ನೀವು ದೇವರಿಗೆ ಆಪ್ತರಾಗಲು ಸಾಧ್ಯ
ಕೆಲವು ಜನರಿಗೆ ಹೀಗನಿಸುತ್ತದೆ:
ದೇವರಿಗೆ ನಮ್ಮ ಬಗ್ಗೆ ಆಸಕ್ತಿ ಇಲ್ಲ ಅಥವಾ ಆತನು ಮಹೋನ್ನತನು, ಪರಿಶುದ್ಧನು, ನಾವಾತನ ಹತ್ತಿರ ಹೋಗಲು ಸಾಧ್ಯವಿಲ್ಲ.
ಬೈಬಲ್ ಏನು ಹೇಳುತ್ತದೆ?
“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”—ಯಾಕೋಬ 4:8.
“ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:7.
ದೇವರಿಗೆ ಆಪ್ತರಾಗಲು ನಾವೇನು ಮಾಡಬಹುದು?
ಆತನೊಂದಿಗೆ ಮಾತಾಡಿ.—ಕೀರ್ತನೆ 145:18, 19.
ಆತನಿಗೆ ಕಿವಿಗೊಡಿ.—ಕೀರ್ತನೆ 32:8.
ಆತನ ಮಾರ್ಗದರ್ಶನಕ್ಕನುಸಾರ ನಡೆಯಿರಿ. —ಜ್ಞಾನೋಕ್ತಿ 3:5, 6.
ಪ್ರಯತ್ನ ಬಿಡಬೇಡಿ.—ಮತ್ತಾಯ 7:7, 8.