ಕಾವಲಿನಬುರುಜು - ಅಧ್ಯಯನ ಆವೃತ್ತಿ ಜನವರಿ 2017

2017ರ ಫೆಬ್ರವರಿ 27ರಿಂದ ಏಪ್ರಿಲ್‌ 2ರ ವರೆಗಿನ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು

ಬೇರೆ ದೇಶಕ್ಕೆ ಹೋಗಿ ಸುವಾರ್ತೆ ಸಾರಲು ಕೆಲವು ಸಹೋದರಿಯರಿಗೆ ಹಿಂಜರಿಕೆ, ಭಯ ಇತ್ತು. ಆದರೆ ಅವರು ಹೇಗೆ ಧೈರ್ಯವಾಗಿ ಹೋಗಿ ಸೇವೆ ಮಾಡಿದರು? ಯಾವ ಪ್ರಯೋಜನ ಪಡೆದಿದ್ದಾರೆ?

‘ಯೆಹೋವನಲ್ಲಿ ಭರವಸೆ ಇಟ್ಟು ಒಳ್ಳೇದನ್ನು ಮಾಡಿ’

ನಮ್ಮಿಂದ ಆಗದಿರುವುದನ್ನು ಯೆಹೋವನು ನಮಗೋಸ್ಕರ ಮಾಡುತ್ತಾನೆ. ಆದರೆ ನಮ್ಮಿಂದ ಆಗುವುದನ್ನು ನಾವು ಮಾಡಬೇಕು ಎಂದು ಆತನು ಇಷ್ಟಪಡುತ್ತಾನೆ. ನಮ್ಮಿಂದ ಆಗುವ ಕೆಲಸಗಳನ್ನು ಮಾಡಲು ಮತ್ತು ಆಗದಿರುವುದನ್ನು ದೇವರಿಗೆ ಬಿಟ್ಟುಬಿಡಲು ನಮಗೆ 2017⁠ರ ವರ್ಷವಚನ ಹೇಗೆ ಸಹಾಯ ಮಾಡುತ್ತದೆ?

ಇಚ್ಛಾಸ್ವಾತಂತ್ರ್ಯ ಎಂಬ ಅದ್ಭುತ ವರ

ಇಚ್ಛಾಸ್ವಾತಂತ್ರ್ಯ ಅಂದರೆ ಏನು? ಇಚ್ಛಾಸ್ವಾತಂತ್ರ್ಯದ ಬಗ್ಗೆ ಬೈಬಲಿನಲ್ಲಿ ಯಾವ ಮಾಹಿತಿ ಇದೆ? ಬೇರೆಯವರು ತೆಗೆದುಕೊಳ್ಳುವ ತೀರ್ಮಾನಗಳನ್ನು ನಾವು ಗೌರವಿಸುತ್ತೇವೆ ಎಂದು ಹೇಗೆ ತೋರಿಸಬಹುದು?

ವಿನಯಶೀಲತೆಗೆ ಈಗಲೂ ಬೆಲೆ ಇದೆಯಾ?

ವಿನಯಶೀಲತೆ ಅಂದರೆ ಏನು? ವಿನಯಶೀಲತೆಗೂ ದೀನತೆಗೂ ಇರುವ ಸಂಬಂಧವೇನು? ಇದನ್ನು ನಾವೆಲ್ಲರೂ ಯಾಕೆ ಬೆಳೆಸಿಕೊಳ್ಳಬೇಕು?

ಯಾವುದೇ ಸನ್ನಿವೇಶದಲ್ಲಿ ವಿನಯಶೀಲತೆ ತೋರಿಸಸಾಧ್ಯ

ಸನ್ನಿವೇಶಗಳು ಬದಲಾದಾಗ, ಬೇರೆಯವರು ನಮ್ಮನ್ನು ಟೀಕಿಸುವಾಗ ಅಥವಾ ಹೊಗಳುವಾಗ, ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ನಾವು ಹೇಗೆ ವಿನಯಶೀಲತೆ ತೋರಿಸಬಹುದು?

ನಂಬಿಗಸ್ತ ಪುರುಷರಿಗೆ ಜವಾಬ್ದಾರಿ ವಹಿಸಿಕೊಡಿ

ಯೆಹೋವನ ಸಂಘಟನೆಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ದೊಡ್ಡವರು ಚಿಕ್ಕ ವಯಸ್ಸಿನವರಿಗೆ ಹೇಗೆ ಸಹಾಯ ಮಾಡಬಹುದು? ಹಲವಾರು ವರ್ಷಗಳಿಂದ ಮುಂದಾಳತ್ವ ವಹಿಸಿಕೊಂಡು ಬಂದಿರುವ ಸಹೋದರರಿಗೆ ಚಿಕ್ಕ ವಯಸ್ಸಿನವರಿಗೆ ಹೇಗೆ ಗೌರವ ತೋರಿಸಬಹುದು?

ನಿಮಗೆ ಗೊತ್ತಿತ್ತಾ?

ಪುರಾತನ ಕಾಲಗಳಲ್ಲಿ ಬೆಂಕಿಯನ್ನು ಹೇಗೆ ಸಾಗಿಸುತ್ತಿದ್ದರು?