ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಿ

3. ಪ್ರಯತ್ನ ಮಾಡುತ್ತಾ ಇರಿ

3. ಪ್ರಯತ್ನ ಮಾಡುತ್ತಾ ಇರಿ

ಒಂದು ಒಳ್ಳೇ ಅಭ್ಯಾಸ ಬೆಳೆಸಿಕೊಳ್ಳಲು ತುಂಬ ದಿನ ಹಿಡಿಯುತ್ತೆ ಅಂತ ಜನ ಹೇಳ್ತಾರೆ. ಆದರೆ ನಿಜ ಏನೆಂದರೆ ಕೆಲವರಿಗೆ ಸ್ವಲ್ಪ ಸಮಯ ಹಿಡಿದರೆ ಮತ್ತೆ ಕೆಲವರಿಗೆ ತುಂಬಾ ಸಮಯ ಹಿಡಿಯಬಹುದು. ಹಾಗಂತ ಸುಮ್ಮನೆ ಕೈಕಟ್ಟಿ ಕೂರಬೇಕಾ?

ವಾರದಲ್ಲಿ ಮೂರು ಸಲ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಅಂತ ನೀವು ನಿರ್ಣಯಿಸಿದ್ದೀರಿ ಎಂದು ಭಾವಿಸಿ.

  • ಮೊದಲನೇ ವಾರ ಅಂದುಕೊಂಡಂತೆ ಮಾಡುತ್ತೀರ.

  • ಎರಡನೇ ವಾರದಲ್ಲಿ ಒಂದು ದಿನ ಮಾಡಲು ತಪ್ಪುತ್ತೀರ.

  • ಮೂರನೇ ವಾರ ತಪ್ಪದೇ ಮಾಡುತ್ತೀರ.

  • ನಾಲ್ಕನೇ ವಾರದಲ್ಲಿ ಕಷ್ಟಪಟ್ಟು ಒಂದು ದಿನ ಮಾತ್ರ ವ್ಯಾಯಾಮ ಮಾಡುತ್ತೀರ.

  • ಐದನೇ ವಾರದಲ್ಲಿ ಮೂರೂ ದಿನ ವ್ಯಾಯಾಮ ಮಾಡುತ್ತೀರ. ಅಲ್ಲಿಂದ ನಿಮಗೆ ಅದು ರೂಢಿಯಾಗುತ್ತದೆ.

ನೋಡಿದ್ರಾ, ಒಂದು ಅಭ್ಯಾಸವನ್ನು ಮೈಗೂಡಿಸಿಕೊಳ್ಳಲು ಐದು ವಾರಗಳು ಹಿಡಿಯಿತು. ಇದು ತುಂಬಾ ಸಮಯ ಅಂತ ನಿಮಗನಿಸಬಹುದು. ಆದರೆ ಅದು ರೂಢಿಯಾದ ಮೇಲೆ ‘ಒಂದು ಒಳ್ಳೇ ಅಭ್ಯಾಸವನ್ನು ಬೆಳೆಸಿಕೊಂಡಿದ್ದೇನೆ’ ಎಂಬ ತೃಪ್ತಿ ನಿಮಗಿರುತ್ತದೆ.

ಬೈಬಲ್‌ ತತ್ವ: “ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು.”ಜ್ಞಾನೋಕ್ತಿ 24:16.

ನಾವು ಎಷ್ಟು ಸಲ ಬಿದ್ದೆವೆನ್ನುವುದು ಮುಖ್ಯವಲ್ಲ, ಎಷ್ಟು ಸಲ ಮತ್ತೆ ಎದ್ದು ನಿಲ್ಲುತ್ತೇವೆ ಅನ್ನೋದೇ ಮುಖ್ಯ. ಹಾಗಾಗಿ ಪ್ರಯತ್ನ ಮಾಡುತ್ತಾ ಇರುವಂತೆ ಬೈಬಲ್‌ ನಮ್ಮನ್ನು ಉತ್ತೇಜಿಸುತ್ತದೆ.

ನಾವು ಎಷ್ಟು ಸಲ ಬಿದ್ದೆವೆನ್ನುವುದು ಮುಖ್ಯವಲ್ಲ, ಎಷ್ಟು ಸಲ ಮತ್ತೆ ಎದ್ದು ನಿಲ್ಲುತ್ತೇವೆ ಅನ್ನೋದೇ ಮುಖ್ಯ

ನೀವೇನು ಮಾಡಬಹುದು?

  • ಒಂದು ಸಲ ಮಾಡಲು ಆಗದೇ ಇದ್ದ ಮಾತ್ರಕ್ಕೆ ‘ನನ್ನಿಂದ ಯಾವತ್ತೂ ಆಗುವುದೇ ಇಲ್ಲ’ ಅಂತ ನೆನಸಬೇಡಿ. ಗುರಿ ಮುಟ್ಟುವಾಗ ಕೆಲವು ಸಮಸ್ಯೆಗಳು ಬಂದೇ ಬರುತ್ತವೆ.

  • ಗುರಿ ಸಾಧಿಸಿದ ಸಮಯದ ಬಗ್ಗೆ ಯೋಚಿಸಿ. ಉದಾಹರಣೆಗೆ, ನಿಮ್ಮ ಮಕ್ಕಳೊಟ್ಟಿಗೆ ಪ್ರೀತಿಯಿಂದ ನಡೆದುಕೊಳ್ಳಲು ನೀವು ಪ್ರಯತ್ನಿಸುತ್ತಿರುವುದಾದರೆ ಹೀಗೆ ಕೇಳಿಕೊಳ್ಳಿ: ‘ನನ್ನ ಮಕ್ಕಳ ಮೇಲೆ ನನಗೆ ಕಿರಿಚಾಡಬೇಕು ಅಂತ ಅನಿಸಿದರೂ ಕಿರಿಚಾಡದೇ ಇದ್ದದ್ದು ಯಾವಾಗ? ಆಗ ಸಮಾಧಾನದಿಂದ ಇರುವುದಕ್ಕೆ ನಾನೇನು ಮಾಡಿದೆ? ಮುಂದೆ ಕೂಡ ಹೀಗೆ ಮಾಡಲು ಏನು ಮಾಡಬಹುದು?’ ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಸೋಲನ್ನು ಮರೆತು ಮುಂದೆ ಸಾಗಲು ಸಹಾಯ ಮಾಡುತ್ತದೆ.

ಚಿಂತೆಗಳನ್ನು ನಿಭಾಯಿಸಲು, ಸಂತೋಷಕರ ಕುಟುಂಬ ಜೀವನ ನಡೆಸಲು ಮತ್ತು ನಿಜ ಸಂತೋಷವನ್ನು ಪಡೆದುಕೊಳ್ಳಲು ಬೈಬಲ್‌ ತತ್ವಗಳು ಸಹಾಯ ಮಾಡುತ್ತವೆ. ಅವುಗಳ ಬಗ್ಗೆ ತಿಳಿಯಲು ನಿಮಗೆ ಇಷ್ಟ ಇದೆಯಾ? ಯೆಹೋವನ ಸಾಕ್ಷಿಗಳಲ್ಲಿ ಒಬ್ಬರನ್ನು ಭೇಟಿ ಮಾಡಿ, ಇಲ್ಲವೆ jw.org ವೆಬ್‌ಸೈಟಿಗೆ ಭೇಟಿ ನೀಡಿ. ▪ (g16-E No. 4)