ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಸರ್ಕಾರದ ಬಗ್ಗೆ ಸತ್ಯ

ದೇವರ ಸರ್ಕಾರದ ಬಗ್ಗೆ ಸತ್ಯ

ದೇವರಿಗೆ ಹೇಗೆ ಪ್ರಾರ್ಥಿಸಬೇಕು ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿಕೊಟ್ಟನು. ಅದು, “ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.” (ಮತ್ತಾಯ 6:9, 10) ದೇವರ ಸರ್ಕಾರ ಅಂದ್ರೆ ಏನು? ಅದ್ರಿಂದ ನಮಗೆ ಏನು ಪ್ರಯೋಜನ? ಅದು ಯಾಕೆ ಬೇಗ ಬರಬೇಕು?

ದೇವರ ಸರ್ಕಾರಕ್ಕೆ ರಾಜ ಯೇಸು.

ಲೂಕ 1:31-33: “ನೀನು ಅವನಿಗೆ ಯೇಸು ಎಂದು ಹೆಸರಿಡಬೇಕು. ಅವನು ಮಹಾಪುರುಷನಾಗಿ ಮಹೋನ್ನತನ ಪುತ್ರನೆಂದು ಕರೆಯಲ್ಪಡುವನು; ಯೆಹೋವ ದೇವರು ಅವನ ತಂದೆಯಾದ ದಾವೀದನ ಸಿಂಹಾಸನವನ್ನು ಅವನಿಗೆ ಕೊಡುವನು ಮತ್ತು ಅವನು ಯಾಕೋಬನ ಮನೆತನದ ಮೇಲೆ ಸದಾಕಾಲಕ್ಕೂ ರಾಜನಾಗಿ ಆಳುವನು, ಅವನ ರಾಜ್ಯಕ್ಕೆ ಅಂತ್ಯವೇ ಇರದು.”

ಯೇಸು ಸಾರಿದ ಮುಖ್ಯ ವಿಷಯ ದೇವರ ಸರ್ಕಾರ.

ಮತ್ತಾಯ 9:35: “ಯೇಸು ಎಲ್ಲ ಪಟ್ಟಣಗಳಲ್ಲಿಯೂ ಹಳ್ಳಿಗಳಲ್ಲಿಯೂ ಸಂಚರಿಸಿ ಅವರ ಸಭಾಮಂದಿರಗಳಲ್ಲಿ ಬೋಧಿಸುತ್ತಾ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರ ಎಲ್ಲ ರೀತಿಯ ರೋಗಗಳನ್ನೂ ದೇಹದೌರ್ಬಲ್ಯಗಳನ್ನೂ ಗುಣಪಡಿಸುತ್ತಾ ಬಂದನು.”

ದೇವರ ಸರ್ಕಾರ ಯಾವಾಗ ಬರುತ್ತೆ ಅಂತ ಯೇಸು ಸೂಚನೆ ಕೊಟ್ಟನು.

ಮತ್ತಾಯ 24:7: “ಜನಾಂಗಕ್ಕೆ ವಿರುದ್ಧವಾಗಿ ಜನಾಂಗವೂ ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆಯೂ ಭೂಕಂಪಗಳೂ ಆಗುವವು.”

ಯೇಸುವಿನ ಶಿಷ್ಯರು ಇಂದು ದೇವರ ಸರ್ಕಾರದ ಬಗ್ಗೆ ಭೂಮಿಯ ಎಲ್ಲಾ ಕಡೆ ಹೇಳುತ್ತಿದ್ದಾರೆ.

ಮತ್ತಾಯ 24:14: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.”