ದೇವರ ಸ್ನೇಹಿತರಾಗಿ
ನಮ್ಮ ಸೃಷ್ಟಿಕರ್ತ ದೇವರು ಬರೀ ಒಂದು ಶಕ್ತಿ ಅಲ್ಲ, ತುಂಬ ಒಳ್ಳೆ ಗುಣಗಳಿರೋ ಒಬ್ಬ ವ್ಯಕ್ತಿಯಾಗಿದ್ದಾರೆ. ನಾವು ಆತನ ಬಗ್ಗೆ ತಿಳ್ಕೊಂಡು ಸ್ನೇಹಿತರಾಗಬೇಕು ಅನ್ನೋದೇ ಆತನ ಆಸೆ. (ಯೋಹಾನ 17:3; ಯಾಕೋಬ 4:8) ಅದಕ್ಕೆ ದೇವರು ತನ್ನ ಬಗ್ಗೆ ನಮ್ಗೆ ತುಂಬ ವಿಷಯಗಳನ್ನು ತಿಳಿಸಿದ್ದಾರೆ.
ದೇವರಿಗೊಂದು ಹೆಸರಿದೆ
“ಯೆಹೋವ ಅನ್ನೋ ಹೆಸ್ರಿರೋ ನೀನೊಬ್ಬನೇ ಇಡೀ ಭೂಮಿಯಲ್ಲಿ ಸರ್ವೋನ್ನತ ದೇವರು ಅಂತ ಎಲ್ರಿಗೂ ಗೊತ್ತಾಗಲಿ.”—ಕೀರ್ತನೆ 83:18.
ಯೆಹೋವನೊಬ್ಬನೇ ಸತ್ಯ ದೇವರು ಅಂತ ಬೈಬಲ್ ಹೇಳುತ್ತೆ. ಆತನೇ ಇಡೀ ವಿಶ್ವವನ್ನು, ಅದ್ರಲ್ಲಿರೋ ಜೀವಿಗಳನ್ನು ಸೃಷ್ಟಿಮಾಡಿದ್ದು. ಅದಕ್ಕೆ ನಾವು ಆತನೊಬ್ಬನನ್ನೇ ಆರಾಧಿಸಬೇಕು. —ಪ್ರಕಟನೆ 4:11.
ಯೆಹೋವ ನಮ್ಮನ್ನು ತುಂಬ ಪ್ರೀತಿಸೋ ದೇವರು
“ದೇವರು ಪ್ರೀತಿಯಾಗಿದ್ದಾನೆ.”—1 ಯೋಹಾನ 4:8.
ಬೈಬಲ್ ಓದುವಾಗ ಮತ್ತು ಸೃಷ್ಟಿಗಳನ್ನು ನೋಡುವಾಗ ಆತನ ಬಗ್ಗೆ ಕಲಿಯೋಕೆ ಆಗುತ್ತೆ. ಪ್ರೀತಿನೇ ಆತನಲ್ಲಿ ಎದ್ದು ಕಾಣುವ ಗುಣ. ಆತನು ನಮಗಾಗಿ ಮಾಡೋ ಎಲ್ಲಾ ವಿಷಯಗಳಿಗೆ ಪ್ರೀತಿನೇ ಮುಖ್ಯ ಕಾರಣ. ಹಾಗಾಗಿ ನಾವು ದೇವರ ಬಗ್ಗೆ ಕಲಿಯುತ್ತಾ ಹೋದ ಹಾಗೆ ಆತನನ್ನು ಪ್ರೀತಿಸೋಕೆ ಶುರು ಮಾಡ್ತೀವಿ.
ಯೆಹೋವನು ಕ್ಷಮಿಸುವ ದೇವರು
“ನೀನು ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಿರೋ ದೇವರು.”—ನೆಹೆಮೀಯ 9:17.
ನಾವು ತಪ್ಪು ಮಾಡ್ತೀವಿ ಅಂತ ಯೆಹೋವ ದೇವರಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಆತನು ‘ನಮ್ಮನ್ನು ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಿರುತ್ತಾನೆ.’ ನಾವು ಆತನ ಹತ್ತಿರ ಕ್ಷಮೆ ಕೇಳುವಾಗ, ಮತ್ತೆ ಆ ತಪ್ಪನ್ನು ಮಾಡದಿರೋಕೆ ಪ್ರಯತ್ನಿಸುವಾಗ ದೇವರು ಖಂಡಿತ ಕ್ಷಮಿಸ್ತಾರೆ. ನಾವು ಹಿಂದೆ ಮಾಡಿದ ತಪ್ಪನ್ನು ದೇವರು ಮರೆತುಬಿಡ್ತಾರೆ.—ಕೀರ್ತನೆ 103:12, 13.
ಯೆಹೋವ ದೇವರು ಪ್ರಾರ್ಥನೆ ಕೇಳ್ತಾರೆ
“ಯಾರೆಲ್ಲ ಆತನಿಗೆ ಮೊರೆ ಇಡ್ತಾರೋ . . . ಅವ್ರೆಲ್ಲರಿಗೆ ಯೆಹೋವ ಹತ್ರಾನೇ ಇರ್ತಾನೆ . . . ಸಹಾಯಕ್ಕಾಗಿ ಅವರಿಡೋ ಮೊರೆಯನ್ನ ಆತನು ಕೇಳಿಸಿಕೊಳ್ತಾನೆ, ಅವ್ರನ್ನ ಕಾಪಾಡ್ತಾನೆ.”—ಕೀರ್ತನೆ 145:18, 19.
ಯೆಹೋವನನ್ನು ಆರಾಧಿಸೋಕೆ ವಿಶೇಷ ಆಚರಣೆಗಳ ಅಥವಾ ಮೂರ್ತಿಗಳ ಅಗತ್ಯವಿಲ್ಲ. ಪ್ರೀತಿಯಿರೋ ಅಪ್ಪ-ಅಮ್ಮ ತಮ್ಮ ಮುದ್ದು ಮಕ್ಕಳು ಮಾತಾಡುವಾಗ ಹೇಗೆ ಕೇಳುತ್ತಾರೋ ಹಾಗೇ ನಾವು ಪ್ರಾರ್ಥನೆ ಮಾಡುವಾಗ ಯೆಹೋವ ದೇವರು ಕೇಳುತ್ತಾರೆ.