ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೇದಭಾವ—ಈ ಸೋಂಕು ನಿಮಗೆ ತಗಲಿದೆಯಾ?

ಭೇದಭಾವ—ಈ ಸೋಂಕು ನಿಮಗೆ ತಗಲಿದೆಯಾ?

ಭೇದಭಾವ ಅನ್ನೋದು ಒಂದು ರೋಗ ಇದ್ದಂತೆ. ಅದ್ರಿಂದ ತುಂಬ ಹಾನಿ ಆಗುತ್ತೆ. ಈ ರೋಗ ತಮಗೆ ಬಂದಿದೆ ಅಂತ ಜನ್ರಿಗೆ ಗೊತ್ತೇ ಆಗಲ್ಲ.

ಜನ್ರು ಭೇದಭಾವ ಮಾಡೋಕೆ ಒಂದೇ ಕಾರಣ ಇಲ್ಲ ಹಲವಾರು ಕಾರಣಗಳಿವೆ. ಕೆಲವ್ರು ದೇಶ, ಭಾಷೆ, ಜಾತಿ ನೋಡಿ ಭೇದಭಾವ ಮಾಡ್ತಾರೆ. ಇನ್ನು ಕೆಲವ್ರು ಜನ್ರ ವಯಸ್ಸು, ಬಣ್ಣ, ವಿದ್ಯಾಭ್ಯಾಸ, ತೋರಿಕೆ, ಸ್ಥಾನಮಾನ, ಆಸ್ತಿಪಾಸ್ತಿ ನೋಡಿ ಭೇದಭಾವ ಮಾಡ್ತಾರೆ. ಇಷ್ಟೆಲ್ಲಾ ಮಾಡಿದ್ರು ಜನ್ರಿಗೆ ತಾವು ಭೇದಭಾವ ಮಾಡ್ತಿಲ್ಲ ಅನ್ಸುತ್ತೆ.

ನಿಮಗೇನಾದ್ರು ಈ ಕಾಯಿಲೆ ಬಂದಿರಬಹುದಾ? ಯಾರಾದ್ರು ಬೇಧಭಾವ ಮಾಡಿದ್ರೆ ಅದನ್ನ ಬೇಗ ಕಂಡುಹಿಡಿತೀವಿ. ಆದ್ರೆ ಕೆಲವೊಮ್ಮೆ ನಾವೇ ಬೇಧಭಾವ ಮಾಡ್ತಾ ಇದ್ದೀವಿ ಅಂತ ನಮಗೆ ಗೊತ್ತೇ ಆಗಲ್ಲ. ನಿಜ ಹೇಳಬೇಕಂದ್ರೆ ಒಂದಲ್ಲಾ ಒಂದು ರೀತೀಲಿ ನಾವೆಲ್ಲರೂ ಬೇಧಭಾವ ಮಾಡ್ತೀವಿ. “ಒಂದು ಗುಂಪಿನ ಬಗ್ಗೆ ಮೊದಲಿಂದನೂ ತಪ್ಪಭಿಪ್ರಾಯ ಇರೋ ಜನ್ರು ಆ ಗುಂಪಿನ ಒಬ್ಬ ವ್ಯಕ್ತಿನ ಭೇಟಿಯಾದಾಗ ಭೇದಭಾವ ಮಾಡ್ತಾರೆ. ಅದೂ ಅಲ್ಲದೆ ತಾವು ಭೇದಭಾವ ಮಾಡ್ತಾ ಇದ್ದೀವಿ ಅಂತ ಅವ್ರಿಗೆ ಗೊತ್ತೇ ಆಗಲ್ಲ” ಅಂತ ಸಮಾಜ ವಿಜ್ಞಾನದ ಪ್ರೊಫೆಸರ್‌ ಆದ ಡೇವಿಡ್‌ ವಿಲಿಯಮ್ಸ್‌ ಹೇಳ್ತಾರೆ.

ದಕ್ಷಿಣ ಪೂರ್ವದ ಒಂದು ಯುರೋಪಿಯನ್‌ ದೇಶದಲ್ಲಿರೋ ಯೋವಿಟಸ್‌ ಅನ್ನೋ ವ್ಯಕ್ತಿಗೂ ಇದೇ ಅನುಭವ ಆಯ್ತು. ಅವನ ದೇಶದಲ್ಲಿರೋ ಜನ್ರಿಗೆ ಒಂದು ಜಾತಿಯವರು ಅಂದ್ರೆ ಆಗ್ತಿರಲಿಲ್ಲ. ಇದ್ರ ಬಗ್ಗೆ ಯೋವಿಟಸ್‌ ಹೀಗೆ ಹೇಳ್ತಾನೆ: “ಆ ಜಾತೀಲಿ ಇರೋರು ಯಾರೂ ಒಳ್ಳೆಯವರಲ್ಲ ಅಂತ ನಾನು ಮೊದಲಿಂದನೂ ಅನ್ಕೊಂಡಿದ್ದೆ. ಭೇದಭಾವ ಮಾಡ್ತಿದ್ದೀನಿ ಅನ್ನೋದು ನಂಗೆ ಗೊತ್ತೇ ಆಗಲಿಲ್ಲ. ಆ ಜನ್ರು ಇರೋದೆ ಹಾಗೆ ಅನ್ಕೊಂಡಿದ್ದೆ.”

ಭೇದಭಾವನ ತೆಗೆದುಹಾಕೋಕೆ ಸರ್ಕಾರ ಹಲವಾರು ನಿಯಮ ಕಾಯ್ದೆಗಳನ್ನ ಮಾಡಿದೆ. ಏನೇ ಮಾಡಿದ್ರು ಭೇದಭಾವನ ತೆಗೆದುಹಾಕೋಕೆ ಆಗಿಲ್ಲ. ಯಾಕಂದ್ರೆ ಒಬ್ಬ ವ್ಯಕ್ತಿ ಭೇದಭಾವ ಮಾಡ್ತಾ ಯಾರಿಗಾದ್ರು ಹಾನಿ ಮಾಡಿದ್ರೆ ಅದಕ್ಕೆ ಶಿಕ್ಷೆ ಇದೆ. ಆದ್ರೆ ಅವನು ತನ್ನ ಮನಸ್ಸಿನಲ್ಲಿ ಭೇದಭಾವ ಮಾಡಿದ್ರೆ ಅದಕ್ಕೆ ಶಿಕ್ಷೆ ಇಲ್ಲ. ಕಾನೂನಿಗೂ ಏನು ಮಾಡಕ್ಕಾಗಲ್ಲ. ಹಾಗಾದ್ರೆ ಭೇದಭಾವನ ತೆಗೆದುಹಾಕೋಕೆ ಆಗೋದೆ ಇಲ್ವಾ? ಈ ಕಾಯಿಲೆಗೆ ಔಷಧಿನೇ ಇಲ್ವಾ?

ಈ ಪತ್ರಿಕೆಯಲ್ಲಿ ಐದು ಸಲಹೆಗಳ ಬಗ್ಗೆ ನಾವು ನೋಡೋಣ. ಇದನ್ನ ಪಾಲಿಸಿ ತುಂಬ ಜನ ಭೇದಭಾವ ಮಾಡೋದನ್ನ ಬಿಟ್ಟುಬಿಟ್ಟಿದ್ದಾರೆ.