ಅಧ್ಯಯನ ಲೇಖನ 7
ಯೆಹೋವನನ್ನು ನಾವು ತುಂಬ ಪ್ರೀತಿ ಮಾಡ್ತೇವೆ
“ಆತನು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ.”—1 ಯೋಹಾ. 4:19.
ಗೀತೆ 152 ಯೆಹೋವ ನೀನೇ ಆಶ್ರಯ
ಕಿರುನೋಟ *
1-2. ಯೆಹೋವನು ನಮಗ್ಯಾಕೆ ತನ್ನ ಕುಟುಂಬದ ಭಾಗ ಆಗುವ ಅವಕಾಶ ಮಾಡ್ಕೊಟ್ಟಿದ್ದಾನೆ? ಮತ್ತು ಹೇಗೆ?
ಯೆಹೋವನು ತನ್ನ ಆರಾಧಕರಿರುವ ದೊಡ್ಡ ಕುಟುಂಬದಲ್ಲಿ ನಮ್ಮನ್ನು ಸೇರಿಸ್ಕೊಂಡಿದ್ದಾನೆ. ಇದಕ್ಕಿಂತ ದೊಡ್ಡ ಆಶೀರ್ವಾದ ಇನ್ನೇನಿದೆ ಹೇಳಿ. ಈ ಕುಟುಂಬದಲ್ಲಿರೋ ಎಲ್ರೂ ತಮ್ಮನ್ನು ದೇವರಿಗೆ ಸಮರ್ಪಿಸಿಕೊಂಡಿದ್ದಾರೆ ಮತ್ತು ಆತನ ಮಗನಾದ ಯೇಸುವಿನ ಯಜ್ಞದಲ್ಲಿ ನಂಬಿಕೆ ಇಟ್ಟಿದ್ದಾರೆ. ನಮ್ಮ ಈ ಕುಟುಂಬದಲ್ಲಿ ಸಂತೋಷ ತುಂಬಿತುಳುಕ್ತಿದೆ. ನಮ್ಮ ಜೀವ್ನಕ್ಕೊಂದು ಅರ್ಥ ಇದೆ. ಅಷ್ಟೇ ಅಲ್ಲ, ಮುಂದೆ ನಮ್ಮಲ್ಲಿ ಕೆಲವ್ರು ಸ್ವರ್ಗದಲ್ಲಿ, ಇನ್ನು ಕೆಲವ್ರು ಪರದೈಸ್ ಭೂಮಿಯಲ್ಲಿ ಸಾವೇ ಇಲ್ಲದ ಜೀವ್ನವನ್ನ ಆನಂದಿಸ್ಲಿಕ್ಕಿದ್ದೇವೆ.
2 ಯೆಹೋವನು ನಮ್ಮನ್ನು ತುಂಬ ಪ್ರೀತಿ ಮಾಡೋದ್ರಿಂದ ದೊಡ್ಡ ತ್ಯಾಗ ಮಾಡಿ ನಾವು ಆತನ ಕುಟುಂಬದ ಭಾಗ ಆಗೋ ಅವಕಾಶ ಮಾಡ್ಕೊಟ್ಟಿದ್ದಾನೆ. (ಯೋಹಾ. 3:16) ಒಂದರ್ಥದಲ್ಲಿ ಆತನು ನಮ್ಮನ್ನ ‘ಕ್ರಯಕ್ಕೆ ಕೊಂಡುಕೊಂಡಿದ್ದಾನೆ.’ (1 ಕೊರಿಂ. 6:20) ಯೆಹೋವನು ವಿಮೋಚನಾ ಮೌಲ್ಯದ ಏರ್ಪಾಡನ್ನ ಮಾಡೋ ಮೂಲಕ ನಾವು ಆತನಿಗೆ ಆಪ್ತರಾಗೋ ಅವಕಾಶವನ್ನು ಮಾಡ್ಕೊಟ್ಟಿದ್ದಾನೆ. ವಿಶ್ವದಲ್ಲೇ ಯಾರಿಗೂ ಸರಿಸಾಟಿ ಇಲ್ಲದಿರೋ ಮಹಾನ್ ವ್ಯಕ್ತಿಯನ್ನ ‘ಅಪ್ಪಾ’ ಅಂತ ಕರೆಯೋ ಗೌರವ ನಮಗೆ ಸಿಕ್ಕಿದೆ. ಅಷ್ಟೇ ಅಲ್ಲ, ಹಿಂದಿನ ಲೇಖನದಲ್ಲಿ ನೋಡಿದ ಹಾಗೆ ಯೆಹೋವನಂಥ ಅಪ್ಪ ಬೇರೆ ಯಾರೂ ಇಲ್ಲ.
3. ನಮ್ಗೆ ಯಾವ ಪ್ರಶ್ನೆಗಳು ಬರಬಹುದು? (“ ಯೆಹೋವನು ನನ್ನನ್ನು ನೋಡ್ತಾನಾ?” ಅನ್ನೋ ಚೌಕ ಸಹ ನೋಡಿ.)
3 ‘ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?’ ಅಂತ ಒಬ್ಬ ಬೈಬಲ್ ಲೇಖಕನಿಗೆ ಅನಿಸಿತು. (ಕೀರ್ತ. 116:12) ನಮ್ಗೂ ಅದೇ ರೀತಿ ಅನಿಸ್ಬಹುದು. ಆದ್ರೆ ನಿಜ ಏನಂದ್ರೆ ಯೆಹೋವನ ಋಣನ ನಾವು ಯಾವತ್ತೂ ತೀರಿಸೋಕಾಗಲ್ಲ. ಆತನಿಗೆ ನಮ್ಮ ಮೇಲಿರೋ ಪ್ರೀತಿನ ನೋಡ್ವಾಗ ನಮ್ಗೂ ಆತನ ಮೇಲೆ ಪ್ರೀತಿ ಉಕ್ಕಿಬರುತ್ತೆ. ಅಪೊಸ್ತಲ ಯೋಹಾನ ಹೀಗೆ ಬರೆದನು: “ಆತನು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ.” (1 ಯೋಹಾ. 4:19) ನಮ್ಮ ತಂದೆ ಯೆಹೋವನನ್ನ ನಾವು ಪ್ರೀತಿಸ್ತೇವಂತ ಹೇಗೆಲ್ಲಾ ತೋರಿಸ್ಕೊಡಬಹುದು?
ಯಾವಾಗ್ಲೂ ಯೆಹೋವನಿಗೆ ಆಪ್ತರಾಗಿರಿ
4. ಯಾಕೋಬ 4:8 ರ ಪ್ರಕಾರ ನಾವು ಯೆಹೋವನ ಆಪ್ತ ಸ್ನೇಹಿತರಾಗೋಕೆ ಯಾಕೆ ಪ್ರಯತ್ನಿಸ್ಬೇಕು?
4 ಯೆಹೋವನು, ನಾವಾತನ ಆಪ್ತ ಸ್ನೇಹಿತರಾಗ್ಬೇಕು, ಆತನ ಜೊತೆ ಮಾತಾಡ್ತಾ ಇರ್ಬೇಕು ಅಂತ ಇಷ್ಟಪಡ್ತಾನೆ. (ಯಾಕೋಬ 4:8 ಓದಿ.) “ಪಟ್ಟುಹಿಡಿದು ಪ್ರಾರ್ಥಿಸಿರಿ” ಅಂತ ಉತ್ತೇಜಿಸ್ತಾನೆ, ನಾವು ಯಾವಾಗ ಪ್ರಾರ್ಥನೆ ಮಾಡಿದ್ರೂ ಕೇಳಿಸ್ಕೊಳ್ತಾನೆ. (ರೋಮ. 12:12) ಆತನು ಯಾವತ್ತೂ ‘ನನ್ಗೆ ಸುಸ್ತಾಗಿದೆ, ಸಮ್ಯ ಇಲ್ಲ’ ಅಂತ ಹೇಳಲ್ಲ. ನಾವಾತನ ಹತ್ರ ಮಾತಾಡಿದ್ರೆ ಸಾಕಾಗಲ್ಲ, ಆತನು ಮಾತಾಡುವಾಗ್ಲೂ ಕೇಳಿಸ್ಕೊಬೇಕು. ಅದು ಹೇಗೆ? ಬೈಬಲನ್ನ ಮತ್ತು ಅದನ್ನ ಅರ್ಥಮಾಡ್ಕೊಳ್ಳೋಕೆ ಸಹಾಯ ಮಾಡೋ ಸಾಹಿತ್ಯವನ್ನ ಓದ್ಬೇಕು. ಅಷ್ಟೇ ಅಲ್ಲ, ಕ್ರೈಸ್ತ ಕೂಟಗಳಲ್ಲಿ ಗಮನ ಕೊಟ್ಟು ಕೇಳಿಸ್ಕೋಬೇಕು. ಮಕ್ಳು ಹೆತ್ತವರ ಹತ್ರ ಮಾತಾಡ್ತಾ ಅವ್ರು ಹೇಳೋದನ್ನ ಯಾವಾಗ್ಲೂ ಕೇಳಿಸ್ಕೊಳ್ತಾ ಇದ್ರೆ ಹೆತ್ತವರಿಗೆ ಆಪ್ತರಾಗ್ತಾರೆ. ಅದೇ ರೀತಿ ನಾವು ಯೆಹೋವನ ಹತ್ರ ಮಾತಾಡ್ತಾ ಆತನು ಹೇಳೋದನ್ನ ಕೇಳಿಸ್ಕೊಳ್ತಾ ಇದ್ರೆ ಆತನಿಗೆ ಆಪ್ತರಾಗ್ತೇವೆ.
5. ನಮ್ಮ ಪ್ರಾರ್ಥನೆ ಹೇಗಿದ್ರೆ ಯೆಹೋವನಿಗೆ ಇಷ್ಟ ಆಗುತ್ತೆ?
5 ನಮ್ಮ ಪ್ರಾರ್ಥನೆಗಳು ಹೇಗಿವೆ? ನಮ್ಮ ಹೃದಯದಲ್ಲಿ ಇರೋದನ್ನೆಲ್ಲಾ ಪ್ರಾರ್ಥನೆಯಲ್ಲಿ ಹೇಳ್ಕೋಬೇಕಂತ ಯೆಹೋವನು ಇಷ್ಟಪಡ್ತಾನೆ. (ಕೀರ್ತ. 62:8) ಹಾಗಾಗಿ, ನಾವು ಈ ಪ್ರಶ್ನೆಗಳನ್ನ ಕೇಳ್ಕೋಬೇಕು: ‘ನನ್ನ ಪ್ರಾರ್ಥನೆ ಹೇಗಿದೆ? ಮೇಲ್ಮೇಲೆ ಹೇಳಿದ್ದನ್ನೇ ಹೇಳ್ತೀನಾ ಅಥ್ವಾ ಹೃದಯದಾಳದಿಂದ ಎಲ್ಲವನ್ನೂ ಹೇಳ್ಕೊಳ್ತೀನಾ?’ ನಾವು ಖಂಡಿತ ಯೆಹೋವನನ್ನ ಪ್ರೀತಿಸ್ತೇವೆ ಮತ್ತು ಆತನ ಜೊತೆ ನಮಗಿರೋ ಸಂಬಂಧ ಇನ್ನೂ ಬಲ ಆಗ್ಬೇಕು ಅಂತ ಇಷ್ಟಪಡ್ತೇವೆ. ಹಾಗಾಗ್ಬೇಕಂದ್ರೆ ನಾವು ಆತನ ಜೊತೆ ಯಾವಾಗ್ಲೂ ಮಾತಾಡ್ತಾ ಇರ್ಬೇಕು. ಯಾರ ಹತ್ರನೂ ಹೇಳ್ಕೊಳ್ಳೋಕೆ ಆಗ್ದಿರೋ ಭಾವನೆಗಳನ್ನು ಸಹ ಆತನ ಹತ್ರ ಹೇಳ್ಕೋಬೇಕು. ನಮ್ಮ ಸುಖ-ದುಃಖನೆಲ್ಲಾ ಹಂಚ್ಕೋಬೇಕು. ಯಾವಾಗ ಬೇಕಿದ್ರೂ ಆತನ ಹತ್ರ ಸಹಾಯ ಕೇಳ್ಬಹುದು ಅನ್ನೋ ಭರವಸೆ ನಮಗಿರ್ಬೇಕು.
6. ಯೆಹೋವನಿಗೆ ನಾವು ಆಪ್ತರಾಗಿರ್ಬೇಕಂದ್ರೆ ಏನು ಮಾಡ್ಬೇಕು?
6 ಯೆಹೋವನಿಗೆ ನಾವು ಆಪ್ತರಾಗಿರ್ಬೇಕಂದ್ರೆ ಆತನ ಕಡೆಗೆ ನಮಗೆ ಗಣ್ಯತಾ ಭಾವ ಇರ್ಬೇಕು. ಕೀರ್ತನೆಗಾರನು ಹೀಗೆ ಬರೆದಿದ್ದಾನೆ: “ಯೆಹೋವನೇ, ನನ್ನ ದೇವರೇ, ನಿನಗೆ ಸಮಾನನಾದ ದೇವರು ಯಾರು? ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ; ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯವು; ಅವು ಅಸಂಖ್ಯಾತವಾಗಿವೆ.” (ಕೀರ್ತ. 40:5) ನಮ್ಗೂ ಇದೇ ರೀತಿ ಅನಿಸ್ಬಹುದು. ಆದ್ರೆ ಈ ರೀತಿ ಅನಿಸಿದ್ರೆ ಸಾಕಾಗಲ್ಲ. ಯೆಹೋವನಿಗೆ ಗಣ್ಯತೆಯನ್ನ ನಾವು ನಮ್ಮ ನಡೆ-ನುಡಿಯಲ್ಲಿ ತೋರಿಸ್ಬೇಕು. ಆದ್ರೆ ಲೋಕದ ಜನ್ರು ಆ ತರ ಇಲ್ಲ. ದೇವ್ರು ಅವ್ರಿಗೋಸ್ಕರ ಮಾಡಿರೋ ವಿಷ್ಯಗಳ ಕಡೆಗೆ ಅವ್ರಿಗೆ ಒಂಚೂರೂ ಗಣ್ಯತೆ ಇಲ್ಲ. ನಮ್ಗೆ ಇದಕ್ಕೇನು ಆಶ್ಚರ್ಯ ಆಗಲ್ಲ. ಯಾಕಂದ್ರೆ, ನಾವು ಜೀವಿಸ್ತಿರೋ ಈ “ಕಡೇ ದಿವಸಗಳಲ್ಲಿ” ಇರೋ ಜನ್ರು ಕೃತಜ್ಞತೆ ಇಲ್ಲದವರು ಅಂತ ನಮ್ಗೆ ಚೆನ್ನಾಗಿ ಗೊತ್ತಿದೆ. (2 ತಿಮೊ. 3:1, 2) ಆದ್ರೆ, ನಾವಂತೂ ಯಾವತ್ತೂ ಅವ್ರ ಥರ ಆಗ್ಬಾರ್ದು.
7. ನಾವು ಹೇಗಿರ್ಬೇಕಂತ ಯೆಹೋವನು ಬಯಸ್ತಾನೆ ಮತ್ತು ಯಾಕೆ?
7 ಹೆತ್ತವ್ರು ತಮ್ಮ ಮಕ್ಳು ಜಗಳ ಆಡ್ಬಾರ್ದು, ಸ್ನೇಹಿತರ ತರ ಇರ್ಬೇಕು ಅಂತ ಇಷ್ಟಪಡ್ತಾರೆ. ಅದೇ ರೀತಿ ಯೆಹೋವನು ಸಹ ಆತನ ಮಕ್ಕಳಾದ ನಾವೆಲ್ರೂ ಒಬ್ಬರಿಗೊಬ್ಬರು ಪ್ರೀತಿಯಿಂದ ಇರ್ಬೇಕಂತ ಇಷ್ಟಪಡ್ತಾನೆ. ಒಬ್ಬರಿಗೊಬ್ಬರ ಮೇಲೆ ನಮ್ಗಿರೋ ಈ ಪ್ರೀತಿನೇ ನಾವು ನಿಜ ಕ್ರೈಸ್ತರಾಗಿದ್ದೇವೆ ಅನ್ನೋದಕ್ಕೆ ಗುರುತಾಗಿದೆ. (ಯೋಹಾ. 13:35) ಕೀರ್ತನೆಗಾರನು ಹೇಳಿದ ಈ ಮಾತುಗಳನ್ನ ನಾವು ಸಹ ಒಪ್ಕೊಳ್ತೇವೆ: “ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!” (ಕೀರ್ತ. 133:1) ನಾವು ನಮ್ಮ ಸಹೋದರ ಸಹೋದರಿಯರನ್ನ ಪ್ರೀತಿಸಿದ್ರೆ ಯೆಹೋವನನ್ನು ಸಹ ಪ್ರೀತಿಸ್ತೇವೆ ಅಂತ ತೋರಿಸ್ಕೊಡ್ತೇವೆ. (1 ಯೋಹಾ. 4:20) ‘ಒಬ್ಬರಿಗೊಬ್ಬರು ದಯೆ, ಕೋಮಲ ಸಹಾನುಭೂತಿ’ ತೋರಿಸುವಂಥ ಸಹೋದರ ಸಹೋದರಿಯರ ಈ ಕುಟುಂಬದ ಭಾಗ ಆಗಿರೋಕೆ ನಮಗೆಷ್ಟು ಖುಷಿ ಆಗುತ್ತಲ್ಲಾ!—ಎಫೆ. 4:32.
ಯೆಹೋವನ ಮಾತನ್ನ ಕೇಳಿ
8. ಒಂದನೇ ಯೋಹಾನ 5:3 ರ ಪ್ರಕಾರ ನಾವು ಯೆಹೋವನ ಮಾತನ್ನ ಕೇಳಲಿಕ್ಕಿರುವ ಮುಖ್ಯ ಕಾರಣ ಏನು?
8 ಮಕ್ಳು ಹೆತ್ತವರ ಮಾತನ್ನ ಕೇಳ್ಬೇಕಂತ ಯೆಹೋವನು ಬಯಸ್ತಾನೆ ಮತ್ತು ನಾವೆಲ್ರೂ ಆತನ ಮಾತನ್ನ ಕೇಳ್ಬೇಕಂತನೂ ಬಯಸ್ತಾನೆ. (ಎಫೆ. 6:1) ಯೆಹೋವನು ನಮ್ಮನ್ನ ಸೃಷ್ಟಿಮಾಡಿದ್ದಾನೆ, ನಮಗೆ ಜೀವಿಸೋಕೆ ಬೇಕಾಗಿರೋದೆಲ್ಲಾ ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಎಲ್ಲ ಹೆತ್ತವರಿಗಿಂತ ಹೆಚ್ಚು ವಿವೇಕ ಆತನಿಗಿದೆ. ಆದ್ರಿಂದ ನಾವು ಆತನ ಮಾತನ್ನ ಕೇಳ್ಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ನಾವು ಯೆಹೋವನನ್ನ ಪ್ರೀತಿಸೋದ್ರಿಂದ ಆತನ ಮಾತನ್ನ ಕೇಳ್ಬೇಕು. (1 ಯೋಹಾನ 5:3 ಓದಿ.) ಹೀಗೆ ಅನೇಕ ಕಾರಣಗಳಿದ್ರೂ ಯೆಹೋವನು ನಮಗೆ ‘ನನ್ನ ಮಾತನ್ನ ಕೇಳಿ’ ಅಂತ ಬಲವಂತ ಮಾಡಲ್ಲ. ನಮಗೇನು ಇಷ್ಟನೋ ಅದನ್ನು ಮಾಡೋ ಸ್ವಾತಂತ್ರ್ಯ ಕೊಟ್ಟಿದ್ದಾನೆ. ಆದ್ರಿಂದ ಪ್ರೀತಿಯಿಂದ ನಾವಾಗೇ ಆತನ ಮಾತನ್ನ ಕೇಳೋ ಆಯ್ಕೆ ಮಾಡಿದ್ರೆ ಆತನಿಗೆ ಖುಷಿ ಆಗುತ್ತೆ.
9-10. ದೇವರ ನಿಯಮಗಳನ್ನ ತಿಳ್ಕೊಂಡು ಅದ್ರ ಪ್ರಕಾರ ನಡೆಯೋದು ಯಾಕೆ ಪ್ರಾಮುಖ್ಯ?
9 ತಮ್ಮ ಮಕ್ಕಳು ಜೋಪಾನವಾಗಿ ಇರ್ಬೇಕು, ಸುರಕ್ಷಿತರಾಗಿರ್ಬೇಕು ಅಂತ ಹೆತ್ತವರು ಬಯಸ್ತಾರೆ. ಅದಕ್ಕೇ ಅವರು ಮಕ್ಕಳಿಗೆ, ಹೀಗೆ ಮಾಡಿ, ಹೀಗೆ ಮಾಡ್ಬೇಡಿ ಅಂತ ನಿಯಮಗಳನ್ನ ಕೊಡ್ತಾರೆ. ಮಕ್ಕಳು ಆ ನಿಯಮಗಳನ್ನ ಪಾಲಿಸುವಾಗ ತಮಗೆ ಹೆತ್ತವರ ಮೇಲೆ ನಂಬಿಕೆ ಇದೆ, ಗೌರವ ಇದೆ ಅಂತ ತೋರಿಸ್ತಾರೆ. ಅಷ್ಟೇ ಅಲ್ಲ, ಅದ್ರಿಂದ ಮಕ್ಕಳಿಗೆ ಒಳ್ಳೇದಾಗುತ್ತೆ. ಆದ್ರಿಂದ ಮಕ್ಕಳು ಹೆತ್ತವ್ರ ಮಾತನ್ನ ಕೇಳೋದು ತುಂಬ ತುಂಬ ಮುಖ್ಯ. ಹಾಗಾದ್ರೆ ನಮ್ಮ ಅಪ್ಪ ಯೆಹೋವನ ನಿಯಮಗಳನ್ನ ತಿಳ್ಕೊಂಡು ಅದ್ರ ಪ್ರಕಾರ ನಡೆಯೋದು ಇನ್ನೆಷ್ಟು ಪ್ರಾಮುಖ್ಯ ಅಲ್ವಾ? ನಾವು ಈ ರೀತಿ ನಡೆದ್ರೆ ಯೆಹೋವನ ಮೇಲೆ ನಮಗೆ ಪ್ರೀತಿ ಇದೆ, ಗೌರವ ಇದೆ ಅಂತ ತೋರಿಸ್ಕೊಡ್ತೇವೆ, ಅಷ್ಟೇ ಅಲ್ಲ, ನಮಗೇ ಪ್ರಯೋಜನ ಆಗುತ್ತೆ. (ಯೆಶಾ. 48:17, 18) ಆದ್ರೆ, ನಾವು ಯೆಹೋವನನ್ನ, ಆತನ ನಿಯಮಗಳನ್ನ ತಿರಿಸ್ಕರಿಸಿಬಿಟ್ರೆ ನಮಗೆ ನಾವೇ ಹಾನಿ ತಂದ್ಕೊಳ್ತೇವೆ.—ಗಲಾ. 6:7, 8.
10 ಯೆಹೋವನು ಮೆಚ್ಚೋ ರೀತಿ ನಡ್ಕೊಂಡ್ರೆ ನಮ್ಮ ಆರೋಗ್ಯ ಚೆನ್ನಾಗಿರುತ್ತೆ, ಖುಷಿಯಾಗಿರ್ತೇವೆ ಮತ್ತು ಆತನ ಜೊತೆ ನಮಗಿರೋ ಸಂಬಂಧನೂ ಹಾಳಾಗಲ್ಲ. ನಮ್ಗೇನು ಒಳ್ಳೇದಂತ ಯೆಹೋವನಿಗೇ ಚೆನ್ನಾಗಿ ಗೊತ್ತು. ಅಮೆರಿಕದಲ್ಲಿರುವ ಅರೋರ ಹೀಗೆ ಹೇಳ್ತಾಳೆ: “ಯೆಹೋವನ ಮಾತನ್ನ ಕೇಳಿದ್ರೆ ನಮ್ಮ ಜೀವನ ತುಂಬ ಚೆನ್ನಾಗಿರುತ್ತೆ. ಬೇರೇನು ಮಾಡಿದ್ರೂ ಅಷ್ಟು ಚೆನ್ನಾಗಿರೋಕಾಗಲ್ಲ.” ಈ ಮಾತು ನಮ್ಮೆಲ್ರ ವಿಷಯದಲ್ಲೂ ನಿಜ.
ಯೆಹೋವನು ಹೇಳಿದ ಪ್ರಕಾರ ನಡಕೊಂಡಿದ್ರಿಂದ ನಿಮಗ್ಯಾವ ಪ್ರಯೋಜನ ಆಗಿದೆ?11. ಪ್ರಾರ್ಥನೆ ನಮ್ಗೆ ಹೇಗೆ ಸಹಾಯ ಮಾಡ್ತದೆ?
11 ದೇವರ ಮಾತನ್ನ ಕೇಳೋಕೆ ಕಷ್ಟ ಅನಿಸಿದಾಗ್ಲೂ ಅದನ್ನ ಪಾಲಿಸೋಕೆ ಪ್ರಾರ್ಥನೆ ಸಹಾಯ ಮಾಡುತ್ತೆ. ನಾವು ಅಪರಿಪೂರ್ಣರಾಗಿರೋದ್ರಿಂದ ಕೆಲವೊಮ್ಮೆ ಯೆಹೋವನ ಮಾತನ್ನ ಕೇಳೋಕೆ ಕಷ್ಟ ಆಗ್ಬಹುದು. ಆದ್ರೆ ಆತನಿಗೆ ಅವಿಧೇಯರಾಗ್ದೇ ಇರೋಕೆ ನಾವು ಯಾವಾಗ್ಲೂ ಪ್ರಯತ್ನಿಸ್ತಾ ಇರ್ಬೇಕು. ಕೀರ್ತನೆಗಾರನು ದೇವ್ರ ಹತ್ರ ಹೀಗೆ ಕೇಳ್ಕೊಂಡನು: “ನನಗೆ ಜ್ಞಾನವನ್ನು ದಯಪಾಲಿಸು; ಆಗ ನಿನ್ನ ಧರ್ಮಶಾಸ್ತ್ರವನ್ನು ಪೂರ್ಣಮನಸ್ಸಿನಿಂದ ಕೈಕೊಂಡು ನಡೆಯುವೆನು.” (ಕೀರ್ತ. 119:34) ಡೆನೀಸ್ ಎಂಬ ಪಯನೀಯರ್ ಸಹೋದರಿ ಹೀಗೆ ಹೇಳ್ತಾಳೆ: “ನನ್ಗೆ ಯೆಹೋವನು ಕೊಟ್ಟಿರೋ ಯಾವ್ದಾದ್ರೂ ಒಂದು ನಿಯಮನ ಪಾಲ್ಸೋಕೆ ಕಷ್ಟ ಅನ್ಸಿದ್ರೆ, ಸರಿಯಾದದ್ದನ್ನು ಮಾಡೋಕೆ ಬಲ ಕೊಡಪ್ಪಾ ಅಂತ ಪ್ರಾರ್ಥನೆ ಮಾಡ್ತೇನೆ.” ನಾವು ಈ ರೀತಿ ಪ್ರಾರ್ಥನೆ ಮಾಡುವಾಗ ಯೆಹೋವನು ಖಂಡಿತ ಉತ್ರ ಕೊಡ್ತಾನೆ.—ಲೂಕ 11:9-13.
ಯೆಹೋವನ ಬಗ್ಗೆ ಬೇರೆಯವರಲ್ಲೂ ಪ್ರೀತಿ ಹುಟ್ಟಿಸಿ
12. ಎಫೆಸ 5:1 ರಲ್ಲಿ ನಾವೇನು ಮಾಡ್ಬೇಕಂತ ಹೇಳುತ್ತೆ?
12 ಎಫೆಸ 5:1 ಓದಿ. ನಾವು ಯೆಹೋವನ ‘ಪ್ರಿಯ ಮಕ್ಕಳಾಗಿರೋದ್ರಿಂದ’ ಆತನ ತರನೇ ನಡ್ಕೊಳ್ಳೋಕೆ ನಮ್ಮಿಂದಾದಷ್ಟು ಪ್ರಯತ್ನಿಸ್ತೇವೆ. ಆತನ ತರನೇ ನಾವು ಸಹ ಬೇರೆಯವರ ಜೊತೆ ಪ್ರೀತಿ, ದಯೆಯಿಂದ ನಡ್ಕೋತೇವೆ ಮತ್ತು ಅವ್ರನ್ನ ಕ್ಷಮಿಸ್ತೇವೆ. ದೇವರ ಬಗ್ಗೆ ಗೊತ್ತಿಲ್ದವ್ರು ನಮ್ಮ ಈ ಒಳ್ಳೇ ನಡತೆನ ನೋಡ್ದಾಗ ಆತನ ಬಗ್ಗೆ ಕಲಿತುಕೊಳ್ಳೋಕೆ ಮುಂದೆ ಬರ್ಬಹುದು. (1 ಪೇತ್ರ 2:12) ದೇವ್ರು ನಮ್ಮ ಜೊತೆ ಹೇಗೆ ನಡ್ಕೋತಾನೋ ಅದೇ ರೀತಿಯಲ್ಲಿ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳ ಜೊತೆ ನಡ್ಕೋಬೇಕು. ಅವರು ಹಾಗೆ ಮಾಡೋದಾದ್ರೆ ಮಕ್ಕಳು ಸಹ ನಮ್ಮ ಪ್ರೀತಿಯ ತಂದೆಯಾದ ಯೆಹೋವನಿಗೆ ಆಪ್ತರಾಗೋಕೆ ಇಷ್ಟಪಡಬಹುದು.
13. ನಾವು ಧೈರ್ಯದಿಂದ ಮಾತಾಡ್ಬೇಕಂದ್ರೆ ಏನು ಮಾಡ್ಬೇಕು?
13 ಸಾಮಾನ್ಯವಾಗಿ ಚಿಕ್ಕ ಮಕ್ಳಿಗೆ ತಮ್ಮ ಅಪ್ಪ ಅಂದ್ರೆ ಹೆಮ್ಮೆ ಕೀರ್ತ. 34:2) ನಾವು ನಾಚಿಕೆ ಸ್ವಭಾವದವ್ರಾಗಿದ್ರೆ ಆತನ ಬಗ್ಗೆ ಧೈರ್ಯದಿಂದ ಮಾತಾಡೋಕೆ ಏನ್ಮಾಡ್ಬೇಕು? ನಾವು ಯೆಹೋವನ ಬಗ್ಗೆ ಮಾತಾಡೋದ್ರಿಂದ ಆತನಿಗೆಷ್ಟು ಖುಷಿಯಾಗುತ್ತೆ ಮತ್ತು ಬೇರೆಯವ್ರಿಗೆಷ್ಟು ಪ್ರಯೋಜನ ಆಗುತ್ತೆ ಅನ್ನೋದನ್ನ ಮನ್ಸಲ್ಲಿಟ್ರೆ ಧೈರ್ಯ ಬರುತ್ತೆ. ಅಷ್ಟೇ ಅಲ್ಲ, ಯೆಹೋವನು ನಮ್ಗೆ ಬೇಕಾದ ಧೈರ್ಯ ಕೊಡ್ತಾನೆ. ಒಂದನೇ ಶತಮಾನದಲ್ಲಿದ್ದ ಸಹೋದರರು ಧೈರ್ಯವಾಗಿರೋಕೆ ಯೆಹೋವನು ಸಹಾಯ ಮಾಡಿದನು. ನಮಗೂ ಸಹಾಯ ಮಾಡ್ತಾನೆ.—1 ಥೆಸ. 2:2.
ಅನ್ಸುತ್ತೆ. ಅವ್ರ ಬಗ್ಗೆ ಮಾತಾಡೋಕೆ ತುಂಬ ಇಷ್ಟಪಡ್ತಾರೆ. ಅದೇ ತರ ನಮಗೂ ಸಹ ನಮ್ಮ ಅಪ್ಪ ಯೆಹೋವ ಅಂದ್ರೆ ಹೆಮ್ಮೆ ಅನ್ಸುತ್ತೆ. ಬೇರೆಯವ್ರೂ ಆತನ ಬಗ್ಗೆ ತಿಳ್ಕೊಬೇಕು ಅಂತ ನಾವಿಷ್ಟಪಡ್ತೇವೆ. ನಮಗೆ ರಾಜ ದಾವೀದನ ತರನೇ ಅನ್ಸುತ್ತೆ. ಅವನು “ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವದು” ಅಂತ ಹೇಳಿದನು. (14. ನಾವು ಯೆಹೋವನ ಬಗ್ಗೆ ಬೇರೆಯವ್ರತ್ರ ಮಾತಾಡೋದು ಯಾಕಷ್ಟು ಪ್ರಾಮುಖ್ಯ?
14 ಯೆಹೋವನು ಪಕ್ಷಪಾತ ಮಾಡಲ್ಲ. ನಾವು ಸಹ ಎಲ್ಲಾ ಹಿನ್ನೆಲೆಯ ಜನ್ರಿಗೆ ಪ್ರೀತಿ ತೋರ್ಸೋದನ್ನ ನೋಡ್ವಾಗ ಆತನಿಗೆ ಖುಷಿ ಆಗುತ್ತೆ. (ಅ. ಕಾ. 10:34, 35) ನಾವು ಬೇರೆಯವ್ರಿಗೆ ಪ್ರೀತಿ ತೋರ್ಸೋ ಅತ್ಯುತ್ತಮ ವಿಧಾನ ಅವ್ರಿಗೆ ಸುವಾರ್ತೆ ಸಾರೋದೇ ಆಗಿದೆ. (ಮತ್ತಾ. 28:19, 20) ಈ ರೀತಿ ಸಾರೋದ್ರಿಂದ ಏನು ಪ್ರಯೋಜನ? ಯಾರು ನಮ್ಮ ಮಾತಿಗೆ ಕಿವಿಗೊಡ್ತಾರೋ ಅವ್ರ ಜೀವನ ಚೆನ್ನಾಗಾಗುತ್ತೆ ಮತ್ತು ಮುಂದೆ ಶಾಶ್ವತ ಜೀವನ ಪಡೆಯೋ ಅವಕಾಶನೂ ಅವ್ರಿಗೆ ಸಿಗುತ್ತೆ.—1 ತಿಮೊ. 4:16.
ಯೆಹೋವನನ್ನು ಪ್ರೀತಿಸಿ, ಖುಷಿಯಾಗಿರಿ
15-16. ನಾವು ಸಂತೋಷವಾಗಿರೋಕೆ ಯಾವ ಕಾರಣಗಳಿವೆ?
15 ಯೆಹೋವನು ತುಂಬ ಪ್ರೀತಿ ಮಾಡುವಂಥ ಅಪ್ಪ. ಹಾಗಾಗಿ, ಆತನ ಮಕ್ಕಳಾದ ನಾವೆಲ್ರೂ ಖುಷಿ ಖುಷಿಯಾಗಿ ಇರ್ಬೇಕು ಅಂತ ಇಷ್ಟಪಡ್ತಾನೆ. (ಯೆಶಾ. 65:14) ನಾವೀಗ ಕಷ್ಟಗಳನ್ನ ಅನುಭವಿಸ್ತಾ ಇದ್ರೂ ಸಂತೋಷವಾಗಿರೋಕೆ ಅನೇಕ ಕಾರಣಗಳಿವೆ. ಉದಾಹರಣೆಗೆ, ನಮ್ಮ ಅಪ್ಪ ಯೆಹೋವನು ನಮ್ಮನ್ನ ತುಂಬ ಪ್ರೀತಿಸ್ತಾನೆ ಅನ್ನೋ ಭರವಸೆ ನಮಗಿದೆ. ಆತನ ವಾಕ್ಯವಾದ ಬೈಬಲ್ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. (ಯೆರೆ. 15:16) ಬೇರೆ ಯಾರಿಗೂ ಇಲ್ಲದಂಥ ವಿಶೇಷ ಕುಟುಂಬ ನಮಗಿದೆ. ಈ ಕುಟುಂಬದಲ್ಲಿರೋ ಪ್ರತಿಯೊಬ್ರೂ ಯೆಹೋವನನ್ನ, ಆತನ ನೀತಿ ನಿಯಮಗಳನ್ನ ಪ್ರೀತಿಸ್ತಾರೆ ಮತ್ತು ಒಬ್ಬರನ್ನೊಬ್ರೂ ಪ್ರೀತಿಸ್ತಾರೆ.—ಕೀರ್ತ. 106:4, 5.
16 ನಾವು ಈಗ ಮತ್ತು ಮುಂದಕ್ಕೂ ಖುಷಿಯಾಗಿರ್ಬಹುದು. ಯಾಕಂದ್ರೆ, ಮುಂದೆ ನಮ್ಮ ಜೀವ್ನ ಇನ್ನೂ ಚೆನ್ನಾಗಿರುತ್ತೆ ಅನ್ನೋ ನಿರೀಕ್ಷೆ ನಮಗಿದೆ. ಬಲು ಬೇಗನೆ ದೇವ್ರು ದುಷ್ಟರನ್ನೆಲ್ಲಾ ತೆಗೆದುಹಾಕಲಿದ್ದಾನೆ ಮತ್ತು ತನ್ನ ಸರಕಾರದ ಮೂಲಕ ಭೂಮಿಯನ್ನ ಪರದೈಸಾಗಿ ಮಾಡಲಿದ್ದಾನೆ. ಸತ್ತವರು ಪುನರುತ್ಥಾನ ಆಗಿ ಬರ್ತಾರೆ ಮತ್ತು ನಮ್ಮ ಜೊತೆ ಇರ್ತಾರೆ ಅನ್ನೋ ನಿರೀಕ್ಷೆ ನಮಗಿದೆ. (ಯೋಹಾ. 5:28, 29) ಆ ರೀತಿ ಆಗುವಾಗ ಎಷ್ಟು ಖುಷಿಯಾಗುತ್ತಲ್ವಾ! ಎಲ್ಲಕ್ಕಿಂತ ಮುಖ್ಯವಾಗಿ ಸ್ವರ್ಗದಲ್ಲಿ ಮತ್ತು ಭೂಮಿಯಲ್ಲಿರೋ ಎಲ್ರೂ ನಮ್ಮ ಪ್ರೀತಿಯ ಅಪ್ಪ ಯೆಹೋವನಿಗೆ ಗೌರವ ಸ್ತುತಿ ಕೊಡ್ತಾ ಆರಾಧಿಸ್ತಾರೆ. ಆತನು ಅದನ್ನ ಪಡ್ಕೊಳ್ಳೋಕೆ ನಿಜವಾಗಿಯೂ ಅರ್ಹನಾಗಿದ್ದಾನೆ.
ಗೀತೆ 112 ಮಹಾ ದೇವರಾದ ಯೆಹೋವನು
^ ಪ್ಯಾರ. 5 ನಮ್ಮ ತಂದೆ ಯೆಹೋವ ನಮ್ಮನ್ನು ತುಂಬ ಪ್ರೀತಿ ಮಾಡ್ತಾನೆ ಮತ್ತು ತನ್ನ ಆರಾಧಕರು ಇರುವಂಥ ದೊಡ್ಡ ಕುಟುಂಬಕ್ಕೆ ನಮ್ಮನ್ನ ಸೇರಿಸ್ಕೊಂಡಿದ್ದಾನೆ. ಇದನ್ನ ನೋಡುವಾಗ ಆತನ ಮೇಲೆ ನಮ್ಗೆ ಪ್ರೀತಿ ಉಕ್ಕಿ ಬರುತ್ತೆ. ಇಷ್ಟೆಲ್ಲಾ ಪ್ರೀತಿ ತೋರ್ಸಿರೋ ನಮ್ಮ ಅಪ್ಪನನ್ನ ನಾವು ಪ್ರೀತಿಸ್ತೇವೆ ಅಂತ ಹೇಗೆಲ್ಲಾ ತೋರಿಸ್ಕೊಡ್ಬಹುದು? ನಮ್ಗೆ ಆತನ ಮೇಲಿರೋ ಪ್ರೀತಿಯನ್ನ ತೋರಿಸ್ಕೊಡೋಕೆ ಏನೆಲ್ಲಾ ಮಾಡ್ಬಹುದು ಅಂತ ಈ ಲೇಖನದಲ್ಲಿ ನೋಡ್ಲಿಕ್ಕಿದ್ದೇವೆ.