ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ಆರಾಧನೆಯಲ್ಲಿ ಶಿಲುಬೆಯನ್ನು ಬಳಸುವುದಿಲ್ಲವೇಕೆ?

ಯೆಹೋವನ ಸಾಕ್ಷಿಗಳು ಆರಾಧನೆಯಲ್ಲಿ ಶಿಲುಬೆಯನ್ನು ಬಳಸುವುದಿಲ್ಲವೇಕೆ?

 ಅನೇಕ ಜನರು ಶಿಲುಬೆಯನ್ನು ಕ್ರೈಸ್ತ ಧರ್ಮದ ಪ್ರತೀಕವೆಂದು ವೀಕ್ಷಿಸುತ್ತಾರೆ. ಯೆಹೋವನ ಸಾಕ್ಷಿಗಳಾದ ನಾವು ಕ್ರೈಸ್ತರಾಗಿದ್ದರೂ, ಆರಾಧನೆಯಲ್ಲಿ ಶಿಲುಬೆಯನ್ನು ಬಳಸುವುದಿಲ್ಲ. ಏಕೆ?

 ಒಂದು ಕಾರಣ, ಯೇಸು ಸತ್ತಿದ್ದು ಮರದ ಕಂಬದ ಮೇಲೆ ಹೊರತು ಶಿಲುಬೆಯ ಮೇಲಲ್ಲವೆಂದು ಬೈಬಲ್‌ ಸೂಚಿಸುತ್ತದೆ. ಅಷ್ಟೇ ಅಲ್ಲದೆ, ಬೈಬಲ್‌ಕ್ರೈಸ್ತರಿಗೆ “ವಿಗ್ರಹಾರಾಧನೆಯನ್ನು ಬಿಟ್ಟು ಓಡಿಹೋಗಿರಿ” ಅಂದರೆ ಆರಾಧನೆಯಲ್ಲಿ ಶಿಲುಬೆಯನ್ನು ಬಳಸಬಾರದೆಂದು ದೃಢವಾಗಿ ಎಚ್ಚರಿಸುತ್ತದೆ.​—1 ಕೊರಿಂಥ 10:14; 1 ಯೋಹಾನ 5:​21.

 ಗಮನಾರ್ಹವಾಗಿ, ಯೇಸು ಹೇಳಿದ್ದು “ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು.” (ಯೋಹಾನ 13:​34, 35) ಹೀಗೆ ತನ್ನ ನಿಜ ಹಿಂಬಾಲಕರನ್ನು ಸ್ವತ್ಯಾಗದ ಪ್ರೀತಿಯಿಂದ ಗುರುತಿಸಬೇಕೇ ಹೊರತು ಶಿಲುಬೆ ಅಥವಾ ಬೇರೆ ಯಾವುದೇ ವಿಗ್ರಹಗಳಿಂದಲ್ಲ ಎಂದು ಯೇಸು ಒತ್ತಿಹೇಳಿದನು.