ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಿ

1. ನಿಮ್ಮ ಇತಿಮಿತಿಗಳನ್ನು ತಿಳಿದುಕೊಳ್ಳಿ

1. ನಿಮ್ಮ ಇತಿಮಿತಿಗಳನ್ನು ತಿಳಿದುಕೊಳ್ಳಿ

ಎಲ್ಲವನ್ನು ಒಂದೇ ಸಾರಿ ಬದಲಾಯಿಸಿಕೊಳ್ಳಬೇಕು ಅಂತ ನಿಮಗೆ ಅನಿಸಬಹುದು. ಉದಾಹರಣೆಗೆ, ‘ಈ ವಾರದಿಂದ ನಾನು ಸಿಗರೇಟ್‌ ಸೇದೋದಿಲ್ಲ, ಆಣೆ ಇಡೋದಿಲ್ಲ, ಲೇಟಾಗಿ ಮಲಗೋದಿಲ್ಲ, ದಿನಾಲೂ ವ್ಯಾಯಾಮ ಮಾಡ್ತೀನಿ, ಒಳ್ಳೇ ಆಹಾರ ತಿಂತೀನಿ, ನನ್ನ ಅಜ್ಜ-ಅಜ್ಜಿಗೆ ಆಗಾಗ ಫೋನ್‌ ಮಾಡ್ತೀನಿ’ ಅಂತ ನೀವು ಅಂದುಕೊಳ್ಳಬಹುದು. ಆದರೆ ಎಲ್ಲಾ ವಿಷಯಗಳನ್ನು ಒಂದೇ ಸಾರಿ ಮಾಡಲು ಹೋದರೆ ಒಂದನ್ನೂ ಮಾಡಲಿಕ್ಕೆ ಆಗೋದಿಲ್ಲ!

ಬೈಬಲ್‌ ತತ್ವ: “ದೀನರಲ್ಲಿ ಜ್ಞಾನ.” ಜ್ಞಾನೋಕ್ತಿ 11:2.

ದೀನ ವ್ಯಕ್ತಿ ತನ್ನ ಇತಿಮಿತಿಗಳನ್ನು ಒಪ್ಪಿಕೊಳ್ಳುತ್ತಾನೆ. ತನಗಿರುವ ಸಮಯ, ಶಕ್ತಿ ಮತ್ತು ಸಾಮರ್ಥ್ಯಕ್ಕನುಸಾರ ಪ್ರಯತ್ನಗಳನ್ನು ಮಾಡುತ್ತಾನೆ. ಒಂದೇ ಸಾರಿ ಎಲ್ಲವನ್ನು ಬದಲಾಯಿಸಲು ಪ್ರಯತ್ನಿಸದೆ, ಹಂತ ಹಂತವಾಗಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾನೆ.

ಎಲ್ಲಾ ವಿಷಯಗಳನ್ನು ಒಂದೇ ಸಾರಿ ಮಾಡಲು ಹೋದರೆ ಒಂದನ್ನೂ ಮಾಡಲಿಕ್ಕೆ ಆಗೋದಿಲ್ಲ!

ನೀವೇನು ಮಾಡಬಹುದು?

ಒಂದೊಂದೇ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ. ಇದಕ್ಕಾಗಿ ಈ ಮುಂದಿನ ಹೆಜ್ಜೆಗಳು ನಿಮಗೆ ಸಹಾಯ ಮಾಡುತ್ತವೆ:

  1. ನೀವು ಬೆಳೆಸಿಕೊಳ್ಳಬೇಕಾದ ಒಳ್ಳೇ ಅಭ್ಯಾಸಗಳ ಮತ್ತು ಬಿಡಬೇಕೆಂದಿರುವ ಕೆಟ್ಟ ಅಭ್ಯಾಸಗಳ ಪಟ್ಟಿಗಳನ್ನು ಮಾಡಿ. ನಿಮ್ಮ ಮನಸ್ಸಿಗೆ ಯಾವೆಲ್ಲಾ ವಿಷಯಗಳು ಬರುತ್ತವೋ ಅವೆಲ್ಲವನ್ನು ಬರೆಯಿರಿ.

  2. ಅವುಗಳನ್ನು ಪ್ರಾಮುಖ್ಯತೆಗನುಸಾರ ಪಟ್ಟಿಮಾಡಿ.

  3. ಮೊದಲು, ಆ ಪಟ್ಟಿಯಲ್ಲಿರುವ ಒಂದೋ ಎರಡೋ ವಿಷಯಗಳನ್ನು ಆರಿಸಿ. ಅದನ್ನು ಪೂರ್ಣವಾಗಿ ಮಾಡಲು ಪ್ರಯತ್ನಿಸಿ. ನಂತರ ಪಟ್ಟಿಯಲ್ಲಿರುವ ಮುಂದಿನ ವಿಷಯಗಳಿಗೆ ಹೋಗಬಹುದು.

ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಒಳ್ಳೇ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ಉದಾಹರಣೆಗೆ, ನಿಮಗಿರೋ ಕೆಟ್ಟ ಅಭ್ಯಾಸಗಳ ಪಟ್ಟಿಯಲ್ಲಿ ತುಂಬಾ ಟಿವಿ ನೋಡೋದು ಇದ್ದು, ಒಳ್ಳೇ ಅಭ್ಯಾಸಗಳ ಪಟ್ಟಿಯಲ್ಲಿ ಆಪ್ತರಿಗೆ ಆಗಾಗ ಫೋನ್‌ ಮಾಡುವ ವಿಷಯ ಇದ್ದರೆ, ‘ಮನೆಗೆ ಬಂದ ತಕ್ಷಣ ಟಿವಿ ಆನ್‌ ಮಾಡದೆ ನಾನು ನನ್ನ ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಫೋನ್‌ ಮಾಡ್ತೀನಿ’ ಅಂತ ನಿರ್ಧಾರ ಮಾಡಬಹುದು. (g16-E No. 4)