ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳಲ್ಲಿ ಸಂಬಳ ಪಡೆಯುವ ಪಾದ್ರಿಗಳಿದ್ದಾರಾ?

ಯೆಹೋವನ ಸಾಕ್ಷಿಗಳಲ್ಲಿ ಸಂಬಳ ಪಡೆಯುವ ಪಾದ್ರಿಗಳಿದ್ದಾರಾ?

ಒಂದನೇ ಶತಮಾನದ ಕ್ರೈಸ್ತರ ಮಾದರಿಯನ್ನು ಅನುಸರಿಸುತ್ತಾ ಯೆಹೋವನ ಸಾಕ್ಷಿಗಳಲ್ಲಿ ಪಾದ್ರಿಗಳು-ಜನಸಾಮಾನ್ಯರು ಎಂಬ ಭೇದವಿಲ್ಲ. ದೀಕ್ಷಾಸ್ನಾನ ಪಡೆದ ಪ್ರತಿಯೊಬ್ಬನೂ ಶುಶ್ರೂಷಕನಾಗಿದ್ದಾನೆ. ಸುವಾರ್ತೆ ಸಾರುವ ಹಾಗೂ ಬೋಧಿಸುವ ಕೆಲಸದಲ್ಲಿ ಭಾಗವಹಿಸುತ್ತಾನೆ. ಯೆಹೋವನ ಸಾಕ್ಷಿಗಳನ್ನು ಹೆಚ್ಚು ಕಡಿಮೆ 100 ಸದಸ್ಯರಿರುವ ಸಭೆಗಳಾಗಿ ವಿಂಗಡಿಸಲಾಗಿದೆ. ಆಧ್ಯಾತ್ಮಿಕ ಪ್ರೌಢ ಪುರುಷರನ್ನು ಪ್ರತಿ ಸಭೆಯಲ್ಲಿ ‘ಹಿರೀಪುರುಷರಾಗಿ’ ಅಥವಾ ಹಿರಿಯರಾಗಿ ನೇಮಿಸಲಾಗುತ್ತದೆ. (ತೀತ 1:5) ಅವರು ಯಾವುದೇ ಸಂಬಳ ಪಡೆಯದೆ ಈ ಸೇವೆಯನ್ನು ನಿರ್ವಹಿಸುತ್ತಾರೆ.