ನಮ್ಮ ಭೂಮಿ ನಾಶ ಆಗಲ್ಲ ಅಂತ ದೇವರು ಮಾತು ಕೊಟ್ಟಿದ್ದಾನೆ
“ಭೂಮಿಗೆ ನಾವು ನೆನಸೋದಕ್ಕಿಂತ ಹೆಚ್ಚು ಶಕ್ತಿ ಇದೆ.”
ತಜ್ಞರಿಂದ ಕೂಡಿದ ಒಂದು ಅಂತಾರಾಷ್ಟ್ರೀಯ ಟೀಮ್ ಈ ಮಾತನ್ನ ಹೇಳಿತು. ಈ ಟೀಮ್ನವರು ವಾತಾವರಣದಲ್ಲಿ ಆಗಿರೋ ದೊಡ್ಡ ಬದಲಾವಣೆಗಳ ಬಗ್ಗೆ ಅಧ್ಯಯನ ಮಾಡಿದ್ರು. ಒಬ್ಬ ಸೃಷ್ಟಿಕರ್ತ ಇದ್ದಾನೆ ಅಂತ ನೀವು ನಂಬೋದಾದ್ರೆ ಆ ತಜ್ಞರು ಹೇಳಿದ ಮಾತನ್ನ ಕೇಳಿ, ‘ದೇವರು ಈ ಭೂಮಿನ ಎಷ್ಟು ಚೆನ್ನಾಗಿ ರಚಿಸಿದ್ದಾನೆ’ ಅಂತ ನಿಮಗೆ ಅನಿಸಬಹುದು. ಒಂದಲ್ಲಾ ಒಂದು ರೀತಿಲಿ ಭೂಮಿಗೆ ಹಾನಿ ಆಗ್ತಾ ಇದ್ರೂ ತನ್ನಿಂದ ತಾನೇ ಸರಿ ಹೋಗೋ ಸಾಮರ್ಥ್ಯ ಇದಕ್ಕಿದೆ.
ಆದ್ರೆ ಮನುಷ್ಯರು ಭೂಮಿನ ಎಷ್ಟು ಹಾಳು ಮಾಡಿದ್ದಾರೆ ಅಂದ್ರೆ ಈಗ ಅದಕ್ಕೆ ಆ ಸಾಮರ್ಥ್ಯ ಇಲ್ಲ. ಭೂಮಿನ ರಚಿಸಿರೋ ದೇವರೇ ಇದನ್ನ ಸರಿ ಮಾಡಬೇಕು. ಸರಿ ಮಾಡೇ ಮಾಡ್ತಾನೆ ಅಂತ ನಂಬೋಕೆ ನಮಗೆ ಕಾರಣನೂ ಇದೆ.
ಬೈಬಲಲ್ಲಿರೋ ಈ ಮಾತುಗಳು ಭೂಮಿ ನಾಶ ಆಗದೇ ಉಳಿಯುತ್ತೆ ಅಂತ ನಂಬೋಕೆ ಕಾರಣ ಕೊಡುತ್ತೆ:
ಭೂಮಿನ ಸೃಷ್ಟಿ ಮಾಡಿದ್ದು ದೇವರು. “ಆರಂಭದಲ್ಲಿ ದೇವರು ಆಕಾಶ, ಭೂಮಿ ಸೃಷ್ಟಿ ಮಾಡಿದನು.” —ಆದಿಕಾಂಡ 1:1
ಭೂಮಿಯ ಒಡೆಯ ದೇವರು. “ಭೂಮಿ ಮತ್ತು ಅದ್ರಲ್ಲಿ ಇರೋದೆಲ್ಲ ಯೆಹೋವನ a ಆಸ್ತಿ.” —ಕೀರ್ತನೆ 24:1
ನಾಶ ಆಗದ ಹಾಗೆ ದೇವರು ಭೂಮಿನ ರಚಿಸಿದ್ದಾನೆ. “ಆತನು ಭೂಮಿಯನ್ನ ಅದ್ರ ಅಸ್ತಿವಾರದ ಮೇಲೆ ಸ್ಥಿರಮಾಡಿದ್ದಾನೆ, ಅದು ತನ್ನ ಜಾಗ ಬಿಟ್ಟು ಯಾವತ್ತೂ ಕದಲಲ್ಲ. ಶಾಶ್ವತವಾಗಿ ಇದ್ದಲ್ಲೇ ಇರುತ್ತೆ.”—ಕೀರ್ತನೆ 104:5
ಭೂಮಿಯಲ್ಲಿ ಜೀವರಾಶಿಗಳು ಶಾಶ್ವತವಾಗಿ ಬದುಕುತ್ತೆ ಅಂತ ದೇವರು ಮಾತು ಕೊಟ್ಟಿದ್ದಾನೆ. “ಸತ್ಯ ದೇವರಾದ ಯೆಹೋವ ಭೂಮಿಯನ್ನ ನಿರ್ಮಿಸಿ . . . ಸ್ಥಾಪಿಸಿದನು, ಆತನು ಅದನ್ನ ಹಾಗೇ ಸುಮ್ಮನೆ ಸೃಷ್ಟಿಸಲಿಲ್ಲ, ಜನ ವಾಸಿಸಬೇಕಂತನೇ ರೂಪಿಸಿದನು.”—ಯೆಶಾಯ 45:18
ಮನುಷ್ಯರು ನಾಶ ಆಗದೇ ಭೂಮಿ ಮೇಲೆ ಶಾಶ್ವತವಾಗಿ ಜೀವಿಸ್ತಾರೆ ಅಂತ ದೇವರು ಮಾತು ಕೊಟ್ಟಿದ್ದಾನೆ. “ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.”—ಕೀರ್ತನೆ 37:29
ಮನುಷ್ಯ ಭೂಮಿಗೆ ಏನೇ ಹಾನಿ ಮಾಡಿದ್ರೂ ಅದು ತನ್ನನ್ನ ಸರಿ ಮಾಡ್ಕೊಂಡು ಮನುಷ್ಯರು ಚೆನ್ನಾಗಿ ಜೀವನ ನಡೆಸೋ ರೀತಿಯಲ್ಲಿ ದೇವರು ಭೂಮಿನ ಸೃಷ್ಟಿ ಮಾಡಿದ್ದಾನೆ. ಮುಂದೊಂದಿನ, ಸರಿಯಾದ ಸಮಯದಲ್ಲಿ ದೇವರು ಈ ಭೂಮಿಗೆ ಯಾವುದೇ ತರದ ಹಾನಿ ಆಗೋಕೆ ಬಿಡಲ್ಲ ಅಂತ ಬೈಬಲಲ್ಲಿ ಆತನು ಮಾತು ಕೊಟ್ಟಿದ್ದಾನೆ. ಆಗ ಆತನು ಸ್ವಾರ್ಥಕ್ಕಾಗಿ, ಅತಿಯಾಸೆಯಿಂದ ಭೂಮಿಗೆ ಹಾನಿ ಮಾಡ್ತಿರೋ ಮನುಷ್ಯರನ್ನ ನಾಶಮಾಡ್ತಾನೆ.—ಪ್ರಕಟನೆ 11:18
ದೇವರು ಇಡೀ ಭೂಮಿಯನ್ನ ಸುಂದರ ತೋಟವಾಗಿ ಮಾಡ್ತಾನೆ ಅಂತ ಬೈಬಲಲ್ಲಿ ಇದೆ. ಆಗ ಆತನು “ಎಲ್ಲ ಜೀವಿಗಳ ಬಯಕೆಯನ್ನ” ಈಡೇರಿಸ್ತಾನೆ.—ಕೀರ್ತನೆ 145:16
a ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ. 83:18.