ಮಾಹಿತಿ ಇರುವಲ್ಲಿ ಹೋಗಲು

ನಿಮಗೇಕೆ ಯೆಹೋವನ ಸಾಕ್ಷಿಗಳೆಂಬ ಹೆಸರು?

ನಿಮಗೇಕೆ ಯೆಹೋವನ ಸಾಕ್ಷಿಗಳೆಂಬ ಹೆಸರು?

 ದೇವರ ಹೆಸರು ಯೆಹೋವ ಎಂದು ಬೈಬಲ್‌ ತಿಳಿಸುತ್ತದೆ. (ವಿಮೋಚನಕಾಂಡ 6:3; ಕೀರ್ತನೆ 83:18) ಯಾವ ವಿಷಯಗಳು ಸತ್ಯ ಎಂದು ತನಗೆ ಖಾತ್ರಿಯಾಗಿದೆಯೋ ಅವನ್ನು ಎಲ್ಲರ ಮುಂದೆ ಹೇಳುವವನನ್ನು ಸಾಕ್ಷಿ ಎಂದು ಕರೆಯುತ್ತಾರೆ.

 ಸರ್ವವನ್ನು ಸೃಷ್ಟಿಸಿದ ಯೆಹೋವನ ಕುರಿತು ಸತ್ಯವನ್ನು ತಿಳಿಸುವ ಕ್ರೈಸ್ತರು ನಾವಾಗಿರುವುದರಿಂದ ನಮಗೆ ಯೆಹೋವನ ಸಾಕ್ಷಿಗಳು ಎಂಬ ಹೆಸರು ಸೂಕ್ತ. (ಪ್ರಕಟನೆ 4:11) ಎರಡು ವಿಧಗಳಲ್ಲಿ ನಾವು ಜನರಿಗೆ ಸಾಕ್ಷಿಕೊಡುತ್ತೇವೆ. ಒಂದು ನಮ್ಮ ಜೀವನ ರೀತಿಯ ಮೂಲಕ. ಇನ್ನೊಂದು ಬೈಬಲ್‌ನಿಂದ ಕಲಿತಿರುವ ವಿಷಯಗಳನ್ನು ಅವರೊಂದಿಗೆ ಹಂಚಿಕೊಳ್ಳುವ ಮೂಲಕ.—ಯೆಶಾಯ 43:10-12; 1 ಪೇತ್ರ 2:12.