ಜೀವನದ ಸಂತೋಷಕ್ಕೆ ಬೇಕಾದ ವಿವೇಕ
“ಈ ಲೋಕದಲ್ಲಿರೋ ಬಡತನ, ಕಾಯಿಲೆ, ಯುದ್ಧ, ಮಕ್ಕಳನ್ನ ದುರುಪಯೋಗಿಸೋದನ್ನು ನೋಡುವಾಗ ನನಗೆ ತುಂಬ ನೋವಾಗುತ್ತೆ. ಆದರೆ ನಾನು ಆ ಬೇಜಾರಲ್ಲೇ ಮುಳುಗಿಹೋಗಿಲ್ಲ.”—ರಾಣಿ. *
ನಮ್ಮ ಸರ್ವಶಕ್ತ ದೇವರು ತುಂಬ ವಿವೇಕಿ. ಈ ದೇವರ ಬಗ್ಗೆ ಕಲಿತಾಗ ರಾಣಿ ನಿಜ ಸಂತೋಷ ಕಂಡುಕೊಂಡ್ರು. ನೀವು ಈ ಪತ್ರಿಕೆ ಓದುವಾಗ ದೇವರು ಕೊಟ್ಟಿರೋ ಸಲಹೆಗಳಿಂದ ಏನೆಲ್ಲ ಪ್ರಯೋಜನ ಆಗುತ್ತೆ ಅಂತ ನೋಡಿ . . .
ಕುಟುಂಬದಲ್ಲಿ ಸಂತೋಷ
ಬೇರೆಯವರ ಜೊತೆ ಶಾಂತಿ ಸಮಾಧಾನ
ಸಂತೃಪ್ತಿ
ಕಷ್ಟ ಮತ್ತು ಸಾವಿನ ಕಾರಣ ತಿಳಿಯುತ್ತೀರ
ಶಾಶ್ವತ ಜೀವನದ ನಿರೀಕ್ಷೆ ಪಡೆಯುತ್ತೀರ
ಸೃಷ್ಟಿಕರ್ತ ದೇವರಿಗೆ ಹತ್ತಿರ ಆಗ್ತೀರ
ಸೃಷ್ಟಿಕರ್ತನು ಈ ವಿವೇಕವನ್ನು ಕೆಲವರಿಗಷ್ಟೇ ಅಲ್ಲ, ಆತನನ್ನು ತಿಳಿಯೋಕೆ ಬಯಸೋ ಎಲ್ಲರಿಗೂ ಕೊಡ್ತಾನೆ.
^ ಪ್ಯಾರ. 2 ಹೆಸರುಗಳನ್ನು ಬದಲಾಯಿಸಲಾಗಿದೆ.