ಮಾಹಿತಿ ಇರುವಲ್ಲಿ ಹೋಗಲು

ತಮ್ಮ ಧರ್ಮವೇ ಏಕೈಕ ಸತ್ಯ ಧರ್ಮವೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರಾ?

ತಮ್ಮ ಧರ್ಮವೇ ಏಕೈಕ ಸತ್ಯ ಧರ್ಮವೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರಾ?

ಧರ್ಮದ ಕುರಿತು ಗಂಭೀರವಾಗಿ ಯೋಚಿಸುವವರು ತಮ್ಮ ಧರ್ಮವನ್ನು ದೇವರು ಒಪ್ಪುತ್ತಾರೆಂದು ಖಂಡಿತವಾಗಿ ನೆನಸುತ್ತಾರೆ. ಇಲ್ಲದಿದ್ದರೆ ಅವರು ಯಾಕೆ ಆ ಧರ್ಮದಲ್ಲಿರುತ್ತಾರೆ?

ಧರ್ಮಗಳು ಹಲವು, ದಾರಿಗಳು ಹಲವು ಆದರೆ ಎಲ್ಲವೂ ಮೋಕ್ಷಕ್ಕೆ ಇಲ್ಲವೆ ರಕ್ಷಣೆಗೆ ನಡೆಸುತ್ತವೆ ಎಂಬ ತತ್ವವನ್ನು ಯೇಸು ಎಂದಿಗೂ ಒಪ್ಪಲಿಲ್ಲ. ಅದರ ಬದಲಿಗೆ ಅವನು ಹೇಳಿದ್ದು: “ಜೀವಕ್ಕೆ ನಡಿಸುವ ಬಾಗಿಲು ಇಕ್ಕಟ್ಟಾಗಿಯೂ ದಾರಿಯು ಬಿಕ್ಕಟ್ಟಾಗಿಯೂ ಇದೆ ಮತ್ತು ಅದನ್ನು ಕಂಡುಕೊಳ್ಳುವವರು ಕೊಂಚವೇ ಜನ.” (ಮತ್ತಾಯ 7:14) ತಾವು ಆ ದಾರಿಯನ್ನು ಕಂಡುಹಿಡಿದಿದ್ದೇವೆ ಎಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಇಲ್ಲವಾದರೆ ಅವರು ಬೇರೊಂದು ಧರ್ಮವನ್ನು ಅರಸಿ ಹೋಗುತ್ತಿದ್ದರು.