಳಲ್ಲಿ ಸ್ವಾರ್ಥ ತುಂಬಿರುವ, ಹಣಪ್ರೇಮ ಇರುವ, ಚಾಡಿಹೇಳುವ ಜನರೇ ಜಾಸ್ತಿ ಇರುತ್ತಾರೆ ಅಂತ 2 ತಿಮೊಥೆಯ 3:1-5 ರಲ್ಲಿ ನಾವು ಓದಬಹುದು. ಈಗಿನ ಜನರ ಹಾವ-ಭಾವ ನೋಡಿದ್ರೆ, ಬೈಬಲಿನ ಈ ಮಾತು ಸತ್ಯ ಅನ್ನೋದರಲ್ಲಿ ಎರಡು ಮಾತಿಲ್ಲ.

ಇದೆಲ್ಲಾ ಏನು ತೋರಿಸಿಕೊಡುತ್ತೆ? ಸಮಸ್ಯೆಗಳಿಂದ ತುಂಬಿರುವ ನಮ್ಮ ಈ ಜೀವನವನ್ನು ಬದಲಾಯಿಸುವ ದೇವರ ಸರ್ಕಾರ ತುಂಬ ಹತ್ರ ಇದೆ ಅನ್ನೋದನ್ನು ತೋರಿಸಿಕೊಡುತ್ತೆ. (ಲೂಕ 21:36) ಈ ಭೂಮಿಗೂ ನಮ್ಮೆಲ್ಲರಿಗೂ ಒಳ್ಳೇದನ್ನು ಮಾಡ್ತೀನಿ ಅಂತ ದೇವರು ಮಾತು ಕೊಟ್ಟಿರೋದನ್ನು ನಾವು ಬೈಬಲ್‌ನಲ್ಲಿ ಓದಬಹುದು. ಅದಕ್ಕೆ ಕೆಲವು ಉದಾಹರಣೆಗಳನ್ನು ನೋಡೋಣ.

ಒಳ್ಳೇ ಆಡಳಿತ

“ಸಕಲಜನಾಂಗಕುಲಭಾಷೆಗಳವರು ಅವನನ್ನು (ಯೇಸುವನ್ನು) ಸೇವಿಸಲೆಂದು ಅವನಿಗೆ ದೊರೆತನವೂ ಘನತೆಯೂ ರಾಜ್ಯವೂ ಕೊಡೋಣವಾದವು; ಅವನ ಆಳಿಕೆಯು ಅಂತ್ಯವಿಲ್ಲದ್ದು, ಶಾಶ್ವತವಾದದ್ದು; ಅವನ ರಾಜ್ಯವು ಎಂದಿಗೂ ಅಳಿಯದು.”ದಾನಿಯೇಲ 7:14.

ಇದರ ಅರ್ಥ: ದೇವರ ಸರ್ಕಾರದಲ್ಲಿ ಯೇಸು ರಾಜನಾಗಿ ಆಳುತ್ತಾನೆ. ಆ ಸರ್ಕಾರ ಭೂಮಿಯನ್ನು ಆಳುವಾಗ ನಾವೆಲ್ಲರೂ ಖುಷಿಯಾಗಿರಬಹುದು.

ಒಳ್ಳೇ ಆರೋಗ್ಯ

“ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”ಯೆಶಾಯ 33:24.

ಇದರ ಅರ್ಥ: ಅಲ್ಲಿ ಯಾರೂ ನಮಗೆ ಹುಷಾರಿಲ್ಲ ಅಂತ ಹೇಳುವುದಿಲ್ಲ. ಅಲ್ಲಿ ಯಾವುದೇ ರೀತಿಯ ಅಂಗವಿಕಲತೆ ಇರುವುದಿಲ್ಲ. ಅಷ್ಟೇ ಅಲ್ಲ, ಸಾವು ಸಹ ಇರಲ್ಲ.

ಸಂಪೂರ್ಣ ಶಾಂತಿ

‘ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಡುತ್ತಾನೆ.’ಕೀರ್ತನೆ 46:9.

ಇದರ ಅರ್ಥ: ಯುದ್ಧಗಳೇ ಇರಲ್ಲ ಅಂದಮೇಲೆ, ಯುದ್ಧದಿಂದ ಆಗೋ ಸಾವು-ನೋವುಗಳ ಭಯನೂ ಇರಲ್ಲ.

ಭೂಮಿ ತುಂಬ ಒಳ್ಳೇ ಜನರೇ ಇರುತ್ತಾರೆ

“ದುಷ್ಟನು ಕಾಣಿಸದೆ ಹೋಗುವನು . . . ದೀನರು ದೇಶವನ್ನು ಅನುಭವಿಸುವರು.”ಕೀರ್ತನೆ 37:10, 11.

ಇದರ ಅರ್ಥ: ಈ ಭೂಮೀಲಿ ಕೆಟ್ಟವರೇ ಇರಲ್ಲ. ದೇವರ ಮಾತನ್ನು ಕೇಳೋರು ಮಾತ್ರ ಇರ್ತಾರೆ.

ಇಡೀ ಭೂಮಿ ಸುಂದರ ತೋಟ ಆಗುತ್ತೆ

“ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು.”ಯೆಶಾಯ 65:21.

ಇದರ ಅರ್ಥ: ದೇವರ ಇಷ್ಟದಂತೆ ಈ ಭೂಮಿ ಆಗುತ್ತೆ ಅಂದರೆ, ದೇವರು ಇಡೀ ಭೂಮಿಯನ್ನು ಒಂದು ಸುಂದರ ತೋಟದಂತೆ ಮಾಡುತ್ತಾನೆ.—ಮತ್ತಾಯ 6:10.