ನಮ್ಮ ಎಲ್ಲ ಸಂಕಟಗಳಲ್ಲಿ ಯೆಹೋವನು ನಮ್ಮನ್ನು ಸಂತೈಸುತ್ತಾನೆ
‘ಸಕಲ ಸಾಂತ್ವನದ ದೇವರು ನಮ್ಮ ಎಲ್ಲ ಸಂಕಟಗಳಲ್ಲಿ ನಮ್ಮನ್ನು ಸಾಂತ್ವನಗೊಳಿಸುತ್ತಾನೆ.’—2 ಕೊರಿಂ. 1:3, 4.
1, 2. (ಎ) ಯೆಹೋವನು ನಮ್ಮೆಲ್ಲಾ ಕಷ್ಟಗಳಲ್ಲಿ ನಮ್ಮನ್ನು ಹೇಗೆ ಸಂತೈಸುತ್ತಾನೆ? (ಬಿ) ಆತನ ವಾಕ್ಯದಲ್ಲಿ ಏನು ಮಾತು ಕೊಟ್ಟಿದ್ದಾನೆ?
ಇನ್ನೂ ಮದುವೆಯಾಗಿರದ ಒಬ್ಬ ಯುವ ಸಹೋದರ 1 ಕೊರಿಂಥ 7:28ರ ಬಗ್ಗೆ ಯೋಚಿಸುತ್ತಾ ಇದ್ದನು. ಮದುವೆ ಮಾಡಿಕೊಳ್ಳುವವರಿಗೆ “ಶರೀರದಲ್ಲಿ ಸಂಕಟವಿರುವುದು” ಎಂದು ಆ ವಚನ ಹೇಳುತ್ತದೆ. ತನಗಿಂತ ವಯಸ್ಸಿನಲ್ಲಿ ದೊಡ್ಡವರಾಗಿದ್ದ ಒಬ್ಬ ವಿವಾಹಿತ ಹಿರಿಯನ ಬಳಿ ಹೋಗಿ, “ಈ ‘ಸಂಕಟ’ ಅಂದರೆ ಏನು? ನಾನು ಮದುವೆಯಾದರೆ ಇದನ್ನು ನಿಭಾಯಿಸುವುದು ಹೇಗೆ?” ಎಂದು ಕೇಳಿದ. ಆ ಹಿರಿಯ ಉತ್ತರ ಕೊಡುವ ಮೊದಲು, ಯೆಹೋವನು ‘ಸಕಲ ಸಾಂತ್ವನದ ದೇವರು. ನಮ್ಮ ಎಲ್ಲ ಸಂಕಟಗಳಲ್ಲಿ ನಮ್ಮನ್ನು ಸಾಂತ್ವನಗೊಳಿಸುತ್ತಾನೆ’ ಎಂದು ಅಪೊಸ್ತಲ ಪೌಲನು ಬರೆದ ಮಾತುಗಳ ಬಗ್ಗೆ ಯೋಚಿಸುವಂತೆ ಹೇಳಿದರು.—2 ಕೊರಿಂ. 1:3, 4.
2 ನಮ್ಮ ತಂದೆಯಾದ ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ, ಕಷ್ಟಗಳು ಬಂದಾಗ ಸಂತೈಸುತ್ತಾನೆ ಎಂದು ನಮಗೆ ಗೊತ್ತು. ಯೆಹೋವನು ತನ್ನ ವಾಕ್ಯದ ಮೂಲಕ ಬೆಂಬಲ ಮತ್ತು ಮಾರ್ಗದರ್ಶನ ಕೊಟ್ಟಿರುವುದನ್ನು ನೀವು ಸ್ವತಃ ಅನುಭವಿಸಿರಲೂಬಹುದು. ಹಿಂದಿನ ಕಾಲದ ತನ್ನ ಸೇವಕರಿಗೆ ಆತನು ಒಳ್ಳೇದನ್ನು ಬಯಸಿದಂತೆ ನಮಗೂ ಒಳ್ಳೇದನ್ನು ಬಯಸುತ್ತಾನೆ.—ಯೆರೆಮೀಯ 29:11, 12 ಓದಿ.
3. ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?
3 ಸಂಕಟ, ಸಮಸ್ಯೆಗಳು ಯಾಕೆ ಬರುತ್ತವೆ ಎಂದು ಗೊತ್ತಾದರೆ ಅವನ್ನು ತಾಳಿಕೊಳ್ಳುವುದು ಸುಲಭ. ಮದುವೆ ಜೀವನದಲ್ಲಿ ಅಥವಾ ಕುಟುಂಬ ಜೀವನದಲ್ಲಿ ಬರುವ ಸಮಸ್ಯೆಗಳ ವಿಷಯದಲ್ಲೂ ಇದು ಸತ್ಯ. ಯಾವ ವಿಷಯಗಳು ಮದುವೆ ಜೀವನದಲ್ಲಿ ಸಂಕಟಕ್ಕೆ ಕಾರಣವಾಗಿರುತ್ತವೆ? ಇಂಥ ಸಮಯದಲ್ಲಿ ಬೈಬಲ್ ಕಾಲದ ಮತ್ತು ನಮ್ಮ ಕಾಲದ ಯಾವ ಉದಾಹರಣೆಗಳು ನಮಗೆ ಸಹಾಯ ಮಾಡುತ್ತವೆ? ಈ ಪ್ರಶ್ನೆಗಳಿಗೆ ನಾವೀಗ ಉತ್ತರ ನೋಡೋಣ. ಸಂಕಟಗಳನ್ನು ಹೇಗೆ ತಾಳಿಕೊಳ್ಳುವುದೆಂದು ಇದರಿಂದ ನಮಗೆ ಗೊತ್ತಾಗುತ್ತದೆ.
ಮದುವೆ ಜೀವನದ ಸಮಸ್ಯೆಗಳು
4, 5. ಮದುವೆಯಾದ ದಂಪತಿ ಎದುರಿಸುವ ಕೆಲವು ಸಂಕಟಗಳು ಯಾವುವು?
4 ಯೆಹೋವನು ಮೊದಲ ಸ್ತ್ರೀಯನ್ನು ಸೃಷ್ಟಿಮಾಡಿ ಆದಾಮನ ಬಳಿ ಕರೆದು ತಂದು ಅವರಿಬ್ಬರಿಗೆ ಮದುವೆ ಮಾಡಿದನು. ಆಗ ಯೆಹೋವನು, “ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು” ಎಂದು ಹೇಳಿದನು. (ಆದಿ. 2:24) ಆದರೆ ಇಂದಿರುವ ನಾವೆಲ್ಲರೂ ಅಪರಿಪೂರ್ಣರು. (ರೋಮ. 3:23) ಆದ್ದರಿಂದ ಒಂದು ಗಂಡು ಮತ್ತು ಹೆಣ್ಣು ಮದುವೆ ಮಾಡಿಕೊಂಡಾಗ ಕೆಲವು ಸಮಸ್ಯೆಗಳು ಎದುರಾಗಬಹುದು. ಉದಾಹರಣೆಗೆ, ಮದುವೆಯಾಗುವ ಮುಂಚೆ ಒಬ್ಬ ಹೆಣ್ಣು ಸಾಮಾನ್ಯವಾಗಿ ತನ್ನ ತಂದೆತಾಯಿಗೆ ವಿಧೇಯತೆ ತೋರಿಸಿರುತ್ತಾಳೆ. ಆದರೆ ಮದುವೆಯಾದ ಮೇಲೆ ಅವಳು ಗಂಡನ ತಲೆತನದ ಕೆಳಗೆ ಬರುತ್ತಾಳೆಂದು ದೇವರ ವಾಕ್ಯ ಹೇಳುತ್ತದೆ. (1 ಕೊರಿಂ. 11:3) ಆರಂಭದಲ್ಲಿ ತನ್ನ ಹೆಂಡತಿಗೆ ಮಾರ್ಗದರ್ಶನ ನೀಡಲು ಗಂಡನಿಗೆ ಕಷ್ಟ ಆಗಬಹುದು. ಇಷ್ಟರ ತನಕ ತಂದೆತಾಯಿಯ ಮಾತು ಕೇಳುತ್ತಿದ್ದದರಿಂದ ಈಗ ಗಂಡನು ಹೇಳಿದಂತೆ ಮಾಡುವುದು ಹೆಂಡತಿಗೆ ಕಷ್ಟ ಆಗಬಹುದು. ಮದುವೆಯಾದ ಹೊಸದರಲ್ಲಿ ಗಂಡನಿಗೆ ಹೆಂಡತಿಯ ಕುಟುಂಬದವರ ಜೊತೆ ಮತ್ತು ಹೆಂಡತಿಗೆ ಗಂಡನ ಕುಟುಂಬದವರ ಜೊತೆ ಮನಸ್ತಾಪಗಳಾಗಬಹುದು. ಇದೂ ಸಂಕಟಕ್ಕೆ ಕಾರಣವಾಗಬಹುದು.
5 ತಮಗೆ ಮಗು ಹುಟ್ಟಲಿದೆ ಎಂದು ದಂಪತಿಗೆ ಗೊತ್ತಾದಾಗ ಹೇಗನಿಸಬಹುದು? ಅವರಿಗೆ ತುಂಬ ಸಂತೋಷ ಆಗುತ್ತದಾದರೂ ಕೆಲವು ಚಿಂತೆಗಳೂ ಇರುತ್ತವೆ. ಹೆಂಡತಿ ಗರ್ಭಿಣಿಯಾಗಿರುವಾಗ ಎಲ್ಲವೂ ಸರಿ ಹೋಗುತ್ತದಾ, ಮಗು ಆರೋಗ್ಯವಾಗಿ ಇರುತ್ತದಾ ಎಂಬ ಚಿಂತೆಗಳು ಶುರುವಾಗುತ್ತವೆ. ಇನ್ನು ಮುಂದೆ ಖರ್ಚುಗಳೂ ಜಾಸ್ತಿಯಾಗುತ್ತವೆ ಎಂದು ಅವರಿಗೆ ಗೊತ್ತು. ಮಗು ಹುಟ್ಟಿದ ಮೇಲೆ ದಂಪತಿಯು ಬೇರೆ ಹೊಂದಾಣಿಕೆಗಳನ್ನೂ ಮಾಡಿಕೊಳ್ಳಬೇಕು. ತಾಯಿಯಾದವಳು ಮಗುವಿಗೆ ಹೆಚ್ಚು ಸಮಯ ಕೊಡಬೇಕಾಗುತ್ತದೆ. ಮೊದಲಿನ ತರ ಗಂಡ ಮತ್ತು ಹೆಂಡತಿ ಒಬ್ಬರಿಗೊಬ್ಬರು ಹೆಚ್ಚು ಸಮಯ ಕೊಡಲಿಕ್ಕೆ ಆಗದಿರಬಹುದು. ತಂದೆಯ ಜವಾಬ್ದಾರಿಗಳೂ ಹೆಚ್ಚಾಗುತ್ತವೆ. ತನ್ನ ಹೆಂಡತಿಗೆ ಮತ್ತು ಮಗುವಿಗೆ ಏನೇನು ಅಗತ್ಯವೊ ಅದೆಲ್ಲವನ್ನು ಅವನು ಪೂರೈಸಬೇಕು.
6-8. ಮದುವೆಯಾದ ದಂಪತಿಗೆ ಮಗುವಾಗಲ್ಲ ಎಂದು ಗೊತ್ತಾದರೆ ಹೇಗನಿಸಬಹುದು?
6 ಕೆಲವು ದಂಪತಿಗಳಿಗೆ ಇನ್ನೊಂದು ರೀತಿಯ ಸಂಕಟ ಎದುರಾಗುತ್ತದೆ. ಅವರಿಗೆ ಮಕ್ಕಳು ಬೇಕು ಅಂತ ತುಂಬ ಆಸೆಯಿದ್ದರೂ ಮಗು ಆಗದೆ ಇರಬಹುದು. ಹೀಗಿರುವಾಗ ಹೆಂಡತಿ ಭಾವನಾತ್ಮಕವಾಗಿ ಕುಗ್ಗಿಹೋಗಬಹುದು. ಮದುವೆಯಾದರೆ, ಮಕ್ಕಳಿದ್ದರೆ ಯಾವುದೇ ಚಿಂತೆಗಳಿರುವುದಿಲ್ಲ ಎಂಬ ಖಾತರಿ ಇಲ್ಲ ನಿಜ. ಆದರೂ ಮಕ್ಕಳು ಬೇಕೆಂಬ ಆಸೆ ಇದ್ದು ಮಗು ಆಗದಿದ್ದಾಗ ಒಂದು ರೀತಿಯ ‘ಶರೀರದ ಸಂಕಟ’ ಆಗಿರುತ್ತದೆ. (ಜ್ಞಾನೋ. 13:12) ಬೈಬಲ್ ಕಾಲದಲ್ಲಿದ್ದ ಸ್ತ್ರೀಯರಿಗೆ ಮದುವೆ ಆಗುವುದು ಮತ್ತು ಮಗುವಾಗುವುದು ತುಂಬ ಮುಖ್ಯವಾಗಿತ್ತು. ಆದ್ದರಿಂದಲೇ ಯಾಕೋಬನ ಹೆಂಡತಿ ರಾಹೇಲಳು ತುಂಬ ದುಃಖದಲ್ಲಿದ್ದಳು. ಅವಳ ಅಕ್ಕನಿಗೆ ಅನೇಕ ಮಕ್ಕಳಿದ್ದರೂ ತನಗೆ ಒಂದು ಮಗುವೂ ಆಗಲಿಲ್ಲ ಎಂಬ ಕೊರಗನ್ನು ಗಂಡನ ಹತ್ತಿರ ವ್ಯಕ್ತಪಡಿಸಿದಳು. (ಆದಿ. 30:1, 2) ಇಂದು ಕೆಲವು ದೇಶಗಳಲ್ಲಿ ‘ಮನೆತುಂಬ ಮಕ್ಕಳಿದ್ದರೇನೆ ಚೆನ್ನ’ ಎಂದು ಜನ ಹೇಳುತ್ತಾರೆ. ಇಂಥ ದೇಶಗಳಿಗೆ ಮಿಷನರಿಗಳಾಗಿ ಹೋಗಿರುವವರನ್ನು ಜನರು ‘ನಿಮಗೆ ಯಾಕೆ ಮಕ್ಕಳಿಲ್ಲ?’ ಎಂದು ಕೇಳುತ್ತಾರೆ. ಮಿಷನರಿಗಳು ತಮ್ಮಿಂದ ಸಾಧ್ಯವಾದಷ್ಟು ಉತ್ತಮವಾದ ಉತ್ತರವನ್ನು ಕೊಟ್ಟ ಬಳಿಕವೂ ಕೆಲವರು, “ಒಳ್ಳೇ ಔಷಧಿ ಕೊಡೊ ಡಾಕ್ಟರ್ ಇದ್ದಾರೆ, ಹೋಗ್ತಿರಾ?” ಎಂದು ಕೇಳುತ್ತಾರೆ.
7 ಇನ್ನೊಂದು ಉದಾಹರಣೆ ನೋಡಿ. ಇಂಗ್ಲೆಂಡ್‌ನ ಒಬ್ಬ ಸಹೋದರಿ ತನಗೆ ಮಕ್ಕಳಾಗಬೇಕು ಎಂದು ತುಂಬ ಆಸೆಪಟ್ಟಳು. ಆದರೆ ಈ ವ್ಯವಸ್ಥೆಯಲ್ಲಿ ಅವಳಿಗೆ ಮಕ್ಕಳಾಗಲ್ಲ ಎಂದು ಗೊತ್ತಾದಾಗ ಅವಳ ಮನಸ್ಸು
ಛಿದ್ರಛಿದ್ರವಾಯಿತು. ಆಮೇಲೆ ಅವಳು ಮತ್ತು ಅವಳ ಗಂಡ ಒಂದು ಮಗುವನ್ನು ದತ್ತು ತೆಗೆದುಕೊಳ್ಳೋಣ ಎಂದು ತೀರ್ಮಾನಿಸಿದರು. ಆದರೂ ಅವಳಿಗೆ ಸಮಾಧಾನ ಆಗಲಿಲ್ಲ. “ದತ್ತು ತೆಗೆದುಕೊಳ್ಳುವುದು ಸ್ವಂತ ಮಗುವನ್ನು ಹೆರುವಂತೆ ಇರುವುದಿಲ್ಲ ಎಂದು ನನಗೆ ಗೊತ್ತು” ಅಂದಳು.8 ಒಬ್ಬ ಸ್ತ್ರೀ “ಮಕ್ಕಳನ್ನು ಹೆರುವ ಮೂಲಕ ಆಕೆ ಸುರಕ್ಷಿತವಾಗಿ ಇಡಲ್ಪಡುವಳು” ಎಂದು ಬೈಬಲ್ ಹೇಳುತ್ತದೆ. (1 ತಿಮೊ. 2:15) ಸ್ತ್ರೀಯೊಬ್ಬಳಿಗೆ ಮಕ್ಕಳಿರುವ ಕಾರಣದಿಂದ ಅವಳಿಗೆ ನಿತ್ಯಜೀವ ಸಿಗುತ್ತದೆ ಎಂದು ಈ ವಚನ ಹೇಳುತ್ತಿಲ್ಲ. ಹಾಗಾದರೆ ಇದರರ್ಥ ಏನು? ಮಕ್ಕಳನ್ನು, ಮನೆಯನ್ನು ನೋಡಿಕೊಳ್ಳಬೇಕಾದ ತಾಯಿಗೆ ಮಾಡಲು ತುಂಬ ಕೆಲಸಗಳು ಇರುತ್ತವೆ. ಇದರಿಂದ ಬೇರೆಯವರ ಬಗ್ಗೆ ಹರಟೆಮಾತಾಡಲಿಕ್ಕೆ, ತನಗೆ ಸಂಬಂಧಪಡದ ವಿಷಯಗಳಲ್ಲಿ ತಲೆಹಾಕಲಿಕ್ಕೆ ಅವಳಿಗೆ ಪುರುಸೊತ್ತು ಇರುವುದಿಲ್ಲ. (1 ತಿಮೊ. 5:13) ಈ ಅರ್ಥದಲ್ಲಿ ಸುರಕ್ಷಿತ ಆಗಿರುತ್ತಾಳೆ. ಆದರೂ ಅವಳ ವೈವಾಹಿಕ ಜೀವನದಲ್ಲಿ ಮತ್ತು ಕುಟುಂಬದಲ್ಲಿ ಬೇರೆ ರೀತಿಯ ಸಮಸ್ಯೆಗಳು ಇರಬಹುದು.
9. ಮದುವೆಯಾದವರಿಗೆ ಬೇರೆ ಯಾವ ಸಂಕಟ ಎದುರಾಗಬಹುದು?
9 ಮದುವೆಯಾದವರಲ್ಲಿ ಕೆಲವರು ಎದುರಿಸಬಹುದಾದ ಮತ್ತೊಂದು ಸಂಕಟ ಅವರ ಗಂಡ ಅಥವಾ ಹೆಂಡತಿಯ ಮರಣ. ಇಂಥ ಸನ್ನಿವೇಶವನ್ನು ತಾವು ಎದುರಿಸುತ್ತೇವೆ ಎಂದು ಅವರು ಯೋಚಿಸಿರುವುದಿಲ್ಲ. ಆದರೂ ಅನೇಕರು ಈ ನೋವನ್ನು ಸಹಿಸಿಕೊಳ್ಳಬೇಕಾಗಿ ಬರುತ್ತದೆ. ಕ್ರೈಸ್ತರಿಗೆ ಪುನರುತ್ಥಾನದಲ್ಲಿ ಬಲವಾದ ನಂಬಿಕೆ ಇರುವುದರಿಂದ ತುಂಬ ಸಾಂತ್ವನ ಸಿಗುತ್ತದೆ. (ಯೋಹಾ. 5:28, 29) ನಮ್ಮ ತಂದೆಯಾದ ಯೆಹೋವನು ತನ್ನ ವಾಕ್ಯದಲ್ಲಿ ಅನೇಕ ವಾಗ್ದಾನಗಳನ್ನು ಕೊಟ್ಟಿದ್ದಾನೆ. ಕಷ್ಟಗಳು ಎದುರಾದಾಗ ಈ ವಾಗ್ದಾನಗಳ ಬಗ್ಗೆ ಯೋಚಿಸಿದರೆ ನಮಗೆ ಸಾಂತ್ವನ ಸಿಗುತ್ತದೆ. ಹೀಗೆ ಸಾಂತ್ವನ ಪಡೆದ ಯೆಹೋವನ ಕೆಲವು ಸೇವಕರ ಉದಾಹರಣೆಗಳನ್ನು ಈಗ ನೋಡೋಣ. ಆ ಸಾಂತ್ವನದಿಂದ ಅವರಿಗೆ ಹೇಗೆ ಸಹಾಯವಾಯಿತು ಎಂದು ಚರ್ಚಿಸೋಣ.
ಸಂಕಟದ ಸಮಯದಲ್ಲಿ ಸಿಗುವ ಸಾಂತ್ವನ
10. ಹನ್ನಳಿಗೆ ಹೇಗೆ ಸಾಂತ್ವನ ಸಿಕ್ಕಿತು? (ಲೇಖನದ ಆರಂಭದ ಚಿತ್ರ ನೋಡಿ.)
10 ಎಲ್ಕಾನನ ಮುದ್ದಿನ ಮಡದಿಯಾಗಿದ್ದ ಹನ್ನಳಿಗೆ ಏನಾಯಿತು ನೋಡೋಣ. ಅವಳಿಗೆ ಮಕ್ಕಳು ಬೇಕು ಎಂಬ ಆಸೆ ಇದ್ದರೂ ಮಕ್ಕಳಾಗಲಿಲ್ಲ. ಆದರೆ ಅವಳ ಸವತಿಯಾದ ಪೆನಿನ್ನಳಿಗೆ ತುಂಬ ಮಕ್ಕಳಿದ್ದರು. (1 ಸಮುವೇಲ 1:4-7 ಓದಿ.) ಮಕ್ಕಳಿಲ್ಲ ಎಂದು ಕೊರಗುತ್ತಿದ್ದ ಹನ್ನಳಿಗೆ ಪೆನಿನ್ನ ಇನ್ನೂ ಕಷ್ಟ ಕೊಟ್ಟಳು. ಅವಳಿಗೆ ಮಗು ಇಲ್ಲ ಅನ್ನುವ ವಿಷಯವನ್ನು “ಪ್ರತಿವರ್ಷವೂ” ಎತ್ತಿ ಆಡುತ್ತಿದ್ದಳು. ಸಾಂತ್ವನ ಪಡೆಯಲು ಹನ್ನ ಏನು ಮಾಡಿದಳು? ಯೆಹೋವನಿಗೆ ಪ್ರಾರ್ಥಿಸಿದಳು. ಆತನ ಆರಾಧನಾ ಸ್ಥಳಕ್ಕೆ ಹೋಗಿ ಅಲ್ಲಿಯೂ ತುಂಬ ಹೊತ್ತು ಪ್ರಾರ್ಥಿಸಿದಳು. ತನಗೊಂದು ಮಗನನ್ನು ಕೊಡುವಂತೆ ಅಂಗಲಾಚಿ ಬೇಡಿದಳು. ಯೆಹೋವನು ಖಂಡಿತ ಸಹಾಯ ಮಾಡುತ್ತಾನೆಂದು ನಂಬಿದಳು. ಯೆಹೋವನ ಮುಂದೆ ತನ್ನ ಮನಸ್ಸಲ್ಲಿದ್ದ ದುಃಖವನ್ನೆಲ್ಲ ತೋಡಿಕೊಂಡ ಮೇಲೆ ಅವಳಿಗೆ ಸಮಾಧಾನವಾಯಿತು. “ಆ ಮೇಲೆ ಆಕೆಯ ಮೋರೆಯಲ್ಲಿ ದುಃಖವು ಕಾಣಲಿಲ್ಲ.” (1 ಸಮು. 1:12, 17, 18) ಯೆಹೋವನು ಅವಳಿಗೆ ಒಂದು ಮಗನನ್ನು ಕೊಡಬಹುದು ಅಥವಾ ಬೇರೆ ರೀತಿಯಲ್ಲಿ ಸಾಂತ್ವನ ಕೊಡಬಹುದು ಎಂದು ನಂಬಿದಳು.
11. ನಮಗೆ ಯಾವ ಸಹಾಯ ಇದೆ?
11 ನಾವು ಅಪರಿಪೂರ್ಣರಾಗಿರುವುದರಿಂದ ಮತ್ತು ಸೈತಾನನ ಲೋಕದಲ್ಲಿ ಜೀವಿಸುವುದರಿಂದ ಕಷ್ಟಸಂಕಟಗಳು ಬಂದೇ ಬರುತ್ತವೆ. (1 ಯೋಹಾ. 5:19) ಆದರೆ ಅದನ್ನು ನಿಭಾಯಿಸಲು ನಮಗೆ ಸಹಾಯ ಇದೆ. ‘ಸಕಲ ಸಾಂತ್ವನದ ದೇವರಾದ’ ಯೆಹೋವನಿಗೆ ನಾವು ಪ್ರಾರ್ಥಿಸಬೇಕು. ಹನ್ನ ಇದನ್ನೇ ಮಾಡಿದಳು. ತನ್ನ ಮನಸ್ಸಿನಲ್ಲಿ ಇರುವುದನ್ನೆಲ್ಲಾ ದೇವರಿಗೆ ಹೇಳಿಕೊಂಡು ಆತನ ಸಹಾಯಕ್ಕಾಗಿ ಬೇಡಿಕೊಂಡಳು. ಅದೇ ರೀತಿ ನಾವು ಸಹ ಕಷ್ಟಪಡುತ್ತಿರುವಾಗ, ನಮಗೆ ಹೇಗನಿಸುತ್ತಿದೆ ಎಂದು ಮೇಲಿಂದ ಮೇಲೆ ಹೇಳಿದರೆ ಸಾಕಾಗಲ್ಲ. ಯಾಚನೆ ಮಾಡಬೇಕು ಅಂದರೆ ಹೃದಯದಾಳದ ಅನಿಸಿಕೆಗಳನ್ನೆಲ್ಲಾ ಯೆಹೋವನ ಹತ್ತಿರ ಹೇಳಿಕೊಳ್ಳಬೇಕು.—ಫಿಲಿ. 4:6, 7.
12. ಸಂಕಟಗಳಿದ್ದರೂ ಸಂತೋಷವಾಗಿರಲು ಅನ್ನಳಿಗೆ ಯಾವುದು ಸಹಾಯ ಮಾಡಿತು?
12 ನಮಗೆ ಮಕ್ಕಳಿಲ್ಲ ಅಥವಾ ನಾವು ಪ್ರೀತಿಸುವ ಒಬ್ಬರು ತೀರಿಕೊಂಡರು ಎಂಬ ಕಾರಣದಿಂದ ನಮಗೆ ತುಂಬ ದುಃಖ ಆಗುತ್ತಿರಬಹುದು. ನಮ್ಮ ಬದುಕು ಬರಡಾಗಿದೆ ಎಂದು ಅನಿಸಬಹುದು. ಆದರೆ ಅನೇಕ ವಿಷಯಗಳಿಂದ ನಮಗೆ ಸಾಂತ್ವನ ಸಿಗುತ್ತದೆ. ಯೇಸುವಿನ ದಿನದಲ್ಲಿದ್ದ ಅನ್ನಳ ಉದಾಹರಣೆ ನೋಡಿ. ಅವಳಿಗೆ ಮದುವೆಯಾದ ಏಳು ವರ್ಷದಲ್ಲೇ ಗಂಡ ತೀರಿಕೊಂಡನು. ಲೂಕ 2:37) ಇದರಿಂದ ಅವಳಿಗೆ ಸಾಂತ್ವನ ಸಿಕ್ಕಿತು. ಸಂಕಟಗಳಿದ್ದರೂ ಸಂತೋಷವಾಗಿರಲು ಸಹಾಯವಾಯಿತು.
ಮಕ್ಕಳೂ ಇರಲಿಲ್ಲ ಎಂದು ತೋರುತ್ತದೆ. ಆದರೆ ಅವಳಿಗೆ ಸಹಾಯ ಮಾಡಿದ ವಿಷಯ ಯಾವುದು? “ಅವಳು ದೇವಾಲಯವನ್ನು ಬಿಟ್ಟುಹೋಗದೆ” ಇದ್ದಳು ಎಂದು ಬೈಬಲ್ ಹೇಳುತ್ತದೆ. ಅವಳಿಗೆ 84 ವರ್ಷ ಪ್ರಾಯವಾಗಿದ್ದರೂ ಪ್ರಾರ್ಥಿಸಲು ಮತ್ತು ಯೆಹೋವನನ್ನು ಆರಾಧಿಸಲು ದೇವಾಲಯಕ್ಕೆ ಹೋಗುತ್ತಿದ್ದಳು. (13. ಸ್ವಂತದವರಿಂದಲೇ ನಮಗೆ ನೋವಾದಾಗ ನಿಜ ಸ್ನೇಹಿತರಿಂದ ಹೇಗೆ ಸಾಂತ್ವನ ಸಿಗುತ್ತದೆ?
13 ಸಭೆಯಲ್ಲಿರುವ ನಿಜ ಸ್ನೇಹಿತರಿಂದ ಸಹ ನಮಗೆ ಸಾಂತ್ವನ ಸಿಗುತ್ತದೆ. (ಜ್ಞಾನೋ. 18:24) ಪೋಲಾ ಎಂಬ ಸಹೋದರಿಗೆ ಐದು ವರ್ಷ ಇದ್ದಾಗ ಅವಳ ತಾಯಿ ಸತ್ಯ ಬಿಟ್ಟುಹೋದರು. ಇದರಿಂದ ಪೋಲಾಗೆ ತುಂಬ ದುಃಖವಾಯಿತು. ಈ ಸಂಕಟವನ್ನು ತಾಳಿಕೊಳ್ಳಲು ಕಷ್ಟವಾಯಿತು. ಆದರೆ ಆ್ಯನ್ ಎಂಬ ಪಯನೀಯರ್ ಸಹೋದರಿ ಅವಳನ್ನು ಪ್ರೋತ್ಸಾಹಿಸಿ ಪ್ರೀತಿಯಿಂದ ಆಸಕ್ತಿ ತೋರಿಸಿದರು. ಪೋಲಾ ಹೇಳುವುದು: “ಆ್ಯನ್ ನನ್ನ ಸಂಬಂಧಿ ಅಲ್ಲದಿದ್ದರೂ ಅವರು ತೋರಿಸಿದ ಪ್ರೀತಿ, ಕಾಳಜಿಯಿಂದ ನನಗೆ ತುಂಬ ಸಹಾಯವಾಯಿತು. ನಾನು ಯೆಹೋವನ ಸೇವೆ ಮಾಡುತ್ತಾ ಇರಲು ಸಹಾಯ ಸಿಕ್ಕಿತು.” ಆಮೇಲೆ ಅವಳ ತಾಯಿ ಸಭೆಗೆ ಮರಳಿ ಬಂದರು. ಇದರಿಂದ ಅವಳಿಗೆ ತುಂಬ ಸಂತೋಷವಾಗಿದೆ. ಯೆಹೋವನ ಸೇವೆಯನ್ನು ಮುಂದುವರಿಸಲು ಪೋಲಾಗೆ ಸಹಾಯ ಮಾಡಿದ್ದರಿಂದ ಆ್ಯನ್‌ಗೂ ಸಂತೋಷ.
14. ನಾವು ಬೇರೆಯವರನ್ನು ಸಂತೈಸುವಾಗ ನಮಗೆ ಯಾವ ಪ್ರಯೋಜನ ಸಿಗುತ್ತದೆ?
14 ನಾವು ಬೇರೆಯವರಿಗೆ ಒಳ್ಳೇದು ಮಾಡುವುದರಲ್ಲಿ ನಿರತರಾಗಿರುವಾಗ ಅನೇಕ ಸಲ ನಮ್ಮ ಸಮಸ್ಯೆಗಳನ್ನು ಮರೆತುಬಿಡುತ್ತೇವೆ. ಉದಾಹರಣೆಗೆ ನಮ್ಮ ಫಿಲಿ. 2:4) ಅಪೊಸ್ತಲ ಪೌಲನು ಇದನ್ನೇ ಮಾಡಿದನು. “ಒಬ್ಬ ತಾಯಿಯು ತನ್ನ ಮಕ್ಕಳಿಗೆ ಹಾಲುಣಿಸಿ ಪೋಷಿಸುವಂತೆಯೇ” ಅವನು ಬೇರೆಯವರ ಕಾಳಜಿ ವಹಿಸಿದನು. “ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ” ಪೌಲ ತನ್ನ ಸಹೋದರರನ್ನು ಸಂತೈಸಿ ಪ್ರೋತ್ಸಾಹಿಸಿದನು.—1 ಥೆಸಲೊನೀಕ 2:7, 11, 12 ಓದಿ.
ಸಹೋದರಿಯರು, ಅವರಿಗೆ ಮದುವೆ ಆಗಿರಲಿ ಇಲ್ಲದಿರಲಿ, ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ತೊಡಗುವಾಗ ತಾವು ಯೆಹೋವನ ಜೊತೆ ಕೆಲಸ ಮಾಡುತ್ತಿದ್ದೇವೆ, ಆತನ ಚಿತ್ತ ಮಾಡುತ್ತಿದ್ದೇವೆಂಬ ವಿಚಾರ ಅವರ ಮನಸ್ಸಿನಲ್ಲಿರುತ್ತದೆ. ಇದು ಅವರಿಗೆ ಸಂತೋಷ ತರುತ್ತದೆ. ನಿಜವೇನೆಂದರೆ, ಸುವಾರ್ತೆ ಸಾರುವ ಮೂಲಕ ನಾವೆಲ್ಲರೂ ಬೇರೆಯವರ ಮೇಲೆ ಕಾಳಜಿ ಇದೆಯೆಂದು ತೋರಿಸುತ್ತೇವೆ. ನಮ್ಮ ಸಹೋದರ ಸಹೋದರಿಯರಿಗೆ ನಾವು ದಯೆ ತೋರಿಸುವಾಗ ಅವರಿಗೆ ಹತ್ತಿರವಾಗುತ್ತೇವೆ. (ಕುಟುಂಬದವರಿಂದ ಸಿಗುವ ಸಾಂತ್ವನ
15. ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸುವ ಜವಾಬ್ದಾರಿ ಯಾರ ಮೇಲಿದೆ?
15 ಸಭೆಯಲ್ಲಿರುವ ಕುಟುಂಬಗಳಿಗೆ ನಾವು ಹೇಗೆ ಸಾಂತ್ವನ ಕೊಡಬಹುದು? ಹೊಸದಾಗಿ ಸತ್ಯಕ್ಕೆ ಬಂದವರು ತಮ್ಮ ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸಲು ಸಹಾಯ ಮಾಡುವಂತೆ ಅಥವಾ ಅವರೊಂದಿಗೆ ಬೈಬಲ್ ಅಧ್ಯಯನ ಮಾಡುವಂತೆ ಕೆಲವೊಮ್ಮೆ ನಮ್ಮನ್ನು ಕೇಳಿಕೊಳ್ಳಬಹುದು. ಮಕ್ಕಳಿಗೆ ಕಲಿಸುವ, ತರಬೇತಿ ಕೊಡುವ ಜವಾಬ್ದಾರಿಯನ್ನು ಯೆಹೋವನು ಹೆತ್ತವರಿಗೆ ಕೊಟ್ಟಿದ್ದಾನೆಂದು ಬೈಬಲ್ ಹೇಳುತ್ತದೆ. (ಜ್ಞಾನೋ. 23:22; ಎಫೆ. 6:1-4) ಮಕ್ಕಳಿಗೆ ಕಲಿಸಲು ಕೆಲವು ಹೆತ್ತವರಿಗೆ ಬೇರೆಯವರ ಸಹಾಯ ಬೇಕಿರುತ್ತದೆ. ಆದರೆ ಇದರರ್ಥ ಹೆತ್ತವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಹುದು ಎಂದಲ್ಲ. ಅವರು ತಮ್ಮ ಮಕ್ಕಳೊಂದಿಗೆ ದಿನಾಲೂ ಮಾತಾಡಬೇಕು.
16. ಬೇರೆಯವರ ಮಕ್ಕಳಿಗೆ ಸಹಾಯ ಮಾಡುವಾಗ ನಾವು ಏನನ್ನು ಮನಸ್ಸಿನಲ್ಲಿಡಬೇಕು?
16 ಒಬ್ಬ ತಂದೆ ಅಥವಾ ತಾಯಿ ತನ್ನ ಮಗ ಅಥವಾ ಮಗಳೊಂದಿಗೆ ಬೈಬಲ್ ಅಧ್ಯಯನ ಮಾಡುವಂತೆ ನಿಮ್ಮನ್ನು ಕೇಳಿದಾಗ ನೀವು ಒಪ್ಪಿಕೊಂಡರೂ, ಹೆತ್ತವರಿಗಿರುವ ಅಧಿಕಾರ ನಿಮಗಿಲ್ಲ ಅನ್ನುವುದನ್ನು ಮನಸ್ಸಿನಲ್ಲಿಡಿ. ಕೆಲವೊಮ್ಮೆ ಸತ್ಯದಲ್ಲಿ ಇಲ್ಲದಿರುವ ಹೆತ್ತವರ ಮಕ್ಕಳೊಂದಿಗೂ ನಾವು ಅಧ್ಯಯನ ಮಾಡಬೇಕಾಗಿ ಬರಬಹುದು. ನಾವು ಬೇರೆಯವರ ಮಕ್ಕಳೊಂದಿಗೆ ಅಧ್ಯಯನ ಮಾಡುವಾಗ, ಅವರ ಮನೆಯಲ್ಲಿ ಅವರ ಹೆತ್ತವರು ಅಥವಾ ಬೇರೊಬ್ಬ ಪ್ರೌಢ ಕ್ರೈಸ್ತನು ಜೊತೆಯಲ್ಲಿರುವಾಗ ಮಾಡಬೇಕು ಅಥವಾ ಇತರರು ನೋಡಲು ಸಾಧ್ಯವಿರುವ ಸ್ಥಳದಲ್ಲಿ ಕೂತು ಅಧ್ಯಯನ ಮಾಡಬೇಕು. ಏಕೆಂದರೆ ಯಾರೂ ತಪ್ಪು ತಿಳಿಯಲು ನಾವು ಅವಕಾಶ ಕೊಡಬಾರದು. ಸಮಯಾನಂತರ ಹೆತ್ತವರೇ ತಮ್ಮ ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸಲು ಶಕ್ತರಾಗಬಹುದು.
17. ಮಕ್ಕಳಿಂದ ಕುಟುಂಬಕ್ಕೆ ಹೇಗೆ ಸಾಂತ್ವನ ಸಿಗುತ್ತದೆ?
17 ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಂಡಿರುವ ಮಕ್ಕಳಿಂದ ಕುಟುಂಬದವರಿಗೆ ಸಾಂತ್ವನ ಮತ್ತು ಪ್ರೋತ್ಸಾಹ ಸಿಗುತ್ತದೆ. ಹೇಗೆ? ಹೆತ್ತವರಿಗೆ ಗೌರವ ಕೊಡುವ ಮೂಲಕ ಮತ್ತು ಪ್ರಾಯೋಗಿಕ ವಿಧಗಳಲ್ಲಿ ಅವರಿಗೆ ಸಹಾಯ ಮಾಡುವ ಮೂಲಕ. ಮಕ್ಕಳು ಯೆಹೋವನಿಗೆ ನಂಬಿಗಸ್ತರಾಗಿ ಇರುವಾಗ ಸಹ ಕುಟುಂಬದವರಿಗೆ ತುಂಬ ಪ್ರೋತ್ಸಾಹ ಸಿಗುತ್ತದೆ. ಜಲಪ್ರಳಯಕ್ಕೆ ಮುಂಚೆ ಲೆಮೆಕನು ಯೆಹೋವನನ್ನು ಆರಾಧಿಸುತ್ತಿದ್ದನು. ಅವನು ತನ್ನ ಮಗನಾದ ನೋಹನ ಬಗ್ಗೆ ಹೀಗೆ ಹೇಳಿದನು: “ಯೆಹೋವನು ಶಪಿಸಿದ ಭೂಮಿಯಿಂದ ನಮಗೆ ಉಂಟಾದ ಕೈಕಷ್ಟದಲ್ಲಿಯೂ ಶ್ರಮೆಯಲ್ಲಿಯೂ ಈ ಮಗನು ನಮ್ಮನ್ನು ಉಪಶಮನಗೊಳಿಸುವನು.” ಜಲಪ್ರಳಯದ ನಂತರ ಯೆಹೋವನು ಭೂಮಿಯ ಮೇಲಿದ್ದ ಶಾಪವನ್ನು ತೆಗೆದಾಗ ಈ ಪ್ರವಾದನೆ ನೆರವೇರಿತು. (ಆದಿ. 5:29; 8:21) ಇಂದು ಯೆಹೋವನಿಗೆ ನಂಬಿಗಸ್ತರಾಗಿರುವ ಮಕ್ಕಳಿಂದ ಕುಟುಂಬಕ್ಕೆ ಸಾಂತ್ವನವೂ ಸಿಗುತ್ತದೆ. ಈಗ ಮತ್ತು ಮುಂದಕ್ಕೆ ಬರುವ ಸಂಕಟಗಳನ್ನು ತಾಳಿಕೊಳ್ಳಲು ಕುಟುಂಬದಲ್ಲಿರುವ ಎಲ್ಲರಿಗೂ ಈ ಮಕ್ಕಳು ಸಹಾಯ ಮಾಡಬಹುದು.
18. ಕಷ್ಟಸಂಕಟಗಳು ಬಂದಾಗಲೂ ತಾಳಿಕೊಳ್ಳಲು ಹೇಗೆ ಸಹಾಯ ಸಿಗುತ್ತದೆ?
18 ಇಂದು ಯೆಹೋವನ ಜನರು ಪ್ರಾರ್ಥನೆ ಮಾಡುವುದರಿಂದ, ಬೈಬಲಲ್ಲಿರುವ ವ್ಯಕ್ತಿಗಳ ಬಗ್ಗೆ ಧ್ಯಾನಿಸುವುದರಿಂದ, ಸಭೆಯಲ್ಲಿರುವ ಆಪ್ತ ಸ್ನೇಹಿತರಿಂದ ಸಾಂತ್ವನ ಪಡೆಯುತ್ತಿದ್ದಾರೆ. (ಕೀರ್ತನೆ 145:18, 19 ಓದಿ.) ಯೆಹೋವನು ನಮಗೆ ಸಾಂತ್ವನ ಕೊಡಲು ಸದಾ ಸಿದ್ಧನಾಗಿದ್ದಾನೆ. ನಮಗೆ ಅದೆಂಥ ಕಷ್ಟ ಸಂಕಟ ಬಂದರೂ ತಾಳಿಕೊಳ್ಳಲು ಖಂಡಿತ ಸಹಾಯ ಮಾಡುತ್ತಾನೆ.