ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ವಿಶ್ವ-ವೀಕ್ಷಣೆ | ಸಂಬಂಧಗಳು

ಸಂಬಂಧಗಳ ಬಗ್ಗೆ ಸುದ್ದಿ-ಸಮಾಚಾರ

ಸಂಬಂಧಗಳ ಬಗ್ಗೆ ಸುದ್ದಿ-ಸಮಾಚಾರ

ಸಂಬಂಧಗಳಲ್ಲಿ ಬಿರುಕುಂಟಾದಾಗ ಸಹಾಯಕ್ಕಾಗಿ ಮೊದಲು ಬೈಬಲ್‌ ಕಡೆ ನೋಡುತ್ತೀರಾ? ಸಂಬಂಧಗಳ ಬಗ್ಗೆ ಈ ಪುರಾತನ ಗ್ರಂಥದಲ್ಲಿರುವ ಸಲಹೆಗಳನ್ನೂ ಇತ್ತೀಚೆಗೆ ನಡೆದ ಸಮೀಕ್ಷೆಗಳನ್ನೂ ಹೋಲಿಸಿ ನೋಡಿ.

ಭಾರತ

2014ರಲ್ಲಿ ಆದ ಸಮೀಕ್ಷೆ ಪ್ರಕಾರ 61%ದಷ್ಟು 18-25 ವಯಸ್ಸಿನ ಯುವಜನರು ಏನು ಹೇಳುತ್ತಾರೆಂದರೆ ಮದುವೆ ಮುಂಚೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುವುದು “ಈಗ ಭಾರತದಲ್ಲಿ ದೊಡ್ಡ ತಪ್ಪೇನಲ್ಲ.” ಮುಂಬೈನಲ್ಲಿರುವ ಒಬ್ಬ ಡಾಕ್ಟರ್‌ ಹಿಂದುಸ್ತಾನ್‌ ಟೈಮ್ಸ್ಗೆ ಹೀಗೆ ಹೇಳುತ್ತಾರೆ: “ಇಬ್ಬರು ಇಷ್ಟಪಡುತ್ತಿದ್ದಾರೆ ಅಂದರೆ ಅವರಿಗೆ ಮದುವೆಯಾಗುವ ಉದ್ದೇಶ ಇದೆ ಅಂತಲ್ಲ. ಒಂದು ರಾತ್ರಿಯ ಸಂಬಂಧ ಆಗಿರಲಿ, ಸುಮ್ನೆ ಹಾಗೆ ಪ್ರೀತಿಸುತ್ತಿರಲಿ ಅಥವಾ ಮದುವೆಯಾಗದೇ ಒಟ್ಟಿಗೆ ಜೀವಿಸುತ್ತಿರಲಿ ಇಂಥ ಯುವಜನರು ಮದ್ವೆ ಆಗಲೇ ಬೇಕೆಂದು ಯೋಚಿಸುವುದಿಲ್ಲ.”

ಸ್ವಲ್ಪ ಯೋಚಿಸಿ: ಲೈಂಗಿಕ ಸಂಪರ್ಕದಿಂದ ಹರಡುವ ರೋಗಗಳು ಬರುವುದು ಮತ್ತು ಮಾನಸಿಕ ಆಘಾತ ಆಗುವುದು ಹೆಚ್ಚಾಗಿ ಮದುವೆಯ ಮುಂಚಿನ ಲೈಂಗಿಕ ಸಂಬಂಧದಿಂದನಾ ಮದುವೆಯ ನಂತರದ ಲೈಂಗಿಕ ಸಂಬಂಧದಿಂದನಾ?—1 ಕೊರಿಂಥ 6:18.

ಡೆನ್ಮಾರ್ಕ್‌

ಕುಟುಂಬದವರ ಜೊತೆ ಆಗಾಗ ಜಗಳವಾಡುತ್ತಿರುವವರು 35-50 ವರ್ಷದೊಳಗೆ ಸಾಯುವ ಸಾಧ್ಯತೆ ಹೆಚ್ಚು. ಕೋಪನ್‌ ಹ್ಯಾಗನ್‌ ವಿಶ್ವವಿದ್ಯಾಲಯದ ಸಂಶೋಧಕರು ಒಂದು ಅಧ್ಯಯನವನ್ನು ನಡೆಸಿದರು. 10,000ದಷ್ಟು ಮಧ್ಯವಯಸ್ಸಿನವರನ್ನು ಇಟ್ಟು 11 ವರ್ಷ ಈ ಅಧ್ಯಯನ ನಡೆಸಲಾಯಿತು. ತಮ್ಮ ಆಪ್ತರೊಂದಿಗೆ ಆಗಾಗ ಕಿತ್ತಾಡಿದವರು ಜಗಳವಾಡದೇ ಇದ್ದವರಿಗಿಂತ ಬೇಗ ಸತ್ತುಹೋಗುತ್ತಾರೆ ಎಂದು ಈ ಅಧ್ಯಯನ ತಿಳಿಸುತ್ತದೆ. ಒಬ್ಬನು ಚಿಕ್ಕಪುಟ್ಟದಕ್ಕೆಲ್ಲಾ ಜಗಳಕ್ಕಿಳಿಯದೆ ತನ್ನ ಚಿಂತೆ ಕಳವಳವನ್ನು ನಿಭಾಯಿಸಲು ಕಲಿತರೆ “ಅವನ ಆಯಸ್ಸು ಹೆಚ್ಚಾಗುತ್ತದೆ” ಎಂದು ಈ ಅಧ್ಯಯನದ ಬಗ್ಗೆ ಬರೆದಿರುವ ಲೇಖಕಿ ತಿಳಿಸಿದ್ದಾರೆ.

ಬೈಬಲ್‌ ಹೇಳುತ್ತದೆ: “ಹಿಡಿದು ಮಾತಾಡುವವನು ಜ್ಞಾನಿ. ಶಾಂತಾತ್ಮನು ವಿವೇಕಿ.”—ಜ್ಞಾನೋಕ್ತಿ 17:27.

ಅಮೆರಿಕ

ಕೆಲವು ಪ್ರೇಮಿಗಳು ಒಬ್ಬರನ್ನೊಬ್ಬರು ಸ್ವಲ್ಪಕಾಲ ಇಷ್ಟಪಡುತ್ತಾರೆ, ನಂತರ ಬೇರೆಬೇರೆ ಆಗುತ್ತಾರೆ. ಸ್ವಲ್ಪ ಸಮಯ ಆದಮೇಲೆ ಪುನಃ ಇಷ್ಟಪಟ್ಟು ಮದುವೆಯಾಗುತ್ತಾರೆ. ಇಂಥವರನ್ನು ಆವರ್ತಕ ಜೋಡಿಗಳು ಎಂದು ಕರೆಯಲಾಗುತ್ತದೆ. ಅವರು ಮದುವೆಯಾದರೂ ಮೊದಲ ಐದು ವರ್ಷದಲ್ಲೇ ಬೇರೆ ಆಗುವ ಸಂಭವ ಹೆಚ್ಚು ಎಂದು ಲೂಸಿಯಾನದಲ್ಲಿ ಹೊಸದಾಗಿ ಮದುವೆಯಾದ 564 ದಂಪತಿಗಳೊಂದಿಗೆ ನಡೆಸಿದ ಅಧ್ಯಯನ ತೋರಿಸಿಕೊಡುತ್ತದೆ. ಅಷ್ಟುಮಾತ್ರವಲ್ಲ ಅವರ ಮಧ್ಯೆ ಯಾವಾಗಲೂ ಜಗಳ ಕಿತ್ತಾಟ ಇರುವ ಸಾಧ್ಯತೆಗಳು ಹೆಚ್ಚು. ಮದುವೆ ಜೀವನದಲ್ಲಿ ಅವರಿಗೆ ತೃಪ್ತಿ ಇರಲ್ಲ.

ಬೈಬಲ್‌ ಹೇಳುತ್ತದೆ: “ದೇವರು [ಮದುವೆಯಲ್ಲಿ] ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.”—ಮತ್ತಾಯ 19:6. (g16-E No. 2)